ಭೂವಿಜ್ಞಾನ ಸಚಿವಾಲಯ

ಗುಜರಾತ್, ಒಡಿಶಾ ರಾಜ್ಯಗಳು ಮತ್ತು ಪಶ್ಚಿಮ ಬಂಗಾಳದ ಗಂಗಾ ನದಿ ಜಲಾನಯನ ಪ್ರದೇಶದ ಅಲ್ಲಲ್ಲಿ ಮುಂದಿನ 24 ಗಂಟೆಗಳ ಕಾಲ ಉಷ್ಣ ಮಾರುತ ಪರಿಸ್ಥಿತಿಗಳು ಕಂಡುಬರುವ ಸಾಧ್ಯತೆಯಿದೆ


ಪಶ್ಚಿಮ ಬಂಗಾಳದ ಗಂಗಾನದಿ ಜಲಾನಯನ ಪ್ರದೇಶ, ಒಡಿಶಾ ಕರಾವಳಿ, ಸೌರಾಷ್ಟ್ರ ಮತ್ತು ಕಚ್ನಲ್ಲಿ ಅಲಲ್ಲಿ ಉಷ್ಣ ಮಾರುತ ಪರಿಸ್ಥಿತಿಯನ್ನು ಗಮನಿಸಲಾಗಿದೆ

ರಾಜ್‌ಕೋಟ್‌ನಲ್ಲಿ (ಸೌರಾಷ್ಟ್ರ ಮತ್ತು ಕಚ್) ನಿನ್ನೆ ಗರಿಷ್ಠ 43.3 ಡಿಗ್ರಿ ಸೆಂಟಿಗ್ರೇಡ್‌ ತಾಪಮಾನ ವರದಿಯಾಗಿದೆ

Posted On: 27 APR 2021 10:20AM by PIB Bengaluru

ಭಾರತ ಹವಾಮಾನ ಇಲಾಖೆಯ ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ (ಐಎಂಡಿ) ಪ್ರಕಾರ:

ಮುಂದಿನ 24 ಗಂಟೆಗಳ ಕಾಲ ಪ್ರಸ್ತುತ ತಾಪಮಾನದ ಸ್ಥಿತಿಗತಿ ಮತ್ತು ಎಚ್ಚರಿಕೆ

ನಿನ್ನೆ ಉಷ್ಣ ಮಾರುತ ಮತ್ತು ಗರಿಷ್ಠ ತಾಪಮಾನವನ್ನು (ಐಎಸ್ಟಿ ಕಾಲಮಾನ ಏಪ್ರಿಲ್ 26 05:30 ಗಂಟೆಯಿಂದ ಏಪ್ರಿಲ್27ರವರೆಗೆ)

ಉಷ್ಣ ಮಾರುತ ಗಮನಿಸಲಾಗಿದೆ:

  • ನಿನ್ನೆ, ಪಶ್ಚಿಮ ಬಂಗಾಳದ ಗಂಗಾ ನದಿ ಜಲಾನಯನ ಪ್ರದೇಶ, ಒಡಿಶಾ ಕರಾವಳಿ, ಸೌರಾಷ್ಟ್ರ ಮತ್ತು ಕಚ್ ಅಲ್ಲಲ್ಲಿ ಉಷ್ಣ ಮಾರುತ ಪರಿಸ್ಥಿತಿ ಕಂಡುಬಂದಿತು.

ಗರಿಷ್ಠ ತಾಪಮಾನ:

  • ರಾಜಸ್ಥಾನ, ಪೂರ್ವ ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಮಧ್ಯಪ್ರದೇಶ ಮತ್ತು ವಿದರ್ಭದ ಹೆಚ್ಚಿನ ಸ್ಥಳಗಳಲ್ಲಿ; ಪೂರ್ವ ಮಧ್ಯಪ್ರದೇಶ, ರಾಯಲಸೀಮಾ ಮತ್ತು ಒಡಿಶಾದ ಅನೇಕ ಸ್ಥಳಗಳಲ್ಲಿ ಮತ್ತು ಮಧ್ಯ ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ ಮತ್ತು ಗಂಗಾ ನದಿ ಪಶ್ಚಿಮ ಬಂಗಾಳದ ಅಲ್ಲಲ್ಲಿ 40.0 ಡಿಗ್ರಿ ಸೆಂಟಿಗ್ರೇಡ್ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.
  • 26-04-2021 ರಂದು ಇದ್ದಂತೆ ಗರಿಷ್ಠ ತಾಪಮಾನ ನಿರ್ಗಮನ: ಅಸ್ಸಾಂ ಮತ್ತು ಮೇಘಾಲಯದ ಹೆಚ್ಚಿನ ಸ್ಥಳಗಳಲ್ಲಿ; ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದ ಅನೇಕ ಸ್ಥಳಗಳಲ್ಲಿ ಮತ್ತು ಉಪ ಹಿಮಾಲಯ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಅಲಲ್ಲಿ ಸಾಮಾನ್ಯಕ್ಕಿಂತ (5.1 ಡಿ.ಸೆ ಅಥವಾ ಅದಕ್ಕಿಂತ ಹೆಚ್ಚು) ಹೆಚ್ಚು ಗರಿಷ್ಠ ತಾಪಮಾನವು ದಾಖಲಾಗಿದೆ.ಪಶ್ಚಿಮ ಬಂಗಾಳದ ಗಂಗಾ ನದಿ ಜಲಾನಯನ ಪ್ರದೇಶ, ಪೂರ್ವ ಬಿಹಾರ, ಒಡಿಶಾ ಕರಾವಳಿ, ಸೌರಾಷ್ಟ್ರ ಮತ್ತು ಕಚ್  ಮತ್ತು ಕೊಂಕಣ ಹಾಗೂ ಗೋವಾದ ಕೆಲವು ಸ್ಥಳಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತ ಹೆಚ್ಚು (3.1 ಡಿ. ಸೆ.ನಿಂದ  5.0 ಡಿ.ಸೆ) ದಾಖಲಾಗಿದೆ; ಉತ್ತರಾಖಂಡ ಮತ್ತು ಗುಜರಾತ್ ಭಾಗದಲ್ಲಿ; ಹಿಮಾಚಲ ಪ್ರದೇಶದ ಕೆಲವು ಸ್ಥಳಗಳಲ್ಲಿ ಮತ್ತು ಜಮ್ಮು, ಕಾಶ್ಮೀರ, ಲಡಾಖ್, ಗಿಲ್ಗಿಟ್ ಬಾಲ್ಟಿಸ್ತಾನ್ ಮತ್ತು ಮುಜಫರಾಬಾದ್, ಪಂಜಾಬ್, ಪಶ್ಚಿಮ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, .ಬಂಗಾಳದ ಗಂಗಾನದಿ ತೀರ ಪ್ರದೇಶ ಹೊರತಾದ ಭಾಗ, ಮತ್ತು ಕರ್ನಾಟಕದ ದಕ್ಷಿಣ ಒಳನಾಡಿನ ಅಲ್ಲಲ್ಲಿ ಸಾಮಾನ್ಯಕ್ಕಿಂತ ಅಧಿಕ ತಾಪಮಾನ (1.6 ಡಿ.ಸೆ.ನಿಂದ 3.0 ಡಿ.ಸೆ.) ದಾಖಲಾಗಿದೆ. ಆಂಧ್ರಪ್ರದೇಶದ ದಕ್ಷಿಣ ಕರಾವಳಿ, ಕರ್ನಾಟಕದ ಉತ್ತರ ಒಳನಾಡು, ತಮಿಳುನಾಡು, ಪುದುಚೆರಿ ಮತ್ತು ಕಾರೈಕಲ್ ಹಲವು ಅನೇಕ ಸ್ಥಳಗಳಲ್ಲಿ ಹಾಗೂ ಪೂರ್ವ ಮಧ್ಯ ಪ್ರದೇಶದ ಅಲ್ಲಲ್ಲಿ ಹಾಗೂ ದೇಶದ ಇತರೆಲ್ಲಾ ಭಾಗಗಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆ (-1.6 ಡಿ.ಸೆ. ನಿಂದ -3.0 ಡಿ.ಸೆ.) ದಾಖಲಾಗಿದೆ.
  • ನಿನ್ನೆ, ರಾಜ್ಕೋಟ್ (ಸೌರಾಷ್ಟ್ರ)ನಲ್ಲಿ 43.3 ಡಿ.ಸೆ. ಗರಿಷ್ಠ ತಾಪಮಾನ ವರದಿಯಾಗಿದೆ.

ಮುಂದಿನ 24 ಗಂಟೆಗಳಿಗೆ ಉಷ್ಣ ಮಾರುತದ ಎಚ್ಚರಿಕೆಗಳು (ಐಎಸ್ಟಿ ಕಾಲಮಾನ ಏಪ್ರಿಲ್ 26 05:30 ಗಂಟೆಗಳಿಂದ ಏಪ್ರಿಲ್ 27 05:30 ಗಂಟೆಗಳವರೆಗೆ):

  • ಗುಜರಾತ್ ರಾಜ್ಯ, ಒಡಿಶಾ ಮತ್ತು ಪಶ್ಚಿಮ ಬಂಗಾಳದ ಗಂಗಾ ನದಿ ಜಲಾನಯನ ಪ್ರದೇಶದ ಅಲ್ಲಲ್ಲಿ ಉಷ್ಣ ಮಾರುತದ ಪರಿಸ್ಥಿತಿಗಳು ಕಂಡುಬರುವ ಸಂಭವನೀಯತೆ ಬಹಳವಾಗಿದೆ.

(ವಿವರವಾದ ಗ್ರಾಫಿಕ್ಸ್ಗಾಗಿ ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ)

ಸ್ಥಳ ನಿರ್ದಿಷ್ಟ ಮುನ್ಸೂಚನೆ ಮತ್ತು ಎಚ್ಚರಿಕೆಗಾಗಿ ದಯವಿಟ್ಟು  MAUSAM APP  ಡೌನ್ಲೋಡ್ ಮಾಡಿ, ಕೃಷಿ ಸಂಬಂಧಿತ ಹವಾಮಾನ ಸಲಹೆಗಾಗಿ MEGHDOOT APP ಮತ್ತು ಮಿಂಚಿನ ಕುರಿತಾದ ಎಚ್ಚರಿಕೆಗಾಗಿ DAMINI APP ಡೌನ್ಲೋಡ್ಮಾಡಿ ಹಾಗೂ ಜಿಲ್ಲಾವಾ ಎಚ್ಚರಿಕೆಗಾಗಿ ರಾಜ್ಯ ಎಂಸಿ /ಆರ್ ಎಂಸಿ ವೆಬ್ಸೈಟ್ಗಳಿಗೆ ಭೇಟಿ ನೀಡಿ.

***



(Release ID: 1714323) Visitor Counter : 172


Read this release in: English , Urdu , Hindi , Bengali