ಪ್ರಧಾನ ಮಂತ್ರಿಯವರ ಕಛೇರಿ

ನಾಯಕರ ಹವಾಮಾನ ಶೃಂಗಸಭೆ -2021 ರಲ್ಲಿ ಪ್ರಧಾನಮಂತ್ರಿ ಭಾಷಣ

Posted On: 22 APR 2021 7:07PM by PIB Bengaluru

ಗೌರವಾನ್ವಿತ ಅಧ್ಯಕ್ಷ ಬೈಡನ್, ವಿಶೇಷ ಸಹೋದ್ಯೋಗಿಗಳೇ, ಗ್ರಹದ ನನ್ನ ಸಹ ನಾಗರೀಕರೇ

ನಮಸ್ಕಾರ!

ಉಪ ಕ್ರಮ ತೆಗೆದುಕೊಂಡ ಅಧ್ಯಕ್ಷ ಬೈಡನ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಜಾಗತಿಕ ಸಾಂಕ್ರಾಮಿಕದ ಸಂದರ್ಭದಲ್ಲಿ ಮಾನವೀಯತೆ ಸಂಘರ್ಷದಲ್ಲಿದೆ ಮತ್ತು ಘಟನೆಯು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದಾಗುವ ಬೆದರಿಕೆ  ಕಾಣೆಯಾಗಿಲ್ಲ ಎಂಬುದನ್ನು ಸಕಾಲದಲ್ಲಿ  ನೆನಪಿಸುವಂತಹುದಾಗಿದೆ.

ವಾಸ್ತವವಾಗಿ ಹವಾಮಾನ ಬದಲಾವಣೆಯು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಜೀವಂತ ವಾಸ್ತವವಾಗಿದೆ. ಅವರ ಜೀವನ ಮತ್ತು ಜೀವನೋಪಾಯ ಈಗಾಗಲೇ ಅದರ ದುಷ್ಪರಿಣಾಮಗಳನ್ನು ಎದುರಿಸುತ್ತಿದೆ.

ಸ್ನೇಹಿತರೇ,

ಹವಾಮಾನ ಬದಲಾವಣೆಯ ಸಮಸ್ಯೆ ಎದುರಿಸಲು ಮಾನವೀಯತೆಗೆ ಸದೃಢವಾದ ಕ್ರಮದ ಅಗತ್ಯವಿದೆ. ಇಂತಹ ಕ್ರಿಯೆ ಅತ್ಯಂತ ವೇಗ, ದೊಡ್ಡ ಪ್ರಮಾಣದಲ್ಲಿ ಜಾಗತಿಕ ವ್ಯಾಪ್ತಿಯೊಂದಿಗೆ ಆಗಬೇಕಾಗಿದೆ. ನಾವು ಭಾರತದಲ್ಲಿ ನಮ್ಮ ಪಾಲಿನ  ಕೆಲಸ ಮಾಡುತ್ತಿದ್ದೇವೆ. ನಮ್ಮ ಮಹತ್ವಾಕಾಂಕ್ಷೆಯ ನವೀಕೃತ ಇಂಧನ ಉತ್ಪಾದನೆಯ ಗುರಿ ಬರುವ 2030 ವೇಳೆಗೆ 450 ಗಿಗಾವ್ಯಾಟ್ ಆಗಿದ್ದು ಅದಕ್ಕೆ ನಾವು ಬದ್ಧರಾಗಿದ್ದೇವೆ.

ಅಭಿವೃದ್ಧಿಯ ಸವಾಲುಗಳ ನಡುವೆಯೂ ಶುದ್ಧ ಇಂಧನ, ಇಂಧನ ಸಾಮರ್ಥ್ಯ, ಅರಣ್ಯೀಕರಣ ಮತ್ತು ಜೀವ ವೈವಿಧ್ಯ ವಲಯದಲ್ಲಿ ನಾವು ಹಲವಾರು ದಿಟ್ಟ ಹೆಜ್ಜೆಗಳನ್ನು ಇಟ್ಟಿದ್ದೇವೆ. ಅದಕ್ಕಾಗಿಯೇ ನಾವು ಎನ್ ಡಿಸಿಗಳು, 2 ಡಿಗ್ರಿ ಸೆಲ್ಷಿಯಸ್ ಹೊಂದಾಣಿಕೆಯಾಗುವ ಕೆಲವೇ ದೇಶಗಳಲ್ಲಿ ನಾವಿದ್ದೇವೆ. ನಾವು ಜಾಗತಿಕವಾಗಿ ಅಂತಾರಾಷ್ಟ್ರೀಯ ಸೌರ ಮೈತ್ರಿ, ವಿಪತ್ತು ತಗ್ಗಿಸುವ ಮೂಲ ಸೌಕರ್ಯ ಮೈತ್ರಿಕೂಟದಂತಹ ಜಾಗತಿಕ ಕ್ರಮಗಳಿಂದ ನಾವು ಪ್ರೋತ್ಸಾಹಿತರಾಗಿದ್ದೇವೆ.

ಸ್ನೇಹಿತರೇ

ಹವಾಮಾನ- ಜವಾಬ್ದಾರಿಯುತ ಅಭಿವೃದ್ಧಿಶೀಲ ದೇಶವಾಗಿ ಭಾರತದಲ್ಲಿ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ತಲುಪುವ  ಪಾಲುದಾರಿಕೆಯನ್ನು  ಸ್ವಾಗತಿಸುತ್ತೇವೆ. ಹಸಿರು ಹಣಕಾಸು ಮತ್ತು ಶುದ್ಧ ತಂತ್ರಜ್ಞಾನಗಳಿಗೆ ಕೈಗೆಟುಕುವ ರೀತಿಯ ಪ್ರವೇಶ ಅಗತ್ಯವಿರುವ ಇತರೆ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಸಹ ಇದು ಸಹಾಯ ಮಾಡುತ್ತದೆ.

ಆದ್ದರಿಂದ ಅಧ್ಯಕ್ಷ ಬೈಡನ್ ಮತ್ತು ನಾನು ಭಾರತ ಅಮೆರಿಕ ಹವಾಮಾನ ಮತ್ತು ಶುದ್ಧ ಇಂಧನ ಕಾರ್ಯಸೂಚಿ 2030 ಸಹಭಾಗಿತ್ವವನ್ನುಒಟ್ಟಿಗೆ ಆರಂಭಿಸಿದ್ದೇವೆ. ನಾವು ಹೂಡಿಕೆಯನ್ನು ಕ್ರೋಡೀಕರಿಸುತ್ತೇವೆ, ಶುದ್ಧ ತಂತ್ರಜ್ಞಾನಗಳನ್ನು ಪ್ರದರ್ಶಿಸಿ ಹಸಿರು ಸಹಯೋಗವನ್ನು ಸಕ್ರಿಯಗೊಳಿಸಲಿದ್ದೇವೆ.

ಸ್ನೇಹಿತರೇ.

ಇಂದು ನಾವು ಜಾಗತಿಕ ಹವಾಮಾನ ಕ್ರಿಯೆಯನ್ನು ಚರ್ಚಿಸುತ್ತಿರುವಾಗ ನಿಮ್ಮೊಂದಿಗೆ ಒಂದು ಆಲೋಚನೆ ಹರಿಯಬಿಡುತ್ತೇನೆ. ಭಾರತದ ಇಂಗಾಲದ ಹೊರ ಸೂಸುವಿಕೆ ಹೆಜ್ಜೆಗುರುತು ಜಾಗತಿಕ ಸರಾಸರಿ ಶೇ 60 ಕ್ಕಿಂತ ಕಡಿಮೆಯಿದೆ. ಇದಕ್ಕೆ ನಮ್ಮ ಜೀವನ ಪದ್ಧತಿ, ಸುಸ್ಥಿರ ಸಾಂಪ್ರದಾಯಿಕ ಅಭ್ಯಾಸಗಳಿಂದ ಕೂಡಿರುವುದೇ ಕಾರಣ

ಆದ್ದರಿಂದ ಇಂದು ಹವಾಮಾನ  ಕ್ರಿಯೆಯಲ್ಲಿ ಜೀವನ ಶೈಲಿಯ ಮಹತ್ವವನ್ನು ನಾನು ಒತ್ತಿ ಹೇಳಲು ಬಯಸುತ್ತೇನೆ. ಸುಸ್ಥರ ಜೀವನ ಶೈಲಿ ಮತ್ತು ಮತ್ತೆ ಮೂಲಕ್ಕೆ ಹೋಗುವಮಾರ್ಗದರ್ಶಿ ತತ್ವಶಾಸ್ತ್ರ ಕೋವಿಡ್ ನಂತರದ ಯುಗದಲ್ಲಿ ನಮ್ಮ ಆರ್ಥಿಕ ಕಾರ್ಯತಂತ್ರದ ಪ್ರಮುಖ ಆಧಾರ ಸ್ಥಂಭವಾಗಿದೆ

ಸ್ನೇಹಿತರೇ

ಭಾರತದ ಮಹಾನ್ ಸನ್ಯಾಸಿ ಸ್ವಾಮಿ ವಿವೇಕಾನಂದರ ಮಾತುಗಳನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಅವರು ನಮಗೆ ಕರೆ ನೀಡಿದ್ದರು, “ ಏಳಿ, ಎದ್ದೇಳಿ, ಎಚ್ಚರವಾಗಿರಿ, ಗುರಿ ತಲುಪುವವರೆಗೆ ನಿಲ್ಲಬೇಡಿಹವಾಮಾನ ಬದಲಾವಣೆಯ ವಿರುದ್ಧ ದಶಕಗಳ ಕಾಲ ಇದನ್ನು ಕ್ರಿಯೆಯನ್ನಾಗಿ ಮಾಡೋಣ.

ಧನ್ಯವಾದಗಳು, ತುಂಬಾ ಧನ್ಯವಾದಗಳು

***(Release ID: 1713490) Visitor Counter : 2