ಭೂವಿಜ್ಞಾನ ಸಚಿವಾಲಯ
“ತೌಕ್ತೆ” ಚಂಡಮಾರುತ ಮುಂದಿನ ಆರು ಗಂಟೆಗಳಲ್ಲಿ ಮತ್ತಷ್ಟು ತೀವ್ರ ಮತ್ತು ಗಂಭೀರವಾಗಿ ಮಾರ್ಪಡುವ ಸಾಧ್ಯತೆ ಮತ್ತು ಆ ಚಂಡಮಾರುತ ನಂತರದ 12 ಗಂಟೆಗಳಲ್ಲಿ ಇನ್ನೂ ತೀವ್ರಗೊಳ್ಳುವ ನಿರೀಕ್ಷೆ; ಮೇ 18ರ ಮಧ್ಯಾಹ್ನ/ ಸಂಜೆಯ ವೇಳೆಗೆ ಚಂಡಮಾರುತ ಉತ್ತರ- ವಾಯುವ್ಯಮುಖವಾಗಿ ಗುಜರಾತ್ ಕರಾವಳಿ ಹಾದು ಪೋರಬಂದರ್ ಮತ್ತು ನಲಿಯಾ ನಡುವೆ ಅಪ್ಪಳಿಸುವ ಸಾಧ್ಯತೆ
Posted On:
15 MAY 2021 3:20PM by PIB Bengaluru
ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ವರದಿ ಹೀಗಿದೆ:
“ತೌಕ್ತೆ” ಚಂಡಮಾರುತ (ತೌ’ತೆ ಎಂದು ಕರೆಯಲಾಗುವುದು) ಇಂದು ಕಳೆದ ಆರು ಗಂಟೆಗಳಲ್ಲಿ ಪ್ರತಿ ಗಂಟೆಗೆ ಸುಮಾರು 11 ಕಿ.ಮೀ. ವೇಗದಲ್ಲಿ ಬೀಸಿ ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಹೊಂದಿಕೊಂಡಿರುವ ಪೂರ್ವ ಕೇಂದ್ರ ಭಾಗದಿಂದ ಹಾದು ಉತ್ತರ – ವಾಯುವ್ಯಭಿಮುಖವಾಗಿ ಹಾದು ಮೇ 15, 2021ರಂದು ಬೆಳಗ್ಗೆ 8.30ಕ್ಕೆ (ಅಂತಾರಾಷ್ಟ್ರೀಯ ಕಾಲಮಾನ) ಕೇಂದ್ರೀಕೃತವಾಗಿದ್ದು, ಆ ಪ್ರದೇಶ ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಹೊಂದಿಕೊಂಡಿರುವ ಅಕ್ಷಾಂಶ ಉತ್ತರಕ್ಕೆ 12.8° ಮತ್ತು ರೇಖಾಂಶ ಪೂರ್ವಕ್ಕೆ 72.5° ದೂರದಲ್ಲಿ, ಉತ್ತರ–ವಾಯವ್ಯ ಅಮಿನಿದಿವಿಯ ಸುಮಾರು 190 ಕಿ.ಮೀ. ದೂರದಲ್ಲಿ, ದಕ್ಷಿಣ-ನೈಋತ್ಯ ಪಣಜಿಂ-ಗೋವಾದ 330 ಕಿ.ಮೀ.ದೂರದಲ್ಲಿ, ದಕ್ಷಿಣ-ಆಗ್ನೇಯ ಭಾಗದ ವೇರವಲ್ (ಗುಜರಾತ್)ನಿಂದ 930 ಕಿ.ಮೀ. ಮತ್ತು ದಕ್ಷಿಣ-ಆಗ್ನೇಯಕ್ಕೆ ಕರಾಚಿ(ಪಾಕಿಸ್ತಾನ) 1020 ಕಿ.ಮೀ. ದೂರದಲ್ಲಿದೆ.
ಈ ಚಂಡಮಾರುತ ಮುಂದಿನ ಆರು ಗಂಟೆಯಲ್ಲಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ ಮತ್ತು ಆನಂತರದ 12 ಗಂಟೆಗಳಲ್ಲಿ ಚಂಡಮಾರುತ ಮತ್ತಷ್ಟು ಗಂಭೀರವಾಗಲಿದೆ. ಚಂಡಮಾರುತ ಮೇ 18ರ ಮಧ್ಯಾಹ್ನ-ಸಂಜೆಯ ವೇಳೆಗೆ ಉತ್ತರ-ವಾಯವ್ಯದತ್ತ ಸಾಗಿ ಗುಜರಾತ್ ನ ಕರಾವಳಿಯ ಪೋರಬಂದರ್ ಮತ್ತು ನಲಿಯಾ ಸುತ್ತಮುತ್ತ ಅಪ್ಪಳಿಸಲಿದೆ.
ಈ ಕೆಳಗಿನ ಕೋಷ್ಟಕದಲ್ಲಿ ಹವಾಮಾನ ಮುನ್ನೆಚ್ಚರಿಕೆ ನಿಗಾ ಮತ್ತು ತೀವ್ರತೆಯ ಬಗ್ಗೆ ವಿವರಗಳನ್ನು ನೀಡಲಾಗಿದೆ:
ದಿನಾಂಕ/ಸಮಯ
(ಐಎಸ್ ಟಿ)
|
ಸ್ಥಿತಿ
(ಅಕ್ಷಾಂಶ. 0N/ ರೇಖಾಂಶ. 0E)
|
ಗರಿಷ್ಠ ಸುಸ್ಥಿರ ಮೇಲ್ಮೈ ಗಾಳಿಯ ವೇಗ(ಕೆಎಂಪಿಎಚ್)
(ಪ್ರತಿ ಗಂಟೆಗೆ ವೇಗ)
|
ಚಂಡಮಾರುತದಿಂದ ಆಗಲಿರುವ ತೊಂದರೆಯ ವರ್ಗ
|
15.05.21/0830
|
12.8/72.5
|
75-85
ಬಿರುಗಾಳಿ 95
|
ಚಂಡಮಾರುತ
|
15.05.21/1130
|
13.2/72.5
|
85-95
ಬಿರುಗಾಳಿ 105
|
ತೀವ್ರ ಚಂಡಮಾರುತ
|
15.05.21/1730
|
13.8/72.4
|
95-105
ಬಿರುಗಾಳಿ 115
|
ತೀವ್ರ ಚಂಡಮಾರುತ
|
15.05.21/2330
|
14.5/72.3
|
110-120 ಬಿರುಗಾಳಿ 135
|
ತೀವ್ರ ಚಂಡಮಾರುತ
|
16.05.21/0530
|
15.3/72.0
|
120-130 ಬಿರುಗಾಳಿ 145
|
ಗಂಭೀರ ಚಂಡಮಾರುತ
|
16.05.21/1730
|
16.5/71.5
|
130-140 ಬಿರುಗಾಳಿ 155
|
ಗಂಭೀರ ಚಂಡಮಾರುತ
|
17.05.21/0530
|
18.0/70.7
|
145-155 ಬಿರುಗಾಳಿ 165
|
ಗಂಭೀರ ಚಂಡಮಾರುತ
|
17.05.21/1730
|
19.5/70.0
|
150-160 ಬಿರುಗಾಳಿ 175
|
ಗಂಭೀರ ಚಂಡಮಾರುತ
|
18.05.21/0530
|
20.7/69.4
|
150-160 ಬಿರುಗಾಳಿ 175
|
ಗಂಭೀರ ಚಂಡಮಾರುತ
|
18.05.21/1730
|
22.0/69.1
|
145-155 ಬಿರುಗಾಳಿ 165
|
ಗಂಭೀರ ಚಂಡಮಾರುತ
|
19.05.21/0530
|
24.5/70.0
|
70-80
ಬಿರುಗಾಳಿ 90
|
ಚಂಡಮಾರುತ
|
ಮುನ್ನೆಚ್ಚರಿಕೆ
- ಮಳೆ:
- ಲಕ್ಷದ್ವೀಪ: ಮೇ 15ರಂದು ದ್ವೀಪದ ಉತ್ತರ ಭಾಗದ ಒಳನಾಡು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಮತ್ತು ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರಿ ಮಳೆಯಾಗಿದೆ ಮತ್ತು ಮೇ 16ರಂದು ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.
- ಕೇರಳ: ಮೇ 15ರಂದು ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ ಮತ್ತು ಕೆಲವು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಮತ್ತು ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಿದೆ. ಮೇ 16ರಂದು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಮತ್ತು ಮೇ 17ರಂದು ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ.
- ತಮಿಳುನಾಡು (ಘಟ್ಟ ಜಿಲ್ಲೆಗಳು): ಮೇ 15ರಂದು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಭಾರೀ ಮಳೆಯಾಗಲಿದೆ ಮತ್ತು ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.
- ಕರ್ನಾಟಕ (ಕರಾವಳಿ ಮತ್ತು ಘಟ್ಟ ಜಿಲ್ಲೆಗಳಿಗೆ ಹೊಂದಿಕೊಂಡ ಪ್ರದೇಶ): ಮೇ 15ರಂದು ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾದರೆ, ಇನ್ನು ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ ಮತ್ತು ಮೇ 16ರಂದು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಲಿದೆ.
- ಕೊಂಕಣ ಮತ್ತು ಗೋವಾ: ದಕ್ಷಿಣ ಕೊಂಕಣ ಮತ್ತು ಗೋವಾದ ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಮತ್ತು ಬಹುತೇಕ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ. ಮೇ 15ರಂದು ಉತ್ತರ ಕೊಂಕಣದ ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಬಿದ್ದಿದೆ ಹಾಗೂ ಕೊಂಕಣ ಮತ್ತು ಗೋವಾ ಹಾಗೂ ಅದಕ್ಕೆ ಹೊಂದಿಕೊಂಡಿರುವ ಘಟ್ಟ ಪ್ರದೇಶಗಳಲ್ಲಿ ಮೇ 16ರಂದು ಕೆಲವು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆಯಾಗಿದ್ದು, ಮೇ 17ರಂದು ಉತ್ತರ ಕೊಂಕಣದ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ.
- ಗುಜರಾತ್: ಮೇ 16ರಂದು ಮಧ್ಯಾಹ್ನದ ನಂತರ ಸೌರಾಷ್ಟ್ರ ಭಾಗದ ಕರಾವಳಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆ ಆರಂಭವಾಗುವ ಸಾಧ್ಯತೆ ಇದೆ. ಸೌರಾಷ್ಟ್ರ ಮತ್ತು ಕಚ್ ನ ಒಳನಾಡು ಪ್ರದೇಶದ ಹಲವೆಡೆ ಅಧಿಕದಿಂದ ಕೂಡಿದ ಭಾರೀ ಮಳೆ ಸಾಧ್ಯತೆ ಇದೆ. ಮೇ 17ರಂದು ಒಳನಾಡು ಪ್ರದೇಶಗಳಲ್ಲಿ (ಜುನಗಢ್ ಮತ್ತು ಗಿರ್ ಸೋಮನಾಥ ಜಿಲ್ಲೆಗಳು) ಅಧಿಕ ಮಳೆ ಬೀಳುವ ಸಾಧ್ಯತೆ ಇದೆ ಹಾಗೂ ಮೇ 18ರಂದು ಸೌರಾಷ್ಟ್ರ ಮತ್ತು ಕಚ್ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಒಳನಾಡು ಪ್ರದೇಶಗಳಲ್ಲಿ(ಪೋರಬಂದರ್, ದೇವಭೂಮಿ ದ್ವಾರಕ, ಜಾಮ್ ನಗರ್ ಮತ್ತು ಕಚ್ ಜಿಲ್ಲೆಗಳು) ಭಾರೀ ಮಳೆ(20 ಸೆಂಟಿ ಮೀಟರ್ ಗೂ ಅಧಿಕ) ಬೀಳುವ ನಿರೀಕ್ಷೆ ಇದೆ.
- ಪಶ್ಚಿಮ ರಾಜಸ್ಥಾನ: ಮೇ 18 ಮತ್ತು 19ರಂದು ಹಲವು ಒಳನಾಡು ಪ್ರದೇಶಗಳಲ್ಲಿ ಅಧಿಕದಿಂದ ಕೂಡಿದ ಭಾರೀ ಮಳೆ ಮತ್ತು ಕೆಲ ಪ್ರದೇಶಗಳಲ್ಲಿ ಹಗುರದಿಂದ ಕೂಡಿದ ಸಾಧಾರಣ ಮಳೆಯಾಗಲಿದೆ.
(ii) ಗಾಳಿ ಮುನ್ನೆಚ್ಚರಿಕೆ
- ಮುಂದಿನ ಆರು ಗಂಟೆಗಳಲ್ಲಿ ಮಾಲ್ಡವೀಸ್ ಪ್ರದೇಶ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶದಲ್ಲಿ ತಂಪನೆಯ ವಾತಾವರಣ ಇರಲಿದ್ದು, ಬಿರುಗಾಳಿ ಪ್ರತಿ ಗಂಟೆಗೆ 45-55 ಕಿ.ಮೀ.ನಿಂದ 65 ಕಿ.ಮೀ. ವೇಗದಲ್ಲಿ ಸಾಗಲಿದೆ.
- ಲಕ್ಷದ್ವೀಪ ಪ್ರದೇಶ ಮತ್ತು ಅರಬ್ಬೀ ಸಮುದ್ರದ ವಾಯವ್ಯಕ್ಕೆ ಹೊಂದಿಕೊಂಡಿರುವ ಮತ್ತು ಅರಬ್ಬೀ ಸಮುದ್ರದ ಪಶ್ಚಿಮ ಕೇಂದ್ರದ ಪ್ರದೇಶದಲ್ಲಿ ಚಂಡಮಾರುತ ಪ್ರತಿ ಗಂಟೆಗೆ 75-85 ಕಿ.ಮೀ. ವೇಗದಿಂದ 95 ಕಿ.ಮೀ. ವೇಗದಲ್ಲಿ ಹಾದು ಹೋಗಲಿದೆ.
- ಮೇ 15ರಂದು ಬಿರುಗಾಳಿ ಕೇರಳದ ಕರಾವಳಿ ಉದ್ದಕ್ಕೂ ಪ್ರತಿ ಗಂಟೆಗೆ 50-60 ಕಿ.ಮೀ. ವೇಗದಿಂದ 70 ಕಿ.ಮೀ. ವೇಗದಲ್ಲಿ ಬೀಸಲಿದೆ.
- ಮೇ 15ರಂದು ಕರ್ನಾಟಕದಾದ್ಯಂತ, ದಕ್ಷಿಣ ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಉದ್ದಕ್ಕೂ ಬಿರುಗಾಳಿ ಪ್ರತಿ ಗಂಟೆಗೆ 50-60 ಕಿ.ಮೀ. ವೇಗದಿಂದ 70 ಕಿ.ಮೀ. ವೇಗದಲ್ಲಿ ಸಾಗುವ ಸಾಧ್ಯತೆ ಇದೆ. ಮಹಾರಾಷ್ಟ್ರ ಮತ್ತು ಗೋವಾ ಕರಾವಳಿ ಉದ್ದಕ್ಕೂ ಮೇ 16ರಂದು ಚಂಡಮಾರುತ ಪ್ರತಿ ಗಂಟೆಗೆ 60-70 ಕಿ.ಮೀ. ವೇಗದಿಂದ 80 ಕಿ.ಮೀ. ವೇಗದಲ್ಲಿ ಸಾಗಲಿದೆ.
- ಮೇ 17ರಂದು ಬೆಳಗ್ಗೆ ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಮತ್ತು ದಕ್ಷಿಣ ಗುಜರಾತ್ ಹಾಗೂ ದಾಮನ್ ದಿಯು ಕರಾವಳಿ ಉದ್ದಕ್ಕೂ ಚಂಡಮಾರುತ ಪ್ರತಿ ಗಂಟೆಗೆ 40-50 ಕಿ.ಮೀ. ವೇಗದಿಂದ 60 ಕಿ.ಮೀ. ವೇಗದಲ್ಲಿ ಸಾಗುವ ಸಾಧ್ಯತೆ ಇದೆ ಮತ್ತು ಆನಂತರ ಕ್ರಮೇಣ ಬಿರುಗಾಳಿಯಾಗಿ ಪರಿವರ್ತನೆಗೊಂಡು 18ರಂದು ಬೆಳಗ್ಗೆ ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಪ್ರತಿ ಗಂಟೆಗೆ 150 -160 ಕಿ.ಮೀ.ನಿಂದ 175 ಕಿ.ಮೀ. ವೇಗದಲ್ಲಿ ಸಾಗಲಿದೆ. ಮೇ 18ರಂದು ಮಧ್ಯಾಹ್ನ/ಸಂಜೆ ಆನಂತರ 6 ಗಂಟೆಗಳ ತರುವಾಯ ಸೌರಾಷ್ಟ್ರ ಮತ್ತು ಕಚ್ ಕರಾವಳಿ ಉದ್ದಕ್ಕೂ(ದೇವಭೂಮಿ ದ್ವಾರಕ ಮತ್ತು ಪೋರಬಂದರ್) ಮತ್ತು ಗುಜರಾತ್ ನ ಕಚ್, ಪೋರಬಂದರ್, ಜುನಗಢ, ಜಾಮ್ ನಗರ್ ಜಿಲ್ಲೆಗಳಲ್ಲಿ ಚಂಡಮಾರುತ ಪ್ರತಿ ಗಂಟೆಗೆ 120-150 ಕಿ.ಮೀ. ವೇಗದಿಂದ 165 ಕಿ.ಮೀ. ವೇಗದಲ್ಲಿ ಸಾಗಲಿದೆ.
(iii) ಸಮುದ್ರ ಸ್ಥಿತಿಗತಿ
- ಮುಂದಿನ ಆರು ಗಂಟೆಗಳ ಕಾಲ ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಮತ್ತು ಹಿಂದೂ ಮಹಾಸಾಗರದ ಸಮಭಾಜಕ ಪ್ರದೇಶ ಹಾಗೂ ಲಕ್ಷದ್ವೀಪ – ಮಾಲ್ಡವೀಸ್ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸಮುದ್ರ ಸ್ಥಿತಿಗತಿ ತುಂಬಾ ಒರಟಾಗಿರಲಿದೆ.
- ಮೇ 15ರಂದು ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಭಾಗದಲ್ಲಿ ಸಮುದ್ರದ ಸ್ಥಿತಿಗತಿ ಗಂಭೀರವಾಗಿರಲಿದೆ ಹಾಗೂ ಮೇ 16ರಂದು ಗಂಭೀರದಿಂದ ಸಾಧಾರಣವಾಗಿ ಕೂಡಿರಲಿದೆ ಮತ್ತು ಮೇ 17 ಮತ್ತು 18ರಂದು ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಗಂಭೀರವಾಗಿರಲಿದೆ.
- ಮೇ 15ರಂದು ಕೇರಳದ ಕರಾವಳಿ ಉದ್ದಕ್ಕೂ ಮತ್ತು ಕೊಮೊರಿನ್ ಪ್ರದೇಶದಲ್ಲಿ ಸಮುದ್ರದ ಸ್ಥಿತಿಗತಿ ಒರಟಿನಿಂದ ತುಂಬಾ ಗಂಭೀರವಾಗಿರಲಿದೆ. ಅಂತೆಯೇ ಮೇ 15ರಂದು ಕರ್ನಾಟಕದ ಕರಾವಳಿ ಉದ್ದಕ್ಕೂ ಹಾಗೂ ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಭಾಗದಲ್ಲಿ ಸಮುದ್ರದ ಸ್ಥಿತಿ ಒರಟಿನಿಂದ ಕೂಡಿ ಗಂಭೀರವಾಗಿರಲಿದೆ. ಮಹಾರಾಷ್ಟ್ರ, ಗೋವಾ ಕರಾವಳಿ ಭಾಗದಲ್ಲೂ ಮೇ 15 ಮತ್ತು 16ರಂದು ಸಮುದ್ರದ ಸ್ಥಿತಿಗತಿ ಗಂಭೀರವಾಗಿರಲಿದೆ. ಮೇ 17ರಂದು ಬೆಳಗ್ಗೆ ದಕ್ಷಿಣ ಗುಜರಾತ್ ನ ಕರಾವಳಿ ಮತ್ತು ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಸಮುದ್ರದ ಸ್ಥಿತಿ ತುಂಬಾ ಒರಟಿನಿಂದ ಕೂಡಿದಂತೆ ಗಂಭೀರವಾಗಿರಲಿದೆ ಹಾಗೂ ಮೇ 18ರಂದು ಬೆಳಗ್ಗೆ ಗಂಭೀರದಿಂದ ಅಸಾಧಾರಣದಿಂದ ಕೂಡಿರಲಿದೆ.
(iv) ಬಿರುಗಾಳಿ ಹೆಚ್ಚಳ ಮುನ್ನೆಚ್ಚರಿಕೆ
ಸಮುದ್ರದಲ್ಲಿ ಅಲೆಗಳ ಎತ್ತರ 2 ರಿಂದ 3 ಮೀಟರ್ ಮೇಲೇರುವುದರಿಂದ ಮೊರ್ಬಿ, ಕಚ್, ದೇವಭೂಮಿ ದ್ವಾರಕ ಮತ್ತು ಜಾಮ್ ನಗರ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಮುಳುಗಡೆಯಾಗುವ ಸಾಧ್ಯತೆಗಳಿವೆ ಮತ್ತು ಪೋರಬಂದರ್, ಜುನಗಢ, ಗಿರ್ ಸೋಮನಾಥ್, ಅಮ್ರೇಲಿ, ಭವನಗರ್ ಗಳಲ್ಲಿ ಅಲೆ 1-2 ಮೀಟರ್ ಹಾಗೂ ಗುಜರಾತ್ ನ ಉಳಿದ ಕರಾವಳಿ ಜಿಲ್ಲೆಗಳಲ್ಲಿ ಅಲೆಗಳು 0.5ನಿಂದ 1 ಮೀಟರ್ ಎತ್ತರಕ್ಕೆ ಏರುವ ಸಾಧ್ಯತೆ ಇದೆ.
(v) ಮೀನುಗಾರರಿಗೆ ಎಚ್ಚರಿಕೆ
- ಅರಬ್ಬೀ ಸಮುದ್ರದ ಆಗ್ನೇಯಕ್ಕೆ ಹೊಂದಿಕೊಂಡಿರುವ ಪೂರ್ವ ಪ್ರದೇಶಗಳು ಮತ್ತು ಕೇರಳ-ಕರ್ನಾಟಕ-ಗೋವಾ-ಮಹಾರಾಷ್ಟ್ರ ಕರಾವಳಿ ಉದ್ದಕ್ಕೂ ಮೀನುಗಾರಿಕೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ.
- ಮೇ 17ರಿಂದ ಗುಜರಾತ್ ನ ಕರಾವಳಿ ಉದ್ದಕ್ಕೂ ಹಾಗೂ ಅರಬ್ಬೀ ಸಮುದ್ರದ ಈಶಾನ್ಯ ಭಾಗದಲ್ಲಿ ಮೀನುಗಾರಿಕೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಅರಬ್ಬೀ ಸಮುದ್ರದ ಆಗ್ನೇಯ, ಲಕ್ಷದ್ವೀಪ, ಮಾಲ್ಡವೀಸ್ ಪ್ರದೇಶ, ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಪ್ರದೇಶ ಮತ್ತು ಕರ್ನಾಟಕದ ಕರಾವಳಿ ಉದ್ದಕ್ಕೂ ಅರಬ್ಬೀ ಸಮುದ್ರದ ಪೂರ್ವ ಕೇಂದ್ರ ಹಾಗೂ ಮಹಾರಾಷ್ಟ್ರ, ಗೋವಾ – ಕರಾವಳಿ ಉದ್ದಕ್ಕೂ ಹಾಗೂ ಅರಬ್ಬೀ ಸಮುದ್ರ ಹಾಗೂ ಗುಜರಾತ್ ನ ಕರಾವಳಿಯ ಈಶಾನ್ಯ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಮೇ 18ರ ವರೆಗೆ ಮೀನುಗಾರರು ಸಮುದ್ರಕ್ಕಿಳಿಯದಂತೆ ಸೂಚನೆ ನೀಡಲಾಗಿದೆ.
- ಯಾರು ಅರಬ್ಬೀ ಸಮುದ್ರದ ಉತ್ತರದಲ್ಲಿ ಸಮುದ್ರಕ್ಕಿಳಿದು ಮೀನುಗಾರಿಕೆಯಲ್ಲಿ ತೊಡಗಿದ್ದಾರೋ ಅವರಿಗೆ ಕಡಲ ತೀರಕ್ಕೆ ಮರಳುವಂತೆ ಸೂಚಿಸಲಾಗಿದೆ.
(vi) (ಎ) ಗುಜರಾತ್ ನ ದೇವಭೂಮಿ ದ್ವಾರಕ, ಕಚ್, ಪೋರಬಂದರ್, ಜುನಗಢ, ಗಿರ್ ಸೋಮನಾಥ್ ಹಾಗೂ ಜಾಮ್ ನಗರ್ ಜಿಲ್ಲೆಗಳಲ್ಲಿ ಚಂಡಮಾರುತ ಹಾನಿ ಉಂಟುಮಾಡುವ ಸಾಧ್ಯತೆ ಇದೆ:
- ತಾತ್ಕಾಲಿಕ ಮನೆಗಳು ಸಂಪೂರ್ಣವಾಗಿ ಹಾಳಾಗಲಿವೆ/ಪಕ್ಕಾ ಮನೆಗಳಿಗೆ ಭಾರೀ ಹಾನಿಯಾಗುವ ಸಾಧ್ಯತೆ ಇದೆ. ಪಕ್ಕಾ ಮನೆಗಳಿಗೂ ಸಹ ಸ್ವಲ್ಪಮಟ್ಟಿಗೆ ಹಾನಿಯಾಗುವ ಸಂಭವನೀಯ ಅಪಾಯವಿದೆ. ಹಾರುವ ವಸ್ತುಗಳಿಂದ ಸಂಭಾವ್ಯ ಹಾನಿ ಅಪಾಯವಿದೆ.
- ವಿದ್ಯುತ್ ಮತ್ತು ಸಂವಹನ ಕಂಬಗಳು ಬಾಗುವುದು/ಬುಡಮೇಲಾಗಬಹುದು.
- ಕಚ್ಚಾ ಮತ್ತು ಪಕ್ಕಾ ರಸ್ತೆಗಳಿಗೆ ಹೆಚ್ಚು ಹಾನಿಯಾಗಲಿದೆ. ತಪ್ಪಿಸಿಕೊಳ್ಳುವ ಮಾರ್ಗಗಳು ಪ್ರವಾಹ ತುತ್ತಾಗಬಹುದು. ರೈಲ್ವೆ ಮಾರ್ಗ, ಮೇಲ್ಭಾಗದ ವಿದ್ಯುತ್ ತಂತಿಗಳು ಹಾಗೂ ಸಿಗ್ನಲಿಂಗ್ ವ್ಯವಸ್ಥೆಗೆ ಸ್ವಲ್ಪಮಟ್ಟಿಗೆ ಅಡಚಣೆಯಾಗುವ ಸಾಧ್ಯತೆ ಇದೆ.
- ಉಪ್ಪು ತಯಾರಿಕಾ ಕೇಂದ್ರಗಳು, ಬೆಳೆದೆ ನಿಂತಿರುವ ಬೆಳೆಗಳು ಮತ್ತು ಪೊದೆಯಾಕಾರದ ಮರಗಳಿಗೆ ವ್ಯಾಪಕ ಹಾನಿಯಾಗಲಿದೆ.
- ಸಣ್ಣ ದೋಣಿಗಳು, ನಾಡ ದೋಣಿಗಳಿಗೆ ಹಾನಿಯಾಗಬಹುದು.
- ಯಾವೊಂದು ಸ್ಪಷ್ಟವಾಗಿ ಗೋಚರಿಸುವುದಿಲ್ಲ, ತುಂಬಾ ಪರಿಣಾಮ ಬೀರಬಹುದು.
(vi) (ಬಿ) ಗುಜರಾತ್ ನ ಅಮ್ರೇಲಿ, ರಾಜ್ ಕೋಟ್ ಮತ್ತು ಮೊರ್ಬಿ ಜಿಲ್ಲೆಗಳಲ್ಲಿ ಆಗಲಿರುವ ಹಾನಿಯ ಅಂದಾಜು:
- ತಾತ್ಕಾಲಿಕ ಮನೆಗಳು/ಗುಡಿಸಲುಗಳಿಗೆ ಸಂಪೂರ್ಣ ಹಾನಿಯಾಗಲಿದೆ. ಮೇಲ್ಛಾವಣಿಗಳು ಹಾರಿ ಹೋಗಬಹುದು. ಕಟ್ಟಿಲ್ಲದ ಲೋಹದ ಶೀಟ್ ಗಳು ಹಾರಿ ಹೋಗಬಹುದು.
- ವಿದ್ಯುತ್ ಹಾಗೂ ಸಂವಹನ ಕಂಬಗಳಿಗೆ ಅಲ್ಪ ಹಾನಿ
- ಕಚ್ಚಾ ರಸ್ತೆಗಳಿಗೆ ಹೆಚ್ಚು ಹಾನಿ, ಪಕ್ಕಾ ರಸ್ತೆಗಳಿಗೆ ಕಡಿಮೆ ಹಾನಿಯಾಗುತ್ತದೆ. ತಪ್ಪಿಸಿಕೊಳ್ಳಬಹುದಾದ ಮಾರ್ಗಗಳು ಜಲಾವೃತಗೊಳ್ಳಲಿವೆ.
- ಮರಗಳ ರೆಂಬೆ, ಕೊಂಬೆಗಳು ಉರುಳಲಿವೆ. ಕೆಲವು ಮರ ಬುಡ ಮೇಲಾಗಲಿವೆ. ಬಾಳೆ ಮತ್ತು ಪಪ್ಪಾಯ ಗಿಡಗಳಿಗೆ ಸಾಧಾರಣ ಹಾನಿಯಾಗಲಿದೆ. ಮರಗಳಿಂದ ಹಾಳಾದ ರೆಂಬೆ, ಕೊಂಬೆಗಳು ಉದುರಲಿವೆ.
- ಕಡಲ ತೀರದ ಬೆಳೆಗಳಿಗೆ ಸಂಪೂರ್ಣ ಹಾನಿಯಾಗಲಿದೆ.
- ಉಪ್ಪು ತಯಾರಿಕಾ ಕೇಂದ್ರಗಳು/ಒಡ್ಡುಗಳಿಗೆ ಹಾನಿಯಾಗಲಿದೆ.
(vii) ಸೂಚಿಸಿರುವ ಕ್ರಮಗಳು:
- ಮೀನುಗಾರಿಕಾ ಕಾರ್ಯಾಚರಣೆಗಳನ್ನು ಸಂಪೂರ್ಣ ಸ್ಥಗಿತ.
- ರೈಲು ಮತ್ತು ರಸ್ತೆ ಸಂಚಾರ ನ್ಯಾಯಯುತ ನಿರ್ಬಂಧ.
- ಬಾಧಿತ ಪ್ರದೇಶಗಳ ಜನರು ಮನೆಯೊಳಗೇ ಇರಬೇಕು.
- ಮೋಟಾರು ಬೋಟ್ ಹಾಗೂ ಸಣ್ಣ ಹಡಗುಗಳ ಸಂಚಾರ ಸುರಕ್ಷಿತವಲ್ಲ.
(ದಯವಿಟ್ಟು ಗ್ರಾಫಿಕ್ಸ್ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ)
***
(Release ID: 1718889)
Visitor Counter : 288