ಭೂವಿಜ್ಞಾನ ಸಚಿವಾಲಯ

ಮುಂದಿನ ನಾಲ್ಕು ದಿನಗಳ ಅವಧಿಯಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಾದ್ಯಂತ ಬಾರಿ ಗಾಳಿ, ಮಿಂಚು, ಗುಡುಗು ಸಹಿತ ವ್ಯಾಪಕ ಮಳೆ ನಿರೀಕ್ಷೆ


2021ರ ಮಾರ್ಚ್ 31 ಮತ್ತು ಏಪ್ರಿಲ್ 01ರ ನಡುವೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚದುರಿದಂತೆ ಭಾರಿ ಅಂದರೆ ಭಾರೀ ಮಳೆ ಸಂಭವ

ಮಾರ್ಚ್ 31 ಮತ್ತು ಏಪ್ರಿಲ್ 1ರ ನಡುವೆ ಈಶಾನ್ಯ ಭಾರತದಲ್ಲಿ ಚದುರಿದಂತೆ ಗುಡುಗು ಸಹಿತ /ಅಲಿಕಲ್ಲು/ರಭಸಗಾಳಿ/ಮಿಂಚು ಸಹಿತ ವ್ಯಾಪಕ ಮಳೆ ಸಂಭವ

Posted On: 31 MAR 2021 2:07PM by PIB Bengaluru

ಭಾರತೀಯ ಹವಾಮಾನ ಇಲಾಖೆ (ಐ.ಎಂ.ಡಿ.)ಯ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ಪ್ರಕಾರ:
·         ಬಂಗಾಳ ಕೊಲ್ಲಿಯ ಆಗ್ನೇಯ ಮತ್ತು ನೆರೆಯ ದಕ್ಷಿಣ ಅಂಡಮಾನ್ ಸಮುದ್ರದ ಮೇಲೆ ಚಂಡಮಾರುತ ಸುತ್ತುತ್ತಿರುವುದರ ಪ್ರಭಾವದಿಂದ, ವಲಯದಲ್ಲಿ ನಿಮ್ನ ಒತ್ತಡ ಪ್ರದೇಶ ರೂಪುಗೊಂಡಿದೆ. ಈ ಚಂಡಮಾರುತದ ಸುತ್ತುವಿಕೆ ಪ್ರಸರಣವು ಸರಾಸರಿ ಸಮುದ್ರ ಮಟ್ಟಕ್ಕಿಂತ 5.8 ಕಿ.ಮೀ. ವಿಸ್ತರಿಸಲಿದ್ದು, ಮುಂದಿನ 24 ಗಂಟೆಗಳಲ್ಲಿ ಉತ್ತರ ಅಂಡಮಾನ್ ಸಮುದ್ರ ಮತ್ತು ನೆರೆಯ ಪ್ರದೇಶಗಳಲ್ಲಿ ಹೆಚ್ಚು ವ್ಯಾಪಕವಾಗುವ ಸಾಧ್ಯತೆಯಿದೆ. ಇದರ ಪ್ರಭಾವದಿಂದಾಗಿ:
         i.     ಮುಂದಿನ 4 ದಿನಗಳ ಕಾಲ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು, ಮಿಂಚು, ರಭಸಗಾಳಿ ಸಹಿತ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ. ಇಂದು ಮತ್ತು ನಾಳೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಅಂದರೆ ಭಾರೀ ಮಳೆ ಆಗುವ ಸಾಧ್ಯತೆಯೂ ಇದೆ.
        ii.     ಈ ಹಿನ್ನೆಲೆಯಲ್ಲಿ ನಾಳೆ ಮತ್ತು ನಾಡಿದ್ದು ಬಂಗಾಳಕೊಲ್ಲಿ ಮತ್ತು ಅಂಡಮಾನ್ ಗೆ ಹೊಂದಿಕೊಂಡ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.
·         ಬಂಗಾಳಕೊಲ್ಲಿಯ ನೈಋತ್ಯದಲ್ಲಿನ ಕೆಳಮಟ್ಟದ ಬಲವಾದ ಒತ್ತಡ ಮತ್ತು ಇತರ ಅನುಕೂಲಕರ ಹವಾಮಾನ ಪರಿಸ್ಥಿತಿಗಳ ಪ್ರಭಾವದಿಂದಾಗಿ;
         i.      ಇಂದು ಮತ್ತು ನಾಳೆ ಈಶಾನ್ಯ ಭಾರತದಲ್ಲಿ ಚದುರಿದಂತೆ ಗುಡುಗು ಸಹಿತ /ಅಲಿಕಲ್ಲು/ರಭಸಗಾಳಿ/ಮಿಂಚು ಸಹಿತ ವ್ಯಾಪಕ ಮಳೆ ಸಂಭವ  
        ii.     ಅಸ್ಸಾಂ ಮತ್ತು ಮೇಘಾಲಯದಲ್ಲಿ ಚದುರಿದಂತೆ ಹಾಗೂ ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಇಂದು ಮತ್ತು  ಅರುಣಾಚಲ ಪ್ರದೇಶದಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
      iii.     ಇದರಿಂದಾಗಿ ಇಂದು ಮತ್ತು ನಾಳೆ ದಕ್ಷಿಣ ಅಸ್ಸಾಂ, ಮೇಘಾಲಯ, ತ್ರಿಪುರ ಮತ್ತು ಮಿಜೋರಾಂನಲ್ಲಿ ಚದುರಿದಂತೆ ಕೆಲವು ಪ್ರದೇಶಗಳಲ್ಲಿ ಭೂಕುಸಿತ ಮತ್ತು ತಗ್ಗು ಪ್ರದೇಶಗಳು ಜಲಾವೃತವಾಗುವ ಸಾಧ್ಯತೆ ಇದೆ.

·         ಇದರಿಂದ ಮುಂದಿನ 2 ದಿನಗಳಲ್ಲಿ ವಾಯವ್ಯ ಭಾರತದ ಸಮತಟ್ಟಾದ ಪ್ರದೇಶಗಳಲ್ಲಿ ಗರಿಷ್ಠ ತಾಪಮಾನ 3-5°ಸೆ.ನಷ್ಟು ಇಳಿಯುವ ಸಾಧ್ಯತೆ ಇದ್ದು, ಇದು ರಾಜಸ್ಥಾನದಲ್ಲಿ ಇಂದಿನಿಂದ ಬಿಸಿಹವೆಯ ವಾತಾವರಣ ಸೃಷ್ಟಿಸಲಿದೆ. ಮತ್ತೊಂದು ಸುತ್ತಿನ ಬಿಸಿಗಾಳಿ ಸ್ಥಿತಿ ನಾಡಿದ್ದಿನಿಂದ ರೂಪುಗೊಳ್ಳಲಿದೆ
·         ಧೂಳು ಸಹಿತ ಬಲವಾದ ಮೇಲ್ಮೈ ಗಾಳಿ (ಪ್ರತಿ ಗಂಟೆಗೆ 30-40 ಕಿ.ಮೀ ವೇಗ) ರಾಜಸ್ಥಾನ, ಹರಿಯಾಣ, ದೆಹಲಿ, ಪಶ್ಚಿಮ ಉತ್ತರ ಪ್ರದೇಶದಲ್ಲಿ ಬೀಸುವ ನಿರೀಕ್ಷೆ ಇದೆ. ಜೊತೆಗೆ ಬಲವಾದ ಮೇಲ್ಮೈ ಗಾಳಿ (ಪ್ರತಿ ಗಂಟೆಗೆ 30-40 ಕಿ.ಮೀ ವೇಗ) ಪಂಜಾಬ್, ಉತ್ತರ ಮಧ್ಯಪ್ರದೇಶ, ಪೂರ್ವ ಉತ್ತರ ಪ್ರದೇಶ, ಜಾರ್ಖಂಡ್ ಮತ್ತು ಗಂಗಾ ತೀರದ ಪಶ್ಚಿಮ ಬಂಗಾಳದಲ್ಲಿ ಇಂದು ಮತ್ತು ನಾಳೆ ಬೀಸುವ ನಿರೀಕ್ಷೆ ಇದೆ.
ಮುಂದಿನ 5 ದಿನಗಳ ಹವಾಮಾನ ಮುನ್ಸೂಚನೆಯಂತೆ* 2021ರ ಏಪ್ರಿಲ್ 5ರ ಬೆಳಗ್ಗೆ 8.30ರವರೆಗೆ
·         ವಾಯವ್ಯ ಭಾರತದ ಬಯಲು ಪ್ರದೇಶದಲ್ಲಿ ಮುಂದಿನ 3 ದಿನಗಳ ಅವಧಿಯಲ್ಲಿ ಗರಿಷ್ಠ ತಾಪಮಾನ 3-5°ಸೆ. ಕುಸಿಯಲಿದ್ದು, ಏಪ್ರಿಲ್ 3ರ ನಂತರ ಏರಿಕೆ ಆಗಲಿದೆ.
·         ಮಧ್ಯ ಭಾರತದಲ್ಲೂ ಮುಂದಿನ 3 ದಿನಗಳಲ್ಲಿ ಗರಿಷ್ಠ ತಾಪಮಾನ 3-5° ಸೆ.ನಷ್ಟು ಕುಸಿಯಲಿದೆ.
·         ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ 2-3 ದಿನಗಳಲ್ಲಿ ಗರಿಷ್ಠ ತಾಪಮಾನ 2-3°ಸೆ. ಹೆಚ್ಚುವ ಸಾಧ್ಯತೆ ಇದೆ.
·         ಉಳಿದಂತೆ ದೇಶದಲ್ಲಿ ಮುಂದಿನ 5 ದಿನಗಳಲ್ಲಿ ಹೆಚ್ಚಿನ ಬದಲಾವಣೆ ಏನೂ ಇರುವುದಿಲ್ಲ.
·         2021ರ ಏಪ್ರಿಲ್ 5ರಿಂದ 7ರವರೆಗಿನ ಮುನ್ಸೂಚನೆಯಂತೆ
·         ಏಪ್ರಿಲ್ 4 ಮತ್ತು 5ರಂದು ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಗುಡುಗು ಮಿಂಚು ಸಹಿತ ಹಗುರ ಮಳೆ ಚದುರಿದಂತೆ ಆಗುವ ನಿರೀಕ್ಷೆ ಇದೆ. ಈಶಾನ್ಯ ಭಾರತ, ಕೇರಳ ಮತ್ತು ಮಾಹೆ ಹಾಗೂ ತಮಿಳುನಾಡು, ಪಾಂಡಿಚೇರಿ ಮತ್ತು ಕಾರೈಕಲ್ ನಲ್ಲಿ ಗುಡುಗು ಮಿಂಚು ಸಹಿತ ಚದುರಿದಂತೆ ಮಳೆ ಸಂಭವ.
·         ಪಶ್ಚಿಮದಲ್ಲಿನ ವೈಪರಿತ್ಯದಿಂದಾಗಿ ಮತ್ತು ಬಂಗಾಳಕೊಲ್ಲಿಯ ಕೆಳ ಮಟ್ಟದ ಒತ್ತಡದಿಂದ ಪಂಜಾಬ್, ಹರಿಯಾಣ, ಉತ್ತರ ರಾಜಾಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶಗಳಲ್ಲಿ ಏಪ್ರಿಲ್ 6 ಮತ್ತು 7ರಂದು ಚದುರಿದಂತೆ ಹಗುರ ಮಳೆ ನಿರೀಕ್ಷೆ.  
·         ಉಳಿದಂತೆ ದೇಶದ ಉಳಿದ ಭಾಗಗಳಲ್ಲಿ ಒಣ ಹವೆ ಮುಂದುವರಿಯಲಿದೆ.
ಹವಾಮಾನ ವಿಶ್ಲೇಷಣೆ (ಭಾರತೀಯ ಕಾಲಮಾನ 0530 ಆಧಾರದಲ್ಲಿ) ಬಂಗಾಳಕೊಲ್ಲಿ ಮತ್ತು ಅಂಡಮಾನ್ ಹಾಗೂ ದಕ್ಷಿಣ ನಿಕೋಬಾರ್ ದ್ವೀಪ ಸಮುದ್ರದ ಮೇಲಿನ ಚಂಡಮಾರುತದ ಸುತ್ತುವಿಕೆಯ ಪರಿಣಾಮವಾಗಿ  ನಿಮ್ನ ಒತ್ತಡ ಪ್ರದೇಶ ನಿರ್ಮಾಣವಾಗಿದೆ. ಪೂರಕ ಚಂಡಮಾರುತ ಸುತ್ತುವಿಕೆ ಸಮುದ್ರಮಟ್ಟದಿಂದ ಮೇಲೆ 5.8 ಕಿ.ಮೀ. ವಿಸ್ತರಿಸಲಿದೆ. ಇದರಿಂದಾಗಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಉತ್ತರ ಅಂಡಮಾನ್ ಮತ್ತು ಸುತ್ತಮುತ್ತಲ ಪ್ರದೇಶದ ಮೇಲೆ ಪ್ರಭಾವ ಬೀರಲಿದೆ.
ಮುಂದಿನ 4 ದಿನಗಳ ಹವಾಮಾನ ಮುನ್ನೆಚ್ಚರಿಕೆ *
01 ಏಪ್ರಿಲ್ :♦ ಪೂರ್ವ ಅಸ್ಸಾಂ ಮತ್ತು ಮೇಘಾಲಯದಲ್ಲಿ  ಗುಡುಗು, ಮಿಂಚು, ಆಲಿಕಲ್ಲು ಮತ್ತು ಗಾಳಿ ಸಹಿತ ಮಳೆ ಸಂಭವ. (ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿ.ಮೀ) ಸಂಭವ; ಉಪ ಹಿಮಾಲಯ ಪ್ರದೇಶ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಕೇರಳ ಮತ್ತು ಮಾಹೆ, ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಚದುರಿದಂತೆ ಮಿಂಚು ಮತ್ತು ಗಾಳಿ ಸಹಿತ (ಗಾಳಿಯ ವೇಗ 30-40 ಕಿ.ಮೀ. ಪ್ರತಿ ಗಂಟೆಗೆ) ಮಳೆ ಸಂಭವ.
·         ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಚದುರಿದಂತೆ  ಭಾರಿ ಅಂದೆ ಭಾರೀ ಮಳೆ ನಿರೀಕ್ಷೆ. ಮತ್ತು ಅರುಣಾಚಲ ಪ್ರದೇಶ ಮತ್ತು ಉಪ ಹಿಮಾಲಯ ವಿಭಾಗ ಹಾಗೂ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂನಲ್ಲಿ ಭಾರೀ ಮಳೆ ಸಂಭವ.
·         ವಿದರ್ಭಾ, ಒಡಿಶಾ ಮತ್ತು ತೆಲಂಗಾಣಗಳಲ್ಲಿ ಬಿಸಿ ಹವೆಯ ಪರಿಸ್ಥಿತಿ ಸಾಧ್ಯತೆ.
02 ಏಪ್ರಿಲ್: ♦ ಉಪ ಹಿಮಾಲಯ ಪ್ರದೇಶ, ಪಶ್ಚಿಮ ಬಂಗಾಳ ಮತ್ತ ಸಿಕ್ಕಿಂ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಒಡಿಶಾ, ಆಂಧ್ರಪ್ರದೇಶ ಕರಾವಳಿ, ಯಮನ್ ಮತ್ತು ಕೇರಳ ಹಾಗೂ ಮಾಹೆಯಲ್ಲಿ ಚದುರಿದಂತೆ ಗುಡುಗು  ಮಿಂಚು, ಗಾಳಿ ಸಂಭವ.

·         ತೆಲಂಗಾಣ, ಸೌರಾಷ್ಟ್ರ ಮತ್ತು ಕಚ್ ನ ಕೆಲವು ಭಾಗಗಳಲ್ಲಿ ಚದುರಿದಂತೆ  ಬಿಸಿ ಹವೆ ವಾತಾವರಣ ಇರುವ ಸಾಧ್ಯತೆ.
·         ಅಂಡಮಾನ್ ಮತ್ತು ನಿಕೋಬಾರ್ ಸಮುದ್ರ ಮತ್ತು ಬಂಗಾಳ ಕೊಲ್ಲಿನ ಸುತ್ತಮುತ್ತ ಮತ್ತು ಕೊಮೊರಿಯನ್ ಪ್ರದೇಶ ಹಾಗೂ ಮನ್ನಾರ್ ಕೊಲ್ಲಿಯಲ್ಲಿ ರಭಸಗಾಳಿ (ಗಾಳಿಯ ವೇಗ ಪ್ರತಿ ಗಂಟೆಗೆ 45-55 ಕಿ.ಮೀ ನಿಂದ 65 ಕಿಲೋ ಮೀಟರ್ ತಲುಪುವ ಸಾಧ್ಯತೆ). ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
03 ಏಪ್ರಿಲ್: ♦ ಗಂಗಾ ತಟದ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಯಮನ್ ಕರಾವಳಿ ಹಾಗೂ ಕೇರಳ ಮತ್ತು ಮಾಹೆಯಲ್ಲಿ ರಭಸ ಗಾಳಿ, ಮಿಂಚು ಮತ್ತು ಗುಡುಗು ನಿರೀಕ್ಷೆ. (ಗಾಳಿಯ ವೇಗ ಪ್ರತಿ ಗಂಟೆಗೆ 30-40 ಕಿ.ಮೀ.)ಬೀಸುವ ಸಾಧ್ಯತೆ.
·         ಬಿಸಿ ಗಾಳಿಯ ವಾತಾವರಣ ಸೌರಾಷ್ಟ್ರ ಮತ್ತು ಕಚ್ ಪ್ರದೇಶದಲ್ಲಿ ನಿರೀಕ್ಷೆ
·         ಉತ್ತರ ಅಂಡಮಾನ್ ಸಮುದ್ರದಲ್ಲಿ (ಗಾಳಿಯ ವೇಗ ಪ್ರತಿ ಗಂಟೆಗೆ 40-50 ಕಿ.ಮೀ ನಿಂದ 60 ಕಿಲೋ ಮೀಟರ್ ತಲುಪುವ ಸಾಧ್ಯತೆ). ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
04 ಏಪ್ರಿಲ್: ♦ ಗಂಗಾ ತಟದ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಯಮನ್ ಕರಾವಳಿ ಹಾಗೂ ಕೇರಳ ಮತ್ತು ಮಾಹೆಯಲ್ಲಿ ರಭಸ ಗಾಳಿ, ಮಿಂಚು ಮತ್ತು ಗುಡುಗು ನಿರೀಕ್ಷೆ. (ಗಾಳಿಯ ವೇಗ ಪ್ರತಿ ಗಂಟೆಗೆ 30-40 ಕಿ.ಮೀ.)ಬೀಸುವ ಸಾಧ್ಯತೆ.
·         ಬಿಸಿ ಗಾಳಿಯ ವಾತಾವರಣ ಸೌರಾಷ್ಟ್ರ ಮತ್ತು ಕಚ್ ಪ್ರದೇಶದಲ್ಲಿ ನಿರೀಕ್ಷೆ
(ಗ್ರಾಫಿಕ್ಸ್ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ) 
ಸ್ಥಳ ನಿರ್ದಿಷ್ಟ ಮುನ್ನೆಚ್ಚರಿಕೆ ಮತ್ತು ಹವಾಮಾನ ಮುನ್ಸೂಚನೆಗಳಿಗಾಗಿ ಮೌಸಮ್ ಆಪ್ MAUSAM APP  ಕೃಷಿ ಸಂಬಂಧಿತ ಮುನ್ಸೂಚನೆಗಳಿಗೆ ಮೇಘದೂತ್ ಆಪ್ MEGHDOOT APP  ಮತ್ತು ಮಿಂಚು, ಸಿಡಿಲಿನ ಮುನ್ನೆಚ್ಚರಿಕೆಗಾಗಿ ದಾಮಿನಿ ಆಪ್ DAMINI APP  ಡೌನ್ ಲೋಡ್ ಮಾಡಿಕೊಳ್ಳಿ.  ಜಿಲ್ಲಾವಾರು ಹವಾಮಾನ ಮುನ್ಸೂಚನೆಗಳಿಗಾಗಿ ಎಂ.ಸಿ /ಆರ್.ಎಂ.ಸಿ. ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
***


(Release ID: 1708824) Visitor Counter : 151


Read this release in: English , Urdu , Hindi , Bengali