ಬುಡಕಟ್ಟು ವ್ಯವಹಾರಗಳ ಸಚಿವಾಲಯ

ರಾಜ್ಯದಲ್ಲಿ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ವಿಸ್ತರಿಸಲು ಕರ್ನಾಟಕಕ್ಕೆ ಭೇಟಿ ನೀಡಿದ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಟ್ರೈಫೆಡ್ ತಂಡ

Posted On: 29 JAN 2021 12:22PM by PIB Bengaluru

ಕರ್ನಾಟಕದಲ್ಲಿ ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿಯ ಸ್ಥಿತಿಗತಿ ಮತ್ತು ವಿಸ್ತರಣೆಯನ್ನು ಕುರಿತು ಚರ್ಚಿಸಲು ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರವೀರ್ ಕೃಷ್ಣ ನೇತೃತ್ವದ ಬುಡಕಟ್ಟು ಸಹಕಾರಿ ಮಾರುಕಟ್ಟೆ ಅಭಿವೃದ್ಧಿ ಫೆಡರೇಷನ್ (ಟ್ರೈಫೆಡ್) ಅಧಿಕಾರಿಗಳ ತಂಡವು 2021 ಜನವರಿ 21 ಮತ್ತು 22 ರಂದು ರಾಜ್ಯಕ್ಕೆ ಭೇಟಿ ನೀಡಿತ್ತು. ಈ ಸಂಬಂಧ  ಕರ್ನಾಟಕದ ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪ ಅವರು ಸಭೆ ನಡೆಸಿದರು. ಈ ಸಭೆಯಲ್ಲಿ  ಶ್ರೀ ಪ್ರವೀರ್ ಕೃಷ್ಣ, ಮುಖ್ಯಮಂತ್ರಿಯವರ ಸಲಹೆಗಾರ ಶ್ರೀ ಲಕ್ಷ್ಮಿ ನಾರಾಯಣನ್,  ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಎನ್. ನಾಗಂಬಿಕಾ ದೇವಿ ಮತ್ತು ಕರ್ನಾಟಕ ಸರ್ಕಾರ ಮತ್ತು ಟ್ರೈಫೆಡ್ ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. 100 ವಿಡಿವಿಕೆಗಳು, ಎಂಎಫ್ಪಿಗಾಗಿ ಎಂಎಸ್ಪಿ ಅಡಿಯಲ್ಲಿ ಮೂಲಸೌಕರ್ಯ (100 ಹಾತ್ ಬಜಾರ್ಗಳು ಮತ್ತು 20 ಗೋದಾಮುಗಳು), 5 ಟ್ರೈಫುಡ್ ಪಾರ್ಕ್ಗಳು, 10 ಮಿನಿ ಟ್ರೈಫುಡ್ ಘಟಕಗಳು, 5 (ಸ್ಫೂರ್ತಿ) ಎಸ್ಎಫ್ಆರ್ಟಿ ಕ್ಲಸ್ಟರ್ಗಳು ಮತ್ತು 10 ಚಿಲ್ಲರೆ ಮಳಗೆಗಳನ್ನು ಒಳಗೊಂಡಂತೆ ಬುಡಕಟ್ಟು ಉದ್ಯಮ ಅಭಿವೃದ್ಧಿ ಕಾರ್ಯಕ್ರಮದ ವಿಸ್ತರಣೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ರಾಜ್ಯದಲ್ಲಿ ಟ್ರೈಫೆಡ್ ನ ಎಲ್ಲಾ ಬುಡಕಟ್ಟು ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಮ್ಮ ಬೆಂಬಲ ನೀಡುವುದಾಗಿ ಸಭೆಯಲ್ಲಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ಟ್ರೈಫೆಡ್ ತಂಡವು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀ ಬಿ. ಶ್ರೀರಾಮುಲು ಅವರನ್ನು ಭೇಟಿ ಮಾಡಿ, ಬುಡಕಟ್ಟು ಅಭಿವೃದ್ಧಿ ಯೋಜನೆಗಳ ವಿಸ್ತರಣೆಯ ಬಗ್ಗೆ ವಿವರಿಸಿತು ಹಾಗೂ ಅವರ ಸಹಕಾರವನ್ನು ಕೋರಿತು.

http://static.pib.gov.in/WriteReadData/userfiles/image/image001VCXF.jpghttp://static.pib.gov.in/WriteReadData/userfiles/image/image002O9S2.jpg

 

ಸಭೆಗಳ ನಂತರ, ಟ್ರೈಫೆಡ್ ವ್ಯವಸ್ಥಾಪಕ ನಿರ್ದೇಶಕರು ಮತ್ತು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀ ರವಿ ಕುಮಾರ್ ನಡುವೆ ಚರ್ಚೆ ನಡೆಯಿತು. ಎಂಎಫ್ಪಿ ಗಳ ಎಂಎಸ್ಪಿ ಕಾರ್ಯಕ್ರಮವನ್ನು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಅನುಷ್ಠಾನಗೊಳಿಸು ಬಗ್ಗೆ ಮುಖ್ಯ ಕಾರ್ಯದರ್ಶಿಯವರು ಉತ್ಸಾಹ ವ್ಯಕ್ತಪಡಿಸಿದರು. ರಾಜ್ಯದಲ್ಲಿ 200 ಹಾತ್ ಬಜಾರ್ಗಳು ಮತ್ತು 40 ಗೋದಾಮುಗಳನ್ನು ಸ್ಥಾಪಿಸಲು ಸೂಚಿಸಲಾಯಿತು; ವನ ಧನ್ ಕಾರ್ಯಕ್ರಮವನ್ನು ಸಂಘಟಿಸಲು ಮತ್ತು ಮೇಲ್ವಿಚಾರಣೆ ಮಾಡಲು ಮೈಸೂರಿನಲ್ಲಿ ಟ್ರೈಫೆಡ್ ಕಚೇರಿಯನ್ನು ಸ್ಥಾಪಿಸಲು ನಿರ್ಧರಿಸಲಾಯಿತು. ಉದ್ದೇಶಿತ ವನ ಧನ್ ಉಪಕ್ರಮಗಳಿಗಾಗಿ ಟ್ರೈಫೆಡ್ ಮೈಸೂರಿನ ಸ್ವಾಮಿ ವಿವೇಕಾನಂದ ಯುವ ಆಂದೋಲನದೊಂದಿಗೆ ಸಹಯೋಗ ಪಡೆಉವ ಬಗ್ಗೆ ನಿರ್ಧರಿಸಲಾಯಿತು.

ವಿಸ್ತರಣಾ ಯೋಜನೆಯನ್ನು ಅದೇ ದಿನ ನಡೆದ ರಾಜ್ಯ ಚಾಲನಾ ಸಮಿತಿ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು. ಟ್ರೈಫೆಡ್ ವ್ಯವಸ್ಥಾಪಕ ನಿರ್ದೇಶಕರು ಅಧ್ಯಕ್ಷತೆ ವಹಿಸಿದ್ದ ೀ ಸಭೆಯಲ್ಲಿ ರಾಜ್ಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ, ಬುಡಕಟ್ಟು ಉದ್ಯಮ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವ ಪ್ರಸ್ತಾಪವನ್ನು ಮುಂದಿಡಲಾಯಿತು ಮತ್ತು ರಾಷ್ಟ್ರೀಯ ಯೋಜನಾ ನಿರ್ವಹಣಾ ಘಟಕವನ್ನು (ಎನ್ಪಿಎಂಯು) ಬೆಂಬಲಿಸಲು ಮತ್ತು ಸಮನ್ವಯಗೊಳಿಸಲು ರಾಜ್ಯ ಯೋಜನಾ ನಿರ್ವಹಣಾ ಘಟಕವನ್ನು (ಎಸ್ಪಿಎಂಯು) ಸ್ಥಾಪಿಸಲು ನಿರ್ಧರಿಸಲಾಯಿತು. ಟ್ರೈಫುಡ್ ಪಾರ್ಕ್ ಗಳನ್ನು ಸ್ಥಾಪಿಸಲು ಡಿಎಂಎಫ್ ಮತ್ತು ಆರ್ಟಿಕಲ್ 275.1, ಆಹಾರ ಸಂಸ್ಕರಣಾ ಕೈಗಾರಿಕಾ ಸಚಿವಾಲಯದಿಂದ ಮಿನಿ ಟ್ರೈಫುಡ್ ಘಟಕ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದಿಂದ ಎಸ್ಎಫ್ಆರ್ಟಿ ಕ್ಲಸ್ಟರ್ಗಳು ಇತ್ಯಾದಿಗಳಿಂದ ಹಣವನ್ನು ಪಡೆಯುವ ಅವಕಾಶಗಳನ್ನು ಅನ್ವೇಷಿಸಲು ರಾಜ್ಯ ಮಟ್ಟದಲ್ಲಿ ಸಮನ್ವಯ ಮಾದರಿಯನ್ನು ಸ್ಥಾಪಿಸಲಾಗುವುದು. ಸಂಜೀವಿನಿ ಸೊಸೈಟಿಯು ಇಡೀ ರಾಜ್ಯ ಯೋಜನೆಗೆ ಅನುಷ್ಠಾನ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ತೀರ್ಮಾನಿಸಲಾಯಿತು ಮತ್ತು ಇತರ ವಿವರಗಳನ್ನು ಅಂತಿಮಗೊಳಿಸಲಾಯಿತು.

http://static.pib.gov.in/WriteReadData/userfiles/image/image003MVWZ.jpg

ಜನವರಿ 22, 2021 ರಂದು, ಟ್ರೈಫೆಡ್ ತಂಡವು ಮೈಸೂರು ಜಿಲ್ಲಾಧಿಕಾರಿ ಶ್ರೀಮತಿ ರೋಹಿಣಿ ಸಿಂಧೂರಿ ಅವರನ್ನು ಭೇಟಿ ಮಾಡಿತು. ಸಭೆಯಲ್ಲಿ, ಬುಡಕಟ್ಟು ಉದ್ಯಮ ಅಭಿವೃದ್ಧಿ ಕಾರ್ಯಕ್ರಮದ ಮಾದರಿಯ ಬಗ್ಗೆ ಟ್ರೈಫೆಡ್ ವ್ಯವಸ್ಥಾಪಕ ನಿರ್ದೇಶಕರು ವಿವರಿಸಿದರು. ಟ್ರೈಬ್ಸ್ ಇಂಡಿಯಾ ಶೋ ರೂಂ ಸ್ಥಾಪಿಸಲು ಮೈಸೂರಿನ ಸಯ್ಯಾಜಿ ರಸ್ತೆಯಲ್ಲಿರುವ ಚಾಮರಾಜ ತಾಂತ್ರಿಕ ಸಂಸ್ಥೆಯಲ್ಲಿ ಸ್ಥಳವನ್ನು ಹಂಚಿಕೆ ಕುರಿತು ಚರ್ಚಿಸಲಾಯಿತು, ಅಲ್ಲಿ ಮೈಸೂರಿನ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ವಸ್ತುಗಳನ್ನು ಪ್ರದರ್ಶಿಸಲಾಗುತ್ತದೆ. ಒಟ್ಟಾರೆ ರಾಜ್ಯ ಯೋಜನೆಯ ಆಧಾರದ ಮೇಲೆ ಮೈಸೂರು ಜಿಲ್ಲೆಯಲ್ಲಿ 5 ವಿಡಿವಿಕೆಗಳು, 2 ಎಸ್ಎಫ್ಆರ್ಟಿ ಕ್ಲಸ್ಟರ್ಗಳು, 2 ಮಿನಿ ಟ್ರೈಫುಡ್ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಸ್ವಾಮಿ ವಿವೇಕಾನಂದ ಯುವ ಆಂದೋಲನ (ಎಸ್ವಿವೈಎಂ) ಮೈಸೂರಿನಲ್ಲಿ ಬುಡಕಟ್ಟು ಸಮುದಾಯದ ಅಭಿವೃದ್ಧಿಗಾಗಿ ವ್ಯಾಪಕವಾಗಿ ಕಾರ್ಯನಿರ್ವಹಿಸುತ್ತಿರುವ ಎನ್ಜಿಒ ಸಂಸ್ಥೆಯಾಗಿದೆ. ವಿಶ್ವಪ್ರಸಿದ್ಧ ಮೈಸೂರು ದಸರಾ ಉತ್ಸವದ ಜೊತೆಯಲ್ಲಿ ಬುಡಕಟ್ಟು ಸಂಸ್ಕೃತಿ, ಕಲೆ ಮತ್ತು ಕರಕುಶಲ ಮತ್ತು ಪಾಕಪದ್ಧತಿಯ ಆದಿ ಮಹೋತ್ಸವವನ್ನು ಆಚರಿಸಲೂ ಸಹ ನಿರ್ಧರಿಸಲಾಯಿತು.

ಕರ್ನಾಟಕದ ಎರಡು ದಿನಗಳ ಭೇಟಿಯು ಬುಡಕಟ್ಟು ಜನರ ಆದಾಯವನ್ನು ಹೆಚ್ಚಿಸುವಲ್ಲಿ ಮತ್ತು ಅವರನ್ನು ಸಬಲೀಕರಣ ಮಾಡುವಲ್ಲಿ ಪರಿಣಾಮ ಬೀರುವಂತಹ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಕುರಿತು ಯಶಸ್ವಿಯಾಯಿತು. ದೇಶಾದ್ಯಂತ ಬುಡಕಟ್ಟು ಜನರ ಜೀವನ ಮತ್ತು ಜೀವನೋಪಾಯಗಳ ಸಂಪೂರ್ಣ ಪರಿವರ್ತನೆಗಾಗಿ ಟ್ರೈಫೆಡ್ ನಿರಂತರವಾಗಿ ಕೆಲಸ ಮಾಡುತ್ತದೆ.

***



(Release ID: 1693289) Visitor Counter : 290


Read this release in: English , Urdu , Hindi , Manipuri