ಭೂವಿಜ್ಞಾನ ಸಚಿವಾಲಯ
ತಮಿಳುನಾಡು, ಪುದುಚೆರಿ, ಕಾರೈಕಲ್, ಕೇರಳ ಮತ್ತು ಮಾಹೆಯಲ್ಲಿ ಭಾರೀ ಮಳೆ ಸಾಧ್ಯತೆ
ಮುಂದಿನ ನಾಲ್ಕೈದು ದಿನ, ವಾಯುವ್ಯ ಭಾರತದ ಬಹುತೇಕ ಪ್ರದೇಶಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಇಳಿಕೆ ನಿರೀಕ್ಷೆ
ಪಂಜಾಬ್, ಹರಿಯಾಣ, ಚಂಡಿಗಢ ಮತ್ತು ದೆಹಲಿ, ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯದ ಕೆಲವು ಭಾಗಗಳಲ್ಲಿ ಚಳಿಯ/ ಭಾರಿ ಶೀತದ ವಾತಾವರಣ
ಮುಂದಿನ ನಾಲ್ಕೈದು ದಿನಗಳಲ್ಲಿ ವಾಯವ್ಯ ಭಾರತದಲ್ಲಿ ಭಾರೀ ದಟ್ಟ ಮಂಜು ಮತ್ತು ಹಿಮದ ವಾತಾವರಣ ನಿರೀಕ್ಷೆ
Posted On:
12 JAN 2021 1:32PM by PIB Bengaluru
ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರದ ಪ್ರಕಾರ:
ಮಹತ್ವದ ಹವಾಮಾನ ಸೂಚನೆಗಳು
- ಕೆಳ ಮೇಲ್ಮೈ ವಲಯದಲ್ಲಿ ಹಾಗೂ ಕೊಮೊರಿನ್ ಪ್ರದೇಶದಲ್ಲಿ ಬಿರುಗಾಳಿಯ ಪ್ರಭಾವದಿಂದಾಗಿ ತಮಿಳುನಾಡು, ಪುದುಚೆರಿ ಮತ್ತು ಕರೈಕಲ್, ಕೇರಳ ಹಾಗೂ ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಮುಂದಿನ ಎರಡು-ಮೂರು ದಿನಗಳ ಕಾಲ ಗುಡುಗು, ಸಿಡಿಲು ಕೂಡಿದ ಸಾಧಾರಣ ಹಾಗೂ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆನಂತರ ಈ ಪ್ರದೇಶಗಳಲ್ಲಿ ಮಳೆಯ ಚಟುವಟಿಕೆ ಇಳಿಕೆಯಾಗಲಿದೆ. ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ನಲ್ಲಿ ಜನವರಿ 12 ಮತ್ತು 13ರಂದು ಹಾಗೂ ಕೇರಳ ಮತ್ತು ಮಾಹೆಗಳಲ್ಲಿ ಜನವರಿ 12ರಂದು ಭಾರೀ ಮಳೆಯಾಗುವ ಸಾಧ್ಯೆ ಇದೆ.
- ಉತ್ತರ ಮತ್ತು ವಾಯುವ್ಯದ ಗಾಳಿಯಿಂದಾಗಿ ಮುಂದಿನ ನಾಲ್ಕೈದು ದಿನ ವಾಯವ್ಯ ಭಾರತದ ಬಹುತೇಕ ಕಡೆ ತಾಪಮಾನ ಸಾಮಾನ್ಯಕ್ಕಿಂತ ಕನಿಷ್ಠಕ್ಕೆ ಇಳಿಕೆಯಾಗಲಿದೆ. ಇದರಿಂದಾಗಿ ಪಂಜಾಬ್, ಹರಿಯಾಣ, ಚಂಡಿಗಢ ಮತ್ತು ದೆಹಲಿ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಭಾರೀ ಚಳಿ/ಶೀತದ ವಾತಾವರಣ ಸ್ಥಿತಿಗತಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಶೀತಗಾಳಿ ಮತ್ತು ಭಾರಿ ಶೀತದ ವಾತಾವರಣ ಪಂಜಾಬ್, ಹರಿಯಾಣ, ಚಂಡಿಗಢ ಮತ್ತು ದೆಹಲಿ ರಾಜ್ಯಗಳ ಹಲವೆಡೆ ನಿರ್ಮಾಣವಾಗುವ ಸಾಧ್ಯತೆ ಇದೆ ಮತ್ತು ಉತ್ತರ ಪ್ರದೇಶ, ಉತ್ತರ ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ ಮುಂದಿನ ಮೂರು ದಿನಗಳಲ್ಲಿ ಒಳನಾಡಿನಲ್ಲಿ ಶೀತದ ವಾತಾವರಣ ನಿರ್ಮಾಣವಾಗಲಿದೆ. ದಕ್ಷಿಣ ಪಂಜಾಬ್, ಹರಿಯಾಣ ಮತ್ತು ಚಂಡಿಗಢದ ಕೆಲವು ಒಳನಾಡು ಪ್ರದೇಶಗಳಲ್ಲಿ ತಳಮಟ್ಟದಲ್ಲಿ ಪರಿಣಾಮ ಆಗುವ ಸಾಧ್ಯತೆ ಇದೆ ಮತ್ತು ಮುಂದಿನ ಎರಡು ದಿನಗಳ ಕಾಲ ಚಂಡಿಗಢ ಹಾಗೂ ಉತ್ತರ ರಾಜಸ್ಥಾನಗಳಲ್ಲೂ ಇಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.
- ಮುಂದಿನ ನಾಲ್ಕೈದು ದಿನಗಳ ಅವಧಿಯಲ್ಲಿ ವಾಯವ್ಯ ಭಾರತದಲ್ಲಿ ಒಳನಾಡು ಪ್ರದೇಶಗಳಲ್ಲಿ ಭಾರೀ ಹಿಮ, ಮಂಜಿನ ವಾತಾವರಣ ಸೃಷ್ಟಿಯಾಗಲಿದೆ.
ಮುಂದಿನ ಐದು ದಿನಗಳ ಹವಾಮಾನ ಮುನ್ಸೂಚನೆ:
ಹವಾಮಾನದ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ click here for details of weather:
ಹವಾಮಾನ ಮುನ್ಸೂಚನೆ ಆಧಾರದ ಪರಿಣಾಮಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ click here for impact based weather warning details:
ದಯವಿಟ್ಟು ನಿಖರ ಮುನ್ಸೂಚನೆ ಮತ್ತು ಎಚ್ಚರಿಕೆ ಕ್ರಮಗಳಿಗಾಗಿ ಮೌಸಮ್ ಆಪ್ ಅನ್ನು(MAUSAM APP)ಅನ್ನು ಡೌನ್ ಲೋಡ್ ಮಾಡಿಕೊಳ್ಳಿ. ಸಲಹೆ ಸೂಚನೆಗಳಿಗಾಗಿ ಮೇಘದೂತ್ ಆಪ್(MEGHDOOT APP ) ಮತ್ತು ಸಿಡಿಲಿನ ಮುನ್ನೆಚ್ಚರಿಕೆಗಳಿಗಾಗಿ ದಾಮಿನಿ ಆಪ್( DAMINI APP) ಹಾಗೂ ಜಿಲ್ಲಾವಾರು ಮುನ್ನೆಚ್ಚರಿಕೆಗಳಿಗಾಗಿ ರಾಜ್ಯಗಳ ಎಂಸಿ/ಆರ್ ಎಂಸಿ ವೆಬ್ ಸೈಟ್ ಗಳಿಗೆ ಭೇಟಿ ನೀಡಬಹುದು.
***
(Release ID: 1687970)
Visitor Counter : 127