ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ

ದೇಶದಲ್ಲಿ ಪಕ್ಷಿ ಜ್ವರದ ಸ್ಥಿತಿಗತಿ

Posted On: 07 JAN 2021 7:09PM by PIB Bengaluru

ಇತ್ತೀಚೆಗೆ ಕೇರಳ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಕೋಳಿ, ಕಾಗೆಗಳು, ವಲಸೆ ಹಕ್ಕಿಗಳ ಅಸಹಜ ಸಾವಿನ ಹಿನ್ನೆಲೆಯಲ್ಲಿ ಕೇಂದ್ರ ಪಶು ಸಂಗೋಪನೆ ಮತ್ತು ಡೈರಿ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಪಕ್ಷಿ ಜ್ವರದ ಸ್ಥಿತಿಗತಿ ಅಧ್ಯಯನ, ನಿಯಂತ್ರಣ ಮತ್ತು ತಡೆಗಟ್ಟುವ ಕುರಿತು ಸೂಕ್ತ ನಿರ್ದೇಶನ ನೀಡುವ ಸಲುವಾಗಿ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ

ಪ್ರಸ್ತುತ ನಾಲ್ಕು ರಾಜ್ಯಗಳಲ್ಲಿ ಮಾತ್ರ ರೋಗ [ಕೇರಳ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶ] ಖಚಿತಪಟ್ಟಿದೆ. ರೋಗ ಕಂಡು ಬಂದಿರುವ ಕೇರಳದ ಜಿಲ್ಲೆಗಳಲ್ಲಿ ಕೋಳಿಗಳ ಸಾಮೂಹಿಕ ಹತ್ಯೆ ಕಾರ್ಯಾಚರಣೆ ಪ್ರಗತಿಯಲ್ಲಿದೆರೋಗ ಹರಡಿರುವ ಪ್ರದೇಶಗಳ ಜಲ ಮೂಲಗಳು, ಜೀವಂತ ಕೋಳಿ, ಪಕ್ಷಿಗಳ ಮಾರುಕಟ್ಟೆ, ಮೃಗಾಲಯ, ಕುಕ್ಕಟ ಸಾಕಾಣಿಕೆ ಕೇಂದ್ರಗಳಲ್ಲಿ ಕಣ್ಗಾವಲು ಹೆಚ್ಚಿಸುವಂತೆ ಸೂಚಿಸಲಾಗಿದೆ. ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿ ಕೋಳಿಗಳ ಮೃತದೇಹದ ಸೂಕ್ತ ವಿಲೇವಾರಿ, ಜೈವಿಕ ಸುರಕ್ಷತೆ ಬಲಪಡಿಸುವ ಜತೆಗೆ ರೋಗ ಹರಡದಂತೆ ಬೇರೆ ರಾಜ್ಯಗಳಿಗೂ ಸಹ ಸೂಕ್ತ ಮುನ್ನೆಚ್ಚರಿಕೆ ನೀಡಲಾಗಿದೆ. ಸಾಮೂಹಿಕ ನಾಶ ಕಾರ್ಯಾಚರಣೆಗೆ ಅಗತ್ಯವಾಗಿರುವ ಸುರಕ್ಷಿತ ಸಾಧನಗಳಾದ ಪಿಪಿಇ ಕಿಟ್ ಗಳು, ಮತ್ತಿತರ ಅಗತ್ಯ ಪರಿಕರಗಳು ಲಭ್ಯವಿದೆಯೇ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ.

ರೋಗ ಹರಡಿರುವ ಪ್ರದೇಶಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ, ನಿಯೋಜಿತ ಪ್ರಯೋಗಾಲಯಗಳಿಗೆ [ ಆರ್.ಡಿ.ಡಿ.ಎಲ್/ಸಿಡಿಡಿಎಲ್/ಐಸಿಎಅರ್/ಎನ್..ಎಚ್.ಎಸ್..ಡಿ] ಕಳುಹಿಸುವ ಜತೆಗೆ ರಾಜ್ಯಗಳ ಪಶು ಸಂಗೋಪನಾ ಇಲಾಖೆಗಳು ಆರೋಗ್ಯ ಪ್ರಾಧಿಕಾರಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸುವ ಜತೆಗೆ ರೋಗದ ಸ್ಥಿತಿಗತಿ ಕುರಿತು ಸೂಕ್ತ ನಿಗಾ ಇಡಬೇಕು. ರೋಗ ಮಾನವನಿಗೆ ವ್ಯಾಪಿಸದಂತೆ ಸೂಕ್ತ ಪ್ರತಿಬಂಧಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ಮಾಡಲಾಗಿದೆ.

ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ರಾಜ್ಯದ ಅರಣ್ಯ ಇಲಾಖೆಗಳು ಎಚ್ಚರದಿಂದಿರಬೇಕು. ಜತೆಗೆ ದೇಶೀಯವಲ್ಲದ ಪಕ್ಷಿಗಳಲ್ಲಿ ಯಾವುದೇ ಅಸಮಾನ್ಯ ಮರಣಗಳು ಸಂಭವಿಸಿದಲ್ಲಿ ತಕ್ಷಣವೇ ವರದಿ ಮಾಡುವ ಕುರಿತು ಅರಣ್ಯ ಇಲಾಖೆಯ ಜತೆ ಸಮನ್ವಯದಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ.

ಕಾಡಿನ ಪಕ್ಷಿಗಳು, ವಲಸೆ ಪಕ್ಷಿಗಳು ಸೇರಿದಂತೆ ಪಕ್ಷಿಗಳ ಅಸಮಾನ್ಯ ಮರಣದ ಬಗ್ಗೆ ಕಣ್ಗಾವಲು ಹೆಚ್ಚಿಸಬೇಕು. ಜತೆಗೆ ಸೋಂಕು ಹರಡಿರುವ ರಾಜ್ಯಗಳಿಗೆ ಸೂಕ್ತ ಸಲಹೆಗಳನ್ನು ನೀಡಲು ಕೇಂದ್ರೀಯ ಮಟ್ಟದ ನಿಯಂತ್ರಣ ಕೊಠಡಿ ಸ್ಥಾಪಿಸುವ, ರೋಗ ನಿಯಂತ್ರಣ, ತಡೆಗಟ್ಟಲು, ರಾಜ್ಯ ಸರ್ಕಾರಗಳ ಜತೆ ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಕುರಿತಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸೂಚಿಸಲಾಗಿದೆ. ರೋಗ ಹರಡಿರುವ ಕೇರಳ, ಹರಿಯಾಣ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ, ಅಧ್ಯಯನ, ನಿಯಂತ್ರಣ ಮತ್ತ ತನಿಖೆ ನಡೆಸುವ ಉದ್ದೇಶದಿಂದ ಎರಡು ಅಧ್ಯಯನ ತಂಡಗಳನ್ನು ಕಳುಹಿಸಲಾಗಿದೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ [ಎನ್.ಡಿ.ಎಂ.] ಸಹ ಇಂದು ಎಲ್ಲಾ ರಾಜ್ಯಗಳ ಪಶು ಸಂಗೋಪನೆ ಇಲಾಖೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳ ಜತೆ ಸಭೆ ನಡೆಸಿ ವಸ್ತುಸ್ಥಿತಿ ಮಾಹಿತಿ ಕಲೆ ಹಾಕಿದೆ. ಜತೆಗೆ ಸಂತ್ರಸ್ತ ಪ್ರದೇಶಗಳಲ್ಲಿ ಕಣ್ಗಾವಲು ವ್ಯವಸ್ಥೆಯನ್ನು ತೀವ್ರಗೊಳಿಸುವಂತೆ ನಿರ್ದೇಶನ ನೀಡಲಾಗಿದೆ.

ಕುಕ್ಕುಟ ಸಾಗಾಣಿಕೆ ಮಾಡುವವರು ಮತ್ತು ಜನ ಸಾಮಾನ್ಯರಿಗೆ [ಮೊಟ್ಟೆ ಮತ್ತು ಕೋಳಿ ಬಳಸುವ ಗ್ರಾಹಕರು] ರೋಗದ ಬಗ್ಗೆ ತಿಳುವಳಿಕೆ ನೀಡುವುದು ಅತ್ಯಂತ ಪ್ರಮುಖವಾಗಿದೆ. ವದಂತಿಗಳಿಂದ ಪ್ರಭಾವಿತರಾಗುವುದನ್ನು ತಗ್ಗಿಸಲು, ಸೂಕ್ತ ರೀತಿಯಲ್ಲಿ ಬೇಯಿಸಿ ಕೋಳಿ ಉತ್ಪನ್ನಗಳನ್ನು ಸೇವಿಸುವ ಕುರಿತಂತೆಯೂ ಅಗತ್ಯ ಜಾಗೃತಿ ನೀಡುವಂತೆ ಸಲಹೆ ಮಾಡಲಾಗಿದೆ.

***


(Release ID: 1687005) Visitor Counter : 112