ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ಈಟ್ ಸ್ಮಾರ್ಟ್ ಸಿಟಿ ಚಾಲೆಂಜ್ ಮತ್ತು ಟ್ರಾನ್ಸ್ ಪೋರ್ಟ್ ಫಾರ್ ಆಲ್ (ಸರ್ವರಿಗೂ ಸಾರಿಗೆ) ಚಾಲೆಂಜ್ ಆರಂಭ
ಸೂಕ್ತ ಆಹಾರ ಪದ್ಧತಿ ಮತ್ತು ಹವ್ಯಾಸಗಳ ವಾತಾವರಣ ಸೃಷ್ಟಿಗೆ ಈಟ್ ಸ್ಮಾರ್ಟ್ ಸಿಟಿ ಚಾಲೆಂಜ್
ಮೊದಲನೇ ಹಂತದ ಕೊನೆಗೆ 11 ನಗರಗಳ ಆಯ್ಕೆ
ಸರ್ವರಿಗೂ ಸಾರಿಗೆ ಸ್ಪರ್ಧೆಯ ಉದ್ದೇಶ ಸಾರ್ವಜನಿಕ ಸಾರಿಗೆಯನ್ನು ಸುರಕ್ಷಿತ, ಕೈಗೆಟಕುವ ದರದಲ್ಲಿ ಆರಾಮ ಮತ್ತು ವಿಶ್ವಾಸಾರ್ಹಗೊಳಿಸುವುದು
Posted On:
15 APR 2021 2:40PM by PIB Bengaluru
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಹಾಯಕ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಹರ್ ದೀಪ್ ಸಿಂಗ್ ಪುರಿ ಅವರು ಇಂದು ಆನ್ ಲೈನ್ ಕಾರ್ಯಕ್ರಮದಲ್ಲಿ ಈಟ್ ಸ್ಮಾರ್ಟ್ ಸಿಟಿ ಚಾಲೆಂಜ್ ಮತ್ತು ಸರ್ವರಿಗೂ ಸಾರಿಗೆ (ಟ್ರಾನ್ಸ್ ಪೋರ್ಟ್ ಫಾರ್ ಆಲ್) ಚಾಲೆಂಜ್ ಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಶ್ರೀ ದುರ್ಗಾಶಂಕರ್ ಮಿಶ್ರ ಉಪಸ್ಥಿತರಿದ್ದರು. ಎಫ್ಎಸ್ಎಸ್ಎಐನ ಸಿಇಒ ಶ್ರೀ ಅರುಣ್ ಸಿಂಘಾಲ್, ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಜಂಟಿ ಕಾರ್ಯದರ್ಶಿ ಶ್ರೀ ಕುನಾಲ್ ಕುಮಾರ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ವರ್ಚುವಲ್ ರೂಪದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈಟ್ ಸ್ಮಾರ್ಟ್ ಸಿಟಿ ಸ್ಪರ್ಧೆ ಕುರಿತು ಮಾತನಾಡಿದ ಶ್ರೀ ಹರ್ ದೀಪ್ ಸಿಂಗ್ ಪುರಿ, “ಇಂದು ಇದು ಹೆಮ್ಮೆಯ ವಿಷಯವಾಗಿದೆ. ಈಟ್ ಸ್ಮಾರ್ಟ್ ಸಿಟೀಸ್ ಸ್ಪರ್ಧೆಯ ಆರಂಭದೊಂದಿಗೆ ನಾವು ಈಟ್ ರೈಟ್ ಇಂಡಿಯಾ (ಭಾರತದಲ್ಲಿ ಸೂಕ್ತ ಆಹಾರ ಸೇವನೆ) ಮನೋಭಾವವನ್ನು ಸ್ಮಾರ್ಟ್ ಸಿಟಿಗಳ ಮಟ್ಟದಲ್ಲಿ ಮತ್ತೊಂದು ಎತ್ತರಕ್ಕೆ ಒಯ್ಯಲಾಗುತ್ತಿದೆ. ಈ ಚಳವಳಿ ನಗರದ ಜನತೆ ಸೂಕ್ತ ಆಹಾರ ಆಯ್ಕೆಗಳನ್ನು ಮಾಡಲು ಮತ್ತು ಆರೋಗ್ಯಕರ ಹಾಗೂ ಸಂತೋಷದ ರಾಷ್ಟ್ರ ನಿರ್ಮಾಣಕ್ಕೆ ಸಹಾಯಕವಾಗಲಿದೆ. ಇದು ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ಕೈಗೊಂಡಿರುವ ಗಮನಾರ್ಹ ಕಾರ್ಯಕ್ಕೆ ಪೂರಕವಾಗಿದೆ” ಎಂದು ಹೇಳಿದರು. ಟ್ರಾನ್ಸ್ ಪೋರ್ಟ್ ಫಾರ್ ಆಲ್ ಚಾಲೆಂಜ್ ಉದ್ಘಾಟಿಸಿದ ಸಚಿವರು, ಕೋವಿಡ್-19 ಇಡೀ ವಿಶ್ವವನ್ನು ತಟಸ್ಥಗೊಳಿಸಿದೆ. ಅಂತೆಯೇ ಸಾರಿಗೆ ವಲಯ ತೀವ್ರ ಬಾಧಿತವಾಗಿದೆ ಎಂದರು. ಟ್ರಾನ್ಸ್ ಪೋರ್ಟ್ ಫಾರ್ ಆಲ್ ಡಿಜಿಟಲ್ ನಾವಿನ್ಯ ಸ್ಪರ್ಧೆ ನಗರಗಳು ಈ ಸಾರಿಗೆ ಬಿಕ್ಕಟ್ಟಿನಿಂದ ಚೇತರಿಸಿಕೊಳ್ಳಲು ಬೆಂಬಲ ನೀಡಲಿದೆ ಎಂದರು.
ಈಟ್ ಸ್ಮಾರ್ಟ್ ಸಿಟಿ ಚಾಲೆಂಜ್ ನ ಉದ್ದೇಶ ಸ್ಮಾರ್ಟ್ ಸಿಟಿಗಳಲ್ಲಿ ಆರೋಗ್ಯಕರ, ಸುರಕ್ಷಿತ ಮತ್ತು ಸುಸ್ಥಿರ ಆಹಾರ ವಾತಾವರಣವನ್ನು ಅಭಿವೃದ್ಧಿಪಡಿಸಲು ಬೆಂಬಲಿಸುವುದು. ಇದಕ್ಕೆ ಸಾಂಸ್ಥಿಕ, ಭೌತಿಕ, ಸಾಮಾಜಿಕ ಮತ್ತು ಆರ್ಥಿಕ ಮೂಲಸೌಕರ್ಯವನ್ನು ಒದಗಿಸಲಾಗುವುದು. ಜೊತೆಗೆ ಆಹಾರ ಸಂಬಂಧಿ ವಿಚಾರಗಳನ್ನು ಎದುರಿಸಲು ‘ಸ್ಮಾರ್ಟ್’ ಪರಿಹಾರಗಳನ್ನು ಅಳವಡಿಸಿಕೊಳ್ಳಲಾಗುವುದು. ಟ್ರಾನ್ಸ್ ಪೋರ್ಟ್ ಫಾಲ್ ಆಲ್ ಡಿಜಿಟಲ್ ನಾವಿನ್ಯ ಸ್ಪರ್ಧೆಯ ಉದ್ದೇಶ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುರಕ್ಷಿತ, ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡುವುದು, ಆರಾಮದಾಯಕ ಮತ್ತು ಎಲ್ಲರ ವಿಶ್ವಾಸಗಳಿಸಲು ಡಿಜಿಟಲ್ ಪರಿಹಾರಗಳನ್ನು ಅಭಿವೃದ್ಧಿ ಗೊಳಿಸುವುದಾಗಿದೆ.
ಶ್ರೀ ದುರ್ಗಾಶಂಕರ್ ಮಿಶ್ರಾ ಮಾತನಾಡಿ, ನಗರಗಳನ್ನು ಬೆಂಬಲಿಸಲು ಟ್ರಾನ್ಸ್ ಪೋರ್ಟ್ ಫಾರ್ ಆಲ್ ಡಿಜಿಟಲ್ ನಾವಿನ್ಯ ಸ್ಪರ್ಧೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆರಂಭಿಸಿರುವುದು ಸಂತೋಷಕರ ಸಂಗತಿ. ದೇಶಾದ್ಯಂತ ಎಲ್ಲ ನವೋದ್ಯಮಗಳು ನಗರ ಸಾರಿಗೆಯಲ್ಲಿ ಡಿಜಿಟಲ್ ಪರಿವರ್ತನೆಗಳತ್ತ ಸಾಗಬೇಕಿದೆ ಎಂದದರು. ಈಟ್ ಸ್ಮಾರ್ಟ್ ಸಿಟಿ ಚಾಲೆಂಜ್ ಒಂದು ಆಹಾರ ವ್ಯವಸ್ಥೆಗಳನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಸಂಯೋಜಿಸುವ ಪರಿಕಲ್ಪನೆಗಳನ್ನು ಅಭಿವೃದ್ಧಿಗೊಳಿಸಲು ಭಾರತ ಅತ್ಯಂತ ಮಹತ್ವದ ಪಾತ್ರವನ್ನು ಈಟ್ ಸ್ಮಾರ್ಟ್ ಸಿಟಿ ಚಾಲೆಂಜ್ ಮೂಲಕ ವಹಿಸಲಿದೆ ಮತ್ತು ಜನರಿಗೆ ಆರೋಗ್ಯಕರ, ಸುರಕ್ಷಿತ ಮತ್ತು ಆಹಾರಾಭ್ಯಾಸಗಳನ್ನು ಪೋಷಿಸಲಿದೆ ಎಂದರು.
ಈಟ್ ಸ್ಮಾರ್ಟ್ ಸಿಟಿ ಚಾಲೆಂಜ್
ಎಫ್ಎಸ್ಎಸ್ಎಐ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ‘ಈಟ್ ರೈಟ್ ಇಂಡಿಯಾ’ ಅಭಿಯಾನವನ್ನು ಆರಂಭಿಸಿದ್ದು, ಇದು ದೀರ್ಘಾವಧಿಯಲ್ಲಿ ಜನರಲ್ಲಿ ಸುರಕ್ಷಿತ, ಆರೋಗ್ಯಕರ ಮತ್ತು ಸುಸ್ಥಿರ ಆಹಾರ ಸೇವನೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದೆ. ಇಂದು ಈಟ್ ಸ್ಮಾರ್ಟ್ ಸಿಟಿ ಚಾಲೆಂಜ್ಅನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಂತ್ರಣ ಪ್ರಾಧಿಕಾರ(ಎಫ್ಎಸ್ಎಸ್ಎಐ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆಶ್ರಯದಲ್ಲಿ ಆರಂಭಿಸಿದೆ.
ಎಫ್ಎಸ್ಎಸ್ಎಐನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅರುಣ್ ಸಿಂಘಾಲ್, ಈಟ್ ಸ್ಮಾರ್ಟ್ ಸಿಟೀಸ್ ಸ್ಪರ್ಧೆ, ನಗರದ ಜನಸಂಖ್ಯೆಯನ್ನು ಸೂಕ್ತ ಆಹಾರ ಸೇವನೆಗೆ ಉತ್ತೇಜನ ನೀಡುವ ಮೂಲಕ ಅವರ ಜೀವನದಲ್ಲಿ ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಲಿದೆ ಎಂದರು. ಆಹಾರದ ಸುರಕ್ಷತೆ, ಶುಚಿತ್ವ, ಪೋಷಕಾಂಶದ ನಿಟ್ಟಿನಲ್ಲಿ ಇದು ಸಾಮಾಜಿಕ ಮತ್ತು ನಡವಳಿಕೆ ಬದಲಾವಣೆಯ ಬೃಹತ್ ಪರಿವರ್ತಕವಾಗಲಿದೆ ಎಂದು ಅವರು ಹೇಳಿದರು.
ಈಟ್ ಸ್ಮಾರ್ಟ್ ಸಿಟೀಸ್ ಚಾಲೆಂಜ್ ಸ್ಪರ್ಧೆ ನಗರಗಳ ನಡುವಿನ ಒಂದು ಸ್ಪರ್ಧೆಯಾಗಿದ್ದು, ಈಟ್ ರೈಟ್ ಇಂಡಿಯಾ ಅಡಿಯಲ್ಲಿ ಹಲವು ಉಪಕ್ರಮಗಳ ವೃದ್ಧಿ ಮತ್ತು ಅಳವಡಿಕೆ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಗಳನ್ನು ಗುರುತಿಸುವುದಾಗಿದೆ. ಈ ವಿಶಿಷ್ಟ ಸ್ಪರ್ಧೆಯಲ್ಲಿ ಸ್ಮಾರ್ಟ್ ಸಿಟಿ ಮಿಷನ್ ನ ಪಾಲುದಾರಿಕೆಯೊಂದಿಗೆ ಉತ್ತಮ ಆಹಾರ ಪದ್ಧತಿಗಳು ಮತ್ತು ಹವ್ಯಾಸಗಳ ವಾತಾವರಣ ಸೃಷ್ಟಿ ಮತ್ತು ಆಹಾರ ಸುರಕ್ಷತೆ ಮತ್ತು ನಿಯಂತ್ರಣ ಪರಿಸರ ಬಲವರ್ಧನೆ, ಗ್ರಾಹಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಅವರನ್ನು ಭಾರತದ ಪ್ರಮುಖ ನಗರಗಳಲ್ಲಿ ಉತ್ತಮ ಆಹಾರ ಆಯ್ಕೆಗೆ ಅವರನ್ನು ಪ್ರೇರೇಪಿಸುವುದು ಮತ್ತು ಇತರೆ ನಗರಗಳಿಗೆ ಅದನ್ನು ಅನುಕರಿಸಲು ಮಾದರಿಯನ್ನು ಸೃಷ್ಟಿಸುವ ಉದ್ದೇಶವಿದೆ. ಈ ಸ್ಪರ್ಧೆ ಎಲ್ಲಾ ಸ್ಮಾರ್ಟ್ ಸಿಟಿಗಳು, ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು ಮತ್ತು 5 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳು ಪಾಲ್ಗೊಳ್ಳಲು ಮುಕ್ತವಾಗಿದೆ. ಸ್ಪರ್ಧೆಯ ಮೊದಲನೇ ಹಂತದ ಕೊನೆಯಲ್ಲಿ 11 ನಗರಗಳನ್ನು ತಮ್ಮ ದೂರದೃಷ್ಟಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಾಗೂ ಆಳವಾದ ಸಹಭಾಗಿತ್ವವನ್ನು ಹೊಂದಲು ಆಯ್ಕೆ ಮಾಡಲಾಗುವುದು. (https://eatrightindia.gov.in/eatsmartcity)
ಸರ್ವರಿಗೂ ಸಾರಿಗೆ- ಟ್ರಾನ್ಸ್ ಪೋರ್ಟ್ ಫಾರ್ ಆಲ್(ಟಿ4ಆಲ್) ಸ್ಪರ್ಧೆ
ಭಾರತದ ನಗರಗಳಿಗೆ ಸಾರ್ವಜನಿಕ ಸಾರಿಗೆಯಲ್ಲಿ ಹೂಡಿಕೆ ಮಾಡಲು ಇದೊಂದು ಸುವರ್ಣ ಅವಕಾಶವಾಗಿದೆ. ಅದನ್ನು ಸಾಮಾಜಿಕ ಒಳಿತಿಗೆ, ಸಂಪೂರ್ಣವಾಗಿ ಅನೌಪಚಾರಿಕ ಸಾರಿಗೆ ವ್ಯವಸ್ಥೆಯನ್ನು ಪುನರ್ ರೂಪಿಸಲು ಮತ್ತು ಬಳಕೆದಾರರ ಅನುಭವ ಸುಧಾರಿಸಲು ಡಿಜಿಟಲ್ ನಾವಿನ್ಯಗಳಿಗೆ ಆದ್ಯತೆಗಳನ್ನು ನೀಡುವುದಾಗಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಐಟಿಡಿಪಿ ಸಹಭಾಗಿತ್ವದಲ್ಲಿ ಟ್ರಾನ್ಸ್ ಪೋರ್ಟ್ ಫಾರ್ ಆಲ್ – ಸರ್ವರಿಗೂ ವಸತಿ ಸ್ಪರ್ಧೆಯನ್ನು ಆರಂಭಿಸಿದೆ. ಈ ಸ್ಪರ್ಧೆಯ ಉದ್ದೇಶ ನಗರಗಳನ್ನು, ನಾಗರಿಕ ಗುಂಪುಗಳನ್ನು ಮತ್ತು ನವೋದ್ಯಮಗಳನ್ನು ಒಗ್ಗೂಡಿಸಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸುಧಾರಣೆಗೆ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಎಲ್ಲ ಸಾರ್ವಜನಿಕರಿಗೆ ಉತ್ತಮ ಸೇವಾ ಅಗತ್ಯಗಳನ್ನು ಪೂರೈಸುವುದಾಗಿದೆ.
ಸ್ಪರ್ಧೆಯ ಪ್ರಮುಖ ಅಂಶವೆಂದರೆ ನಾಗರಿಕರು ಕೇವಲ ತಮ್ಮ ಸಮಸ್ಯೆಗಳನ್ನು ವ್ಯಾಖ್ಯಾನಿಸುವುದಿಲ್ಲ. ಅವುಗಳಿಗೆ ಸೂಕ್ತ ಪರಿಹಾರಗಳನ್ನು ಸೂಚಿಸುತ್ತಾರೆ ಮತ್ತು ನವೋದ್ಯಮಗಳು ಹಾಗೂ ನಗರಗಳಿಗೆ ತಮ್ಮ ಅಗತ್ಯಗಳಿಗೆ ಪರಿಹಾರಗಳನ್ನು ಹುಡುಕಲು ನೆರವಾಗುತ್ತಾರೆ. ಸ್ಪರ್ಧೆಯ ಮೊದಲ ಆವೃತ್ತಿಯಲ್ಲಿ ಡಿಜಿಟಲ್ ನಾವಿನ್ಯತೆಗೆ ಒತ್ತು ನೀಡಲಾಗಿದೆ. ನಗರಗಳು ಮತ್ತು ನವೋದ್ಯಮಗಳು ಹಲವು ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಪ್ರಯೋಗಿಸಲು ಮಾರ್ಗದರ್ಶನ ನೀಡಲಿದೆ ಮತ್ತು ಅವುಗಳಿಂದ ಪಾಠ ಕಲಿತು, ಸಾರ್ವಜನಿಕ ಸಾರಿಗೆಯಲ್ಲಿ ಜನರ ವಿಶ್ವಾಸವನ್ನು ವೃದ್ಧಿಸಿ, ಅವರ ಸಂಚಾರವನ್ನು ಹೆಚ್ಚಿಸಲಿದೆ. ಸಾರ್ವಜನಿಕ ಸಾರಿಗೆಯನ್ನು ಔಪಚಾರಿಕ ಹಾಗೂ ಅನೌಪಚಾರಿಕ, ಸುರಕ್ಷಿತ, ಆರಾಮದಾಯಕ ಮತ್ತು ಕೈಗೆಟಕುವ ದರದಲ್ಲಿ ಲಭ್ಯವಾಗುವಂತೆ ಮಾಡಲು ಪರಿಹಾರಗಳನ್ನು ಕಂಡುಹಿಡಿಯಲಾಗುವುದು. ಎಲ್ಲಾ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ಆಯ್ಕೆಯಾಗಿರುವ ಎಲ್ಲ ನಗರಗಳು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳು ಮತ್ತು 5 ಲಕ್ಷಕ್ಕಿಂತ ಜನಸಂಖ್ಯೆ ಹೊಂದಿರುವ ನಗರಗಳು ಇದರಲ್ಲಿ ಭಾಗವಹಿಸಲು ಅರ್ಹವಾಗಿರುತ್ತವೆ.
ಸ್ಪರ್ಧೆಯ ಮೂರು ಹಂತಗಳು
ಸರ್ವರಿಗೂ ಸಾರಿಗೆ ಸ್ಪರ್ಧೆಯ ಡಿಜಿಟಲ್ ನಾವೀನ್ಯದಲ್ಲಿ ಈ ಕೆಳಗಿನ ಮೂರು ಹಂತಗಳನ್ನು ಒಳಗೊಂಡಿವೆ:
· ಒಂದನೇ ಹಂತ - ಸಮಸ್ಯೆಗಳನ್ನು ಗುರುತಿಸುವುದು: ನಗರಗಳು ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ನಾಗರಿಕರು ಎದುರಿಸುತ್ತಿರುವ ಪ್ರಮುಖ ಸವಾಲುಗಳು ಮತ್ತು ಸಾರ್ವಜನಿಕ ಸಾರಿಗೆ ಆಪರೇಟರ್ ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸುವುದು.
· ಎರಡನೇ ಹಂತ – ಪರಿಹಾರ ಸೃಷ್ಟಿ: ನವೋದ್ಯಮಗಳು ಸ್ಮಾರ್ಟ್ ಸಿಟಿಗಳು ಮತ್ತು ಸರ್ಕಾರೇತರ ಸಂಸ್ಥೆಗಳಿಂದ ಮಾಹಿತಿ ಪಡೆದು, ಸಾರ್ವಜನಿಕ ಸಾರಿಗೆ ಸುಧಾರಣೆಗೆ ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದು.
· ಮೂರನೇ ಹಂತ – ಪ್ರಾಯೋಗಿಕ ಪರೀಕ್ಷೆ: ನಗರಗಳಲ್ಲಿನ ನವೋದ್ಯಮಗಳು ದೊಡ್ಡ ಪ್ರಮಾಣದ ಪ್ರಾಯೋಗಿಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಮತ್ತು ನಾಗರಿಕರ ಪ್ರತಿಕ್ರಿಯೆ ಆಧರಿಸಿ ಪರಿಹಾರಗಳನ್ನು ಮರುವ್ಯಾಖ್ಯಾನಿಸಬೇಕು.
ಸ್ಪರ್ಧೆಯ ಭಾಗವಾಗಿ ನಗರಗಳು ಸರ್ವರಿಗೂ ಸಾರಿಗೆ ಕಾರ್ಯಪಡೆ(ಟಿಟಿಎಫ್)ಅನ್ನು ಸ್ಥಾಪಿಸಬೇಕು. ಅದರಲ್ಲಿ ಪ್ರಮುಖ ಪಾಲುದಾರರು ಅಂದರೆ ಮುನ್ಸಿಪಲ್ ಕಾರ್ಪೊರೇಷನ್, ಸ್ಮಾರ್ಟ್ ಸಿಟಿ ಎಸ್ ಪಿವಿ, ನಗರ ಸಾರಿಗೆ ಸಂಸ್ಥೆಗಳು, ಮೆಟ್ರೋ ಮತ್ತು ಉಪನಗರ ರೈಲುಗಳು, ಪ್ರಾದೇಶಿಕ ಸಾರಿಗೆ ಕಚೇರಿ, ಸಂಚಾರಿ ಪೊಲೀಸ್, ರಸ್ತೆ ಒಡೆತನ ಹೊಂದಿರುವ ಸಂಸ್ಥೆಗಳು, ಇಂಟರ್ ಮೀಡಿಯೇಟ್ ಸಾರ್ವಜನಿಕ ಸಾರಿಗೆ(ಐಪಿಟಿ) ಒಕ್ಕೂಟಗಳು, ಎನ್ ಜಿಒಗಳು ಮತ್ತು ಸುಸ್ಥಿರ ಸಾರಿಗೆ ವಲಯದಲ್ಲಿ ದುಡಿಯುತ್ತಿರುವ ಶೈಕ್ಷಣಿಕ ಸಂಸ್ಥೆಗಳು ಒಳಗೊಂಡಿರಬೇಕು(www.transport4all.in)
ಸ್ಮಾರ್ಟ್ ಸಿಟಿ ಮಿಷನ್ ಕುರಿತ ತಾಜಾ ಮಾಹಿತಿ
ಕಳೆದ ಒಂದು ವರ್ಷದಿಂದೀಚೆಗೆ ಯೋಜನೆ ಅನುಷ್ಠಾನವನ್ನು ತೀವ್ರಗೊಳಿಸಲಾಗಿದ್ದು, ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ನೆಲದಾಳದಲ್ಲಿ ಕೇಬಲ್ ಗಳ ಅಳವಡಿಕೆ ಮತ್ತು ಆ ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತು ನೀಡಲಾಗಿದೆ. 2021ರ ಏಪ್ರಿಲ್ 9ರ ವರೆಗೆ ಸ್ಮಾರ್ಟ್ ಸಿಟಿ ಯೋಜನೆಗಳಡಿ ಒಟ್ಟು 2,05,018 ಕೋಟಿ ರೂ.ಗಳ ಹೂಡಿಕೆಗಳನ್ನು ಅನುಮೋದಿಸಲಾಗಿದೆ. 1,73,600 ಕೋಟಿ ರೂ. ವೆಚ್ಚದ(ಒಟ್ಟು ಶೇ.85ರಷ್ಟು) 5,600 ಯೋಜನೆಗಳಿಗೆ ಟೆಂಡರ್ ಕರೆಯಲಾಗಿದೆ: ಆ ಪೈಕಿ 1,40,500 ಕೋಟಿ ರೂ.(ಒಟ್ಟು ಶೇ.96ರಷ್ಟು) ಮೌಲ್ಯದ 4,900 ಯೋಜನೆಗಳ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ. 40,263 ಕೋಟಿ ರೂ.(ಒಟ್ಟು ಶೇ.20ರಷ್ಟು) ಮೌಲ್ಯದ 2,426 ಯೋಜನೆಗಳು ಸಂಪೂರ್ಣವಾಗಿ ಮುಕ್ತಾಯಗೊಂಡಿವೆ ಮತ್ತು ಕಾರ್ಯನಿರ್ವಹಿಸುತ್ತಿವೆ. ಕಳೆದ 30 ತಿಂಗಳಲ್ಲಿ ಶೇ. 247ರಷ್ಟು ಟೆಂಡರಿಂಗ್ ಕಾರ್ಯ ಬೆಳವಣಿಗೆಯಾಗಿದೆ. ಶೇ.353ರಷ್ಟು ಯೋಜನೆಗಳ ಆರಂಭ ಮತ್ತು ಮುಕ್ತಾಯ ಪ್ರಗತಿಯಾಗಿದೆ ಹಾಗೂ ಶೇ.663ರಷ್ಟು ಯೋಜನೆಗಳು ಪೂರ್ಣಗೊಂಡಿವೆ.
ನಗರ ಕಲಿಕೆ ಮತ್ತು ಇಂಟರ್ನ್ ಶಿಪ್ (ಪ್ರಶಿಕ್ಷಣಾ) ಕಾರ್ಯಕ್ರಮ(ಟಿಯುಎಲ್ಐಪಿ) ಹೊಸ ಪದವೀಧರರಿಗೆ ಕಲಿಕೆಯ ಅಗತ್ಯಗಳನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅವಕಾಶಗಳನ್ನು ಒದಗಿಸುವ ಗುರಿ ಹೊಂದಿದೆ. 280 ನಗರ ಸ್ಥಳೀಯ ಸಂಸ್ಥೆಗಳು 15,823 ಇಂಟರ್ನ್ ಶಿಪ್ ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಈವರೆಗೆ 919 ವಿದ್ಯಾರ್ಥಿಗಳು ಇಂಟರ್ನ್ ಶಿಪ್ ನಲ್ಲಿ ತೊಡಗಿದ್ದಾರೆ ಮತ್ತು 376 ವಿದ್ಯಾರ್ಥಿಗಳು ತಮ್ಮ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಈ ಮಿಷನ್ ಅಡಿಯಲ್ಲಿ 2022ರ ವೇಳೆಗೆ 100 ಸ್ಮಾರ್ಟ್ ಸಿಟಿಗಳಲ್ಲಿ ಐಸಿಸಿಸಿಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಈ ಯೋಜನೆಯ ಮುಕ್ತಾಯದ ವೇಳೆಗೆ 500 ನಗರಗಳಲ್ಲಿ ಡಾಟಾ ಸ್ಮಾರ್ಟ್ ಸಿಟಿ ಕಾರ್ಯತಂತ್ರಗಳನ್ನು ವೃದ್ಧಿಸಲಾಗುವುದು. ಈ ಕಾರ್ಯಕ್ರಮದಡಿ 500 ನಗರಗಳಲ್ಲಿ ಓಪನ್ ಡಾಟಾ ಫ್ಲಾಟ್ ಫಾರಂ/ಇಂಡಿಯಾ ಅರ್ಬನ್ ಡಾಟಾ ಎಕ್ಸ್ ಚೇಂಜ್(ಐಯುಡಿಎಕ್ಸ್) ಬಲವರ್ಧನೆಗೊಳಿಸಲಾಗುವುದು. ನಗರಗಳು ತಮ್ಮ ಸ್ವಯಂ ಮೌಲ್ಯಮಾಪನ ಮಾಡಲು ಡಾಟಾ ಸ್ಮಾರ್ಟ್ ನಗರಗಳ ಕಾರ್ಯತಂತ್ರದೊಂದಿಗೆ ಹೊಂದಿಕೆಯಾದ ಡಾಟಾ ಮೆಚ್ಯುರಿಟಿ ಮೌಲ್ಯಮಾಪನದ ಎರಡನೇ ಹಂತದ ಕಾರ್ಯ ಸದ್ಯ ಸ್ಮಾರ್ಟ್ ಸಿಟಿಗಳಲ್ಲಿ ಪ್ರಗತಿಯಲ್ಲಿದೆ.
***
(Release ID: 1712115)
Visitor Counter : 268