ಹಣಕಾಸು ಸಚಿವಾಲಯ

ಕಸ್ಟಮ್ಸ್ (ರಿಯಾಯಿತಿ ದರದಲ್ಲಿ ಸರಕುಗಳ ಆಮದು) ನಿಯಮಗಳು, 2017 ರ ಅಡಿಯಲ್ಲಿ ಸೌಲಭ್ಯಗಳ ಹೆಚ್ಚಳ

Posted On: 18 MAY 2021 7:25PM by PIB Bengaluru

ವರ್ಷ ಹಣಕಾಸು ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ವ್ಯಾಪಾರದ ಸುಗಮತೆಯನ್ನು ಹೆಚ್ಚಿಸಲು ಕಸ್ಟಮ್ಸ್ (ರಿಯಾಯಿತಿ ದರದಲ್ಲಿ ಸರಕುಗಳ ಆಮದು) ನಿಯಮಗಳು 2017 (ಐಜಿಸಿಆರ್, 2017) ಅನ್ನು ತಿದ್ದುಪಡಿ ಮಾಡುವುದಾಗಿ ಘೋಷಿಸಿದ್ದರು. ಅದರಂತೆ, ಕೇಂದ್ರೀಯ ಕಸ್ಟಮ್ಸ್ (ಸೀಮಾ ಶುಲ್ಕಮತ್ತು ಪರೋಕ್ಷ ತೆರಿಗೆಗಳ ಮಂಡಳಿ (ಸಿಬಿಐಸಿ) 2021 ಫೆಬ್ರವರಿ 2 ರಂದು ನಿಯಮಗಳ ವ್ಯಾಪ್ತಿಯನ್ನು ತಕ್ಷಣವೇ ಹೆಚ್ಚಿಸಿತ್ತು.

ಸಿಬಿಐಸಿ ಈಗ ಐಜಿಸಿಆರ್, 2017 ರಲ್ಲಿನ ಸುಧಾರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವ್ಯಾಪಾರಕ್ಕೆ ಸಹಾಯ ಮಾಡುವ ಸಲುವಾಗಿ 20 ಮೇ 2021 ಸುತ್ತೋಲೆ ಸಂಖ್ಯೆ 10/2021- Customs, ಅನ್ನು ಬಿಡುಗಡೆ ಮಾಡಿದೆ, ಇದರಿಂದ ಅವರು ಹೊಸ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಬಹುದು. ಸುತ್ತೋಲೆಯನ್ನು ನೋಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿರಿ

https://static.pib.gov.in/WriteReadData/specificdocs/documents/2021/may/doc202151831.pdf

ಐಜಿಸಿಆರ್, 2017 ದೇಶೀಯ ಸರಕುಗಳ ಉತ್ಪಾದನೆಗೆ ಅಥವಾ ಸೇವೆಗಳನ್ನು ಒದಗಿಸಲು ಅಗತ್ಯವಾದ ಸರಕುಗಳನ್ನು ಆಮದು ಮಾಡಿಕೊಳ್ಳುವಲ್ಲಿ ರಿಯಾಯಿತಿ ಕಸ್ಟಮ್ಸ್ ಸುಂಕದ ಲಾಭವನ್ನು ಆಮದುದಾರರು ಪಡೆಯುವ ವಿಧಾನಗಳು ಮತ್ತು ವಿಧಾನವನ್ನು ತಿಳಿಸುತ್ತದೆ. ವ್ಯಾಪಾರ ಮತ್ತು ಉದ್ಯಮದ ಅಗತ್ಯಗಳಿಗೆ ಅನುಗುಣವಾಗಿ ಮಾಡಿರುವ ಒಂದು ಪ್ರಮುಖ ಬದಲಾವಣೆಯೆಂದರೆ, ಆಮದು ಮಾಡಿದ ಸರಕುಗಳನ್ನು ಜಾಬ್ ವರ್ಕ್ಗೆ ಕಳುಹಿಸಲು ಅನುಮತಿ ನೀಡಲಾಗಿದೆ. ಸೌಲಭ್ಯದ ಅನುಪಸ್ಥಿತಿಯು ಹಿಂದೆ ಉದ್ಯಮವನ್ನು ವಿಶೇಷವಾಗಿ ಎಂಎಸ್ಎಂಇ ವಲಯದಲ್ಲಿ ನಿರ್ಬಂಧಿಸಿತ್ತು, ಅದು  ಆಂತರಿಕವಾಗಿ ಸಂಪೂರ್ಣ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರಲಿಲ್ಲ.

ಮುಖ್ಯವಾಗಿ, ಯಾವುದೇ ಉತ್ಪಾದನಾ ಸೌಲಭ್ಯವನ್ನು ಹೊಂದಿರದ ಆಮದುದಾರರು ಈಗ ಐಜಿಸಿಆರ್, 2017 ಅನ್ನು ರಿಯಾಯಿತಿ ಕಸ್ಟಮ್ಸ್ ಸುಂಕದಲ್ಲಿ ಆಮದು ಮಾಡಿಕೊಳ್ಳಲು ಮತ್ತು ಅಂತಿಮ ಸರಕುಗಳನ್ನು ಸಂಪೂರ್ಣವಾಗಿ ಜಾಬ್ ವರ್ಕ್ಆಧಾರದ ಮೇಲೆ ಪಡೆಯಬಹುದು. ಆದರೆ ಕೆಲವು ಕ್ಷೇತ್ರಗಳನ್ನು ಚಿನ್ನ, ಆಭರಣ, ಆಭರಣ ಕಲ್ಲುಗಳು ಮತ್ತು ಬೆಲೆ ಬಾಳುವ ಲೋಹಗಳಿಗೆ ಸಂಬಂಧಪಟ್ಟವನ್ನು ಇದರಿಂದ ಹೊರಗಿಡಲಾಗಿದೆ.

ಈಗ ಒದಗಿಸಲಾದ ಮತ್ತೊಂದು ಪ್ರಮುಖ ಪ್ರೋತ್ಸಾಹಕವೆಂದರೆ, ರಿಯಾಯಿತಿ ಕಸ್ಟಮ್ಸ್ ಸುಂಕದಲ್ಲಿ ಬಂಡವಾಳ ಸರಕುಗಳನ್ನು ಆಮದು ಮಾಡಿಕೊಳ್ಳುವವರಿಗೆ ದೇಶೀಯ ಮಾರುಕಟ್ಟೆಯಲ್ಲಿ  ತೆರಿಗೆ ಮತ್ತು ಬಡ್ಡಿಯನ್ನು ಪಾವತಿಸುವಾಗ, ಸವಕಳಿ ಮೌಲ್ಯದಲ್ಲಿ ತೆರವುಗೊಳಿಸಲು ಅವಕಾಶ ನೀಡುವುದು. ಇದನ್ನು ಮೊದಲು ಅನುಮತಿಸಳಿರಲಿಲ್ಲ  ಮತ್ತು ತಯಾರಕರು ಆಮದು ಮಾಡಿದ ಸರಕುಗಳನ್ನು ಅವುಗಳನ್ನು ಬಳಸಿದ ನಂತರ ಸುಲಭವಾಗಿ ಮರು-ರಫ್ತು ಮಾಡಲಾಗದ ಕಾರಣ ಇಕ್ಕಟ್ಟಿನಲ್ಲಿದ್ದರು.

ಇದಲ್ಲದೆ, ನಿಯಮಗಳ ಅಡಿಯಲ್ಲಿ ರಿಯಾಯಿತಿ ಕಸ್ಟಮ್ಸ್ ಸುಂಕವನ್ನು ಪಡೆಯುವ ವಿಧಾನವನ್ನು ಪರಿಶೀಲಿಸಲಾಗಿದೆ ಮತ್ತು ತರ್ಕಬದ್ಧಗೊಳಿಸಲಾಗಿದೆ. ಅಗತ್ಯವಾದ ಮಾಹಿತಿ ಮತ್ತು ದಾಖಲೆಗಳನ್ನು ಸಂಬಂಧಪಟ್ಟ ಕಸ್ಟಮ್ಸ್ ಅಧಿಕಾರಿಗೆ ಇಮೇಲ್ ಮೂಲಕ ಕಳುಹಿಸಬಹುದು ಮತ್ತು ಮೂಲಕ ಯಾವುದೇ ಭೌತಿಕ ಸಂಪರ್ಕವನ್ನು ತಪ್ಪಿಸಬಹುದು.

ಐಬಿಸಿಆರ್, 2017 ಮೇಲ್ವಿಚಾರಣೆಯ ಕಸ್ಟಮ್ಸ್ ಅಧಿಕಾರಿಗಳ ಪಟ್ಟಿಯು ಕೊಂಡಿಯಲ್ಲಿ ಲಭ್ಯವಿದೆ ಎಂದು ಸಿಬಿಐಸಿ ಸುತ್ತೋಲೆ ಉಲ್ಲೇಖಿಸಿದೆ.

https://www.cbic.gov.in/htdocs-cbec/home

***(Release ID: 1719792) Visitor Counter : 211


Read this release in: English , Urdu , Hindi , Punjabi