ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನುಸರಣೆಯ ಹೊರೆ ತಗ್ಗಿಸಲು ನಮೂನೆ ಮತ್ತು ಪ್ರಕ್ರಿಯೆಗಳನ್ನು ಸುಗಮಗೊಳಿಸಲಿರುವ ಶಿಕ್ಷಣ ಸಚಿವಾಲಯ

Posted On: 01 APR 2021 2:23PM by PIB Bengaluru

ಸುಗಮ ವಾಣಿಜ್ಯ ನಡೆಸುವ ಸರ್ಕಾರದ ಗಮನದ ಮುಂದುವರಿದ ಭಾಗವಾಗಿ, ಬಾಧ್ಯಸ್ಥರಿಗೆ ಸುಗಮ ಜೀವನಕ್ಕೆ ಅನುವು ಮಾಡಿಕೊಡಲು ಶಿಕ್ಷಣ ಸಚಿವಾಲಯ (ಎಂ...) ಮತ್ತು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅನುಸರಣೆಯ ಹೊರೆಯನ್ನು ತಗ್ಗಿಸಲು ಬಾಧ್ಯಸ್ಥರುಗಳೊಂದಿಗೆ ಆನ್ ಲೈನ್ ಮೂಲಕ ಸರಣಿ ಸಂವಾದವನ್ನು ಆರಂಭಿಸಿವೆ.

ಸರಣಿಯಲ್ಲಿ ನಡೆದ ಇಂಥ ಮೊದಲ ಕಾರ್ಯಾಗಾರದ ಅಧ್ಯಕ್ಷತೆಯನ್ನು ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ವಹಿಸಿದ್ದರು

ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗದ ಅಧ್ಯಕ್ಷ ಪ್ರೊ. ಡಿ.ಪಿ. ಸಿಂಗ್, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (..ಸಿಟಿಇ) ಅಧ್ಯಕ್ಷ ಪ್ರೊ. ಅನಿಲ್ ಡಿ. ಸಹಸ್ರಬುದ್ಧೆ ಅವರೂ ಸಂದರ್ಭದಲ್ಲಿ ಉಪಸ್ಥಿತರಿದ್ದರು

ಕೈಗಾರಿಕಾ ಸಂಘಟನೆಗಳ ಪ್ರತಿನಿಧಿಗಳು ಅಂದರೆ ಸಿಐಐ, ಎಫ್..ಸಿ.ಸಿ., ಅಸೋಚಮ್ ಮತ್ತು ಕೇಂದ್ರೀಯ, ರಾಜ್ಯ, ಸ್ವಾಯತ್ತ, ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ತಾಂತ್ರಿಕ ವಿಶ್ವವಿದ್ಯಾಲಯಗಳ ಕುಲಪತಿಗಳು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಅನುಸರಣೆಯ ಹೊರೆಯನ್ನು ತಗ್ಗಿಸುವ ಕುರಿತಂತೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಅವರುಗಳ ಪ್ರತ್ರಿಕ್ರಿಯೆಯ ಆಧಾರದಲ್ಲಿ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಅನುಸರಣೆಯ ಹೊರೆಯನ್ನು ತಗ್ಗಿಸಲು ಕೆಲವೊಂದು ಕ್ಷೇತ್ರಗಳನ್ನು ಗುರುತಿಸಲಾಯಿತು. ಕ್ಷೇತ್ರಗಳೆಂದರೆ

  • ಆಡಳಿತ ಮತ್ತು ನಿಯಂತ್ರಣ ಸುಧಾರಣೆಗಳು.
  • ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗೆ ಸುಗಮವಾಗುಂತೆ ಪ್ರಕ್ರಿಯೆಯ ಪುನಾರಚನೆ ಮತ್ತು ತಂತ್ರಜ್ಞಾನದ ಹೆಚ್ಚಿನ ಬಳಕೆ
  • ನಿಯಂತ್ರಕ ಸಂಸ್ಥೆಗಳಿಂದ ಮಾಹಿತಿ ಒದಗಿಸಲು ಪದೇ ಪದೇ ಬರುವ  ಬೇಡಿಕೆಗಳು ಬಹಳಷ್ಟು ಪುನರಾವರ್ತಿತ ಕಾರ್ಯಕ್ಕೆ ಕಾರಣವಾಗುತ್ತಿದೆ. ಮೌಲ್ಯವರ್ಧಿತ ಮಾಹಿತಿಯನ್ನು ಮಾತ್ರ ಎಚ್‌...ಗಳಿಂದ ಕೇಳಬೇಕು.

ಭಾಗಿಯಾಗಿದ್ದ ಎಲ್ಲ ಕುಲಪತಿಗಳಿಗೂ ವಿಷಯದ ಮೇಲೆ ತಮ್ಮ ಸಂಸ್ಥೆಗಳಲ್ಲಿ ಆಂತರಿಕ ಸಭೆ ನಡೆಸುವಂತೆ ಮತ್ತು ಸಭೆಯಲ್ಲಿ ಹೊರಹೊಮ್ಮಿದ ಸಲಹೆಗಳನ್ನು ಯುಜಿಸಿಗೆ ರವಾನಿಸುವಂತೆ ಕೋರಲಾಯಿತು.

ಯುಜಿಸಿ ಇಂಥ ಚರ್ಚೆಗಳಿಗೆ ನೋಡಲ್ ಸಂಸ್ಥೆಯಾಗಿದೆ.

ಅನುಸರಣೆಯ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಕ್ಷೇತ್ರಗಳನ್ನು ಗುರುತಿಸಲು ಉನ್ನತ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದನ್ನು ಖಾತ್ರಿಪಡಿಸಲು ಇಂಥ ಹೆಚ್ಚಿನ ಕಾರ್ಯಾಗಾರಗಳನ್ನು ಮುಂದಿನ ದಿನಗಳಲ್ಲಿ ಹೆಚ್ಚಾಗಿ ನಡೆಸಲಾಗುವುದು.

***


(Release ID: 1708960) Visitor Counter : 216