ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಲೆಹ್‌ನಲ್ಲಿ ಕೃಷಿ ಮಾಹಿತಿ ಪ್ರಸಾರಕ್ಕಾಗಿ ʻಎನ್‌ಎಂಎಸ್‌ಇʼನ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ತಂಡಕ್ಕೆ ಪ್ರಶಸ್ತಿ ಪ್ರದಾನ

Posted On: 12 APR 2021 12:18PM by PIB Bengaluru

ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ವಿಜ್ಞಾನಿಗಳ ತಂಡಕ್ಕೆ ʻಪ್ರಯೋಗಾಲಯದಿಂದ ಹೊಲದವರೆಗೆ ವರೆಗೆ ಕೃಷಿ ಪದ್ಧತಿಗಳು ಮತ್ತು ತಂತ್ರಜ್ಞಾನಗಳ ಪ್ರಸಾರದಲ್ಲಿ ಉತ್ಕೃಷ್ಟತೆʼ ಪ್ರಶಸ್ತಿಯನ್ನು ರಾಷ್ಟ್ರೀಯ ಕೃಷಿ ನಿಯತಕಾಲಿಕವಾದ ʻಕೃಷಿ ಟುಡೇʼ ವತಿಯಿಂದ ನೀಡಲಾಗಿದೆ. ಲೆಹ್‌ನಂತಹ ದೂರದ ಪ್ರದೇಶಗಳಲ್ಲಿ ಜೀವನೋಪಾಯ ಮತ್ತು ಜೀವನಾಧಾರ ಉತ್ಪಾದನಾ ವ್ಯವಸ್ಥೆಗಳನ್ನು ಸುಧಾರಿಸಲು ವಿಜ್ಞಾನಿಗಳು ಮಾಡಿದ ಕೆಲಸವನ್ನು ಗುರುತಿಸಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಹಿಮಾಲಯದ ಪರಿಸರ ವ್ಯವಸ್ಥೆಯನ್ನು ಕಾಯ್ದುಕೊಳ್ಳುವ ರಾಷ್ಟ್ರೀಯ ಯೋಜನೆ (ಎನ್‌ಎಂಎಸ್‌ಇ) ಅಡಿಯಲ್ಲಿ ಹಿಮಾಲಯ ಕೃಷಿ ಕುರಿತ ಕಾರ್ಯಪಡೆಯ ಸಮನ್ವಯಕಾರರಾದ ಡಾ. ಎ. ಅರುಣಾಚಲಂ ಮತ್ತು ಲೆಹ್‌ ಘಟಕದ ಸಹ-ಪರಿಶೋಧಕ ಡಾ. ಎಂ. ರಘುವಂಶಿ ನೇತೃತ್ವದ ತಂಡವು ಹೊಸ ಬೆಳೆಗಳು ಮತ್ತು ವೈವಿಧ್ಯಮಯ ಮೌಲ್ಯಮಾಪನದೊಂದಿಗೆ ರೈತರ ಹೊಲಗಳಲ್ಲಿ ಅತ್ಯುತ್ತಮ ಕೃಷಿ ಪದ್ಧತಿಗಳು ಮತ್ತು ಕಳೆ ನಿರ್ವಹಣಾ ಪದ್ಧತಿಗಳನ್ನು ಪ್ರದರ್ಶಿಸುತ್ತಿದೆ.

ತಾಂತ್ರಿಕ ನೆರವಿನ ಸದಸ್ಯರಾದ ಶ್ರೀಮತಿ ಸ್ಟಾನ್ಜಿನ್ ಲ್ಯಾಂಡೋಲ್, ಡಾ. ಎನೋಕ್ ಸ್ಪಲ್ಬರ್‌ ಮತ್ತು ಶ್ರೀ ಜಿಗ್ಮತ್ ಅವರೊಂದಿಗೆ ಡಾ.ಸ್ಟಾನ್ಜಿನ್ ಅನುರಾಗ್ ಸಕ್ಸೇನಾ ಅವರನ್ನೊಳಗೊಂಡ ತಂಡವು, ವಿಜ್ಞಾನ ಮತ್ತು óತಂತ್ರಜ್ಞಾನ ಇಲಾಖೆಯ (ಡಿಎಸ್‌ಟಿ) ʻಎನ್‌ಎಂಎಸ್‌ಇʼ ಕಾರ್ಯಕ್ರಮದ ಬೆಂಬಲದೊಂದಿಗೆ ಲೆಹ್‌ ಪ್ರದೇಶದಲ್ಲಿ ಸುಸ್ಥಿರ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿಯನ್ನು ಸಕ್ರಿಯಗೊಳಿಸಲು ರೈತರಿಗೆ ಲಭ್ಯವಿರುವ ವೈಜ್ಞಾನಿಕ ಮಾಹಿತಿಯನ್ನು ಪ್ರಸಾರ ಮಾಡಲು ಒಟ್ಟು 38 ಕಾರ್ಯಾಗಾರಗಳು ಮತ್ತು ಒಂದು ಕಿಸಾನ್ ಮೇಳವನ್ನು ಆಯೋಜಿಸಿತು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹವಾಮಾನ ಬದಲಾವಣೆ ಕಾರ್ಯಕ್ರಮದ ಭಾಗವಾಗಿ ʻಹಿಮಾಲಯ ಪರಿಸರ ವ್ಯವಸ್ಥೆಯನ್ನು ಸುಸ್ಥಿರಗೊಳಿಸುವ ರಾಷ್ಟ್ರೀಯ ಯೋಜನೆʼ (ಎನ್‌ಎಂಎಸ್‌ಇ) ಅಡಿಯಲ್ಲಿ ʻಹಿಮಾಲಯದ ಕೃಷಿ ಕುರಿತ ಕಾರ್ಯಪಡೆʼಯು ಡೇಟಾಬೇಸ್ ಅಭಿವೃದ್ಧಿ, ಮೇಲ್ವಿಚಾರಣೆ, ದುರ್ಬಲತೆಯ ಮೌಲ್ಯಮಾಪನ, ಹೊಂದಾಣಿಕೆ ಸಂಶೋಧನೆ, ಪ್ರಾಯೋಗಿಕ ಅಧ್ಯಯನಗಳು ಮತ್ತು ಸಂಘಟಿತ ಸಾಮರ್ಥ್ಯವರ್ಧನೆ / ತರಬೇತಿ ಕಾರ್ಯಕ್ರಮಗಳಂತಹ ಆರು ಅಂಶಗಳ ಮೇಲೆ ಕೆಲಸ ಮಾಡಿತು.

ಹಿಮಾಲಯದ ಕೃಷಿ ಕುರಿತ ಕಾರ್ಯಪಡೆಯ ಸದಸ್ಯರು ʻಎನ್‌ಎಂಎಸ್‌ಇʼ ಅಂಗವಾಗಿ ಮಾಡಿದ ಮಾಹಿತಿ ಪ್ರಸರಣ, ಸಾಮರ್ಥ್ಯವರ್ಧನೆ ಮತ್ತು ರೈತರ ತರಬೇತಿ ಕೆಲಸಗಳು ಲೆಹ್‌ ಪ್ರದೇಶದ ಜೀವನಾಧಾರ ಉತ್ಪಾದನಾ ವ್ಯವಸ್ಥೆಗಳಲ್ಲಿ ಜೀವನೋಪಾಯ ಮತ್ತು ಲಾಭದಾಯಕತೆಯ ಸುಧಾರಣೆಗೆ ಸಹಾಯ ಮಾಡಿವೆ.

ಪ್ರಸ್ತುತ ʻರಾಷ್ಟ್ರೀಯ ಮಣ್ಣಿನ ಸರ್ವೇಕ್ಷಣಾ ಮತ್ತು ಭೂಮಿಯ ಬಳಕೆ ಯೋಜನೆʼ ಸಂಸ್ಥೆಯಲ್ಲಿ (ʻಐಸಿಎಆರ್ʼ-ನ್ಯಾಷನಲ್ ಬ್ಯೂರೋ ಆಫ್ ಸಾಯಿಲ್ ಸರ್ವೇ ಅಂಡ್ ಲ್ಯಾಂಡ್ ಯೂಸ್ ಪ್ಲಾನಿಂಗ್) ನೇಮಕಗೊಂಡಿರುವ ಪ್ರಧಾನ ವಿಜ್ಞಾನಿ ಡಾ. ಎಂ. ರಘುವಂಶಿ ಅವರು ʻಕೃಷಿ ಟುಡೇʼ ಗ್ರೂಪ್ ವತಿಯಿಂದ ವರ್ಚ್ಯುಯಲ್‌ ಆಗಿ ಆಯೋಜಿಸಲಾಗಿದ್ದ ʻಕೃಷಿ ವಿಸ್ತರಣೆ 2021ರ ಪ್ರಶಸ್ತಿ ಪ್ರದಾನ ಸಮಾರಂಭʼದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು.

***


(Release ID: 1711160) Visitor Counter : 238