ಇಂಧನ ಸಚಿವಾಲಯ

ಬಿ.ಬಿ.ಎಂ.ಬಿ.ಯಿಂದ ಬೃಹತ್ ಲಸಿಕಾ ಕಾರ್ಯಕ್ರಮ.

Posted On: 21 MAY 2021 7:30PM by PIB Bengaluru

ಇಂಧನ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ರಂಗದ ಉದ್ಯಮವಾದ  ಭಕ್ರಾ ಬಿಯಾಸ್ ಆಡಳಿತ ಮಂಡಳಿಯು ಪಂಜಾಬ್, ಹರಿಯಾಣ, ರಾಜಸ್ಥಾನ, ಹಿಮಾಚಲ ಪ್ರದೇಶ, ದಿಲ್ಲಿ, ಮತ್ತು ಚಂಡೀಗಢದಲ್ಲಿ ನೀರು ಪೂರೈಕೆ ಮತ್ತು ವಿದ್ಯುತ್ ಪೂರೈಕೆಯನ್ನು ಮಾಡುತ್ತಿದೆ. ಬಿ.ಬಿ.ಎಂ.ಬಿ.  ಪಾಲುದಾರ ರಾಜ್ಯಗಳಿಗೆ ನೀರು ಪೂರೈಕೆ ಮತ್ತು ವಿದ್ಯುತ್ ಪೂರೈಕೆಯಂತಹ ಅವಶ್ಯಕ ಸೇವೆಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುವುದರಿಂದ ಮತ್ತು ಆ ಮೂಲಕ ಒಟ್ಟು ದೇಶಕ್ಕೆ ಸೇವೆ ಸಲ್ಲಿಸುವುದಕ್ಕಾಗಿ  ತನ್ನ ಸಿಬ್ಬಂದಿಗೆ ಭಾರತ ಸರಕಾರದ ಇಂಧನ ಸಚಿವಾಲಯದ ಆಶ್ರಯದಲ್ಲಿ ಮತ್ತು ರಾಜ್ಯ ಸರಕಾರಗಳ ಸಹಾಯದೊಂದಿಗೆ ತನ್ನ ಯೋಜನಾ ಕೇಂದ್ರಗಳು ಮತ್ತು ಉಪ ಕೇಂದ್ರಗಳಲ್ಲಿ ವ್ಯಾಪಕ ಲಸಿಕಾ ಕಾರ್ಯಕ್ರಮವನ್ನು ನಡೆಸುತ್ತಿದೆ.

ಈ ಕಾರ್ಯಕ್ರಮದಡಿಯಲ್ಲಿ, ನಂಗಾಲ್ ನಲ್ಲಿರುವ ಬಿ.ಬಿ.ಎಂ.ಬಿ. ಆಸ್ಪತ್ರೆ ಇದುವರೆಗೆ 9000 ಕ್ಕೂ ಅಧಿಕ ಜನರಿಗೆ ಲಸಿಕೆ ಹಾಕಿದೆ. ಅವರಲ್ಲಿ 5027 ಬಿ.ಬಿ.ಎಂ.ಬಿ. ಸಿಬ್ಬಂದಿ ಮತ್ತು ಅವರ ಅವಲಂಬಿತರು, ಹಾಗು 45 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರು ಸೇರಿದ್ದಾರೆ. 18 ರಿಂದ 44 ವರ್ಷದವರೆಗಿನ 682 ಮಂದಿ ಬಿ.ಬಿ.ಎಂ.ಬಿ ಸಿಬ್ಬಂದಿ  ಮತ್ತು 3376 ಮಂದಿ ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ನಂಗಾಲ್ ನಲ್ಲಿಯ ಬಿ.ಬಿ.ಎಂ.ಬಿ. ಆಸ್ಪತ್ರೆಯು ದಿನನಿತ್ಯ ಸುಮಾರು 130 ಮಂದಿಗೆ ಲಸಿಕೆ ಹಾಕುತ್ತಿದೆ. ಅದೇ ರೀತಿ ತಲ್ವಾರದಲ್ಲಿರುವ ಬಿ.ಬಿ.ಎಂ.ಬಿ ಆಸ್ಪತ್ರೆ ಇಂದಿನವರೆಗೆ 5100 ಮಂದಿಗೆ ಲಸಿಕೆ ಹಾಕಿದೆ. ಇವರಲ್ಲಿ 3300 ಮಂದಿ ಬಿ.ಬಿ.ಎಂ.ಬಿ. ಸಿಬ್ಬಂದಿಗಳು  ಮತ್ತು 45 ವರ್ಷ ಮೇಲಿನ ಅವರ ಅವಲಂಬಿತರು ಸೇರಿದ್ದಾರೆ. ಬಿ.ಬಿ.ಎಂ.ಬಿ. ಯ 18 ರಿಂದ 44 ವರ್ಷಗಳ ನಡುವಿನ ವಯಸ್ಸಿನ 457 ಸಿಬ್ಬಂದಿಗಳಿಗೆ ಮತ್ತು 1372 ಮಂದಿ ಸ್ಥಳೀಯ ನಿವಾಸಿಗಳಿಗೆ ಲಸಿಕೆ ಹಾಕಲಾಗಿದೆ. ಈ ಆಸ್ಪತ್ರೆಯು ದಿನ ನಿತ್ಯ 110 ಮಂದಿಗೆ ಲಸಿಕೆ ಹಾಕುತ್ತಿದೆ.

ಬಿ.ಬಿ.ಎಂ.ಬಿ.ಯು ದೆಹಾರ್ ಪವರ್ ಹೌಸ್ ನಲ್ಲಿ 2021 ರ ಮೇ 4, 11 ಮತ್ತು 18 ರಂದು ಸ್ಥಳೀಯ ಆಡಳಿತದ ಸಹಾಯದೊಂದಿಗೆ ಮೂರು ಲಸಿಕಾ ಶಿಬಿರಗಳನ್ನು ಆಯೋಜಿಸಿತ್ತು. ಈ ಶಿಬಿರಗಳಲ್ಲಿ ಬಿ.ಬಿ.ಎಂ.ಬಿ.ಯ 210 ಸಿಬ್ಬಂದಿಗಳು ಮತ್ತು 91 ಮಂದಿ ಸ್ಥಳೀಯರಿಗೆ ಲಸಿಕೆ ಹಾಕಲಾಗಿದೆ. ಅದೇ ರೀತಿ ಚಂಡೀಗಢದಲ್ಲಿ 2021ರ ಏಪ್ರಿಲ್ 17, 18 ಮತ್ತು 23 ರಿಂದ 26 ರವರೆಗೆ ಶಿಬಿರಗಳನ್ನು ಆಯೋಜಿಸಲಾಗಿತ್ತು. ಬಿ.ಬಿ.ಎಂ.ಬಿ.ಯ ಇತರ  ಉಪ ಕೇಂದ್ರಗಳಾದ  ಪಾಣಿಪತ್, ಭಿವಾನಿ, ಜಮಾಲ್ಪುರ ಇತ್ಯಾದಿ ಪ್ರದೇಶಗಳಲ್ಲಿಯೂ ಲಸಿಕಾ ಶಿಬಿರಗಳನ್ನು ಬಿ.ಬಿ.ಎಂ.ಬಿ. ಸಿಬ್ಬಂದಿಗಾಗಿ ಮತ್ತು ಅವರ ಕುಟುಂಬದವರಿಗೆ ಲಸಿಕೆ ಹಾಕುವುದಕ್ಕಾಗಿ ಆಯೋಜಿಸಲಾಗಿತ್ತು.

ಇಂದಿನವರೆಗೆ ಬಿ.ಬಿ.ಎಂ.ಬಿ.ಯು 15000 ಕ್ಕೂ ಅಧಿಕ ಮಂದಿಗೆ ಲಸಿಕೆ ಹಾಕಿದೆ. ಇವರಲ್ಲಿ 9097 ಬಿ.ಬಿ.ಎಂ.ಬಿ. ಸಿಬ್ಬಂದಿಗಳು ಮತ್ತು ಅವರ 45 ವರ್ಷಕ್ಕಿಂತ ಮೇಲಿನ ಅವಲಂಬಿತರು ಸೇರಿದ್ದಾರೆ. ಬಿ.ಬಿ.ಎಂ.ಬಿ.ಯ 18 ರಿಂದ 45 ವರ್ಷ ದೊಳಗಿನ 1139 ಸಿಬ್ಬಂದಿ ಮತ್ತು 4839 ಮಂದಿ ಸ್ಥಳೀಯ ನಿವಾಸಿಗಳೂ ಲಸಿಕೆ ಪಡೆದಿದ್ದಾರೆ. ಬಿ.ಬಿ.ಎಂ.ಬಿ.ಯು ತನ್ನ ಸಿಬ್ಬಂದಿಗಳನ್ನು ಮತ್ತು ಅವರ ಕುಟುಂಬದವರಿಗೆ ಆದಷ್ಟು ಬೇಗ ಲಸಿಕೆ ಹಾಕಲು ಧೃಡ ಪ್ರಯತ್ನಗಳನ್ನು ಮಾಡುತ್ತಿದೆ ಮಾತ್ರವಲ್ಲದ ಬಿ.ಬಿ.ಎಂ.ಬಿ.ಯೋಜನೆಗಳ ಪ್ರದೇಶದಲ್ಲಿರುವ ಸ್ಥಳೀಯ ಜನರಿಗೂ  ಸೇವೆಯನ್ನು ನೀಡುತ್ತಿದೆ.

ಇದಲ್ಲದೆ, ಬಿ.ಬಿ.ಎಂ.ಬಿ.ಯ ನಂಗಾಲ್, ಸುಂದರನಗರ್ ಮತ್ತು ತಲ್ವಾರಾಗಳಲ್ಲಿರುವ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಎಲ್ಲಾ ಆಸ್ಪತ್ರೆಗಳು ಸಾಕಷ್ಟು ಆಮ್ಲಜನಕ ಸಿಲಿಂಡರುಗಳು ಮತ್ತು ಇತರ ಅವಶ್ಯ ಔಷಧಿಗಳ ಸಹಿತ ಉಪಕರಣಗಳನ್ನು ಬಿ.ಬಿ.ಎಂ.ಬಿ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಈ ಪರೀಕ್ಷಾ ಸಮಯದಲ್ಲಿ ಚಿಕಿತ್ಸೆ ಒದಗಿಸುವುದಕ್ಕಾಗಿ ಹೊಂದಿವೆ. ಬಿ.ಬಿ.ಎಂ.ಬಿ. ಸಿಬ್ಬಂದಿ ಅವಶ್ಯಕತೆ ಇರುವ ಸಾರ್ವಜನಿಕರಿಗೆ ಆಹಾರ/ಪಡಿತರ ಒದಗಿಸುವ ಮೂಲಕ ಸಮಾಜಕ್ಕೆ ನೆರವಾಗುವ ಉಪಕ್ರಮಗಳನ್ನು ಕೈಗೊಂಡಿದ್ದಾರೆ. 

****
 



(Release ID: 1720794) Visitor Counter : 160