ಪ್ರಧಾನ ಮಂತ್ರಿಯವರ ಕಛೇರಿ

ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗ ಸಭೆಯಲ್ಲಿ ಪ್ರಧಾನಮಂತ್ರಿ ಭಾಷಣ

Posted On: 10 FEB 2021 8:42PM by PIB Bengaluru

ಘನತೆವೆತ್ತ ಗಯಾನ ಸಹಕಾರಿ ಗಣರಾಜ್ಯದ ಅಧ್ಯಕ್ಷರಾದ ಡಾಕ್ಟರ್ ಮೊಹಮದ್ ಇರ್ಪಾನ್ ಅಲಿ,

ಘನತೆವೆತ್ತ ಪಪುವ ನ್ಯೂ ಜಿನೆವಾ ಪ್ರಧಾನಿಯವರಾದ ಗೌರವಾನ್ವಿತ ಜೇಮ್ಸ್ ಮರಪೆ,

ಘನತೆವೆತ್ತ ಹಾಗೂ ನಮ್ಮ ಸ್ನೇಹಿತರಾದ ಮಾಲ್ಡೀವ್ಸ್ ಮಜ್ಲೀಸ್ ಗಣರಾಜ್ಯದ ಸ್ಪೀಕರ್ ಮೊಹಮದ್ ನಶೀದ್,

ಘನತೆವೆತ್ತ, ವಿಶ್ವ ಸಂಸ್ಥೆಯ ಉಪ ಮಹಾ ಕಾರ್ಯದರ್ಶಿ ಶ್ರೀಮತಿ ಅಮಿನ ಜೆ ಮೊಹಮ್ಮದ್,

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ‍್ರೀ ಪ್ರಕಾಶ್ ಜಾವ್ಡೇಕರ್.  

ವಿಶೇಷ ಅತಿಥಿಗಳೇ, ನಮಸ್ತೆ

ವಿಶ್ವ ಸುಸ್ಥಿರ ಅಭಿವೃದ್ಧಿ ಶೃಂಗಯಲ್ಲಿ ಮಾತನಾಡಲು ತಮಗೆ ಸಂತಸವಾಗುತ್ತಿದೆ. ವೇದಿಕೆ 20 ವರ್ಷಗಳನ್ನು ಪೂರ್ಣಗೊಳಿಸಿದೆ. ಆವೇಗವನ್ನು ಉಳಿಸಿಕೊಂಡಿದ್ದಕ್ಕಾಗಿ ಟೆರಿ ಗೆ ನನ್ನ ಅಭಿನಂದನೆಗಳು. ರೀತಿಯ ಜಾತಿಕ ವೇದಿಕೆಗಳು ಪ್ರಸ್ತುತ ಮತ್ತು ಭವಿಷ್ಯಕ್ಕೆ ಅತ್ಯಂತ ಮುಖ್ಯವಾಗಿವೆ.

ಸ್ನೇಹಿತರೇ,

ಮುಂಬರುವ ದಿನಗಳಲ್ಲಿ ಮಾನವೀಯತೆಯ ಪ್ರಗತಿಯ ಯಾನ ಹೇಗಿರುತ್ತದೆ ಎಂಬುದನ್ನು ಎರಡು ವಿಷಯಗಳು ವ್ಯಾಖ್ಯಾನಿಸುತ್ತವೆ. ಮೊದಲು ನಮ್ಮ ಆರೋಗ್ಯ, ಎರಡನೆಯದು ನಮ್ಮ ಗ್ರಹದ ಆರೋಗ್ಯ. ಎರಡೂ ಪರಸ್ಪರ ಸಂಬಂಧ ಹೊಂದಿವೆ. ಜನರ ಆರೋಗ್ಯ ಸುಧಾರಣೆಗೆ ಈಗಾಗಲೇ ಹಲವಾರು ಚರ್ಚೆಗಳು ಪ್ರಗತಿಯಲ್ಲಿವೆ. ನಾವು ನಮ್ಮ ಗ್ರಹದ ಆರೋಗ್ಯದ ಬಗ್ಗೆ ಮಾತನಾಡಲು, ಇಲ್ಲಿ ಸೇರಿದ್ದೇವೆ. ನಾವು ಎದುರಿಸುತ್ತಿರುವ ಸವಾಲಿನ ಪ್ರಮಾಣ ವ್ಯಾಪಕವಾಗಿರುವುದನ್ನು ತಿಳಿದಿದ್ದೇವೆ. ಆದರೆ ಸಾಂಪ್ರದಾಯಿಕ ವಿಧಾನಗಳು ನಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ನಮ್ಮ ಯುವಕರಲ್ಲಿ ಹೂಡಿಕೆ ಪೆಟ್ಟಿಗೆಯಿಂದ ಹೊರಗಡೆ ಬಂದು ಯೋಚಿಸುವುದು ಮತ್ತು ಸುಸ್ಥಿರ ಅಭಿವೃದ್ಧಿಯತ್ತ ಕೆಲಸ ಮಾಡುವುದು   ಸಮಯದ ಅವಶ್ಯಕತೆಯಾಗಿದೆ.

ಸ್ನೇಹಿತರೇ,

ಮಾರ್ಗದಲ್ಲಿ ಹವಾಮಾನ ಬದಲಾವಣೆ ವಿರುದ್ಧ ಹೋರಾಟ ಮಾಡುವುದು ಹವಾಮಾನ ನ್ಯಾಯವಾಗಿದೆ. ಹವಾಮಾನ ನ್ಯಾಯ ನಂಬಿಕೆಯ ದೃಷ್ಟಿಯಿಂದ ಮುಖ್ಯವಾಗಿದ್ದು, ಹವಾಮಾನ ನ್ಯಾಯದ ಹಾದಿಯಲ್ಲಿ ಹೃದಯ ವೈಶಾಲ್ಯದ ತತ್ವವಿದೆ. ಹವಾಮಾನ ನ್ಯಾಯ ಎನ್ನುವುದು ಅತಿ ದೊಡ್ಡ ಆಲೋಚನೆಯಾಗಿದೆ ಮತ್ತು ದೀರ್ಘಕಾಲೀನ ಚಿತ್ರಣವಾಗಿದೆ. ದುಖ‍ಃಕರ ಸಂಗತಿ ಎಂದರೆ ಪರಿಸರದಲ್ಲಿನ ಬದಲಾವಣೆಗಳು ಮತ್ತು ನೈಸರ್ಗಿಕ ವಿಪತ್ತುಗಳು ಬಡವರ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಹವಾಮಾನ ನ್ಯಾಯ ಎನ್ನುವುದು ನಂಬಿಕೆಯ ದೃಷ್ಟಿಕೋನದಿಂದ ಸ್ಪೂರ್ತಿ ಪ್ರೇರಿತವಾಗಿದೆ. ಬಡವರಿಗೆ ಹೆಚ್ಚಿನ ಸಹಾನುಭೂತಿಯೊಂದಿಗೆ ಇದು ಬರುತ್ತದೆ. ಹವಾಮಾನ ನ್ಯಾಯ ಎನ್ನುವುದು ಅಭಿವೃದ್ಧಿ ರಾಷ್ಟ್ರಗಳ ಬೆಳವಣಿಗೆಗೆ ಜಾಗ ಒದಗಿಸುತ್ತದೆ. ನಮ್ಮ ವ್ಯಕ್ತಿಗತ ಮತ್ತು ಸಾಮೂಹಿಕ ಕರ್ತವ್ಯಗಳನ್ನು ಅರ್ಥಮಾಡಿಕೊಂಡರೆ ಹವಾಮಾನ ನ್ಯಾಯ ಸಾಧಿಸಲು ಪ್ರತಿಯೊಬ್ಬರಿಗೂ ಸಾಧ್ಯವಾಗುತ್ತದೆ.

ಸ್ನೇಹಿತರೇ

ತಳಮಟ್ಟದ ಕ್ರಮಗಳನ್ನು ಬೆಂಬಲಿಸುವ ಉದ್ದೇಶವನ್ನು ಭಾರತ ಹೊಂದಿದೆ. ಪ್ಯಾರಿಸ್ ಗುರಿಗಳನ್ನು ತಲುಪಲು ಮತ್ತು ನಮ್ಮ ಬದ್ಧತೆಯನ್ನು ಸಾಕಾರಗೊಳಿಸಲು ಸಾರ್ವಜನಿಕ ಸ್ಪೂರ್ತಿಯ ಪ್ರಯತ್ನಗಳು ಸೂಕ್ತ ದಿಕ್ಕಿನಲ್ಲಿ ಸಾಗಿವೆ. ನಾವು ಇಂಗಾಲ ಹೊರ ಸೂಸುವ ಪ್ರಮಾಣವನ್ನು ಜಿ.ಡಿ.ಪಿಯ ಶೇ 35 ರಿಂದ 33 ಕ್ಕೆ ಅಂದರೆ 2005 ಹಂತಕ್ಕೆ ಇಳಿಸಲು  ಬದ್ಧರಾಗಿದ್ದೇವೆ. ಇಂಗಾಲ ಹೊರ ಸೂಸುವಿಕೆಯ ತೀವ್ರತೆಯಲ್ಲಿ ಶೇ 24 ರಷ್ಟು ಕುಸಿತವನ್ನು ಈಗಾಗಲೇ ನಾವು ಸಾಧಿಸಿದ್ದೇವೆ ಎಂಬುದು ತಿಳಿದರೆ ನಿಮಗೆ ಸಂತಸವಾಗುತ್ತದೆ. ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ವಲಯದಲ್ಲಿ ಶೇ 40 ರಷ್ಟು ಎಲೆಕ್ಟ್ರಿಕಲ್ ಇಂಧನ ಅಳವಡಿಕೆಯನ್ನು ಸಾಧಿಸುವ ಬದ್ಧತೆ ಹೊಂದಿದ್ದೇವೆ. ಸ್ಥಾಪಿತ ವಿದ್ಯುತ್ ಸಾಮರ್ಥ್ಯದಲ್ಲಿ ಪಳೆಯುಳಿಕೆ ರಹಿತ ಮೂಲಗಳ ಪಾಲು ಇಂದು ಶೇ 38 ಕ್ಕೆ ಏರಿಕೆಯಾಗಿದೆ. ಇದರಲ್ಲಿ ಪರಮಾಣು ಇಂಧನ ಮತ್ತು ಬೃಹತ್ ಪ್ರಮಾಣದ ಜಲ ವಿದ್ಯುತ್ ಯೋಜನೆಗಳು ಸೇರಿವೆ. ಭೂಮಿಯ ಅವನತಿಯನ್ನು ತಟಸ್ಥತೆಗೆ ತರಲು ಭಾರತ ಸ್ಥಿರ ಪ್ರಗತಿ ಸಾಧಿಸುತ್ತಿದೆ. ಭಾರತದಲ್ಲಿ ನವೀಕೃತ ಇಂಧನದ ಬೆಳವಣಿಗೆ ತ್ವರಿತವಾಗುತ್ತಿದೆ. ಬರುವ 2030 ವೇಳೆಗೆ 450 ಗಿಗಾ ವ್ಯಾಟ್ ನಷ್ಟು ನವೀಕೃತ ಇಂಧನ ಉತ್ಪಾದನೆ ಮಾಡುವ ನಿಟ್ಟಿನಲ್ಲಿ ನಾವು ಸೂಕ್ತ ಹಾದಿಯಲ್ಲಿ ಸಾಗುತ್ತಿದ್ದೇವೆ. ಇಲ್ಲಿ ಖಾಸಗಿ ವಲಯ ಮತ್ತು ಇದಕ್ಕೆ ಕೊಡುಗೆ ನೀಡುತ್ತಿರುವ ಹಲವಾರು ವ್ಯಕ್ತಿಗಳನ್ನು ನಾನು ಶ್ಲಾಘಿಸುತ್ತೇನೆ. ಭಾರತ ಎಥನಾಲ್ ಬಳಕೆಯನ್ನು ಹೆಚ್ಚಿಸುತ್ತಿದೆ.

ಸ್ನೇಹಿತರೇ,

ಸಮಾನತೆ ಇಲ್ಲದೇ ಇದ್ದರೆ ಸುಸ್ಥಿರ ಅಭಿವೃದ್ಧಿ ಅಪೂರ್ಣವಾಗುತ್ತದೆ. ದಿಸೆಯಲ್ಲೂ ನಾವು ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ. 2019 ಮಾರ್ಚ್ ನಲ್ಲಿ ಭಾರತ ಶೇ 100 ರಷ್ಟು ವಿದ್ಯುದೀಕರಣವನ್ನು ಅನುಷ್ಠಾನಗೊಳಿಸಿದ್ದೇವೆ. ಇದನ್ನು ಸುಸ್ಥಿರ ತಂತ್ರಜ್ಞಾನ ಮತ್ತು ನಾವೀನ್ಯತೆಯ ಮಾದರಿಗಳ ಮೂಲಕ ಸಾಧಿಸಿದ್ದೇವೆ.

ಜಾಗತಿಕವಾಗಿ ನಿಯಮಗಳು ಬರುವ ಮುಂಚೆಯೇ ಭಾರತ ಎಲ್..ಡಿ ಬಲ್ಬ್ ಗಳ ಮೇಲೆ ಹೂಡಿಕೆ ಮಾಡಿತ್ತು. 67 ದಶಲಕ್ಷ ಜನರ ಬದುಕಿನಲ್ಲಿ ಎಲ್..ಡಿ ಬಲ್ಬ್ ಗಳು ಒಂದು ಭಾಗವಾಗಿವೆ. ಇದರಿಂದ ಪ್ರತಿ ವರ್ಷ 38 ದಶಲಕ್ಷ ಟನ್ ನಷ್ಟು ಕಾರ್ಬನ್ ಡೈ ಆಕ್ಸೈಡ್ ಹೊರ ಸೂಸುವುದು ಕಡಿಮೆಯಾಗಿದೆ. ಜಲ ಜೀವನ್ ಅಭಿಯಾನದಡಿ ಕಳೆದ 18 ತಿಂಗಳುಗಳಲ್ಲಿ 34 ದಶಲಕ್ಷ ಮನೆಗಳಿಗೆ ನಳಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಬಡತನ ರೇಖೆಯಿಂದ ಕೆಳಗಿರುವ 80 ದಶಲಕ್ಷ ಕುಟುಂಬಗಳಿಗೆ ಸ್ವಚ್ಛ ಅಡುಗೆ ಅನಿಲ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಪ್ರಸ್ತುತ ಶೇ 6 ರಷ್ಟು ನೈಸರ್ಗಿಕ ಅನಿಲದ ಪಾಲಿದ್ದು, ಇದನ್ನು ಶೇ 15 ಕ್ಕೆ ಏರಿಕೆ ಮಾಡುವ ನಿಟ್ಟಿನಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದೇವೆ.

ದೇಶೀಯ ಗೃಹ ಬಳಕೆ ಅನಿಲ ಪೂರೈಕೆ ಮೂಲ ಸೌಕರ್ಯ ಅಭಿವೃದ್ದಿಪಡಿಸಲು ಅಂದಾಜು 60 ಶತಕೋಟಿ ಡಾಲರ್ ಹೂಡಿಕೆ ಮಾಡುತ್ತಿದ್ದು. ಮೂಲಕ ನಗರಗಳಲ್ಲಿ ಅನಿಲ ಪೂರೈಕೆ ಜಾಲವನ್ನು ವಿಸ್ತರಿಸಲಾಗುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ಮತ್ತೆ 100 ಜಿಲ್ಲೆಗಳನ್ನು ಅನಿಲ ಪೂರೈಕೆ ಜಾಲಕ್ಕೆ ಸೇರ್ಪಡೆ ಮಾಡಲಾಗುತ್ತಿದೆ. ಪಿಎಂ-ಕುಸುಮ್ ಯೋಜನೆಯಡಿ 2022 ವೇಳೆಗೆ ಕೃಷಿ ವಲಯದಲ್ಲಿ 30 ಗಿಗಾವ್ಯಾಟ್ ಸೌರ ವಿದ್ಯುತ್ ಸಾಮರ್ಥ್ಯ ಅಭಿವೃದ್ಧಿಪಡಿಸಲಿದ್ದೇವೆ.

ಸ್ನೇಹಿತರೇ,

ಸುಸ್ಥಿರತೆ ಕುರಿತಾದ ಚರ್ಚೆಗಳು ಹಸಿರು ಶಕ್ತಿಯ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಆದರೆ ಹಸಿರು ಶಕ್ತಿಯು ಕೇವಲ ಸಾಧನವಾಗಿದೆ. ನಾವು ಬಯಸುವ ಗಮ್ಯ ಸ್ಥಾನವು ಹಸಿರು ಗ್ರಹವಾಗಿದೆ. ಕಾಡುಗಳು ಮತ್ತು ಹಸಿರು ಹೊದಿಕೆಗಳ ಬಗ್ಗೆ ನಮ್ಮ ಸಂಸ್ಕೃತಿಯ ಆಳವಾದ ಗೌರವವು ಹೊರಗಿನ ಫಲಿತಾಂಶಗಳಿಗೆ ಸ್ಪಂದಿಸುತ್ತಿದೆ. 2020 ಜಾಗತಿಕ ಅರಣ್ಯ ಸಂಪನ್ಮೂಲ ಕುರಿತ ಎಫ್..ಕ್ಯೂ ಮೌಲ್ಯಮಾನದ ಪ್ರಕಾರ ಕಳೆದ ದಶಕದಲ್ಲಿ ಅರಣ್ಯ ಸಂಪತ್ತು ಹೆಚ್ಚಿಸಿಕೊಂಡ ಪ್ರಮುಖ ಮೂರು ಅಗ್ರ ರಾಷ್ಟ್ರಗಳ ಸಾಲಿನಲ್ಲಿ ಭಾರತ ಸ್ಥಾನ ಪಡೆದಿದ್ದು, ತನ್ನ ಭೌಗೋಳಿಕ ಪ್ರದೇಶದ ನಾಲ್ಕನೇ ಒಂದು ಭಾಗದಷ್ಟು ಅರಣ್ಯ ಭೂಮಿ ಹೊಂದಿದೆ. ಒಂದು ದೇಶ ಸಾಂಪ್ರದಾಯಿಕ ಚಿಂತನೆಯನ್ನು ಅನುಸರಿಸಿದಾಗ ಅರಣ್ಯ ಪ್ರದೇಶ ಕಡಿಮೆಯಾಗಬಹುದು ಎಂದು ಕೆಲವರು ಯೋಚಿಸಬಹುದು. ಆದರೆ ಅಗತ್ಯವನ್ನು ತೋರಿಸದ ದೇಶಗಳಲ್ಲಿ ಭಾರತವೂ ಸಹ ಒಂದಾಗಿದೆ.

ಸುಸ್ಥಿರತೆ ಅಭಿವೃದ್ಧಿ ಸಾಧಿಸುವ ನಮ್ಮ ದ್ಯೇಯ ಪ್ರಾಣಿಗಳ ರಕ್ಷಣೆಯ ಬಗ್ಗೆ ವಿಶೇಷ ಗಮನವನ್ನು ಸಹ ಒಳಗೊಂಡಿದೆಕಳೆದ ಐದರಿಂದ ಏಳು ವರ್ಷಗಳಲ್ಲಿ ಸಿಂಹ, ಹುಲಿ, ಚಿರತೆಗಳು ಮತ್ತು ಗಂಗೆಟಿಕ್ ನದಿಯಲ್ಲಿ ಡಾಲ್ಫಿನ್ ಗಳ ಸಂಖ್ಯೆಯೂ ಸಹ ಹೆಚ್ಚಾಗಿದೆ

ಸ್ನೇಹಿತರೇ

ಸುಸ್ಥಿರ ಅಭಿವೃದ್ಧಿಗಾಗಿ ಉತ್ತಮ ಮತ್ತು ಉಜ್ವಲ ಮನಸ್ಸುಗಳು ಇಲ್ಲಿ ಸಮಾವೇಶಗೊಂಡಿವೆಒಟ್ಟಿಗೆ ಸಾಗುವ ಮತ್ತು ನಾವೀನ್ಯತೆ ಎಂಬ ಎರಡು ಅಂಶಗಳ ಬಗ್ಗೆ ಗಮನ ಸೆಳೆಯುತ್ತೇನೆ. ಸಾಮೂಹಿಕ ಪ್ರಯತ್ನಗಳ ಮೂಲಕವೇ ನಾವು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಬೇಕು.

ಪ್ರತಿಯೊಬ್ಬ ವ್ಯಕ್ತಿಯು ರಾಷ್ಟ್ರ ಉತ್ತಮವಾಗಿರಬೇಕು ಎಂದು ಬಯಸಬೇಕು. ಪ್ರತಿಯೊಂದು ದೇಶ ಜಗತ್ತು ಉತ್ತಮವಾಗಿರಬೇಕು ಎಂದು ಬಯಸಬೇಕು. ಇದರ ಪರಿಣಾಮದಿಂದ ಸುಸ್ಥಿರ ಅಭಿವೃದ್ಧಿ ವಾಸ್ತವವಾಗುತ್ತದೆ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟದ ಗುರಿಗಳನ್ನು ಈಡೇರಿಸಲು ಭಾರತ ತನ್ನ ಪ್ರಯತ್ನಗಳನ್ನು ಮುಂದುವರೆಸಿದೆ. ಭಾಗವಹಿಸುವ ಎಲ್ಲರೂ ತಮ್ಮ ಮನಸ್ಸು ಮತ್ತು ರಾಷ್ಟ್ರಗಳು ಪ್ರಪಂಚದಾದ್ಯಂತ ಉತ್ತಮ ಅಭ್ಯಾಸಗಳಿಂದ ಗಮನ ಸೆಳೆಯಬೇಕು. ಇದೇ ಸ್ಪೂರ್ತಿಯಿಂದ ನಮ್ಮ ಉತ್ತಮ ಅಭ್ಯಾಸಗಳನ್ನು ಇತರರೊಂದಿಗೆ ಯಾವಾಗಲೂ ಹಂಚಿಕೊಳ್ಳಬೇಕು.

ನವೀಕೃತ ಇಂಧನ ವಲಯದಲ್ಲಿ ಹಲವಾರು ನವೋದ್ಯಮಗಳು ಪರಿಸರ ಸ್ನೇಹಿ ತಂತ್ರಜ್ಞಾನ, ನವೀಕೃತ ಇಂಧನ ಮತ್ತಿತರ ಕ್ಷೇತ್ರ ಹಾಗೂ ಇತ್ಯಾದಿ ವಲಯಗಳಲ್ಲಿ ಕೆಲಸ ಮಾಡುತ್ತಿವೆ. ನೀತಿ ನಿರೂಪಕರು ಮತ್ತು ನಾವು ಇಂತಹ ಪ್ರಯತ್ನಗಳಿಗೆ ಬೆಂಬಲ ನೀಡಬೇಕು. ನಮ್ಮ ಯುವ ಸಮೂಹದ ಶಕ್ತಿಯು ಖಂಡಿತವಾಗಿಯೂ ಅತ್ಯುತ್ತಮ ಫಲಿತಾಂಶಗಳಿಗೆ ಕಾರಣವಾಗುತ್ತದೆ. ನಮ್ಮ ಯುವ  ಸಮೂಹದ ಶಕ್ತಿ ಖಂಡಿತವಾಗಿಯೂ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾಗುತ್ತದೆ.

ಸ್ನೇಹಿತರೇ.

ವೇದಿಕೆ ಮೂಲಕ ತಾವು ಮತ್ತೊಂದು ವಿಷಯವನ್ನು ಪ್ರಸ್ತಾಪಿಸುತ್ತಿದ್ದು, ಅದು ನಮ್ಮ ವಿಪತ್ತು ನಿರ್ವಹಣಾ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಾಗಿದೆಇದಕ್ಕೆ ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ತಂತ್ರಜ್ಞಾನದತ್ತ ಗಮನಹರಿಸುವ ಅಗತ್ಯವಿದೆ. ವಿಪತ್ತು ಸ್ಥಿತಿಸ್ಥಾಪಕತ್ವ ಮೂಲ ಸೌಕರ್ಯಕ್ಕಾಗಿ ನಾವು ಒಕ್ಕೂಟದ ಭಾಗವಾಗಬೇಕಿದ್ದು, ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ.

ಸ್ನೇಹಿತರೇ,

ಮತ್ತಷ್ಟು ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಾಧ್ಯತೆಯ ಎಲ್ಲಾ ಕ್ರಮಗಳನ್ನು ಭಾರತ ಕೈಗೊಳ್ಳುತ್ತಿದೆ. ನಮ್ಮ ಮಾನವ ಕೇಂದ್ರಿತ ವಿಧಾನವು ಜಾಗತಿಕ ಒಳಿತಿಗಾಗಿ ಒಂದು ಉತ್ತಮ ಗುಣಕವಾಗಬೇಕು. ಟೆರಿಯಂತಹ ಸಂಶೋಧನಾ ಸಂಸ್ಥೆಗಳ ಬೆಂಬಲ ಇಂತಹ ಪ್ರಯತ್ನಗಳಿಗೆ ಮುಖ್ಯವಾಗುತ್ತದೆ.

ಶೃಂಗ ಸಭೆಗೆ ಶುಭ ಕೋರುತ್ತೇನೆ ಮತ್ತು ನಿಮ್ಮೆಲ್ಲರಿಗೂ ಶುಭವಾಗಲಿ.

ಧನ್ಯವಾದಗಳು,

ತುಂಬಾ ಧನ್ಯವಾದಗಳು

***



(Release ID: 1697124) Visitor Counter : 203