ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ನವಜಾತ ಶಿಶು, ಅಂಬೆಗಾಲಿಡುವ ಕೂಸು ಮತ್ತು ಪಾಲನೆ-ಸ್ನೇಹಿ ನೆರೆಹೊರೆ ತರಬೇತಿ ಮತ್ತು ಸಾಮರ್ಥ್ಯವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ

ಪ್ರಮಾಣೀಕೃತ ತರಬೇತಿ ಮತ್ತು ಸಾಮರ್ಥ್ಯವೃದ್ಧಿ ಮಾದರಿ ಮೂಲಕ ನಗರದ ಅಧಿಕಾರಿಗಳು ಮತ್ತು ಯುವ ವೃತ್ತಿಪರರಿಗೆ ಕೌಶಲ್ಯ ತುಂಬುವ ಪ್ರಯತ್ನ

Posted On: 13 APR 2021 4:54PM by PIB Bengaluru

ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ(ಎನ್ಐಯುಎ) ಬರ್ನಾರ್ಟ್ ವನ್ ಲೀರ್ ಫೌಂಡೇಷನ್(ಬಿವಿಎಲ್ಎಫ್) ಪಾಲುದಾರಿಕೆಯಲ್ಲಿ ಆರಂಭಿಸಿರುವ ನವಜಾತ ಶಿಶು, ಅಂಬೆಗಾಲಿಡುವ ಕೂಸು ಮತ್ತು ಪಾಲನಾ-ಸ್ನೇಹಿ ನೆರೆಹೊರೆ(ಐಟಿಸಿಎನ್) ತರಬೇತಿ ಮತ್ತು ಸಾಮರ್ಥ್ಯವೃದ್ಧಿ ಯೋಜನೆಯನ್ನು ಆರಂಭಿಸಿದೆ. ಕಾರ್ಯಕ್ರಮವನ್ನು ಭಾರತದ ನಗರಗಳಲ್ಲಿ ಚಿಕ್ಕ ಮಕ್ಕಳು ಮತ್ತು ಕುಟುಂಬ ಸ್ನೇಹಿ ನೆರೆಹೊರೆ ಅಭಿವೃದ್ಧಿಗೆ ನಗರದ ಅಧಿಕಾರಿಗಳು ಮತ್ತು ಯುವ ವೃತ್ತಿಪರರ ಸಾಮರ್ಥ್ಯವೃದ್ಧಿಗೆ ನೆರವು ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಯೋಜನಾ ನಿರ್ದೇಶಕ(ಸ್ಮಾರ್ಟ್ ಸಿಟಿ) ಮತ್ತು ಜಂಟಿ ಕಾರ್ಯದರ್ಶಿ ಶ್ರೀ ಕುನಾಲ್ ಕುಮಾರ್ ಅವರು ರಿಮೋಟ್ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಇದರಲ್ಲಿ ಎನ್ಐಯುಎನ ನಿರ್ದೇಶಕ ಶ್ರೀ ಹಿತೇಶ್ ವೈದ್ಯ, ಬಿವಿಎಲ್ಎಫ್ ಭಾರತದ ಪ್ರತಿನಿಧಿ ಶ್ರೀಮತಿ ರುಶ್ದಾ ಮಜೀದ್, ಎನ್ಐಯುಎನ ಡಿಜಿಟಲ್ ಆಡಳಿತ ಕೇಂದ್ರದ ರಾಷ್ಟ್ರೀಯ ಕಾರ್ಯಕ್ರಮ ಮುಖ್ಯಸ್ಥರಾದ ಶ್ರೀಮತಿ ಕಕುಲ್ ಮಿಶ್ರ, ಎನ್ಐಯುಎನ ಬಿಲ್ಡಿಂಗ್ ಆಕ್ಸಿಸಬಲ್ ಸೇಫ್ ಮತ್ತು ಇನ್ ಕ್ಲೂಸಿವ್ ಇಂಡಿಯನ್ ಸಿಟೀಸ್ ತಂಡದ ನಾಯಕ ಶ್ರೀ ಉತ್ಸವ್ ಚೌಧರಿ ಮತ್ತಿತರರು ಭಾಗವಹಿಸಿದ್ದರು. ಸ್ಮಾರ್ಟ್ ಸಿಟಿಗಳ ಸಿಎಫ್ಒಗಳು, ಮಹಾನಗರ ಪಾಲಿಕೆಗಳ ಆಯುಕ್ತರು ಮತ್ತು ಯುವ ವೃತ್ತಿಪರರು ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಕ್ಕಳಿಗಾಗಿ ವಿನ್ಯಾಸಗೊಂಡ ನಗರ ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ ಎಂದು ಶ್ರೀ ಕುನಾಲ್ ಕುಮಾರ್ ಹೇಳಿದರು. ನಗರಗಳಲ್ಲಿ ಸಾಮರ್ಥ್ಯವೃದ್ಧಿಯನ್ನು ಖಾತ್ರಿಪಡಿಸಲು ಡಾಟಾ ಸ್ಮಾರ್ಟ್ ನವಜಾತ ಶಿಶು, ಅಂಬೆಗಾಲಿಡುವ ಕೂಸು ಹಾಗೂ ಪಾಲನಾ ಸ್ನೇಹಿ ನೆರೆಹೊರೆ ಸೃಷ್ಟಿಸುವುದು ಭವಿಷ್ಯದ ಉತ್ಪಾದಕ ಆರ್ಥಿಕತೆಯ ಹೂಡಿಕೆಯಾಗಿದೆ ಎಂದರು.

ಇದು ಎನ್ಐಯುಎ ಮತ್ತು ಬಿವಿಎಲ್ಎಫ್ ನಡುವೆ ದೀರ್ಘಕಾಲದ ಪಾಲುದಾರಿಕೆ ಮುಂದುವರಿಸುವ ಕಾರ್ಯಕ್ರಮವಾಗಿದೆ. ಜೊತೆಗೆ ನಮ್ಮ ಪ್ರಯತ್ನಗಳನ್ನು ವೃದ್ಧಿಸುವ ಹಾಗೂ ಐಟಿಸಿ ಅಗತ್ಯತೆಗಳ ಪಾಠಗಳನ್ನು ನಗರದೊಳಗಿನ ಕಾರ್ಯಕ್ರಮದಲ್ಲಿ ನೆರೆಹೊರೆಯ ಮಟ್ಟದಲ್ಲಿರಲಿದೆ. ಕಾರ್ಯಕ್ರಮದಡಿ ನಗರದ ಅಧಿಕಾರಿಗಳು ಮತ್ತು ಯುವ ವೃತ್ತಿಪರರಿಗೆ ಪ್ರಮಾಣೀಕೃತ ತರಬೇತಿ ಮತ್ತು ಸಾಮರ್ಥ್ಯವೃದ್ಧಿ ಮಾದರಿಗಳನ್ನು ತಿಳಿಸಿಕೊಡುವ ಉದ್ದೇಶವಿದೆ. ಇದರಡಿ ತರಬೇತಿಯನ್ನು ಅತ್ಯಂತ ವ್ಯವಸ್ಥಿತ ಮಾದರಿಯಲ್ಲಿ ನೀಡುವ ಉದ್ದೇಶವಿದ್ದು, ರಾಷ್ಟ್ರೀಯ ನಗರ ಕಲಿಕೆ ವೇದಿಕೆ(ಎನ್ ಯುಎಲ್ ಪಿ) ಅಡಿ ಆನ್ ಲೈನ್ ಮೂಲಕ ನೀಡಲಾಗುವುದು. ವೇದಿಕೆಯನ್ನು ಎಂಒಎಚ್ ಯುಎ ಮತ್ತು ಎನ್ಐಯುಎ ಜ್ಞಾನ ಪಸರಿಸಲು ಅಭಿವೃದ್ಧಿಪಡಿಸಿದೆ.

ಕಾರ್ಯಕ್ರಮಗಳನ್ನು ಎರಡು ಉದ್ದೇಶಗಳೊಂದಿಗೆ ರೂಪಿಸಲಾಗಿದೆ. ಮೊದಲಿಗೆ ಎನ್ಐಯುಎ ಮತ್ತು ಬಿವಿಎಲ್ಎಫ್ ಅಭಿವೃದ್ಧಿಪಡಿಸಿರುವ ಜ್ಞಾನದ ಕಣಜದ ಕಲಿಕೆಯಾಗಿದ್ದು, ಅದು ನಿರಂತರವಾಗಿ ನಡೆಯುತ್ತಿದೆ ಮತ್ತು ಉದ್ದೇಶಿತ ನಗರ ಅಭಿವೃದ್ಧಿಯ ಉಪಕ್ರಮಗಳಲ್ಲಿ ನೆರೆಹೊರೆ ಮತ್ತು ನಗರ ಮಟ್ಟದಲ್ಲಿ ಇರಲಿದೆ; ಎರಡನೆಯದಾಗಿ ಮಕ್ಕಳ ಮತ್ತು ಪಾಲನೆ ಮಾಡುವವರ ಪ್ರತಿ ದಿನದ ಅಗತ್ಯತೆಗಳನ್ನು ಗಮನಿಸಿ ನಗರಗಳಲ್ಲಿ ಹಲವು ಉಪಕ್ರಮಗಳನ್ನು ಕಲಿಸುವ ಮೂಲಕ ಭಾಗೀದಾರರನ್ನು ಬೆಂಬಲಿಸಲಾಗುವುದು. ಅಲ್ಲದೆ ಹೆಚ್ಚುವರಿಯಾಗಿ ನಗರದಲ್ಲಿ ಚಿಕ್ಕ ಮಕ್ಕಳ(0-5 ವರ್ಷದೊಳಗಿನ) ಅಗತ್ಯತೆಗಳನ್ನು ಜಾಗೃತಿ ಮೂಡಿಸಲು ಯುವ ವೃತ್ತಿಪರರಿಗೆ ಶೈಕ್ಷಣಿಕ ಪ್ರಮಾಣೀಕೃತ ಕೋರ್ಸ್ ಇರಲಿದೆ ಮತ್ತು ಉದ್ದೇಶಕ್ಕಾಗಿ ಅವರನ್ನು ಅಗತ್ಯ ತಂತ್ರದೊಂದಿಗೆ ಸಜ್ಜುಗೊಳಿಸಲಾಗುವುದು.

ನಗರ ವ್ಯವಹಾರಗಳ ರಾಷ್ಟ್ರೀಯ ಕೇಂದ್ರದ ನಿರ್ದೇಶಕರಾದ ಶ್ರೀ ಹಿತೇಶ್ ವೈದ್ಯ ಅವರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ಯೋಜನೆಗಳನ್ನು ರೂಪಿಸಿದಾಗ ನಾವು ಕೇವಲ ಸದ್ಯದ ಅಗತ್ಯತೆಗಳಿಗೆ ಹಣ ತೊಡಗಿಸುವುದಷ್ಟೇ ಅಲ್ಲ, ಮುಂದಿನ ಪೀಳಿಗೆಗೂ ಅಭಿವೃದ್ಧಿಯ ಫಲ ಆನಂದಿಸುವಂತೆ ಮತ್ತು ಅಸ್ವಾದಿಸುವಂತೆ ಮಾಡಬೇಕಿದೆ ಎಂದು ಹೇಳಿದರು.

ಬರ್ನಾರ್ಡ್ ವನ್ ಲೀರ್ ಫೌಂಡೇಷನ್ ಭಾರತದ ಪ್ರತಿನಿಧಿ ರುಶ್ದಾ ಮಜೀದ್, ಎನ್ಐಯುಎನ ಪಾಲುದಾರಿಕೆಯೊಂದಿಗೆ ಫೌಂಡೇಷನ್ ನಗರ ಅಧಿಕಾರಿಗಳು ಮತ್ತು ಯುವ ನಗರ ಯೋಜನಕಾರರಿಗೆ ಸೂಕ್ತ ತರಬೇತಿ, ಉಪಕರಣ ಮತ್ತು ಸಂಪನ್ಮೂಲಗಳನ್ನು ಒದಗಿಸಿ ಅವರುಗಳ ನಗರಗಳನ್ನು ಸಮಾನ, ಸಮಗ್ರ ಮತ್ತು ಚಿಕ್ಕ ಮಕ್ಕಳು ಮತ್ತು ಅವರ ಕುಟುಂಬಸ್ನೇಹಿಯನ್ನಾಗಿ ರೂಪಿಸಲಾಗುವುದು ಎಂದರು.

ಎನ್ಐಯುಎ ಕುರಿತು

ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ(ಎನ್ಐಯುಎ)ಅನ್ನು 1976ರಲ್ಲಿ ಸ್ಥಾಪಿಸಲಾಯಿತು. ಇದು ಭಾರತ ಸರ್ಕಾರದ ನಗರ ವ್ಯವಹಾರಗಳು ಮತ್ತು ವಸತಿ ಸಚಿವಾಲಯದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಇದು ಭಾರತದ ನಗರ ವಲಯದಲ್ಲಿ ಸಂಶೋಧನೆ ಮತ್ತು ಸಾಮರ್ಥ್ಯವೃದ್ಧಿಯನ್ನು ನೋಡಿಕೊಳ್ಳುತ್ತದೆ. ಸಂಸ್ಥೆ ನಗರ ಭಾರತದ ಪ್ರಮುಖ ಕಾಳಜಿಯ ಅಂಶಗಳ ಬಗ್ಗೆ ಸಕ್ರಿಯವಾಗಿ ಕಾರ್ಯೋನ್ಮುಖವಾಗಿದ್ದು, ಅದು ನಗರಗಳಲ್ಲಿ ನಾನಾ ಬಗೆಯ ನಗರ ಪ್ರವಚನ ಮತ್ತು ತನ್ನೆಲ್ಲಾ ಉಪಕ್ರಮಗಳು ಮತ್ತು ಕಾರ್ಯಕ್ರಮಗಳ ಮೂಲಕ ಸುಸ್ಥಿರ ಅಭಿವೃದ್ಧಿ ಗುರಿ(ಎಸ್ ಡಿಜಿಗಳು) ನಿಟ್ಟಿನಲ್ಲಿ ತನ್ನ ಬದ್ಧತೆಯನ್ನು ಹೊಂದಿವೆ. ಇದನ್ನು ಸಂಶೋಧನೆ, ಜ್ಞಾನ ನಿರ್ವಹಣೆ, ನೀತಿ ನಿರ್ವಹಣೆ ಮತ್ತು ಸಾಮರ್ಥ್ಯವೃದ್ಧಿಯಲ್ಲಿ ಇದರ ದಕ್ಷತೆಯನ್ನು ಬಳಸಿ ನಗರದ ಸವಾಲುಗಳನ್ನು ಹತ್ತಿಕ್ಕಲು ಮತ್ತು ದೇಶದಲ್ಲಿ ಸುಸ್ಥಿರ, ಎಲ್ಲವನ್ನು ಒಳಗೊಂಡ ಮತ್ತು ಉತ್ಪಾದನಾ ನಗರ ಪೂರಕ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಭಾರತದಲ್ಲಿ ನಗರಾಭಿವೃದ್ಧಿಗೆ ಚಿಂತನಾ ನಾಯಕ ಮತ್ತು ಜ್ಞಾನದ ತಾಣವಾಗಿ ರೂಪುಗೊಂಡಿದೆ ಮತ್ತು ಇದರಲ್ಲಿ ಭಾರತ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳು ಪಾಲುದಾರಿಕೆ ಹೊಂದಿವೆ ಮತ್ತು ಭಾರತದ ನಗರ ಪರಿವರ್ತನೆ ಪಯಣದಲ್ಲಿ ಸಹಭಾಗಿತ್ವವನ್ನು ಹೊಂದಿದೆ.

https://www.niua.org/

ಎನ್ ಯುಎಲ್ ಪಿ ಕುರಿತು

ರಾಷ್ಟ್ರೀಯ ನಗರ ಕಲಿಕಾ ವೇದಿಕೆ(ಎನ್ ಯುಎಲ್ ಪಿ)ಅನ್ನು ನಗರದ ಪ್ರಮುಖ ಪಾಲುದಾರರಿಗೆ ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯವನ್ನು ಒಗ್ಗೂಡಿಸಲು ಇದನ್ನು ಡಿಜಿಟಲ್ ಮಾಧ್ಯಮವನ್ನಾಗಿ ರೂಪಿಸಲಾಗಿದ್ದು, ಇದು ಎಲ್ಲಾ ಸಂಬಂಧಿಸಿದವರಿಗೆ ತಮ್ಮ ಆಯ್ಕೆಯ ಚಾನಲ್ ಆಗಿ ಲಭ್ಯವಿದೆ. ಎನ್ ಯುಎಲ್ ಪಿಯಲ್ಲಿ ಪಠ್ಯ ಸೃಷ್ಟಿ, ಉನ್ನತೀಕರಣ ಮತ್ತು ಖಾತ್ರಿ, ಪಠ್ಯ ಸಂಸ್ಥೆ ಮತ್ತು ನಿರ್ವಹಣೆ, ಕೋರ್ಸ್ ಗಳ ಅಭಿವೃದ್ಧಿ, ಕೋರ್ಸ್ ಗಳ ನಿರ್ವಹಣೆ ಮತ್ತು ಕೋರ್ಸ್ ಗಳ ಮೌಲ್ಯಮಾಪನ ಮತ್ತು ಪ್ರಮಾಣೀಕರಣ ಒಳಗೊಂಡಿದೆ.

https://nulp.nuis.in/

***(Release ID: 1711611) Visitor Counter : 19


Read this release in: Punjabi , English , Urdu , Hindi