ಬುಡಕಟ್ಟು ವ್ಯವಹಾರಗಳ ಸಚಿವಾಲಯ

ವನ ಧನ್ ಉಪಕ್ರಮದಿಂದ ಕರ್ನಾಟಕದಲ್ಲಿ ಉದ್ಯಮಶೀಲತ್ವಕ್ಕೆ ಉತ್ತೇಜನ


ವಿ.ಡಿ.ವಿ.ಕೆ. ಗುಚ್ಛಗಳ ಮೂಲಕ ಕರ್ನಾಟಕ ಬುಡಕಟ್ಟು ಮಹಿಳೆಯರ ನಾಯಕತ್ವ

ಟ್ರೈಬ್ಸ್ ಇಂಡಿಯಾದಿಂದ ರಿಟೈಲ್ ಮಳಿಗೆಗಳು ಮತ್ತು ಟ್ರೈಬ್ಸ್ ಇಂಡಿಯಾ.ಕಾಂ ಮೂಲಕ ಮಾರಾಟ

Posted On: 14 MAY 2021 12:25PM by PIB Bengaluru

ಬುಡಕಟ್ಟು ಜನರ ಜೀವನೋಪಾಯಗಳ ಸುಧಾರಣೆ ಮತ್ತು ಹಿಂದುಳಿದ ಹಾಗು ಸವಲತ್ತು ವಂಚಿತ ಬುಡಕಟ್ಟುಗಳ ಜನರ ಜೀವನವನ್ನು ಉತ್ತಮಗೊಳಿಸುವುದು ಬುಡಕಟ್ಟು ವ್ಯವಹಾರಗಳ ಸಚಿವಾಲಯದಡಿಯಲ್ಲಿ ಕಾರ್ಯಾಚರಿಸುತ್ತಿರುವ ಟ್ರೈಫೆಡ್ ಉದ್ದೇಶವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು, ಹಾಗು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಸಂಬಂಧಿಸಿ ಪ್ರಧಾನ ಮಂತ್ರಿ ಅವರು ನೀಡಿರುವ ಕರೆಯನ್ನು ಅನುಸರಿಸಿ ಟ್ರೈಫೆಡ್ ಹಲವಾರು ಉಪಕ್ರಮಗಳನ್ನು ಜಾರಿಗೆ ತಂದಿದೆ.

ಬುಡಕಟ್ಟು ಜನರ ಹಣಕಾಸು ಸಂಕಷ್ಟವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಕೈಗೊಂಡ ಹಲವಾರು ಉಪಕ್ರಮಗಳಲ್ಲಿ ವನ ಧನ ಬುಡಕಟ್ಟು ನವೋದ್ಯಮಗಳು ಮತ್ತು ಕನಿಷ್ಟ ಬೆಂಬಲ ಬೆಲೆಯ ಮೂಲಕ ಕಿರು ಅರಣ್ಯ ಉತ್ಪತ್ತಿಗಳನ್ನು(ಎಂ.ಎಫ್.ಪಿ.) ಮಾರಾಟ ಮಾಡುವ ವ್ಯವಸ್ಥೆ ಹಾಗು ಅರಣ್ಯ ಉತ್ಪತ್ತಿಗಳನ್ನು ಸಂಗ್ರಹಿಸುವ ಜನರಿಗೆ ಎಂ.ಎಸ್.ಪಿ. ಒದಗಿಸಿ ಮೂಲಕ ಮೌಲ್ಯವರ್ಧನೆ ಸರಪಳಿಯನ್ನು ಅಭಿವೃದ್ಧಿಪಡಿಸುವ ಎಂ.ಎಫ್.ಪಿ.ಯೋಜನೆ ಮತ್ತು ಬುಡಕಟ್ಟು ಗುಂಪುಗಳು ಹಾಗು ಗುಚ್ಛಗಳ ಮೂಲಕ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಒದಗಿಸುವ ಉಪಕ್ರಮಗಳು ಸೇರಿವೆ. ಕಾರ್ಯಕ್ರಮಗಳು ದೇಶಾದ್ಯಂತ ಬಹಳ ವ್ಯಾಪಕವಾದ ಬೆಂಬಲವನ್ನು ಪಡೆದುಕೊಂಡಿವೆ.

ವಿಶೇಷವಾಗಿ ವನ ಧನ ಬುಡಕಟ್ಟು ನವೋದ್ಯಮಗಳ ಉಪಕ್ರಮ ಬಹಳ ಯಶಸ್ಸನ್ನು ದಾಖಲಿಸಿದೆ.

18 ತಿಂಗಳುಗಳಿಗಿಂತಲೂ ಕಡಿಮೆ ಅವಧಿಯಲ್ಲಿ 37259 ವನ ಧನ ವಿಕಾಸ ಕೇಂದ್ರಗಳು (ವಿ.ಡಿ.ವಿ.ಕೆ.ಗಳು) 2224 ವನ ಧನ ವಿಕಾಸ ಕೇಂದ್ರ ಗುಚ್ಛಗಳಾಗಿ (ವಿ.ಡಿ.ವಿ.ಕೆ.ಸಿ.ಗಳಾಗಿ) ಪರಿವರ್ತನೆಗೊಂಡಿವೆ. ಇದರಲ್ಲಿ ತಲಾ 300 ಮಂದಿ ಅರಣ್ಯವಾಸಿಗಳಿದ್ದಾರೆ. ಒಂದು ಮಾದರಿ ವನ ಧನ ವಿಕಾಸ ಕೇಂದ್ರವು 20 ಮಂದಿ ಬುಡಕಟ್ಟು ಸದಸ್ಯರನ್ನು ಹೊಂದಿರುತ್ತದೆ. ಇಂತಹ 15 ವನ ಧನ ವಿಕಾಸ ಕೇಂದ್ರಗಳು ಒಗ್ಗೂಡಿ ಒಂದು ವನ ಧನ ವಿಕಾಸ ಕೇಂದ್ರ ಗುಚ್ಛವಾಗುತ್ತದೆ. ವನ ಧನ ವಿಕಾಸ ಕೇಂದ್ರ ಗುಚ್ಛಗಳು ವನ ಧನ ವಿಕಾಸ ಕೇಂದ್ರಗಳಿಗೆ ಜೀವನೋಪಾಯ ಅವಕಾಶ, ಮಾರುಕಟ್ಟೆ ಸಂಪರ್ಕ ಮತ್ತು ಆರ್ಥಿಕ ಬೆಂಬಲದ ಜೊತೆ ಉದ್ಯಮಶೀಲತೆಯ ಅವಕಾಶಗಳನ್ನು ಒದಗಿಸುತ್ತವೆ. 23 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ ಸುಮಾರು  6.67 ಲಕ್ಷ ಬುಡಕಟ್ಟು ಅರಣ್ಯೋತ್ಪನ್ನ ಸಂಗ್ರಾಹಕರಿಗೆ ಅದು ಅವಕಾಶಗಳನ್ನು ಒದಗಿಸಿಕೊಟ್ಟಿದೆ. ಟ್ರೈಫೆಡ್ ಅಂಕಿ ಅಂಶಗಳ ಪ್ರಕಾರ ವನ ಧನ ನವೋದ್ಯಮ ಕಾರ್ಯಕ್ರಮದಿಂದ ಇದುವರೆಗೆ 50 ಲಕ್ಷ ಬುಡಕಟ್ಟು ಜನರಿಗೆ ಪ್ರಯೋಜನವಾಗುತ್ತಿದೆ

ಟ್ರೈಫೆಡ್ ಇತ್ತೀಚಿನ  ಸಂಕಲ್ಪ ಸೇ ಸಿದ್ಧಿಕಾರ್ಯಕ್ರಮ 2021 ಏಪ್ರಿಲ್ 1 ರಿಂದ ಗ್ರಾಮಗಳು ಮತ್ತು ಡಿಜಿಟಲ್ ಸಂಪರ್ಕ ಆಂದೋಲನದಂಗವಾಗಿ  ದೇಶಾದ್ಯಂತ ತಂಡಗಳು ಗ್ರಾಮಗಳಿಗೆ ಭೇಟಿ  ನೀಡಿದ್ದು, ಇದರಿಂದ ವಿವಿಧ ರಾಜ್ಯಗಳ ಹಲವಾರು ಯಶೋಗಾಥೆಗಳು ಬೆಳಕಿಗೆ ಬರುವಂತಾಯಿತು. ಇಂಥ ಒಂದು ಯಶೋಗಾಥೆ ದಕ್ಷಿಣದ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಿಂದ ಬಂದಿದೆ.

A picture containing person, group, peopleDescription automatically generatedA group of people posing for a photoDescription automatically generated with medium confidence

Women cooking in a kitchenDescription automatically generated with medium confidenceA group of bottles on a tableDescription automatically generated with medium confidenceA picture containing indoorDescription automatically generated

ಕಳೆದ ವರ್ಷ ಕರ್ನಾಟಕದಲ್ಲಿ 585 ವಿ.ಡಿ.ವಿ.ಕೆ. ಗಳನ್ನು 39 ವಿ.ಡಿ.ವಿ.ಕೆ.ಸಿ.ಗಳನ್ನಾಗಿ ವರ್ಗೀಕರಿಸಿ ಜೋಡಿಸಲಾಗಿತ್ತು. ಅವುಗಳಿಂದ ಸುಮಾರು 11400 ಬುಡಕಟ್ಟು ಫಲಾನುಭವಿಗಳಿಗೆ ಸಹಾಯವಾಗುತ್ತಿತ್ತು.ರಾಜ್ಯ ಬುಡಕಟ್ಟು ಕಲ್ಯಾಣ ಇಲಾಖೆ ಇದಕ್ಕೆ ನೋಡಲ್ ಇಲಾಖೆಯಾಗಿದೆ ಮತ್ತು ಲ್ಯಾಂಪ್ಸ್ ಒಕ್ಕೂಟ, ಮೈಸೂರು ಸಂಸ್ಥೆಯು ರಾಜ್ಯದಲ್ಲಿ ಕಾರ್ಯಕ್ರಮ ಅನುಷ್ಟಾನಕ್ಕೆ ಅನುಷ್ಟಾನ ಸಹಭಾಗಿಯಾಗಿದೆ.

ಸಂಜೀವಿನಿ ಪ್ರಧಾನ ಮಂತ್ರಿ ವಿಕಾಸ ಕೇಂದ್ರವು ಮೈಸೂರು ಜಿಲ್ಲೆಯ ಹುಣಸೂರಿನ ಪಕ್ಷಿರಾಜಪುರದಲ್ಲಿರುವ ವನ ಧನ ವಿಕಾಸ ಕೇಂದ್ರ ಗುಚ್ಛವಾಗಿದ್ದು, ಕಳೆದ ಕೆಲವು ಸಮಯದಿಂದ ಕಾರ್ಯಾಚರಿಸುತ್ತಿದೆ. ವಿ.ಡಿ.ವಿ.ಕೆ. ಗುಚ್ಛದಲ್ಲಿರುವ ಬುಡಕಟ್ಟು ಜನರು ಸಂಸ್ಕರಣೆಗೆ ಕೈಗೆತ್ತಿಕೊಂಡಿರುವ ಮತ್ತು ಮೌಲ್ಯವರ್ಧನೆ ಮಾಡಲು ತೊಡಗಿರುವ ಉತ್ಪನ್ನಗಳೆಂದರೆ ಗಿಡಮೂಲಿಕೆಗಳ ಕೇಶ ತೈಲ, ಮಲಬಾರು ಹುಣಸೇ ಹಣ್ಣು ಮತ್ತು ಜೇನು. ಉದ್ಯಮಿ ಶ್ರೀಮತಿ ನೀಮಾ ಶ್ರೀನಿವಾಸ ಅವರ ನಾಯಕತ್ವದಲ್ಲಿ ಬುಡಕಟ್ಟು ಜನರು ಹರ್ಬಲ್ ಕೇಶ ತೈಲವನ್ನು ತುಂಬಿದ ಬಾಟಲುಗಳನ್ನು ಟ್ರೈಫೆಡ್ ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಉತ್ಪನ್ನವನ್ನು ಶೀಘ್ರವೇ ಟ್ರೈಫೆಡ್ ವಿಸ್ತಾರ ವ್ಯಾಪ್ತಿಯ ಜಾಲದ ಮೂಲಕ ಟ್ರೈಬ್ಸ್ ಇಂಡಿಯಾ ರಿಟೈಲ್ ಮಳಿಗೆಗಳಲ್ಲಿ ಮತ್ತು ಟ್ರೈಬ್ಸ್ ಇಂಡಿಯಾ .ಕಾಂ ನಲ್ಲಿ ಮಾರಾಟ ಮಾಡಲಾಗುವುದು

ಹೊಸದಾಗಿ ಕಾರ್ಯಾಚರಣೆ ಆರಂಭಿಸಿರುವ ವನಸಿರಿ ಪ್ರಧಾನ ಮಂತ್ರಿ ವನ ಧನ ವಿಕಾಸ ಕೇಂದ್ರ ಗುಚ್ಛವು ಮೈಸೂರಿನ ಕೋಟೆಯಲ್ಲಿ ಅರಣ್ಯದ ಜೇನನ್ನು ಸಂಸ್ಕರಿಸಿ ಗಾಜಿನ ಬಾಟಲುಗಳಲ್ಲಿ ಪ್ಯಾಕ್ ಮಾಡುತ್ತಿದೆ ಮತ್ತು ಅದನ್ನು ಟ್ರೈಫೆಡ್ ಮಾರಾಟ ಮಾಡುತ್ತಿದೆ. ವಿ.ಡಿ.ವಿ.ಕೆ.ಸಿ.ಯಲ್ಲಿ ಸಂಸ್ಕರಣೆಯಾಗುತ್ತಿರುವ ಇತರ ಉತ್ಪನ್ನಗಳಲ್ಲಿ ಹುಣಿಸೆ ಹಣ್ಣು ಕೂಡಾ ಸೇರಿದೆ.

ಪ್ರಧಾನ ಮಂತ್ರಿ ಚೈತನ್ಯ ವನ ಧನ ವಿಕಾಸ ಕೇಂದ್ರ ಗುಚ್ಛ ಯೋಜನೆ ಅಡಿಯಲ್ಲಿ ಬುಡಕಟ್ಟು ಜನರು ಪೊರಕೆ ಹುಲ್ಲನ್ನು ಹಿಡಿಸೂಡಿ ಅಥವಾ ಕಸಬರಿಕೆಯಾಗಿ ಸಂಸ್ಕರಿಸುತ್ತಿದ್ದಾರೆ. ಗುಚ್ಛದಲ್ಲಿರುವ ವಿವಿಧ ವಿ.ಡಿ.ವಿ.ಕೆ.ಗಳ ಸದಸ್ಯರು ಸಂಸ್ಕರಿಸಲು ತೊಡಗಿರುವ  ಇತರ ಉತ್ಪನ್ನಗಳೆಂದರೆ ಜೇನು, ದಾಲ್ಚಿನ್ನಿ, ಶಿಕಾಕಾಯಿ ಮತ್ತು ಅಡಿಕೆ ಹಾಳೆಗಳಿಂದ ತಟ್ಟೆಗಳು. ಎಲ್ಲಾ ಉತ್ಪನ್ನಗಳು 2021 ಮೇ ತಿಂಗಳಲ್ಲಿ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದ್ದು, ಅವುಗಳನ್ನು ಟ್ರೈಫೆಡ್ ಖರೀದಿ ಮಾಡಲಿದೆ.

ಬರಲಿರುವ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಯಶೋಗಾಥೆಗಳು ವನ ಧನ ಯೋಜನಾ ಉಪಕ್ರಮಗಳಿಂದಾಗಿ ಮೂಡಿ ಬರುವ ಭರವಸೆ ಇದೆ. ಯೋಜನೆಯು ವೋಕಲ್ ಫಾರ್ ಲೋಕಲ್ ಮತ್ತು ಆತ್ಮನಿರ್ಭರ ಭಾರತ ಚಿಂತನೆಯನ್ನು ಪೋಷಿಸುತ್ತದೆ ಹಾಗು ಬುಡಕಟ್ಟು ಜನರ ಜೀವನೋಪಾಯವನ್ನು ಹಾಗು ಆದಾಯವನ್ನು ಉತ್ತಮಗೊಳಿಸುತ್ತದೆ ಮತ್ತು ಅಂತಿಮವಾಗಿ ಅವರ ಬದುಕಿನಲ್ಲಿ ಪರಿವರ್ತನೆಗಳನ್ನು ತರುತ್ತದೆ.

***


(Release ID: 1718624) Visitor Counter : 302