ಹಣಕಾಸು ಸಚಿವಾಲಯ

ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯಡಿ 5 ವರ್ಷಗಳಲ್ಲಿ 1,14,322 ಕ್ಕೂ ಹೆಚ್ಚು ಖಾತೆಗಳಿಗೆ 25,586 ಕೋಟಿ ರೂ.ಗೂ ಹೆಚ್ಚು ಸಾಲ ಮಂಜೂರು

Posted On: 04 APR 2021 9:55AM by PIB Bengaluru

ಭಾರತ ತ್ವರಿತ ಬೆಳವಣಿಗೆ ಕಾಣುತ್ತಿದೆ. ಭರವಸೆಗಳು, ಆಕಾಂಕ್ಷೆಗಳು ಮತ್ತು ನಿರೀಕ್ಷೆಗಳು ಹೆಚ್ಚುತ್ತಿವೆ. ದೇಶದಲ್ಲಿ ತಮ್ಮದೇ ಆದ ಉದ್ಯಮವನ್ನು ಸ್ಥಾಪಿಸಲು ಬಯಸುತ್ತಿರುವ ಸಂಭಾವ್ಯ ಉದ್ಯಮಿಗಳ ವಿಶೇಷವಾಗಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಗಳ ಒಂದು ದೊಡ್ಡ ಗುಂಪೇ ಇದೆ. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯು ಅವರಿಗೆ ಬೆಳೆಯಲು ಮತ್ತು ಅಭಿವೃದ್ಧಿ ಹೊಂದಲು ಅನುವು ಮಾಡಿಕೊಡುತ್ತದೆ. ಅಂತಹ ಉದ್ಯಮಿಗಳು ದೇಶಾದ್ಯಂತ ಹರಡಿಕೊಂಡಿದ್ದಾರೆ ಮತ್ತು ಅವರು ತಮಗೆ ಮತ್ತು ತಮ್ಮ ಕುಟುಂಬಗಳಿಗೆ ಏನು ಮಾಡಬಹುದು ಎಂಬ ಚಿಂತನೆಗಳನ್ನು ಹೊಂದಿದ್ದಾರೆ.

ಮಹತ್ವಾಕಾಂಕ್ಷೆಯ ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಉದ್ಯಮಿಗಳು ಶಕ್ತಿಶಾಲಿ ಮತ್ತು ಉತ್ಸಾಹಭರಿತರಾಗಿದ್ದಾರೆ. ಆದರೆ ಅವರು ಕನಸುಗಳನ್ನು ನನಸಾಗಿಸಲು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಸವಾಲುಗಳನ್ನು ಗುರುತಿಸಿ, ಆರ್ಥಿಕ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿ, ತಳಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯನ್ನು 5 ಏಪ್ರಿಲ್ 2016 ರಂದು ಪ್ರಾರಂಭಿಸಲಾಯಿತು. ಈ ಯೋಜನೆಯನ್ನು 2025 ರವರೆಗೆ ವಿಸ್ತರಿಸಲಾಗಿದೆ.

ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಐದನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ಈ ಯೋಜನೆಯ ವೈಶಿಷ್ಟ್ಯಗಳು ಮತ್ತು ಸಾಧನೆಗಳ ಬಗ್ಗೆ ನೋಡೋಣ.

ಮಹಿಳೆಯರು, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು, ಸಿದ್ಧಗೊಂಡ ಮತ್ತು ತರಬೇತಿ ಪಡೆಯುತ್ತಿರುವ ಸಾಲಗಾರರು ವ್ಯಾಪಾರ, ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಗ್ರೀನ್‌ಫೀಲ್ಡ್ ಉದ್ಯಮವನ್ನು ಪ್ರಾರಂಭಿಸಲು ಸಹಾಯ ಮಾಡುವುದು ಸ್ಟ್ಯಾಂಡ್-ಅಪ್ ಇಂಡಿಯಾದ ಉದ್ದೇಶವಾಗಿದೆ.

ಸ್ಟ್ಯಾಂಡ್-ಅಪ್ ಇಂಡಿಯಾದ ಉದ್ದೇಶ:

  • ಮಹಿಳೆಯರು, ಎಸ್‌ಸಿ ಮತ್ತು ಎಸ್‌ಟಿ ವರ್ಗಗಳಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು,
  • ಸಿದ್ಧಗೊಂಡ ಮತ್ತು ತರಬೇತಿ ಪಡೆಯುತ್ತಿರುವ ಸಾಲಗಾರರಿಂದ ವ್ಯಾಪಾರ, ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಗ್ರೀನ್‌ಫೀಲ್ಡ್ ಉದ್ಯಮಗಳನ್ನು ಪ್ರಾರಂಭಿಸಲು ಸಾಲವನ್ನು ಒದಗಿಸಲಾಗುವುದು ಎಂಬುದನ್ನು
  • ಉತ್ಪಾದನೆ, ಸೇವೆಗಳು ಅಥವಾ ವ್ಯಾಪಾರ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಗ್ರೀನ್‌ಫೀಲ್ಡ್ ಉದ್ಯಮಗಳನ್ನು ಸ್ಥಾಪಿಸಲು ಸಿದ್ಧಗೊಂಡ ಮತ್ತು ತರಬೇತಿ ಪಡೆಯುತ್ತಿರುವವರಿಗೆ ಸಾಲಗಳನ್ನು ಒದಗಿಸಲಾಗುವುದು ಎಂದು ಬದಲಾಯಿಸಲಾಗುವುದು
  • ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಪ್ರತೀ ಶಾಖೆಯು ಕನಿಷ್ಠ ಒಬ್ಬ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರಿಗೆ ಮತ್ತು ಕನಿಷ್ಠ ಒಬ್ಬ ಮಹಿಳೆಗೆ.10 ಲಕ್ಷದಿಂದ 1 ಕೋಟಿ ರೂ.ವರೆಗೆ ಬ್ಯಾಂಕ್ ಸಾಲವನ್ನು ಒದಗಿಸುತ್ತದೆ.

ಸ್ಟ್ಯಾಂಡ್-ಅಪ್ ಇಂಡಿಯಾ ಏಕೆ?

ಉದ್ಯಮಗಳನ್ನು ಸ್ಥಾಪಿಸುವಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಮಹಿಳಾ ಉದ್ಯಮಿಗಳು ಎದುರಿಸುತ್ತಿರುವ ಸವಾಲುಗಳನ್ನು ಗುರುತಿಸುವುದು, ಸಾಲವನ್ನು ಪಡೆಯಲು ಮತ್ತು ವ್ಯವಹಾರದಲ್ಲಿ ಯಶಸ್ಸು ಕಾಣಲು ಕಾಲಕಾಲಕ್ಕೆ ಬೇಕಾದ ಇತರ ಬೆಂಬಲವನ್ನು ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆ ಒದಗಿಸುತ್ತದೆ. ಆದ್ದರಿಂದ ಈ ಯೋಜನೆಯು ಪರಿಸರ ವ್ಯವಸ್ಥೆಯನ್ನು ರಚಿಸಲು ಪ್ರಯತ್ನಿಸುತ್ತದೆ, ಅದು ವ್ಯಾಪಾರ ಮಾಡಲು ಅನುಕೂಲಕರ ವಾತಾವರಣವನ್ನು ಒದಗಿಸುತ್ತದೆ. ಈ ಯೋಜನೆಯು ಬ್ಯಾಂಕ್ ಶಾಖೆಗಳಿಂದ ಸಾಲಗಾರರಿಗೆ ತಮ್ಮ ಸ್ವಂತ ಉದ್ಯಮವನ್ನು ಸ್ಥಾಪಿಸಲು ಸಾಲವನ್ನು ಪಡೆಯಲು ಸಹಾಯ ಮಾಡುತ್ತದೆ. ಷೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳ ಎಲ್ಲಾ ಶಾಖೆಗಳನ್ನು ಒಳಗೊಂಡಿರುವ ಈ ಯೋಜನೆಯನ್ನು ಮೂರು ಸಂಭಾವ್ಯ ವಿಧಾನಗಳಲ್ಲಿ ಪ್ರವೇಶಿಸಬಹುದಾಗಿದೆ:

  • ನೇರವಾಗಿ ಬ್ಯಾಂಕ್ ಶಾಖೆಯ ಮೂಲಕ
  • ಸ್ಟ್ಯಾಂಡ್-ಅಪ್ ಇಂಡಿಯಾ ಪೋರ್ಟಲ್ (www.standupmitra.in) ಮೂಲಕ
  • ಪ್ರಮುಖ ಜಿಲ್ಲಾ ಮ್ಯಾನೇಜರ್ (ಎಲ್ ಡಿ ಎಂ) ಮೂಲಕ

ಸಾಲಕ್ಕೆ ಯಾರು ಅರ್ಹರು?

  • 18 ವರ್ಷಕ್ಕಿಂತ ಮೇಲ್ಪಟ್ಟ ಎಸ್‌ಸಿ / ಎಸ್‌ಟಿ ಅಥವಾ ಮಹಿಳಾ ಉದ್ಯಮಿಗಳು,
  • ಯೋಜನೆಯಡಿಯಲ್ಲಿ ಸಾಲಗಳು  ಯೋಜನೆಗಳಿಗೆ ಮಾತ್ರ ಲಭ್ಯವಿರುತ್ತವೆ. ಉತ್ಪಾದನೆ, ಸೇವೆಗಳು ಅಥವಾ ವ್ಯಾಪಾರ ವಲಯ ಮತ್ತು ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಮೊದಲ ಬಾರಿ ಉದ್ಯಮವನ್ನು ಆರಂಭಿಸುವವರನ್ನು ಗ್ರೀನ್‌ಫೀಲ್ಡ್ ಉದ್ಯಮ ಎಂದು ಪರಿಗಣಿಸಲಾಗುತ್ತದೆ.
  • ವೈಯಕ್ತಿಕವಲ್ಲದ ಉದ್ಯಮಗಳ ಸಂದರ್ಭದಲ್ಲಿ, ಎಸ್‌ಸಿ / ಎಸ್‌ಟಿ ಅಥವಾ ಮಹಿಳಾ ಉದ್ಯಮಿಗಳು ಶೇ.51 ರಷ್ಟು ಷೇರು ಮತ್ತು ನಿಯಂತ್ರಣ ಪಾಲನ್ನು ಹೊಂದಿರಬೇಕು.
  • ಸಾಲಗಾರರು ಯಾವುದೇ ಬ್ಯಾಂಕ್ / ಹಣಕಾಸು ಸಂಸ್ಥೆಗೆ ಬಾಕಿದಾರರಾಗಿರಬಾರದು.

23.03.2021 ರವರೆಗೆ ಈ ಯೋಜನೆಯ ಸಾಧನೆಗಳು

  • ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ 23.03.2021 ರವರೆಗೆ 1,14,322 ಕ್ಕೂ ಹೆಚ್ಚು ಖಾತೆಗಳಿಗೆ 25,586 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ.
  • ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ 23.03.2021 ರವರೆಗೆ ಲಾಭ ಪಡೆದ ಒಟ್ಟು ಎಸ್‌ಸಿ / ಎಸ್‌ಟಿ ಮತ್ತು ಮಹಿಳಾ ಸಾಲಗಾರರ ಸಂಖ್ಯೆ ಈ ಕೆಳಗಿನಂತಿವೆ:

ಎಸ್‌ಸಿ

ಎಸ್‌ಟಿ

ಮಹಿಳೆ

ಒಟ್ಟು

ಖಾತೆಗಳ ಸಂಖ್ಯೆ

ಮಂಜೂರಾದ ಮೊತ್ತ

ಖಾತೆಗಳ ಸಂಖ್ಯೆ

ಮಂಜೂರಾದ ಮೊತ್ತ

ಖಾತೆಗಳ ಸಂಖ್ಯೆ

ಮಂಜೂರಾದ ಮೊತ್ತ

ಖಾತೆಗಳ ಸಂಖ್ಯೆ

ಮಂಜೂರಾದ ಮೊತ್ತ

16258

3335.87

4970

1049.72

93094

21200.77

114322

25586.37

 

***



(Release ID: 1709463) Visitor Counter : 274