ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ
ಆಮ್ಲಜನಕ ಸಮರ್ಥ ಭಾರತ ನಿರ್ಮಾಣಕ್ಕೆ ಹೆಜ್ಜೆ ಇಡಲು ಎಂಎಸ್’ಎಂಇ ವಲಯಕ್ಕೆ ಸಿಎಸ್ಐಆರ್-ಸಿಎಂಇಆರ್’ಐ ಆಮ್ಲಜನಕ ಪುಷ್ಟೀಕರಣ ತಂತ್ರಜ್ಞಾನ ಅಳವಡಿಕೆ
Posted On:
04 MAY 2021 7:05PM by PIB Bengaluru
ದೇಶದಲ್ಲಿ ಆಮ್ಲಜನಕ ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನ ಅಳವಡಿಸಿಕೊಳ್ಳುವ ಕುರಿತು ಉದ್ಯಮಿಗಳು ಮತ್ತು ಉದ್ಯಮಶೀಲರಿಗೆ ಜಾಗೃತಿ ಮೂಡಿಸುವ ಸಲುವಾಗಿ ಜೈಪುರದ ಎಂಎಸ್’ಎಂಇ – ಅಭಿವೃದ್ಧಿ ಸಂಸ್ಥೆಯು ಡಿಜಿಟಲ್ ವೇದಿಕೆಯಲ್ಲಿ ಮಾಹಿತಿ ವಿನಿಮಯ ಮತ್ತು ಅರಿವು ಕಾರ್ಯಕ್ರಮ ಆಯೋಜಿಸಿತ್ತು. ಇದಕ್ಕೆ ದುರ್ಗಾಪುರದ ಸಿಎಸ್’ಐಆರ್ - ಸೆಂಟ್ರಲ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ರಿಸರ್ಚ್ ಇನ್’ಸ್ಟಿಟ್ಯೂಟ್ ಕೈಜೋಡಿಸಿತ್ತು.
ಸಿಎಸ್’ಐಆರ್ – ಸಿಎಂಇಆರ್’ಐ ಸಂಸ್ಥೆಯ ನಿರ್ದೇಶಕ ಪ್ರೊಫೆಸರ್ ಡಾ. ಹರೀಶ್ ಹಿರಾನಿ ಅವರು ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ರಾಜಸ್ಥಾನ ಸರಕಾರದ ಕೈಗಾರಿಕಾ ಇಲಾಖೆ ಸಂಸ್ಥೆಯ ಹೆಚ್ಚುವರಿ ನಿರ್ದೇಶಕ ಸಂಜೀವ್ ಸಕ್ಸೇನಾ, ಜೈಪುರದ ಎಂಎಸ್’ಎಂಇ – ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ವಿ.ಕೆ. ಶರ್ಮ, ಸಿಐಡಿಎ ಅಧ್ಯಕ್ಷ ಡಾ. ರೋಹಿತ್ ಜೈನ್ ಮತ್ತು ನಘು ಉದ್ಯೋಗ ಭಾರತಿ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಮಿಶ್ರಾ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರಗಳ ಉದ್ದಿಮೆಗಳ ನೂರಾರು ಉದ್ಯಮಶೀಲರು ಮತ್ತು ಕೈಗಾರಿಕೋದ್ಯಮಿಗಳು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿಎಸ್’ಐಆರ್ – ಸಿಎಂಇಆರ್’ಐ ಸಂಸ್ಥೆಯ ನಿರ್ದೇಶಕ ಪ್ರೊಫೆಸರ್ ಡಾ. ಹರೀಶ್ ಹಿರಾನಿ ಮಾತನಾಡಿ. ಮಾನವನ ಜೀವ ರಕ್ಷಿಸುವ ಸಾಮರ್ಥ್ಯ ಹೊಂದಿರುವ ಆಮ್ಲಜನಕದ ಬಳಕೆ ತೀರಾ ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಆಮ್ಲಜನಕ ಕಾನ್ಸಂಟ್ರೇಟರ್ ಗಳು ಮತ್ತು ದ್ರವೀಕೃತ ಆಮ್ಲಜನಕ ಸಿಲಿಂಡರ್’ಗಳ ಸಮರ್ಪಕ ನಿರ್ವಹಣೆಗೆ ಒತ್ತು ನೀಡಬೇಕು ಎಂದರು.
ಆಮ್ಲಜನಕ ಕಾನ್ಸಂಟ್ರೇಟರ್’ಗಳ ಬಳಕೆ ಮತ್ತು ನಿರ್ವಹಣೆಗೆ ಪರ್ಯಾಯ ಕಾರ್ಯತಂತ್ರಗಳನ್ನು ರೂಪಿಸಿಕೊಂಡರೆ ಕೋವಿಡ್ ಸಾಂಕ್ರಾಮಿಕ ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡಲು ಸಹಾಯಕವಾಗಲಿದೆ. ಸಿಎಸ್ಐಆರ್-ಸಿಎಂಇಆರ್’ಐ ಸಂಸ್ಥೆ ಎಂಎಸ್’ಎಂಇ ವಲಯದ ಹೆಚ್ಚಿನ ಸಂಖ್ಯೆಯ ಉದ್ಯಮಶೀಲರನ್ನು ಉದ್ಯಮಶೀಲರನ್ನು ಒಂದು ಜಾಲಕ್ಕೆ ತಂದು, ಬೃಹತ್ ಪ್ರಮಾಣದಲ್ಲಿ ಆಮ್ಲಜನಕ ಉತ್ಪಾದನೆಗೆ ಅವರಿಗೆ ಅವಕಾಶ ಕಲ್ಪಿಸಿದರೆ, ಆಮ್ಲಜನಕಕ್ಕೆ ಎದುರಾಗಿರುವ ಬೃಹತ್ ಬೇಡಿಕೆಯನ್ನು ತ್ವರಿತವಾಗಿ ಪೂರೈಸಲು ಸಾಧ್ಯ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ಅಗತ್ಯ ಎಂದರು.
ಕೆಲವು ಎಂಎಸ್’ಎಂಇ ಘಟಕಗಳು ಈಗಾಗಲೇ ಕಂಪ್ರೆಸ್ಸರ್, ಅನಲೈಸರ್ಸ್, ಉತ್ಪಾದನಾ ಸಾಮರ್ಥ್ಯ ಮತ್ತಿತರ ಸಂಪನ್ಮೂಲಗಳಲ್ಲಿ ಸಾಮರ್ಥ್ಯ ಹೊಂದಿವೆ. ಈ ಎಲ್ಲಾ ಘಟಕಗಳನ್ನು ಒಂದು ಜಾಲಕ್ಕೆ ತರುವ ಕೆಲಸ ಆಗಬೇಕು. ಜತೆಗೆ, ಆಮ್ಲಜನಕ ಉತ್ಪಾದನೆಯ ಸಾಮರ್ಥ್ಯ ಹೊಂದಿರುವ ಉದ್ಯಮಶೀಲರು ಸಕಾಲದಲ್ಲಿ ಉತ್ಪಾದನೆ ಪ್ರಕ್ರಿಯೆ ಆರಂಭಿಸಲು ಮುಂದೆ ಬರುವ ಅಗತ್ಯವಿದೆ. ಸಾರ್ವಜನಿಕ ವಲಯದ ಕಂಪನಿಯೊಂದು ದೇಶದಲ್ಲಿ ಸೃಷ್ಟಿಯಾಗಿರುವ ಆಮ್ಲಜನಕ ಬೇಡಿಕೆ ಪೂರಯಸುವ ಸಲುವಾಗಿ ಈಗಾಗಲೇ ಒಂದು ಲಕ್ಷ ಆಮ್ಲಜನಕ ಕಾನ್ಸಂಟ್ರೇಟರ್’ಗಳ ಉತ್ಪಾದನೆಗೆ ಟೆಂಡರ್ ಕರೆದಿದೆ ಎಂದು ತಿಳಿಸಿದರು.
ಆಮ್ಲಜನಕ ಸಿಲಿಂಡರ್’ಗಳಿಗೆ ಹೋಲಿಸಿದರೆ, ಆಮ್ಲಜನಕ ಪುಷ್ಟೀಕರಣ ಘಟಕಗಳು ಆಮ್ಲಜನಕ ಉಳಿತಾಯಕ್ಕೆ ಸಹಾಯಕವಾಗಿವೆ. ಆದರೆ, ಕೆಲವೊಮ್ಮೆ ಸಿಲಿಂಡರ್ಗಳಲ್ಲಿ ಬಳಸುವ ಆಮ್ಲಜನಕದ ಅಧಿಕ ಹರಿವು ಕೆಲವೊಮ್ಮೆ ಮನುಷ್ಯನಿಗೆ ನಂಜು (ವಿಷಾನಿಲ) ಉಂಟುಮಾಡಬಹುದು, ಅದು ಮನುಷ್ಯನಿಗೆ ತುಂಬಾ ಹಾನಿಕಾರಕ. ಆಮ್ಲಜನಕ ಪುಷ್ಟೀಕರಣ ಘಟಕಗಳ ಸಮರ್ಪಕ ನಿರ್ವಹಣೆ, ತರಬೇತಾದ ತಾಂತ್ರಿಕ ಸಿಬ್ಬಂದಿ ಕೂಡ ಅತ್ಯಗತ್ಯ. ಈ ನಿಟ್ಟಿನಲ್ಲಿ ಸಿಎಸ್ಐಆರ್-ಸಿಎಂಇಆರ್’ಐ ಸಂಸ್ಥೆಯು ತಾಂತ್ರಿಕ ಸಿಬ್ಬಂದಿಗೆ ಕೌಶಲ್ಯ ಒದಗಿಸಲು ನೆರವಾಗಬಹುದು. ಸಿಎಸ್ಐಆರ್-ಸಿಎಂಇಆರ್’ಐ ಸಂಸ್ಥೆ ಈಗಾಗಲೇ ನಾಲ್ಕು ಎಂಎಸ್’ಎಂಇಗಳಿಗೆ ತಂತ್ರಜ್ಞಾನ ವರ್ಗಾವಣೆ ಮಾಡಿದೆ. ಜತೆಗೆ, ಇನ್ನೂ ಮೂರ್ನಾಲ್ಕು ಕಂಪನಿಗಳಿಗೆ ಅತಿ ಶೀಘ್ರವೇ ಇದೇ ತಂತ್ರಜ್ಞಾನವನ್ನು ಒದಗಿಸಲಿದೆ. ಈ ಘಟಕಗಳ ಪೈಕಿ ಕೆಲವು ಇದೇ ತಿಂಗಳ 2ನೇ ವಾರದಲ್ಲಿ ಉತ್ಪಾದನೆ ಆರಂಭಿಸಲಿವೆ ಎಂದರು.
ರಾಜಸ್ತಾನ ಸರಕಾರದ ಕೈಗಾರಿಕಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಸಂಜೀವ್ ಸಕ್ಸೇನಾ ಮಾತನಾಡಿ, ದೇಶದಲ್ಲಿ ಆಮ್ಲಜನಕ ಉತ್ಪಾದನೆ ಹೆಚ್ಚಿಸಲು ಸಿಎಸ್ಐಆರ್-ಸಿಎಂಇಆರ್’ಐ ಸಂಸ್ಥೆ ನಡೆಸುತ್ತಿರುವ ನಾನಾ ಪ್ರಯತ್ನಗಳು ಶ್ಲಾಘನೀಯ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಗತ್ಯವಿರುವ ಜನರಿಗೆ ಮತ್ತು ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಸಲು ನಿರಂತರ ಕಾರ್ಯೋನ್ಮುಖವಾಗಿವೆ. ಕೆಲವೆಡೆ ದೇಶದ ಸೇನಾಪಡೆಗಳು ಸಹ ಮುಚ್ಚಿರುವ ಆಮ್ಲಜನಕ ಉತ್ಪಾದನಾ ಘಟಕಗಳ ಪುನಶ್ಚೇತನಕ್ಕೆ ಕೆಲಸ ಮಾಡುತ್ತಿವೆ. ಆಮ್ಲಜನಕ ಕೊರತೆ ನೀಗಿಸುವ ಹೋರಾಟಕ್ಕೆ ಕೇಂದ್ರ ಸರಕಾರ ಸಹ ಅನುದಾನ ಒದಗಿಸುತ್ತಿದೆ. ಎಂಎಸ್’ಎಂಇ ಘಟಕಗಳು ಸಿಎಸ್ಐಆರ್-ಸಿಎಂಇಆರ್’ಐ ಸಂಸ್ಥೆಯ ತಂತ್ರಜ್ಞಾನ ಪ್ರಯೋಜನಗಳನ್ನು ಪಡೆದು, ಆಮ್ಲಜನಕ ಉತ್ಪಾದನಾ ಘಟಕಗಳನ್ನು ಕೂಡಲೇ ಆರಂಭಿಸಬೇಕು. ದೇಶದಲ್ಲಿ ಎದುರಾಗಿರುವ ಆಮ್ಲಜನಕ ಕೊರತೆಯನ್ನು ನೀಗಿಸಲು ಈ ಘಟಕಗಳು ಮುಂದಾಗಿ, ಸರಕಾರದ ಮಾರ್ಗಸೂಚಿಯಂತೆ ಸಬ್ಸಿಡಿ ಮತ್ತು ಹಣಕಾಸಿನ ನೆರವು ಪಡೆಯಬೇಕು. ರಾಜಸ್ತಾನ ಸರಕಾರವು ನಿವೇಶ್ ಪ್ರೋತ್ಸಾಹನ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಅಡಿ ಎಂಎಸ್’ಎಂಇ ಘಟಕಗಳು 2021 ಸೆಪ್ಟೆಂಬರ್ 30ರ ತನಕ ಹಣಕಾಸಿನ ನೆರವು ಪಡೆಯಬಹುದು ಎಂದರು.
ಜೈಪುರದ ಎಂಎಸ್’ಎಂಇ – ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ವಿ.ಕೆ. ಶರ್ಮ ಮಾತನಾಡಿ. ಪ್ರೊಫೆಸರ್ ಹಿರಾನಿ ಅವರು ಆಮ್ಲಜನಕ ಬಿಕ್ಕಟ್ಟು ನಿವಾರಣೆಗೆ ನೀಡಿದ ಸಲಹೆ, ಸೂಚನೆಗಳು ಸೂಕ್ತವಾಗಿವೆ. ನಾನು ಸಹ ದ್ರವೀಕೃತ ಆಮ್ಲಜನಕ ಸಿಲಿಂಡರ್’ಗಳನ್ನು ಮಾರಾಟ ಮಾಡಲು ಎದುರಾಗುವ ಸಮಸ್ಯೆಗಳನ್ನು ಅನುಭವಿಸಿದ್ದೇನೆ. ಸೌರಶಕ್ತಿ ಬಳಸಿ ದ್ರವೀಕೃತ ಆಮ್ಲಜನಕ ಉತ್ಪಾದನೆ ಮಾಡಿದರೆ, ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದರು. ಜೈಪುರದ ಎಂಎಸ್’ಎಂಇ – ಅಭಿವೃದ್ಧಿ ಸಂಸ್ಥೆಯು ಎಂಎಸ್’ಎಂಇ ವಲಯದ ಎಲ್ಲಾ ಉದ್ಯಮಶೀಲರ ಜತೆಗಿದೆ. ಆಮ್ಲಜನಕ ಉತ್ಪಾದನೆ ಹೆಚ್ಚಿಸುವ ಅವರ ಎಲ್ಲಾ ಪ್ರಯತ್ನಗಳಿಗೆ ಬೆಂಬಲ ನೀಡಲಾಗುವುದು ಎಂದು ತಿಳಿಸಿದರು.
ಸಿಐಡಿಎ ಅಧ್ಯಕ್ಷ ಡಾ. ರೋಹಿತ್ ಜೈನ್ ಮಾತನಾಡಿ, ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕಿನ ಕಾಲಘಟ್ಟದಲ್ಲಿ ಎದುರಾಗಿರುವ ಆಮ್ಲಜನಕದ ಬೇಡಿಕೆ ಮತ್ತು ಪೂರೈಕೆ ನಡುವಿನ ಅಂತರವನ್ನು ಸರಿದೂಗಿಸಲು ಸಿಎಸ್ಐಆರ್-ಸಿಎಂಇಆರ್’ಐ ಸಂಸ್ಥೆಯ ತಂತ್ರಜ್ಞಾನವು ಎಂಎಸ್’ಎಂಇ ವಲಯಕ್ಕೆ ಮೈಲುಗಲ್ಲಾಗಲಿದೆ. ಈ ನಿಟ್ಟಿನಲ್ಲಿ ಎಂಎಸ್’ಎಂಇ ಉದ್ಯಮಶೀಲರು ಈ ತಂತ್ರಜ್ಞಾನದ ಪ್ರಯೋಜನ ಪಡೆದರೆ, ಅದು ಉತ್ತಮ ಅವಕಾಶವಾಗಿ ಪರಿವರ್ತನೆ ಆಗಲಿದೆ ಎಂದು ಸಲಹೆ ನೀಡಿದರು.
ಜಾಗೃತಿ ಕಾರ್ಯಕ್ರಮ ಬಹಳ ಸಂವಾದಾತ್ಮಕವಾಗಿತ್ತು. ಎಂಎಸ್’ಎಂಇ ಮತ್ತು ನವೋದ್ಯಗಳ ಉದ್ಯಮಶೀಲರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಿಎಸ್ಐಆರ್-ಸಿಎಂಇಆರ್’ಐ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕಾನ್ಸಂಟ್ರೇಟರ್ ಬಗ್ಗೆ ಅತೀವ ಆಸಕ್ತಿ ತೋರಿದರು. ಅಲ್ಲದೆ, ಅವರು ತಂತ್ರಜ್ಞಾನ, ತಂತ್ರಜ್ಞಾನ ವರ್ಗಾವಣೆಯ ವಿಧಿವಿಧಾನದ ಸಂಪೂರ್ಣ ಮಾಹಿತಿ ಪಡೆಯಲು ಕಾತರರಾಗಿದ್ದಾರೆ. ತಂತ್ರಜ್ಞಾನ ವರ್ಗಾವಣೆಯ ಶುಲ್ಕ, ವೆಚ್ಚ, ಬಂಡವಾಳ ಮತ್ತು ಉತ್ಪಾದನೆ ಆರಂಭಕ್ಕೆ ಹಣಕಾಸು ಅಗತ್ಯ, ತಂತ್ರಜ್ಞಾನ ಪರೀಕ್ಷೆಗೆ ಇರುವ ಶಾಸನಬದ್ಧ ಅಗತ್ಯಗಳು, ಫ್ಯಾಬ್ರಿಕೇಷನ್ ಆರಂಭಿಸುವ ವಿಧಿವಿಧಾನಗಳು, ಕೈಗಾರಿಕೆಗಳಿಗೆ ಆಮ್ಲಜನಕ ಬಳಕೆ ವಿಧಾನ, ಕಾನ್ಸಂಟ್ರೇಟರ್ ಘಟಕಗಳ ಆರಂಭಕ್ಕೆ ಇರುವ ಅಗತ್ಯಗಳು ಇತ್ಯಾದಿ ವಿಷಯಗಳ ಬಗ್ಗೆ ಕಾರ್ಯಕ್ರಮದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದರು.
***
(Release ID: 1716206)
Visitor Counter : 255