ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ಅಸ್ಸಾಂನ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್ಸ್ ಕಾರ್ಪೊರೇಷನ್ ಲಿಮಿಟೆಡ್ 100 ಕೋಟಿ ರೂ ಅನುದಾನ: ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ಅನುಮೋದನೆ

Posted On: 10 FEB 2021 3:07PM by PIB Bengaluru

ಕೇಂದ್ರ ರಸಗೊಬ್ಬರ ಇಲಾಖೆ ವ್ಯಾಪ್ತಿಗೆ ಒಳಪಡುವ ಅಸ್ಸಾಂನ ಬ್ರಹ್ಮಪುತ್ರ ವ್ಯಾಲಿ ಫರ್ಟಿಲೈಸರ್ಸ್ ಕಾರ್ಪೋರೇಷನ್ ಲಿಮಿಟೆಡ್ [ಬಿ.ವಿ.ಎಪ್,ಸಿ,.ಎಲ್] ಗೆ  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಆರ್ಥಿಕ ವ್ಯವಹಾರಗಳ ಕುರಿತ ಸಂಪುಟ ಸಮಿತಿ ಸಭೆ 100 ಕೋಟಿ ರೂಪಾಯಿ ಅನುದಾನ ನೀಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ನಮ್ರುಪ್ [ಅಸ್ಸಾಂ] ನ ಯೂರಿಯಾ ಉತ್ಪಾದನಾ ಘಟಕಗಳ ಕಾರ್ಯಾಚರಣೆಗಳನ್ನು ಉಳಿಸಿಕೊಳ್ಳಲು ಈ ಅನುದಾನ ನೀಡಲಾಗಿದೆ.  
ಬಿ.ವಿ.ಎಪ್,ಸಿ,.ಎಲ್, ನಮ್ರುಪ್ ಕಂಪೆನಿ ಕಾಯ್ದೆಯಡಿ ಸಾರ್ವಜನಿಕ ಸ್ವಾಮ್ಯದ ಅಧೀನಕ್ಕೆ ಒಳಪಡಲಿದ್ದು, ಇದರ ಆಡಳಿತಾತ್ಮಕ ನಿಯಂತ್ರಣ ಭಾರತ ಸರ್ಕಾರದ ರಸಗೊಬ್ಬರ ಇಲಾಖೆ [ಡಿ.ಒ.ಎಫ್] ವ್ಯಾಪ್ತಿಯಲ್ಲಿದೆ. 
ಪ್ರಸ್ತುತ ಈ ಕಂಪೆನಿ ಅಸ್ಸಾಂನ ಬಿ.ವಿ.ಎಪ್,ಸಿ,ಎಲ್ ವ್ಯಾಪ್ತಿಯಲ್ಲಿ ನಮ್ರುಪ್-11, ನಮ್ರುಪ್-111 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇದು ದೇಶದ ಮೊದಲ ಅನಿಲ ಆಧರಿತ ಯೂರಿಯಾ ಉತ್ಪಾದನಾ ಘಟಕವಾಗಿದೆ ಮತ್ತು ಹಳೆಯ, ಬಳಕೆಯಲ್ಲಿಲ್ಲದ ತಂತ್ರಜ್ಞಾನದಿಂದಾಗಿ ಅಸ್ಥಿತ್ವದಲ್ಲಿರುವ ಘಟಕಗಳಿಂದ ಸಮಂಜಸವಾದ ಉತ್ಪಾದನಾ ಮಟ್ಟವನ್ನು ಕಡಿಮೆ ವೆಚ್ಚದಲ್ಲಿ ನಿರ್ವಹಿಸುವುದು ಕಷ್ಟಕರವಾಗಿದೆ.  ಸುರಕ್ಷಿತ, ಸುಸ್ಥಿರ ಮತ್ತು ಆರ್ಥಿಕ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ಉಪಕರಣಗಳ ಮತ್ತು ಯಂತ್ರೋಪಕರಣಗಳನ್ನು ಬದಲಾಯಿಸುವ, ಕೂಲಂಕುಶವಾಗಿ ಬದಲಾಯಿಸುವ ಅಗತ್ಯವಿದೆ. ಯಾಂತ್ರಿಕ, ವಿದ್ಯುತ್ ಸಲಕರಣೆಗಳು ಮತ್ತು ವೇಗ ವರ್ಧಕ ವಸ್ತುಗಳ ಸಂಗ್ರಹ, ಇತ್ಯಾದಿಗಳೊಂದಿಗೆ ಸುಗಮ ಕಾರ್ಯಾಚರಣೆಗಾಗಿ ಕನಿಷ್ಠ ದುರಸ್ತಿ ಕೈಗೊಳ್ಳಬೇಕಿದೆ. ಇದಕ್ಕಾಗಿ ಅಂದಾಜು 100 ಕೋಟಿ ರೂ ಅಗತ್ಯವಾಗಿದೆ ಮತ್ತು ಕೇಂದ್ರ ಸರ್ಕಾರ ಬಿ.ವಿ.ಎಪ್,ಸಿ,ಎಲ್ ಗೆ 100 ಕೋಟಿ ರೂ ಅನುದಾನ ಮಂಜೂರು ಮಾಡಿದೆ. 
ಬಿ.ವಿ.ಎಪ್,ಸಿ,ಎಲ್ ಭಾರತದ ಈಶಾನ್ಯ ಭಾಗದಲ್ಲಿದ್ದು, ಈ ಭಾಗದ ಆರ್ಥಿಕ ಬೆಳವಣಿಗೆಯಲ್ಲಿ ಈ ಕಂಪೆನಿ ಪ್ರಮುಖ ಪಾತ್ರ ವಹಿಸುತ್ತದೆ. ಬಿ.ವಿ.ಎಪ್,ಸಿ,ಎಲ್ ಗೆ 100 ಕೋಟಿ ರೂ ನೀಡುವುದರಿಂದ ವಾರ್ಷಿಕ 3.90 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಉತ್ಪಾದನೆ ಮಾಡಲು ಸಹಕಾರಿಯಾಗಲಿದೆ. ಈಶಾನ್ಯ ಭಾರತದ ಅದರಲ್ಲೂ ಪ್ರಮುಖವಾಗಿ ಅಸ್ಸಾಂನ ಚಹಾ ಕೈಗಾರಿಕೆ ಮತ್ತು ಕೃಷಿ ಚಟುವಟಿಕೆಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಪೂರೈಸಲು ಸಹಕಾರಿಯಾಗಲಿದೆ.
ಸರ್ಕಾರದ ಕ್ರಮದಿಂದ 580 ಖಾಯಂ ಸಿಬ್ಬಂದಿ ಮತ್ತು 1,500 ಮಂದಿ ಹಂಗಾಮಿ ಸಿಬ್ಬಂದಿಯನ್ನು ಮುಂದುವರೆಸಲು ಸಹಕಾರಿಯಾಗಲಿದೆ. ಈ ಕಂಪೆನಿಯಿಂದ ಪರೋಕ್ಷವಾಗಿ 28,000 ಮಂದಿಗೆ ಲಾಭವಾಗಲಿದೆ. ಅಲ್ಲದೇ ಕೇಂದ್ರ ಸರ್ಕಾರದ “ ಆತ್ಮ ನಿರ್ಭರ್ ಭಾರತ್” ಬಲಪಡಿಸಲು ಈ ಬೆಳವಣಿಗೆ ಸಹಕಾರಿಯಾಗಿದೆ. 


***

 


(Release ID: 1696915) Visitor Counter : 125