ಪ್ರಧಾನ ಮಂತ್ರಿಯವರ ಕಛೇರಿ

ರೆವಾರಿ - ಮಾದರ್ ವಲಯದ ನಿರ್ದಿಷ್ಟ ಪೂರ್ವ ಸರಕು ಕಾರಿಡಾರ್ ರಾಷ್ಟ್ರಕ್ಕೆ ಸಮರ್ಪಣೆ: ಪ್ರಧಾನಮಂತ್ರಿ ಭಾಷಣ

Posted On: 07 JAN 2021 2:58PM by PIB Bengaluru

ನಮಸ್ಕಾರಗಳು,

ರಾಜಸ್ತಾನದ ರಾಜ್ಯಪಾಲರಾದ ಶ್ರೀ ಕಲ್ರಾಜ್ ಮಿಶ್ರಾಜಿ, ಹರಿಯಾಣದ ರಾಜ್ಯಪಾಲರಾದ ಶ್ರೀ ಸತ್ಯದೇವ್ ನಾರಾಯಣ ಆರ್ಯಜಿ, ರಾಜಸ್ತಾನದ ಮುಖ್ಯಮಂತ್ರಿ ಶ್ರೀ ಅಶೋಕ್ ಗೆಹ್ಲೋಟ್ ಜಿ, ಹರಿಯಾಣದ ಮುಖ್ಯಮಂತ್ರಿ ಶ್ರೀ ಮನೋಹರ್ ಲಾಲ್ ಜಿ, ಉಪಮುಖ್ಯಮಂತ್ರಿ ಶ್ರೀ ದುಷ್ಯಂತ್ ಚೌಟಾಲಜಿ, ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಪಿಯೂಷ್ ಗೋಯಲ್ ಜಿ, ಶ್ರೀ ಗಜೇಂದ್ರ ಶೇಖಾವತ್ ಜಿ, ಶ್ರೀ ಅರುಣ್ ರಾಮ್ ಮೇಘಾವಾಲ್ ಜಿ, ರಾಜಸ್ತಾನದ ಶ್ರೀ ಕೈಲಾಶ್ ಚೌದರಿ ಜಿ, ಹರಿಯಾಣದ ರಾವ್ ಇಂದ್ರಜಿತ್ ಸಿಂಗ್ ಜಿ, ಶ್ರೀ ರತನ್ ಲಾಲ್ ಕಟಾರಿಯಾ ಜಿ, ಶ್ರೀ ಕೃಷನ್ ಪಾಲ್ ಜಿ, ಸಂಸತ್ತಿನ ನನ್ನ ಎಲ್ಲಾ ಸಹೋದ್ಯೋಗಿಗಳೇ, ಶಾಸಕರೇ, ಭಾರತದಲ್ಲಿನ ಜಪಾನ್ ರಾಯಭಾರಿ ಗೌರವಾನ್ವಿತ ಸ್ರೀ ಸತೋಷಿ ಸುಜುಕಿ ಜಿ ಮತ್ತು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಇತರೆ ಗಣ್ಯರೆ,  

ಸಹೋದರ ಮತ್ತು ಸಹೋದರಿಯರೇ,

ನಿಮಗೆಲ್ಲರಿಗೂ 2021ನೇ ಹೊಸ ವರ್ಷದ ಶುಭಾಶಯಗಳು, ಪ್ರಸ್ತುತ ನಡೆಯುತ್ತಿರುವ ದೇಶದ ಮೂಲಸೌಕರ್ಯವನ್ನು ಆಧುನೀಕರಣಗೊಳಿಸುವ ಮಹಾಯಜ್ಞ ಇಂದು ಹೊಸ ವೇಗ ತಂದುಕೊಟ್ಟಿದೆ. ನಾವು ಕಳೆದ ಹತ್ತು-ಹನ್ನೆರಡು ದಿನಗಳ ವಿಚಾರಗಳ ಬಗ್ಗೆ ಮಾತನಾಡುವುದಾದರೆ 18,000 ಕೋಟಿಗಳಿಗೂ ಅಧಿಕ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಆಧುನಿಕ ಡಿಜಿಟಲ್ ಸೌಕರ್ಯದ ಮೂಲಕ ನೇರವಾಗಿ ವರ್ಗಾವಣೆ ಮಾಡಲಾಗಿದೆ: ದೆಹಲಿ ಮೆಟ್ರೋದ ಏರ್ ಪೋರ್ಟ್ ಎಕ್ಸ್ ಪ್ರೆಸ್ ಮಾರ್ಗದಲ್ಲಿ ರಾಷ್ಟ್ರೀಯ ಕಾಮನ್ ಮೊಬಿಲಿಟಿ ಕಾರ್ಡ್ ಅನ್ನು ಆರಂಭಿಸಲಾಗಿದೆ ಮತ್ತು ಚಾಲಕರಹಿತ ಮೆಟ್ರೋಗೂ ಚಾಲನೆ ನೀಡಲಾಗಿದೆ. ಗುಜರಾತ್ ರಾಜ್ ಕೋಟ್ ನಲ್ಲಿ ಏಮ್ಸ್ ನಿರ್ಮಾಣ ಕಾರ್ಯ ಆರಂಭವಾಗಿದೆ ಮತ್ತು ಒಡಿಶಾದ ಸಂಬಲ್ಪುರದಲ್ಲಿ ಐಐಎಂನ ಕಾಯಂ ಕ್ಯಾಂಪಸ್ ನಿರ್ಮಾಣ ಕಾರ್ಯ ಕೂಡ ಆರಂಭವಾಗಿದೆ; ವಿಶ್ವದ ಅತ್ಯುತ್ತಮ ತಂತ್ರಜ್ಞಾನದೊಂದಿಗೆ ದೇಶದ ಆರು ನಗರಗಳಲ್ಲಿ 6,000 ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ; ರಾಷ್ಟ್ರೀಯ ಪರಮಾಣು ಸಮಯಮಾಪಕ ಮತ್ತು ಭಾರತೀಯ ನಿರ್ದೇಶಕ ದ್ರಾವ್ಯ ವ್ಯವಸ್ಥೆಯನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ; ದೇಶದ ಮೊದಲ ರಾಷ್ಟ್ರೀಯ ಪರಿಸರ ಮಾನದಂಡ ಪ್ರಯೋಗಾಲಯ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ; 450 ಕಿಲೋಮೀಟರ್ ಉದ್ದದ ಕೊಚ್ಚಿ-ಮಂಗಳೂರು ಅನಿಲ ಕೊಳವೆ ಮಾರ್ಗ ಉದ್ಘಾಟನೆಗೊಂಡಿದೆ; ಪಶ್ಚಿಮ ಬಂಗಾಳದ ಶಾಲಿಮಾರ್ ನಿಂದ ಮಹಾರಾಷ್ಟ್ರದ ಸಂಗೋಲಾದ ವರೆಗೆ ಕಿಸಾನ್ ರೈಲು ಸಂಚಾರ ಆರಂಭ  ಮತ್ತು ಇದೇ ವೇಳೆ ಪೂರ್ವ ಕಾರಿಡಾರ್ ನ್ಯೂ ಭೌಪುರ್-ನ್ಯೂ ಖುರ್ಜಾ ನಡುವಿನ ಸರಕು ಕಾರಿಡಾರ್ ಮಾರ್ಗದಲ್ಲಿ ಮೊದಲ ಸರಕು ರೈಲಿಗೆ ಚಾಲನೆ ನೀಡಿ, 306 ಕಿಲೋಮೀಟರ್ ಉದ್ದದ ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ನೀವೆ ಯೋಚಿಸಿ, ಹತ್ತು-ಹನ್ನೆರಡು ದಿನಗಳಲ್ಲಿ ಎಷ್ಟು ಕೆಲಸವನ್ನು ಮಾಡಲಾಗಿದೆ ಎಂದು. ದೇಶ ಹೊಸ ವರ್ಷದಲ್ಲಿ ಉತ್ತಮ ರೀತಿಯಲ್ಲಿ ಶುಭಾರಂಭ ಮಾಡಿದ್ದು, ಇನ್ನೂ ಒಳ್ಳೆಯ ಕೆಲಸಗಳು ಮುಂದೆ ಆಗುವ ಸಮಯ ಬಂದಿದೆ. ಹಲವು ಉದ್ಘಾಟನೆಗಳು ಮತ್ತು ಶಂಕುಸ್ಥಾಪನೆಗಳನ್ನು ನೆರವೇರಿಸುತ್ತಿರುವುದು ಅತ್ಯಂತ ಪ್ರಮುಖವಾದುದು. ಭಾರತದ ಕೊರೊನಾದ ಸಂಕಷ್ಟದ ಸಮಯದಲ್ಲಿ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದೆ ಎಂಬುದು. ಕೆಲವೇ ದಿನಗಳ ಹಿಂದೆ ಭಾರತ ಮೇಡ್ ಇನ್ ಇಂಡಿಯಾದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಕೊರೊನಾ ಲಸಿಕೆಗಳಿಗೆ ಅನುಮೋದನೆ ನೀಡಿದೆ. ಭಾರತ ತನ್ನದೇ ಆದ ಲಸಿಕೆ ಹೊಂದಿರುವುದು ದೇಶವಾಸಿಗಳಲ್ಲಿ ಹೊಸ ವಿಶ್ವಾಸವನ್ನು ತುಂಬಿದೆ. ಇದರಿಂದಾಗಿ ಪ್ರತಿಯೊಬ್ಬ ಭಾರತೀಯರೂ, ಭಾರತ ಮಾತೆಯ ಪುತ್ರರು ಮತ್ತು ಭಾರತವನ್ನು ಪ್ರೀತಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹೆಮ್ಮೆಯಿಂದ ತಲೆಎತ್ತಿ ನಡೆಯುವಂತಾಗಿದ್ದು, 2021 ಆರಂಭದಲ್ಲೇ ಭಾರತ ಸ್ವಾವಲಂಬನೆ ನಿಟ್ಟಿನಲ್ಲಿ ಅತ್ಯಂತ ಕ್ಷಿಪ್ರವಾಗಿ ಮುನ್ನಡೆಯುತ್ತಿರುವುದನ್ನು ಆಲಿಸಬಹುದಾಗಿದೆ. ಇಂದು ಪ್ರತಿಯೊಬ್ಬ ಭಾರತೀಯರೂ ಇದನ್ನು ಕೇಳುತ್ತಿದ್ದೇವೆ. ನಾವು ನಿಲ್ಲುವುದಿಲ್ಲ, ನಮಗೆ ಸುಸ್ತಾಗುವುದಿಲ್ಲ, ನಾವೆಲ್ಲಾ ಭಾರತೀಯರು ಒಟ್ಟಾಗಿ ಮುನ್ನಡೆಯುತ್ತೇವೆ ಮತ್ತು ವೇಗವಾಗಿ ಮುಂದುವರಿಯುತ್ತೇವೆ ಎಂದು.

ಮಿತ್ರರೇ,

ನಿರ್ದಿಷ್ಟ ಸರಕು ಕಾರಿಡಾರ್ ಯೋಜನೆ 21ನೇ ಶತಮಾನದಲ್ಲಿ ಭಾರತದ ದಿಕ್ಕು ಬದಲಿಸಲಿದೆ. ಐದಾರು ವರ್ಷಗಳ ಕಠಿಣ ಪರಿಶ್ರಮದ ನಂತರ ಯೋಜನೆಯ ಬಹುತೇಕ ಭಾಗ ಇಂದು ನನಸಾಗುತ್ತಿದೆ. ಕೆಲವು ದಿನಗಳ ಹಿಂದೆ ಆರಂಭವಾದ ನ್ಯೂ ಭೌಪುರ್-ನ್ಯೂ ಖುರ್ಜಾ ವಲಯದಲ್ಲಿ ಸರಕು ಸಾಗಾಣೆ ರೈಲುಗಳ ವೇಗ ಪ್ರತಿ ಗಂಟೆಗೆ 90 ಕಿಲೋಮೀಟರ್ ಸಾಗಿ, ದಾಖಲೆ ನಿರ್ಮಾಣವಾಗಿದೆ. ಮಾರ್ಗದಲ್ಲಿ ಹಿಂದೆ ಸರಕು ರೈಲುಗಳು ಗಂಟೆಗೆ ಕೇವಲ 25 ಕಿಲೋಮೀಟರ್ ವೇಗದಲ್ಲಿ ಮಾತ್ರ ಸಾಗುತ್ತಿದ್ದವು, ಅವು ಇದೀಗ ಮೂರು ಪಟ್ಟು ಅಧಿಕ ವೇಗದಲ್ಲಿ ಚಲಿಸುತ್ತಿವೆ. ಭಾರತ ಕೂಡ ಹಿಂದಿನದಕ್ಕೆ ಹೋಲಿಸಿದರೆ ಅದೇ ವೇಗದಲ್ಲಿ ಮುನ್ನಡೆಯುತ್ತಿದೆ ಮತ್ತು ಭಾರತಕ್ಕೆ ಅಂತಹ ಪ್ರಗತಿ ಕೂಡ ಅತ್ಯಗತ್ಯವಾಗಿದೆ.

ಮಿತ್ರರೇ,

ಇಂದು ರಾಜಸ್ಥಾನದ ನ್ಯೂ ಕಿಶನ್ ಗಢ್ ನಿಂದ ಹರಿಯಾಣದ ನ್ಯೂ ಅತೇಲಿವರೆಗೆ ಮೊದಲ ಡಬಲ್ ಡೆಕ್ಕರ್ ಸರಕು ಸಾಗಾಣೆ ರೈಲಿಗೆ ಚಾಲನೆ ನೀಡಲಾಗಿದೆ. ಕಂಟೈನರ್ ಮೇಲೆ ಕಂಟೈನರ್ ಒಳಗೊಂಡ ಮತ್ತು ಒಂದೂವರೆ ಕಿಲೋಮೀಟರ್ ಉದ್ದದ ರೈಲೇ ನಿಜಕ್ಕೂ ಒಂದು ಶ್ರೇಷ್ಠ ಸಾಧನೆಯಾಗಿದೆ. ಸಾಮರ್ಥ್ಯದೊಂದಿಗೆ ಭಾರತ ಅಂತಹ ಶಕ್ತಿ ಹೊಂದಿರುವ ಕೆಲವೇ ರಾಷ್ಟ್ರಗಳ ಗುಂಪಿಗೆ ಸೇರ್ಪಡೆಯಾಗಿದೆ. ಇದರ ಹಿಂದೆ ನಮ್ಮ ಇಂಜಿನಿಯರ್ ಗಳು, ತಂತ್ರಜ್ಞರು ಮತ್ತು ಕಾರ್ಮಿಕರ ಶ್ರೇಷ್ಠ ಪ್ರಯತ್ನವಿದೆ. ಹೆಮ್ಮೆಯ ಸಾಧನೆಗಾಗಿ ನಾನು ಅವರಿಗೆಲ್ಲಾ ಅಭಿನಂದನೆ ಸಲ್ಲಿಸುತ್ತೇನೆ.

ಮಿತ್ರರೇ,

ದಿನ ರಾಜಸ್ಥಾನ, ಹರಿಯಾಣ ಮತ್ತು ಎನ್ ಸಿಆರ್ ಪ್ರದೇಶದ ಪ್ರತಿಯೊಬ್ಬ ವ್ಯಕ್ತಿ, ವಾಣಿಜ್ಯೋದ್ಯಮಿಗಳು, ಉದ್ಯಮಿಗಳು ಮತ್ತು ರೈತರಲ್ಲಿ ಹೊಸ ಭರವಸೆ ಮತ್ತು ಹೊಸ ಅವಕಾಶಗಳು ಹುಟ್ಟಿಕೊಂಡಿದೆ. ನಿರ್ದಿಷ್ಟ ಸರಕು ಕಾರಿಡಾರ್ ನಿಂದ ಅದು ಪೂರ್ವದ್ದಾಗಿರಬಹುದು ಅಥವಾ ಪಶ್ಚಿಮದ್ದಾಗಿರಬಹುದು. ಇವು ಆಧುನಿಕ ಸರಕು ಸಾಗಾಣೆಗೆ ಕೇವಲ ಆಧುನಿಕ ಮಾರ್ಗಗಳಲ್ಲ, ನಿರ್ದಿಷ್ಟ ಸರಕು ಕಾರಿಡಾರ್ ಗಳು ದೇಶದ ಕ್ಷಿಪ್ರ ಅಭಿವೃದ್ಧಿಯ ಕಾರಿಡಾರ್ ಗಳಾಗಿವೆ. ಕಾರಿಡಾರ್ ಗಳು ಅಭಿವೃದ್ಧಿಯ ಆಧಾರದಲ್ಲಿ ಹೊಸ ಅಭಿವೃದ್ಧಿ ಕೇಂದ್ರಗಳು ಮತ್ತು ಬೆಳವಣಿಗೆ ಸ್ಥಳಗಳನ್ನು ದೇಶದ ನಾನಾ ಭಾಗಗಳಲ್ಲಿ ಹುಟ್ಟುಹಾಕಲಿವೆ

ಸಹೋದರ ಮತ್ತು ಸಹೋದರಿಯರೇ,

ಪೂರ್ವ ಸರಕು ಕಾರಿಡಾರ್ ಈಗಾಗಲೇ ದೇಶದ ನಾನಾ ಭಾಗಗಳಲ್ಲಿ ಹೇಗೆ ಸಾಮರ್ಥ್ಯ ಬಲವರ್ಧನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ. ಮತ್ತೊಂದೆಡೆ ನ್ಯೂ ಭಪುರ್-ನ್ಯೂ ಖುರ್ಜಾ ವಲಯದ ಮಾರ್ಗದಲ್ಲಿ ಪಂಜಾಬ್ ನಿಂದ ಸಾವಿರಾರು ಟನ್ ಆಹಾರಧಾನ್ಯಗಳನ್ನು ರೈಲುಗಳ ಮೂಲಕ ಸಾಗಾಣೆ ಮಾಡುತ್ತಿರುವುದು ಒಂದೆಡೆಯಾದರೆ ಮತ್ತೊಂದೆಡೆ ಮಧ್ಯಪ್ರದೇಶದ ಸಿಂಗ್ರೌಲಿ ಮತ್ತು ಜಾರ್ಖಂಡ್ ನಿಂದ ಸಾವಿರಾರು ಟನ್ ಕಲ್ಲಿದ್ದಲು ಸರಕು ಸಾಗಾಣೆ ರೈಲುಗಳ ಮೂಲಕ ಎನ್ ಸಿಆರ್ ಪಂಜಾಬ್ ಮತ್ತು ಹರಿಯಾಣ ತಲುಪುತ್ತಿದೆ. ಅದೇ ರೀತಿ ಪಶ್ಚಿಮ ಸರಕು ಕಾರಿಡಾರ್ ನಲ್ಲಿ ಉತ್ತರ ಪ್ರದೇಶ ಮತ್ತು ಹರಿಯಾಣದಿಂದ ರಾಜಸ್ಥಾನ್, ಗುಜರಾತ್ ಮತ್ತು ಮಹಾರಾಷ್ಟ್ರಗಳಿಗೆ ಸರಕು ಸಾಗಾಣೆ ಮಾಡಲಾಗುತ್ತಿದೆ. ಇದರಿಂದಾಗಿ ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಕೃಷಿ ಮತ್ತು ಅದರ ಸಂಬಂಧಿ ವ್ಯಾಪಾರ ಸುಲಭವಾಗಿದ್ದು, ಮಹೇಂದ್ರಗಢ್, ಜೈಪುರ್, ಅಜ್ಮೀರ್ ಮತ್ತು ಸಿಕಾರ್ ಸೇರಿದಂತೆ ಹಲವು  ಜಿಲ್ಲೆಗಳಲ್ಲಿ ಉದ್ಯಮಗಳಿಗೆ ಹೊಸ ಶಕ್ತಿಯನ್ನು ತುಂಬಿವೆ. ರಾಜ್ಯಗಳ ಉತ್ಪಾದನಾ ಘಟಕಗಳು ಮತ್ತು ಉದ್ಯಮಿಗಳಿಗೆ ಅತಿ ಕಡಿಮೆ ವೆಚ್ಚದಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಲಭ್ಯವಾಗುತ್ತಿವೆ. ಗುಜರಾತ್ ಮತ್ತು ಮಹಾರಾಷ್ಟ್ರದ ಬಂದರುಗಳಿಗೆ ತ್ವರಿತ ಮತ್ತು ಕೈಗೆಟಕಬಹುದಾದ ರೀತಿಯಲ್ಲಿ ಸಂಪರ್ಕವನ್ನು ಕಲ್ಪಿಸಲಾಗುತ್ತಿರುವುದರಿಂದ ಪ್ರದೇಶದಲ್ಲಿ ಹೊಸ ಹೂಡಿಕೆ ಅವಕಾಶಗಳಿಗೆ ಉತ್ತೇಜನ ದೊರಕುತ್ತಿದೆ.

ಮಿತ್ರರೇ,

ನಿಮಗೆಲ್ಲಾ ಚೆನ್ನಾಗಿ ತಿಳಿದಿರುವಂತೆ ವ್ಯಾಪಾರಕ್ಕೆ ಆಧುನಿಕ ಮೂಲಸೌಕರ್ಯ ಸೃಷ್ಟಿ ಅತ್ಯಗತ್ಯವಾಗಿದ್ದು, ಅದು ಜೀವನಕ್ಕೂ ಅಗತ್ಯವಾಗಿದೆ ಹಾಗೂ ಪ್ರತಿಯೊಂದು ಹೊಸ ವ್ಯವಸ್ಥೆಗೂ ಇದು ಉತ್ತೇಜನ ನೀಡುತ್ತದೆ. ಇದಕ್ಕೆ ಸಂಬಂಧಿಸಿದ ಚಟುವಟಿಕೆಗಳು ಆರ್ಥಿಕತೆಯ ಹಲವು ಇಂಜಿನ್ ಗಳನ್ನು ಚುರುಕುಗೊಳಿಸಲಿವೆ. ಇವು ಕೇವಲ ಸ್ಥಳದಲ್ಲೇ ಮಾತ್ರ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಿಲ್ಲ. ಬದಲಿಗೆ ಸಿಮೆಂಟ್, ಉಕ್ಕು, ಸಾರಿಗೆ ಮತ್ತು ಇತರ ಹಲವು ವಲಯಗಳಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ. ನಿರ್ದಿಷ್ಟ ಸರಕು ಕಾರಿಡಾರ್ 9 ರಾಜ್ಯಗಳ 133 ರೈಲು ನಿಲ್ದಾಣಗಳ ಮೂಲಕ ಹಾದು ಹೋಗಲಿದ್ದು, ಇದರಿಂದಾಗಿ ಇತರೆ ಹಲವು ಸೌಕರ್ಯಗಳಾದ ಹೊಸ ಮಲ್ಟಿ ಮಾಡಲ್ ಸಾಗಾಣೆ ಪಾರ್ಕ್ ಗಳು, ಸರಕು ಟರ್ಮಿನಲ್ ಗಳು, ಕಂಟೈನರ್ ಉಗ್ರಾಣಗಳು, ಕಂಟೈನರ್ ಟರ್ಮಿನಲ್ ಗಳು, ಪಾರ್ಸಲ್ ಹಬ್ ಇತ್ಯಾದಿ ಅಭಿವೃದ್ಧಿಯಾಗಲಿದೆ. ಇವೆಲ್ಲಾ ರೈತರಿಗೆ ಮಾತ್ರ ಅನುಕೂಲಕಾರಿಯಾಗುವುದಲ್ಲದೆ, ಸಣ್ಣ ಉದ್ದಿಮೆಗಳು, ಗುಡಿ ಕೈಗಾರಿಕೆಗಳು ಮತ್ತು ದೊಡ್ಡ ಉತ್ಪಾದನಾ ಕಂಪನಿಗಳಿಗೂ ಅನುಕೂಲವಾಗಲಿವೆ.

ಮಿತ್ರರೇ,

ಇದು ರೈಲ್ವೆಯ ಕಾರ್ಯಕ್ರಮವಾಗಿರುವುದರಿಂದ ರೈಲು ಮಾರ್ಗಗಳ ಬಗ್ಗೆ ಮಾತನಾಡುವುದು ಸಾಮಾನ್ಯವಾಗಿದೆ ಮತ್ತು ನಾನು ನಿಮಗೆ  ರೈಲ್ವೆಯ ಸಾದೃಶ್ಯ ಬಳಸಿಕೊಂಡು ಒಂದು ಉದಾಹರಣೆಯನ್ನು ನೀಡುತ್ತೇನೆ. ಒಂದು ಮಾರ್ಗದಲ್ಲಿ ಸಾರ್ವಜನಿಕರ ಅಭಿವೃದ್ಧಿಗಾಗಿ ಕೆಲಸ ಮಾಡಲಾಗುತ್ತಿದೆ. ಮತ್ತೊಂದು ಮಾರ್ಗದಲ್ಲಿ ದೇಶದ ಬೆಳವಣಿಗೆಯ ಇಂಜಿನ್ ಗಳಿಗೆ ಹೊಸ ಶಕ್ತಿಯನ್ನು ತುಂಬುತ್ತಿದ್ದೇವೆ. ನಾವು ವ್ಯಕ್ತಿಯ ಅಭಿವೃದ್ಧಿ ಬಗ್ಗೆ ಮಾತನಾಡುವಾಗ ನಾವು ಮನೆ, ನೀರು, ವಿದ್ಯುತ್, ಶೌಚಾಲಯ, ಅನಿಲ, ರಸ್ತೆ, ಅಂತರ್ಜಾಲ ಇವುಗಳನ್ನೆಲ್ಲಾ ದೇಶದ ಸಾಮಾನ್ಯ ಜನರಿಗೆ ಒದಗಿಸುವ ಅಭಿಯಾನ ಇಂದು ನಡೆಯುತ್ತಿದೆ. ಹಲವು ಕಲ್ಯಾಣ ಕಾರ್ಯಕ್ರಮಗಳು ಕ್ಷಿಪ್ರಗತಿಯಲ್ಲಿ ಸಾಗಿವೆ. ಅದು ಪಿಎಂ ಆವಾಸ್ ಯೋಜನೆ, ಸ್ವಚ್ಛ ಭಾರತ ಅಭಿಯಾನ, ಸೌಭಾಗ್ಯ, ಉಜ್ವಲಾ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮತ್ತಿತರ ಯೋಜನೆಗಳ ಮೂಲಕ ಕೋಟ್ಯಾಂತರ ಭಾರತೀಯರ ಜೀವನವನ್ನು ಸುಗಮಗೊಳಿಸಲಾಗುತ್ತಿದೆ ಮತ್ತು ಆರಾಮಗೊಳಿಸುವುದು, ಸಂಪೂರ್ಣ ಆತ್ಮವಿಶ್ವಾಸ ಮತ್ತು ಗೌರವದಿಂದ ಬಾಳ್ವೆ ನಡೆಸಲು ಎಲ್ಲರಿಗೂ ಅವಕಾಶಗಳನ್ನು ಒದಗಿಸಲಾಗುತ್ತಿದೆ ಮತ್ತೊಂದೆಡೆ ಎರಡನೇ ಮಾರ್ಗದ ಮೂಲಸೌಕರ್ಯ ಅಭಿವೃದ್ಧಿಯಿಂದಾಗಿ ದೇಶದ ಅಭಿವೃದ್ಧಿ ಇಂಜಿನ್ ಗೆ ಅನುಕೂಲವಾಗುತ್ತಿದ್ದು, ನಮ್ಮ ಉದ್ದಿಮೆದಾರರು ಮತ್ತು ನಮ್ಮ ಕೈಗಾರಿಕೆಗಳಿಗೆ ಅನುಕೂಲವಾಗುತ್ತಿದೆ. ಇಂದು ಹೆದ್ದಾರಿ, ರೈಲ್ವೆ, ವಾಯು ಮತ್ತು ಜಲಮಾರ್ಗಗಳ ಸಂಪರ್ಕ ದೇಶದೆಲ್ಲೆಡೆ ಕ್ಷಿಪ್ರವಾಗಿ ಹರಡಿಕೊಂಡಿದೆ. ಬಂದರುಗಳಿಗೆ ಸಾರಿಗೆ ವಿಧಾನದ ಸಂಪರ್ಕಗಳನ್ನು ಕಲ್ಪಿಸಲಾಗಿದೆ ಮತ್ತು ಮಲ್ಟಿ ಮಾಡಲ್ ಸಂಪರ್ಕಕ್ಕೆ ಒತ್ತು ನೀಡಲಾಗಿದೆ

ಸರಕು ಕಾರಿಡಾರ್ ಗಳಂತೆಯೇ ಆರ್ಥಿಕ ಕಾರಿಡಾರ್, ರಕ್ಷಣಾ ಕಾರಿಡಾರ್, ತಂತ್ರಜ್ಞಾನ ಕ್ಲಸ್ಟರ್ ಗಳನ್ನು ಇಂದು ಉದ್ಯಮಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಗೆಳೆಯರೇ, ಭಾರತದಲ್ಲಿ ಸಾರ್ವಜನಿಕರಿಗೆ ಮತ್ತು ಕೈಗಾರಿಕೆಗಳಿಗೆ ಉತ್ತಮ ಮೂಲಸೌಕರ್ಯ ಸೃಷ್ಟಿಸಲಾಗಿದೆ ಎಂಬುದು ವಿಶ್ವದ ಗಮನಕ್ಕೆ ಬಂದರೆ ಅದರಿಂದ ಮತ್ತೊಂದು ಸಕಾರಾತ್ಮಕ ಪರಿಣಾಮವಾಗಲಿದೆ. ಇದರ ಪರಿಣಾಮಗಳಿಂದಾಗಿ ಭಾರತದಲ್ಲಿ ದಾಖಲೆಯ ಎಫ್ ಡಿಐ ಹರಿದು ಬಂದಿರುವುದು ಇದರ ಪರಿಣಾಮವಾಗಿದ್ದು, ಭಾರತದ ವಿದೇಶಿ ವಿನಿಮಯ ಕೂಡ ಬೆಳವಣಿಗೆಯಾಗುತ್ತಿದೆ ಮತ್ತು ಭಾರತದ ಬಗ್ಗೆ ಜಗತ್ತಿನಲ್ಲಿ ಹೆಚ್ಚಿನ ವಿಶ್ವಾಸ ಬೆಳೆಯುತ್ತಿದೆ. ಭಾರತದಲ್ಲಿನ ಜಪಾನ್ ರಾಯಭಾರಿ ಶ್ರೀ ಸುಜುಕಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜಪಾನ್ ಮತ್ತು ಅದರ ಜನ ಸದಾ ಭಾರತದ ಪಾಲುದಾರರಾಗಿದ್ದು, ಭಾರತದ ಅಭಿವೃದ್ಧಿಗಾಥೆಯಲ್ಲಿ ಅವರು ವಿಶ್ವಾಸಾರ್ಹ ಸ್ನೇಹಿತರಾಗಿದ್ದಾರೆ. ಅಲ್ಲದೆ ಜಪಾನ್, ಪೂರ್ವ ನಿರ್ದಿಷ್ಟ ಸರಕು ಕಾರಿಡಾರ್ ನಿರ್ಮಾಣದಲ್ಲಿ ಭಾರತಕ್ಕೆ ಸಂಪೂರ್ಣ ತಾಂತ್ರಿಕ ನೆರವು ಮತ್ತು ಆರ್ಥಿಕ ಸಹಕಾರವನ್ನು ಒದಗಿಸಿದೆ. ಇದನ್ನು ನಾವು ಗುರುತಿಸುತ್ತೇವೆ ಮತ್ತು ಅದಕ್ಕಾಗಿ ಜಪಾನ್ ಮತ್ತು ದೇಶದ ಜನರಿಗೆ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಮಿತ್ರರೇ,

ಸಾರ್ವಜನಿಕರು, ಉದ್ಯಮ ಮತ್ತು ಹೂಡಿಕೆ ನಡುವಿನ ಸಮನ್ವಯ ಸಾಧಿಸಲಾಗಿದ್ದು, ಭಾರತೀಯ ರೈಲ್ವೆಯಲ್ಲಿ ಅದನ್ನು ನಿರಂತರವಾಗಿ ಆಧುನೀಕರಣಗೊಳಿಸಲಾಗುತ್ತಿದೆ. ರೈಲ್ವೆ ಪ್ರಯಾಣಿಕರು ಎದುರಿಸಿರುವ ಅನುಭವವನ್ನು ಯಾರು ಮರೆಯಲು ಸಾಧ್ಯ ? ನಾವು ಅಂತಹ ಕಷ್ಟಗಳಿಗೆ ಸಾಕ್ಷಿಯಾಗಿದ್ದೇವೆ. ರೈಲ್ವೆ ಟಿಕೆಟ್ ಕಾಯ್ದಿರಿಸಿದ ನಂತರ ಪ್ರಯಾಣ ಮುಕ್ತಾಯವಾಗುವವರೆಗೆ  ದೂರುಗಳ ಸರಣಿಯೇ ಇರುತ್ತಿತ್ತು. ಸ್ವಚ್ಛತೆಗೆ, ಸಕಾಲದಲ್ಲಿ ರೈಲುಗಳ ಸಂಚಾರ, ಸೇವೆ, ಭದ್ರತೆ ಅಥವಾ ಸೌಕರ್ಯ ಮಾನವರಹಿತ ಗೇಟ್ ಗಳ ನಿರ್ಮೂಲನೆ ಮತ್ತು ಎಲ್ಲಾ ಹಂತಗಳಲ್ಲಿ ರೈಲ್ವೆ ಸೇವೆಗಳ ಸುಧಾರಣೆ, ಬೇಡಿಕೆ ಸೇರಿದಂತೆ ಹಲವು ಬೇಡಿಕೆಗಳು ಸದಾ ಇರುತ್ತಿದ್ದವು. ಕಳೆದ ಕೆಲವಾರು ವರ್ಷಗಳಿಂದ ಹಲವು ಮಹತ್ವದ ಬದಲಾವಣೆಗಳ ಮೂಲಕ ಹೊಸತನ ತರಲಾಗಿದೆ. ಅದು ನಿಲ್ದಾಣದಿಂದ ಕಂಪಾರ್ಟ್ ಮೆಂಟ್ ಗಳವರೆಗೆ ಸ್ವಚ್ಛಗೆಯದ್ದಾಗಿರಬಹುದು ಅಥವಾ ಜೈವಿಕ ಶೌಚಾಲಯಗಳಾಗಿರಬಹುದು ಅಥವಾ ಆಹಾರ ಮತ್ತು ಪಾನೀಯ ಗುಣಮಟ್ಟದಲ್ಲಿ ಸುಧಾರಣೆಯಾಗಿರಬಹುದು ಅಥವಾ ಆಧುನಿಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯಾಗಿರಬಹುದು ಅಥವಾ ತೇಜಸ್ ಎಕ್ಸ್ ಪ್ರೆಸ್ ಅಥವಾ ವಂದೇ ಭಾರತ್ ಎಕ್ಸ್ ಪ್ರೆಸ್ ಅಥವಾ ವಿಸ್ತಾ ಡೋಮ್ ಕೋಚ್ ಗಳದ್ದಾಗಿರಬಹುದು. ಒಟ್ಟಾರೆ ಭಾರತೀಯ ರೈಲ್ವೆ ಕ್ಷಿಪ್ರವಾಗಿ ಆಧುನೀಕರಣಗೊಳ್ಳುತ್ತಿದೆ ಮತ್ತು ಭಾರತವನ್ನು ಅತ್ಯಂತ ಕ್ಷಿಪ್ರಗತಿಯಲ್ಲಿ ಮುನ್ನಡೆಸಿಕೊಂಡು ಹೋಗುತ್ತಿದೆ.

ಮಿತ್ರರೇ,

ಕಳೆದ ಆರು ವರ್ಷಗಳಲ್ಲಿ ಹೊಸ ರೈಲು ಮಾರ್ಗಗಳಿಗೆ, ವಿಸ್ತರಣೆಗೆ ಮತ್ತು ರೈಲು ಮಾರ್ಗಗಳ ವಿದ್ಯುದೀಕರಣಕ್ಕೆ ಹಿಂದೆಂದೂ ವಿನಿಯೋಗಿಸದಷ್ಟು ಹಣವನ್ನು ಹೂಡಿಕೆ ಮಾಡಲಾಗಿದೆ. ಭಾರತೀಯ ರೈಲ್ವೆಯ ವ್ಯಾಪ್ತಿ ಮತ್ತು ವೇಗವನ್ನು ಹೆಚ್ಚಳ ಮಾಡಲಾಗಿದ್ದು, ರೈಲು ಸಂಪರ್ಕಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಈಶಾನ್ಯ ರಾಜ್ಯಗಳ ಎಲ್ಲ ರಾಜಧಾನಿಗಳಿಗೂ ರೈಲ್ವೆ ಸಂಪರ್ಕ ಒದಗಿಸುವ ದಿನಗಳು ದೂರವಿಲ್ಲ. ಭಾರತದಲ್ಲಿ ಇಂದು ಸೆಮಿ ಹೈಸ್ಪೀಡ್ ರೈಲುಗಳು ಸಂಚಾರ ಮಾಡುತ್ತಿವೆ. ಆಧುನಿಕ ತಂತ್ರಜ್ಞಾನದೊಂದಿಗೆ ಉತ್ತಮ ಮಾರ್ಗಗಳನ್ನು ಅಳವಡಿಸಿ, ಅವುಗಳ ಮೇಲೆ ಹೈಸ್ಪೀಡ್ ರೈಲುಗಳನ್ನು ಓಡಿಸುವ ನಿಟ್ಟಿನಲ್ಲಿ ಭಾರತ ಕಾರ್ಯೋನ್ಮುಖವಾಗಿದೆ. ಇಂದು ಭಾರತೀಯ ರೈಲ್ವೆ, ಮೇಕ್ ಇನ್ ಇಂಡಿಯಾ ಮತ್ತು ಉತ್ಕೃಷ್ಟ ಇಂಜಿನಿಯರಿಂಗ್ ಗೆ ಒಂದು ಉದಾಹರಣೆಯಾಗಿದೆ. ರೈಲ್ವೆ ಅಭಿವೃದ್ಧಿ ಇದೇ ವೇಗದಲ್ಲಿ ಮುಂದುವರಿಯಲಿದೆ ಎಂಬ ವಿಶ್ವಾಸ ತಮಗಿದೆ ಮತ್ತು ಭಾರತದ ಪ್ರಗತಿಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವುದನ್ನು ಮುಂದುವರಿಸಲಿದೆ. ರೀತಿಯಲ್ಲಿ ದೇಶಕ್ಕೆ ಸೇವೆ ನೀಡುತ್ತಿರುವ ಭಾರತೀಯ ರೈಲ್ವೆಗೆ ನನ್ನ ಶುಭಾಶಯಗಳು. ಕೊರೊನಾ ಸಮಯದಲ್ಲಿ ನಮ್ಮ ರೈಲ್ವೆ ಸಹೋದ್ಯೋಗಿಗಳು ಕಾರ್ಯನಿರ್ವಹಿಸಿದ ರೀತಿ, ಕಾರ್ಮಿಕರನ್ನು ಅವರ ತವರಿಗೆ ಕರೆದೊಯ್ದ ಬಗೆ ಅನನ್ಯ. ಜನರಿಂದ ನಿಮಗೆ ಹೆಚ್ಚಿನ ಆಶೀರ್ವಾದ ದೊರೆತಿದೆ. ದೇಶದ ಎಲ್ಲ ಜನರ ಆಶೀರ್ವಾದ ಮತ್ತು ಮಮತೆ ಪ್ರತಿಯೊಬ್ಬ ರೈಲ್ವೆ ಸಿಬ್ಬಂದಿಯ ಮೇಲೆ ಇದ್ದು, ಅದು ಮುಂದುವರಿಯುತ್ತದೆ ಎಂಬ ಬಯಕೆ ನನ್ನದು.

ಮತ್ತೊಮ್ಮೆ ಪೂರ್ವ ನಿರ್ದಿಷ್ಟ ಸರಕು ಕಾರಿಡಾರ್ ಗಾಗಿ ನಾನು ದೇಶದ ಜನರನ್ನು ಅಭಿನಂದಿಸುತ್ತೇನೆ. ತುಂಬಾ ತುಂಬಾ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿಗಳ ಭಾಷಣದ ಯಥಾವತ್ ಅನುವಾದವಲ್ಲಅವರು ಮೂಲತಃ ಹಿಂದಿಯಲ್ಲಿ ಭಾಷಣ ಮಾಡಿದರು.

***



(Release ID: 1687566) Visitor Counter : 200