ನಾಗರೀಕ ವಿಮಾನಯಾನ ಸಚಿವಾಲಯ

ಡ್ರೋನ್‌ಗಳನ್ನು ಬಳಸಲು ಬಿಸಿಸಿಐಗೆ ಅನುಮತಿ

Posted On: 08 FEB 2021 3:48PM by PIB Bengaluru

ಭಾರತೀಯ ಕ್ರಿಕೆಟ್ ವರ್ಷದ ಋತುವಿನಲ್ಲಿ ಕ್ರಿಕೆಟ್ ಪಂದ್ಯಗಳ ನೇರ ಪ್ರಸಾರ ಕಾರ್ಯಕ್ರಮದ ಚಿತ್ರೀಕರಣಕ್ಕಾಗಿ  ಡ್ರೋನ್ ಗಳ ಬಳಕೆಗೆ ಅನುಮತಿ ನೀಡಲಾಗಿದೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ [ಬಿಸಿಸಿಐ] ಗೆ ನಾಗರಿಕ ವಿಮಾನಯಾನ [ಎಂಒಸಿಎ] ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದಿಂದ [ಡಿಜಿಸಿಎ] ಅನುಮತಿ ನೀಡಿದ್ದು, 2021ರ ಕ್ರಿಕೆಟ್ ಋತುವಿಗೆ ಚಿತ್ರೀಕರಣಕ್ಕಾಗಿ ಡ್ರೋನ್ ಗಳ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.

ರಿಮೋಟರಿ ಪೈಲೊಟೆಡ್ ಏರ್ ಕ್ರಾಪ್ಟ್ ವ್ಯವಸ್ಥೆಯನ್ನು [ಆರ್.ಪಿ.ಎ.ಎಸ್] ನೇರ ಪ್ರಸಾರ ಕಾರ್ಯಕ್ರಮಗಳಿಗೆ ಬಳಸಲು ಅನುಮತಿ ನೀಡಬೇಕೆಂದು ಕೋರಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಕುರಿತು ಬಿಸಿಸಿಐ ಮತ್ತು ಕ್ಯುಡಿಚ್ ಸಂಸ್ಥೆಗಳು ಮನವಿ ಸಲ್ಲಿಸಿತ್ತಲ್ಲದೇ ಇತರೆ ಪತ್ರ ವ್ಯವಹಾರವನ್ನೂ ನಡೆಸಿತ್ತು.

ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀ ಅಂಬೆರ್ ದುಬೆ ಮಾತನಾಡಿ, “ ಡ್ರೋನ್ ಪರಿಸರ ವ್ಯವಸ್ಥೆ ದೇಶದಲ್ಲಿ ವೇಗವಾಗಿ ವಿಕಸನಗೊಳ್ಳುತ್ತಿದೆ. ಇದು ತನ್ನ ಚಟುವಟಿಕೆಯನ್ನು ಕೃಷಿ, ಗಣಿಗಾರಿಕೆ, ಆರೋಗ್ಯ ವಲಯ, ವಿಪತ್ತು ನಿರ್ವಹಣೆಯಿಂದ ಕ್ರೀಡೆ ನಂತರ  ಮನೋರಂಜನೆವರೆಗೆ ತನ್ನ ವ್ಯಾಪ್ತಿ ವಿಸ್ತರಿಸಿಕೊಂಡಿದೆ.  ಕೇಂದ್ರ ಸರ್ಕಾರದ ವಾಣಿಜ್ಯ ಉದ್ದೇಶಗಳಿಗೆ ಅನುಗುಣವಾಗಿ ಡ್ರೋನ್ ಗಳ ವಾಣಿಜ್ಯ ಬಳಕೆಗೆ ಅನುಮತಿ ನೀಡಲಾಗುತ್ತಿದೆ.”  ಎಂದರು.

2021ರ ಡ್ರೋನ್ ಗಳ ಬಳಕೆಯ ನಿಯಮಗಳ ರಚನೆ ಕಾನೂನು ಸಚಿವಾಲಯದಲ್ಲಿ ಅಂತಿಮ ಹಂತದ ಚರ್ಚೆಯಲ್ಲಿದೆ. 2021 ಮಾರ್ಚ್ ವೇಳೆಗೆ ಇದಕ್ಕೆ ಅನುಮತಿ ದೊರೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಷರತ್ತುಬದ್ಧ ವಿನಾಯಿತಿ 2021 ರ ಡಿಸೆಂಬರ್ 31 ರವರೆಗೆ ಅಂದರೆ ಪತ್ರವನ್ನು ನೀಡಿದ ದಿನಾಂಕದಿಂದ ಅಥವಾ ಡಿಜಿಟಲ್ ಸ್ಕೈ ಪ್ಲಾಟ್ ಫಾರ್ಮ್ ಹಂತ ಸಂಪೂರ್ಣ ಕಾರ್ಯಾಚರಣೆವರೆಗೆ ಯಾವುದು ಮೊದಲಿನದ್ದೋ ಅಲ್ಲಿಯವರೆಗೆ ಮಾನ್ಯವಾಗಿರಲಿದೆ.  ಈ ಕೆಳಗಿನ ಷರತ್ತುಗಳು ಮತ್ತು ಮಿತಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಮಾತ್ರ ವಿನಾಯಿತಿ ಮಾನ್ಯವಾಗಿರುತ್ತದೆ. ಒಂದು ವೇಳೆ ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಅನುಮತಿ ಅಸ್ಥಿತ್ವ ಕಳೆದುಕೊಳ್ಳುತ್ತದೆ ಮತ್ತು ಅನೂರ್ಜಿತವಾಗುತ್ತದೆ.

ರಿಮೋಟರಿ ಪೈಲೊಟೆಡ್ ಏರ್ ಕ್ರಾಪ್ಟ್ ಸಿಸ್ಟಮ್ [ಆರ್.ಪಿ.ಎ.ಎಸ್] ಅನ್ನು 2021 ರ ಕ್ರಿಕೆಟ್ ಋತುವಿನಲ್ಲಿ ವೈಮಾನಿಕ ಚಿತ್ರೀಕರಣಕ್ಕಾಗಿ ಬಳಸಲು ಬಿಸಿಸಿಐ ಮತ್ತು ಮೆಸಸ್ ಕ್ಯುಡಿಚ್ ಗೆ ಷರತ್ತು ಮಿತಿಗಳನ್ನು ಹೇರಲಾಗಿದೆ.

  1. ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ 1937 ರ ವಿಮಾನಯಾನ ನಿಯಮ 15ಎ ಭಾಗ 1 ರಲ್ಲಿ ಪ್ಯಾರ 5.2 [ಬಿ], 5,3, 6,7, 8.4, 9.2, 11 [ಡಿ], 11.2] [ಎ], 12.3 [ಎ], 12.4 ಮತ್ತು 12.5 ರ ಸಿಎಆರ್ ಸೆಕ್ಷನ್ 3, 5 ನೇ ಸೀರಿಸ್ ನಡಿ ವಿನಾಯಿತಿ ನೀಡಲಾಗಿದೆ.
  2. ಬಿಸಿಸಿಐ [ಅ] ಸ್ಥಳೀಯ ಆಡಳಿತ,] ಬಿ] ರಕ್ಷಣಾ ಸಚಿವಾಲಯ, [ಸಿ] ಗೃಹ ವ್ಯವಹಾರಗಳು, [ಇ] ಭಾರತೀಯ ವಿಮಾನಯಾನ ಪ್ರಾಧಿಕಾರ ಗಳಿಂದ ರಿಮೋಟರಿ ಪೈಲೊಟೆಡ್ ಏರ್ ಕ್ರಾಪ್ಟ್ ಸಿಸ್ಟೆಮ್ [ಆರ್.ಪಿ..ಎಎಸ್] ಬಳಕೆಗೆ ಅನುಮತಿ ಪಡೆಯಬೇಕು.
  1. ಬಿಸಿಸಿಐನಿಂದ ನಿಯೋಜಿತವಾದ ಮೆಸಸ್ ಕ್ವುಡಿಚ್ ಸಂಸ್ಥೆ ನಿರ್ದಿಷ್ಟ ಆರ್.ಪಿ.ಎ.ಎಸ್ ಮಾದರಿಗಳನ್ನು ಬಳಸಲು ಸ್ಟ್ಯಾಂಡರ್ಡ್ ಆಫರೇಟಿಂಗ್ ಪ್ರೊಸಿಜರ್ [ಎಸ್.ಒ.ಪಿ] ಅಡಿ ಡಾಕ್ ನಂ ಕ್ಯು.ಐ.ಐ.ಎಸ್.ಒ.ಪಿ/2021/-1 ರೆವ್ 2021 ರ ಜನವರಿ 8 ರಂದು ನಿರ್ದಿಷ್ಟವಾಗಿ ಅನುಮತಿ ಪಡೆದುಕೊಂಡಿದೆ.  ಆರ್.ಪಿ.ಎ.ಎಸ್ ಹಾರಾಟಕ್ಕೆ ಸ್ವೀಕೃತಿ ಸಂಖ್ಯೆ [ಡಿಎಎನ್] ] ನಿರ್ದಿಷ್ಟವಾಗಿ ಎಸ್.ಒ.ಪಿ] ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿದೆ. ಏನಾದರೂ ಬದಲಾವಣೆಗಳಿದ್ದರೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಬೇಕು.
  1. ಮಾದರಿ ಕಾರ್ಯಾಚರಣೆ ಪ್ರಕ್ರಿಯೆ ಎಸ್.ಒ.ಪಿಯಡಿ ಆರ್.ಪಿ.ಎ.ಎಸ್. ಕಾರ್ಯಾಚರಣೆಯನ್ನು ತರಬೇತಿ ಪಡೆದ ಮತ್ತು ಅನುಭವ ಹೊಂದಿರುವವರಿಂದ ಮಾತ್ರ ಕಾರ್ಯಾಚರಣೆ ಮಾಡಬೇಕು. ಇಂತಹ ಕಾರ್ಯಾಚರಣೆ ನಡೆಸುವವರು ಎಫ್.,ಟಿ.ಓಗಳು/ಆರ್.ಪಿ.ಟಿ.ಓಗಳಿಂದ ರಿಮೋಟ್ ಪ್ಲೈಟ್ ಹಾರಾಟ ಕುರಿತು ತರಬೇತಿ ಪಡೆದಿರಬೆಕು. 
  1. ಆರ್.ಎ.ಪಿ.ಎ.ಎಸ್ ಕಾರ್ಯಾಚರಣೆ ನಡೆಸುವರು .ಆರ್..ಎ.ಪಿ.ಎ.ಎಸ್ ಕಾರ್ಯಾಚರಣೆ ಮಾಡುವ ಸುಸ್ಥಿತಿಯಲ್ಲಿದೆ ಮತ್ತು ಎಸ್.ಒ.ಪಿಯಲ್ಲಿ ನಮೂದಿಸಿದ ಮಾನದಂಡಗಳನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಬೇಕು ಮತ್ತು ಯಾವುದೇ ಸಂಭವನೀಯತೆಗಳಿಗೆ ಜವಾಬ್ದಾರಿಯಾಗಿರಬೇಕಾಗುತ್ತದೆ.
  2. ಆರ್.ಪಿ.ಎ.ಎಸ್ ಕಾರ್ಯಾಚರಣೆ ಮಾಡುವವರು ಆರ್.ಪಿ.ಎ ಪ್ಲೈಟ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡಿರಬೇಕು ಮತ್ತು ಡಿಜಿಸಿಎ ಬೇಡಿಕೆಗಳಿಗೆ ಅನುಗುಣವಾಗಿ ಅಂತಹ ದಾಖಲೆಗಳನ್ನು ಒದಗಿಸಬೇಕು.
  3. ರಕ್ಷಣಾ ಸಚಿವಾಲಯ ಅಥವಾ ಡಿಜಿಸಿಎ  ನಿಂದ ವೈಮಾನಿಕ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಗತ್ಯ ಅನುಮತಿ ಪಡೆಯಬೇಕು. ಆರ್..ಎ.ಪಿ.ಎಸ್ ಗಳಿಂದ ಚಿತ್ರೀಕರಿಸಿದ ಛಾಯಾಗ್ರಹಣ ಮತ್ತು ವಿಡಿಯೋ ಗಳನ್ನು ಬಿಸಿಸಿಐ ಮಾತ್ರ ಬಳಸಬೇಕು.  ಆರ್.ಎ.ಪಿ.ಎಸ್ ಸುರಕ್ಷತೆ ಮತ್ತು ಭದ್ರತೆಗೆ ಬಿಸಿಸಿಐ ಜವಾಬ್ದಾರಿಯಾಗಲಿದೆ ಮತ್ತು ಆರ್.ಪಿ.ಎ.ಎಸ್ ನಿಂದ ದತ್ತಾಂಶ ಸಂಗ್ರಹಿಸಬೇಕು.
  4. ಆರ್.ಪಿ.ಎ.ಎಸ್ ಅನ್ನು ಕಾರ್ಯಾಚರಣೆ ಮಾಡುವವರು ಡಿಟಿಟಲ್ ವೇದಿಕೆ ಕಾರ್ಯಾಚರಣೆ ಮಾಡಿದ ತಕ್ಷಣ ಎನ್.ಪಿ.ಎನ್.ಟಿ ಮೂಲಕ ಎನ್..ಪಿ.ಎನ್.ಟಿ ದೂರುಗಳ [ಕ್ವು.ಸಿ.ಐ ] ಸಂಗ್ರಹಿಸಬೇಕು. 
  5. ಕ್ವಿಡಿಚ್ ನಿರ್ವಹಿಸುವ ಪ್ರತಿಯೊಂದು .ಆರ್.ಪಿ.ಎ..ಎಸ್ ನಲ್ಲಿ ಅಗ್ನಿ ನಿರೋಧಕ ಗುರುತಿನ ಫಲಕವನ್ನು ಒ.ಎ.ಎನ್, ಡಿ.ಎ.ಎನ್ ಮತ್ತು ಆರ್.ಪಿ.ಎ.ಎಸ್ ಮಾದರಿ ಸಂಖ್ಯೆಯನ್ನು ಕೆತ್ತಲಾಗಿದೆಯೇ ಎಂಬುದನ್ನು ಬಿಸಿಸಿಐ ಸ್ಪಷ್ಟವಾಗಿ ಖಚಿತಪಡಿಸಬೇಕು.
  6. ಆರ್.ಎ.ಪಿ.ಎಸ್ ಕಾರ್ಯಾಚರಣೆಯನ್ನು ಅನಿಯಂತ್ರಿತ ವಾಯು ಪ್ರದೇಶದಲ್ಲಿ ವಿಷ್ಯುಯಲ್ ಲೈನ್ ಆಫ್ ಸೈಟ್ [ವಿ.ಎಲ್.ಎಸ್.ಓ] ಒಳಗೆ ಮತ್ತು 200 ಅಡಿ [ಎ.ಜಿ.ಎಲ್] ಗರಿಷ್ಠ ಎತ್ತರಕ್ಕೆ ಹಾರಲು ಮಾತ್ರ ಹಗಲು ಅಥವಾ ಚೆನ್ನಾಗಿ ಬೆಳಕಿರುವ ಪರಿಸ್ಥಿತಿಗಳಿಗೆ [2000 ಲುಕ್ಸ್ ಗಳಿಗಿಂತ ಹೆಚ್ಚು ] ನಿರ್ಬಂಧಿಸಲಾಗಿದೆ. 
  7. ಸಿ.ಎ.ಆರ್, ನಿಬಂಧನೆಗಳ ಪ್ರಕಾರ ಆರ್.ಪಿ.ಎ.ಎಸ್ ಅನ್ನು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ನಿರ್ವಹಿಸಲು ಅವಕಾಶವಿಲ್ಲ. ವಿಮಾನ ನಿಲ್ದಾಣ/ ನಿಯಂತ್ರಿತ ವಾಯ ಪ್ರದೇಶಗಳಲ್ಲಿ ಕಾರ್ಯಾಚರಣೆ ಮಾಡಬೇಕೆಂದರೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಿಗಳಿಂದ ಆರ್.ಪಿ.ಎ.ಎಸ್ ಗಳ ಹಾರಾಟಕ್ಕೆ ಮುಂಚಿತವಾಗಿ ಹಾರಾಟ ಪ್ರದೇಶ  ಮತ್ತು ಅವಧಿಯ ಬಗ್ಗೆ ಅನುಮತಿ ಪಡೆಯಬೇಕು.
  8. ಆರ್.ಪಿ.ಎ.ಎಸ್ ಹಾರಾಟದ ಸಂದರ್ಭದಲ್ಲಿ ಯಾವುದೇ ವಸ್ತುಗಳನ್ನು ಬಿಡುಗಡೆ ಮಾಡುವುದಿಲ್ಲ ಮತ್ತು ಬಿಡುವುದಿಲ್ಲ ಎಂಬುದನ್ನು ಬಿಸಿಸಿಐ ಖಚಿತಪಡಿಸಬೇಕು. ಯಾವುದೇ ಪರಿಸ್ಥಿತಿಯಲ್ಲೂ ಆರ್.ಪಿ.ಎ ಬಳಸುವಾಗ ಅಪಾಯಕಾರಿ ವಸ್ತು ಅಥವಾ ವೇರಿಯಬಲ್ ಪೇ ಲೋಡ್ ಅನ್ನು ಸಾಗಿಸುವುದಿಲ್ಲ ಎಂದು ಬಿಸಿಸಿಐ ಖಚಿತಪಡಿಸಬೇಕು.  
  9. ಕಾರ್ಯಾಚರಣೆ ಮಾಡುವ ಪ್ರದೇಶಕ್ಕೆ ವಿಷಯಕ್ಕೆ ಸಂಬಂಧಿಸಿದ ಯಾವುದೇ ವ್ಯಕ್ತಿಯನ್ನು ಸೇರಿಸದೇ ಇರುವ ಬಗ್ಗೆ ಬಿಸಿಸಿಐ  ಖಚಿತಪಡಿಸಬೇಕು [ಕೆಳಮಟ್ಟದ ಕಾರ್ಯಾಚರಣೆ ಪ್ರದೇಶ ಒಳಗೊಂಡಂತೆ] ಮತ್ತು ಮಾದರಿ ಕಾರ್ಯಾಚರಣೆ ಎಸ್.ಒ.ಪಿಯಲ್ಲಿ ನೀಡಲಾಗಿರುವ ನಿರ್ದಿಷ್ಟ ಅನುಮತಿ ಮತ್ತು ಪತ್ರಗಳಿಗೆ ಬದ್ಧವಾಗಿರಬೇಕು.
  10. ಕಾರ್ಯಾಚರಣೆ ಮಾಡುವವರ, ಸಾರ್ವಜನಿಕ ಆಸ್ತಿ, ರಕ್ಷಣೆ ಮತ್ತು ಭದ್ರತೆ ಮತ್ತಿತರೆ ವಿಚಾರಗಳನ್ನು ಬಿಸಿಸಿಐ ಖಚಿತಪಡಿಸಬೇಕು. ಹಾಗೊಂದು ವೇಳೆ ಏನಾದರೂ ಅಚಾತುರ್ಯ ಸಂಭವಿಸಿದಲ್ಲಿ ಡಿಜಿಸಿಎ ಜವಾಬ್ದಾರವಾಗುವುದಿಲ್ಲ.
  11. ಆರ್.ಪಿ.ಎ.ಎಸ್. ಕಾರ್ಯಾಚರಣೆ ಮಾಡುವವರು ಯಾವುದೇ ವ್ಯಕ್ತಿ ಮತ್ತು ಆಸ್ತಿಗೆ ಆಪಾಯ ತರುವ ರೀತಿಯಲ್ಲಿ ಹಾರಾಟ ಮಾಡುವುದಿಲ್ಲ ಎನ್ನುವುದನ್ನು ಖಚಿತಪಡಿಸಬೇಕು. ಒಂದು ವೇಳೆ ಯಾವುದೇ ವ್ಯಕ್ತಿಗೆ ಉಪಕರಣ ದೇಹಕ್ಕೆ ತಗುಲಿ ಗಾಯವಾದರೆ ಯಾವುದೇ ರೀತಿಯಲ್ಲಿ ತೊಂದರೆಯಾದಲ್ಲಿ ವೈದ್ಯಕೀಯ, ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಾಚರಣೆ ಮಾಡಿದವರು ಮತ್ತು ಬಿಸಿಸಿಐ ಜಾವಾಬ್ದಾರಿಯಾಗುತ್ತದೆ. ಆರ್.ಪಿ.ಎ.ಎಸ್. ಕಾರ್ಯಾಚರಣೆಯಿಂದ ಅಪಘಾತಗಳಾದಲ್ಲಿ ರಕ್ಷಣೆ ನೀಡುವ ಸಂಬಂಧ ಬಿಸಿಸಿಐ ಮೂರನೇ ವ್ಯಕ್ತಿಗಳಿಗೆ ಸೂಕ್ತ ವಿಮಾ ಸೌಲಭ್ಯ ಕಲ್ಪಿಸಬೇಕು.
  12. ಸಿ.ಎ.ಆರ್ ಸೆಕ್ಷನ್ ನಡಿ ಪ್ಯಾರಾ 13.1 ರಡಿ ನಿರ್ದಿಷ್ಟವಾಗಿ ಹೇಳಿರುವಂತೆ ಸಂಬಂಧಪಟ್ಟ ಸಚಿವಾಲಯಗಳಿಂದ ಅನುಮತಿ ಪಡೆದಂತೆ  ನಿರ್ದಿಷ್ಟ ಹಾರಾಟ ಪ್ರದೇಶಗಳಲ್ಲಿ ಮಾತ್ರ ಹಾರಾಟ ಮಾಡಬೇಕು.
  13. ಇಂತಹ ಕಾರ್ಯಾಚರಣೆಗಳಿಂದ ಉಂಟಾಗುವ ಯಾವುದೇ ರೀತಿಯ ಕಾನೂನು ಮತ್ತಿತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಕ್ವುಡಿಚ್ ನಿಂದ ಉಂಟಾಗುವ ನಷ್ಟವನ್ನು ಡಿಜಿಸಿಎ ನಿಗದಿಮಾಡುತ್ತದೆ.  
  1. ಇತರೆ ಸರ್ಕಾರಿ ಏಜನ್ಸಿಗಳು ಅಥವಾ ಯಾವುದೇ ಬೈಲಾಗಳಿಂದ ರೂಪಿಸಲ್ಪಟ್ಟ ರಿಮೋಟ್ ಪೈಲೆಟ್ಸ್ ಏರ್ ಕ್ರಾಪ್ಟ್ ಸಿಸ್ಟಮ್ ನಲ್ಲಿ ಮಾದರಿ ಕಾರ್ಯಾಚರಣೆಯ ಯಾವುದೇ ನಿರ್ಬಂಧಗಳನ್ನು ಅತಿಕ್ರಮಿಸುವುದಿಲ್ಲ.
  2. ಒಂದು ವೇಳೆ ಅಪಘಾತ ಸಂಭವಿಸಿದಲ್ಲಿ, ಯಾವುದೇ ರೀತಿಯ ಕಾರ್ಯಾಚರಣೆ ಸಂದರ್ಭದಲ್ಲಿ ಆಯೋಜಕರು ಅಂತಹ ಘಟನೆಯ 24 ಗಂಟೆಯ ಒಳಗೆ ಡಿಜಿಸಿಎದ ವಾಯು ಸುರಕ್ಷತಾ ನಿರ್ದೇಶನಾಲಯ ಡಿಜಿಸಿಎಗೆ ವರದಿ ಸಲ್ಲಿಸಬೇಕು.
  3. ಕಾರ್ಯಾಚರಣೆ ನಡೆಸುವವರು ಕಾರ್ಯಾಚರಿಸುವ [ಸ್ಥಳ ಮತ್ತು ಕಾರ್ಯಾಚರಣೆಯ ದಿನಾಂಕ] ಬಗ್ಗೆ ಮುಂದಾಗಿಯೇ ಮಾಹಿತಿ ನೀಡಬೇಕು.  ಈ ನಿಟ್ಟಿನಲ್ಲಿ ಬಿಸಿಸಿಐ, ಡಿಜಿಸಿಎ ಗೆ ವೇದಿಕೆ ಒದಗಿಸಬೇಕು.
  4. ಹಾಗೊಂದು ವೇಳೆ ಸಿ.ಎ.ಎರ್ ಮೇಲ್ಕಂಡ ನಿರ್ದಿಷ್ಟ ಯಾವುದೇ ನಿಬಂಧಗಳನ್ನು, ಷರತ್ತುಗಳನ್ನು, ಮಿತಿಗಳನ್ನು ಉಲ್ಲಂಘಿಸಿದಲ್ಲಿ ಸಿ.ಎ.ಆರ್ ಪ್ಯಾರಾ 18 ರಲ್ಲಿ ವಿವರಿಸಿರುವಂತೆ ನೀಡಿದ ಅನುಮತಿ ಅನೂರ್ಜಿತಗೊಳ್ಳುತ್ತವೆ ಮತ್ತು ಅಸ್ಥಿತ್ವ ಕಳೆದುಕೊಳ್ಳುತ್ತವೆ.

***


(Release ID: 1696432) Visitor Counter : 259