ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯು ಮೌಲ್ಯಕ್ಕೆ ತಕ್ಕುದಾದ  ಸ್ಥಳೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಉದ್ಯಮಶೀಲತೆಯ ಮನೋಭಾವವು ಹೆಚ್ಚಾಗಿರುವುದನ್ನು  ಎತ್ತಿ ತೋರಿಸಿದೆ

Posted On: 11 MAY 2021 1:51PM by PIB Bengaluru

ಮೇ 11, 1998 ರಂದು ಭಾರತವು ಪೋಖ್ರಾನ್ನಲ್ಲಿ ಪರಮಾಣು ಬಾಂಬ್ಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದರಿಂದ ಮತ್ತು ಭಾರತದ ತಾಂತ್ರಿಕ ಆವಿಷ್ಕಾರಗಳ ಇತಿಹಾಸದಲ್ಲಿ ದಿನವು ಮಹತ್ವದ ಮೈಲಿಗಲ್ಲಾಗಿದೆ ಮತ್ತು ಅಂತಹ ಆವಿಷ್ಕಾರಗಳ ರೂವಾರಿಗಳನ್ನು ಗೌರವಿಸುವ ಮೂಲಕ ಪ್ರತಿವರ್ಷ ಸ್ಮರಿಸಲಾಗುತ್ತದೆ. ಪ್ರತಿ ವರ್ಷ ದಿನದಂದು ಹಲವಾರು ಹೊಸ ಆವಿಷ್ಕಾರಕರು ಮತ್ತು ಉದ್ಯಮಿಗಳಿಗೆ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ವರ್ಷ 2021ಕ್ಕೆ, ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (ಟಿಡಿಬಿ) ಮೂರು ವಿಭಾಗಗಳ ಅಡಿಯಲ್ಲಿ ರಾಷ್ಟ್ರೀಯ ಪ್ರಶಸ್ತಿಗಳಿಗೆ ಅರ್ಜಿಯನ್ನು ಆಹ್ವಾನಿಸಿತು ಮತ್ತು ಪ್ರಖ್ಯಾತ ವಿಜ್ಞಾನಿಗಳು ಮತ್ತು ತಂತ್ರಜ್ಞರನ್ನೊಳಗೊಂಡ ತಜ್ಞರ ಕಟ್ಟುನಿಟ್ಟಾದ ಎರಡು ಹಂತದ ಮೌಲ್ಯಮಾಪನ ಪ್ರಕ್ರಿಯೆಯ ನಂತರ ಒಟ್ಟು 15 ವಿಜೇತರನ್ನು ಆಯ್ಕೆ ಮಾಡಲಾಯಿತು.

ಪ್ರತಿ ವರ್ಷ, ತನ್ನ ಆದೇಶದ ಮುಂದುವರಿಕೆಗಾಗಿ, ಟಿಡಿಬಿಯು ರಾಷ್ಟ್ರೀಯ ಪ್ರಶಸ್ತಿಗಳು, ಎಂಎಸ್ಎಂಇ ಪ್ರಶಸ್ತಿಗಳು ಮತ್ತು ಆರಂಭಿಕ ಪ್ರಶಸ್ತಿಗಳ ಮೂರು ವಿಭಾಗಗಳ ಅಡಿಯಲ್ಲಿ ತಂತ್ರಜ್ಞಾನಗಳ ವ್ಯಾಪಾರೀಕರಣಕ್ಕಾಗಿ ರಾಷ್ಟ್ರ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಕರೆಯುತ್ತದೆನವೀನ ಸ್ಥಳೀಯ ತಂತ್ರಜ್ಞಾನದ ಯಶಸ್ವಿ ವ್ಯಾಪಾರೀಕರಣಕ್ಕಾಗಿ ಪ್ರಶಸ್ತಿಗಳನ್ನು ವಿವಿಧ ಕೈಗಾರಿಕೆಗಳಿಗೆ ನೀಡಲಾಗುತ್ತದೆ. ವಾರ್ಷಿಕ ಪ್ರಶಸ್ತಿಯು ಭಾರತೀಯ ಕೈಗಾರಿಕೆಗಳಿಗೆ ಮತ್ತು ಮಾರುಕಟ್ಟೆಗೆ ಹೊಸತನವನ್ನು ತರಲು ಕೆಲಸ ಮಾಡುವ ಮತ್ತು ತಂತ್ರಜ್ಞಾನ ಒದಗಿಸುವವರಿಗೆ ಮಾನ್ಯತೆ ನೀಡುವ ವೇದಿಕೆಯನ್ನು ಒದಗಿಸುತ್ತದೆ ಮತ್ತು ಆತ್ಮ ನಿರ್ಭರ ಭಾರತಕ್ಕೆ ಕೊಡುಗೆ ನೀಡಲು ಸಹಾಯ ಮಾಡುತ್ತದೆ.

ಟಿಡಿಬಿ ಭಾರತ ವಿಜ್ಞಾನದ ತಂತ್ರಜ್ಞಾನ ವಿಭಾಗದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಂದು ಶಾಸನಬದ್ಧ ಸಂಸ್ಥೆಯಾಗಿದ್ದು, ಇದು ಭಾರತೀಯ ಕೈಗಾರಿಕಾ ಸಂಸ್ಥೆಗಳಿಗೆ ಮತ್ತು ಇತರ ಏಜೆನ್ಸಿಗಳಿಗೆ, ಸ್ಥಳೀಯ ತಂತ್ರಜ್ಞಾನಗಳ ವ್ಯಾಪಾರೀಕರಣಕ್ಕಾಗಿ ಅಥವಾ ವ್ಯಾಪಕವಾದ ದೇಶೀಯ ಅನ್ವಯಿಕೆಗಳಿಗೆ ಆಮದು ಮಾಡಿದ ತಂತ್ರಜ್ಞಾನಗಳ ಅಳವಡಿಸಿಕೊಳ್ಳುವುದಕ್ಕಾಗಿ ಹಣಕಾಸಿನ ನೆರವು ನೀಡುತ್ತದೆಇದು 1996 ರಲ್ಲಿ ಪ್ರಾರಂಭವಾದಾಗಿದ್ದು, ಅಂದಿನಿಂದ ಟಿಡಿಬಿ ತಂತ್ರಜ್ಞಾನಗಳ ವ್ಯಾಪಾರೀಕರಣಕ್ಕಾಗಿ 300 ಕ್ಕೂ ಹೆಚ್ಚು ಕಂಪನಿಗಳಿಗೆ ಧನಸಹಾಯವನ್ನು ನೀಡಿದೆ.

ಮೂರು ವಿಭಾಗಗಳ ಅಡಿಯಲ್ಲಿ 2020-21ನೇ ಸಾಲಿನ ರಾಷ್ಟ್ರ ಪ್ರಶಸ್ತಿಗಳ ವಿವರಗಳು ಹೀಗಿವೆ: -

ವರ್ಗ 1:

ಸ್ಥಳೀಯ ತಂತ್ರಜ್ಞಾನದ ಯಶಸ್ವಿ ವಾಣಿಜ್ಯೀಕರಣಕ್ಕಾಗಿ ರಾಷ್ಟ್ರ ಪ್ರಶಸ್ತಿ

ಸ್ಥಳೀಯ ತಂತ್ರಜ್ಞಾನವನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದ ಮತ್ತು ವಾಣಿಜ್ಯೀಕರಿಸಿದ ಕೈಗಾರಿಕಾ ಸಂಸ್ಥೆಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಒಂದು ವೇಳೆ, ತಂತ್ರಜ್ಞಾನ ಅಭಿವೃದ್ಧಿದಾರರು / ಪೂರೈಕೆದಾರರು ಮತ್ತು ತಂತ್ರಜ್ಞಾನವನ್ನು ವ್ಯಾಪಾರೀಕರಿಸುವ ಕಂಪನಿ ಎರಡು ವಿಭಿನ್ನ ಸಂಸ್ಥೆಗಳಾಗಿದ್ದು, ಪ್ರತಿಯೊಂದೂ 25 ಲಕ್ಷ ರೂ. ಮತ್ತು ಟ್ರೋಫಿಗೆ ಅರ್ಹವಾಗಿರುತ್ತದೆ.

ವರ್ಷ  ಕೆಳಗಿನ ಎರಡು ಕಂಪನಿಗಳನ್ನು  ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ: -

1) ಬೊರೊಸಿಲ್ ರಿನ್ಯೂವೆಬಲ್ಸ್ ಲಿಮಿಟೆಡ್, ಮುಂಬೈ

ಬೊರೊಸಿಲ್ ರಿನ್ಯೂವೆಬಲ್ಸ್ ಲಿಮಿಟೆಡ್ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿತು, ಇದು 2 ಎಂಎಂ ದಪ್ಪವಿರುವ ಸೌರ ಗಾಜಿನ ಸಂಪೂರ್ಣ ಮೃದುವಾದ ವಿವಿಧ ಸೌರ ಗಾಜುಗಳನ್ನು ಉತ್ಪಾದಿಸುತ್ತದೆ, ಇದನ್ನು ಹೆಚ್ಚಿನ ಶಕ್ತಿಯ ಗಾಜಿನ ಬೈಫೇಶಿಯಲ್ ಮಾಡ್ಯೂಲ್ಗಳಲ್ಲಿ ಬಳಸಲಾಗುತ್ತಿದೆಸೌರ ಪಿವಿ ಸ್ಥಾಪನೆಗಳಿಗಾಗಿ "ಸೆಲೀನ್" ಆಂಟಿ ಗ್ಲೇರ್   ಸೌರ ಗಾಜು ಉಪಯೋಗಿಸಲಾಗುತ್ತದೆ. ಕಂಪನಿಯು ಯುರೋಪಿಯನ್ ಮಾರುಕಟ್ಟೆಗಳಿಗೆ 2.0 ಎಂಎಂ ಮತ್ತು 2.5 ಎಂಎಂ ಸಂಪೂರ್ಣ ಟೆಂಪರ್ಡ್ ಗ್ಲಾಸ್ ಸರಬರಾಜು ಮಾಡಲು ಪ್ರಾರಂಭಿಸಿತು ಮತ್ತು ಮುಂದಿನ ದಿನಗಳಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಸೌರ ಗಾಜಿನ ಉತ್ಪಾದನೆಗೆ ಸಮಾನವಾದ 5.0 ಗಿ.ವ್ಯಾಟ್ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

2)  ರೈನಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್, ಮುಂಬೈ

ಕಂಪನಿಯು ಜವಳಿ ಬಲವರ್ಧಿತ ಕಾಂಕ್ರೀಟ್ (ಟಿಆರ್ಸಿ) ಯನ್ನು ಸ್ಥಳೀಯಗೊಳಿಸಿದೆ ಮತ್ತು ಕಟ್ಟಡ ಮತ್ತು ನಿರ್ಮಾಣ ಕ್ಷೇತ್ರಕ್ಕೆ ಜವಳಿ ಬಲವರ್ಧಿತ ಕಾಂಕ್ರೀಟ್ ಪ್ರಿಕಾಸ್ಟ್ ವಸ್ತುಗಳ ತಯಾರಿಕೆ ಮತ್ತು ಮಾರಾಟದ ಬಗ್ಗೆ ವ್ಯವಹರಿಸುತ್ತದೆ. ಜವಳಿ ಬಲವರ್ಧನೆಯ ರಚನೆಗಳನ್ನು ವಿಶೇಷವಾಗಿ ಕಟ್ಟಡಕ್ಕೆ ಉಪಯೋಗಿಸುವ ವಸ್ತುಗಳಲ್ಲಿ ಒತ್ತಡಗಳನ್ನು ತಡೆದುಕೊಳ್ಳಲು ವಿನ್ಯಾಸಗೊಳಿಸಬೇಕಾಗಿದೆ. ಸುಧಾರಿತ ವಸ್ತು ಮತ್ತು ಸಂಬಂಧಿತ ಹೊಸ ಉತ್ಪಾದನಾ ತಂತ್ರಜ್ಞಾನಗಳು ಕಾಂಕ್ರೀಟ್ ಬಳಕೆಯನ್ನು ಕಡಿಮೆ ಮಾಡುತ್ತದೆ, ಕಟ್ಟಡದ ಘಟಕಗಳ ಸಾಕಾರ ಶಕ್ತಿಯನ್ನು ಕಡಿಮೆ ಮಾಡುತ್ತದೆ, ನಿರುಪಯುಕ್ತವಾದಾಗ ಆಗುವ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ವಸ್ತುವನ್ನು ಹೊಸ ಮತ್ತು ಇತರ ಕೆಲಸಗಳಿಗೆ ಮರುಬಳಸಬಹುದು. ಟಿಆರ್ಸಿಗೆ ಅನ್ವಯಿಸುವ ಕ್ಷೇತ್ರಗಳಲ್ಲಿ ಕಟ್ಟಡದ ಮುಂಭಾಗದ ಅಂಶಗಳು, ರಸ್ತೆಯ ಪೀಠೋಪಕರಣಗಳು ಮತ್ತು ಸ್ಮಾರ್ಟ್ ನಗರಗಳಿಗೆ ವಿನ್ಯಾಸಕ ರಚನೆಗಳು, ಒಳನಾಡಿನ ಜಲಮಾರ್ಗಗಳು ಸೇರಿದಂತೆ ಸಮುದ್ರ ಮತ್ತು ಕರಾವಳಿ ಮೂಲಸೌಕರ್ಯಗಳು ಸೇರಿವೆ.

ವರ್ಗ 2:

ಎಂಎಸ್ಎಂಇ  ವರ್ಗದಲ್ಲಿ  ರಾಷ್ಟ್ರ ಪ್ರಶಸ್ತಿ

ಸ್ಥಳೀಯ ತಂತ್ರಜ್ಞಾನದ ಆಧಾರದ ಮೇಲೆ ಉತ್ಪನ್ನವನ್ನು ಯಶಸ್ವಿಯಾಗಿ ವ್ಯಾಪಾರೀಕರಿಸಿದ ಆಯ್ದ ಎಸ್ಎಂಇಗಳಿಗೆ ವಿಭಾಗದಲ್ಲಿ ತಲಾ ರೂ. 15 ಲಕ್ಷ ನೀಡಲಾಗುವುದು. ವರ್ಷ ಪ್ರಶಸ್ತಿಗೆ ಕೆಳಗಿನ ಮೂರು ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ :-

1) ಪ್ಲಸ್ ಅಡ್ವಾನ್ಸ್ಡ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಗುರುಗ್ರಾಮ್ ಕಂಪನಿಯು ಸ್ಥಳೀಯ ತಾಪಮಾನ ನಿಯಂತ್ರಿತ ಔಷಧೀಯ ಶಿಪ್ಪಿಂಗ್ ಬಾಕ್ಸ್ ಸೆಲ್ಸರ್ಅನ್ನು ಅಭಿವೃದ್ಧಿಪಡಿಸಿದೆ. ವ್ಯವಸ್ಥೆಯ ಮುಖ್ಯಭಾಗವು ಕ್ಯಾಸ್ಕೇಡ್ ಫೇಸ್ ಚೇಂಜ್ ಮೆಟೀರಿಯಲ್ (ಪಿಸಿಎಂ) ತಂತ್ರಜ್ಞಾನವಾಗಿದ್ದು ಅದು ನಿಯಂತ್ರಿತ ತಾಪಮಾನದ ಚಪ್ಪಟೆಯಾಗಿರುವಿಕೆಯನ್ನು ಖಾತ್ರಿಗೊಳಿಸುತ್ತದೆ. ಫಾರ್ಮಾ ಪೆಟ್ಟಿಗೆಯಲ್ಲಿನ ನಿಖರವಾದ ತಾಪಮಾನ ನಿಯಂತ್ರಣ ಮತ್ತು 100 ಗಂಟೆಗಳಿಗಿಂತ ಹೆಚ್ಚು ಸಹಿಷ್ಣುತೆಯು ಒಂದೇ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಲಸಿಕೆಗಳು ಮತ್ತು ಔಷಧಿಗಳ ಗುಣಮಟ್ಟ ಕಡಿಮೆಯಾಗುವುದನ್ನು ಸಂಪೂರ್ಣವಾಗಿ ತಪ್ಪಿಸಬಹುದು.

2) ಇಂಟಾಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಕೊಚ್ಚಿ. ಮಾರುಕಟ್ಟೆಯಲ್ಲಿ ಅಸ್ತಿತ್ವದಲ್ಲಿರುವ ಡಿಜಿಟಲ್ ರೇಡಿಯೊ ಬ್ರಾಡ್ಕಾಸ್ಟ್ ರಿಸೀವರ್ ಪರಿಹಾರಗಳಿಗೆ ಡೆಮೋಡ್ಯುಲೇಷನ್ ಮತ್ತು ಚಾನೆಲ್ ಡಿಕೋಡಿಂಗ್ನಂತಹ ಸಂಕೀರ್ಣ ಕಾರ್ಯಾಚರಣೆಗಳನ್ನು ನಿರ್ವಹಿಸಲು ಅದಕ್ಕೆಂದೇ ಮೀಸಲಾದ ಚಿಪ್ಗಳು ಬೇಕಾಗುತ್ತವೆ. ಚಿಪ್- ಹೆಚ್ಚಿನ ವೆಚ್ಚಗಳು ಮತ್ತು ಸಂಕೀರ್ಣ ಯಂತ್ರಾಂಶದ ವಿನ್ಯಾಸದಿಂದಾಗಿ ಅಂತಿಮ ಉತ್ಪನ್ನದ ವೆಚ್ಚವು ತುಂಬಾ ಹೆಚ್ಚಾಗುತ್ತದೆ. ಭಾರತ ಮತ್ತು ಯುಎಸ್ಎಗಳಲ್ಲಿ ಪೇಟೆಂಟ್ ಪಡೆದ ತನ್ನದೇ ಆದ ಸುಧಾರಣೆಗಳೊಂದಿಗೆ ಸಾಫ್ಟ್ವೇರ್ ಡಿಫೈನ್ಡ್ ರೇಡಿಯೊದ ಪರಿಕಲ್ಪನೆಯ ಆಧಾರದ ಮೇಲೆ ಡಿಜಿಟಲ್ ಪ್ರಸಾರ ರೇಡಿಯೋ ಸ್ವಾಗತಕ್ಕಾಗಿ ಇಂಟಾಟ್ ಕಂಪನಿಯು ಉತ್ತಮ ಗುಣಮಟ್ಟದ ಮತ್ತು   ಮೌಲ್ಯಕ್ಕೆ ತಕ್ಕನಾದ  ಪರಿಹಾರವನ್ನು ಅಭಿವೃದ್ಧಿಪಡಿಸಿದೆ. ಇಂಟೊಟ್ ಪರಿಹಾರವು ಜಗತ್ತಿನಾದ್ಯಂತದ ಡಿಜಿಟಲ್ ರೇಡಿಯೊ ರಿಸೀವರ್ ತಯಾರಕರಿಗೆ ಕಡಿಮೆ ವೆಚ್ಚದ ಡಿಜಿಟಲ್ ರೇಡಿಯೊ ರೂಪಾಂತರಗಳನ್ನು ತರಲು ಸಹಾಯ ಮಾಡುತ್ತದೆ.

3) ಒಲೀನ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್, ಚೆನ್ನೈ. ಪೇಟೆಂಟ್ ಪಡೆದ ಅಕ್ವಿಯೋಸೋಮ್ ತಂತ್ರಜ್ಞಾನವನ್ನು ಬಳಸಿಕೊಂಡು ಹೆಚ್ಚಿನ ಪ್ರಮಾಣದ ಜಿಂಜರಾಯ್ಡ್ಗಳಿಗೆ (> 26% ಒಟ್ಟು ಜಿಂಜರೋಲ್ಗಳು) ಪ್ರಮಾಣೀಕರಿಸಿದ ಶುಂಠಿಯ ಪುಡಿಯಾದ ಜಿನ್ಫೋರ್ಟ್ಅನ್ನು ಕಂಪನಿಯು ಅಭಿವೃದ್ಧಿಪಡಿಸಿತು. ಇದರ ಪೇಟೆಂಟ್(ಸ್ವಾಮ್ಯದ ಸನ್ನದು) ಅನ್ನು ಭಾರತ ಮತ್ತು ಯುಎಸ್ಎಗಳಲ್ಲಿ ನೀಡಲಾಗಿದೆ. ಶುಂಠಿ ಒಲಿಯೊರೆಸಿನ್ನಿಂದ ಪುಡಿ ಮಾಡಿದ ಶುಂಠಿ ಸಾರವನ್ನು ಉತ್ಪಾದಿಸಲು ಲಭ್ಯವಿರುವ ಸಾಂಪ್ರದಾಯಿಕ ತಂತ್ರಜ್ಞಾನಗಳಿಗೆ ಹೋಲಿಸಿದರೆ ಅಕ್ವಿಯೊಸೋಮ್ ತಂತ್ರಜ್ಞಾನವು ವಿಶಿಷ್ಟ ಹಾಗೂ ಉತ್ತಮವಾಗಿದೆ. ಅಕ್ವಿಯೋಸೋಮ್ ತಂತ್ರಜ್ಞಾನವು ದ್ರವ ಒಲಿಯೊರೆಸಿನ್ ಅನ್ನು ಪುಡಿಯಾಗಿ ಪರಿವರ್ತಿಸುತ್ತದೆ ಮತ್ತು ಕನಿಷ್ಠ ಎಕ್ಸಿಪೈಂಟ್ಸ್-ಗಳನ್ನು ಬಳಸುತ್ತದೆ ಮತ್ತು ಇದರಿಂದ ಹೆಚ್ಚಿನ ಶುದ್ಧತೆ ಮತ್ತು ಕಡಿಮೆ ಅಡ್ಡಪರಿಣಾಮಗಳು ಇರುತ್ತವೆ. ಇದರ ಜೊತೆಯಲ್ಲಿ, ಪ್ರಕ್ರಿಯೆಯು ದ್ರಾವಕ ಮುಕ್ತವಾಗಿದೆ, ಇದು ಉತ್ಪನ್ನ ಮತ್ತು ಪರಿಸರದ ಸುರಕ್ಷತೆಯನ್ನು ಹೆಚ್ಚಿಸುತ್ತದೆಕ್ರಿಯಾತ್ಮಕ ಡಿಸ್ಪೆಪ್ಸಿಯಾಕ್ಕೆ ಜಿನ್ಫೋರ್ಟ್ ಅನ್ನು ಪ್ರಾಯೋಗಿಕವಾಗಿ ಮೌಲ್ಯೀಕರಿಸಲಾಗಿದೆ.

ವರ್ಗ 3:

ಟೆಕ್ನಾಲಜಿ ಸ್ಟಾರ್ಟ್-ಅಪ್ (ನವೋದ್ಯಮ) ವರ್ಗದಲ್ಲಿ ರಾಷ್ಟ್ರ ಪ್ರಶಸ್ತಿ

ವಾಣಿಜ್ಯೀಕರಣದ ಸಾಮರ್ಥ್ಯದೊಂದಿಗೆ ಹೊಸ ತಂತ್ರಜ್ಞಾನದ ಭರವಸೆಗಾಗಿ ತಂತ್ರಜ್ಞಾನ ನವೋದ್ಯಮಕ್ಕೆ ಪ್ರಶಸ್ತಿಯನ್ನು ನೀಡಲಾಗುತ್ತದೆ. ಟ್ರೋಫಿಯ ಜೊತೆಗೆ ಪ್ರಶಸ್ತಿಯು 15 ಲಕ್ಷ ರೂಪಾಯಿಗಳನ್ನು ಹೊಂದಿರುತ್ತದೆ. ವರ್ಷ ಪ್ರಶಸ್ತಿಗಳಿಗೆ ಹತ್ತು ನವೋದ್ಯಮಗಳನ್ನು ಆಯ್ಕೆ ಮಾಡಲಾಗಿದೆ. ಅವುಗಳು ಹೀಗಿವೆ : -

1) ಪ್ರೊಫಿಶಿಯೆಂಟ್ ವಿಷನ್ಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಖರಗ್ ಪುರ್. ಪ್ರೊಫಿಶಿಯೆಂಟ್ ವಿಷನ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಕ್ಲಿಯರ್ ವಿಷನ್ ಎಂಬ ಹೆಸರಿನ ಉತ್ಪನ್ನವನ್ನು ಅಭಿವೃದ್ಧಿಪಡಿಸಿದೆ: ವೀಡಿಯೊಗಳಿಂದ ಕೆಟ್ಟ ಹವಾಮಾನವನ್ನು (ಅಂದರೆ ಮಳೆ ಮತ್ತು ಮಂಜು) ಪರಿಣಾಮಗಳನ್ನು ನೈಜ ಸಮಯದಲ್ಲಿ ತೆಗೆದುಹಾಕುವುದು. ಇದರ ಪ್ರಸ್ತಾವಿತ ಅಲ್ಗಾರಿದಮ್ ಎಲ್ಲಾ ಬಣ್ಣ ಘಟಕಗಳಲ್ಲಿ ಕೆಲಸ ಮಾಡುವ ಇತರ ವಿಧಾನಗಳಿಗೆ ವಿರುದ್ಧವಾಗಿ ವೀಡಿಯೊದ ತೀವ್ರತೆಯ ಘಟಕದ ಮೇಲೆ ಮಾತ್ರ ಕಾರ್ಯನಿರ್ವಹಿಸುತ್ತದೆಮಳೆ ಮತ್ತು ಮಂಜನ್ನು ತೆಗೆದುಹಾಕಲು ಸತತ ಕಡಿಮೆ ಸಂಖ್ಯೆಯ ವೀಡಿಯೊ ಫ್ರೇಮ್ಗಳ ಅಗತ್ಯವಿರುತ್ತದೆ. ನೈಜ ಸಮಯ ಮಳೆ ಮತ್ತು ಮಂಜು ತೆಗೆಯುವಿಕೆಯು ಸ್ವಯಂ-ಸ್ಟೀರಿಂಗ್, ಟ್ರಾಫಿಕ್ ಸಿಗ್ನಲ್ ಗುರುತಿಸುವಿಕೆಯಂತಹ ವಿವಿಧ ಕಾರ್ಯಗಳ ಕಾರ್ಯಕ್ಷಮತೆಯನ್ನು ಹೆಚ್ಚು ಸುಧಾರಿಸುತ್ತದೆ ಮತ್ತು ವಿವಿಧ ಸಾರಿಗೆ ಸೇವೆಗಳಲ್ಲಿನ ವಿಳಂಬವನ್ನು ಕಡಿಮೆ ಮಾಡುತ್ತದೆ.

2) ರೋವ್ (ಐಆರ್ ಒವಿ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್) ಕೇರಳ. ಐರೊವ್ ಸ್ವಾಮ್ಯದ ಉತ್ಪನ್ನ ಐರೋವ್ ಟುನಾ ಆರ್ ಒವಿ (ರಿಮೋಟ್ ಆಪರೇಟೆಡ್ ವೆಹಿಕಲ್) ಬಳಸಿ ಸುಧಾರಿತ ನೀರೊಳಗಿನ ತಪಾಸಣೆ ಸೇವೆಗಳನ್ನು ಒದಗಿಸುತ್ತದೆ.

ಮುಳುಗಿರುವ ಸ್ಥಿತಿಯಲ್ಲಿರುವ ರಚನೆಗಳ ವಿಷುಯಲ್ ತಪಾಸಣೆ / ಸಮೀಕ್ಷೆಯನ್ನು ನಿರ್ವಹಿಸಲು ಐರೋವ್ ಟುನಾ ಮೈಕ್ರೋ-ಆರ್ ಒವಿ ಆಗಿದೆ. 200 ಮೀ ಆಳದವರೆಗೆ ಕೆಲಸ ಮಾಡಲು ಇದು ಮೌಲ್ಯಕ್ಕೆ ತಕ್ಕನಾದ  ನೀರೊಳಗೆ ಕೆಲಸ ಮಾಡುವ ಘಟಕವಾಗಿದೆಇದು ಸೋನಾರ್ಸ್, ಎನ್ಡಿಟಿ ಪರೀಕ್ಷಾ ಸಾಧನಗಳಂತಹ ಬಾಹ್ಯ ಸಂವೇದಕಗಳನ್ನು ಲಗತ್ತಿಸುವ ಅವಕಾಶವನ್ನು ಹೊಂದಿದೆ. ಉತ್ಪನ್ನವನ್ನು ಅಣೆಕಟ್ಟು ಪರಿಶೀಲನೆ, ಹಡಗಿನ ಒಡಲ ಪರಿಶೀಲನೆ, ಮೀನು ಕೃಷಿ ಪರಿಶೀಲನೆ, ಬಂದರು ರಚನೆ ಪರಿಶೀಲನೆ, ಸೇತುವೆ ಅಡಿಪಾಯ ಪರಿಶೀಲನೆ ಇತ್ಯಾದಿಗಳಿಗೆ ಬಳಸಬಹುದು.

3) ಫ್ಯಾಬ್ಹೆಡ್ಸ್ ಆಟೊಮೇಷನ್ ಪ್ರೈವೇಟ್ ಲಿಮಿಟೆಡ್, ಚೆನ್ನೈ. ಸಾಂಪ್ರದಾಯಿಕವಾಗಿ, ಕಾರ್ಬನ್ ಫೈಬರ್ ವಸ್ತುಗಳೊಂದಿಗೆ ಭಾಗಗಳನ್ನು ತಯಾರಿಸುವುದು ಬಹಳ ದುಬಾರಿ, ಪ್ರಯಾಸಕರ ಮತ್ತು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಫ್ಯಾಬ್ಹೆಡ್ಸ್ ಸ್ಥಳೀಯ ಕಾರ್ಬನ್ ಫೈಬರ್ ಲೇಅಪ್ ತಂತ್ರಜ್ಞಾನವು ವಸ್ತುವಿನೊಂದಿಗೆ ಉತ್ಪಾದನೆಯ ಸಂಪೂರ್ಣ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸುವ ಮೂಲಕ ಸಮಸ್ಯೆಯನ್ನು ಪರಿಹರಿಸುತ್ತದೆ. ಕಂಪನಿಯ ಫೈಬರ್ಬಾಟ್ ಸರಣಿಯ 3 ಡಿ ಮುದ್ರಕಗಳು ಡ್ರೋನ್ಗಳು, ಆಟೋಮೋಟಿವ್, ಏರೋಸ್ಪೇಸ್, ಮೆರೈನ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿವಿಧ ಅಪ್ಲಿಕೇಶನ್ಗಳಿಗೆ ಬಳಸಬಹುದಾದ ಬಲವಾದ ಹಗುರವಾದ ಭಾಗಗಳನ್ನು 3D ಯಾಗಿ ಮುದ್ರಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಸಾಂಪ್ರದಾಯಿಕ ಫ್ಯಾಬ್ರಿಕೇಶನ್ ವಿಧಾನಗಳಿಗೆ ಹೋಲಿಸಿದರೆ ತಂತ್ರಜ್ಞಾನವು ವ್ಯರ್ಥವನ್ನು ಕಡಿಮೆ ಮಾಡುತ್ತದೆ ಮೌಲ್ಯಕ್ಕೆ ತಕ್ಕದ್ದಾಗಿದೆ.

4) ಪ್ಲೆಬೆಲ್ ಟೆಕ್ ಪ್ರೈವೇಟ್ ಲಿಮಿಟೆಡ್, ಭೋಪಾಲ್ಕಂಪನಿಯು ಗ್ಲೈ-ಟ್ಯಾಗ್ ಪ್ಲಾಟ್ಫಾರ್ಮ್ ಅನ್ನು ಅಭಿವೃದ್ಧಿಪಡಿಸಿದೆ. ಪ್ರತಿಕಾಯ-ಔಷಧ ಸಂಯುಕ್ತಗಳು (ಎಡಿಸಿಗಳು) ಪ್ರತಿಜನಕ-ಧನಾತ್ಮಕ ಸ್ತನ ಕ್ಯಾನ್ಸರ್ ಕೋಶಗಳ ಕಡೆಗೆ ಆಯ್ದ ವಿರೋಧಿ ಪ್ರಸರಣ ಚಟುವಟಿಕೆಯನ್ನು ಪ್ರದರ್ಶಿಸುತ್ತವೆ. ಅವು ಸ್ತನ ಕ್ಯಾನ್ಸರ್ ಕೋಶಗಳನ್ನು ಆರೋಗ್ಯಕರ ಕೋಶಗಳಿಗೆ ಹಾನಿಯಾಗದಂತೆ ಕಡಿಮೆ ಸಾಂದ್ರತೆಯಲ್ಲಿ ಗುರಿಯಾಗಿಸುತ್ತವೆ ಮತ್ತು ಆಕ್ರಮಣಕಾರಿ ಪ್ರಕಾರದ ಹೆಜ್ ಆರ್ 2- ಪಾಸಿಟಿವ್ ಸ್ತನ ಕ್ಯಾನ್ಸರ್ ಹೊಂದಿರುವ ರೋಗಿಗಳಿಗೆ ಸಹಾಯ ಮಾಡುತ್ತವೆ.

5) ಬ್ರೀಥ್ ಅಪ್ಲೈಡ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು. ಪ್ರಯೋಗಾಲಯದ ಪ್ರಮಾಣದ ಇಂಗಾಲದ ಡೈಆಕ್ಸೈಡ್ (CO2) ಪರಿವರ್ತನೆಯನ್ನು ಮೆಥನಾಲ್ಗೆ  ಪ್ರಾಯೋಗಿಕವಾಗಿ ಯಶಸ್ವಿಯಾಗಿ ಪರಿವರ್ತಿಸಿದೆ. ಅದು CO2ವನ್ನು ದಿನಕ್ಕೆ ಗ್ರಾಂ ಸ್ಕೇಲ್ ಸಾಮರ್ಥ್ಯದಿಂದ 300 ಕೆಜಿಗೆ ಪರಿವರ್ತನೆಗೊಳಿಸುವ ಘಟಕವನ್ನು (ಆವಿ ಹಂತದ ಪ್ಲಗ್ ಫ್ಲೋ ರಿಯಾಕ್ಟರ್) ವಿನ್ಯಾಸಗೊಳಿಸಿದ್ದಾರೆ.

6) ಸಿರಾನ್ ಎಐ ಸೊಲ್ಯೂಷನ್ಸ್, ದೆಹಲಿ. ಕಂಪನಿಯು ವಿಶಿಷ್ಟ ಮತ್ತು ಪೇಟೆಂಟ್ ಪಡೆದ ಕೃತಕ ಬುದ್ಧಿಮತ್ತೆಯ ಬಿಯುಡಿಡಿಹೆಚ್ಐ ಎಐ ಡಿವೈ ಕಿಟ್ಟನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ (ಬುದ್ದಿ ಎಂದರೆ ಬಿಲ್ಡ್ ಅಂಡರ್ಸ್ಟ್ಯಾಂಡ್ ಡಿಸೈನ್ ಡಿಪ್ಲಾಯ್ ಹ್ಯೂಮನ್ ಲೈಕ್ ಇಂಟೆಲಿಜೆನ್ಸ್”). ಇದು ಸಂವಾದಾತ್ಮಕ ನಾವೇ ಮಾಡಬಹುದಾದ (ಡು-ಇಟ್-ಯುವರ್ಸೆಲ್ಫ್) ಶೈಕ್ಷಣಿಕ ಕಿಟ್ ಆಗಿದ್ದು, ಕೃತಕ ಬುದ್ಧಿಮತ್ತೆಯ ಸಾಮರ್ಥ್ಯವನ್ನು, ಕೃತಕ ಬುದ್ಧಿಮತ್ತೆಯ ಮೂಲಭೂತ ಅಂಶಗಳನ್ನು ತ್ವರಿತವಾಗಿ ಕಲಿಯಲು ಮತ್ತು ಡೊಮೇನ್ ಜ್ಞಾನವಿಲ್ಲದೆ ಕೃತಕ ಬುದ್ಧಿಮತ್ತೆ ಆಧಾರಿತ ನೈಜ-ಪ್ರಪಂಚದ ಯೋಜನೆಗಳನ್ನು ನಿರ್ಮಿಸಲು ಇದನ್ನು ಬಳಸಬಹುದು.

7) ಥೆರನಾಟಿಲಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು. ದಂತಕವಚದ ಆಳವಾದ ಕೊಳವೆಯೊಳಗೆ ನ್ಯಾನೊರೊಬೊಟ್ಗಳನ್ನು ಅವುಗಳ ಗುರಿಗಳಿಗೆ ಮಾರ್ಗದರ್ಶನ ಮಾಡಲು ಥೆರನೌಟಿಲಸ್ ಉಪಕರಣವನ್ನು ಬಳಸಬಹುದು. ನ್ಯಾನೊರೊಬೊಟ್ಗಳು ಬ್ಯಾಕ್ಟೀರಿಯಾದ ಮುತ್ತಿಕೊಳ್ಳುವ ಸ್ಥಳವನ್ನು ತಲುಪಿದ ನಂತರ, ಅವುಗಳ ಬ್ಯಾಕ್ಟೀರಿಯಾ ವಿರೋಧಿ ಕಾರ್ಯವಿಧಾನವನ್ನು ನಿಯೋಜಿಸಲು ಅವುಗಳನ್ನು ದೂರದಿಂದಲೇ ಸಕ್ರಿಯಗೊಳಿಸಬಹುದು. ನೂತನ ಪರಿಹಾರವು ರೂಟ್ ಕಾನೆಲ್ ವೈಫಲ್ಯವನ್ನು ಕಡಿಮೆ ಮಾಡುತ್ತದೆ, ಇದು ಪ್ರಸ್ತುತ ಜಾಗತಿಕವಾಗಿ ಪ್ರತಿವರ್ಷ ನಡೆಸುವ ಲಕ್ಷಾಂತರ   ರೂಟ್ ಕಾನೆಲ್ ಸಂಸ್ಕರಣಾ ವಿಧಾನಗಳಲ್ಲಿ 14-16% ವರೆಗೆ ಪರಿಣಾಮ ಬೀರುತ್ತದೆ.

8) ಸಿಂಥೆರಾ ಬಯೋಮೆಡಿಕಲ್ ಪ್ರೈವೇಟ್ ಲಿಮಿಟೆಡ್, ಪುಣೆ. ಕಂಪನಿಯು ಪೊರೊಸಿನ್ ಬಯೋಆಕ್ಟಿವ್ ಸಿಂಥೆಟಿಕ್ ಮೂಳೆ ನಾಟಿಯನ್ನು ತಯಾರಿಸಿದೆ, ಇದನ್ನು ಗ್ರ್ಯಾನ್ಯೂಲ್ ಮತ್ತು ಬ್ಲಾಕ್ ರೂಪದಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು ಗಾಯಗಳು, ರೋಗ ಮತ್ತು ಹುಟ್ಟಿನಿಂದಲೇ ವಿರೂಪಗಳಿಂದ ಉಂಟಾಗುವ ದೇಹದೊಳಗಿನ ಮೂಳೆ ನಷ್ಟವಾದ ಪ್ರದೇಶಗಳಲ್ಲಿ ಮೂಳೆಯನ್ನು ಪುನರುತ್ಪಾದಿಸಲು ಮತ್ತು ಸರಿಪಡಿಸಲು ಶಸ್ತ್ರಚಿಕಿತ್ಸಾ ವಿಧಾನಗಳಲ್ಲಿ ಬಳಸಲಾಗುತ್ತದೆ. ಪೊರೊಸಿನ್ ತಂತ್ರಜ್ಞಾನವು ಭಾರತದಲ್ಲಿ ಪೇಟೆಂಟ್ ಪಡೆದಿದೆ ಮತ್ತು ಯುಎಸ್, ಯುರೋಪ್, ಚೀನಾ ಮತ್ತು ದಕ್ಷಿಣ ಕೊರಿಯಾದಲ್ಲಿ ಪೇಟೆಂಟ್ ಸಲ್ಲಿಸಲಾಗಿದೆ.

9) ಮಲ್ಟಿ ನ್ಯಾನೋ ಸೆನ್ಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ನಾಗ್ಪುರ. ಮಲ್ಟಿ ನ್ಯಾನೋ ಸೆನ್ಸ್ ಟೆಕ್ನಾಲಜೀಸ್ (ಎಂಎನ್ಎಸ್ಟಿ) ಪ್ರೈವೇಟ್ ಲಿಮಿಟೆಡ್ ಹೈಡ್ರೋಜನ್ ಸಂವೇದಕಗಳು, ಘನ ಎಲೆಕ್ಟ್ರೋಲೈಟ್ ಇರುವ  ಘನ ಸ್ಥಿತಿಯ ಎಲೆಕ್ಟ್ರೋಕೆಮಿಕಲ್ ಸೆನ್ಸರ್ಗಳು ಮತ್ತು ನೂತನ ಎಲೆಕ್ಟ್ರಾಡ್ (ಎಸ್ಎಸ್ಇಸಿ ತಂತ್ರಜ್ಞಾನ’) ತಂತ್ರಜ್ಞಾನವನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದೆ, ಎಲೆಕ್ಟ್ರೋಕೆಮಿಕಲ್ ಸಂವೇದಕಗಳು ಮತ್ತು ಸಾಂಪ್ರದಾಯಿಕ ತಂತ್ರಜ್ಞಾನಗಳಾದ ವೇಗವರ್ಧಕ ದಹನ ಮತ್ತು ಲೋಹದ ಆಕ್ಸೈಡ್ ಅರೆವಾಹಕ, ಅಡ್ಡ ಸಂವೇದನೆ, ಇತ್ಯಾದಿಗಳಂತಹ ಹೈಡ್ರೋಜನ್ ಸಂವೇದನೆಯಲ್ಲಿ ಹಲವಾರು ನಿರ್ಣಾಯಕ ಸವಾಲುಗಳನ್ನು ಪರಿಹರಿಸಿದೆ. ಎಂಎನ್ಎಸ್ಟಿ ಪೇಟೆಂಟ್ ಪಡೆದ ಪ್ಲಾಟ್ಫಾರ್ಮ್, ಸಿಎಮ್ಒಎಸ್ ಎಂಇಎಂಎಸ್ ಓಮ್ನಿ-ಗ್ಯಾಸ್ ಸೆನ್ಸಿಂಗ್ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ (ಎಂಇಎಂಎಸ್ ತಂತ್ರಜ್ಞಾನ’). ಎಂಇಎಂಎಸ್ ತಂತ್ರಜ್ಞಾನವು ಎಂಇಎಂಎಸ್ ಮೈಕ್ರೊ-ಕಾಲಮ್ನೊಂದಿಗೆ ಸೇರಿಕೊಂಡಾಗ, ಗುಣಾತ್ಮಕವಾಗಿ ಮತ್ತು ಪರಿಮಾಣಾತ್ಮಕವಾಗಿ, ವಿಭಿನ್ನ ಅನಿಲಗಳನ್ನು ವಿಶ್ಲೇಷಿಸಬಹುದು ಮತ್ತು ಪಾಕೆಟ್ ಜಿಸಿಯಾಗಿ ಕಾರ್ಯನಿರ್ವಹಿಸಬಹುದು. ಇದು ಮೈಕ್ರೊ ಸೆಕೆಂಡುಗಳಲ್ಲಿ ಹೆಚ್ಚಿನ ಮಟ್ಟದ ವಿಶ್ವಾಸಾರ್ಹತೆ, ಆಯ್ಕೆ ಮತ್ತು ನಿಖರತೆಯೊಂದಿಗೆ ಜಾಡಿನ ಮಟ್ಟಗಳಲ್ಲಿ 100% ಶುದ್ಧತೆಗೆ ಪ್ರತಿಕ್ರಿಯಿಸಬಹುದು.

10) ನೊಕಾರ್ಕ್ ರೊಬೊಟಿಕ್ಸ್ ಪ್ರೈವೇಟ್ ಲಿಮಿಟೆಡ್, ಪುಣೆನೊಕಾರ್ಕ್ ರೊಬೊಟಿಕ್ಸ್ ಪ್ರೈವೇಟ್ ಲಿಮಿಟೆಡ್ ಎಸ್ಐಐಸಿ ಐಐಟಿ ಕಾನ್ಪುರದ ಸಹಯೋಗದೊಂದಿಗೆ ಸಂಪೂರ್ಣ ಕ್ರಿಯಾತ್ಮಕ ಸ್ಥಳೀಯ ವಿ 310 ಐಸಿಯು ವೆಂಟಿಲೇಟರ್ ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ ಮತ್ತು ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ವಾಣಿಜ್ಯೀಕರಣಗೊಂಡಿದೆ. ನೋಕಾರ್ಕ್ ವಿ 310 ಅನ್ನು ಪ್ರಾಯೋಗಿಕವಾಗಿ ಮೌಲ್ಯೀಕರಿಸಲಾಗಿದೆ ಮತ್ತು ಐಇಸಿ 60601-1 ಮಾನದಂಡಗಳಿಗೆ ಪ್ರಮಾಣೀಕರಿಸಲಾಗಿದೆ. ಕಂಪನಿಯು ನೊಕಾರ್ಕ್ ಎಚ್ 210 ಹೈ ಫ್ಲೋ ಆಕ್ಸಿಜನ್ ಥೆರಪಿ ಸಾಧನವನ್ನು ಅಭಿವೃದ್ಧಿಪಡಿಸಿದೆ, ಇದು ಮೂಗಿನ  ಮೂಲಕ ಹೆಚ್ಚಿನ ಹರಿವು ಬೆಚ್ಚಗಾಗುವ ಮತ್ತು ಆರ್ದ್ರಗೊಳಿಸಿದ ಆಮ್ಲಜನಕದ ಗಾಳಿಯನ್ನು ತಲುಪಿಸುವ ಮೂಲಕ ಕಡಿಮೆ ನಿರ್ಣಾಯಕ ಹಂತದಲ್ಲಿ ರೋಗಿಗೆ ಉಸಿರಾಟದ ಸೌಲಭ್ಯವನ್ನು ನೀಡುತ್ತದೆ ಉಪಕರಣವನ್ನು ಐಇಸಿ 60601-1 ಮತ್ತು ಐಇಸಿ 60601-1-2 ಮಾನದಂಡಗಳಿಗೆ ಪ್ರಮಾಣೀಕರಿಸಲಾಗಿದೆ.

ಅನುಬಂಧ

ಎಂಎಸ್ಎಂಇ ವರ್ಗದ ಅಡಿಯಲ್ಲಿ ರಾಷ್ಟ್ರ ಪ್ರಶಸ್ತಿ

Ms Pluss Advanced Technologies Pvt Ltd.pngMs Inntot Technologies Pvt Ltd.png

Ms Olene Life Sciences Private Limited.png

ತಾಂತ್ರಿಕ ನವೋದಯ ವರ್ಗದ ಅಡಿಯಲ್ಲಿ ರಾಷ್ಟ್ರ ಪ್ರಶಸ್ತಿ

https://lh5.googleusercontent.com/PRDgcBcVjkTHTMLdqfL2Bujb62mgRnG9An_7B4VuaBUXQsPhtvI_euNXYDniTw9Pij7Wl198F_6uTOSXe_jUZLt4t7VDwm0CugqqvcWM5bbVb3aGxqWSHwAuvASS0EPHrexcY3ohttps://lh5.googleusercontent.com/lfGoYgT8UPF2codp85FTxo87JL7E1-JrG5cTUCKchAghCDvSG1XfzjohpfRoW2emHZ-qP0TYJD8WD9UKhafbsBTNkBqgQfoM145Qj6TS-dSnuOiif1d7CW61ZjCTG7nzD2ctvvYhttps://lh3.googleusercontent.com/BQR9BAuMS0LZ_wvAx3NVr-fmfXc3thQJU0zg9m1WrUzpHw3gIGzVK1MSvzMUBJAkXYaIGmymcXWBqKZshQw49vVUD8KuLR4hk_Xz8T3hInJbIC7Uo2dVULa3tPAQ4NlsyJC7zc4https://lh6.googleusercontent.com/h7mIWurVSFfBf9_S_8zoNK_ieu7eKHX965i0ivNEZd9NZs2PChMsRXkohvRhiW8DCVrx3Ehg3LgLIil0DbP0HjAVGxg0rhhrFNUoMNNgn94M7Ovi_o1fKg4Tgdl2MTM6z_GphL8https://lh3.googleusercontent.com/BZGeZg4vk5dY1rHNPIcgBFemUhKJRbvNhwe9IeNVLxYvyxvanBFqm33avYTps6qbOx3rH8K6TDLPREHzns_r5xJIrYHdrnaz8r8dazHsku05tIKYY3dH42sgH8ZB8m-qrqpfFqshttps://lh3.googleusercontent.com/9V8iXUNM_rFJHU5tEG0kYvJLYu4eIVCawxdA_ZnjzsSimNec67sb76ffkZSbgVY2J7jLN9XN_u5tRffUg12fUnu5AB6SIT_dYSP6ClukFingm25a_LVzDwWe6HnLxMpFspzJYoA

 

 

https://lh3.googleusercontent.com/2CldeFEcqZbfK-VVLtf5A_cGfPwoh2tkPOMkLsCzD73aqhybugiMS6vDXu9AeW-QMLMW9PMyMkV3IXybucLAO8_IlbC4nfJ4Pt8ON8cL3mmsQtQOM_lwoRzhHeEY6MWpWT5Nzu0https://lh3.googleusercontent.com/YqNNZ9JKsFnHpQ1Tx0xUcZZL-XaxebxlkkmT1gFKmUZRwz44sZ72p4Uv0HcS0A928RRFPw3SA-vwP6_FZotzORbkY62QC8fQSFZl7OrDdHTEBeHENGDQkhG4Iqt5nXHBP-3DrCo https://lh4.googleusercontent.com/SFPW2zKfQAAriH-5zjEzLcqKJoZR8dfYjrz4PJo2l8eL8VPXRqBIhMTHdjTNLxRSzYwTZoflcOlsXxrhkJZ0EbWNZPPzNepgeO22kklvmBVrg9erIX75sfkVFBuVIDo6QI3zXO8https://lh6.googleusercontent.com/t7-C__m5pjz12kMkHb6c3ZJCvxjkDFLa2DStf0CAlMJtoIem3rrMyo6eXGP70mLxxxDWNBTpZJjCbI72yuELmqOkh1iVUy5DvuyAEQ81nQPq9lJ_1dovM5PxszwztTOEBoEo8zE

***


(Release ID: 1718062) Visitor Counter : 223