ನೀತಿ ಆಯೋಗ

ಸಾರ್ವಜನಿಕ ವ್ಯವಸ್ಥೆಗಳಲ್ಲಿ ನಾವೀನ್ಯತೆಗಳಿಗಾಗಿ ಸಿಐಪಿಎಸ್ ಜೊತೆ ಅಟಲ್ ಇನ್ನೋವೇಶನ್ ಮಿಷನ್ ಸಹಯೋಗ

Posted On: 06 APR 2021 6:09PM by PIB Bengaluru

ಸಾರ್ವಜನಿಕ ಸೇವೆಗಳನ್ನು ಸುಧಾರಿಸಲು ಸಾರ್ವಜನಿಕ ವ್ಯವಸ್ಥೆಗಳಲ್ಲಿ ನಾವೀನ್ಯತೆ ದತ್ತಸಂಚಯವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದಲ್ಲಿನ ನಾವೀನ್ಯತೆ ಮತ್ತು ಉದ್ಯಮಶೀಲ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಅಟಲ್ ಇನ್ನೋವೇಶನ್ ಮಿಷನ್ (ಎಐಎಂ), ನೀತಿ ಆಯೋಗ ಮತ್ತು ಸಾರ್ವಜನಿಕ ವ್ಯವಸ್ಥೆಗಳ ನಾವೀನ್ಯತಾ ಕೇಂದ್ರ (ಸಿಐಪಿಎಸ್) ಇಂದು ಸಹಯೋಗವನ್ನು ಪ್ರಕಟಿಸಿವೆ.

ಎಐಎಂ ಮತ್ತು ಸಿಐಪಿಎಸ್ ಇಂದು ಸಹಯೋಗಕ್ಕೆ ಸಹಿ ಹಾಕಿದವು. ಎಐಎಂನ ಜ್ಞಾನ ಮತ್ತು ಅನುಭವವನ್ನು ಮತ್ತು ಸಿಐಪಿಎಸ್ ವ್ಯಾಪ್ತಿಯ ಮೂಲಕ ಸಾರ್ವಜನಿಕ ವ್ಯವಸ್ಥೆಗಳ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು ಜಂಟಿಯಾಗಿ ಕೆಲಸ ಮಾಡುವುದು ಈ ಸಹಯೋಗದ ಉದ್ದೇಶವಾಗಿದೆ.

ಎಐಎಂ ಮತ್ತು ಸಿಐಪಿಎಸ್ ನಡುವಿನ ಸಹಯೋಗವು ಸ್ಥಳೀಯ ಆಡಳಿತದೊಂದಿಗೆ ಸಹಕರಿಸುವ ಮೂಲಕ ತಮ್ಮ ನಾವೀನ್ಯತೆಗಳನ್ನು ತಳಮಟ್ಟಕ್ಕೆ ಕೊಂಡೊಯ್ಯಲು ಮತ್ತು ಉತ್ತೇಜಿಸಲು ಸ್ಟಾರ್ಟ್ಅಪ್‌ಗಳಿಗೆ ಸಹಾಯ ಮಾಡುತ್ತದೆ. ನಾಗರಿಕರಿಗೆ ಸೇವೆಗಳನ್ನು ತಲುಪಿಸುವಲ್ಲಿ ಸ್ಥಳೀಯ ಆಡಳಿತವು ಎದುರಿಸುತ್ತಿರುವ ಸವಾಲುಗಳನ್ನು ಸಿಐಪಿಎಸ್ ಮಾರ್ಗದರ್ಶಕರ ಬೆಂಬಲದೊಂದಿಗೆ ಕ್ರಿಯಾ ಯೋಜನೆಯನ್ನು ರೂಪಿಸುವ ಮೂಲಕ ಸ್ಟಾರ್ಟ್ ಅಪ್‌ಗಳ ಮೂಲಕ ಬಗೆಹರಿಸಬಹುದು.

ಒಪ್ಪಂದದ ಪ್ರಕಾರ, ಎಐಎಂ ಮತ್ತು ಸಿಐಪಿಎಸ್ ಜಂಟಿಯಾಗಿ ಜಿಲ್ಲಾ ಮತ್ತು ಸ್ಥಳೀಯ ಮಟ್ಟದ ಆಡಳಿತ ಅಧಿಕಾರಿಗಳನ್ನು ಒಳಗೊಂಡ ರೌಂಡ್ ಟೇಬಲ್‌ ಸಭೆಗಳನ್ನು ಆಯೋಜಿಸಿ ನವೀನ ಉತ್ಪನ್ನಗಳು ಮತ್ತು ಪರಿಹಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ ಮತ್ತು ಸಂಗ್ರಹಣೆಯ ಪ್ರಮಾಣಿತ ಪ್ರಕ್ರಿಯೆಗಳು ಮತ್ತು ನೀತಿಗಳನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.

ತಮ್ಮ ನಾವೀನ್ಯತೆಗಳನ್ನು ಪ್ರದರ್ಶಿಸಲು ಎಐಎಂ ಬೆಂಬಲಿತ ನವೀನ ಮತ್ತು ಸಂಬಂಧಿತ ಸ್ಟಾರ್ಟ್-ಅಪ್‌ ಸರಣಿಯ ಇ-ಪ್ರದರ್ಶನಗಳನ್ನು ಆಯೋಜಿಸುವುದು ಮತ್ತು ಆತಿಥ್ಯ ವಹಿಸುವುದು ಸಾರ್ವಜನಿಕ ಆಡಳಿತ ಮತ್ತು ಸೇವಾ ವಿತರಣಾ ಕಾರ್ಯವಿಧಾನಗಳನ್ನು ಪರಿವರ್ತಿಸುವ ಮುಂದಿನ ಹಂತವಾಗಿದೆ. ಸ್ಟಾರ್ಟ್‌ಅಪ್‌ಗಳು ಮತ್ತು ಅಧಿಕಾರಿಗಳ ನಡುವಿನ ಸಂವಾದವು ಪ್ರಾಯೋಗಿಕ, ಉತ್ಪನ್ನ ಸುಧಾರಣೆ ಮತ್ತು ಮಾರುಕಟ್ಟೆ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ.

ವಿದ್ಯಾರ್ಥಿಗಳಲ್ಲಿ ನಾವೀನ್ಯ ಕಲಿಕೆಯನ್ನು ಉತ್ತೇಜಿಸಲು ತಳಮಟ್ಟದಲ್ಲಿ ಶಿಕ್ಷಕರು / ಮಾರ್ಗದರ್ಶಕರ ಸಾಮರ್ಥ್ಯವನ್ನು ಹೆಚ್ಚಿಸುವುದು ಇಂದಿನ ಅಗತ್ಯವಾಗಿದೆ. ನಾವೀನ್ಯತೆ ಕಲಿಕಾ ನಿರ್ವಹಣಾ ವ್ಯವಸ್ಥೆ (ಐಎಲ್ಎಂಎಸ್) ಯನ್ನು ಜಂಟಿಯಾಗಿ ರಚಿಸುವ ಮೂಲಕ ಇದನ್ನು ಸಾಧಿಸಬಹುದು.

ಎಐಎಂ ಪ್ರಾರಂಭಿಸಿದ ಕಾರ್ಯಕ್ರಮಗಳನ್ನು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಉತ್ತೇಜಿಸಲು ಮತ್ತು ರಾಜ್ಯಗಳೊಂದಿಗೆ ಸಂಪರ್ಕ ಸಾಧಿಸಲು ಸಹಭಾಗಿತ್ವವು ಸಹಾಯ ಮಾಡುತ್ತದೆ. ಇದು ಜಿಲ್ಲಾ ಮಟ್ಟದಲ್ಲಿ ಸರ್ಕಾರಿ ಅಧಿಕಾರಿಗಳ ಹೆಚ್ಚಿನ ಭಾಗವಹಿಸುವಿಕೆಯ ಮೂಲಕ ಎಐಎಂ ಬದಲಾವಣೆಯ ಮಾರ್ಗದರ್ಶಕ ಕಾರ್ಯಕ್ರಮವನ್ನು ಬಲಪಡಿಸುತ್ತದೆ.

ಫಲಾನುಭವಿಗಳು ಎಐಎಂ ಉಪಕ್ರಮದ ತರಬೇತಿ ಕಾರ್ಯಕ್ರಮಗಳಿಗೆ ಸಿಐಪಿಎಸ್ ಸೌಲಭ್ಯಗಳನ್ನು ಹತೋಟಿಗೆ ತರಲು ಸಾಧ್ಯವಾಗುತ್ತದೆ ಮತ್ತು ಗ್ರಾಮೀಣ ನಾವೀನ್ಯತೆ ಕುರಿತು ಶ್ವೇತಪತ್ರಗಳಿಗೆ ಸಿಐಪಿಎಸ್ ಸಂಶೋಧನಾ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದು.

ವರ್ಚುವಲ್ ಸಹಭಾಗಿತ್ವ ಸಹಿ ಸಂದರ್ಭದಲ್ಲಿ ಮಾತನಾಡಿದ ಅಟಲ್ ಇನ್ನೋವೇಶನ್ ಮಿಷನ್  ಅಭಿಯಾನ ನಿರ್ದೇಶಕ ಆರ್. ರಮಣನ್, “ಸಿಐಪಿಎಸ್‌ನೊಂದಿಗಿನ ಈ ಸಹಯೋಗವು ಹಲವು ರೀತಿಯಲ್ಲಿ ವಿಶಿಷ್ಟವಾಗಿದೆ. ಏಕೆಂದರೆ ಇದು ತಳಮಟ್ಟದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಬಗ್ಗೆ ಜಾಗೃತಿ ಮೂಡಿಸಲು ಸಹಾಯ ಮಾಡುತ್ತದೆ. ಸಿಐಪಿಎಸ್‌ನೊಂದಿಗಿನ ಇಂತಹ ಉಪಕ್ರಮಗಳು ಮತ್ತು ಸಹಭಾಗಿತ್ವವು ಹೆಚ್ಚು ಅಗತ್ಯವಾಗಿದೆ. ಇದು ಸರ್ಕಾರ ಮತ್ತು ಸಮಾಜಕ್ಕೆ ಜಿಲ್ಲಾ ಮತ್ತು ಗ್ರಾಮ ಮಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಯೋಜನಕಾರಿಯಾಗಿದೆ. ” ಎಂದರು.

ಸಿಐಪಿಎಸ್ ನಿರ್ದೇಶಕ ಸಿ.ಅಚಲೇಂದರ್ ರೆಡ್ಡಿ ಮಾತನಾಡಿ, ಎಐಎಂ ನೀತಿ ಆಯೋಗ ಮತ್ತು ಸಿಐಪಿಎಸ್-ಎಎಸ್ಸಿಐ ನಡುವಿನ ಸಹಯೋಗವು ಎಐಎಂ ಕಾರ್ಯಕ್ರಮಗಳು ಮತ್ತು ಎಐಎಂ ಫಲಾನುಭವಿಗಳ ವಿವಿಧ ಉಪಕ್ರಮಗಳನ್ನು ಬೆಂಬಲಿಸುವಂತಹ ನವೀನ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಸಾರ್ವಜನಿಕ ನಾವೀನ್ಯೆತಯನ್ನು ಹೆಚ್ಚಿಸುತ್ತದೆ ಎಂದರು.

"ನೆಟ್‌ವರ್ಕ್‌ಗಳು, ಪಾಲುದಾರಿಕೆಗಳು ಮತ್ತು ಅಂತರ-ಸಾಂಸ್ಥಿಕ ತಂಡಗಳ ನಡುವೆ ಬಹು-ಸಂಸ್ಥೆಗಳ ಸಹಯೋಗವು ಸಾರ್ವಜನಿಕ ನಾವೀನ್ಯತೆಗಳನ್ನು ಉತ್ತೇಜಿಸುತ್ತಿರುವುದಕ್ಕೆ ಅನೇಕ ಸಾಕ್ಷಿಗಳಿವೆ. ಸಾರ್ವಜನಿಕ ನಾವೀನ್ಯತೆ ಪ್ರಕ್ರಿಯೆಗಳಲ್ಲಿ ವಿಭಿನ್ನ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳ ಪಾಲ್ಗೊಳ್ಳುವಿಕೆಯು ಸಮಸ್ಯೆ ಅಥವಾ ಸವಾಲಿನ ಬಗೆಗಿನ ತಿಳುವಳಿಕೆಯನ್ನು ಸುಧಾರಿಸಬಹುದು, ಹೊಸ ಆಲೋಚನೆಗಳು ಮತ್ತು ಪ್ರಸ್ತಾಪಗಳನ್ನು ತರಬಹುದು ಮತ್ತು ಹೊಸ ಮತ್ತು ದಿಟ್ಟ ಪರಿಹಾರಗಳ ಜಂಟಿ ಮಾಲೀಕತ್ವವನ್ನು ಸೃಷ್ಟಿಸಬಹುದು, ”ಎಂದು ಅವರು ಹೇಳಿದರು.

****



(Release ID: 1710039) Visitor Counter : 225