ಕಲ್ಲಿದ್ದಲು ಸಚಿವಾಲಯ

ಕಲ್ಲಿದ್ದಲು ಸಚಿವಾಲಯದ ವಾರ್ಷಿಕ ಪ್ರಗತಿ


ಕಲ್ಲಿದ್ದಲು ವಲಯದಲ್ಲಿ ಪಾರದರ್ಶಕ ವ್ಯಾಪಾರಕ್ಕೆ ಪೂರಕ ಸುಧಾರಣೆಗಳ ಪರಿಚಯ

ನವೆಂಬರ್ 2020ರಲ್ಲಿ, 19 ಕಲ್ಲಿದ್ದಲು ಗಣಿ ನಿಕ್ಷೇಪಗಳ ಯಶಸ್ವಿ ವಾಣಿಜ್ಯ ಹರಾಜು

ಬದಲಿ ಆಮದು ಸಾಧನೆ ನಿಟ್ಟಿನಲ್ಲಿ ಪಾಲುದಾರರೊಂದಿಗೆ ಸಚಿವಾಲಯ ಸಕ್ರಿಯ ಕಾರ್ಯನಿರ್ವಹಣೆ

ಒಂದು ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ನಿಟ್ಟಿನಲ್ಲಿ ಪ್ರಗತಿ

ಮೊದಲ ಮೈಲು ಸಂಪರ್ಕ: ಕಲ್ಲಿದ್ದಲು ಗಣಿ ಪ್ರದೇಶಗಳಲ್ಲಿ ಸುಲಭ ಜೀವನ

ವೈವಿಧ್ಯೀಕರಣ: ಎನ್ಎಲ್ ಸಿಐಎಲ್ ನಿಂದ ಹೊಸ ವಲಯಗಳಲ್ಲಿ ಹೂಡಿಕೆ

ಸಿಬಿಎಂ ಶೋಧನೆ, ಮೇಲ್ಮೈ ಕಲ್ಲಿದ್ದಲು ಅನಿಲೀಕರಣ ಸೇರಿ ಹಲವು ಹಸಿರು ಕ್ರಮಗಳ ಪರಿಚಯ

Posted On: 31 DEC 2020 2:56PM by PIB Bengaluru

ಕಲ್ಲಿದ್ದಲು ಸುಧಾರಣೆ - ಹಿನ್ನೆಲೆ

ಭಾರತ ಸದ್ಯ ಸುಮಾರು 729 ಮಿಲಿಯನ್ ಟನ್ ಕಲ್ಲಿದ್ದಲನ್ನು ಉತ್ಪಾದಿಸುತ್ತಿದೆ. ಆದರೆ ದೇಶೀಯ ಉತ್ಪಾದನೆಯಿಂದ ನಮ್ಮ ದೇಶದಲ್ಲಿ ಅಗತ್ಯವಿರುವಷ್ಟು ಕಲ್ಲಿದ್ದಲು ಪೂರೈಕೆ ಮಾಡಲಾಗುತ್ತಿಲ್ಲ ಎಂಬುದು ವಾಸ್ತವ ಸಂಗತಿ. ಭಾರತ ಕಳೆದ ವರ್ಷ ಸುಮಾರು 247 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿತ್ತು ಮತ್ತು 1.58 ಲಕ್ಷ ಕೋಟಿ ವಿದೇಶಿ ವಿನಿಮಯವನ್ನು ಖರ್ಚು ಮಾಡಿತ್ತು. ಭಾರತ ವಿಶ್ವದಲ್ಲಿ ಕಲ್ಲಿದ್ದಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದರೂ, ಕಲ್ಲಿದ್ದಲು ನಿಕ್ಷೇಪಗಳ ವಿಚಾರದಲ್ಲಿ 5ನೇ ಅತಿದೊಡ್ಡ ರಾಷ್ಟ್ರವಾಗಿದೆ. ನಮ್ಮಲ್ಲಿನ ಕಲ್ಲಿದ್ದಲು ನಿಕ್ಷೇಪಗಳು ಕನಿಷ್ಠ 100 ವರ್ಷಕ್ಕೂ ಮಿಗಿಲಾಗಿ ಲಭ್ಯವಾಗಲಿದ್ದು, ದೇಶ ಸ್ಥಳೀಯ ಕೈಗಾರಿಕೆಗಳು ಮತ್ತು ಅಭಿವೃದ್ಧಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಕಲ್ಲಿದ್ದಲನ್ನು ಉತ್ಪಾದನೆ ಮಾಡಲು ಸಾಧ್ಯವಾಗುತ್ತಿಲ್ಲ.

ಭಾರತ ಸರ್ಕಾರ ದೇಶದ ಆಶೋತ್ತರ ವಲಯಗಳಲ್ಲಿ ಕ್ಷಿಪ್ರ ಆರ್ಥಿಕ ಅಭಿವೃದ್ಧಿಯನ್ನು ತರುವ ಗುರಿ ಹೊಂದಿದೆ. ರಾಜ್ಯಗಳು ಸಂಪನ್ಮೂಲಗಳ ಸಂಪದ್ಭರಿತವಾಗಿದ್ದು, ರಾಜ್ಯಗಳಲ್ಲಿ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿಯನ್ನು ಕೈಗೊಳ್ಳುವುದು ಮಹತ್ವದ್ದಾಗಿದೆ. ಕಲ್ಲಿದ್ದಲು ನಿಕ್ಷೇಪಗಳ ವಾಣಿಜ್ಯ ಹರಾಜಿನ ಜೊತೆಗೆ ಭಾರತ ಪಾರದರ್ಶಕ ಕ್ರಮಗಳನ್ನು ಕೈಗೊಂಡಿದ್ದು, ದೇಶದಲ್ಲಿ ಕಲ್ಲಿದ್ದಲು ಪೂರೈಕೆ ಮತ್ತು ಬೇಡಿಕೆ ನಡುವಿನ ಅಂತರವನ್ನು ಸರಿದೂಗಿಸಲು ಒಂದು ಉತ್ತಮ ಅವಕಾಶ ಲಭ್ಯವಾಗಿದೆ. ಇದು ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ಉತ್ತಮ ಅವಕಾಶವಷ್ಟೇ ಅಲ್ಲದೆ ಪ್ರತಿ ವರ್ಷ ಸುಮಾರು 20,000 ಕೋಟಿ ರೂ.ಗಳಿಂದ 30,000 ಕೋಟಿ ರೂ.ಗಳಷ್ಟು ಅಮೂಲ್ಯ ವಿದೇಶಿ ವಿನಿಮಯವನ್ನು ಉಳಿತಾಯ ಮಾಡಬಹುದಾಗಿದೆ.

ಸುಧಾರಣೆಗಳಿಂದಾಗಿ ಕಲ್ಲಿದ್ದಲು ವಲಯದ ಮೇಲೆ ಅವಲಂಬಿತವಾಗಿರುವ ಇತರೆ ವಲಯಗಳ ಮೇಲೂ ಪರಿಣಾಮಗಳಾಗಲಿವೆ. ಕಲ್ಲಿದ್ದಲು ಉತ್ಪಾದನೆ ಹೆಚ್ಚಳದ ಸಕಾರಾತ್ಮಕ ಪರಿಣಾಮದಿಂದಾಗಿ ಉಕ್ಕು, ಅಲ್ಯುಮಿನಿಯಂ ರಸಗೊಬ್ಬರ ಮತ್ತು ಸಿಮೆಂಟ್ ಉತ್ಪಾದನೆಯೂ ಸಹ ಹೆಚ್ಚಾಗಿದೆ.

  1. ಪಾರದರ್ಶಕತೆ ಉಳಿಸಿಕೊಂಡು ಕಲ್ಲಿದ್ದಲು ವಲಯದಲ್ಲಿ ವ್ಯಾಪಾರಕ್ಕೆ ಪೂರಕ ವಾತಾವರಣದ ಜೊತೆಗೆ ಸುಧಾರಣೆಗಳ ಪರಿಚಯಕಲ್ಲಿದ್ದಲು ವಾಣಿಜ್ಯ ಗಣಿಗಾರಿಕೆಗೆ 2020ರಲ್ಲಿ ಉತ್ತೇಜನ

ಕಲ್ಲಿದ್ದಲು ವಲಯದಲ್ಲಿ ಪಾರದರ್ಶಕತೆ ಉಳಿಸಿಕೊಂಡು ಸರಳೀಕರಣಗೊಳಿಸಲು ಸರ್ಕಾರ ನೀತಿ ಆಯೋಗದ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು(ಜೂನ್ 2019)ರಲ್ಲಿ ರಚಿಸಿತ್ತು. ಎಚ್ ಎಲ್ ಸಿ ಹಲವು ಪ್ರಮುಖ ಶಿಫಾರಸ್ಸುಗಳನ್ನು(ಅಕ್ಟೋಬರ್ 2019)ರಲ್ಲಿ ಮಾಡಿ, ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಗೆ ಶಿಫಾರಸ್ಸು ಮಾಡಿತ್ತು. ಜೊತೆಗೆ ಹಿಂದೆ ಕಲ್ಲಿದ್ದಲನ್ನು ಆದಾಯದ ಮೂಲ ಎಂದು ಪರಿಗಣಿಸಲಾಗಿರಲಿಲ್ಲ ಮತ್ತು ಅದನ್ನು ಆರ್ಥಿಕ ಪ್ರಗತಿಗೆ ಪೂರಕ ಎಂದು ಪರಿಗಣಿಸಲಾಗಿರಲಿಲ್ಲ. ಆದರೆ ವಿಚಾರದಲ್ಲಿ ಮಹತ್ವದ ಬದಲಾವಣೆಗಳನ್ನು ತರಲು ನಿರ್ಧರಿಸಲಾಯಿತು. ಸರ್ಕಾರ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದ ಕಲ್ಲಿದ್ದಲು ಲಭ್ಯವಾಗುವಂತೆ ಮಾಡಲು ಗರಿಷ್ಠ ಉತ್ಪಾದನೆಯನ್ನು ಕೈಗೊಳ್ಳಲಾಯಿತು. ಅದರಂತೆ ಬದಲಾದ ಆಯಾಮಗಳಿಗೆ ಅನುಗುಣವಾಗಿ ಧ್ಯೇಯೋದ್ದೇಶಗಳ ಈಡೇರಿಕೆಗೆ ಅಗತ್ಯ ಶಿಫಾರಸ್ಸುಗಳನ್ನು ಮಾಡಿತ್ತು. ಸರ್ಕಾರ ಶಿಫಾರಸ್ಸುಗಳನ್ನು ಕೆಲವು ಬದಲಾವಣೆಗಳೊಂದಿಗೆ ಒಪ್ಪಿಕೊಂಡಿತು ಮತ್ತು ಹಲವು ಕ್ರಮಗಳನ್ನು ಜಾರಿಗೊಳಿಸಿತು.

ಖನಿಜ ಕಾನೂನುಗಳ(ತಿದ್ದುಪಡಿ) ಕಾಯ್ದೆ 2020 ಮೂಲಕ ಸಿಎಂಎಸ್ ಪಿ ಕಾಯ್ದೆ ಮತ್ತು ಎಂಎಂಡಿಆರ್ ಕಾಯ್ದೆಯ ಕೆಲವು ಅಂಶಗಳನ್ನು ತಿದ್ದುಪಡಿ ತಂದು ವ್ಯಾಪಾರಕ್ಕೆ ಪೂರಕ ವಾತಾವರಣ, ಕೆಲವು ನಿಭಂದನೆಗಳಲ್ಲಿನ ಪುನರುಕ್ತಿ ತೆಗೆದು ಹಾಕುವುದು ಮತ್ತು ಹಂಚಿಕೆಯಲ್ಲಿ ಸರಳೀಕರಣ ಜಾರಿಗೊಳಿಸಲಾಯಿತು. ತಿದ್ದುಪಡಿಯಿಂದಾಗಿ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಯಲ್ಲಿ ಸಂಭಾವ್ಯ ಪರವಾನಗಿ ಕಮ್ ಗಣಿ ಗುತ್ತಿಗೆಗೆ ಅವಕಾಶ ನೀಡಲಾಯಿತು. ಅರ್ಹತಾ ಷರತ್ತುಗಳ ವಿಶ್ಲೇಷಣೆಗೆ ನಿರ್ಬಂಧಗಳ ಸಂಭವನೀಯತೆಯನ್ನು ತೆಗೆದು ಹಾಕಿ, ಮೂಲಕ ಕಲ್ಲಿದ್ದಲು ಗಣಿ ಹರಾಜುಗಳಲ್ಲಿ ಹೆಚ್ಚಿನ ಜನ ಭಾಗವಹಿಸಲು ಅವಕಾಶ ನೀಡಲಾಯಿತು ಮತ್ತು ಕೇಂದ್ರ ಸರ್ಕಾರಕ್ಕೆ ಹಂಚಿಕೆ ಉದ್ದೇಶವನ್ನು ನಿರ್ಧರಿಸಲು ಸರಳ ಅವಕಾಶ ಮಾಡಿಕೊಡಲಾಯಿತು. ಕೆಲವು ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ಭಾಗವಹಿಸಲು ಇದ್ದ ಅರ್ಹತಾ ನಿರ್ಬಂಧಗಳನ್ನು ತೆಗೆದು ಹಾಕಲಾಯಿತು. ಕೇಂದ್ರ ಸರ್ಕಾರ ಮಾಡಿದ ಕಲ್ಲಿದ್ದಲು ನಿಕ್ಷೇಪಗಳ ಹರಾಜು  ಮತ್ತು ಹಂಚಿಕೆಯಲ್ಲಿ ಕೆಲವೊಂದು ಖನಿಜ ವಿನಾಯಿತಿಗಳನ್ನು ನೀಡಲು ಇದ್ದ ಅಗತ್ಯತೆಗಳನ್ನು ತೆಗೆದು ಹಾಕಲಾಯಿತು ಮತ್ತು ಕುರಿತಂತೆ ತಿದ್ದುಪಡಿ ಸ್ಪಷ್ಟನೆಗಳನ್ನು ಹೊರಡಿಸಲಾಗಿದೆ.

ಕಾನೂನಿನಲ್ಲಿ ಬದಲಾವಣೆಯ ಜೊತೆಗೆ 2020ರಲ್ಲಿ ಹರಾಜು ಪ್ರಕ್ರಿಯೆ ಮತ್ತು ವಿಧಾನದಲ್ಲಿ ಸಾಕಷ್ಟು ಸರಳೀಕರಣ ಜಾರಿ. ಮಾರಾಟ ಮತ್ತು ಕಲ್ಲಿದ್ದಲು ಬಳಕೆಗೆ ಯಾವುದೇ ನಿರ್ಬಂಧ ವಿಧಿಸಿದೆ ಕಲ್ಲಿದ್ದಲು ನಿಕ್ಷೇಪಗಳ ಹರಾಜು ಮಾಡಲು ನಿರ್ಧರಿಸಲಾಯಿತು. ಜೊತೆಗೆ ಕಾನೂನಿನ ಅನ್ವಯ ಕಲ್ಲಿದ್ದಲು ರಫ್ತಿಗೂ ಅವಕಾಶ ನೀಡಲಾಯಿತು. ಕೋಲ್ ಬೆಡ್ ಮಿಥೇನ್(ಸಿಬಿಎಂ) ಬಳಕೆ ಹಕ್ಕು ಮತ್ತು ಸುಗಮ ಕಾರ್ಯಾಚರಣೆಗೆ ಉಪ ಖನಿಜಗಳನ್ನು ಒದಗಿಸಲಾಯಿತು. ತಮ್ಮ ಅಗತ್ಯಕ್ಕೆ ತಕ್ಕಂತೆ, ಮಾರುಕಟ್ಟೆ ಸ್ಥಿತಿಗತಿ ಆಧರಿಸಿ ಕಲ್ಲಿದ್ದಲು ಉತ್ಪಾದನೆಯನ್ನು ನಿರ್ವಹಿಸಲು ಬಿಡ್ಡರ್ ಗಳಿಗೆ ಸಹಜ ಸರಳೀಕರಣಗೊಳಿಸಲಾಯಿತು. ಭಾಗಶಃ ಗಣಿಗಳ ಶೋಧ ನಂತರ ಅದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಕಲ್ಲಿದ್ದಲು ಗಣಿಗಳ ಹರಾಜಿನಲ್ಲಿ ಆದಾಯ ಹಂಚಿಕೆ ಕಾರ್ಯತಂತ್ರ ಜಾರಿಗೊಳಿಸಿದ್ದು, ಮೂಲಕ ಹರಾಜು ಪ್ರಕ್ರಿಯೆಯನ್ನು ಮತ್ತಷ್ಟು ಮಾರುಕಟ್ಟೆ ಸ್ನೇಹಿಯನ್ನಾಗಿ ಮಾಡಲಾಯಿತು. ಕಲ್ಲಿದ್ದಲು ಅನಿಲೀಕರಣದಿಂದಾಗಿ ಹೊಸ ವಾಣಿಜ್ಯ ಗಣಿಗಾರಿಕೆ ಯುಗ ಆರಂಭವಾಯಿತು.

ಕಾನೂನು ಮತ್ತು ನೀತಿಗಳಲ್ಲಿನ ಮೇಲಿನ ಬದಲಾವಣೆಗಳೊಂದಿಗೆ ಜೂನ್ 2020ರಲ್ಲಿ ಗಣಿಗಳ ವಾಣಿಜ್ಯ ಹರಾಜು ಆರಂಭವಾಯಿತು. ಮೊದಲ ಹಂತದಲ್ಲಿ 38 ನಿಕ್ಷೇಪಗಳ ಹರಾಜು ನಿಗದಿಯಾಗಿತ್ತು. 38 ಬ್ಲಾಕ್ ಗಳ ಪೈಕಿ ನವೆಂಬರ್ 2020ರಲ್ಲಿ 19 ನಿಕ್ಷೇಪಗಳ ಹರಾಜು ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿತು. ಕಲ್ಲಿದ್ದಲು ನಿಕ್ಷೇಪಗಳನ್ನು ಶೇ.9.15ರಿಂದ ಶೇ.66.75 ವರೆಗೆ ಆದಾಯ ಹಂಚಿಕೆಯೊಂದಿಗೆ ಯಶಸ್ವಿಯಾಗಿ ನಡೆಸಲಾಯಿತು. ಇಲ್ಲಿ ಗಮನಿಸಲೇಬೇಕಾದ ಮತ್ತೊಂದು ಪ್ರಮುಖ ಅಂಶವೆಂದರೆ ಬಿಡ್ ದಾಖಲೆಯಲ್ಲಿ ಉಲ್ಲೇಖಿಸಲಾದ ಮೂಲ ಮೊತ್ತಕ್ಕೆ ಶೇ.4ರಷ್ಟು ಆದಾಯ ಹಂಚಿಕೆ ನಿಗದಿ ಪಡಿಸಲಾಗಿದೆ. ಒಟ್ಟಾರೆ ಹರಾಜಿನಿಂದಾಗಿ ಸುಮಾರು 6656 ಕೋಟಿ ರೂ.ಗಳಷ್ಟು ವಾರ್ಷಿಕ ಆದಾಯ ಸೃಷ್ಟಿಯಾಗಿದೆ. ಉತ್ಪಾದನೆ ಗರಿಷ್ಠ ಪ್ರಮಾಣದ ಮಟ್ಟ ಅಂದರೆ 51 ಎಂಟಿಪಿಎ ತಲುಪಿದೆ. ಒಟ್ಟು 2020-21ನೇ ಹಣಕಾಸು ವರ್ಷದಲ್ಲಿ ರಾಜ್ಯಗಳು 262 ಕೋಟಿ ರೂ.ಗಳನ್ನು ಸ್ವೀಕರಿಸಲಿವೆ ಮತ್ತು ಕ್ರಮೇಣ ಉಳಿದ 786 ಕೋಟಿ ರೂ.ಗಳನ್ನು ರಾಜ್ಯಗಳು ಬಿಡ್ ದಾಖಲೆಗಳಲ್ಲಿ ಉಲ್ಲೇಖಿಸಲಾದ ಹಂತಗಳನ್ನು ಆಧರಿಸಿ ಪಡೆಯಲಿವೆ.

ರಾಜ್ಯಗಳಿಗೆ ಲಭ್ಯವಾಗುವ ಅಂದಾಜು ಆದಾಯ, ಒಟ್ಟು ಬಂಡವಾಳ ಹೂಡಿಕೆಯ ಅಗತ್ಯ ಮತ್ತು ಒಟ್ಟು ಉದ್ಯೋಗ ಸೃಷ್ಟಿ ಮತ್ತಿತರ ವಿವರಗಳನ್ನು ಸಂಕ್ಷಿಪ್ತ ರೂಪದಲ್ಲಿ ಕೆಳಗಿನಂತೆ ನೀಡಲಾಗಿದೆ

ಕ್ರ.ಸಂ

ರಾಜ್ಯಗಳ ಹೆಸರು

ನಿಕ್ಷೇಪಗಳ ಸಂಖ್ಯೆ

ರಾಯಧನ ಮತ್ತು ತೆರಿಗೆ

(ಕೋಟಿ ರೂ.ಗಳಲ್ಲಿ)

ಆದಾಯ ಹಂಚಿಕೆ

(ಕೋಟಿ ರೂ.ಗಳಲ್ಲಿ)

ಗಣಿಗಳ ಪಿಆರ್ ಸಿ ಆಧರಿಸಿ ವಾರ್ಷಿಕ ಆದಾಯ ಸೃಷ್ಟಿ  (ಕೋಟಿ ರೂ.ಗಳಲ್ಲಿ)

ಪಿಆರ್ ಸಿ(ಎಂಟಿಪಿಎ)

ಅಂದಾಜು ಬಂಡವಾಳ ಹೂಡಿಕೆ (ಕೋಟಿ ರೂ.ಗಳಲ್ಲಿ)

ಅಂದಾಜು ಒಟ್ಟು ಉದ್ಯೋಗ ಸೃಷ್ಟಿ

1

ಛತ್ತೀಸ್ ಗಢ

2

539

323

862

7.20

1,080

9,734

2

ಜಾರ್ಖಂಡ್

5

1,780

910

2,690

20.20

3,030

27,310

3

ಮಧ್ಯಪ್ರದೇಶ

8

1,157

567

1,724

10.85

1,628

14,669

4

ಮಹಾರಾಷ್ಟ್ರ

2

184

137

321

1.80

270

2,434

5

ಒಡಿಶಾ

2

792

267

1,059

11.00

1,650

14,872

ಒಟ್ಟು

 

4,452

2,204

6,656

51.05

7,658

69,019

 

2. ಬದಲಿ ಆಮದು

ಮೇಲಿನ ಹಿನ್ನೆಲೆಯಲ್ಲಿ ಬದಲಿ ಆಮದು ಭಾರತ ಸರ್ಕಾರದ ಸದ್ಯದ ಅಗ್ರ ಆದ್ಯತೆಗಳಲ್ಲಿ ಒಂದಾಗಿದೆ. ಉದ್ದೇಶಕ್ಕಾಗಿ ಅಂತರ ಸಚಿವಾಲಯ ಸಮಿತಿ(ಐಎಂಸಿ)ಅನ್ನು ರಚಿಸಲಾಗಿದೆ. ಆತ್ಮ ನಿರ್ಭರ ಭಾರತ ಗುರಿ ಸಾಧನೆ ನಿಟ್ಟಿನಲ್ಲಿ ಸಚಿವಾಲಯ ಇತರೆ ಪಾಲುದಾರರೊಂದಿಗೆ ಬದಲಿ ಆಮದು ಸಾಧನೆ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಮುಂದುವರಿದಿದೆ. ಕೆಳಗಿನ ಕಾರಣಗಳಿಂದಾಗಿ ಬದಲಿ ಆಮದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

  • 2018-19ರಲ್ಲಿ ಕಲ್ಲಿದ್ದಲು ಆಮದು  235 ಎಂಟಿ ಇತ್ತು, 2019-20ರಲ್ಲಿ ಮತ್ತಷ್ಟು ಏರಿಕೆಯಾಗಿ 247 ಎಂಟಿ ತಲುಪಿತು.
  • ಭಾರೀ ಪ್ರಮಾಣದ ಅಮೂಲ್ಯ ವಿದೇಶಿ ವಿನಿಮಯ ಹರಿವು (2018-19ರಲ್ಲಿ 1.71 ಲಕ್ಷ ಕೋಟಿ ರೂ.)

ಸಿಐಎಲ್ ನಾನಾ ಕಲ್ಲಿದ್ದಲು ಉಪಸಂಸ್ಥೆಗಳಲ್ಲಿ ಸಾರ್ವಕಾಲಿಕ  ದಾಖಲೆಯ 75 ಎಂಟಿ ದಾಸ್ತಾನು ಕಲ್ಲಿದ್ದಲು ಲಭ್ಯತೆ. ಜೊತೆಗೆ ವಿದ್ಯುತ್ ಕೂಡ ಉತ್ಪಾದನೆ.

  • ಎಲ್ಲ ಕಲ್ಲಿದ್ದಲು ಕಂಪನಿಗಳ ಮಹತ್ವಾಕಾಂಕ್ಷೆಯ ಉತ್ಪಾದನಾ ಯೋಜನೆ.

ಅದೃಷ್ಟವೆಂದರೆ ದೇಶದಲ್ಲಿ ಯಥೇಚ್ಛವಾಗಿ ನಾನ್ ಕೋಕಿಂಗ್ ಕೋಲ್ ಲಭ್ಯವಿದೆ ಮತ್ತು ಗ್ರಾಹಕರು ಅತ್ಯಂತ ವಿಶ್ವಾಸದಿಂದ ಕಲ್ಲಿದ್ದಲು ಬದಲಿ ಆಮದಿನ ಬಗ್ಗೆ ಎದುರು ನೋಡಬಹುದು. ಕಲ್ಲಿದ್ದಲು ಬದಲಿ ಆಮದು ಉತ್ತೇಜನಕ್ಕೆ ಅತಿ ದೊಡ್ಡ ಪ್ರಮಾಣದಲ್ಲಿ ದೇಶೀಯ ಕಲ್ಲಿದ್ದಲನ್ನು -ಹರಾಜಿನ ಮೂಲಕ ಒದಗಿಸಲಾಗುತ್ತಿದೆ. ಹಾಗಾಗಿ ಗ್ರಾಹಕರಿಗೆ ಕಲ್ಲಿದ್ದಲು ಆಮದು ಮಾಡಿಕೊಳ್ಳಬೇಕಾದ ಪ್ರಮೇಯ ವಿರುವುದಿಲ್ಲ. ಅಲ್ಲದೆ ಅದಕ್ಕೂ ಮಿಗಿಲಾಗಿ ಸಿಐಎಲ್ ಸಾಧನೆ ಆಧರಿತ ಪ್ರೋತ್ಸಾಹಕರ ಯೋಜನೆ ಹಾಗೂ ವಿನಾಯಿತಿಗಳನ್ನು ನೀಡುತ್ತಿದ್ದು, ಅದರಲ್ಲಿ ಕೋಸ್ಟಲ್ ಟಿಪಿಪಿಗಳು ಸಹ ಸೇರಿವೆ. ಸಾಧನೆ ಆಧರಿತ ಪ್ರೋತ್ಸಾಹಕರ ಶುಲ್ಕಗಳ ಮನ್ನಾ ಜೊತೆಗೆ ಕರಾವಳಿ ಭಾಗದ ಘಟಕಗಳಿಗೆ ಬದಲಿ ಆಮದಿಗೆ ವಿನಾಯಿತಿ ನೀಡಲಾಗುತ್ತಿದ್ದು, ಅವು ಒಟ್ಟಾರೆ ವಾರ್ಷಿಕ ಕಲ್ಲಿದ್ದಲು ಮೌಲ್ಯ ಪಾವತಿಯ ಶೇ.5ಕ್ಕೂ ಅಧಿಕ ಪ್ರಯೋಜನವನ್ನು ಪಡೆಯಬಹುದಾಗಿದೆ. ಬದಲಿ ಆಮದು ಗಾತ್ರವನ್ನು ಹೆಚ್ಚಿಸುವ ಸಲುವಾಗಿ ಎಫ್ಎಸ್ಎ ಅಡಿಯಲ್ಲಿ ಇದ್ದ ಕನಿಷ್ಠ ಬದ್ಧತೆ ಪ್ರಮಾಣದ ಮಿತಿಯನ್ನು ತೆಗೆದು ಹಾಕಲಾಗಿದೆ. ಇದರಿಂದಾಗಿ ಕಲ್ಲಿದ್ದಲು ಉಳಿತಾಯದಿಂದ ಎಫ್ಎಸ್ಎ ಅಡಿಯಲ್ಲಿ ಒಟ್ಟು ಪ್ರಮಾಣದ ಶೇ.15ಕ್ಕೂ ಅಧಿಕ ಉಳಿತಾಯವಾಗುತ್ತಿದ್ದು, ಟಿಪಿಪಿ ಅಡಿಯಲ್ಲಿ ಬದಲಿ ಆಮದು ಪ್ರಮಾಣವನ್ನು ತೆಗೆದು ಹಾಕಲಾಗಿದೆ ಕೆಳಗಿನ ಗ್ರಾಫ್ ನಲ್ಲಿ (ರೇಖಾಚಿತ್ರದಲ್ಲಿ) ಹೇಗೆ ಉತ್ಪಾದನೆ ಹೆಚ್ಚಳದಿಂದಾಗಿ ದೊಡ್ಡ ಪ್ರಮಾಣದಲ್ಲಿ ಆಮದುಗಳನ್ನು ನಿಯಂತ್ರಿಸಲಾಗಿದೆ ಎಂಬುದನ್ನು ಚಿತ್ರಿಸಲಾಗಿದೆ.

https://ci4.googleusercontent.com/proxy/7wluFfQMSw17lMkLK3dqq4sW0LgDzNDjxnoTm74uvHxOjqr_7LoPQmq-5UMaG1du2jJbRCiPoOBw9fcsqo_ycYK5IZlB3UU3f4wygFNxrf0WLyEwaBsGksSx=s0-d-e1-ft#http://static.pib.gov.in/WriteReadData/userfiles/image/image001X77K.jpg

ಮೇಲಿನ ಚಿತ್ರಣದಿಂದ ಕಲ್ಲಿದ್ದಲು ಉತ್ಪಾದನೆ ಹೆಚ್ಚಾಗಿರುವುದರಿಂದ ಆಮದನ್ನು ದೊಡ್ಡ ಪ್ರಮಾಣದಲ್ಲಿ ನಿಯಂತ್ರಿಸಿರುವುದನ್ನು ಕಾಣಬಹುದಾಗಿದೆ.

  1. ಕಲ್ಲಿದ್ದಲು ವಲಯದ ವಿಸ್ತರಣೆ

ಒಂದು ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ನಿಟ್ಟಿನಲ್ಲಿ ಮುನ್ನಡೆ

ದೇಶದಲ್ಲಿ ಕಲ್ಲಿದ್ದಲು ಆಮದು ಪ್ರಮಾಣವನ್ನು ತಗ್ಗಿಸಲು ನಾವು ಗ್ರಾಹಕರಿಗೆ ಸ್ಥಳೀಯ ಕಲ್ಲಿದ್ದಲು ಪೂರೈಕೆ ಹೆಚ್ಚಳ, ಕಲ್ಲಿದ್ದಲು ಸಾಗಣೆ ಏಕರೂಪಗೊಳಿಸುವುದು, ಕೆಲವು ಶುಲ್ಕಗಳ ಬಗ್ಗೆ ಮರು ಪರಿಶೀಲನೆ ನಡೆಸುವುದು, ದೇಶೀಯ ಕಲ್ಲಿದ್ದಲು ಉತ್ಪಾದನೆಗೆ ಪ್ರೋತ್ಸಾಹ ನೀಡುವುದು ಸೇರಿದಂತೆ ಹಲವು ಕ್ರಮಗಳ ಮೂಲಕ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕಲ್ಲಿದ್ದಲು ಆಮದನ್ನು ತಗ್ಗಿಸಲು ದೂರದ ದೇಶೀಯ ಉತ್ಪಾದನೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಮೂಲಕ ಗರಿಷ್ಠ ದೇಶೀಯ ಕಲ್ಲಿದ್ದಲು ಬಳಕೆಯನ್ನು ಉತ್ತೇಜಿಸಿ, ‘ಆತ್ಮ ನಿರ್ಭರ ಭಾರತಗುರಿ ಸಾಧನೆಗೆ ನೆರವು ನೀಡಲಾಗುತ್ತಿದೆ. ಇದರಿಂದಾಗಿ ಕಲ್ಲಿದ್ದಲು ಬೇಡಿಕೆ 2019-20ರಲ್ಲಿ 955.26 ಎಂಟಿ ಇದ್ದದ್ದು 2023-24ಕ್ಕೆ 1.27 ಬಿಟಿಗೆ ಏರಿಕೆಯಾಗಲಿದೆ. ಬೇಡಿಕೆಯನ್ನು ಪೂರೈಸಲು ಕಲ್ಲಿದ್ದಲು ಉತ್ಪಾದನಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಮತ್ತು ಸಿಐಎಲ್ ಗೆ 2023-24 ವೇಳೆಗೆ 1ಬಿಟಿ ಕಲ್ಲಿದ್ದಲು ಉತ್ಪಾದನೆ ಗುರಿಯನ್ನು ನೀಡಲಾಗಿದೆ.

ಕಲ್ಲಿದ್ದಲು ಕಂಪನಿಗಳು ಸುಮಾರು 44,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಿ, ಕಲ್ಲಿದ್ದಲು ತೆಗೆಯುವ ಮೂಲಸೌಕರ್ಯವನ್ನು ವೃದ್ಧಿಸಲು ಮುಂದಾಗಿದ್ದು, ಅದು ಕಲ್ಲಿದ್ದಲು ನಿರ್ವಹಣೆ ಮಾಡುವ ಘಟಕಗಳು, ಬಂದರುಗಳನ್ನು ಅಭಿವೃದ್ಧಿಪಡಿಸಲಿದೆ ಮತ್ತು ರಸ್ತೆ ಸಾರಿಗೆಯನ್ನು ಕನಿಷ್ಠಗೊಳಿಸಲು ಸಾರಿಗೆ ಸರಣಿಯನ್ನು ಬಲವರ್ಧನೆಗೊಳಿಸಲಾಗುವುದು ಮತ್ತು ಸಾಗಾಣೆಗೆ ಉನ್ನತೀಕರಿಸಿದ ಕನ್ವೇಯರ್ ಬೆಲ್ಟ್ ಗಳನ್ನು ಬಳಕೆ ಮಾಡಲಾಗುವುದು.

4. ಮೊದಲು ಮೈಲು ಸಂಪರ್ಕ

ನಮ್ಮ ಗೌರವಾನ್ವಿತ ಪ್ರಧಾನಮಂತ್ರಿಗಳ ಉತ್ತಮ ಆಡಳಿತದ ಸಮಗ್ರ ಮುನ್ನೋಟವನ್ನು ನೆನಪಿಸಿಕೊಳ್ಳುತ್ತ, ‘ಸುಲಭ ಜೀವನ ಮತ್ತು ವ್ಯಾಪಾರಕ್ಕೆ ಪೂರಕ ವಾತಾವರಣ ನಿರ್ಮಾಣದಮೂಲಕ ಮೊದಲ ಮೈಲು ಸಂಪರ್ಕದ ಪರಿವರ್ತನಾ ಚಿಂತನೆಯನ್ನು ಅಳವಡಿಸಿಕೊಳ್ಳಲಾಗಿದ್ದು, ಕಲ್ಲಿದ್ದಲು ಗಣಿಗಳ ಸುತ್ತಮುತ್ತ ವಾಸಿಸುತ್ತಿರುವ ಜನರ ಜೀವನ ಸುಗಮಗೊಳಿಸಲು ಉದ್ದೇಶಿಸಲಾಗಿದೆ. ಮೂಲಕ ವಾಹನ ದಟ್ಟಣೆ ತಗ್ಗಿಸುವುದು, ರಸ್ತೆ ಅಪಘಾತ ತಗ್ಗಿಸುವುದು, ಕಲ್ಲಿದ್ದಲು ಗಣಿಗಳ ಸುತ್ತಮುತ್ತ ಆರೋಗ್ಯ ಮತ್ತು ಪರಿಸರದ ಮೇಲಾಗುವ ಪರಿಣಾಮಗಳನ್ನು ತಗ್ಗಿಸುವುದು, ಪರ್ಯಾಯ ಸಾರಿಗೆ ವಿಧಾನಗಳಾದ ಯಾಂತ್ರೀಕೃತ ಕನ್ವೇಯರ್ ವ್ಯವಸ್ಥೆ ಮತ್ತು ರೈಲ್ವೆ ರೇಖುಗಳಿಗೆ ಕಂಪ್ಯೂಟರಿಕೃತ ಲೋಡಿಂಗ್ ಮತ್ತಿತರ ವಿಧಾನಗಳ ಮೂಲಕ ಕಲ್ಲಿದ್ದಲು ನಿರ್ವಹಣೆಯಲ್ಲಿ ದಕ್ಷತೆ ಹೆಚ್ಚಳಕ್ಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಲ್ಲಿದ್ದಲು ಕಂಪನಿಗಳು ಗಣಿಗಳಲ್ಲಿ ರಸ್ತೆ ಮೂಲಕ ಕಲ್ಲಿದ್ದಲು ಸಾಗಾಣೆಯನ್ನು ತೆಗೆದು ಹಾಕಲು ಸಮಗ್ರ ಮನೋಭಾವದಿಂದ ಕಾರ್ಯತಂತ್ರವನ್ನು ಸಿದ್ಧಪಡಿಸಿವೆ.   

ಇದನ್ನು ಒಟ್ಟು 449.5 ಎಂಟಿವೈ ಸಾಮರ್ಥ್ಯದ 39 ಎಫ್ಎಂಸಿ ಯೋಜನೆಗಳ ಅನುಷ್ಠಾನದಿಂದ ಸಾಧಿಸಲಾಗಿದೆ. ಜುಲೈ 2019ರಿಂದ ಎಫ್ಎಂಸಿ ಯೋಜನೆಗಳ ಅನುಷ್ಠಾನಕ್ಕೂ ಮುನ್ನ ಸಿಐಎಲ್ ಯಾಂತ್ರೀಕೃತ ಕನ್ವೇಯರ್ ವ್ಯವಸ್ಥೆ ಮತ್ತು ಕಂಪ್ಯೂಟರಿಕೃತ ಲೋಡಿಂಗ್ ನಿಂದಾಗಿ 19 ಯೋಜನೆಗಳ 151 ಎಂಟಿವೈ ಸಾಮರ್ಥ್ಯಗಳನ್ನು ಗಳಿಸಿತ್ತು. 39 ಎಫ್ಎಂಸಿ ಯೋಜನೆಗಳ ಕಾರ್ಯಾಚರಣೆ ನಂತರ ಸಾಮರ್ಥ್ಯ 2023-24 ವೇಳೆಗೆ 600 ಎಂಟಿವೈಗೆ ಹೆಚ್ಚಾಗಲಿದೆ. ಇದರಿಂದ ಡೀಸಲ್ ವೆಚ್ಚ ಉಳಿತಾಯವಾಗುವುದಲ್ಲದೆ, ಅಡಚಣೆ ಶುಲ್ಕಗಳು ಮತ್ತು ಸಾರಿಗೆ ಶುಲ್ಕಗಳು, ಆರೋಗ್ಯ ಪ್ರಯೋಜನಗಳು ಸೇರಿ ಹಲವು ಬಗೆಯ ಪ್ರಯೋಜನಗಳಾಗಲಿವೆ.

5. ವೈವಿಧ್ಯೀಕರಣ ಯೋಜನೆ

ಕಲ್ಲಿದ್ದಲು ಸಚಿವಾಲಯ ಎರಡು ಬೃಹತ್ ಸಾರ್ವಜನಿಕ ವಲಯದ ಉದ್ದಿಮೆಗಳನ್ನು ಒಳಗೊಂಡಿದೆಭಾರತೀಯ ಕಲ್ಲಿದ್ದಲು ನಿಗಮ(ಸಿಐಎಲ್) ಮತ್ತು ಎನ್ ಎಲ್ ಸಿ ಇಂಡಿಯಾ ಲಿಮಿಟೆಡ್(ಎಲ್ ಎಲ್ ಸಿಐಎಲ್) ಇವುಗಳು ಸಚಿವಾಲಯದ ಆಡಳಿತ ನಿಯಂತ್ರಣಕ್ಕೆ ಒಳಪಟ್ಟಿವೆ. ಸಿಐಎಲ್ 7 ರಾಜ್ಯಗಳಲ್ಲಿ ಮತ್ತು ಎನ್ಎಲ್ ಸಿಐಎಲ್ ಗಳು 5 ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಸಿಐಎಲ್ ತನ್ನ 7 ಉಪ ಸಂಸ್ಥೆಗಳ ಮೂಲಕ ಸಂಪೂರ್ಣ ಕಲ್ಲಿದ್ದಲು ನಿಗಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಂತೆಯೇ ಎನ್ಎಲ್ ಸಿಐಎಲ್ ಹೊಸ ವಲಯಗಳಾದ (ವಿದ್ಯುತ್ ಉತ್ಪಾದನೆ, ನವೀಕರಿಸಬಹುದಾದ ಇಂಧನ, ಕಲ್ಲಿದ್ದಲು ಗಣಿಗಾರಿಕೆ)ಗಳಲ್ಲಿ ತೊಡಗಿದೆ. ಸಿಐಎಲ್ ಭಾರತದ ಸ್ಥಳೀಯ ಕಲ್ಲಿದ್ದಲು ಉತ್ಪಾದನೆಯ ಶೇ.80ರಷ್ಟು ಪೂರೈಸುತ್ತಿದ್ದರೆ, ಶೇ.65ರಷ್ಟು ಕಲ್ಲಿದ್ದಲು ಬಳಕೆಯನ್ನು ಮಾಡುತ್ತಿದೆ.

ವೈವಿಧ್ಯೀಕರಣ ಅತ್ಯಂತ ಅಗತ್ಯವಾಗಿದ್ದು, ವಿಶೇಷವಾಗಿ ಹವಾಮಾನ ವೈಪರೀತ್ಯದ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಕಲ್ಲಿದ್ದಲೇತರ ವೈವಿಧ್ಯೀಕರಣ ಅಗತ್ಯವಿದ್ದು, ಹೊಸ ವಹಿವಾಟು ಉತ್ಪಾದನಾ ಚಟುವಟಿಕೆಗಳನ್ನು ಕೈಗೊಂಡು ತಮ್ಮ ಲಾಭ ನಷ್ಟದ ಖಾತೆಗಳನ್ನು ಉಳಿಸಿಕೊಳ್ಳಬೇಕಿದೆ. ಜೊತೆಗೆ ಕಲ್ಲಿದ್ದಲು ಗಣಿಗಳ ಸಿಬ್ಬಂದಿಯ ದೀರ್ಘಾವಧಿ ಭವಿಷ್ಯದ ಹೊಣೆಗಾರಿಕೆ ನಿರ್ವಹಿಸಬೇಕು. ವಿಶೇಷವಾಗಿ ಈಶಾನ್ಯ ಪ್ರಾಂತ್ಯದಲ್ಲಿ ಕಲ್ಲಿದ್ದಲು ಆಮದನ್ನು ಹೆಚ್ಚಿಸಲು ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಹೂಡಿಕೆ ಮಾಡಬೇಕಿದೆ. ಜೊತೆಗೆ 100 ಎಂಟಿ ಕಲ್ಲಿದ್ದಲು ಅನಿಲೀಕರಣಕ್ಕೆಗೆ ಬೆಂಬಲ ಮತ್ತು ಕಲ್ಲಿದ್ದಲು ರಫ್ತು  ಹೆಚ್ಚಳ ನಿರೀಕ್ಷೆ.

ಮೂರು ಬಗೆಯ ವೈವಿಧ್ಯೀಕರಣ ಕುರಿತ ವಿವರಗಳು ಕೆಳಗಿನಂತಿವೆ:

  1. ಹೊಸ ವ್ಯಾಪಾರ ಕ್ಷೇತ್ರಗಳು(ವೈವಿಧ್ಯೀಕರಣ) ಸಿಐಎಲ್/ಎನ್ಎಲ್ ಸಿಐಎಲ್ ಗಳನ್ನು ಕಲ್ಲಿದ್ದಲು ಕಂಪನಿಗಳಿಂದ ಇಂಧನ ಕಂಪನಿಗಳನ್ನಾಗಿ ಪರಿವರ್ತಿಸುವುದು.
  2. ಕಲ್ಲಿದ್ದಲು ವ್ಯವಹಾರದಲ್ಲಿ ಸುಸ್ಥಿರತೆಯನ್ನು ಒದಗಿಸಲು ಶುದ್ಧ ಕಲ್ಲಿದ್ದಲು ತಂತ್ರಜ್ಞಾನ(ತಂತ್ರಜ್ಞಾನ ಸಂಬಂಧಿ) ಬಳಕೆ ಮಾಡುವುದು.
  3. 2024 ವೇಳೆಗೆ ಒಂದು ಬಿಲಿಯನ್ ಟನ್ ಕಲ್ಲಿದ್ದಲು ಉತ್ಪಾದನೆ ಗುರಿ ಸಾಧನೆಗೆ ಕಲ್ಲಿದ್ದಲು ಗಣಿಗಾರಿಕೆ ಯೋಜನೆಗಳ ಮೂಲಕ ನೆರವು ಹಾಗೂ ಅದಕ್ಕೆ ಅಗತ್ಯ ಮೂಲಸೌಕರ್ಯ ಸೃಷ್ಟಿ.  

ವೈವಿಧ್ಯೀಕರಣ ಯೋಜನೆ ಒಳಗೊಂಡ 2.46 ಲಕ್ಷ ಕೋಟಿ ರೂ. ಮೌಲ್ಯದ 117 ಯೋಜನೆಗಳ ಸ್ಥೂಲ ನೋಟ

 

ಯೋಜನೆಗಳ ಸ್ವರೂಪ

ಯೋಜನೆಗಳ (ಸಂಖ್ಯೆ)

ಅಂದಾಜು ಹೂಡಿಕೆ

ಹೂಡಿಕೆ ಮೂಲಗಳು

ಸಿಐಎಲ್ / ಎನ್ಎಲ್ ಸಿಐಎಲ್

ಬಿಒಒ/ಎಂಡಿಒ/ ಜೆವಿಗಳು

ಹೊಸ ವ್ಯಾಪಾರ ವಲಯಗಳು

26

141931 (57%)

27114

114817

ಶುದ್ಧ ಕಲ್ಲಿದ್ದಲು ತಂತ್ರಜ್ಞಾನ

19

31140 (13%)

3390

27750

ಕಲ್ಲಿದ್ದಲು ಗಣಿಗಾರಿಕೆ  

72

73002 (30%)

48136

24866

ಒಟ್ಟು

117

246073

78640

167433

 

6. ಪರಿಸರ ಸ್ನೇಹಿ ಕ್ರಮಗಳು

ಕಲ್ಲಿದ್ದಲು ಕ್ಷೇತ್ರದಲ್ಲಿ ಕೈಗೊಂಡ ಸುಧಾರಣೆಗಳಿಂದಾಗಿ ಭಾರತ ಪರಿಸರ ಸಂರಕ್ಷಣೆಗೆ ಬದ್ಧತೆಯನ್ನು ಖಾತ್ರಿಪಡಿಸಿದೆ ಮತ್ತು ಕಲ್ಲಿದ್ದಲು ಮುಂದುವರಿಕೆ ಸ್ವೀಕೃತಿಯನ್ನು ಹಾಗೂ ಮೂಲಕ ಗೌರವ ಗಳಿಸಲು ಸಹಾಯ ಮಾಡುತ್ತಿದೆ. ಕಲ್ಲಿದ್ದಲನ್ನು ಪರಿಸರಸ್ನೇಹಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಕೈಗೊಂಡಿರುವ ಕೆಲವು ಕ್ರಮಗಳು ಕೆಳಗಿನಂತಿವೆ.

  1. ಕೋಲ್ ಬೆಡ್ ಮಿಥೇನ್: ಇದರ ಅರ್ಥ ಕಲ್ಲಿದ್ದಿಲಿನ ಸೀಮ್ ನಲ್ಲಿ ಸಿಲುಕಿ ಕೊಂಡಿರುವ ನೈಸರ್ಗಿಕ ಅನಿಲ ಎಂದು, ಕೋಲ್ ಬೆಡ್ ಮಿಥೇನ್(ಸಿಬಿಎಂ) ಒಂದು ಅಸಂಪ್ರದಾಯಿಕ ನೈಸರ್ಗಿಕ ಅನಿಲದ ಮೂಲವಾಗಿದ್ದು, ಇದೀಗ ಅದನ್ನು ಭಾರತದ ಇಂಧನ ಸಂಪನ್ಮೂಲದ ಪರ್ಯಾಯ ಮೂಲ ಎಂದು ಪರಿಗಣಿಸಲಾಗುತ್ತಿದೆ. ಭಾರತ ಜಗತ್ತಿನಲ್ಲೇ ಅತ್ಯಂತ ಹೇರಳವಾಗಿ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ 5ನೇ ದೊಡ್ಡ ರಾಷ್ಟ್ರ ಎಂದು ಸಾಬೀತಾಗಿದೆ. ಮೂಲಕ ಸಿಬಿಎಂ ಅನ್ವೇಷಣೆ ಮತ್ತು ಶೋಧ ಕಾರ್ಯದಲ್ಲಿ ಮಹತ್ವದ ಸಂಭಾವ್ಯತೆಯನ್ನು ಹೊಂದಿದೆ. ದೇಶದಲ್ಲಿ ಸಿಬಿಎಂ ಸಂಪನ್ಮೂಲವನ್ನು ಬಳಸಿಕೊಳ್ಳುವ ಉದ್ದೇಶದಿಂದ ಸರ್ಕಾರ ಸಿಬಿಎಂ ನೀತಿ ಸೇರಿ ಹಲವು ಉಪಕ್ರಮಗಳನ್ನು ಜಾರಿಗೊಳಿಸಿದೆ.  

ಮೂರು ಸಿಬಿಎಂ ನಿಕ್ಷೇಪಗಳ ಯೋಜನಾ ಕಾರ್ಯಸಾಧ್ಯತೆ ವರದಿ(ಪಿಎಫ್ಆರ್)

  1. ಝಾಹಿರಾ ಸಿಬಿಎಂ ನಿಕ್ಷೇಪ್-1, ಝಾಹಿರಾ ಕಲ್ಲಿದ್ದಲು ನಿಕ್ಷೇಪ
  2. ರಾಣಿಗಂಜ್ ಸಿಬಿಎಂ ನಿಕ್ಷೇಪ, ರಾಣಿಗಂಜ್ ಕಲ್ಲಿದ್ದಲು ವಲಯ
  3. ಶೋಗಾಪುರ್ ಸಿಬಿಎಂ ನಿಕ್ಷೇಪ-1(ಎಸ್ಇಸಿಎಲ್ ಪ್ರದೇಶ) ಸೊಹಾಗ್ಪುರ್ ಕಲ್ಲಿದ್ದಲು ವಲಯಕ್ಕೆ ಬಿಸಿಸಿಎಲ್, ಇಸಿಎಲ್ ಮತ್ತು ಎಸ್ಇಸಿಎಲ್ ಮಂಡಳಿಗಳು ತಾತ್ವಿಕ ಒಪ್ಪಿಗೆಯನ್ನು ನೀಡಿವೆ.

ಕ್ರ.ಸಂ.

ನಿಕ್ಷೇಪ

ಉಪಸಂಸ್ಥೆಗಳು

ಪ್ರದೇಶ

(ಕೆಎಂ2)

ಸಿಬಿಎಂ ಸಂಪನ್ಮೂಲ  (ಬಿಸಿಎಂ)

1.

ಝಾಹಿರ ಸಿಬಿಎಂ ಸಿಬಿಎಂ ನಿಕ್ಷೇಪ-1

ಬಿಸಿಸಿಎಲ್

~24

25 ಬಿಸಿಎಂ

2.

ರಾಣಿಗಂಜ್ ಸಿಬಿಎಂ ನಿಕ್ಷೇಪ

ಇಸಿಎಲ್

~40

2.2 ಬಿಸಿಎಂ

3

ಸೊಹಾಗ್ಪುರ್ ಸಿಬಿಎಂ ನಿಕ್ಷೇಪ

ಎಸ್ಇಸಿಎಲ್

~49

    1. ಬಿಸಿಎಂ

 

  1. ಮೇಲ್ಮೈ ಕಲ್ಲಿದ್ದಲು ಅನಿಲೀಕರಣ: ಭಾರತದಲ್ಲಿ 289 ಬಿಲಿಯನ್ ಟನ್ ನಾನ್-ಕೋಕಿಂಗ್ ಕೋಲ್ ನಿಕ್ಷೇಪವಿದೆ ಮತ್ತು ಶೇ.80ರಷ್ಟು ಕಲ್ಲಿದ್ದಲು ಉತ್ಪಾದನೆಯನ್ನು ಅಣು ವಿದ್ಯುತ್ ಘಟಕಗಳು ಬಳಕೆ ಮಾಡುತ್ತವೆ. ಕಲ್ಲಿದ್ದಲು ಅನಿಲೀಕರಣ ಅನ್ನು ಕಲ್ಲಿದ್ದಲು ಸುಡುವುದಕ್ಕೆ ಹೋಲಿಸಿದರೆ ಅತ್ಯಂತ ಶುದ್ಧ ಆಯ್ಕೆ ಎಂದು ಪರಿಗಣಿಸಲಾಗಿದ್ದು, ಅದರಲ್ಲಿ ಕಲ್ಲಿದ್ದಲು ಶುಚಿಗೊಳಿಸಲು ರಾಸಾಯನಿಕಗಳನ್ನು ಬಳಕೆ ಮಾಡಲಾಗುವುದು. ಕಲ್ಲಿದ್ದಲು ಅನಿಲೀಕರಣ ಮೂಲಕ ಉತ್ಪಾದಿಸುವ ಸೈನ್ ಗ್ಯಾಸ್ ಅನ್ನು ಸಿಂಥೆಟಿಕ್ ನೈಸರ್ಗಿಕ ಅನಿಲ(ಎಸ್ಎನ್ ಜಿ), ಶಕ್ತಿ ಇಂಧನ(ಮಿಥೇನ್ ಮತ್ತು ಎಥೆನಾಲ್), ರಸಗೊಬ್ಬರಗಳಿಗೆ ಯೂರಿಯೂ ಉತ್ಪಾದನೆ ಮತ್ತು ರಾಸಾಯನಿಕಗಳಾದ ಅಸೆಟಿಕ್ ಆಸಿಡ್, ಮಿಥೇಲ್ ಅಸೆಟೇಟ್, ಅಸಿಟಿಕ್ ಅನ್ ಹೈಡ್ರೇಡ್, ಡಿಎಂಇ, ಇಥಲೇನ್ ಮತ್ತು  ಪ್ರೊಪಲೈನ್, ಆಕ್ಸೋ ಕೆಮಿಕಲ್ಸ್ ಮತ್ತು ಪಾಲಿ ಒಲೆಫೆನ್ಸ್ ಗಳನ್ನು ಉತ್ಪಾದಿಸಬಹುದು. ಉತ್ಪನ್ನಗಳು ಬದಲಿ ಆಮದಿಗೆ ನೆರವಾಗಲಿದೆ ಮತ್ತು ಸರ್ಕಾರಕ್ಕೆ ಆತ್ಮನಿರ್ಭರ ಭಾರತ ಸಾಧನೆಗೆ ಸಹಾಯಕವಾಗಲಿದೆ.

ಮೇಲಿನ ಧ್ಯೇಯಗಳೊಂದಿಗೆ ಕಲ್ಲಿದ್ದಲು ಸಚಿವಾಲಯ ಕೋಲ್  ಅನಿಲೀಕರಣ ಮೂಲಕ ಕಲ್ಲಿದ್ದಲು ಬಳಕೆಗೆ ಹಲವು ಉಪಕ್ರಮಗಳನ್ನು ಕೈಗೊಂಡಿದೆ ಮತ್ತು 2030 ವೇಳೆಗೆ 100 ಎಂಟಿ ಕಲ್ಲಿದ್ದಲು ಅನಿಲೀಕರಣ ಗುರಿ ಸಾಧನೆಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಮೂರು ಹಂತದ ಕಲ್ಲಿದ್ದಲು ಅನಿಲೀಕರಣ ಯೋಜನೆಗಳ ಕಾರ್ಯತಂತ್ರವನ್ನು ರೂಪಿಸಲಾಗಿದೆ.

ಒಂದನೇ ಹಂತ: ಪ್ರಾಯೋಗಿಕ ಆಧಾರದ ಮೇಲೆ ಯೋಜನೆಗಳನ್ನು ಸ್ಥಾಪಿಸುವುದು

ಪ್ರಾಯೋಗಿಕವಾಗಿ ಎರಡು ಅನಿಲೀಕರಣ ಯೋಜನೆಗಳ ಗುರಿಗಳನ್ನು ಹೊಂದಲಾಗಿದ್ದು, ಒಂದು ಹೆಚ್ಚಿನ ಬೂದಿ ಮಿಶ್ರಿತ ಪೆಟ್ ಕೋಕ್ ಆಗಿದ್ದು, ಮತ್ತೊಂದು ಕಡಿಮೆ ಬೂದಿಯ ತಂತ್ರಜ್ಞಾನ ಆಧಾರಿತ ಘಟಕವಾಗಿರಲಿದೆ. ಎರಡು ಯೋಜನೆಗಳ ವಿವರಗಳು ಕೆಳಗಿನಂತಿದೆ:

      • ತಾಲ್ಚೇರ್ ರಸಗೊಬ್ಬರ ಘಟಕ: ಕಲ್ಲಿದ್ದಲು ಅನಿಲೀಕರಣ ಅಧಿಕ ಬೂದಿಯ ಜೊತೆ ಪೆಟ್ ಕೋಕ್ ಮಿಶ್ರಣ ಮಾಡಲಾಗುವುದು. ಹೂಡಿಕೆ: 13277 ಕೋಟಿ ರೂ. ಸಿಐಎಲ್, ಆರ್ ಸಿಎಫ್ ಮತ್ತು ಜಿಎಐಎಲ್ ಸಮಾನ ಪಾಲುದಾರರು(ಶೇ. 28ರಷ್ಟು) ಮತ್ತು ಯೋಜನೆಗೆ ಬ್ಯಾಂಕ್ ಸಾಲದ ಮೂಲಕ(ಶೇ.72ರಷ್ಟು) ಹಣಕಾಸು ಪಡೆಯಲಾಗುವುದು. ಕಲ್ಲಿದ್ದಲು ಮೂಲಗಳು: ಒಡಿಶಾದ ಅರ್ಕಪಾಲ್ ನಿಕ್ಷೇಪದ ಉತ್ತರಕ್ಕೆ 2.5 ಎಂಟಿಅನ್ನು ಟಿಎಫ್ಎಲ್ ಗೆ ಹಂಚಿಕೆ ಮಾಡಲಾಗಿದ್ದು, ಅದರಿಂದ ಕೋಲ್ ಪೆಟ್ ಕೋಕ್ ಬಳಸಿ ತಾಲ್ಚೇರ್ ಸಂಸ್ಕರಣೆ ಕೈಗೊಳ್ಳಲಾಗುವುದು.  
      •  ಡನ್ಕುನಿ ಮಿಥೆನಾಲ್ ಘಟಕ: ಕಡಿಮೆ ಬೂದಿಯ ಕಲ್ಲಿದ್ದಲು ಆಧರಿಸಿದ ಕಲ್ಲಿದ್ದಲು ಅನಿಲೀಕರಣ ಹೂಡಿಕೆ 5800 ಕೋಟಿ ರೂ. ಯೋಜನೆಯನ್ನು ಬಿಒಒ ಮಾದರಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು ಮತ್ತು ಹೂಡಿಕೆಯನ್ನು ಸಂಭಾವ್ಯ ಹೂಡಿಕೆದಾರರಿಂದ ಮಾಡಿಸಲಾಗುವುದು. ಕಲ್ಲಿದ್ದಲು ಮೂಲ: 1.5 ಎಂಟಿ ಕಲ್ಲಿದ್ದಲನ್ನು ಝಂಜೀರಾ ಮತ್ತು ಸೋನೆಪುರ್ ಬಜಾರಿ ಗಣಿಗಳಿಂದ ಇಸಿಎಲ್ ಪೂರೈಸಲಿದೆ.

ಎರಡನೇ ಹಂತದ ಯೋಜನೆಗಳು: ಕಲ್ಲಿದ್ದಲು ಅನಿಲೀಕರಣ ನಿಟ್ಟಿನಲ್ಲಿ ತೀವ್ರಗೊಳಿಸುವ ಪ್ರಯತ್ನಗಳು.

ಸಂಭವನೀಯತೆ ಅಧ್ಯಯನ ಮತ್ತು ಹಣಕಾಸು ಕಾರ್ಯಸಾಧ್ಯತೆ ಆಧರಿಸಿ ಡನ್ಕುನಿ ಯೋಜನೆಯನ್ನು ರೂಪಿಸಲಾಗಿದ್ದು, ಕಡಿಮೆ ಬೂದಿಯ ಕಲ್ಲಿದ್ದಲು ಅನಿಲೀಕರಣಕ್ಕೆ ಎರಡನೇ ಹಂತದಲ್ಲಿ ಐದು ಯೋಜನೆಗಳನ್ನು ಗುರುತಿಸಲಾಗಿದೆ.

ಕ್ರ.ಸಂ.

ಹೆಸರು

ರಾಜ್ಯ

ಕೋಲ್ ಫೀಡ್

ಗುಣಮಟ್ಟ

1

ಶಿಲ್ಪಾಂಚಲ್

ಪಶ್ಚಿಮಬಂಗಾಳ

1.0 ಎಂಟಿಪಿಎ

ಕಡಿಮೆ ಬೂದಿ

2

ಉತ್ಕರ್ಷ

ಮಹಾರಾಷ್ಟ್ರ

1.0 ಎಂಟಿಪಿಎ

ಕಡಿಮೆ ಬೂದಿ

3

ಮಹಾಮಯ

ಛತ್ತೀಸ್ ಗಢ

1.5 ಎಂಟಿಪಿಎ

ಕಡಿಮೆ ಬೂದಿ

4

ಅಶೋಕ

ಜಾರ್ಖಂಡ್

2.5 ಎಂಟಿಪಿಎ

ಹೆಚ್ಚು ಬೂದಿ

5

ನೈವೇಲಿ

ತಮಿಳುನಾಡು

4.0 ಎಂಟಿಪಿಎ

ಲಿಗ್ನೈಟ್

 

3ನೇ ಹಂತದ ಯೋಜನೆಗಳು:

ಆರಂಭಿಕವಾಗಿ ಹಲವು ಅನಿಲೀಕರಣ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ಸಿಐಎಲ್ ಕಲ್ಲಿದ್ದಲು ಗಣಿಗಾರಿಕೆಯ ಬಗ್ಗೆ ನಿಗಾವಹಿಸಲಿದೆ ಮತ್ತು ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲಿದೆ. ಅನಿಲೀಕರಣ ಮತ್ತು ಉತ್ಪನ್ನ ಪರಿವರ್ತನೆ ಘಟಕವನ್ನು ಬಿಒಒ/ಬಿಒಎಂ/ಎಲ್ಎಸ್ ಟಿಕೆ ಒಪ್ಪಂದದ ಆಧಾರದಲ್ಲಿ ಸ್ಥಾಪಿಸಲಿವೆ. ಜಾರ್ಖಂಡ್ ನಲ್ಲಿ ಎರಡನೇ ಹಂತದಲ್ಲಿ ಕಲ್ಲಿದ್ದಲು ಬೂದಿಯನ್ನು ತಂತ್ರಜ್ಞಾನದ ಮೂಲಕ ಪರಿವರ್ತನೆ ಮಾಡುವ ಯಶಸ್ವಿ ಘಟಕ ಸ್ಥಾಪನೆ ನಂತರ ಕಲ್ಲಿದ್ದಲು ಅನಿಲೀಕರಣಕ್ಕೆ ಇನ್ನೂ ಹೆಚ್ಚಿನ ಯೋಜನೆಗಳನ್ನು ಸಿಐಎಲ್ ಗುರುತಿಸಿದೆ. ಭವಿಷ್ಯದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜುಗಳಲ್ಲಿ ಶೇ.20 ರಿಯಾಯಿತಿ ದರದ ಆದಾಯ ಹಂಚಿಕೆ ಉದ್ದೇಶಿಸಲಾಗಿದೆ. ಇದರಿಂದಾಗಿ 2030 ವೇಳೆಗೆ ಕಲ್ಲಿದ್ದಲು ಅನಿಲೀಕರಣ 100 ಎಂಟಿ ತಲುಪುವ ಸಾಧ್ಯತೆ ಇದೆ.

      1. ಕೋಕಿಂಗ್ ಕೋಲ್ ತೊಳೆಯುವ ಘಟಕಗಳ ಸ್ಥಾಪನೆ: ಸರ್ಕಾರ ಉಕ್ಕು ವಲಯಕ್ಕೆ ಪೂರೈಸುವ ತೊಳೆದ ಕಲ್ಲಿದ್ದಲು ಪ್ರಮಾಣವನ್ನು 03ರಿಂದ 15 ಎಂಟಿಗೆ ಹೆಚ್ಚಿಸಲು ಮುಂದಾಗಿದೆ. ಅದಕ್ಕಾಗಿ ಎರಡು ಕೋಕಿಂಗ್ ಕೋಲ್ ತೊಳೆಯುವ ಘಟಕವನ್ನು ಕಾರ್ಯಾರಂಭ ಮಾಡಲಾಗಿದೆ. ಮೂರು ಘಟಕಗಳು ನಿರ್ಮಾಣ ಹಂತದಲ್ಲಿವೆ. ಪೈಕಿ ಎರಡಕ್ಕೆ ಆಶಯ ಪತ್ರ (ಲೆಟರ್ ಆಫ್ ಇಂಟೆಂಟ್)(ಎಲ್ಒಐ) ವಿತರಿಸಲಾಗಿದ್ದು, ಒಂದು ನಿರ್ಮಾಣ ಹಂತದಲ್ಲಿದೆ. ಮತ್ತೆ ಎರಡು ಕಲ್ಲಿದ್ದಲು ತೊಳೆಯುವ ಘಟಗಳಿಗೆ ಎಲ್ಒಐ ವಿತರಣೆ ಮಾಡಲಾಗಿದೆ.
      2. ಸುಸ್ಥಿರ ಅಭಿವೃದ್ಧಿ ಕೋಶ: ಕಲ್ಲಿದ್ದಲು ಗಣಿಗಾರಿಕೆ ವಲಯದಲ್ಲಿ ಸುಸ್ಥಿರತೆಯನ್ನು ತರುವ ಪ್ರಾಮುಖ್ಯತೆಯನ್ನು ಮನಗಂಡು, ಕಲ್ಲಿದ್ದಲು ಸಚಿವಾಲಯಸುಸ್ಥಿರ ಅಭಿವೃದ್ಧಿ ಕೋಶವನ್ನು ಸೃಷ್ಟಿಸಿದೆ ಮತ್ತು ಎಲ್ಲ ಕಲ್ಲಿದ್ದಲು ಪಿಎಸ್ ಯುಗಳಲ್ಲಿ ಇದನ್ನು ಸೃಷ್ಟಿಸಲಾಗಿದ್ದು, ಮೂಲಕ ಕಲ್ಲಿದ್ದಲು ಗಣಿಗಳಲ್ಲಿ ಉತ್ತಮ ಪರಿಸರ ನಿರ್ವಹಣಾ ಪದ್ಧತಿಗಳ ಅಳವಡಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಮೂಲಕ ಗಣಿಗಳ ಸುತ್ತಮುತ್ತ ನೆಲೆಸಿರುವ ಜನರಿಗೆ ಉತ್ತಮ ಪರಿಸರ ಒದಗಿಸುವುದು ಹಾಗೂ ದೇಶದಲ್ಲಿ ಒಟ್ಟಾರೆ ಕಲ್ಲಿದ್ದಲು ವಲಯದ ವರ್ಚಸ್ಸು ಸುಧಾರಿಸುವ ಉದ್ದೇಶ ಹೊಂದಲಾಗಿದೆ.

ಸಾಮಾಜಿಕ ಮತ್ತು ಪರಿಸರ ಹೊಣೆಗಾರಿಕೆ: ಈವರೆಗೆ ಕೈಗೊಂಡಿರುವ ಪರಿಸರ ಸ್ನೇಹಿ ಕ್ರಮಗಳು

      • ಕಲ್ಲಿದ್ದಲು ಗಣಿಗಾರಿಕೆ ಪ್ರವಾಸೋದ್ಯಮ ಮೂಲಕ ಪ್ರವಾಸೋದ್ಯಮ ಗಣಿಗಾರಿಕೆಯ ಕುರಿತು ಸಾರ್ವಜನಿಕ ಗ್ರಹಿಕೆ ಸುಧಾರಿಸುವುದು.
        • ಎರಡು ಬೃಹತ್ ಪರಿಸರ ಯೋಜನೆಗಳ ಉದ್ಘಾಟನೆ ಮತ್ತು ಮೂರು ಜೈವಿಕ ಪಾರ್ಕ್ ಗಳಿಗೆ 2020 ಜುಲೈ 23ರಂದು ಶಂಕುಸ್ಥಾಪನೆ.
        • 2021-22 ವೇಳೆಗೆ ನಾಲ್ಕು ಜೈವಿಕ ಪಾರ್ಕ್ ಗಳ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಮತ್ತು 2022-23 ಮತ್ತು 2023-24ರಲ್ಲಿ ತಲಾ ಎರಡು.
      • ಗಣಿಗಾರಿಕೆ ನಡೆಸಲಾದ ಪ್ರದೇಶಗಳ ಬಯೋ-ರಿಕ್ಲಮೇಶನ್ / ಬಯೋ ರಿಕವರಿ ಆಫ್(ಎಚ್ಎ)
        • ಒಟ್ಟಾರೆ 3520 ಎಚ್ಎ ಸಾಧನೆ ಮತ್ತು 2021 ಹಣಕಾಸು ವರ್ಷದಲ್ಲಿ(ಅಕ್ಟೋಬರ್ 2020 ವರೆಗೆ) 81 ಲಕ್ಷ ಸಸಿಗಳನ್ನು ನೆಡಲಾಗಿದೆ. 2021ನೇ ಹಣಕಾಸು ವರ್ಷದಲ್ಲಿ ಒಟ್ಟು ಗುರಿ 3400 ಎಚ್ಎ ಮತ್ತು 80 ಲಕ್ಷ ಗಿಡಗಳನ್ನು ನೆಡುವುದು.
      • ಗೃಹ ಬಳಕೆಗೆ ಗಣಿಗಳಿಂದ ನೀರಿನ ಪೂರೈಕೆ, ಗಣಿ ನೀರನ್ನು ಕುಡಿಯುವುದಕ್ಕೆ ಮತ್ತು ನೀರಾವರಿ ಉದ್ದೇಶಗಳಿಗೆ ಬಳಕೆ

***


(Release ID: 1686220) Visitor Counter : 487