ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲಿ ಈಶಾನ್ಯ ಮಂಡಳಿಯ 69ನೇ ಸಭೆ
ಶ್ರೀ ನರೇಂದ್ರ ಮೋದಿ ಅವರು ಪ್ರಧಾನಿಯಾದ ಕೂಡಲೇ ಈಶಾನ್ಯ ರಾಜ್ಯಗಳು ಅಭಿವೃದ್ಧಿಯಾಗಬೇಕಾದರೆ, ಸರ್ಕಾರ ಎಲ್ಲ ಬಗೆಯ ಅಭಿವೃದ್ಧಿ ಯೋಜನೆಗಳಲ್ಲಿ ಈಶಾನ್ಯ ಭಾಗಕ್ಕೆ ಆದ್ಯತೆ ನೀಡಬೇಕೆಂಬ ಹೇಳಿಕೆ
ಎನ್ಇಸಿ ಕೇವಲ ಹಲವು ಅಭಿವೃದ್ಧಿ ಯೋಜನೆಗಳನ್ನು ಆರಂಭಿಸುವುದಷ್ಟೇ ಅಲ್ಲದೆ, ಈಶಾನ್ಯ ಭಾಗದ ಜನರ ಜೀವನಮಟ್ಟ ವೃದ್ಧಿಗೆ ಕಾರ್ಯೋನ್ಮುಖ, ಎನ್ಇಸಿಯ ಪ್ರಮುಖ ಪಾತ್ರ ಪದರ್ಶನ
ಒಟ್ಟಾರೆ ಭಾರತ ಅಭಿವೃದ್ಧಿಯಾಗಿದೆ ಎಂದು ಪರಿಗಣಿಸಲ್ಪಡುವುದು ಈಶಾನ್ಯ ಭಾಗದ ಅಭಿವೃದ್ಧಿ ನಂತರವೇ; ಈಶಾನ್ಯ ಭಾಗದ ಅಭಿವೃದ್ಧಿ ಕಾರ್ಯಗಳು ಎಲ್ಲ ಧರ್ಮ ಮತ್ತು ಭಾಷೆಯ ಎಲ್ಲ ಜನರಿಗೆ ತಲುಪುವುದು ಅತ್ಯಗತ್ಯ
ಇಡೀ ಭಾರತದಲ್ಲಿ ಈಶಾನ್ಯ ಭಾಗ ಯಥೇಚ್ಛ ನೈಸರ್ಗಿಕ ಸಂಪತ್ತಿನಿಂದ ಕೂಡಿದೆ; ನಾನಾ ಸಂಸ್ಕೃತಿಗಳ ಸಮ್ಮಿಲನದಿಂದಾಗಿ ಅದ್ಭುತ ಸೌಹಾರ್ದತೆ ಸೃಷ್ಟಿ; ಹಾಗಾಗಿ ಈ ಪ್ರಾಂತ್ಯ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಬೆಳವಣಿಗೆ ಮತ್ತು ಈಶಾನ್ಯ ಭಾಗದ ಅಭಿವೃದ್ಧಿಗೆ ನೆರವು
ಈಶಾನ್ಯ ಭಾಗ ಭಾರತದ ಹೃದಯವನ್ನು ಪ್ರತಿನಿಧಿಸುತ್ತಿದ್ದು, ನಾವು ಅದನ್ನು ಜೋಪಾನ ಮಾಡಬೇಕಿದೆ; ಅಭಿವೃದ್ಧಿ ಕಾರ್ಯ ಕೈಗೊಳ್ಳುವಾಗ ಪರಂಪರೆ ಸಂರಕ್ಷಣೆ ಅಗತ್ಯ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ನಾವು ಈಶಾನ್ಯ ಭಾಗದ ಅಂತಾರಾಜ್ಯ ಗಡಿ ಸಮಸ್ಯೆ ನಿವಾರಣೆ ಮತ್ತು ಅದೇ ಶ್ರೇಷ್ಠ ಸಾಧನೆ
ಆದರೂ ಹಲವು ಪ್ರದೇಶಗಳು ಅಭಿವೃದ್ಧಿಯಾಗಿಲ್ಲ, ಹಾಗಾಗಿ ಸಚಿವ ಸಂಪು
Posted On:
23 JAN 2021 7:53PM by PIB Bengaluru
ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮೇಘಾಲಯದ ರಾಜಧಾನಿ ಶಿಲ್ಲಾಂಗ್ ನಲ್ಲಿಂದು ಈಶಾನ್ಯ ಮಂಡಳಿ(ಎನ್ಇಸಿ) 69ನೇ ಸಭೆ ನಡೆಯಿತು. ಅಮಿತ್ ಶಾ ಅವರು, ತಮ್ಮ ಉದ್ಘಾಟನಾ ಭಾಷಣದಲ್ಲಿ 2014ರಲ್ಲಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯವರು ಅಧಿಕಾರ ಸ್ವೀಕರಿಸಿದ ಬಳಿಕ ಈಶಾನ್ಯ ಭಾಗ ಅಭಿವೃದ್ಧಿಯಾಗಬೇಕಾದರೆ ಸರ್ಕಾರ ಎಲ್ಲ ವಿಧದ ಅಭಿವೃದ್ಧಿ ಯೋಜನೆಗಳಲ್ಲಿ ಈಶಾನ್ಯ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದ್ದರು. ಪ್ರಧಾನಮಂತ್ರಿ ಅವರು ಪ್ರತಿ 15 ದಿನಗಳಿಗೊಮ್ಮೆ ಕೇಂದ್ರ ಸಚಿವರುಗಳು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿಬೇಕು ಎಂದು ನಿರ್ದೇಶಿಸಿದ್ದರು ಹಾಗೂ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರೂ ಸಹ ಸ್ವತಃ ಈಶಾನ್ಯ ಭಾಗಕ್ಕೆ 40ಕ್ಕೂ ಅಧಿಕ ಬಾರಿ ಭೇಟಿ ನೀಡಿದ್ದಾರೆ. ಕೇಂದ್ರ ಸರ್ಕಾರದ ಸಚಿವರು 300ಕ್ಕೂ ಅಧಿಕ ಭಾರಿ ಭೇಟಿಯನ್ನು ಕೈಗೊಂಡಿದ್ದಾರೆ. ಇದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಈಶಾನ್ಯ ಭಾಗಕ್ಕೆ ಎಷ್ಟು ಆದ್ಯತೆಯನ್ನು ನೀಡುತ್ತಿದೆ ಎಂಬುದನ್ನು ತೋರಿಸುತ್ತದೆ.
ಕೇಂದ್ರ ಗೃಹ ಸಚಿವರು ಈ ದಿನ ಮತ್ತೊಂದು ದೃಷ್ಟಿಯಿಂದ ಅತ್ಯಂತ ಮಹತ್ವವಾದ ದಿನ. ಇಂದು ಸುಭಾಷ್ ಬಾಬು ಅವರ 125ನೇ ಜನ್ಮದಿನ. ಶ್ರೀ ಶಾ ಅವರು, ಸುಭಾಷ್ ಚಂದ್ರ ಬೋಸ್ ಅವರು, ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಧೃವತಾರೆ ಎಂದು ಹೇಳಿದರು. ಅವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ನಡೆಸಿದ ಹೋರಾಟಕ್ಕೆ ಸರಿಸಮಾನವಾದುದಿಲ್ಲ. ನೇತಾಜಿ ಅವರ ಬದ್ಧತೆಯಲ್ಲದೆ, ಅವರ ಉತ್ಸಾಹ ಸ್ವಾತಂತ್ರ್ಯಕ್ಕಾಗಿ ಜನಸಮೂಹವನ್ನು ಒಗ್ಗೂಡಿಸಿದ್ದು, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರವಹಿಸಿತು ಎಂದರು. ಈ ದೇಶದ ಯುವಕರು ಮುಂದಿನ ಹಲವು ವರ್ಷಗಳ ಕಾಲ ಸುಭಾಷ್ ಚಂದ್ರ ಬೋಸ್ ಅವರ ಜೀವನದಿಂದ ಪ್ರೇರಣೆ ಪಡೆಯುವುದು ಮುಂದುವರಿಯಲಿದೆ ಎಂದರು. ಸುಭಾಷ್ ಚಂದ್ರ ಬೋಸ್ ಅವರ ನೆನಪಿನಲ್ಲಿ ಈಶಾನ್ಯ ಭಾಗದಲ್ಲಿ ಸ್ಮಾರಕಗಳನ್ನು ನಿರ್ಮಾಣ ಮಾಡಬೇಕು ಮತ್ತು ಈಶಾನ್ಯ ಮಂಡಳಿ ಮಕ್ಕಳಿಗಾಗಿ ಹಲವು ಕಾರ್ಯಕ್ರಮಗಳನ್ನು ಸಂಘಟಿಸಬೇಕು ಎಂದು ಶ್ರೀ ಅಮಿತ್ ಶಾ ಕರೆ ನೀಡಿದರು.
ಎನ್ಇಸಿ ಈಶಾನ್ಯ ಭಾಗದಲ್ಲಿ ಜನರ ಜೀವನಮಟ್ಟ ವೃದ್ಧಿಗೆ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಇದು ಎನ್ಇಸಿ ಎಷ್ಟು ಪ್ರಮುಖ ಪಾತ್ರ ವಹಿಸಲಿದೆ ಎಂಬುದನ್ನು ತೋರುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇನ್ನು ಹಲವು ಪ್ರದೇಶಗಳು ಅಭಿವೃದ್ಧಿಯಾಗಿಲ್ಲ, ಹಾಗಾಗಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಬಜೆಟ್ ನ ಶೇ.30ರಷ್ಟು ಹಣವನ್ನು ಖರ್ಚು ಮಾಡಲು ಸಚಿವ ಸಂಪುಟ ನಿರ್ಧರಿಸಿದೆ. ಆ ಮೂಲಕ ಅವುಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಒಟ್ಟಾರೆ ಈಶಾನ್ಯ ಭಾಗ ಅಭಿವೃದ್ಧಿಯಾದಾಗ ಮಾತ್ರ ಇಡೀ ಭಾರತ ಅಭಿವೃದ್ಧಿಯಾಗುತ್ತದೆ ಮತ್ತು ಈಶಾನ್ಯ ಭಾಗದ ಅಭಿವೃದ್ಧಿಯಾಗಬೇಕಾದರೆ ಎಲ್ಲ ಧರ್ಮ ಮತ್ತು ಭಾಷೆಗಳ ಜನರಿಗೆ ಅಭಿವೃದ್ಧಿ ತಲುಪಬೇಕು. ಬಜೆಟ್ ಮೂಲಕ ಅಂತಹ ಪ್ರಯತ್ನ ನಡೆಸಲಾಗಿದೆ ಎಂದು ಹೇಳಿದರು. ಈಶಾನ್ಯ ಮಂಡಳಿ 2022ರ ವೇಳೆಗೆ ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣ ನಿಟ್ಟಿನಲ್ಲಿ ಗುರಿಯನ್ನು ಹಾಕಿಕೊಂಡು ಪ್ರತಿಯೊಂದು ರಾಜ್ಯಗಳ ಜೊತೆ ಸಮಾಲೋಚಿಸಿ ಅದನ್ನು ಸಾಧಿಸಿದರೆ ಅದು ಅತ್ಯಂತ ಪ್ರಮುಖವಾಗುತ್ತದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇದು ಹೂಡಿಕೆಯನ್ನು ಆಕರ್ಷಿಸಲು ಸಹಾಯಕವಾಗುತ್ತದೆ. 2022ಕ್ಕೆ ಸ್ವಾತಂತ್ರ್ಯಗಳಿಸಿ 75 ವರ್ಷಗಳು ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ರಾಜ್ಯವೂ ಗುರಿಗಳನ್ನು ನಿಗದಿಪಡಿಸಿಕೊಳ್ಳಬೇಕು ಮತ್ತು ಆ ಗುರಿ ಸಾಧನೆ ಹಾದಿಯಲ್ಲಿ ಬರುವ ಎಲ್ಲ ಅಡೆತಡೆಗಳನ್ನು ನಿವಾರಿಸಬೇಕು. ಮೋದಿ ಜಿ ಆಡಳಿತ ಆರಂಭವಾದ ನಂತರ ಸರ್ಕಾರ ಸಂಪರ್ಕದಿಂದ ಉದ್ಯೋಗ ಸೃಷ್ಟಿವರೆಗೆ ನಾನಾ ವಲಯಗಳಲ್ಲಿ ಸರ್ಕಾರದ ಹೂಡಿಕೆ ಹೆಚ್ಚಾಗಿದೆ ಎಂದು ಶ್ರೀ ಶಾ ಹೇಳಿದರು.
ಯಾವುದೇ ರಾಜ್ಯದ ಅಭಿವೃದ್ಧಿ ಕೇವಲ ಸರ್ಕಾರದ ಹೂಡಿಕೆಯಿಂದ ಮಾತ್ರ ಸಾಧ್ಯವಿಲ್ಲ. ಖಾಸಗಿ ವಲಯದ ಪಾಲುದಾರಿಕೆಯೂ ಕೂಡ ಅತ್ಯಂತ ಪ್ರಮುಖವಾಗಿದ್ದು, ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣದ ಮೂಲಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಬಹುದಾಗಿದೆ. ಜಿಡಿಪಿ ಬೆಳವಣಿಗೆಯಲ್ಲಿ ಉದ್ಯಮಕ್ಕೆ ಪೂರಕ ವಾತಾವರಣ ನಿರ್ಮಾಣದಿಂದ ರಾಜ್ಯಗಳ ಪಾಲೂ ಸಹ ಹೆಚ್ಚಾಗಲಿದೆ. ಸಮೃದ್ಧ ಈಶಾನ್ಯ ನಿರ್ಮಾಣಕ್ಕೆ ಪ್ರಯತ್ನಗಳು ನಡೆದಿವೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಪ್ರತಿಯೊಂದು ವಿಧದಲ್ಲೂ ಈಶಾನ್ಯ ಭಾಗವನ್ನು ಅಭಿವೃದ್ಧಿಪಡಿಸಲು ಭಾರತ ಸರ್ಕಾರ ಸಿದ್ಧವಿದೆ ಮತ್ತು ಈಶಾನ್ಯ ಭಾಗ ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸುವ ನಿಟ್ಟಿನಲ್ಲಿ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ. ಈಶಾನ್ಯ ರಾಜ್ಯಗಳು ಅಭಿವೃದ್ಧಿಯಾಗದೆ, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕನಸಿನ ಆತ್ಮನಿರ್ಭರ(ಸ್ವಾವಲಂಬಿ) ಭಾರತ ನಿರ್ಮಾಣವಾಗದು, ಹಾಗಾಗಿ ಎಲ್ಲ ರಾಜ್ಯಗಳು ಅದಕ್ಕೆ ಸಜ್ಜಾಗಬೇಕು ಎಂದರು.
ಎನ್ಇಸಿಗೆ ವೈಭವದ ಇತಿಹಾಸವಿದೆ ಮತ್ತು ಅದು ಮುಂದೆಯೂ ಸಹ ಉತ್ತಮ ಕೆಲಸ ಮುಂದುವರಿಸಬೇಕು ಎಂದು ನಿರೀಕ್ಷಿಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವರು ಹೇಳಿದರು. ಈಶಾನ್ಯ ಭಾಗ ಇಡೀ ಭಾರತದಲ್ಲೇ ಯಥೇಚ್ಛ ನೈಸರ್ಗಿಕ ಸೌಂದರ್ಯದಿಂದ ಕೂಡಿದೆ. ನಾನಾ ಸಂಸ್ಕೃತಿಗಳ ಸಮ್ಮಿಲನದಿಂದ ಅದ್ಭುತ ಸೌಹಾರ್ದತೆ ಸೃಷ್ಟಿಯಾಗಿದೆ. ಹಾಗಾಗಿ ಈ ಪ್ರದೇಶ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿ ಹೊರಹೊಮ್ಮಿದೆ ಮತ್ತು ಈಶಾನ್ಯ ಭಾಗದ ಅಭಿವೃದ್ಧಿಗೆ ನೇತೃತ್ವ ವಹಿಸುತ್ತಿದೆ ಎಂದು ಶ್ರೀ ಶಾ ಹೇಳಿದರು.
ಈಶಾನ್ಯ ಭಾಗ ಭಾರತದ ಹೃದಯವನ್ನು ಪ್ರತಿನಿಧಿಸುತ್ತದೆ. ನಾವು ಅದನ್ನು ಜತನದಿಂದ ಕಾಯ್ದುಕೊಳ್ಳಬೇಕಿದೆ. ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಂಡಾಗ ಪರಂಪರೆಯನ್ನು ಸಂರಕ್ಷಿಸುವ ಅಗತ್ಯವಿದೆ. ನಾವು ನೈಸರ್ಗಿಕ ಸೌಂದರ್ಯವನ್ನು ಸಂರಕ್ಷಿಸಬೇಕಾದರೆ, ಅದೇ ವೇಳೆ ನಾವು ಸಂಸ್ಕೃತಿಯನ್ನೂ ಸಹ ಉತ್ತೇಜಿಸಬೇಕಾಗುತ್ತದೆ. ಇಲ್ಲಿ ಕಾಗದದ ಕಾರ್ಖಾನೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ. ಅದರಿಂದ ಸ್ಥಳೀಯವಾಗಿ ಉತ್ಪಾದನೆಯಾದ ಬಿದಿರಿನ ಬಳಕೆಯನ್ನು ಹೆಚ್ಚಿಸಬಹುದಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಉಪ ಭಾಷೆಗಳನ್ನು ಸಂರಕ್ಷಿಸಬೇಕಿದೆ ಮತ್ತು ಅವುಗಳನ್ನು ಉಳಿಸಿ ಬೆಳೆಸಬೇಕಿದೆ. ಮೋದಿ ಜಿ ಅವರು, ಅಭಿವೃದ್ಧಿ ಕಾರ್ಯಗಳು ಸಾಗಬೇಕು, ಜೊತೆಗೆ ನಮ್ಮ ಪರಂಪರೆಯನ್ನು ರಕ್ಷಿಸಬೇಕು ಎಂದು ಹೇಳುತ್ತಾರೆ. ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾದ ನಂತರ ಎನ್ಇಸಿಗೆ ಈಗಿರುವ ಸದ್ಯದ ರೂಪ ದೊರಕಿತು. ನೀತಿ ನಿರ್ಧಾರಗಳನ್ನು ಕೈಗೊಳ್ಳುವ ಮತ್ತು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವಂತಹ ಮಂಡಳಿ ರಚಿಸಿದ ಕಾರ್ಯವನ್ನು ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿದ್ದಾರೆ.
ವಾಜಪೇಯಿ ನಾಯಕತ್ವದಲ್ಲಿ ಈಶಾನ್ಯ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಈಶಾನ್ಯ ಭಾಗದ ಅಭಿವೃದ್ಧಿ ಕಾರ್ಯಗಳನ್ನು ಅತ್ಯಂತ ಸನಿಹದಿಂದ ನೋಡಿದರೆ ಈಶಾನ್ಯ ಭಾಗದ ಅಭಿವೃದ್ಧಿಗಾಗಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಮಾಡಿರುವ ಕಾರ್ಯ ಅತ್ಯಂತ ಸ್ಪಷ್ಟವಾಗಿ ಗೋಚರಿಸಲಿದೆ. ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದ ನಂತರ ಈಶಾನ್ಯ ಭಾಗದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೇವಲ ಭರವಸೆಗಳಿಂದ ಮಾತ್ರವಲ್ಲ, ಆಡಳಿತಾತ್ಮಕ ಕ್ರಮಗಳೊಂದಿಗೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶ್ರೀ ಶಾ ಹೇಳಿದರು. ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾದ ಬಳಿಕ ಹಲವು ಅಭಿವೃದ್ಧಿ ಕಾರ್ಯಗಳನ್ನು ಕ್ಷಿಪ್ರಗತಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ಅವುಗಳಲ್ಲಿ ಸಂಪರ್ಕ ಅಭಿಯಾನ ಮೊದಲಿಗೆ ಪೂರ್ಣಗೊಂಡಿದೆ. ಎಲ್ಲಿಲ್ಲಿ ಸಾಧ್ಯವೋ ಅಲ್ಲೆಲ್ಲ ವಾಯು ಸಂಪರ್ಕ ಕಲ್ಪಿಸಲಾಗಿದೆ. ಶ್ರೀ ಮೋದಿ ಜಿ ಅವರು ಪ್ರಧಾನಮಂತ್ರಿಯಾದ ಬಳಿಕ ಎನ್ಇಸಿಯ ಗಂಭೀರ ಪಾತ್ರವನ್ನು ಪುನರ್ ಸ್ಥಾಪಿಸಲಾಗಿದೆ ಮತ್ತು ಎನ್ಇಸಿ ಮೂಲಕ 11,000 ಕಿ.ಮೀ. ರಸ್ತೆ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಹಾಗೂ 7,700 ಮೇಗಾವ್ಯಾಟ್ ವಿದ್ಯುತ್ ಉತ್ಪಾದನೆ ಸಾಧ್ಯವಾಗಿದೆ.
ಹಿಂದೆ ಬಂಡಾಯ ಮತ್ತು ದಂಗೆಗಳಿಗೆ ಹೆಸರಾಗಿದ್ದ ಈಶಾನ್ಯ ಭಾಗ ಇಂದು ಶಾಂತಿಗೆ ಮತ್ತು ಈಶಾನ್ಯ ಭಾಗದಲ್ಲಿ ಶುಭ ಸುದ್ದಿಗಳು ಕೇಳಿಬರುತ್ತಿವೆ ಎಂದು ಹೇಳಿದರು. ಸಣ್ಣ ಗುಂಪುಗಳನ್ನಾಗಿ ಮಾಡಿಕೊಂಡು ಚದುರಿಸುವ ಕಾರ್ಯವನ್ನು ಮಾಡುತ್ತಿವೆ. ಇತ್ತೀಚೆಗೆ ಬೋಡೋ ಗುಂಪಿನ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಬಂಡುಕೋರರ ಹಲವು ವರ್ಷಗಳ ಉಗ್ರವಾದದ ನಂತರ ಬೋಡೋಗಳು ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತಿದ್ದಾರೆ. ಬ್ರು-ರೇಯಾಂಗ್ ಒಪ್ಪಂದ ಕೂಡ ಅತ್ಯಂತ ಪ್ರಮುಖವಾದುದು ಎಂದು ಶ್ರೀ ಶಾ ಹೇಳಿದರು. ಬಾಂಗ್ಲಾದೇಶದ ಜೊತೆಗಿನ ಭೂ ಗಡಿ ವಿವಾದವನ್ನು ಅತ್ಯಂತ ಸರಳ ರೀತಿಯಲ್ಲಿ ಬಗೆಹರಿಸಲಾಯಿತು. ಇದರಿಂದಾಗಿ ಮುಂದಿನ ದಿನಗಳಲ್ಲಿ ಸಂಪರ್ಕ ವೃದ್ಧಿಗೆ ನೆರವಾಗಲಿದೆ ಎಂದರು.
ರಾಜ್ಯಗಳ ವಿವಾದಗಳನ್ನು ಬಗೆಹರಿಸುವುದು ಅತ್ಯಗತ್ಯವಾಗಿದೆ ಎಂದು ಶ್ರೀ ಅಮಿತ್ ಶಾ ಹೇಳಿದರು. ಇಡೀ ದೇಶವೇ ಒಂದಾಗಿದ್ದು, ನಾವು ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರಗಳನ್ನು ಕಂಡುಕೊಳ್ಳುವ ಗುರಿ ಹೊಂದಬೇಕಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈಶಾನ್ಯ ಭಾಗದ ಅಂತರಾಜ್ಯ ಗಡಿ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತಿದೆ ಮತ್ತು ಅದು ಶ್ರೇಷ್ಠ ಸಾಧನೆಯಾಗಲಿದೆ ಎಂದು ಇದಿಲ್ಲದೆ ಅಭಿವೃದ್ಧಿ ಅಸಾಧ್ಯವಾದುದು. ಬಲಿಷ್ಠ ಇಚ್ಛಾಶಕ್ತಿಯಿಂದಾಗಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಶ್ರೀ ಮೋದಿ ಅವರು ಈಶಾನ್ಯ ಭಾಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ ಎಂದ ಕೇಂದ್ರ ಗೃಹ ಸಚಿವರು ಆ ಪ್ರಯತ್ನವನ್ನು ಯಶಸ್ವಿಗೊಳಿಸುವ ಉತ್ತರದಾಯಿತ್ವವೂ ತಮ್ಮ ಮೇಲಿದೆ ಎಂದರು. ಕೇಂದ್ರ ಬಜೆಟ್ ನ ಪ್ರಮಾಣವನ್ನು 89,000 ಕೋಟಿ ರೂ.ಗಳಿಂದ 3,13,1000 ಕೋಟಿ ರೂ.ಗೆ ಅಂದರೆ ಶೇ.24ರಷ್ಟು ಹೆಚ್ಚಿಸಲಾಗಿದೆ. ಗಡಿ ವಿವಾದ ಮತ್ತು ವಿದೇಶಗಳಿಂದ ಮಾದಕದ್ರವ್ಯಗಳನ್ನು ಕಳ್ಳ ಸಾಗಣೆ ಮಾಡುವ ಸವಾಲುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ. ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳ ಬಗೆಗಿನ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಂಡಿದೆ. ಇದೀಗ ಈಶಾನ್ಯ ರಾಜ್ಯಗಳೂ ಸಹ ಕೇಂದ್ರ ಸರ್ಕಾರ ತಮ್ಮನ್ನು ಹೇಗೆ ನೋಡುತ್ತದೆ ಎಂಬುದನ್ನು ಕುರಿತು ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕಿದೆ ಎಂದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಈಶಾನ್ಯ ಭಾಗದ ಎಲ್ಲ ರಾಜ್ಯಗಳು ಕೊರೊನಾ ವಿರುದ್ಧ ಅತ್ಯಂತ ಯಶಸ್ವಿ ಹೋರಾಟ ನಡೆಸಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಅಡಿ 3 ಕೋಟಿ ಫಲಾನುಭವಿಗಳಿಗೆ 7.75 ಲಕ್ಷ ಮೆಟ್ರಿಕ್ ಟನ್ ಆಹಾರಧಾನ್ಯಗಳನ್ನು ನೀಡಲಾಗಿದೆ. 30,000 ಮೆಟ್ರಿಕ್ ಟನ್ ಬೇಳೆ-ಕಾಳುಗಳನ್ನು ಮತ್ತು 50 ಲಕ್ಷ ಅಡುಗೆ ಅನಿಲ ಸಿಲಿಂಡರ್ ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ರೈತರ ಬ್ಯಾಂಕ್ ಖಾತೆಗಳಿಗೆ 553 ಕೋಟಿ ರೂ. ಒದಗಿಸಲಾಗಿದೆ ಎಂದು ಅವರು ಹೇಳಿದರು.
1,707 ಕೋಟಿ ರೂ.ಗಳನ್ನು ಜನ್-ಧನ್ ಯೋಜನೆಯ ಫಲಾನುಭವಿಗಳಿಗೆ ಒಂದು ಬಾರಿ ಜೀವನೋಪಾಯಕ್ಕೆ ನೀಡಲಾಯಿತು. ಇದಿಷ್ಟೇ ಅಲ್ಲದೆ ನಾನಾ ಯೋಜನೆಗಳಡಿ ಫಲಾನುಭವಿಗಳಿಗೆ 2,530 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ. ಈವರೆಗೆ 7,923 ಕೋಟಿ ರೂ.ಗಳ ಸಾಲವನ್ನು ವಿತರಿಸಲಾಗಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಲಸಿಕೆ ಹಾಕುವ ಕಾರ್ಯ ಆರಂಭವಾಗಿದೆ ಮತ್ತು ಸದ್ಯದಲ್ಲೇ ನಾವು ಈ ಸಾಂಕ್ರಾಮಿಕದಿಂದ ಹೊರ ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈಶಾನ್ಯ ಭಾಗದ ಅಭಿವೃದ್ಧಿ ಸಚಿವ ಮತ್ತು ಈಶಾನ್ಯ ಮಂಡಳಿಯ ಉಪಾಧ್ಯಕ್ಷ ಡಾ. ಜಿತೇಂದ್ರ ಸಿಂಗ್, ಮೇಘಾಲಯದ ರಾಜ್ಯಪಾಲರಾದ ಶ್ರೀ ಸತ್ಯಪಾಲ ಮಲ್ಲಿಕ್, ಮೇಘಾಲಯದ ಮುಖ್ಯಮಂತ್ರಿಗಳಾದ ಶ್ರೀ ಕೊನಾರ್ಡ್ ಸಂಗ್ಮ, ಈಶಾನ್ಯ ಮಂಡಳಿಯ ಕಾರ್ಯದರ್ಶಿ, ಎಂಟು ಈಶಾನ್ಯ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಸಚಿವರುಗಳು ಗೃಹ ಸಚಿವ ಅಜಯ್ ಭಲ್ಲ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
***
(Release ID: 1692113)
Visitor Counter : 191