ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಛೇರಿ, ಭಾರತ ಸರ್ಕಾರ

ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ವೃದ್ಧಿಸಲು ನಾವಿನ್ಯ, ಕಡಿಮೆ ವೆಚ್ಚದ ಚಾರ್ಜಿಂಗ್ ಮೂಲಸೌಕರ್ಯ

ಕಡಿಮೆ ವೆಚ್ಚದ ಎಸಿ ಚಾರ್ಜ್ ಪಾಯಿಂಟ್(ಎಲ್ಎಸಿ)ಗೆ ಸದ್ಯದಲ್ಲೇ ಭಾರತೀಯ ಮಾನದಂಡಗಳ ಬಿಡುಗಡೆ

Posted On: 12 MAY 2021 4:48PM by PIB Bengaluru

ಭಾರತದಲ್ಲಿನ ನಗರಗಳು, ಪಟ್ಟಣಗಳು, ಗ್ರಾಮಗಳು ಸದ್ಯದಲ್ಲೇ ನವೀನ ಕಡಿಮೆ ವೆಚ್ಚದ ಎಲೆಕ್ಟ್ರಿಕ್ ವಾಹನ (ಇವಿ) ಚಾರ್ಜ್ ಪಾಯಿಂಟ್ ಗಳ ಪ್ರಯೋಜನವನ್ನು ಪಡೆಯಲಿದ್ದು, ಇದರಿಂದ ಎಲೆಕ್ಟ್ರಿಕ್ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಅಳವಡಿಕೆಗೆ ವೇಗ ದೊರಕಲಿದೆಮುಂಬರುವ ಭಾರತೀಯ ಮಾನದಂಡದಿಂದಾಗಿ ಇವಿ ಚಾರ್ಜಿಂಗ್ ಮೂಲಸೌಕರ್ಯ ಕ್ಷಿಪ್ರಗತಿಯಲ್ಲಿ ವೃದ್ಧಿಯಾಗಲಿದೆ ಮತ್ತು ಇದು ದೇಶಕ್ಕೆ ಅತ್ಯಂತ ಅಗತ್ಯತೆ ಕೂಡ ಇದೆ.

ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ಭಾರತದ ಸಾರಿಗೆ ಪರಿವರ್ತನೆ ಕಾರ್ಯಕ್ರಮದ ಧ್ಯೇಯೋದ್ದೇಶವೆಂದರೆ ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸುವುದು. ವಾಯು ಗುಣಮಟ್ಟ ಸುಧಾರಿಸುವುದು ಮತ್ತು ಕಚ್ಚಾ ತೈಲ ಆಮದು ಅವಲಂಬನೆಯನ್ನು ತಗ್ಗಿಸುವುದಾಗಿದೆ. ನಿಟ್ಟಿನಲ್ಲಿ ನೀತಿ ಆಯೋಗ (ಸಾರಿಗೆ ಪರಿವರ್ತನೆ ಮತ್ತು ಬ್ಯಾಟರಿ ಸ್ಟೋರೇಜ್ ಮಿಷನ್) ಹಲವು ಕ್ರಮಗಳನ್ನು ಕೈಗೊಂಡಿದೆ ಮತ್ತು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬೇಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಫೇಮ್-2 ಪ್ರೋತ್ಸಾಹಕರ ಯೋಜನೆಗಳನ್ನು ಆರಂಭಿಸಿದೆ. ಅಲ್ಲದೆ ಗ್ರಾಹಕರು ಎಲೆಕ್ಟ್ರಿಕ್ ವಾಹನಗಳನ್ನು ಹೊಂದಬೇಕಾದರೆ ಅದು ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಮೂಲಸೌಕರ್ಯ ಸುಲಭವಾಗಿ ಲಭ್ಯವಾಗುವುದನ್ನು ಅವಲಂಬಿಸಿರುತ್ತದೆ. ಸಂಭಾವ್ಯ ಖರೀದಿದಾರರು ಮನೆಯಿಂದ ದೂರವಿದ್ದಾಗ ತಮ್ಮ ವಾಹನಗಳಿಗೆ ಚಾರ್ಜರ್ ಗಳು ಸಿಗುತ್ತವೆ ಎಂಬ ವಿಶ್ವಾಸ ಹೊಂದಬೇಕು.

ನಮ್ಮ ದೇಶದಲ್ಲಿ ಒಟ್ಟು ವಾಹನಗಳ ಮಾರಾಟದಲ್ಲಿ ಇಂಟರ್ನಲ್ ಕಂಬಸ್ಟನ್ ಇಂಜಿನ್(ಐಸಿಇ) ಹೊಂದಿರುವ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳ ಪ್ರಮಾಣ ಶೇ. ಮೈನಸ್ 84ರಷ್ಟು ಹೊಂದಿದೆ. ಆದ್ದರಿಂದ ಇವಿಗಳನ್ನು  ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಅತ್ಯಂತ ವೇಗವಾಗಿ ಅಳವಡಿಸಿಕೊಳ್ಳಬಹುದೆಂದು ನಿರೀಕ್ಷಿಸಲಾಗಿದೆ. 2025 ವೇಳೆಗೆ ಪ್ರತಿ ವರ್ಷ ಅಂತಹ ವಾಹನಗಳು ಸುಮಾರು 4 ಮಿಲಿಯನ್ ವರೆಗೆ ಮಾರಾಟವಾಗುತ್ತದೆ ಎಂದು ಅಂದಾಜಿಸಲಾಗಿದ್ದು, 2030 ವೇಳೆಗೆ ಮಾರಾಟ ಪ್ರಮಾಣ ಬಹುತೇಕ 10 ಮಿಲಿಯನ್ ತಲುಪುವ ಸಾಧ್ಯತೆ ಇದೆ. ವಲಯಕ್ಕೆ ಯಾವುದೇ ಚಾರ್ಜಿಂಗ್ ತಂತ್ರಜ್ಞಾನದ ಸೇವೆ ದೊರಕಿದರೂ ಅದು ಅತ್ಯುತ್ತಮವಾಗಿರಬೇಕು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವಂತಿರಬೇಕು; ಅದು ಇಂಟರ್ ಪೋರ್ಟಬಲಿಟಿಗೆ ಬೆಂಬಲ ನೀಡುವಂತಿರಬೇಕು ಮತ್ತು ಸುಲಭವಾಗಿ ಕೈಗೆಟಕುವ ದರದಲ್ಲಿರಬೇಕು. ಜಗತ್ತಿನಾದ್ಯಂತ ಈವರೆಗೆ ಅಭಿವೃದ್ಧಿಪಡಿಸಿರುವ ಬಹುತೇಕ ವ್ಯವಸ್ಥೆಯಲ್ಲಿ ಹೆಚ್ಚಿನ ಪ್ರಮಾಣದ ವಿದ್ಯುತ್ ಬಳಕೆ ಮತ್ತು ದುಬಾರಿಯೂ ಆಗಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ ಟಿ), ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿ(ಪಿಎಸ್ಎ) ನೀತಿ ಆಯೋಗದ ತಂಡದ ನಿಕಟ ಸಮನ್ವಯದೊಂದಿಗೆ ಸವಾಲನ್ನು ಕೈಗೆತ್ತಿಕೊಂಡಿದೆ. ಎಲೆಕ್ಟ್ರಿಕ್ ವಾಹನಗಳ ಉತ್ಪಾದಕರು, ಆಟೋ ಮತ್ತು ಎಲೆಕ್ಟ್ರಾನಿಕ್ ಬಿಡಿ ಭಾಗಗಳ ಪೂರೈಕೆದಾರರು, ವಿದ್ಯುತ್ ಬಿಡಿ ಭಾಗಗಳು ಮತ್ತು ಸಂವಹನ ಸೇವಾ ಪೂರೈಕೆದಾರರು ಸೇರಿದಂತೆ ಎಲ್ಲ ಭಾಗೀದಾರರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಅದರ ಮೂಲಕ ಮಾನದಂಡಗಳ ಅಭಿವೃದ್ಧಿ, ಮಾದರಿ ಉತ್ಪನ್ನಗಳ ಅಭಿವೃದ್ಧಿ ಮತ್ತು ಪರೀಕ್ಷೆಗಳನ್ನು ನಡೆಸುವುದು ಮತ್ತು ಉದ್ದೇಶಿತ ಮಾನದಂಡಗಳನ್ನು ಪ್ರಮಾಣೀಕರಿಸುವ ಕಾರ್ಯ ತ್ವರಿತಗತಿಯಲ್ಲಿ ನಡೆಯುತ್ತಿದೆ. ಮಾನದಂಡಗಳನ್ನು ಅಧಿಕೃತವಾಗಿ ಭಾರತೀಯ ಮಾನಕ ಬ್ಯೂರೋ(ಬಿಐಎಸ್) ಬಿಡುಗಡೆ ಮಾಡಲಿದೆ.        

ಕೈಗೆಟುಕಬಹುದಾದ ಎಲೆಕ್ಟ್ರಿಕ್ ವಾಹನಗಳ ಮೂಲಸೌಕರ್ಯದಲ್ಲಿ ಜಾಗತಿಕ ಮಟ್ಟದಲ್ಲಿ ಮಹತ್ವದ ಸಂಶೋಧನೆ ಮಾಡಲು, ಸಮಿತಿ ಸ್ಮಾರ್ಟ್ ಫೋನ್ ಮೂಲಕ ನಿರ್ವಹಿಸುವ ಸ್ಮಾರ್ಟ್ ಎಸಿ ಚಾರ್ಜಿಂಗ್ ಪಾಯಿಂಟ್ ಗೆ ಕನಿಷ್ಠ ರೂ. 3500($50) ಬೆಲೆ ನಿಗದಿಪಡಿಸಿದೆ. ಅತ್ಯಂತ ತ್ವರಿತಗತಿಯಲ್ಲಿ ಮಾನದಂಡಗಳನ್ನು ಅಭಿವೃದ್ಧಿಪಡಿಸುವುದು, ಉದ್ಯಮ ಮತ್ತು ಸರ್ಕಾರದ ನಡುವೆ ನಿಕಟ ಕಾರ್ಯನಿರ್ವಹಣೆ ಮತ್ತು ಪ್ರಾಯೋಗಿಕ ಬಳಕೆ ಮತ್ತು ಪ್ರಮಾಣೀಕರಣ ವಿಚಾರದಲ್ಲಿ ಕೆಲವು ಯಶಸ್ಸುಗಳನ್ನು ಸಾಧಿಸಲಾಗಿದೆ. ಕಡಿಮೆ ವೆಚ್ಚದ ಎಸಿ ಚಾರ್ಜ್ ಪಾಯಿಂಟ್(ಎಲ್ಎಸಿ) ಮೂರು ಕಿಲೋವ್ಯಾಟ್ ವರೆಗೆ ವಿದ್ಯುತ್ ಅನ್ನು ಬಳಸಿ -ಸ್ಕೂಟರ್ ಮತ್ತು -ಆಟೋ ರಿಕ್ಷಾಗಳನ್ನು ಚಾರ್ಜ್ ಮಾಡಲಿವೆ. ಬಳಕೆದಾರರ ಸ್ಮಾರ್ಟ್ ಫೋನ್ ಕಡಿಮೆ ಶಕ್ತಿಯ ಬ್ಲೂಟೂತ್ ಮೂಲಕ ಎಲ್ಎಸಿ ಸಂವಹನ ನಡೆಸುತ್ತದೆ ಮತ್ತು ವಹಿವಾಟು ಪಾವತಿ ಮತ್ತು ವಿಶ್ಲೇಷಣೆಗೆ ಬ್ಯಾಕ್ ಎಂಡ್ ಒದಗಿಸುತ್ತದೆ. ಬಳಕೆದಾರರ ಸ್ಮಾರ್ಟ್ ಫೋನ್ ಮೂಲಕ ಹಲವು ಖಾತೆಗಳು ಮತ್ತು ಪಾವತಿ ಆಯ್ಕೆಗಳನ್ನು ಹೊಂದಬಹುದಾಗಿದೆ

ಭಾರತೀಯ ಮಾನದಂಡಗಳಿಗೆ ತಕ್ಕಂತೆ 3500 ರೂ.ಗಳಿಂದ ಆರಂಭವಾಗಲಿರುವ ಇಂತಹ ಚಾರ್ಜ್ ಪಾಯಿಂಟ್ ಸಾಧನಗಳನ್ನು ಅಭಿವೃದ್ಧಿಪಡಿಸಲು ಈಗಾಗಲೇ ಹಲವು ಭಾರತೀಯ ಉತ್ಪಾದಕರು ಮುಂದೆ ಬಂದಿದ್ದಾರೆ. ಎಲ್ಎಸಿ ಸಾಧನ ವ್ಯಾಪಕವಾಗಿ ವಿಸ್ತರಿಸಬಹುದಾಗಿದ್ದು, 220 ವ್ಯಾಟ್ ಸಾಮರ್ಥ್ಯದ 15 ಒಳಗೊಂಡ ಸಿಂಗಲ್ ಫೇಸ್ ಮಾರ್ಗ ಲಭ್ಯವಿರುವ ಯಾವುದೇ ಸ್ಥಳದಲ್ಲಿ ಮುಖ್ಯವಾಗಿ ಮೆಟ್ರೋ ಮತ್ತು ರೈಲು ನಿಲ್ದಾಣಗಳ ಪಾರ್ಕಿಂಗ್ ಸ್ಥಳಗಳು, ಶಾಪಿಂಗ್ ಮಾಲ್ ಗಳು, ಆಸ್ಪತ್ರೆಗಳು, ಕಚೇರಿ ಸಂಕೀರ್ಣಗಳು, ಅಪಾರ್ಟ್ ಮೆಂಟ್ ಗಳು ಮತ್ತು ಅಂಗಡಿ ಮಳಿಗೆಗಳು ಹಾಗೂ ಇತರೆ ಮಳಿಗೆಗಳ ಬಳಿ ಅಳವಡಿಸಬಹುದಾಗಿದೆ.

ಭಾರತೀಯ ಮಾನದಂಡದ ಕರಡಿನ ಕುರಿತು ಎಲೆಕ್ಟ್ರೋ ಮೊಬಿಲಿಟಿ ಮಾನದಂಡಗಳ ಕುರಿತಾದ ಬಿಐಎಸ್ ಸಮಿತಿ ಪರಿಶೀಲನೆ ನಡೆಸಿತು. ಅದರ ಅಧಿಕೃತ ಮಾನದಂಡಗಳನ್ನು ಮಾದರಿ ಉತ್ಪನ್ನಗಳ ಕ್ಷೇತ್ರ ಮತ್ತು ಬಳಕೆ ಪ್ರಯೋಗಗಳು ಪೂರ್ಣಗೊಂಡ ನಂತರ ಮುಂದಿನ ಎರಡು ತಿಂಗಳಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಾಗುವುದು. ಹೊಸ ಉದ್ಯಮ ವಲಯ ಭಾರೀ ಗಾತ್ರದ ಕಡಿಮೆ ವೆಚ್ಚದ ಮೂಲಸೌಕರ್ಯವನ್ನು ಎಲೆಕ್ಟ್ರಿಕ್ ವಾಹನಗಳಿಗೆ ಒದಗಿಸಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.

ಚಾರ್ಜಿಂಗ್ ಮೂಲಸೌಕರ್ಯ ಕುರಿತಾದ ಡಿಎಸ್ ಟಿ-ಪಿಎಸ್ಎಒ ಬಳಗದ ಅಧ್ಯಕ್ಷ ಡಾ. ವಿ. ಸುಮಂತ್ರನ್ ರಾಷ್ಟ್ರೀಯ ಗುರಿಗಳನ್ನು ಸಾಧಿಸಲು ಉದ್ಯಮ ಮತ್ತು ಸರ್ಕಾರಿ ಸಂಸ್ಥೆಗಳು ಒಗ್ಗೂಡಿದಾಗ ಅತ್ಯಂತ ವೇಗದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಬಹುದಾಗಿದೆ. ಅಲ್ಲದೆ ಪ್ರಯತ್ನವು ಭಾರತದಲ್ಲಿನ ಕಡಿಮೆ ವೆಚ್ಚದಲ್ಲಿ ಚಾರ್ಜಿಂಗ್ ಪಾಯಿಂಟ್ ಮಾಡುವ  ಬುದ್ಧಿವಂತಿಕೆಯನ್ನು ಹೊರತಂದಿತು. ಭಾರತದಲ್ಲಿ ವೆಚ್ಚ ಮತ್ತು ವಿಸ್ತಾರ ಎರಡೂ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ನಾವು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲಿದ್ದೇವೆಎಂದು ಹೇಳಿದ್ದಾರೆ.

ನೀತಿ ಆಯೋಗದ ಅಧ್ಯಕ್ಷ ಡಾ. ರಾಜೀವ್ ಕುಮಾರ್ , “ದುಬಾರಿ ಚಾರ್ಜಿಂಗ್ ಪಾಯಿಂಟ್ ಗಳಿಗೆ ಬದಲಾಗಿ ಕಡಿಮೆ ವೆಚ್ಚದ ಚಾರ್ಜಿಂಗ್ ಪಾಯಿಂಟ್ ಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇದಕ್ಕಾಗಿ ತಂಡದ ವ್ಯಾಪಕ ಪ್ರಯತ್ನಗಳ ನಂತರ ಎಲ್ಎಸಿ ಚಾರ್ಜಿಂಗ್ ಮಾನದಂಡವನ್ನು ಲಘು ಎಲೆಕ್ಟ್ರಿಕ್ ವಾಹನಗಳಿಗಾಗಿ ಅಭಿವೃದ್ಧಿಪಡಿಸಲಾಗಿದೆಎಂದು ಹೇಳಿದ್ದಾರೆ.

***(Release ID: 1718128) Visitor Counter : 107