ಇಂಧನ ಸಚಿವಾಲಯ
2020-21ನೇ ಹಣಕಾಸು ವರ್ಷಕ್ಕಾಗಿ ಭಾರತ ಸರ್ಕಾರಕ್ಕೆ 1182.63 ಕೋಟಿ ರೂ. ಮಧ್ಯಂತರ ಲಾಭಾಂಶ ಪಾವತಿಸಿದ ಪಿ.ಎಫ್.ಸಿ.
Posted On:
01 APR 2021 3:03PM by PIB Bengaluru
ಇಂಧನ ಸಚಿವಾಲಯದ ಅಡಿಯಲ್ಲಿನ ಕೇಂದ್ರ ಸಾರ್ವಜನಿಕ ವಲಯದ ನವರತ್ನ ಸಂಸ್ಥೆ ಹಾಗೂ ಇಂಧನ ವಲಯದಲ್ಲಿ ಭಾರತದ ಪ್ರಮುಖ ಎನ್.ಬಿ.ಎಫ್.ಸಿ.ಯಾದ ಇಂಧನ ಹಣಕಾಸು ನಿಗಮವು 2021ರ ಮಾರ್ಚ್ 31ರಂದು 2020-21ನೇ ಸಾಲಿಗಾಗಿ 1182.63 ಕೋಟಿ ರೂ. ಮಧ್ಯಂತರ ಲಾಭಾಂಶವನ್ನು 1,47,82,91,778 ಸಂಖ್ಯೆಯ ಈಕ್ವಿಟಿ ಶೇರು (ಶೇ.56) ಶೇರು ಹೊಂದಿರುವ ಭಾರತ ಸರ್ಕಾರಕ್ಕೆ ಪಾವತಿ ಮಾಡಿತು.
ಪಿ.ಎಫ್.ಸಿ.ಯ ಸಿಎಂಡಿ ಶ್ರೀ ರವೀಂದ್ರ ಸಿಂಗ್ ಧಿಲ್ಲಾನ್, 1182.63 ಕೋಟಿ ರೂ. ಮಧ್ಯಂತರ ಲಾಭಾಂಶದ ಬ್ಯಾಂಕ್ ಅಡ್ವೈಸ್ ಪ್ರತಿಯನ್ನು ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ಆರ್.ಕೆ. ಸಿಂಗ್ ಅವರಿಗೆ ಹಸ್ತಾಂತರಿಸಿದರು.
ಪ್ರತಿಯನ್ನು ಇಂಧನ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಖಾತೆ (ಸ್ವತಂತ್ರ ನಿರ್ವಹಣೆ) ಮತ್ತು ಕೌಶಲ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಶ್ರೀ ಆರ್.ಕೆ. ಸಿಂಗ್ ಅವರಿಗೆ ಪಿ.ಎಫ್.ಸಿ.ಯ ಸಿಎಂಡಿ ಶ್ರೀ ರವೀಂದ್ರ ಸಿಂಗ್ ಧಿಲ್ಲಾನ್ ಅವರು, ಮಧ್ಯಂತರ ಲಾಭಾಂಶದ ಆರ್.ಟಿ.ಜಿ.ಎಸ್.ನ ಬ್ಯಾಂಕ್ ಅಡ್ವೈಸ್ ಅನ್ನು ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲೋಕ್ ಕುಮಾರ್, ಹೆಚ್ಚುವರಿ ಕಾರ್ಯದರ್ಶಿ (ಇಂಧನ) ಮತ್ತು ಭಾರತ ಸರ್ಕಾರದ ಎಫ್.ಎ ಶ್ರೀ ಆಶಿಷ್ ಉಪಾಧ್ಯಾಯ, ಪಿಎಫ್.ಸಿ.ಯ ನಿರ್ದೇಶಕ (ವಾಣಿಜ್ಯ) ಶ್ರೀ ಪಿ.ಕೆ. ಸಿಂಗ್, ಮತ್ತು ಪಿಎಫ್.ಸಿ.ಯ ನಿರ್ದೇಶಕರಾದ (ಹಣಕಾಸು) ಶ್ರೀಮತಿ ಪರಮಿಂದರ್ ಚೋಪ್ರಾ ಅವರ ಸಮ್ಮುಖದಲ್ಲಿ ಹಸ್ತಾಂತರಿಸಿದರು.
2021ರ ಮಾರ್ಚ್ 12ರಂದು ನಡೆದ ಸಭೆಯಲ್ಲಿ ಪಿ.ಎಫ್.ಸಿ.ಯ ನಿರ್ದೇಶಕರ ಮಂಡಳಿಯು ತಲಾ 10 ರೂ.ಗಳ ಮುಖಬೆಲೆಯ ಪ್ರತಿ ಈಕ್ವಿಟಿ ಶೇರಿಗೆ ರೂ .8/- ರಂತೆ 2020-21ರ ಹಣಕಾಸು ವರ್ಷಕ್ಕೆ ಮಧ್ಯಂತರ ಲಾಭಾಂಶವನ್ನು ಘೋಷಿಸಿತ್ತು.
***
(Release ID: 1709005)
Visitor Counter : 192