ಚುನಾವಣಾ ಆಯೋಗ

ಪಶ್ಚಿಮ ಬಂಗಾಳದ 35 ವಿಧಾನಸಭಾ ಕ್ಷೇತ್ರಗಳಲ್ಲಿ ಕೊನೆಯ ಚರಣದಲ್ಲಿ 11,860 ಮತಕೇಂದ್ರಗಳಲ್ಲಿ ಶಾಂತಿಯುತ ಮತದಾನ ಸಂಪನ್ನ – 5- ಸೀತಾಲ್ಕುಚಿ (ಎಸ್.ಸಿ.) ವಿಧಾನಸಭಾ ಕ್ಷೇತ್ರದ ಅಮ್ತಾಲಿ ಮಾಧ್ಯಮಿಕ ಶಿಕ್ಷಾ ಕೇಂದ್ರದ ಮತಗಟ್ಟೆಯಲ್ಲೂ ಇಂದು ಮರು ಮತದಾನ


ಕಠಿಣ ಮುನ್ನೆಚ್ಚರಿಕಾ ಕ್ರಮ ಮತ್ತು ಸಕಾಲದಲ್ಲಿ ಬಾಂಬುಗಳು ಮತ್ತು ಶಸ್ತ್ರಾಸ್ತ್ರಗಳ ವಶದಿಂದ ಖಾತ್ರಿಯಾದ ಹಿಂಸಾಚಾರ ಮುಕ್ತ, ಶಾಂತಿಯುತ ಚುನಾವಣೆ

ಎಲ್ಲ ಮತಗಟ್ಟೆಗಳಲ್ಲೂ ಮತದಾರರಿಂದ ಕೋವಿಡ್ ಶಿಷ್ಟಾಚಾರದ ಪಾಲನೆ

ಪಶ್ಚಿಮ ಬಂಗಾಳದ 8ನೇ ಹಂತದ ಚುನಾವಣೆಯಲ್ಲಿ (ಸಂಜೆ 5 ಗಂಟೆ ವರೆಗೆ) ಶೇ.76.07ರಷ್ಟು ಮತದಾನ

ಕೋವಿಡ್ ಶಿಷ್ಟಾಚಾರ ಉಲ್ಲಂಘಿಸುವವರ ವಿರುದ್ಧ ಅಸ್ತಿತ್ವದಲ್ಲಿರುವ ನಿಯಮಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲು ಮತ್ತು ಮತ ಎಣಿಕೆ ಸಿದ್ಧತೆಗೆ ಅನುಸರಿಸಬೇಕಾದ ಕ್ರಮಗಳ ಕುರಿತಂತೆ  ಜಿಲ್ಲಾ ಪ್ರಾಧಿಕಾರಗಳಿಗೆ ಸವಿವರವಾದ ಸೂಚನೆ ನೀಡಿದ ಭಾರತೀಯ ಚುನಾವಣಾ ಆಯೋಗ

Posted On: 29 APR 2021 6:36PM by PIB Bengaluru

ಪಶ್ಚಿಮ ಬಂಗಾಳದಲ್ಲಿ ಕೊನೆಯ ಚರಣದಲ್ಲಿ 35 ವಿಧಾನಸಭಾ ಕ್ಷೇತ್ರಗಳಲ್ಲಿನ 11,860 ಮತಕೇಂದ್ರಗಳಾದ್ಯಂತ ಇಂದು ಶಾಂತಿಯುತವಾಗಿ ಮತದಾನ ಸಂಪನ್ನವಾಯಿತು. ಎಲ್ಲ ಮತದಾರರೂ ಕೋವಿಡ್ ಶಿಷ್ಟಾಚಾರ ಪಾಲಿಸುತ್ತಾ ಅಂದರೆ, ನೈರ್ಮಲ್ಯೀಕರಣ ಮತ್ತು ವ್ಯಕ್ತಿಗತ ಅಂತರ ಕಾಯ್ದುಕೊಂಡು ಉತ್ಸಾಹದಿಂದ ಪಾಲ್ಗೊಂಡರು. ಸಂಜೆ 5ಗಂಟೆಯವರೆಗಿನ ಮಾಹಿತಿಯಂತೆ ಕೊನೆಯ ಚರಣದಲ್ಲಿಂದು ಶೇ.76.07ರಷ್ಟು ಮತದಾನವಾಗಿದೆ.

ಆಯೋಗವು ಹಿಂಸಾಚಾರ ಮುಕ್ತ ಮತ್ತು ಸುರಕ್ಷಿತವಾಗಿ ಚುನಾವಣೆ ನಡೆಸಲು ವ್ಯಾಪಕ ಭದ್ರತಾ ಯೋಜನೆ ರೂಪಿಸಿತ್ತು. ಶಾಂತಿಯುತ, ಭಯಮುಕ್ತ ಮತ್ತು ಶಾಂತಿಯುತ ವಾತಾವರಣದಲ್ಲಿ ಸುಗಮವಾಗಿ ಮುಕ್ತ, ನ್ಯಾಯಸಮ್ಮತ, ಅಂತರ್ಗತ ಹಾಗೂ ಸುಗಮ ಮಾರ್ಗದಲ್ಲಿ ಚುನಾವಣೆ ನಡೆಸಲು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು (ಸಿಎಪಿಎಫ್) ಜೊತೆಗೆ ಸ್ಥಳೀಯ ಪೊಲೀಸರನ್ನೂ ನಿಯೋಜಿಸಲಾಗಿತ್ತು

ಕೋಷ್ಟಕ 1 : ಪಶ್ಚಿಮ ಬಂಗಾಳ ವಾಸ್ತವ ಚಿತ್ರಣ

ರಾಜ್ಯ

ಹಂತ 1

ಹಂತ 2

ಹಂತ 3

ಹಂತ 4

ಹಂತ 5

ಹಂತ 6

ಹಂತ 7

 ಹಂತ 8

8ನೇ ಹಂತದವರೆಗೆ ಒಟ್ಟು

ವಿಧಾನಸಭಾ ಕ್ಷೇತ್ರಗಳು

30

30

31

44

45

43

34

35

292

ಮತಕೇಂದ್ರಗಳ ಸಂಖ್ಯೆ

10,288

10,620

10,871

15,940

15,789

14,480

11,376

11,860

101224

ನೋಂದಾಯಿತ ಮತದಾರರು

7380942

7594549

7852425

11581022

11347344

10387791

8188907

8478274

72811254

ಕಣದಲ್ಲಿದ್ದ ಒಟ್ಟು ಅಭ್ಯರ್ಥಿಗಳು

191

171

205

373

319

306

268

283

2116

ನಿಯೋಜಿತರಾಗಿದ್ದ ಸಾಮಾನ್ಯ ವೀಕ್ಷಕರ ಸಂಖ್ಯೆ

20

23

22

35

33

26

26

24

209

ನಿಯೋಜಿತರಾಗಿದ್ದ ಪೊಲೀಸ್ ವೀಕ್ಷಕರ ಸಂಖ್ಯೆ

7

6

9

9

12

13

10

9

75

ನಿಯೋಜಿತರಾಗಿದ್ದ ವೆಚ್ಚ ವೀಕ್ಷಕರ ಸಂಖ್ಯೆ

9

9

9

10

16

13

9

10

85

ಶೇಕಡಾವಾರ ಮತದಾನ

84.63

(ಅಂತಿಮ ವಿಟಿಆರ್)

86.11

(ಅಂತಿಮ ವಿಟಿಆರ್)

84.61

(ಅಂತಿಮ ವಿಟಿಆರ್)

79.90

(ಅಂತಿಮ ವಿಟಿಆರ್)

82.49

(ಅಂತಿಮ ವಿಟಿಆರ್)

82

(ಅಂತಿಮ ವಿಟಿಆರ್)

76.90

(ಅಂತಿಮ ವಿಟಿಆರ್)

76.07

(ಸಂಜೆ 5 ಗಂಟೆ ವರೆಗೆ)

 

 

 

 

 

 

 

 

 

 

 

 

 

 

 

 

 

 

 

 

 

 

ಆಯೋಗವು  ಅನಗತ್ಯ ಹಣ ಬಲ, ಮದ್ಯ, ಉಚಿತ ಕೊಡುಗೆಗಳ ಆಮಿಷವನ್ನು ತಡೆಯುವ ಪ್ರಚೋದನೆರಹಿತ ಚುನಾವಣೆಗಳಿಗೆ ನಿರ್ದಿಷ್ಟ ಒತ್ತು ನೀಡಿತ್ತು. ಪಶ್ಚಿಮ ಬಂಗಾಳದಲ್ಲಿ ಹಂತದವರೆಗೆ ನಡೆದಿರುವ ಚುನಾವಣೆಯ ಸಮಯದಲ್ಲಿ, ಇಲ್ಲಿಯವರೆಗೆ ದಾಖಲೆಯ 339.45 ಕೋಟಿ ರೂ. ಜಪ್ತಿ ಮಾಡಿರುವುದಾಗಿ ವರದಿಯಾಗಿದೆ.

ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಎಂಟನೇ ಹಂತದಲ್ಲಿ ಒಟ್ಟು ಪಿಡಬ್ಲ್ಯುಡಿ ಮತದಾರರು ಮತ್ತು 80+ ವಯಸ್ಸಿನ ಮತದಾರರ ಅನುಕ್ರಮವಾಗಿ 72,094 ಮತ್ತು 1,12,440 ಇದ್ದರು11,860 ಮತಪತ್ರ ಘಟಕಗಳು (ಬಿಯುಗಳು), 11,860 ನಿಯಂತ್ರಣ ಘಟಕಗಳು (ಸಿಯುಗಳು) ಮತ್ತು 11 860 ವಿವಿ ಪ್ಯಾಟ್ ಗಳನ್ನು ಪಶ್ಚಿಮ ಬಂಗಾಳದ ಚುನಾವಣೆಯ ಹಂತದಲ್ಲಿ ಬಳಸಲಾಯಿತು. 11,860 ಮತಕೇಂದ್ರಗಳ ಪೈಕಿ 6074 (ಶೇ.51.21) ಮತಕೇಂದ್ರಗಳ ಮೇಲೆ ವೆಬ್ ಕ್ಯಾಸ್ಟಿಂಗ್ ಮೂಲಕ ನಿಗಾ ವಹಿಸಲಾಗಿತ್ತು.

ಪಶ್ಚಿಮ ಬಂಗಾಳ ಚುನಾವಣೆಯ ಮತದಾರರು, ಮತಕೇಂದ್ರಗಳು ಮತ್ತು ವೀಕ್ಷಕರ ವಿವರ ಕೆಳಕಂಡಂತಿದೆ:

*ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 294. ಆಗಾಗ್ಯೂ, 2021 ಏಪ್ರಿಲ್ 10ರಂದು ನಡೆದ ಘಟನೆ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದ್ದ ಸೀತಾಲ್ಕುಚಿ ವಿಧಾನಸಭಾ ಕ್ಷೇತ್ರದ ಅಮ್ತಾಲಿ ಮಾಧ್ಯಮಿಕ ಶಿಕ್ಷಾ ಕೇಂದ್ರದ ಮತಗಟ್ಟೆಯಲ್ಲೂ ಇಂದು ಮತದಾನ. ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ ಕಣದಲ್ಲಿದ್ದ ಅಭ್ಯರ್ಥಿಯ ಸಾವಿನಿಂದಾಗಿ 56 - ಸಂಸರ್ಗಂಜ್, 58 - ಜಂಗೀಪುರ ಎರಡು ವಿಧಾನಸಭಾ ಕ್ಷೇತ್ರಗಳ ಚುನಾವಣೆಯನ್ನು ಮುಂದೂಡಲಾಗಿದೆ.

ಅಂತರ್ಗತ ಮತ್ತು ಸುಗಮ ಚುನಾವಣೆಗಳನ್ನು ಖಾತ್ರಿಪಡಿಸಲು, ಆಯೋಗವು ಪಿಡಬ್ಲ್ಯುಡಿಗಳು, 80 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ಕೋವಿಡ್ -19 ಶಂಕಿತ ಅಥವಾ ಸೋಂಕಿತ ವ್ಯಕ್ತಿಗಳು ಮತ್ತು ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಅಂಚೆ ಮತಪತ್ರ ಸೌಲಭ್ಯದ ಆಯ್ಕೆಯನ್ನು ವಿಸ್ತರಿಸಿತ್ತು. ಮತದಾರರಿಗೆ ಅನುಕೂಲವಾಗುವಂತೆ ಸರಿಯಾದ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಕ್ಷೇತ್ರ ಮಟ್ಟದ ವೀಕ್ಷಕರು ನೋಡಿಕೊಂಡರು.

ಎಲ್ಲ ಮತಗಟ್ಟೆಗಲ್ಲಿಯೂ ಕನಿಷ್ಠ ಸೌಲಭ್ಯದ ಖಾತ್ರಿ (.ಎಂ.ಎಫ್) ಅಂದರೆ ಕುಡಿಯುವ ನೀರು, ನೆರಳು, ನೀರಿನ ಸೌಲಭ್ಯ ಸಹಿತ ಶೌಚಾಲಯ, ಸೂಕ್ತ ಬೆಳಕು, ಪಿಡಬ್ಲ್ಯುಡಿ ಮತದಾರರು ಗಾಲಿ ಕುರ್ಚಿಯ ಓಡಾಟಕ್ಕಾಗಿ ಇಳಿಜಾರು ರಸ್ತೆ ಮತ್ತು ಮಾನದಂತದ ಮತದಾನದ ಅಂಶಗಳು ಎಲ್ಲ ಮತಕೇಂದ್ರಗಳಲ್ಲೂ ಲಭ್ಯವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು.

ಸಾರಿಗೆ ಸೌಲಭ್ಯ, ಅಂಗವಿಕಲರಿಗೆ ಮತ್ತು ಹಿರಿಯ ನಾಗರಿಕರಿಗೆ ಸಹಾಯ ಮಾಡುವ ಸ್ವಯಂಸೇವಕರು ಮತ ಕೇಂದ್ರಗಳಲ್ಲಿ ಉಪಸ್ಥಿತರಿದ್ದರು. ಮತದಾರರ ಮತ್ತು ಚುನಾವಣಾ ಅಧಿಕಾರಿಗಳ ಸುರಕ್ಷತೆಗಾಗಿ ಮತದಾನಕ್ಕೆ ಒಂದು ದಿನ ಮೊದಲು ಮತ ಕೇಂದ್ರಗಳ ನಿರ್ಮಲೀಕರಣಗೊಳಿಸಲಾಗಿದೆ ಎಂಬುದನ್ನು ಖಚಿತಪಡಿಸಲಾಯಿತು, ಥರ್ಮಲ್ ಸ್ಕ್ಯಾನಿಂಗ್, ಕರ ನೈರ್ಮಲ್ಯಕ, ಮುಖ ಗವಸುಗಳನ್ನು ಮತ ಕೇಂದ್ರಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿತ್ತು. ವ್ಯಕ್ತಿಗತ ಅಂತರದ ಸೂಕ್ತ ವ್ಯವಸ್ಥೆಗಳನ್ನು ಜಾರಿಗೆ ತರಲಾಗಿತ್ತು.

ಕೋಷ್ಟಕ 3 : ಪಶ್ಚಿಮ ಬಂಗಾಳದಲ್ಲಿ ಪಿಡಬ್ಲ್ಯುಡಿ ಮತ್ತು  80+ ಮತದಾರರ ಸಂಖ್ಯೆ

ರಾಜ್ಯ

ಹಂತ 1

ಹಂತ 2

ಹಂತ 3

ಹಂತ 4

ಹಂತ 5

ಹಂತ 6

ಹಂತ 7

 ಹಂತ 8

8ನೇ ಹಂತದವರೆಗೆ ಒಟ್ಟು

ಪಿಡಬ್ಲ್ಯುಡಿ ಮತದಾರರ ಸಂಖ್ಯೆ

40,408

54,765

64,083

50,523

60,198

64,266

50,919

72,094

4,57,256

80+ ವಯಸ್ಸಿನ ಮತದಾರರ ಒಟ್ಟು ಸಂಖ್ಯೆ

1,23,393

1,18,116

1,26,177

2,03,927

1,79,634

1,57,290

1,01,689

1,12,440

11,22,666

ಕೊರೋನಾ ವೈರಾಣು ಪ್ರಸರಣ ತಡೆಯಲು ಎಲ್ಲ ಮತಕೇಂದ್ರಗಳಲ್ಲೂ ಕೋವಿಡ್ 19 ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಲಾಯಿತು, ಚುನಾವಣಾ ಆಯೋಗ ಪ್ರಚಾರದ ಸಮಯವನ್ನು ತಗ್ಗಿಸಲು ಸಂವಿಧಾನದ ವಿಧಿ 324 ಅಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿತ್ತು. ಆಯೋಗವು ಈಗಾಗಲೇ ಮಂಜೂರು ಮಾಡಲಾಗಿದ್ದ ರೋಡ್ ಶೋಗಳು, ಪಾದಯಾತ್ರೆ, ಸೈಕಲ್/ಬೈಕ್/ವಾಹನ ರಾಲಿ, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುತ್ತಾ ಒಂದು ಸ್ಥಳದಲ್ಲಿ 500ಕ್ಕಿಂತ ಹೆಚ್ಚು ಜನರೊಂದಿಗೆ ಸಾರ್ವಜನಿಕ ಸಭೆ ನಡೆಸಲು  ನೀಡಿದ್ದ ಅನುಮತಿಯನ್ನೂ ಹಿಂಪಡೆದಿತ್ತು. ಪ್ರಚಾರಕ್ಕಾಗಿ ರೂಪಿಸಲಾಗಿರುವ ಕೋವಿಡ್ ಶಿಷ್ಟಾಚಾರಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಾಜಕೀಯ ಪಕ್ಷಗಳಿಗೆ ಆಯೋಗ ಪತ್ರ ಬರೆದಿತ್ತು ಮತ್ತು ಜಿಲ್ಲಾಡಳಿತ, ಪ್ರಾಧಿಕಾರಗಳಿಗೆ ಯಾವುದೇ ಉಲ್ಲಂಘನೆ ಕಂಡುಬಂದರೆ ಹಾಲಿ ಇರುವ ಕಾನೂನಿನ ಅಡಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮತ್ತು ಅಂತ ಪ್ರಕರಣಗಳಲ್ಲಿ ಪ್ರಚಾರಕ್ಕೆ ನೀಡಿರುವ ಅನುಮತಿ ರದ್ದು ಮಾಡುವಂತೆ ಸೂಚಿಸಿತ್ತು. ಉಲ್ಲಂಘನೆಗಳು ಕಂಡುಬಂದರೆ ಸಾರ್ವಜನಿಕ ಸಭೆಗಳು / ರಾಲಿಗಳನ್ನು ರದ್ದುಗೊಳಿಸಲು ಆಯೋಗವು ಜಿಲ್ಲಾ ಚುನಾವಣಾ ಅಧಿಕಾರಿಗಳು ಮತ್ತು ಮತಗಟ್ಟೆ ಅಧಿಕಾರಿಗಳಿಗೆ ಇರುವ ಅಧಿಕಾರದ ಬಗ್ಗೆ ಪುನರುಚ್ಚರಿಸಿತ್ತು.

ಒಟ್ಟಾರೆ 11,860 ಬ್ಯಾಲೆಟ್ ಯುನಿಟ್ (ಬಿಯುಗಳು),  11,860 ನಿಯಂತ್ರಣ ಘಟಕಗಳು (ಸಿಯುಗಳು) ಮತ್ತು 11,860 ವಿವಿ ಪ್ಯಾಟ್ ಗಳನ್ನು ಪಶ್ಚಿಮ ಬಂಗಾಳದ ಚುನಾವಣೆಯ ಹಂತದಲ್ಲಿ ಬಳಸಲಾಯಿತು. ಗುಣಮಟ್ಟದ ಪ್ರಕ್ರಿಯೆಯ ರೀತ್ಯ ಎಲ್ಲ ಇವಿಎಂ ಮತ್ತು ವಿವಿಪ್ಯಾಟ್ ಗಳನ್ನು ಪ್ರಥಮ ಹಂತದ, ಯಥಾವತ್ ಪರಿಶೀಲನೆಗೆ ಒಳಪಡಿಸಲಾಗಿತ್ತುಮತ್ತು ರಾಜಕೀಯ ಪಕ್ಷಗಳು/ಅಭ್ಯರ್ಥಿಗಳ ಏಜೆಂಟರ ಸಮಕ್ಷಮ ಸ್ಥಾಪಿಸಲಾಗಿತ್ತು. ಎಫ್.ಎಲ್.ಸಿ. ಮತ್ತು ಪ್ರತಿಯೊಂದು ಇವಿಎಂ ಮತ್ತು ವಿವಿಪ್ಯಾಟ್ ಸ್ಥಾಪನೆಯ ಸಮಯದಲ್ಲಿ ಅಣಕು ಮತದಾನವನ್ನೂ ನಡೆಸಲಾಯಿತು. ಇವಿಎಂಗಳು ಮತ್ತು ವಿವಿ ಪ್ಯಾಟ್ ಗಳು ಮತದಾನದ ವೇಳೆ ಕಾರ್ಯ ನಿರ್ವಹಿಸದ ದರವನ್ನು ಕಳೆದ ಕೆಲವು ಸಮೀಕ್ಷೆಗಳಲ್ಲಿ ಅನುಭವಿಸಿದ ಮೊತ್ತಕ್ಕೆ ಹೋಲಿಸಬಹುದು.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸುವ ಪ್ರಮುಖ ಉದ್ದೇಶದಂತೆ, ಮತದಾನದ ಸ್ಥಳಗಳಲ್ಲಿ ಸುರಕ್ಷತೆ ಮತ್ತು ಮುಕ್ತ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳಲು ಆಯೋಗದ ಮಾನದಂಡಗಳ ಪ್ರಕಾರ ನಿರ್ಣಾಯಕ ಮತ್ತು ಸೂಕ್ಷ್ಮ ಮತಗಟ್ಟೆ ಸೇರಿದಂತೆ ಶೇ.50ಕ್ಕಿಂತ ಹೆಚ್ಚು ಮತಕೇಂದ್ರಗಳ ನೇರ ಮೇಲ್ವಿಚಾರಣೆ ಮತ್ತು ವೆಬ್ಕಾಸ್ಟಿಂಗ್ ಅನ್ನು ಜಾರಿಗೆ ತರಲಾಗಿತ್ತು. ಆಯೋಗ, ಸಿಇಒಗಳು, ಡಿಇಒಗಳು, ವೀಕ್ಷಕರು ನೇರ ಪ್ರಸಾರ ವೀಕ್ಷಿಸುವ ಮೂಲಕ ಮತಗಟ್ಟೆಗಳ ಮೇಲೆ ನಿಗಾ ಇಡಬಹುದಾಗಿತ್ತು.

 

6074

(ಶೇ.51.21)

11,860 ಮತಕೇಂದ್ರಗಳ ಪೈಕಿ ವೆಬ್ ಕಾಸ್ಟಿಂಗ್ ಮೂಲಕ ನೇರ ವೀಕ್ಷಣೆಯ ನಿಗಾದಲ್ಲಿದ್ದದ್ದು

 

ಪ್ರಸಕ್ತ ನಡೆಯುತ್ತಿರುವ ಚುನಾವಣೆಯ ಹಂತದವರೆಗೆ ಪಶ್ಚಿಮ ಬಂಗಾಳದಲ್ಲಿ ದಾಖಲೆಯ 339.45 ಕೋಟಿ ರೂ. ಜಫ್ತಿ ಮಾಡಿರುವುದು ದಿನಾಂಕದವರೆಗೆ ವರದಿಯಾಗಿದೆ. ಜಫ್ತಿಯ ಮೌಲ್ಯದಲ್ಲಿ ಸಗದು, ಮದ್ಯ, ಮಾದಕದ್ರವ್ಯ, ಉಚಿತ ಕೊಡುಗೆ ಇತ್ಯಾದಿ ಸೇರಿದೆ. ಇದು 2016 ಸಾರ್ವತ್ರಿಕ ಚುನಾವಣೆಯಲ್ಲಿ ಜಪ್ತಿ ಮಾಡಲಾದ 44.33 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ ಒಟ್ಟಾರೆ 7.65 ಪಟ್ಟು ಹೆಚ್ಚಾಗಿದೆ. ಆಯೋಗವು ಪ್ರಚೋದನೆ ಮುಕ್ತ ಚುನಾವಣೆಗಳಿಗೆ ವಿಶೇಷ ಒತ್ತು ನೀಡುತ್ತಿದ್ದು, ಅನಗತ್ಯ ಹಣಬಲ, ಮದ್ಯ, ಉಚಿತ ಕೊಡುಗೆಗಳನ್ನು ತಡೆಯುತ್ತದೆ. ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ರಾಜ್ಯದಲ್ಲಿ ನಗದು, ಮದ್ಯ, ಮಾದಕ ದ್ರವ್ಯಗಳು ಮತ್ತು ಉಚಿತ ಉಡುಗೊರೆಗಳ ಸಾಗಾಟವನ್ನು ಪರಿಶೀಲಿಸಲು ಒಟ್ಟು 1137 ಹಠಾತ್ ವೀಕ್ಷಣೆಯ ತಂಡ(ಎಫ್‌.ಎಸ್) ಮತ್ತು 1012 ಸ್ಥಾಯೀ ಕಣ್ಗಾವಲು ತಂಡಗಳನ್ನು (ಎಸ್‌.ಎಸ್‌.ಟಿ) ಕಾರ್ಯಾಚರಣೆಗೆ ಇಳಿಸಲಾಗಿತ್ತು. ಐಟಿ ಇಲಾಖೆಯ ಒಟ್ಟು ಮೂರು ವಾಯು ಗುಪ್ತಚರ ಘಟಕಗಳನ್ನು (ಎಐಯು) ಕೋಲ್ಕತ್ತಾದ ವಿವಿಧ ಕೇಂದ್ರಗಳಲ್ಲಿ, ದುರ್ಗಾಪುರದ ಆಂಡಾಲ್ ಮತ್ತು ಪಶ್ಚಿಮ ಬಂಗಾಳದ ಬಾಗ್ದೋಗ್ರಾದಲ್ಲಿ ರಚಿಸಲಾಗಿತ್ತು.

ಚುನಾವಣೆ ನಡೆದ ಎಲ್ಲ ಐದು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಉಪ ಚುನಾವಣೆ ನಡೆದಲ್ಲಿ  ದಿನಾಂಕದವರೆಗೆ ಒಟ್ಟಾರೆ 1042.05 ಕೋಟಿ ರೂ. (12.11 ಕೋಟಿ ಉಪ ಚುನಾವಣೆಯಲ್ಲಿ ಜಪ್ತಿ ಮಾಡಿದ್ದೂ ಸೇರಿ) ವಶಪಡಿಸಿಕೊಳ್ಳಲಾಗಿದೆ.

 

29.04.2021 ಪೂರ್ವಾಹ್ನದವರೆಗೆ ವಶಪಡಿಸಿಕೊಂಡ ವಸ್ತುವಾರು ವಿವರ

ರಾಜ್ಯಗಳು

ನಗದು ( ಕೋಟಿ ರೂ.ಗಳಲ್ಲಿ)

ಬೆಲೆ ಬಾಳುವ ಲೋಹ (ಕೋಟಿ ರೂ.ಗಳಲ್ಲಿ)

ಮಾದಕವಸ್ತು/ ಮಾದಕ ದ್ರವ್ಯ

ಇತರ ವಸ್ತುಗಳು/ ಉಚಿತ ಉಡುಗೊರೆ

ಮದ್ಯ

ಒಟ್ಟು (ಕೋಟಿ ರೂ.ಗಳಲ್ಲಿ)

ಎಲ್.. 2016ರಲ್ಲಿ ಒಟ್ಟು ವಶ (ಕೋಟಿ ರೂ.ಗಳಲ್ಲಿ)

ಎಲ್.. 2016ರಲ್ಲಿ ಶೇ.

ಮೌಲ್ಯ (ಕೋಟಿ ರೂ.ಗಳಲ್ಲಿ)

ಮೌಲ್ಯ (ಕೋಟಿ ರೂ.ಗಳಲ್ಲಿ)

ಪ್ರಮಾಣ  (ಲೀ.ನಲ್ಲಿ)

ಮೌಲ್ಯ (ಕೋಟಿ ರೂ.ಗಳಲ್ಲಿ)

ಪಶ್ಚಿಮ ಬಂಗಾಳದ 8ನೇ ಹಂತದವರೆಗೆ

55.59

13.52

129.99

100.82

3314970

39.53

339.45

44.33

+766.00%

ಭಾರತೀಯ ಚುನಾವಣಾ ಆಯೋಗದ ಸಿ ವಿಜಿಲ್ ಆಪ್ ಜನ ಕೇಂದ್ರಿತವಾದ ಮೊಬೈಲ್ ಆಪ್ ಆಗಿದ್ದು, ಎಂ.ಸಿ.ಸಿ. ಉಲ್ಲಂಘನೆಯ ಬಗ್ಗೆ  ನೈಜಕಾಲದಲ್ಲಿ, ಸ್ಥಳದ ಬಗ್ಗೆ ಸ್ವಯಂ ವಿವರಗಳೊಂದಿಗೆ  ವರದಿ ಮಾಡಲು ಜನರಿಗೆ ಅಧಿಕಾರ ನೀಡುತ್ತದೆ ಮತ್ತು ಕ್ಷೇತ್ರ ಮಟ್ಟದಲ್ಲಿನ ಉಲ್ಲಂಘನೆಯ ಪರಿಶೀಲನೆಯ 100 ನಿಮಿಷಗಳಲ್ಲಿ ಸ್ಪಂದಿಸಲಾಗುತ್ತದೆಸಿ ವಿಜಿಲ್ ಆಪ್ ಮೂಲಕ ಒಟ್ಟಾರೆ 28,054 ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ವರದಿಯಾಗಿವೆ ಪೈಕಿ 28,012 ಪ್ರಕರಣಗಳನ್ನು ಇಂದು (ಸಂಜೆ 4.00ವರೆಗೆ) ಇತ್ಯರ್ಥ ಪಡಿಸಲಾಗಿದೆ.

ಆಯೋಗವು ಹಿಂಸಾಚಾರ ಮುಕ್ತ ಮತ್ತು ಚುನಾವಣೆಗಳ ಸುರಕ್ಷಿತ ನಡವಳಿಕೆಯನ್ನು ಖಚಿತಪಡಿಸಿಕೊಳ್ಳಲು ವಿಸ್ತಾರವಾದ ಭದ್ರತಾ ಯೋಜನೆ ರೂಪಿಸಿತ್ತು. ಚುನಾವಣೆಯನ್ನು ಸುಗಮವಾಗಿ, ನ್ಯಾಯಸಮ್ಮತವಾಗಿ, ಅಂತರ್ಗತವಾಗಿ ಮತ್ತು ಸುಗಮವಾಗಿ ಶಾಂತಿಯುತ, ಭಯ ಮುಕ್ತ ಮತ್ತು ಅನುಕೂಲಕರ ವಾತಾವರಣ ಖಾತ್ರಿಪಡಿಸಿಕೊಳ್ಳಲು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳೊಂದಿಗೆ (ಸಿ..ಪಿ.ಎಫ್) ಸ್ಥಳೀಯ ಪೊಲೀಸರನ್ನೂ ನಿಯೋಜಿಸಲಾಗಿತ್ತು. ಗುರುತಿಸಲಾದ ತೊಂದರೆ ಉಂಟು ಮಾಡುವವರ ವಿರುದ್ಧ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಎಲ್ಲ ಎಸ್‌.ಪಿ.ಗಳಿಗೆ ನಿರ್ದೇಶನ ನೀಡಲಾಗಿತ್ತು. ಎಲ್ಲಾ ನಾಕಾ ಬಂದಿ ತಾಣಗಳನ್ನು ಸಮರ್ಪಕವಾಗಿ ನಿರ್ವಹಿಸಲಾಗುತ್ತಿರುವ ಬಗ್ಗೆ ಮತ್ತು ರಾತ್ರಿಯ ಕಾವಲಿನ ವೇಳೆ ಯಾವುದೇ ಸಮಾಜಘಾತುಕ ಶಕ್ತಿಗಳು, ಮದ್ಯ ಸೇರಿದಂತೆ  ಉಚಿತ ಉಡುಗೊರೆ ಚುನಾವಣೆ ನಡೆಯುತ್ತಿರುವ ಪ್ರದೇಶ ಪ್ರವೇಶಿಸದಂತೆ ಮೇಲ್ವಿಚಾರಣೆ ನಡೆಸಲು ಎಸ್‌.ಪಿ,ಗಳು ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ನಿರ್ದೇಶಿಸಲಾಗಿತ್ತು. ಜಿಲ್ಲೆಗಳು, ರಾಜ್ಯಗಳು ಮತ್ತು ಬಿ.ಎಸ್.ಎಫ್ ಮುಂತಾದ ಸಂಸ್ಥೆಗಳೊಂದಿಗೆ ಅಂತರ-ಜಿಲ್ಲೆ, ಅಂತರ-ರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಯೊಂದಿಗೆ ಸೂಕ್ತ ಸಮನ್ವಯ ಸಾಧಿಸಲಾಗಿತ್ತು; ಸಂಬಂಧಿತ ಜಾರಿ ಸಂಸ್ಥೆಗಳು ಎಲ್ಲ ಹಿರಿಯ ಅಧಿಕಾರಿಗಳು, ಬಾಂಬ್ ತಯಾರಿಕೆ ಮತ್ತು ದಾಸ್ತಾನು ಇತ್ಯಾದಿಯ ಬಗ್ಗೆ ಬೇಹುಗಾರಿಕೆ ಮಾಹಿತಿ ಕಲೆ ಹಾಕುತ್ತಿದ್ದರು ಮತ್ತು ಅದನ್ನು ವಶಪಡಿಸಿಕೊಳ್ಳಲು ಮತ್ತು ನಿಷ್ಕ್ರಿಯಗೊಳಿಸಲು ಕಾರ್ಯಾಚರಣೆ ನಡೆಸುತ್ತಿದ್ದರುಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ವಿಚಾರದಲ್ಲಿ ಇದೇ ರೀತಿಯ ಕಾರ್ಯಾಚರಣೆ ನಡೆಸಲಾಗಿತ್ತು.

ಹಂತದಲ್ಲಿ ಪೊಲೀಸ್ ಗಸ್ತಿನ ವೇಳೆ, ಎರಡು ಒಂದು ಶಟರ್ ಮತ್ತು ಒಂದು 7.65 ಎಂಎಂ ಪಿಸ್ತೂಲ್, ಎಂಟು ಸುತ್ತು .303 ಮತ್ತು ಐದು ಸುತ್ತು 7.65 ಎಂಎಂ ಜೀವಂತ ಗುಂಡುಗಳೊಂದಿಗೆ ಮೂವರು ಶಂಕಿತರಿಂದ ಫತೇಪುರ್ ನಲ್ಲಿ ದಸ್ತಗಿರಿ ಮಾಡಲಾಯಿತು. ಖಚಿತ ಮಾಹಿತಿ ಆಧರಿಸಿ, ಐದು ಜೀವಂತ ಕಚ್ಚಾ ಬಾಂಬ್ಗಳನ್ನು ಕೋಲ್ಕತ್ತಾದಲ್ಲಿ ವಶಪಡಿಸಿಕೊಳ್ಳಲಾಯಿತು. ಕೋಸಿಪೋರ್ ಪಿ.ಎಸ್. ಪ್ರದೇಶದ ಅಡಿಯಲ್ಲಿ. ಮಾಹಿತಿ ಆಧರಿಸಿ, ಕೋಲ್ಕತ್ತಾದ ಪಿ.ಎಸ್.- ನರ್ಕಲ್ಡಂಗಾದಲ್ಲಿನ ಟಿನ್ ಗುಡಿಸಲಿನ ಹಿಂದೆ ಪ್ಲಾಸ್ಟಿಕ್ ಚೀಲದಲ್ಲಿ ಬಚ್ಚಿಟ್ಟಿದ್ದ 14 ಕಚ್ಚಾ ಜೀವಂತ ಬಾಂಬ್ಗಳನ್ನು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳ ಸಹಾಯದಿಂದ ವಶಪಡಿಸಿಕೊಳ್ಳಲಾಯಿತು. ಇಂದು 11,860 ಮತ ಕೇಂದ್ರಗಳಲ್ಲಿ ಶಾಂತಿಯುತ ಮತ್ತು ನ್ಯಾಯಸಮ್ಮತವಾದ ಮತದಾನವನ್ನು ಖಾತ್ರಿಪಡಿಸಲಾಗಿತ್ತು.

ಆಯೋಗವು ಎಲ್ಲ ಬಾಧ್ಯಸ್ಥರಿಗೆ ವಿಶೇಷವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಯಮುಕ್ತವಾಗಿ ಮತ್ತು ಉತ್ಸಾಹದಿಂದ ಪಾಲ್ಗೊಂಡ ಮತದಾರರಿಗೆ ತನ್ನ ಕೃತಜ್ಞತೆ ಸಲ್ಲಿಸಿದೆ. ಕೋವಿಡ್ ಶಿಷ್ಟಾಚಾರ ನಿಯಮ ಪಾಲಿಸಿ, ಚುನಾವಣೆಯಲ್ಲಿ ಭಾಗಿಯಾದ ಸೇವಾ ಮತದಾರರು, ಹಿರಿಯ ನಾಗರಿಕರು, ಪಿಡಬ್ಲ್ಯುಡಿ ಮತದಾರರುಗಳಿಗೂ ವಿಶೇಷವಾಗಿ ಆಯೋಗ ಧನ್ಯವಾದ ಹೇಳಿದೆ. ಸಾಂಕ್ರಾಮಿಕದ ನಡುವೆಯೂ ಮುಕ್ತ, ನ್ಯಾಯಸಮ್ಮತ, ಪಾರದರ್ಶಕ ಮತ್ತು ಸುರಕ್ಷಿತ ಚುನಾವಣೆ ನಡೆಸಲು ನೆರವಾಗಿ ಕರ್ತವ್ಯದಲ್ಲಿರುವ ಮತದಾನ ಸಿಬ್ಬಂದಿ, ಭದ್ರತಾ ಸಿಬ್ಬಂದಿ, ಮೇಲ್ವಿಚಾರಣಾ ಸಿಬ್ಬಂದಿ, ವೀಕ್ಷಕರು, ವಿಶೇಷ ವೀಕ್ಷಕರು ರೈಲ್ವೆ ಪ್ರಾಧಿಕಾರಗಳು, ಜಾರಿ ಸಂಸ್ಥೆಗಳು ಮತ್ತು ಆರೋಗ್ಯ ಅಧಿಕಾರಿಗಳು ಸೇರಿದಂತೆ ಇಡೀ ಚುನಾವಣಾ ವ್ಯವಸ್ಥೆಯಲ್ಲಿದ್ದವರ ಸೇವೆಯನ್ನು ಆಯೋಗ ಗುರುತಿಸಿದೆ.

ಚುನಾವಣೆ ಸಂಬಂಧಿತ ಮಾಹಿತಿ, ಚಿತ್ರಗಳು ಮತ್ತು ಇತರ ವಿವರಗಳಿಗಾಗಿ ನಮ್ಮ ಅಂತರ್ಜಾಲ ತಾಣ eci.gov.in ಮತ್ತು ಟ್ವಿಟರ್ ಹ್ಯಾಂಡಲ್  @SpokespersonECI & @ECISVEEP ಗೆ ಭೇಟಿ ನೀಡಿ.

***


(Release ID: 1715032) Visitor Counter : 569