ಪ್ರಧಾನ ಮಂತ್ರಿಯವರ ಕಛೇರಿ

ಉನ್ನತಾಧಿಕಾರ ಸಮಿತಿಗಳೊಂದಿಗೆ ಸಭೆ ನಡೆಸಿ, ಕೋವಿಡ್ ಸಂಬಂಧಿ ಸ್ಥಿತಿಗತಿ ಕುರಿತು ಪರಾಮರ್ಶಿಸಿದ ಪ್ರಧಾನಮಂತ್ರಿ

Posted On: 30 APR 2021 8:45PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೋವಿಡ್ ಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವ ನಾನಾ ಉನ್ನತಾಧಿಕಾರ ಸಮಿತಿಗಳ ಕಾರ್ಯವೈಖರಿ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಪರಿಶೀಲನಾ ಸಭೆ ನಡೆಯಿತು.

        ಆರ್ಥಿಕ ಮತ್ತು ಕಲ್ಯಾಣ ಕ್ರಮಗಳ ಕುರಿತ ಉನ್ನತಾಧಿಕಾರ ಸಮಿತಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ವಿಸ್ತರಣೆ ಸೇರಿದಂತೆ ಈವರೆಗೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಧಾನಮಂತ್ರಿಗಳಿಗೆ ವಿವರಿಸಿತು. ಅಲ್ಲದೆ ಒಂದು ರಾಷ್ಟ್ರ, ಒಂದು ಪಡಿತರ ಚೀಟಿ ಉಪಕ್ರಮದಡಿ ಪೋರ್ಟಬಲಿಟಿ ಒದಗಿಸುವುದರಿಂದ ಹೆಚ್ಚಿನ ಜನರಿಗೆ ಅನುಕೂಲವಾಗಿದೆ ಎಂಬ ಕುರಿತು ಚರ್ಚೆ ನಡೆಸಲಾಯಿತು. ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಒದಗಿಸಲಾಗಿದ್ದ ವಿಮಾ ಯೋಜನೆಯನ್ನು ಮತ್ತೆ ಆರು ತಿಂಗಳು ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರ, ರಾಜ್ಯಗಳ ಜೊತೆ ನಿಕಟ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬಡವರು ಯಾವುದೇ ಸಮಸ್ಯೆ ಇಲ್ಲದೆ ಉಚಿತ ಆಹಾರಧಾನ್ಯಗಳ ಪ್ರಯೋಜನವನ್ನು ಪಡೆಯುವುದನ್ನು ಖಾತ್ರಿಪಡಿಸಬೇಕು ಎಂದು ಪ್ರಧಾನಮಂತ್ರಿ ನಿರ್ದೇಶಿಸಿದರು. ಅಲ್ಲದೆ ಪ್ರಧಾನಿ ಅವರು, ಬಾಕಿ ಇರುವ ವಿಮಾ ಕ್ಲೇಮುಗಳ ಇತ್ಯರ್ಥಕ್ಕೆ ಕ್ರಮಗಳನ್ನು ತ್ವರಿತಗೊಳಿಸಬೇಕು. ಆ ಮೂಲಕ ಮೃತರ ಅವಲಂಬಿತರು ಸಕಾಲದಲ್ಲಿ ಪ್ರಯೋಜನ ಪಡೆಯುವಂತಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು.

          ಪೂರೈಕೆ ಸರಣಿ ಮತ್ತು ಸಾರಿಗೆ ನಿರ್ವಹಣೆ ಕುರಿತ ಉನ್ನತಾಧಿಕಾರ ಸಮಿತಿ ಸಾಂಕ್ರಾಮಿಕ ನಿಯಂತ್ರಣಕ್ಕೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಹಲವು ಸಲಹೆಗಳನ್ನು ನೀಡಿತು. ಯಾವುದೇ ಅಡೆತಡೆ ಇಲ್ಲದೆ ಸರಕುಗಳ ಸಾಗಣೆಯನ್ನು ಖಾತ್ರಿಪಡಿಸಲು ಸಮಗ್ರ ಯೋಜನೆಯನ್ನು ರೂಪಿಸಬೇಕು, ಆ ಮೂಲಕ ಪೂರೈಕೆ ಸರಣಿಗೆ ಯಾವುದೇ ಅಡೆತಡೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ನಿರ್ದೇಶಿಸಿದರು.

          ಖಾಸಗಿ ವಲಯ, ಸರ್ಕಾರೇತರ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆ ಸಮನ್ವಯದ ಕುರಿತಾದ ಉನ್ನತಾಧಿಕಾರ ಸಮಿತಿ ಹೇಗೆ ಸರ್ಕಾರ ಖಾಸಗಿ ವಲಯ, ಸರ್ಕಾರೇತರ ಸಂಸ್ಥೆಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ಸಕ್ರಿಯ ಪಾಲುದಾರಿಕೆಯೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರಿಗೆ ವಿವರಿಸಿತು. ಪ್ರಧಾನಮಂತ್ರಿ ಅವರು ಆರೋಗ್ಯ ವಲಯದ ಮೇಲಿರುವ ಒತ್ತಡವನ್ನು ತಗ್ಗಿಸಲು ನಾಗರಿಕ ಸಮಾಜದ ಸ್ವಯಂ ಸೇವಕರನ್ನು ಹೇಗೆ ಬಳಸಿಕೊಳ್ಳಬೇಕು. ಅವರನ್ನು ಪರಿಣತಿ ಅಗತ್ಯವಿಲ್ಲದ ಕಾರ್ಯಗಳಿಗೆ ಹೇಗೆ ನಿಯೋಜಿಸಬೇಕು ಎಂಬ ಬಗ್ಗೆ ಅವಕಾಶಗಳನ್ನು ಹುಡುಕುವಂತೆ ಪ್ರಧಾನಮಂತ್ರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ರೋಗಿಗಳು, ಅವರ ಅವಲಂಬಿತರು ಮತ್ತು ಆರೋಗ್ಯ ರಕ್ಷಣಾ ಸಿಬ್ಬಂದಿಯ ಜೊತೆ ಸಂವಹನ ಮಾರ್ಗವನ್ನು ಸ್ಥಾಪಿಸಲು ಮತ್ತು ಅದನ್ನು ನಿರ್ವಹಿಸಲು ಸರ್ಕಾರೇತರ ಸಂಸ್ಥೆಗಳು ನೆರವು ನೀಡಬಹುದು ಎಂಬ ಬಗ್ಗೆ ಚರ್ಚಿಸಲಾಯಿತು. ಗೃಹ  ಕ್ವಾರಂಟೈನ್ ನಲ್ಲಿರುವ ಜನರೊಂದಿಗೆ ಸಂವಹನ ನಡೆಸಲು ಕಾಲ್ ಸೆಂಟರ್ ಗಳ ನಿರ್ವಹಣೆಗೆ ನಿವೃತ್ತ ಯೋಧರನ್ನು ನಿಯೋಜಿಸಲು ಉತ್ತೇಜಿಸಬಹುದು.  

****(Release ID: 1715240) Visitor Counter : 12