ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಏಶ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಕ್ರೀಡಾಳು ಜೋಸೆಫ್ ಜೇಮ್ಸ್ ಅವರಿಗೆ 2.5 ಲಕ್ಷ ರೂ. ನೆರವಿಗೆ ಕ್ರೀಡಾ ಸಚಿವಾಲಯ ಅಂಗೀಕಾರ

Posted On: 18 MAY 2021 5:30PM by PIB Bengaluru

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು (ಎಂ.ವೈ..ಎಸ್.) ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ತರಬೇತುದಾರ ಜೋಸೆಫ್ ಜೇಮ್ಸ್ ಅವರಿಗೆ ಕ್ರೀಡಾಳುಗಳಿಗಾಗಿರುವ ಪಂಡಿತ್ ದೀನ ದಯಾಳ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ಯೋಜನೆ ಅಡಿಯಲ್ಲಿ 2,50,000 ರೂ. ಗಳನ್ನು ಮಂಜೂರು ಮಾಡಿದೆ. ಹಣಕಾಸು ಸಹಾಯವನ್ನ್ನು  ಕೋವಿಡ್ -19 ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರ, ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಮತ್ತು ಎಂ.ವೈ..ಎಸ್. ಗಳು ಸಂಯುಕ್ತವಾಗಿ ಮಾಜಿ ಅಂತಾರಾಷ್ಟ್ರೀಯ ಅಥ್ಲೆಟ್ ಗಳನ್ನು  ಮತ್ತು ತರಬೇತುದಾರರನ್ನು ಬೆಂಬಲಿಸಲು ಕೈಗೊಂಡ ಉಪಕ್ರಮದನ್ವಯ ನೀಡಲಾಗಿದೆ.

2006 ರಲ್ಲಿ ಏಶ್ಯನ್ ಗೇಮ್ಸ್ ಚಿನ್ನದ ಪದಕ ಗೆದ್ದಿದ್ದ ಮತ್ತು 2008 ಏಶ್ಯನ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದಿದ್ದ ಜೋಸೆಫ್ ಜೇಮ್ಸ್ ಕೆಲ ದಿನಗಳ ಹಿಂದೆ ಕೋವಿಡ್ -19 ಸೋಂಕು ತಗಲಿದ ಬಳಿಕ ಏಪ್ರಿಲ್ 24 ರಂದು ಗಂಭೀರ ಪ್ರಮಾಣದ ಉಸಿರಾಟದ ಸಮಸ್ಯೆಗೆ ಈಡಾಗಿದ್ದರು. ಅವರ ಆಮ್ಲಜನಕದ ಮಟ್ಟ ಕುಸಿದಿತ್ತು ಮತ್ತು ಅವರ ಕುಟುಂಬದವರು ಅವರನ್ನು ಹೈದರಾಬಾದಿನ ವಿವೇಕಾನಂದ ಆಸ್ಪತ್ರೆಗೆ ತುರ್ತು ನೆಲೆಯಲ್ಲಿ ಸೇರಿಸಿದ್ದರು. ಅವರು 7-8 ದಿನಗಳ ಕಾಲ .ಸಿ.ಯು. ನಲ್ಲಿದ್ದರು ಮತ್ತು ಮೇ 5 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಅವರ ಆರೋಗ್ಯ ಈಗ ಸ್ಥಿರವಾಗಿದೆ ಮತ್ತು ಅವರು ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದಾರೆ.

ಸಕಾಲದಲ್ಲಿ ದೊರೆತ ಹಣಕಾಸು ನೆರವಿಗಾಗಿ ಸಚಿವಾಲಯ, ಎಸ್..., ಮತ್ತು ...ಗಳಿಗೆ ಧನ್ಯವಾದ ಸಲ್ಲಿಸಿರುವ ಜೋಸೆಫ್ ಜೇಮ್ಸ್ ಅವರ ಪುತ್ರಿ ಅಲಿಕಾ ಜೋಯಿ ಅವರು ತೆಲಂಗಾಣ ಒಲಿಂಪಿಕ್ ಅಸೋಸಿಯೇಶನ್ ಸದಸ್ಯ  ಮತ್ತು .., ಶ್ರೀ ಮಹೇಶ್ ಸಾಗರ್ ಅವರು ನಮಗೆ ಉಪಕ್ರಮದ ಬಗ್ಗೆ ತಿಳಿಸಿದರು. ಅವರು ನನಗೆ ವಿವರಗಳನ್ನು ತುಂಬಿಸಬೇಕಾದ ಬಗ್ಗೆ ಹೇಳಿದರು ಮತ್ತು ಅದರ ಬಗ್ಗೆ ಸಂಬಂಧಿತ ಅಧಿಕಾರಿಗಳ ಜೊತೆಗೂ ಸಂಪರ್ಕಿಸಿದರುಎಂದರು.

ನಮ್ಮ ಕುಟುಂಬದವರಿಂದ ಮತ್ತು ಸ್ನೇಹಿತರಿಂದ ಕೂಡಾ ಸಹಾಯ ಪಡೆಯುವುದು ಕಷ್ಟವಾಗಿರುವ ಸಂದರ್ಭದಲ್ಲಿ ಸಚಿವಾಲಯದಿಂದ ಆಗಿರುವ  ದೊಡ್ಡ ಸಹಾಯ ಇದು. ನಮಗೆ ಬಹಳ ಅವಶ್ಯಕತೆ ಇರುವಾಗ ಭಾರತೀಯ ಕ್ರೀಡಾ ಪ್ರಾಧಿಕಾರ ನಮ್ಮನ್ನು ನೆನೆಪಿಸಿಕೊಂಡಿರುವುದಕ್ಕೆ ನಾವು ಅಭಾರಿಯಾಗಿದ್ದೇವೆಎಂದೂ ಅವರು ಹೇಳಿದ್ದಾರೆ.

ತೆಲಂಗಾಣ ಒಲಿಂಪಿಕ್ ಅಸೋಸಿಯೇಶನ್ನಿನ ಪ್ರಧಾನ ಕಾರ್ಯದರ್ಶಿ ಕೆ.ಜೆ.ಯಾದವ್ ಅವರು ಎಸ್..., ಎಂ.ವೈ..ಎಸ್. ಮತ್ತು ...ಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಶ್ರೀ ಜೋಸೆಫ್ ಅವರ ವೈದ್ಯಕೀಯ ವೆಚ್ಚವನ್ನು ಭರಿಸುವ ಸಲುವಾಗಿ ಅವರಿಗೆ ಹಣಕಾಸು ನೆರವು ನೀಡಿದುದಕ್ಕಾಗಿ ಇಡೀ ತೆಲಂಗಾಣ ಒಲಿಂಪಿಕ್ ಅಸೋಸಿಯೇಶನ್ ಮತ್ತು ತೆಲಂಗಾಣ ರಾಜ್ಯದ ಇಡೀ ಕ್ರೀಡಾ ಸಮುದಾಯದ ಪರವಾಗಿ ನಾನು ಯುವಜನ ವ್ಯವಹಾರಗಳ, ಕ್ರೀಡಾ ಸಚಿವಾಲಯ, ಭಾರತೀಯ ಕ್ರೀಡಾ ಪ್ರಾಧಿಕಾರ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಶನ್ ಗಳಿಗೆ ನಾನು ಅಭಾರಿಯಾಗಿದ್ದೇನೆ. ಕಷ್ಟದ ದಿನಗಳಲ್ಲಿ ಕ್ರೀಡಾಳುಗಳನ್ನು ಬೆಂಬಲಿಸುತ್ತಿರುವುದಕ್ಕಾಗಿ ಧನ್ಯವಾದಗಳುಎಂದವರು ಹೇಳಿದ್ದಾರೆ.

***



(Release ID: 1719762) Visitor Counter : 148