ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿ -ಎನ್.ಸಿ.ಟಿ.ಇ ಪೋರ್ಟಲ್ ನಲ್ಲಿ “ಮೈಎನ್ಇಪಿ2020” ವೇದಿಕೆ ಉದ್ಘಾಟಿಸಿದ ಕೇಂದ್ರ ಶಿಕ್ಷಣ ಸಚಿವರು
ಏಪ್ರಿಲ್ 1 ರಿಂದ ಮೇ 15, 2021 ರ ವರೆಗೆ ಈ ವೇದಿಕೆ ಕಾರ್ಯಾಚರಣೆ ಮಾಡಲಿದೆ
ಎನ್.ಪಿ.ಎಸ್.ಟಿ ಮತ್ತು ಎನ್.ಎಂ.ಎಂ ನಿಂದ “ಮೈಎನ್ಇಪಿ2020” ವೇದಿಕೆಗೆ ಸಲಹೆ, ಸೂಚನೆಗಳ ಆಹ್ವಾನ
Posted On:
01 APR 2021 6:30PM by PIB Bengaluru
ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಕ್ರಿಯಾಲ್ ನಿಶಾಂಕ್ ಅವರು ಶಿಕ್ಷಕರ ಶಿಕ್ಷಣ ಕುರಿತ ರಾಷ್ಟ್ರೀಯ ಮಂಡಳಿ – ಎನ್.ಸಿ.ಟಿ.ಇ ಪೋರ್ಟಲ್ ನಲ್ಲಿ “ಮೈಎನ್ಇಪಿ2020” ವೇದಿಕೆಯನ್ನು ಉದ್ಘಾಟಿಸಿದರು. ಶಿಕ್ಷಕರ ರಾಷ್ಟ್ರೀಯ ವೃತ್ತಿಪರ ಮಾನದಂಡ [ಎನ್.ಪಿ.ಎಸ್.ಟಿ] ಮತ್ತು ಮಾರ್ಗದರ್ಶನಕ್ಕಾಗಿ ರಾಷ್ಟ್ರೀಯ ಅಭಿಯಾನದಡಿ ಪಾಲುದಾರರಿಂದ ಈ ವೇದಿಕೆಗೆ ಸಲಹೆ, ಸೂಚನೆಗಳು ಮತ್ತು ಸದಸ್ಯತ್ವ ಪಡೆಯಲು ಆಹ್ವಾನ ನೀಡಲಾಗಿದೆ. “ಮೈಎನ್ಇಪಿ2020” ವೇದಿಕೆ ಏಪ್ರಿಲ್ 1 ರಿಂದ 2021 ರ ಮೇ 15 ರ ವರೆಗೆ ಕಾರ್ಯ ನಿರ್ವಹಿಸಲಿದೆ.
ಡಿಜಿಟಲ್ ಸಮಾಲೋಚನೆಯ ಈ ಕಸರತ್ತು ಶಿಕ್ಷಕರ ಶಿಕ್ಷಣ ವಲಯದ ಶಿಕ್ಷಣ ನೀತಿಯಲ್ಲಿ ಸಕಾರಾತ್ಮಕ ಬದಲಾವಣೆ ತರುವ, ಶಿಕ್ಷಕರ ನೀತಿಯಲ್ಲಿ ದಾಖಲೆಗಳನ್ನು ಸುಸ್ಥಿರವಾಗಿ ಸಿದ್ಧಪಡಿಸುವ ಶಿಕ್ಷಕರು, ಶಿಕ್ಷಣ ವೃತ್ತಿಪರರು, ಶಿಕ್ಷಣ ತಜ್ಞರು ಮತ್ತು ಇತರೆ ಪಾಲುದಾರರಿಗೆ ಈ ಚಟುವಟಿಕೆಯಲ್ಲಿ ಭಾಗವಹಿಸುವಿಕೆಯನ್ನು ಪ್ರೇರೇಪಿಸಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಎನ್ಇಪಿ2020 ಕುರಿತ ಎರಡು ಪ್ರಮುಖ ಶಿಫಾರಸ್ಸುಗಳ ಮೇಲಿನ ದಾಖಲೆಗಳನ್ನು ತಯಾರಿಸಲು ಎನ್.ಸಿ.ಟಿ.ಇ ವ್ಯಕ್ತಿಗಳು/ಸಂಘಟನೆಗಳೊಂದಿಗೆ ನಿಕಟ ಸಮಾಲೋಚನೆ ನಡೆಸಲಿದೆ.
ಸಮಾಲೋಚನೆಯ ಅವಧಿಯಲ್ಲಿ ಸಂಗ್ರಹವಾಗುವ ಸಲಹೆಗಳನ್ನು ತಜ್ಞರ ಸಮಿತಿ ವಿಸ್ತೃತವಾಗಿ ಪರಿಶೀಲನೆಗೆ ಒಳಪಡಿಸಲಿದೆ. ಬಳಿಕ ಅಂತಿಮ ಕರಡನ್ನು ಸಾರ್ವಜನಿಕರ ಅವಗಾಹನೆಗೆ ಸಲ್ಲಿಸಲಿದೆ. ಪಾಲುದಾರರ ಸಲಹೆಗಳು, ಅಭಿಪ್ರಾಯಗಳನ್ನು ಅಂತಿಮ ಕರಡು ಅಧಿಸೂಚನೆ ಹೊರಡಿಸುವಾಗ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
***
(Release ID: 1709106)
Visitor Counter : 304