ವಾರ್ತಾ ಮತ್ತು ಪ್ರಸಾರ ಸಚಿವಾಲಯ

“ವೈಫ್ ಆಪ್ ಎ ಸ್ಪೈ” ಕರುಣಾಮಯಿ ದಂಪತಿಗಳ ಬದುಕಿನ ಚಿತ್ರಣ: ನಿರ್ದೇಶಕ ಕಿಯೊಶಿ ಕುರೊಸವ

Posted On: 24 JAN 2021 6:34PM by PIB Bengaluru

ಅಲ್ಲೊಂದು ರೋಲರ್ ಕೋಸ್ಟರ್, ಅಲ್ಲಿ ಪತ್ನಿ ತನ್ನ ಗಂಡನ ಕೃತ್ಯದಿಂದಾಗಿ ಅಸೂಯೆಯಿಂದ ಕುದಿಯುತ್ತಿರುತ್ತಾಳೆ. ಕೊನೆಗೆ ಆಕೆ ಸತ್ಯ ಕಂಡುಕೊಂಡಾಗ ತನ್ನ ಸುರಕ್ಷತೆ ದೃಢಪಡಿಸಿಕೊಳ್ಳಲು ಯೋಚಿಸಲು ಸಾಧ್ಯವಾಗದ ಕೆಲಸ ಮಾಡಿರುತ್ತಾಳೆ.”

51 ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ [ಐಎಫ್ಎಫ್ಐ]ಕ್ಕೆ ತೆರೆ ಬೀಳುವ ಮುನ್ನ ಪ್ರದರ್ಶನಗೊಂಡ ಕಡೆಯ ಚಿತ್ರ ಇದು. ಜಪಾನ್ ವೈಫ್ ಆಪ್ ಸ್ಪೈ ಚಿತ್ರವನ್ನು ನಿರ್ದೇಶಕ ಶ್ರೀ ಕಿಯೊಶಿ ಕುರೊಸವ ನಿರ್ದೇಶಿಸಿದ್ದಾರೆ. ಕೆಲ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುವ ಗಂಡ ಮತ್ತು ಹೆಂಡತಿ ಕುರಿತ ಚಿತ್ರ ಇದಾಗಿದೆ.

ಚಿತ್ರ ನಿರ್ದೇಶಕ ಶ್ರೀ ಕಿಯೊಶಿ ಕುರೊಸವ 51 ನೇ ಐಎಫ್ಎಫ್ಐನ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಸಂದೇಶ ಹಂಚಿಕೊಂಡರು. “ಐಎಫ್ಎಫ್ಐ ಸಮಾರೋಪ ಸಮಾರಂಭದಲ್ಲಿ ಕೊನೆಯ ಚಿತ್ರವಾಗಿ ವೈಫ್ ಆಪ್ ಸ್ಪೈ ಚಿತ್ರವನ್ನು ಪ್ರದರ್ಶನಕ್ಕೆ ಆಯ್ಕೆ ಮಾಡಿಕೊಂಡಿದ್ದು ತಮಗೆ ದೊರೆತ ಅತಿದೊಡ್ಡ ಗೌರವ. ಗೋವಾಗೆ 6 ರಿಂದ 7 ವರ್ಷಗಳ ಹಿಂದೆ ಭೇಟಿ ನೀಡಿದ್ದೆ. ಇದು ನಿಜಕ್ಕೂ ಅದ್ಭುತ ನೆನಪು. ಅಲ್ಲಿನ ಸಾಗರ, ನಗರ ಮತ್ತು ಕರುಣಾಮಯಿ ಜನ, ಹೀಗೆ ಎಲ್ಲವೂ ಸುಂದರ. ಆಹಾರ ನಿಜಕ್ಕೂ ಸ್ವಾದಿಷ್ಟ. ಅಲ್ಲಿ ಕನಸುಗಳಂತೆ ದಿನಗಳನ್ನು ಕಳೆದಿದ್ದೆ. ಗೋವಾಗೆ ಮತ್ತೆ ಬರಬೇಕು ಮತ್ತು ನಿಮ್ಮೆಲ್ಲರನ್ನು ಭೇಟಿಯಾಗಬೇಕೆಂದು ಬಯಸುತ್ತೇನೆ. ಆದರೆ ಈಗಿನ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಜಪಾನ್ ನಿಂದ ಎಲ್ಲಾ ಚಟುವಟಿಕೆಗಳನ್ನು ಆನ್ ಲೈನ್ ಮೂಲಕವೇ ನಡೆಸಬೇಕಾಗಿದೆಎಂದರು.

ಆದರೆ ಚಲನಚಿತ್ರ ಸಾಗರವನ್ನು ಮೀರಿ ಎಲ್ಲರನ್ನು ತಲುಪಿದೆ ಮತ್ತು ಚಿತ್ರದ ಬಗ್ಗೆ ನಾನು ಮಾತನಾಡುವುದಕ್ಕಿಂತ ಚಿತ್ರವೇ ನಿರ್ಗಗಳವಾಗಿ ಹೇಳುತ್ತದೆ ಎಂದು ನಾನು ನಂಬುತ್ತೇನೆ. ನನ್ನ ಚಿತ್ರ 1940 ಜಪಾನ್ ಕಥೆ ಹೇಳುತ್ತದೆ. ಸಮಯದಲ್ಲಿ ಕರುಣೆಯಿಂದ ಇರುವ ದಂಪತಿಗಳನ್ನು ಇದು ಚಿತ್ರಿಸುತ್ತದೆ. ಅವರನ್ನು ಬೇರ್ಪಡಿಸುವ ಕಥಾಹಂದರವನ್ನು ಹೊಂದಿದೆ. ಚಿತ್ರವನ್ನು ಕೊನೆಯವರೆಗೂ ನೋಡಿ ಆನಂದಿಸಿ ಎಂದು ಮನವಿ ಮಾಡಿದರು.

ವೈಫ್ ಆಪ್ ಸ್ಪೈ ಎಂಬುದು ಒಂದು ನಾಟಕದ ವಸ್ತು. ಚಿತ್ರದಲ್ಲಿ ಸಟಕೊ ಪಾತ್ರದಲ್ಲಿ ಜಪಾನ್ ನಟ ಯು ಅವೊಯಿ ಮತ್ತು ಯುಸಕು ಪುಕುಹರ ಪಾತ್ರವನ್ನು ಇಸ್ಸೈ ತಕಹಶಿ ನಿರ್ವಹಿಸಿದ್ದಾರೆ. ಎರಡನೆಯ ಮಹಾಯುದ್ಧ ಪ್ರಾರಂಭವಾಗುವ ಹಿಂದಿನ ರಾತ್ರಿ, ಸ್ಥಳೀಯ ವ್ಯಾಪಾರಿ ಯುಸಾಕು ಫುಕುಹರಾ, ವಿಷಯಗಳನ್ನು ಅಸ್ಥಿರ ದಿಕ್ಕಿನಲ್ಲಿ ಸಾಗಿಸುತ್ತಿರುವುದನ್ನು ಗ್ರಹಿಸುತ್ತಾನೆ. ಅವನು ತನ್ನ ಹೆಂಡತಿಯನ್ನು ಬಿಟ್ಟು ಮಂಚೂರಿಯಾಕ್ಕೆ ಪ್ರಯಾಣಿಸುತ್ತಾನೆಅಲ್ಲಿ ಬರ್ಬರ ಕೃತ್ಯ ನಡೆಯುತ್ತದೆ ಮತ್ತು ಇದನ್ನು ಬೆಳಕಿಗೆ ತರಲು ದೃಢ ನಿಶ್ಚಯ ಮಾಡುತ್ತಾನೆ ಮತ್ತು ಕಾರ್ಯಪ್ರವೃತ್ತನಾಗುತ್ತಾನೆ. ಏತನ್ಮಧ್ಯೆ, ಸಾಟೋಕೊಳನ್ನು ಅವಳ ಬಾಲ್ಯದ ಗೆಳೆಯ ಮತ್ತು ಮಿಲಿಟರಿ ಪೊಲೀಸ್ ತೈಜಿ ತ್ಸುಮೋರಿ ಕರೆಸಿಕೊಳ್ಳುತ್ತಾನೆ. ಮಂಚೂರಿಯಾದಿಂದ ತನ್ನ ಪತಿ ಮರಳಿ ತಂದ ಮಹಿಳೆ ಮೃತಪಟ್ಟಿದ್ದಾಳೆ ಎಂದು ಅವನು ಅವಳಿಗೆ ಹೇಳುತ್ತಾನೆ. ಸಾಟೋಕೊ ಅಸೂಯೆಯಿಂದ ಹರಿದು ಯುಸಾಕುನನ್ನು ಎದುರಿಸುತ್ತಾನೆ. ಆದರೆ ಅವಳು ಯುಸಾಕುನ ನಿಜವಾದ ಉದ್ದೇಶಗಳನ್ನು ಕಂಡುಕೊಂಡಾಗ, ಅವನ ಸುರಕ್ಷತೆ ಮತ್ತು ಅವರ ಸಂತೋಷವನ್ನು ಖಚಿತಪಡಿಸಿಕೊಳ್ಳಲು ಅವಳು ಯೋಚಿಸಲಾಗದ ಕೆಲಸವನ್ನು ಮಾಡಿರುತ್ತಾಳೆ

ಇದು 115 ನಿಮಿಷಗಳ ದೀರ್ಘ ಕಾಲದ ಚಿತ್ರ. ಇದನ್ನು 77 ನೇ ವೆನ್ಸಿ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಪ್ರಮುಖ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಅಲ್ಲಿನ ಸಿ್ಲ್ವರ್ ಲಿಯೊನ್ ಪ್ರಶಸ್ತಿಗೆ ಭಾಜನವಾಗಿತ್ತು

ಕಿಯೊಶಿ ಕುರುಸವ ಜಪಾನ್ ಖ್ಯಾತ ಚಲನಚಿತ್ರ ನಿರ್ದೇಶಕ. ಚಿತ್ರಕಥೆಗಾರ. ವಿಮರ್ಶಕ ಮತ್ತು ಟೊಕಿಯೋ ವಿಶ‍್ವವಿದ್ಯಾಲಯದ ಕಲಾ ವಿಭಾಗದ ಪ್ರಾಧ್ಯಾಪಕ. ಇವರು ವಿವಿಧ ಪ್ರಾಕಾರಗಳಲ್ಲಿ ಕೆಲಸ ಮಾಡಿದ್ದಾರೆ. ಜಪಾನ್ ವಿವಿಧ ಭಯಾನಕ ಪ್ರಕಾರಗಳಿಗೂ ವಿಶೇಷ ಕೊಡುಗೆ ನೀಡಿದ್ದಾರೆ.

***(Release ID: 1692125) Visitor Counter : 217