ಭೂವಿಜ್ಞಾನ ಸಚಿವಾಲಯ

ಅಖಿಲ ಭಾರತ ಹವಾಮಾನ ಮಾಹಿತಿ (ಸಂಜೆ)

Posted On: 23 MAY 2021 5:26PM by PIB Bengaluru

ಭಾರತೀಯ ಹವಾಮಾನ ಇಲಾಖೆಯ (.ಎಂ.ಡಿ.) ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ಪ್ರಕಾರ: (ಭಾನುವಾರ, 23 ನೇ ಮೇ 2021, ಪ್ರಕಟಣೆ ಹೊರಡಿಸಿದ ಸಮಯ: 1630, ಭಾರತೀಯ ಕಾಲಮಾನ,  1430 ಗಂಟೆಯ ಮಾಹಿತಿಯನ್ನು ಆಧರಿಸಿ

ಉತ್ತರ ಭಾಗದಲ್ಲಿ ನೈಋತ್ಯ ಮುಂಗಾರು 5°N/80°E, 10°N/85°E, 13°N/90°E ಮೂಲಕ ಮತ್ತು 16°N/94.5°E. ಮೂಲಕ ಹಾದು ಹೋಗಲಿದೆ.

ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರೀಯ ಭಾಗದಲ್ಲಿ ವಾಯು ಭಾರ ಕುಸಿತ ಕಂಡು ಬಂದಿದ್ದು ಅದು ಇಂದು ಅಂದರೆ 2021 ಮೇ 23 ರಂದು  ಭಾರತೀಯ ಕಾಲಮಾನ 1130 ಗಂಟೆಗೆ ಬಂಗಾಳ ಕೊಲ್ಲಿಯ ಪೂರ್ವ ಕೇಂದ್ರೀಯ ಭಾಗದಲ್ಲಿ ಕೇಂದ್ರೀಕೃತಗೊಂಡಿದೆ. 16.1°N ಅಕ್ಷಾಂಶದ ಬಳಿ ಮತ್ತು 90.2°E ರೇಖಾಂಶದ ಬಳಿ, ಪೋರ್ಟ್ ಬ್ಲೇರ್ (ಅಂಡಮಾನ್ ದ್ವೀಪಗಳು) ಗೆ ಸುಮಾರು 560 ಕಿ.ಮೀ. ದೂರದಲ್ಲಿ ಉತ್ತರ-ವಾಯುವ್ಯ ಭಾಗದಲ್ಲಿ ವಾಯುಭಾರ ಕುಸಿತವಾಗಿದೆ. ಪಾರಾದೀಪ್ (ಒಡಿಶಾ) ಪೂರ್ವ-ಆಗ್ನೇಯ ಭಾಗದಲ್ಲಿ 590 ಕಿ.ಮೀ. ದೂರದಲ್ಲಿ, ಬಾಲಾಸೋರ್ (ಒಡಿಶಾ) 690 ಕಿ.ಮೀ ದೂರದಲ್ಲಿ ದಕ್ಷಿಣ ಆಗ್ನೇಯ ಭಾಗದಲ್ಲಿ, ದಿಘಾ (ಪಶ್ಚಿಮ ಬಂಗಾಳ) ಕ್ಕೆ 670 ಕಿ.ಮೀ. ದೂರದಲ್ಲಿ ದಕ್ಷಿಣ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತವಾಗಿದೆ. ಅದು ಉತ್ತರ-ವಾಯುವ್ಯ ದಿಕ್ಕಿನಲ್ಲಿ ಮುಂದುವರೆಯುವ ಸಾಧ್ಯತೆಗಳಿದ್ದುಮೇ 24 ರಂದು ಬೆಳಿಗ್ಗೆ ಬಿರುಸಾದ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಹಾಗು ಬಳಿಕದ 24 ಗಂಟೆಗಳಲ್ಲಿ ಅದು ಇನ್ನಷ್ಟು ಬಿರುಸುಗೊಳ್ಳಲಿದೆ. ಬಳಿಕವೂ ಅದು ಉತ್ತರವಾಯುವ್ಯಾಭಿಮುಖವಾಗಿ ಸಾಗಿ ಇನ್ನಷ್ಟು ಪ್ರಬಲಗೊಂಡು ಪಶ್ಚಿಮ ಬಂಗಾಳದ ಬಂಗಾಳ ಕೊಲ್ಲಿಯ ವಾಯುವ್ಯ ಭಾಗವನ್ನು ತಲುಪಲಿದೆ. ಮತ್ತು ಮೇ 26 ಬೆಳಿಗ್ಗೆ ಉತ್ತರ ಒಡಿಶಾದ ಕರಾವಳಿಯನ್ನು ತಲುಪಲಿದೆ. ಅದು ಉತ್ತರ ಒಡಿಶಾವನ್ನು ಹಾದು ಹೋಗುವ ಸಾಧ್ಯತೆ ಇದೆ. ಹಾಗು  . ಪಶ್ಚಿಮ ಬಂಗಾಳ ಮತ್ತು ಪಾರಾದೀಪ ಹಾಗು ಸಾಗರ ದ್ವೀಪಗಳ ನಡುವೆ ಅತ್ಯಂತ ಪ್ರಬಲ ಚಂಡಮಾರುತವಾಗಿ ಪರಿವರ್ತಿತಗೊಂಡು ಮೇ 26   ಸಂಜೆಯ ವೇಳೆಗೆ ಹಾದು ಹೋಗುವ ಸಾಧ್ಯತೆಗಳಿವೆ.

ಪಶ್ಚಿಮದ ಪ್ರಕ್ಷುಬ್ಧತೆಯು ಚಂಡಮಾರುತವಾಗಿ ಉತ್ತರ ಪಾಕಿಸ್ತಾನ ಮತ್ತು ಸನಿಹದ ಜಮ್ಮು ಮತ್ತು ಕಾಶ್ಮೀರಗಳನ್ನು 3.1 ಕಿ.ಮೀ ಮತ್ತು 3.6 ಕಿ.ಮೀ ನಡುವೆ ಸರಾಸರಿ ಸಮುದ್ರ ಮಟ್ಟಕ್ಕಿಂತ ಮೇಲ್ಭಾಗದಲ್ಲಿ ಹಾಗು  ಮಧ್ಯ ಮತ್ತು ಮೇಲ್ಭಾಗದ ಉಷ್ಣವಲಯದ ಪಶ್ಚಿಮದಲ್ಲಿ ಸರಾಸರಿ ಸಮುದ್ರ ಮಟ್ಟ 5.8 ಕಿ.ಮೀ.ಗಿಂತ ಮೇಲಿನ ಅಕ್ಷರೇಖೆಯಲ್ಲಿ ಮತ್ತು ಅಂದಾಜು  68°E ರೇಖಾಂಶದಲ್ಲಿ ಉತ್ತರಕ್ಕೆ 25°N ಅಕ್ಷಾಂಶದಲ್ಲಿ ಸಾಗಲಿದೆ.

  • ಚಂಡಮಾರುತ ಪ್ರಸರಣ ಕೇಂದ್ರೀಯ ಮಧ್ಯ ಪ್ರದೇಶದ ಉತ್ತರ ಭಾಗದ ಮೇಲೆ ಸರಾಸರಿ ಸಮುದ್ರ ಮಟ್ಟ 0.9 ಕಿ.ಮೀ ಮೇಲ್ಭಾಗದಲ್ಲಿ ಸಾಗುತ್ತದೆ.
  • ನೈಋತ್ಯ ರಾಜಸ್ಥಾನದ ಮೇಲೆ ಚಂಡಮಾರುತದ ಪ್ರಸರಣ ಸರಾಸರಿ ಸಮುದ್ರ ಮಟ್ಟ 0.9 ಕಿ.ಮಿ.ಗಿಂತ ಮೇಲ್ಭಾಗದಲ್ಲಿ ಸಾಗುತ್ತದೆ.
  • ಚಂಡಮಾರುತದ ಪ್ರಸರಣ ಪೂರ್ವ ಕೇಂದ್ರೀಯ ಅರಬ್ಬೀ ಸಮುದ್ರದಲ್ಲಿ ಮತ್ತು ಸಮೀಪದ ಮಹಾರಾಷ್ಟ್ರ ಕರಾವಳಿಯಲ್ಲಿ ಸರಾವರಿ ಸಮುದ್ರ ಮಟ್ಟ 3.1 ಕೀ.ಮೀ ಮತ್ತು 3.6 ಕಿ.ಮೀ. ಗೆ ಮೇಲ್ಭಾಗದಲ್ಲಿ  ಸಾಗಲಿದೆ.
  • ಪಶ್ಮಿಮದ ಹೊಸ ವ್ಯತ್ಯಯ,ವೈಪರೀತ್ಯಗಳು ಪಶ್ಚಿಮ ಹಿಮಾಲಯ ವಲಯವನ್ನು 2021 ಮೇ 26 ರಾತ್ರಿಯಿಂದ ಬಾಧಿಸುವ ಸಾಧ್ಯತೆ ಇದೆ.

ಹೆಚ್ಚಿನ ವಿವರಗಳಿಗಾಗಿ ದಯಮಾಡಿ ಭೇಟಿ ಕೊಡಿ www.imd.gov.in ಅಥವಾ ಸಂಪರ್ಕಿಸಿ: +91 11 24631913, 24643965, 24629798 (1875 ರಿಂದ ದೇಶ ಸೇವೆಯಲ್ಲಿ )

***


(Release ID: 1721226) Visitor Counter : 191