ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಜಗತ್ತು ಒಂದೇ ಎಂದು ನೆನಪಿಸುತ್ತದೆ; ಮನಸ್ಸಿನಿಂದಲ್ಲ, ಹೃದಯದಿಂದ ಸಿನೆಮಾ ಹುಟ್ಟುತ್ತದೆ: ಗೋವಾ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶಿಯಾರಿ


ಚಲನಚಿತ್ರೋತ್ಸವ, ಮಾನವೀಯತೆ ನಡುವಿನ ಬಾಂಧವ್ಯ ಮತ್ತು ನಿಕಟತೆ ಒಗ್ಗೂಡಿಸುತ್ತದೆ: ಕೇಂದ್ರ ಸಚಿವ ಶ್ರೀ ಬಾಬುಲ್ ಸುಪ್ರಿಯೋ

ಚಲನಚಿತ್ರೋತ್ಸವ, ಕೋವಿಡ್-19 ವಿರುದ್ಧ ಮಾನವೀಯ ಸ್ಪೂರ್ತಿಯ ವಿಜಯ: ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅಮಿತ್‌ ಖರೆ

“ಬಾಂಗ್ಲಾದೇಶ ಮತ್ತು ಭಾರತ ಒಂದೇ, ಬೇರೆಯಲ್ಲ” ವರ್ಷದ ವ್ಯಕ್ತಿ ಪ್ರಶಸ್ತಿ ಪುರಸ್ಕೃತ ಶ್ರೀ ಬಿಸ್ವಜಿತ್ ಚಟರ್ಜಿ

ಮೊದಲ ಹೈಬ್ರಿಡ್ ಆವೃತ್ತಿಯ 51 ನೇ ಐಎಫ್ಎಫ್ಐ ಗೆ ವರ್ಣರಂಜಿತ ತೆರೆ

ಗೋವಾದ ತಲಗಾಂವ್ ಶ್ಯಾಂ ಪ್ರಸಾದ್ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ 51 ನೇ ಆವೃತ್ತಿಯ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 51 ನೇ ಐಎಫ್ಎಫ್ಐ ಗೆ ಜನವರಿ, 24, 2021 ರಂದು ವರ್ಣರಂಜಿತ ತೆರೆ ಬಿತ್ತು.

ಬಾಲಿವುಡ್ ಖ್ಯಾತ ಕಲಾವಿದರಾದ ಶ್ರೀಮತಿ ಜೀನತ್ ಅಮಾನ್ ಮತ್ತು ಶ್ರೀ ರವಿ ಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರುಖ್ಯಾತ ನಟ, ನಿರ್ದೇಶಕ ಮತ್ತು ನಿರ್ಮಾಪಕ ಶ್ರೀ ಬಿಸ್ವಜಿತ್ ಚಟರ್ಜಿ ಅವರಿಗೆ ಪ್ರತಿಷ್ಠಿತ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗೋವಾ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕೋಶಿಯಾರಿ, ಗೋವಾ ಮುಖ್ಯಮಂತ್ರಿ ಡಾಕ್ಟರ್ ಪ್ರಮೋದ್ ಸಾವಂತ್, ಕೇಂದ್ರ ಪರಿಸರ, ಅರಣ‍್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಬಾಬುಲ್ ಸುಪ್ರಿಯೋ ಸೇರಿ ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಂಡಿದ್ದರು

ಸಂಸತ್ ಸದಸ್ಯ ಶ್ರೀ ರವಿ ಕೃಷ್ಣನ್, ಅಂತಾರಾಷ್ಟ್ರೀಯ ತೀರ್ಪುಗಾರರ ಸಮಿತಿಯ ಸದಸ್ಯ, ನಿರ್ದೇಶಕ ಶ್ರೀ ಪ್ರಿಯದರ್ಶನ್ ನಾಯರ್, ಐಎಫ್ಎಫ್ಐ ಪರಿಶೀಲನಾ ಸಮಿತಿ ಸದಸ್ಯ ಶ‍್ರೀ ಶಾಜಿ ಎನ್. ಕುರುನ್, ಶ‍್ರೀ ರಾಹುಲ್ ರವಾಲ್, ಶ‍್ರೀಮತಿ ಮಂಜು ಬೋರಾ ಮತ್ತು ಶ‍್ರೀ ರವಿ ಕೊಟ್ಟಾರಕ್ಕರ ಮತ್ತು ದೇಶ, ವಿದೇಶಗಳ ಗಣ್ಯರು ಕೆಂಫು ರತ್ನಗಂಬಳಿ ಮೇಲೆ ನಡೆದಾಡಿದರಲ್ಲದೇ ಸಮಾರೋಪ ಸಮಾರಂಭಕ್ಕೂ ಸಾಕ್ಷಿಯಾದರು.

ಗೋವಾ ರಾಜ್ಯಪಾಲ ಶ್ರೀ ಭಗತ್ ಸಿಂಗ್ ಕೋಶಿಯಾರಿ ಮಾತನಾಡಿ, ವಿಶೇಷ ಸಂದರ್ಭದಲ್ಲಿ ಚಲನಚಿತ್ರೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. “ ಸಿನೆಮಾ ನಮ್ಮ ದೇಶ ಮಾತ್ರವಲ್ಲ ನಮ್ಮ ನೆರೆ ಹೊರೆ ರಾಷ್ಟ್ರಗಳನ್ನು ಸಹ ಒಟ್ಟುಗೂಡಿಸುತ್ತವೆ. ಭಾರತೀಯ ಸಿನೆಮಾ ಮತ್ತು ಚಿತ್ರ ನಿರ್ಮಾಪಕರಿಗೆ ನನ್ನ ಅಭಿನಂದನೆಗಳು. ಕಲಿಕೆಗೆ ಚಲನಚಿತ್ರೋತ್ಸವ ನಮಗೊಂದು ಅವಕಾಶವಾಗಿದೆ. ಭಿನ್ನಾಭಿಪ್ರಾಯಗಳ ನಡುವೆಯೂ ಜಗತ್ತು ಒಂದೇ ಎಂದು ನಮಗೆ ಇದು ನೆನಪಿಸುತ್ತದೆ. “ಸಿನೆಮಾ ನಮ್ಮ ಹೃದಯವನ್ನು ತಟ್ಟುತ್ತದೆ, ಮನಸ್ಸನ್ನು ಅಲ್ಲ. ಸಿನೆಮಾ ಮನಸ್ಸಿನಿಂದ ಅಲ್ಲ, ಹೃದಯದಿಂದ ಹೊರ ಹೊಮ್ಮುತ್ತದೆ.ಎಂದರು.

ಕೇಂದ್ರ ಸಚಿವ ಶ‍್ರೀ ಬಾಬುಲ್ ಸುಪ್ರಿಯೋ ಮಾತನಾಡಿ, ಐಎಫ್ಎಫ್ಐ ಆವೃತ್ತಿ ಎಲ್ಲಾ ಆವೃತ್ತಿಗಳಿಗಿಂತ ಶ್ರೇಷ್ಠವಾಗಿದೆ. ಉತ್ಕೃಷ್ಟತೆಗೆ ಸೂಕ್ತ ವೇದಿಕೆಯಾಗಿ ಹೊರಹೊಮ್ಮಿದೆ. “ ಐಎಫ್ಎಫ್ಐ 51 ಒಂದು ರೀತಿಯ ಸಾಧನೆಯಾಗಿದೆ. ಕೋವಿಡ್ ಸಾಂಕ್ರಾಮಿಕದ ನಡುವೆ ಹೈಬ್ರಿಡ್ ಮಾದರಿಯಲ್ಲಿ ಚಿತ್ರೋತ್ಸವನ್ನು ಯಶಸ್ವಿಯಾಗಿ ನಡೆಸಿದ್ದೇವೆ. 51 ನೇ ಐಎಫ್ಎಫ್ಐ ಎಲ್ಲವನ್ನೂ ವಶಪಡಿಸಿಕೊಂಡಿದೆ ಮತ್ತು ಮಾನವೀಯತೆ ನಡುವೆ ಬಾಂಧವ್ಯ ಮತ್ತು ನಿಕಟತೆ ತಂದಿದೆ. ದೊಡ್ಡ ಪರದೆ ಮನೋರಂಜನೆ ನೀಡುತ್ತದೆ ಮತ್ತು ನಮ್ಮನ್ನು ಅಳುವಂತೆ ಮಾಡುತ್ತದೆ. ಶ‍್ರೇಷ್ಠ ನಿರ್ದೇಶಕರು ಜ್ಞಾನೋದಯ ಮತ್ತು ಮನೋರಂಜನೆಗಾಗಿ ಚಿತ್ರಮಾಡಿದಾಗ ಜೀವನವನ್ನು ನಾವು ವಿಭಿನ್ನ ರೀತಿಯಲ್ಲಿ  ನೋಡುವಂತೆ ಮಾಡುತ್ತದೆ. ಚಲನಚಿತ್ರ ನಮ್ಮಲ್ಲಿರುವ ಎಲ್ಲಾ ಭಾವನೆಗಳನ್ನು ವರ್ದಿಸುತ್ತದೆ. ವಿಶ್ವದಲ್ಲೇ ಅತಿ ಹೆಚ್ಚು ಚಲನಚಿತ್ರಗಳನ್ನು ನಿರ್ಮಿಸುವ ಭಾರತ ಸಿನೆಮಾ ಸಂಭ್ರಮವನ್ನು ಆಚರಿಸಲು ವಿಶ್ವದ ಇತರೆ ಭಾಗಗಳೊಂದಿಗೆ ಸೇರಿಕೊಂಡಿದೆ ಎಂದು ಹೇಳಿದರು.

ವರ್ಷದ ಸಿನೆಮೋತ್ಸವ ವಿಭಿನ್ನ ಮಾದರಿಯಲ್ಲಿ ನಡೆಸಲಾಗಿದೆಚಿತ್ರೋತ್ಸವವನ್ನು ಹೈಬ್ರಿಡ್ ಮಾದರಿಯಲ್ಲಿ ಆಯೋಜಿಸಿರುವುದು ಅಭಿನಂದನೀಯ. “ ಕೋವಿಡ್ ಸಾಂಕ್ರಾಮಿಕದ ನಡುವೆ 51 ನೇ ಆವೃತ್ತಿಯಲ್ಲಿ 60 ದೇಶಗಳ ಸಿನೆಮಾಗಳನ್ನು ಪ್ರದರ್ಶಿಸಲಾಗಿದೆ. ಉನ್ನತ ಉತ್ಕೃಷ್ಟತೆಯಿಂದಾಗಿ ಚಿತ್ರೋತ್ಸವ ಜಾಗತಿಕ ಮಾರ್ಗ ನಕ್ಷೆಯನ್ನು ನೀಡಿದೆ. ನಾವೆಲ್ಲರೂ ನವ ಭಾರತದ ಬಗ್ಗೆ ಉತ್ಸುಕರಾಗಿದ್ದೇವೆ ಮತ್ತು ಪ್ರದರ್ಶನ ಹೀಗೆಯೇ ಮುಂದುವರೆಯಲಿ ಎಂದು ಆಶಿಸುತ್ತೇವೆ ಎಂದು ಕೇಂದ್ರ ಸಚಿವ ಶ‍್ರೀ ಬಾಬುಲ್ ಸುಪ್ರಿಯೋ ಹೇಳಿದರು.

ಆವೃತ್ತಿಯ ಕೆಲವು ದಾಖಲಾರ್ಹ ವಿಶೇಷತೆಗಳನ್ನು ಪಟ್ಟಿಮಾಡಿದ ಸಚಿವರು, ಬಾಂಗ್ಲಾದೇಶವನ್ನು ಚಿತ್ರೋತ್ಸವದ ಕೇಂದ್ರ ಬಿಂದು ಮಾಡಲಾಗಿದೆ. ಭಾರತೀಯ ಚಿತ್ರರಂಗದ ದಂತ ಕಥೆ ಸತ್ಯಜಿತ್ ರೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಕಳೆದ ವರ್ಷ ನಮ್ಮನ್ನು ಅಗಲಿದೆ 18 ಗಣ್ಯರಿಗೆ ಗೌರವದಿಂದ ನಮಿಸಿದ್ದೇವೆ. ಕಲಾವಿದರು ಸಿನೆಮಾಗಳಲ್ಲಿ ಜೀವಿಸುತ್ತಾರೆ. ಅವರು ಎಂದಿಗೂ ಸಾಯುವುದಿಲ್ಲ ಎನ್ನುವ ಮಾತನ್ನು ಉಲ್ಲೇಖಿಸಿದರು. ಭಾರತೀಯ ಚಿತ್ರರಂಗ ಮೃದು ಶಕ್ತಿಯೊಂದಿಗೆ ಮಾಧ್ಯಮವಾಗಿ ಹೊರ ಹೊಮ್ಮಿದೆ ಎಂದು ಸಚಿವರು ವಿಶ್ಲೇಷಿಸಿದರು

ಗೋವಾ ಮುಖ್ಯಮಂತ್ರಿ ಡಾಕ್ಟರ್ ಪ್ರಮೋದ್ ಸಾವಂತ್ ಮಾತನಾಡಿ, ಐಎಫ‍್ಎಫ್ಐ ಒಂದು ಅಚ್ಚರಿಯ ಕ್ರಿಯಾಶೀಲತೆಯನ್ನು ಹೊಂದಿದೆ. ಚಿತ್ರೋತ್ಸವವನ್ನು ಯಶಸ್ವಿಗೊಳಿಸಿದ ಚಿತ್ರರಂಗದ ಗಣ್ಯರು, ಪ್ರತಿನಿಧಿಗಳು ಮತ್ತು ಸಂಘಟಕರನ್ನು ಅವರು ಅಭಿನಂದಿಸಿದರು.

ಗೋವಾ ರಾಜ್ಯವನ್ನು ಕೇವಲ ಸೂರ್ಯ, ಮರಳು ಮತ್ತು ಸಮುದ್ರದಿಂದ ಮಾತ್ರ ಗುರುತಿಸುವುದಿಲ್ಲ. ರಾಜ್ಯದ ಅಭಿವೃದ್ಧಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರವಾಸೋದ್ಯಮದ ಉತ್ತೇಜನ, ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಲಾಗಿದೆನಾಲ್ಕನೇ ಅಂತಾರಾಷ್ಟ್ರೀಯ ಪಕ್ಷಿ ಉತ್ಸವವನ್ನು ಗೋವಾದಲ್ಲಿ ಆಯೋಜಿಸಲಾಗಿತ್ತು. ಇದು ರಾಜ್ಯದ ನೈಸರ್ಗಿಕ ಸೌಂದರ್ಯಕ್ಕೆ ಸಾಕ್ಷಿಯಾಗಿತ್ತು. ಗೋವಾದಲ್ಲಿ ದೇಶೀಯ ಮತ್ತು ಅಂತಾರಾಷ್ಟ್ರೀಯ ಚಿತ್ರನಿರ್ಮಾಪಕರು ಆಗಮಿಸಿ ಚಿತ್ರೀಕರಣದಲ್ಲಿ ತೊಡಗಬೇಕು. ನಾವು ಮುಂದಿನ ಬಾರಿ 52 ನೇ ಐಎಫ್ಎಫ್ಐ ಚಿತ್ರೋತ್ಸವವನ್ನು ಇನ್ನಷ್ಟು ಉತ್ತಮವಾಗಿ ಆಯೋಜಿಸಲು ಉದ್ದೇಶಿಸಿದ್ದೇವೆ ಎಂದರು. ಕೋವಿಡ್-19 ಸೋಂಕಿಗೆ ಭಾರತದಲ್ಲಿ ಎರಡು ಲಸಿಕೆ ಸಿದ್ಧವಾಗಿದೆ. ಕೋವಿಡ್-19 ಸೋಲಲಿದೆ. ನಾವು ಗೆಲ್ಲಲಿದ್ದೇವೆ ಎಂದು ಹೇಳಿದರು

ಭಾರತೀಯ ಸಿನೆಮಾ ವಲಯದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಪಾತ್ರರಾದ ಹಿರಿಯ ನಟ ಶ್ರೀ ಬಿಸ್ವಜಿತ್ ಚಟರ್ಜಿ ಮಾತನಾಡಿ, “ ತಮ್ಮನ್ನು ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದ ಕೇಂದ್ರ ಸರ್ಕಾರ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವಾಲಯಕ್ಕೆ ಹೃದಯ ತುಂಬಿದ ಧನ್ಯವಾದಗಳನ್ನು ಸಲ್ಲಿಸಿದರು. ವರ್ಷ ಬಾಂಗ್ಲಾದೇಶ ಚಿತ್ರೋತ್ಸವದ ಕೇಂದ್ರ ಬಿಂದುವಾಗಿದ್ದು, ದೇಶದೊಂದಿಗೆ ತಮಗೆ ಆಳವಾದ ಸಂಪರ್ಕವಿದೆ. ಬಾಂಗ್ಲಾದೇಶದ ಮೇಲೆ ದಾಳಿಯಾದಾಗ ಖ್ಯಾತ ನಿರ್ದೇಶಕ ಶ‍್ರೀ ರಿತ್ವಿಕ್ ಗಟಕ್ ಅವರೊಂದಿಗೆ ನಾನು ಮುಂಬೈನಲ್ಲಿದ್ದೆ ಮತ್ತು ಬಾಂಗ್ಲಾದೇಶದ ಶೇಖ್ ಮುಜಿಬುರ್ ರೆಹಮಾನ್ ಅವರ ಭಾಷಣಗಳಿಂದ ಆಗ ನಾವು ಪ್ರೇರೇಪಣೆಗೊಂಡಿದ್ದೇವು. ಶ್ರೀ ರಿತ್ವಿಕ್ ದಾ ಅವರ ಸಲಹೆ ಮೇರೆಗೆ ನಾವುದೇರ್ ಪ್ಲೋವ್ಸ್ ಪದ್ಮ, ದಿ ಮದರ್ ರಿವರ್ಎಂಬ ಸಾಕ್ಷ್ಯ ಚಿತ್ರ ನಿರ್ಮಿಸಿದ್ದೇವು. ನಂತರ ನಾನು ಢಾಕಾಗೆ ತೆರಳಿ ಸಾಕ್ಷ್ಯಾಚಿತ್ರವನ್ನು ಬಂಗಬಂಧು ಅವರಿಗೆ ಸಲ್ಲಿಸಿದೆ. ಆಗ ಅವರ ಕೊಠಡಿಯಲ್ಲಿ ಎರಡು ಕಲಾ ರಚನೆಗಳನ್ನು ನೋಡಿದೆ. ಅದರಲ್ಲಿ ಒಂದು ರವೀಂದ್ರ ನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್. ಬಾಂಗ್ಲಾದೇಶದ ಪ್ರೀತಿಯನ್ನು ನಾನು ಎಂದಿಗೂ ಮರೆಯುವುದಿಲ್ಲ. “ ಬಾಂಗ್ಲಾದೇಶ ಮತ್ತು ಭಾರತ ಒಂದೇ, ನಾವು ಸಹೋದರರು. ನಾವು ಪ್ರತ್ಯೇಕವಲ್ಲಎಂದರು

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ವಿಡಿಯೋ ಸಂದೇಶದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದು, ಜಗತ್ತು ಹಿಂದೆಂದೂ ಇಲ್ಲದ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಲು ಐಎಫ್ಎಫ್ಐ ಒಂದು ಅತ್ಯುತ್ತಮ ಉದಾಹರಣೆಯಾಗಿದೆಅಚ್ಚರಿಯ ರೀತಿಯಲ್ಲಿ ಚಿತ್ರೋತ್ಸವವನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗಿದೆ. ಇದನ್ನು ಸಾಧ್ಯವಾಗಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ವಿಶೇಷವಾಗಿ ಸಂಕಷ್ಟ ಸಮಯದಲ್ಲಿ ಕೇಂದ್ರ ಸರ್ಕಾರ ಸಿನೆಮಾವನ್ನು ಜೀವಂತವಾಗಿಸಿದೆ ಎಂದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಮಿತ್ ಖರೆ ಮಾತನಾಡಿ, ಬಾರಿಯ 51ನೇ ಐಎಫ್ಎಫ್ಐ ವಿಶೇಷವಾದದ್ದು. ಭಾರತದ ಪರಿಸ್ಥಿತಿಯಲ್ಲಿ ಹೈಬ್ರಿಡ್ ಮಾದರಿಯಲ್ಲಿ ಚಿತ್ರೋತ್ಸವ ಆಯೋಜಿಸಿರುವುದು ಮಹತ್ವದ್ದಾಗಿದೆ. “ಇಡೀ ಏಷ್ಯಾದಲ್ಲಿ ಇದೇ ಮೊದಲ ಬಾರಿಗೆ ಇಂತಹ ಉತ್ಸವ ಆಯೋಜನೆ ಮಾಡಲಾಗಿದೆ. ಉತ್ಸವ ದೇಶದ ಉನ್ನತ ಕಲೆ ಮತ್ತು ಉತ್ತಮವಾಗಿ ಅಭಿವೃದ್ದಿಯಾಗಿರುವ ತಂತ್ರಜ್ಞಾನವನ್ನು ಪ್ರತಿಬಿಂಬಿಸುತ್ತದೆ. ಇದು ಕೋವಿಡ್-19 ವಿರುದ್ಧ ಮಾನವೀಯ ಸ್ಪೂರ್ತಿಯ ವಿಜಯವಾಗಿದೆ. ಹೊಸ ಹೈಬ್ರಿಡ್ ಮಾದರಿಯಲ್ಲಿ ಚಿತ್ರೋತ್ಸವವನ್ನು ನಡೆಸಲು ಗೋವಾದ ಪ್ರತಿಯೊಬ್ಬ ವ್ಯಕ್ತಿಯೂ ಬೆಂಬಲಿಸಿದ್ದು, ಎಲ್ಲರೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ ಎಂದರು.

51 ನೇ ಐಎಫ‍್ಎಫ್ಐನಲ್ಲಿ ಪ್ರಶಸ್ತಿಗಳನ್ನು ಆಯ್ಕೆ ಮಾಡಲು ಡಿಜಿಟಲ್ ತಂತ್ರಜ್ಞಾನ ಬಳಕೆ ಮಾಡಿಕೊಂಡಿದ್ದಕ್ಕಾಗಿ ಶ್ರೀ ಪ್ರಿಯದರ್ಶನ್ ಅವರಿಗೆ ಧನ್ಯವಾದ ಸಲ್ಲಿಸಿದರು. 51 ನೇ ಐಎಫ್ಎಫ್ಐನ ಚಿತ್ರೋತ್ಸವ ಬಾಂಗ್ಲಾದೇಶದ ವಿಮೋಚನೆ ಮತ್ತು ಅಲ್ಲಿನ 50 ನೇ ಸ್ವಾತಂತ್ರ್ಯೋತ್ಸವದ ವರ್ಷವಾಗಿದೆಇದೇ ವಿಷಯವನ್ನು ಚಿತ್ರೋತ್ಸವದಲ್ಲಿ ಕೇಂದ್ರೀಕರಿಸಲಾಗಿತ್ತು. 60 ದೇಶಗಳ ಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು. ಕೋವಿಡ್-19 ಸಂಕಷ್ಟ ಸಂದರ್ಭದಲ್ಲೂ ಚಿತ್ರೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ ಸಂಘಟಕರುಜಗತ್ತಿನಾದ್ಯಂತ ಬೆಂಬಲಿಸಿದವರನ್ನು ಶ್ರೀ ಅಮಿತ್ ಖರೆ ಅಭಿನಂದಿಸಿದರು.

ಗೋವಾದ ಎಂಟರ್ ಟೈನ್ಮೆಂಟ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಅಮಿತ್ ಸಟಿಜ ಮಾತನಾಡಿ, 51 ನೇ ಐಎಫ್ಎಫ್ಐ ಯಾವಾಗಲೂ ಉದಾಹರಣೆಯಾಗಿ ನೆನಪಿನಲ್ಲಿ ಉಳಿಯಲಿದೆಸಾಮರ್ಥ್ಯ ಮತ್ತು ಸರಿಯಾದ ವರ್ತನೆಯಿದ್ದರೆ ಯಶಸ್ಸು ಕಾಣಬಹುದು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ. ಹೈಬ್ರಿಡ್ ಮಾದರಿಯಲ್ಲಿ ಚಿತ್ರೋತ್ಸವ ಯಶಸ್ವಿಯಾಗಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿತ್ರೋತ್ಸವಕ್ಕೆ ಆಗಮಿಸಿದ್ದ ಪ್ರತಿನಿಧಿಗಳ ಸುರಕ್ಷತೆಗೂ ಸಹ ಒತ್ತು ನೀಡಲಾಗಿತ್ತು. 3,200 ಕ್ಕೂ ಹೆಚ್ಚು ಪ್ರತಿನಿಧಿಗಳ ಗುರುತಿನ ಚೀಟಿಗಳನ್ನು ಭೌತಿಕ ಮಾದರಿಯಲ್ಲಿ ವಿತರಿಸಲಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ಮಂದಿ ವರ್ಚುವಲ್ ಮಾದರಿಯಲ್ಲಿ ಪಾಲ್ಗೊಂಡಿದ್ದರು. 9 ದಿನಗಳಲ್ಲಿ 190 ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಲಾಗಿತ್ತುಕೋವಿಡ್-19 ಸೋಂಕಿನ ನಡುವೆಯೂ 11 ದೇಶಗಳ 39 ಮಂದಿ ಅಂತಾರಾಷ್ಟ್ರೀಯ ಅತಿಥಿಗಳು ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು ಎಂದು ಮಾಹಿತಿ ನೀಡಿದರು

ಸಮಾರೋಪ ಸಮಾರಂಭವನ್ನು ಚಿತ್ರನಟ ಶ್ರೀ ಸಿಮೊನೆ ಸಿಂಗ್ ನಿರೂಪಿಸಿದರು. 2021 ಚಲನಚಿತ್ರೋತ್ಸವದಲ್ಲಿ 60 ದೇಶಗಳ 126 ಕ್ಕೂ ಹೆಚ್ಚು ಚಿತ್ರಗಳನ್ನು ಪ್ರದರ್ಶಿಸಲಾಯಿತು. 50 ಭಾರತೀಯ, 22 ಏಷ್ಯಾ, 7 ವಿಶ್ವಮಟ್ಟದ ಮತ್ತು 6 ಅಂತಾರಾಷ್ಟ್ರೀಯ ಚಿತ್ರಗಳು ಪ್ರದರ್ಶನಗೊಂಡವು.

ವರ್ಷದ ಚಿತ್ರೋತ್ಸವದಲ್ಲಿ ಬಾಂಗ್ಲಾದೇಶವನ್ನು ಕೇಂದ್ರೀಕರಿಸಲಾಗಿತ್ತು. ಬಾಂಗ್ಲಾದೇಶದ ಚಿತ್ರಗಳಾದ ರುಪ್ಸ ನೊಡಿರ್ ಬಂಕೆ ಮತ್ತು ಜಿಬಂಧುಲಿ ಚಿತ್ರಗಳನ್ನು ತನ್ವಿ ಮಕಮ್ಮೆಲ್ ನಿರ್ದೇಶಿಸಿದ್ದಾರೆ. ಮೆಗ್ಹ್ಮಲ್ಲರ್ ಚಿತ್ರವನ್ನು ಜಹಿದುರ್ ರೆಹಮಾನ್ ಅಂಜನ್, ಅಂಡರ್ ಕನ್ಸ್ ಸ್ಟಕ್ಷನ್ ಚಿತ್ರವನ್ನು ರುಬಿಯಾತ್ ಹೊಸೈನ್ ಮತ್ತು ಸಿನ್ಸಿಯರ್ಲಿ ಯುವರ್ಸ್, ಢಾಕಾ ಚಿತ್ರಗಳನ್ನು ನುಹಶ್ ಹುಮನ್ಯುನ್, ಸಯ್ಯದ್ ಅಹಮದ್ ಶವ್ಕಿ ಮತ್ತು ಇತರೆ 9 ನಿರ್ದೇಶಕರ ಚಿತ್ರಗಳನ್ನು ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಯಿತು.

ಇತ್ತೀಚಿನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಇದು ಮೊದಲ ಹೈಬ್ರಿಡ್ ಆವೃತ್ತಿಯಾಗಿದೆ. ಇದರ ಜತೆಗೆ ವಿಶೇಷ ವಿಭಾಗಗಳನ್ನು ಸಹ ತೆರೆಯಲಾಗಿತ್ತು. ಇಂಟರ್ ನ್ಯಾಷನಲ್ ರೆಟ್ರೋಸ್ಪೆಕ್ಟ್ರೀವ್, ಫೆಸ್ಟಿವಲ್ ಕಲೈಡೊಸ್ಕೊಪೆ, ವರ್ಲ್ಡ್ ಪನೊರಮ ಮತ್ತು ವಿಶೇಷ ಚಿತ್ರಗಳ ವಿಭಾಗಗಳನ್ನು ಇದು ಒಳಗೊಂಡಿತ್ತು

ಮಾಸ್ಟರ್ ಕ್ಲಾಸ್ ಅಂಡ್ ಇನ್ ಕಾನ್ವರ್ಸೇಷನ್ ಗೋಷ್ಠಿಗಳು, ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಜೂರಿ ಅಧ್ಯಕ್ಷ ಪಬ್ಲೊ ಸೀಸರ್ [ಅರ್ಜೆಂಟೈನಾ], ಶ್ರೀ ಶೇಖರ್ ಕಪೂರ್. ಶ್ರೀ ಸುಭಾಷ್ ಘಾಯ್, ಶ್ರೀ ಪ್ರಿಯದರ್ಶಿನಿ, ಶ್ರೀ ರಾಹುಲ್ ರವಲಿ, ಶ್ರೀ ಸಿದ್ಧಾರ್ಥ್ ರಾಯ್ ಕಪೂರ್ ಮತ್ತು ಪ್ರಸನ್ನ ವಿಥನಗೆ [ಶ್ರೀಲಂಕಾ] ಅವರು ವಿವಿಧ ಗೋ಼ಷ್ಠಿಗಳಲ್ಲಿ ಚಿತ್ರೋದ್ಯಮ ಕುರಿತು ತಮ್ಮ ಮೌಲ್ಯಯುತ ಅನುಭವಗಳನ್ನು ಹಂಚಿಕೊಂಡರು.

ಸಮಾರೋಪ ಸಮಾರಂಭದಲ್ಲಿ ಗೋಲ್ಡನ್ ಪೀಕಾಕ್ ಪ್ರಶಸ್ತಿಯನ್ನು ಘೋಷಿಸಲಾಯಿತು.

***


(Release ID: 1692123) Visitor Counter : 235