ಭೂವಿಜ್ಞಾನ ಸಚಿವಾಲಯ

ತೆಲಂಗಾಣ, ಕೇರಳ, ಮಾಹೆ ಒಳನಾಡು ಪ್ರದೇಶಗಳಲ್ಲಿ ಮಿಂಚು, ಗಾಳಿ ಸಹಿತ ಚಂಡಮಾರುತ ಸಾಧ್ಯತೆ: ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್  ದ್ವೀಪ, ಮಧ್ಯ ಮಹಾರಾಷ್ಟ್ರ, ಮಾರಾಠವಾಡಾ , ರಾಯಲ ಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ನ ಒಳನಾಡು ಪ್ರದೇಶಗಳಲ್ಲಿ ಮಿಂಚು ಸಹಿತ ಬಿರುಗಾಳಿ


ಉತ್ತರಾಖಂಡ, ಅಸ್ಸಾಂ, ಮೇಘಾಲಯ, ಮಧ್ಯ ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ, ಕೇರಳ ಮತ್ತು ಮಾಹೆ ಒಳನಾಡು ಪ್ರದೇಶಗಳಲ್ಲಿ ಏಪ್ರಿಲ್ 27ರಂದು ಮಿಂಚು, ಗುಡುಗು ಸಹಿತ ಬಿರುಗಾಳಿ

ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶ ಮತ್ತು ಉತ್ತರ ಕೇರಳದಲ್ಲಿ ಏಪ್ರಿಲ್ 28, 29 ಹಾಗೂ 30ರಂದು ಭಾರಿ ಮಳೆ ಸಾಧ್ಯತೆ

Posted On: 26 APR 2021 11:22AM by PIB Bengaluru

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ವರದಿಯಂತೆ ಅಖಿಲ ಭಾರತ ಹವಾಮಾನ ಮುನ್ಸೂಚನೆ ಮಾಹಿತಿ

ಏಪ್ರಿಲ್ 26(ಒಂದನೇ ದಿನ): ತೆಲಂಗಾಣ, ಕೇರಳ, ಮಾಹೆ ಒಳನಾಡು ಪ್ರದೇಶಗಳಲ್ಲಿ ಮಿಂಚು, ಗಾಳಿ ಸಹಿತ (ಗಾಳಿಯ ವೇಗ ಗಂಟೆಗೆ 30-40 ಕಿ.ಮೀ) ಚಂಡಮಾರುತ ಸಾಧ್ಯತೆ ಇದೆ ಮತ್ತು ಪಶ್ಚಿಮ ಬಂಗಾಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ಮಧ್ಯ ಮಹಾರಾಷ್ಟ್ರ, ಮಾರಾಠವಾಡ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಒಳನಾಡು ಪ್ರದೇಶಗಳಲ್ಲಿ ಮಿಂಚು ಬಿರುಗಾಳಿ ಬೀಸಲಿದೆ.

·         ಗುಜರಾತ್ ರಾಜ್ಯ ಮತ್ತು ಒಡಿಶಾದ ಕರಾವಳಿಯ ಆಯ್ದ ಭಾಗಗಳಲ್ಲಿ ಬಿಸಿ ಗಾಳಿ ವಾತಾವರಣ ಬೀರುವ ಸಾಧ್ಯತೆಗಳು ಹೆಚ್ಚಿವೆ.

ಏಪ್ರಿಲ್ 27(ಎರಡನೇ ದಿನ): ಉತ್ತರಾಖಂಡ, ಅಸ್ಸಾಂ ಮತ್ತು ಮೇಘಾಲಯ, ಮಧ್ಯಪ್ರದೇಶ, ಮಹಾರಾಷ್ಟ್ರ, ಮರಾಠವಾಡ, ತೆಲಂಗಾಣ ಮತ್ತು ಕೇರಳ ಹಾಗೂ ಮಾಹೆಯ ಒಳನಾಡು ಪ್ರದೇಶಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ(ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ. ವೇಗಚಂಡಮಾರುತ ಸಾಧ್ಯತೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳದ ಗ್ಯಾಂಗ್ ಟಕ್ ಪ್ರದೇಶ, ಒಡಿಶಾ, ಅರುಣಾಚಲಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರಾ, ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾಣಂ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಪ್ರದೇಶದಲ್ಲಿ ಬಿರುಗಾಳಿ ಸಾಧ್ಯತೆ ಇದೆ.

ಏಪ್ರಿಲ್ 28(ಮೂರನೇ ದಿನ): ಉತ್ತರಾಖಂಡ, ಛತ್ತೀಸ್ ಗಢ, ವಿದರ್ಭಾ, ಪಶ್ಚಿಮ ಬಂಗಾಳದ ಉಪ ಹಿಮಾಲಯ ಮತ್ತು ಸಿಕ್ಕಿಂ ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯ, ಮಧ್ಯ ಮಹಾರಾಷ್ಟ್ರ ಮರಾಠವಾಡ, ತೆಲಂಗಾಣ ಮತ್ತು ಕೇರಳ ಹಾಗೂ ಮಾಹೆಯ ಒಳನಾಡು ಪ್ರದೇಶಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ(ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ. ವೇಗಚಂಡಮಾರುತ ಸಾಧ್ಯತೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ಪಶ್ಚಿಮ ಬಂಗಾಳದ ಗ್ಯಾಂಗ್ ಟೆಕ್ ಪ್ರದೇಶ, ಒಡಿಶಾ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರಾ, ಕೊಂಕಣ ಮತ್ತು ಗೋವಾ, ಆಂಧ್ರಪ್ರದೇಶದ ಕರಾವಳಿ ಮತ್ತು ಯಾಣಂ, ರಾಯಲಸೀಮಾ, ಕರ್ನಾಟಕದ ದಕ್ಷಿಣ ಒಳನಾಡು ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಪ್ರದೇಶದಲ್ಲಿ ಬಿರುಗಾಳಿ ಸಾಧ್ಯತೆ ಇದೆ.

·         ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಕೇರಳದ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಏಪ್ರಿಲ್ 29(ನಾಲ್ಕನೇ ದಿನ): ಉತ್ತರಾಖಂಡ, ವಿದರ್ಭ, ಛತ್ತೀಸ್ ಗಢ, ಪಶ್ಚಿಮಬಂಗಾಳ, ಸಿಕ್ಕಿಂ, ಒಡಿಶಾ, ಅರುಣಾಚಲಪ್ರದೇಶ ಅಸ್ಸಾಂ ಮತ್ತು ಮೇಘಾಲಯಆಂಧ್ರಪ್ರದೇಶದ ಕರಾವಳಿ ಮತ್ತು ಯಾಣಂ, ತೆಲಂಗಾಣ ಮತ್ತು ಕೇರಳ ಹಾಗೂ ಮಾಹೆಯ ಒಳನಾಡು ಪ್ರದೇಶಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ(ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ. ವೇಗಚಂಡಮಾರುತ ಬೀಸುವ ಸಾಧ್ಯತೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರಾ, ರಾಯಲಸೀಮಾ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ಲಕ್ಷದ್ವೀಪ ಮತ್ತು ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

·        ಕರ್ನಾಟಕದ ದಕ್ಷಿಣ ಒಳನಾಡು ಮತ್ತು ಉತ್ತರ ಕೇರಳದ ಒಳನಾಡು ಪ್ರದೇಶಗಳಲ್ಲಿ ಭಾರೀ ಮಳೆ ಸಾಧ್ಯತೆ ಇದೆ.

ಏಪ್ರಿಲ್ 30(ಐದನೇ ದಿನ): ಉತ್ತರಾಖಂಡ, ವಿದರ್ಭ, ಛತ್ತೀಸ್ ಗಢ, ಪಶ್ಚಿಮಬಂಗಾಳ ಮತ್ತು ಸಿಕ್ಕಿಂ, ಒಡಿಶಾ, ಅರುಣಾಚಲಪ್ರದೇಶ ಅಸ್ಸಾಂ ಮತ್ತು ಮೇಘಾಲಯ, ಆಂಧ್ರಪ್ರದೇಶದ ಕರಾವಳಿ ಮತ್ತು  ಯಾಣಂ, ತೆಲಂಗಾಣ ಮತ್ತು ಕೇರಳ ಹಾಗೂ ಮಾಹೆಯ ಒಳನಾಡು ಪ್ರದೇಶಗಳಲ್ಲಿ ಮಿಂಚು ಮತ್ತು ಬಿರುಗಾಳಿ ಸಹಿತ(ಪ್ರತಿ ಗಂಟೆಗೆ 30 ರಿಂದ 40 ಕಿ.ಮೀ. ವೇಗಚಂಡಮಾರುತ ಬೀಸುವ ಸಾಧ್ಯತೆ ಇದೆ. ಅಲ್ಲದೆ ಜಮ್ಮುಕಾಶ್ಮೀರ, ಲಡಾಖ್, ಗಿಲ್ಗಿತ್-ಬಾಲ್ಟಿಸ್ತಾನ್, ಮುಜಫರಾಬಾದ್, ಹಿಮಾಚಲಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ ಮತ್ತು ತ್ರಿಪುರಾ, ರಾಯಲಸೀಮಾ, ಕರ್ನಾಟಕದ ಕರಾವಳಿ ಮತ್ತು ದಕ್ಷಿಣ ಒಳನಾಡು, ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ಒಳನಾಡು ಪ್ರದೇಶದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.

·         ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಉತ್ತರ ಕೇರಳದ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

(ಗ್ರಾಫಿಕ್ಸ್ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ)

ಸ್ಥಳ ನಿರ್ದಿಷ್ಟ ಮುನ್ನೆಚ್ಚರಿಕೆ ಮತ್ತು ಹವಾಮಾನ ಮುನ್ಸೂಚನೆಗಳಿಗಾಗಿ ಮೌಸಮ್ ಆಪ್ MAUSAM APP  ಕೃಷಿ ಸಂಬಂಧಿತ ಮುನ್ಸೂಚನೆಗಳಿಗೆ ಮೇಘದೂತ್ ಆಪ್ MEGHDOOT APP  ಮತ್ತು ಮಿಂಚು, ಸಿಡಿಲಿನ ಮುನ್ನೆಚ್ಚರಿಕೆಗಾಗಿ ದಾಮಿನಿ ಆಪ್ DAMINI APP  ಡೌನ್ ಲೋಡ್ ಮಾಡಿಕೊಳ್ಳಿ.  ಜಿಲ್ಲಾವಾರು ಹವಾಮಾನ ಮುನ್ಸೂಚನೆಗಳಿಗಾಗಿ ಎಂ.ಸಿ /ಆರ್.ಎಂ.ಸಿ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.

***



(Release ID: 1714152) Visitor Counter : 146