ನಾಗರೀಕ ವಿಮಾನಯಾನ ಸಚಿವಾಲಯ

ಕಲ್ಲಿದ್ದಲು ನಿಕ್ಷೇಪ ಸಮೀಕ್ಷೆಗೆ ಕೇಂದ್ರೀಯ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆಗೆ ಡ್ರೋನ್ ಬಳಕೆಗೆ ಅನುಮತಿ


ಸಮೀಕ್ಷಾ ಚಟುವಟಿಕೆ ಮತ್ತು ಗುರುತಿಸುವ ಕಾರ್ಯದ ಮೇಲ್ವಿಚಾರಣೆಗೆ ಡ್ರೋನ್ ಬಳಕೆ

Posted On: 08 APR 2021 6:14PM by PIB Bengaluru

ನಾಗರಿಕ ವಿಮಾನಯಾನ ಸಚಿವಾಲಯ(ಎಂಒಸಿಎ) ಮತ್ತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(ಡಿಜಿಸಿಎ), ಕೋಲ್ ಇಂಡಿಯಾ ಲಿಮಿಟೆಡ್ ಗೆ ಸೇರಿದ ಕಲ್ಲಿದ್ದಲು ನಿಕ್ಷೇಪ ಪ್ರದೇಶಗಳಲ್ಲಿ ಸಮೀಕ್ಷಾ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರೀಯ ಗಣಿ ಯೋಜನೆ ಮತ್ತು ವಿನ್ಯಾಸ ಸಂಸ್ಥೆ(ಸಿಎಂಪಿಡಿಐ)ಗೆ ಷರತ್ತುಬದ್ಧ ವಿನಾಯಿತಿಯನ್ನು ಅನುಮೋದಿಸಿವೆ. ಅನುಮತಿಯ ಪ್ರಕಾರ, ಯುಎವಿ ಆಧರಿತ ಆಪ್ಟಿಕಲ್, ಎಲ್ಐಡಿಎಆರ್ ಮತ್ತು ಥರ್ಮಲ್ ಪೇಲೋಡ್ ಗಳು, ವಾಲ್ಯೂಮೆಟ್ರಿಕ್ ಮಾಪಕ ಮತ್ತು ತಪಾಸಣೆಗಳನ್ನು ಕೋಲ್ ಇಂಡಿಯಾ ಲಿಮಿಟೆಡ್ ಕಲ್ಲಿದ್ದಲು ನಿಕ್ಷೇಪ ಪ್ರದೇಶಗಳಲ್ಲಿ ಸಮೀಕ್ಷಾ ಚಟುವಟಿಕೆ ಮತ್ತು ಗುರುತಿಸುವ ಕಾರ್ಯದ ಮೇಲ್ವಿಚಾರಣೆಗೆ ಬಳಸಿಕೊಂಡು ದತ್ತಾಂಶ ಪಡೆಯುವುದಕ್ಕಾಗಿ ಡ್ರೋನ್ ಗಳನ್ನು ನಿಯೋಜಿಸಬಹುದಾಗಿದೆ.

ಷರತ್ತಿನ ವಿನಾಯಿತಿ, ಅನುಮತಿ ಪತ್ರ ವಿತರಿಸಿದ ದಿನಾಂಕದಿಂದ 2022 ಏಪ್ರಿಲ್ 4 ವರೆಗೆ ಅಥವಾ ಡಿಜಿಟಲ್ ಸ್ಕೈ ಫ್ಲಾಟ್ ಫಾರಂ(ಒಂದನೇ ಹಂತ) ಸಂಪೂರ್ಣ ಕಾರ್ಯಾಚರಣೆ ಆರಂಭವಾಗುವವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಚಾಲ್ತಿಯಲ್ಲಿರುತ್ತದೆ. ವಿನಾಯಿತಿ ಕೆಳಗೆ ಸೂಚಿಸಿದ ಎಲ್ಲಾ ಷರತ್ತುಗಳು ಮತ್ತು ಮಿತಿಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಮಾತ್ರ ಮಾನ್ಯವಾಗುತ್ತದೆ. ಒಂದು ವೇಳೆ ಯಾವುದೇ ಷರತ್ತಿನ ಉಲ್ಲಂಘನೆಯಾದರೆ ವಿನಾಯಿತಿ ಅನೂರ್ಜಿತಗೊಳ್ಳುತ್ತದೆ.

ಕೋಲ್ ಇಂಡಿಯಾ ಲಿಮಿಟೆಡ್ ಗೆ ಸೇರಿದ ಕಲ್ಲಿದ್ದಲು ನಿಕ್ಷೇಪ ಪ್ರದೇಶಗಳಲ್ಲಿ ಯುಎವಿ ಹಾರಾಟಕ್ಕೆ ಸಿಎಂಪಿಡಿಐಗೆ ಸೂಚಿಸಿರುವ ಪ್ರಾಮಾಣೀಕೃತ ಕಾರ್ಯಾಚರಣೆ ವಿಧಾನ(ಎಸ್ಒಪಿ) ಕೆಳಗಿನಂತಿದೆ:

1.     ಕಾರ್ಯಾಚರಣೆಗೆ ಮುನ್ನ ಯಎಎಸ್ ನಿಯಮ 2021 ಅನ್ವಯ ನಾಗರಿಕ ವಿಮಾನಯಾನ ಸಚಿವಾಲಯದಿಂದ ವಿನಾಯಿತಿ ಪತ್ರವನ್ನು ಪಡೆದುಕೊಳ್ಳಬೇಕು.

2.    ಸರ್ಕಾರದ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯಾಚರಣೆ ವಿಧಾನಗಳನ್ನು ಕಡ್ಡಾಯವಾಗಿ ಪಾಲಿಸಬೇಕು.

3.   ಎಂಒಸಿಎ/ಡಿಜಿಸಿಎ/ಎಂಒಡಿ/ಐಎಎಫ್/ಎಎಐ/ರಾಜ್ಯ/ಜಿಲ್ಲಾ ಪ್ರಾಧಿಕಾರಗಳು ಸೇರಿದಂತೆ ಹಲವು ಸಂಸ್ಥೆಗಳಿಂದ ಷರತ್ತುಗಳನ್ನು ಪಾಲಿಸಿ ಅಗತ್ಯ ಅನುಮತಿ ಅಥವಾ ವಿನಾಯಿತಿಗಳನ್ನು ಪಡೆದುಕೊಳ್ಳಬೇಕು. ಕಾರ್ಯಾಚರಣೆಗೂ ಮುನ್ನ ಮೂರನೇ ವ್ಯಕ್ತಿಯ ವಿಮೆಯನ್ನು ಮಾಡಿಸಿಕೊಳ್ಳುವುದು ಕಡ್ಡಾಯ

4.   ಎಸ್ಒಪಿ ಪಾಲನೆಗೆ ಬದ್ಧವಾಗಿರಬೇಕು, ಆದರೆ  ಯಾವುದೇ ಅನಿವಾರ್ಯ ಸನ್ನಿವೇಶಗಳಲ್ಲಿ ಅವುಗಳನ್ನು ಬದಲಾಯಿಸಿದರೆ ಅದನ್ನು ಲಿಖಿತ ರೂಪದಲ್ಲಿ ದಾಖಲಿಸಬೇಕು.

5.   ಒಂದು ವೇಳೆ ಯಾವುದೇ ವ್ಯಕ್ತಿಗೆ ಅಥವಾ ಆಸ್ತಿಗೆ ಹಾನಿಯುಂಟಾದರೆ ಅಂತಹ ಸಂದರ್ಭಗಳಲ್ಲಿ ಸುರಕ್ಷಿತ ಕಾರ್ಯಾಚರಣೆ ಮತ್ತು ಕಾನೂನು ವಿಚಾರಗಳಿಗೆ ಸಂಬಂಧಿಸಿದಂತೆ ಸಿಎಂಪಿಡಿಐ ಲಿಮಿಟೆಡ್ ಹೊಣೆಗಾರಿಕೆ ವಹಿಸಿಕೊಳ್ಳಬೇಕಾಗುತ್ತದೆ.

6.   ಚಟುವಟಿಕೆಯಿಂದ ಉಂಟಾಗುವ ಯಾವುದೇ ಪ್ರತ್ಯಕ್ಷ, ಪರೋಕ್ಷ, ಆಕಸ್ಮಿಕ ಅಥವಾ ಪ್ರಾಸಂಗಿಕ ನಷ್ಟ ಅಥವಾ ಯಾವುದೇ ಜೀವ/ಆಸ್ತಿ ಹಾನಿ ಸಂಭವಿಸಿದರೆ ಅದಕ್ಕೆ ಡಿಜಿಸಿಎ ಮತ್ತು ಎಂಒಸಿಎ ಹೊಣೆಯಾಗುವುದಿಲ್ಲ.

7.   ಕೋಲ್ ಇಂಡಿಯಾ ಲಿಮಿಟೆಡ್ ಗೆ ಸೇರಿದ ಕಲ್ಲಿದ್ದಲು ನಿಕ್ಷೇಪ ಪ್ರದೇಶದಲ್ಲಿ ಯುಎವಿ ಹಾರಾಟಕ್ಕೆ ಎಸ್ಒಪಿ ಸಿಎಂಪಿಡಿಐಗಾಗಿ ಮಾತ್ರ ಮಾನ್ಯ ಮಾಡಲಾಗಿದೆ

8.   ಮೇಲಿನ ಅನುಮೋದನೆ ಡಿಜಿಸಿಎ ಕಾಲಕಾಲಕ್ಕೆ ಹೊರಡಿಸುವ ನಾನಾ ಸುತ್ತೋಲೆಗಳು ಮತ್ತು ಅನ್ವಯಿಸುವ ನಾಗರಿಕ ವಿಮಾನಯಾನ ಅಗತ್ಯಗಳು(ಸಿಎಆರ್) ನಿಯಮಗಳಿಗೆ ಅನುಗುಣವಾಗಿರುತ್ತದೆ. ಅಲ್ಲದೆ ಒಂದು ವೇಳೆ ಯಾವುದೇ ಸಂದರ್ಭದಲ್ಲಿ ಮೇಲಿನ ಎಲ್ಲಾ ಮಾನ್ಯತೆಗಳ ಅನುಮೋದನೆ ವೇಳೆ ನಿಯಮಗಳು ಉಲ್ಲಂಘನೆಯಾದರೆ ಅಂತಹ ಸಂದರ್ಭಗಳಲ್ಲಿ ಅನುಮತಿಯನ್ನು ಪರಿಷ್ಕರಿಸಲಾಗುವುದು, ಅಮಾನತುಗೊಳಿಸಲಾಗುವುದು ಅಥವಾ ಯಾವುದೇ ಕಾರಣವಿಲ್ಲದೆ ರದ್ದುಗೊಳಿಸಲಾಗುವುದು.

ಸಾರ್ವಜನಿಕ ನೋಟಿಸ್ ಲಿಂಕ್ ಗೆ ಇಲ್ಲಿ ಕ್ಲಿಕ್ ಮಾಡಿ

***



(Release ID: 1710540) Visitor Counter : 195


Read this release in: English , Urdu , Hindi , Telugu