ವಾರ್ತಾ ಮತ್ತು ಪ್ರಸಾರ ಸಚಿವಾಲಯ

ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಸತ್ಯಜಿತ್ ರೇ 100 ವರ್ಷ, ವಿಶೇಷ ವಿಭಾಗ ಉದ್ಘಾಟಿಸಿದ ದೃತಿಮನ್ ಚಟರ್ಜಿ

Posted On: 17 JAN 2021 8:41PM by PIB Bengaluru

ಗೋವಾದ 51 ನೇ ಐಎಫ್ಎಫ್ಐ ಚಿತ್ರೋತ್ಸವದ ಎರಡನೇ ದಿನವಾದ ಇಂದು ಚಲನಚಿತ್ರೋದ್ಯಮದ ದಂತಕಥೆ ಶ್ರೀ ಸತ್ಯಜಿತ್ ರೇ ಅವರ ಹಿನ್ನೋಟವನ್ನು ಪ್ರತಿಬಿಂಬಿಸುವ ವಿಶೇಷ ವಿಭಾಗವನ್ನು ಬೆಂಗಾಲಿ ಖ್ಯಾತ ನಟ ದೃತಿಮನ್ ಚಟರ್ಜಿ ಉದ್ಘಾಟಿಸಿದರು. 

ಶ್ರೀ ದೃತಿಮನ್ ಚಟರ್ಜಿ ಅವರು ತಮ್ಮ ಚಿತ್ರೋದ್ಯಮದ ವೃತ್ತಿಯನ್ನು 1970 ರಲ್ಲಿ ಶ್ರೀ ಸತ್ಯಜಿತ್ ರೇ ಅವರ “ಪ್ರತಿಧ್ವನಿ" ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ಆರಂಭಿಸಿದರು.

ಐಎಫ್ಎಫ್ಐ ನಲ್ಲಿ ಶ್ರೀ ಸತ್ಯಜಿತ್ ರೇ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಭಾಗವಾಗಿ ಈ ಕೆಳಕಂಡ ಐದು ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.

1. ಚಾರುಲತ [1964] – ಖ್ಯಾತ ಕವಿ ಶ್ರೀ ರವೀಂದ್ರನಾಥ ಠಾಗೋರ್ ಅವರ ಪ್ರಮುಖ ಕೃತಿಯನ್ನು ಆಧರಿಸಿದ ಈ ಚಿತ್ರ ವಿಮರ್ಶಾತ್ಮಕವಾಗಿಯೂ ಮೆಚ್ಚುಗೆ ಪಡೆದ ಚಿತ್ರವಾಗಿದೆ. ಇದು ಒಂಟಿಯಾಗಿರುವ ಯುವ ಹೆಂಡತಿಯ ಕಥೆಯನ್ನಾಧರಿಸಿದೆ.

2. ಘರೆ ವೈರೆ [1984] -  ಈ ಚಿತ್ರ ಬಂಗಾಳ ವಿಭಜನೆ ಹಿನ್ನೆಲೆಯ ಪ್ರಣಯದ ನಾಟಕವಾಗಿದ್ದು, ಇದರಲ್ಲಿ ಎರಡು ಸಿದ್ಧಾಂತಗಳ ನಡುವೆ ಮಹಿಳೆ ಸಿಕ್ಕಿಬಿದ್ದಿರುವ ಕಥಾ ವಸ್ತುಹೊಂದಿದೆ.

3. ಪತೇರ್ ಪಂಚಾಲಿ [1955] -ಈ ಚಿತ್ರವು ಶ‍್ರೀ ಬಿಬುತಿಭೂಷಣ್ ಬಂಡೋಪಾಧ್ಯಾಯ ಅವರು ಬರೆದಿರುವ ಕಾದಂಬರಿ ಆಧರಿಸಿ ಚಿತ್ರವಾಗಿದ್ದು, ಬಾಲ್ಯದ ಕಟುವಾದ ಕಥಾ ಹಂದರವನ್ನು ಹೊಂದಿದೆ.

4. ಶತ್ರಂಜ್ ಕೆ ಖಿಲಾಡಿ [1977] – ಪ್ರೇಮ್ ಚಂದ್ ಅವರ ಸಣ‍್ಣ ಕಥೆಯಿಂದ ರೂಪಾಂತರಗೊಂಡ ಸಿನೆಮಾ ಆಗಿದ್ದು, ಈ ಚಿತ್ರ 1857 ರ ಸ್ರಾತಂತ್ರ್ಯ ಸಂಗ್ರಾಮದ ಮುನ್ನಾ ದಿನವನ್ನು ಪ್ರತಿಬಿಂಬಿಸಲಾಗಿದೆ.

5. ಸೋನರ್ ಕೆಲ್ಲ [1974] – ಈ ಚಿತ್ರ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶ್ರೀ ಸತ್ಯಜಿತ್ ಅವರ ಆರಂಭಿಕ ಸಾಹಸಗಳಲ್ಲಿ ಒಂದಾಗಿದೆ.

ಸಮಾರಂಭದಲ್ಲಿ ಮಾತನಾಡಿದ ಶ್ರೀ ದೃತಿಮನ್ ಚಟರ್ಜಿ, ಶ್ರೀ ಸತ್ಯಜಿತ್ ರೇ ಅವರ ಸಿನೆಮಾ ಸಮಯರಹಿತ, ಸಂಬಂಧಿತ ಮತ್ತು ಸಮಕಾಲೀನವಾಗಿದೆ. ಶ್ರೀ ಸತ್ಯಜಿತ್ ರೇ ಅವರು ಚಿತ್ರನಿರ್ಮಾಣದ ಎಲ್ಲಾ ಕುಶಲತೆಯನ್ನು ಮೈಗೂಡಿಸಿಕೊಂಡ ಪರಮೋಚ್ಛ ಶಿಕ್ತಕ. ಸರಳತೆಯಿಂದ, ಆರ್ಥಿಕವಾಗಿ ವಿಶ್ವದರ್ಜೆಯ ಸಿನೆಮಾಗಳನ್ನು ನಿರ್ಮಾಣ ಮಾಡಿದ ಪ್ರತಿಭೆಯಾಗಿದ್ದರು. ಶ್ರೀ ಸತ್ಯಜಿತ್ ರೇ ಅವರ ಮಾನವೀಯತೆ, ಅನುಭೂತಿಯಿಂದ ಯಾವುದೇ ಮಾನವೀಯ ಪರಿಸ್ಥಿತಿಯನ್ನು ನೋಡುವ ಸಾಮರ್ಥ್ಯ, ಶ್ರೀ ಸತ್ಯಜಿತ್ ರೇ ಅವರ ಯಾವುದೇ ಖಂಡನೆಯಿಲ್ಲದ ವ್ಯಕ್ತಿತ್ವ ಶ್ಲಾಘನೀಯ ಎಂದರು.

 

 

***



(Release ID: 1689547) Visitor Counter : 167