ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಐ.ಐ.ಎಸ್.ಎಫ್. 2020ರಲ್ಲಿ ನಡೆದ ‘ಕೃಷಿ ವಿಜ್ಞಾನಿಗಳ ಸಭೆ’ಯಲ್ಲಿ ತಜ್ಞರಿಂದ ಬೃಹತ್ ದತ್ತಾಂಶ ವಿಶ್ಲೇಷಣೆ, ನಿರ್ಧಾರದ ಬೆಂಬಲ ವ್ಯವಸ್ಥೆಗೆ ಕೃತಕ ಬುದ್ಧಿಮತ್ತೆಯ ಅಗತ್ಯದ ಪ್ರತಿಪಾದನೆ


ಸುಸ್ಥಿರ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಆರ್ಥಿಕ ಪ್ರೋತ್ಸಾಹ ನೀಡಬೇಕು: ಪ್ರೊ. ಕಮಲ್ ವಟ್ಟಾ

ಹಸಿವು ಸಂಪೂರ್ಣ ನೀಗಿಸಲು ಬಡತನ ಮುಕ್ತ ರಾಷ್ಟ್ರಕ್ಕಾಗಿ ಸುಸ್ಥಿರ ಕೃಷಿಗೆ ಗಮನ

ಪರಿಸರ ಸ್ನೇಹಿ ಮತ್ತು ವೆಚ್ಚ-ದಕ್ಷತೆಯ ಇಂಧನ ತಂತ್ರಜ್ಞಾನಗಳನ್ನು ಪೂರೈಸಲು ತಾಂತ್ರಿಕ ನಾವೀನ್ಯತೆಯನ್ನು ತ್ವರಿತಗೊಳಿಸುವ ಅವಶ್ಯಕತೆಯಿದೆ: ರಾಜ್ ಕುಮಾರ್ ಸಿಂಗ್, ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರು

Posted On: 25 DEC 2020 3:16PM by PIB Bengaluru

ಐಐಎಸ್ಎಫ್-2020

ಕೃಷಿ ವಿಜ್ಞಾನಿಗಳ ಸಭೆಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ 2020 ಪ್ರಮುಖ ಕಾರ್ಯಕ್ರಮವಾಗಿತ್ತು. ಇದು ಕೃಷಿ ವಿಜ್ಞಾನಿಗಳಿಗೆ, ನಾವಿನ್ಯತೆಯ ರೈತರಿಗೆ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಕ್ರಿಯವಾಗಿ ಪಾಲ್ಗೊಂಡು ಕೃಷಿಯಲ್ಲಿ ಹೊರಹೊಮ್ಮುತ್ತಿರುವ ವಿವಿಧ ವಿಷಯಗಳಾದ ಸುಸ್ಥಿರ ಕೃಷಿಯಲ್ಲಿನ ಸಹಕ್ರಿಯೆ ಮತ್ತು ವಹಿವಾಟುಗಳು, ಎನ್.ಆರ್.ಎಂ.- ಸವಾಲುಗಳು ಮತ್ತು ನೀತಿ ಚೌಕಟ್ಟು, ನಿಖರ ಕೃಷಿ ತಂತ್ರಜ್ಞಾನಗಳು ಮತ್ತು ಕೃಷಿ ಉತ್ಪಾದನಾ ವ್ಯವಸ್ಥೆಗಳು, ಕೃಷಿಯಲ್ಲಿ ದತ್ತಾಂಶ-ಚಾಲಿತ ತಂತ್ರಜ್ಞಾನಗಳು ಮತ್ತು ಅವುಗಳ ನಿರ್ವಹಣೆ, ಮತ್ತು ನಾವೀನ್ಯತೆ ಕುರಿತು ಚರ್ಚಿಸಲು ಸಮಾನ ವೇದಿಕೆಯನ್ನು ಕಲ್ಪಿಸಿತು. ಘಟನೆಯು ಕೃಷಿಯ ಮೇಲೆ ಹವಾಮಾನ ವೈಪರೀತ್ಯಗಳ ಪ್ರಭಾವವನ್ನು ಕಡಿಮೆ ಮಾಡುವ ಅಗತ್ಯವನ್ನು ಪೂರೈಸುವ ಗುರಿಯನ್ನು ಹೊಂದಿದೆ ಮತ್ತು ಕೃಷಿಯನ್ನು ದುರ್ಬಲ ಬಾಧ್ಯಸ್ಥರಿಗೆ ವಿಶ್ವಾಸಾರ್ಹ ಆದಾಯ ಗಳಿಸುವ ಕಸುಬಾಗಿ ಮಾಡುತ್ತದೆ.

ಭಾರತ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ, ಶ್ರೀ ಕೈಲಾಸ್ ಚೌಧರಿ ಅವರು ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ 2020 ಭಾಗವಾದ ಎರಡು ದಿನಗಳ ಕೃಷಿ ವಿಜ್ಞಾನಿಗಳ ಮೇಳವನ್ನು ಉದ್ಘಾಟಿಸಿದರು. ನೀತಿ ಆಯೋಗದ ಸದಸ್ಯ ಪ್ರೊ. ರಮೇಶ್ ಚಂದ್, ಐಸಿಎಆರ್ ಡಿಜಿ ಮತ್ತು ಡಿಎಆರ್. ಕಾರ್ಯದರ್ಶಿ ಡಾ. ಟಿ. ಮೊಹಾಪಾತ್ರ ಸಮಾರಂಭದಲ್ಲಿ ಉಪಸ್ಥಿತರಿದ್ದ ಇತರ ಗಣ್ಯರಾಗಿದ್ದರು. ಇವರೊಂದಿಗೆ ಸುಮಾರು 200 ವಿಜ್ಞಾನಿಗಳು, ವಿದ್ಯಾರ್ಥಿಗಳು ರೈತರು ಪಾಲ್ಗೊಂಡಿದ್ದರು.

ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವ ಶ್ರೀ ಕೈಲಾಶ್ ಚೌಧರಿ, ಮುಖ್ಯ ಅತಿಥಿ

ಪ್ರೊ. ರಮೇಶ್ ಚಂದ್, ಸದಸ್ಯರು ನೀತಿ ಆಯೋಗ

ಮೊದಲಿಗೆ ಡಾ. .ಕೆ. ಸಿಂಗ್ ಡಿಡಿಜಿ (ಕಷಿ ವಿಸ್ತರಣೆ), .ಸಿ..ಆರ್. ಅವರು ಗಣ್ಯರನ್ನು ಸ್ವಾಗತಿಸಿ, ಕೃಷಿ ವಿಜ್ಞಾನಿಗಳ ಮೇಳದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಡಾ. ತ್ರಿಲೋಚನ ಮಹಾಪಾತ್ರ, ಡಿ.ಜಿ. .ಸಿ..ಆರ್. ತಮ್ಮ ಭಾಷಣದಲ್ಲಿ ಹಸಿರು ಕ್ರಾಂತಿಯಿಂದ ಪ್ರಸ್ತು ಸ್ಥಿತಿಯವರೆಗೆ ಭಾರತದಲ್ಲಿ ಕೃಷಿ ವಲಯದ ಪಯಣದ ಬಗ್ಗೆ ವಿವರಿಸಿ, ಸುಸ್ಥಿರ ಕೃಷಿ ಅಭಿವೃದ್ಧಿಗೆ ತಂತ್ರಜ್ಞಾನದ ಅಗತ್ಯ ಪ್ರತಿಪಾದಿಸಿದರು.

ಡಾ. ತ್ರಿಲೋಚನ ಮೊಹಾಪಾತ್ರ ಡಿಜಿ,ಐಸಿಎಆರ್

ಮುಖ್ಯ ಅತಿಥಿ ಪ್ರೊ. ರಮೇಶ್ ಚಂದ್ ಆಹಾರ ಮತ್ತು ಪೌಷ್ಟಿಕ ಭದ್ರತೆಯ ಬಗ್ಗೆ ಮಾತನಾಡಿದರು. ವಿಜ್ಞಾನ, ನಾವಿನ್ಯತೆ ಮತ್ತು ನೀತಿ ಬೆಂಬಲದೊಂದಿಗೆ ರೈತರ ಆದಾಯ ಹೆಚ್ಚಿಸಬಹುದು ಎಂದು ವಿವರಿಸಿದರು. ಭಾರತೀಯ ಹವಾಮಾನ ಇಲಾಖೆಯ ಡಾ. ಕೆ.ಕೆ. ಸಿಂಗ್ ವಂದನಾರ್ಪಣೆ ಮಾಡಿದರು.

ಕೃಷಿ ವಿಜ್ಞಾನ ಮೇಳದಸುಸ್ಥಿರ ಕೃಷಿಯಲ್ಲಿ ಸಹಕ್ರಿಯೆ ಮತ್ತು ವಹಿವಾಟುಎಂಬ ಶೀರ್ಷಿಕೆಯ ಗೋಷ್ಠಿಯಲ್ಲಿ 200ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಿದ್ದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಇಂಪಾಲದ ಸಿಎಯು ಮಾಜಿ ಕುಲಪತಿ ಪದ್ಮ ಭೂಷಣ ಡಾ. ಆರ್.ಬಿ. ಸಿಂಗ್, ಕಾರ್ಯಕ್ರಮ ಆಯೋಜಿಸಿರುವುದಕ್ಕಾಗಿ ಆಯೋಜಕರನ್ನು ಅಭಿನಂದಿಸಿದರು. ಸಂಪನ್ಮೂಲಗಳು ನಮ್ಮ ಪಾಲಕರಿಂದ ಆನುವಂಶಿಕವಾಗಿ ಬಂದಿಲ್ಲ ಆದರೆ ನಾವು ಅವುಗಳನ್ನು ನಮ್ಮ ಮಕ್ಕಳಿಂದ ಎರವಲು ಪಡೆಯುತ್ತಿದ್ದೇವೆ ಎಂದು ಅವರು ಎಚ್ಚರಿಸಿದರು. ನಿರ್ಧಾರ ಬೆಂಬಲ ವ್ಯವಸ್ಥೆಗೆ ಬೃಹತ್ ದತ್ತಾಂಶ ವಿಶ್ಲೇಷಣೆ, ಕೃತಕ ಬುದ್ಧಿಮತ್ತೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಮ್ಮ ರಚನೆಯ ಎಲ್ಲಾ ಸ್ತಂಭಗಳಾದ ಪರಿಸರ, ಆರ್ಥಿಕ ಮತ್ತು ಸಾಮಾಜಿಕ ಸುಸ್ಥಿರತೆಯ ಮೇಲೆ ಕೃಷಿ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅವರು ಗಮನಸೆಳೆದರು. ಅವರು ಹಸಿವಿನ ನಿರ್ಮೂಲನೆ ಮತ್ತು ಬಡತನ ಮುಕ್ತ ರಾಷ್ಟ್ರಕ್ಕಾಗಿ ಸುಸ್ಥಿರ ಕೃಷಿಯತ್ತ ಗಮನ ಹರಿಸಬೇಕೆಂದರು.

ಡಾ. ಆರ್.ಬಿ. ಸಿಂಗ್ ಇಂಪಾಲ, ಸಿ..ಯು. ಕುಲಪತಿ

ಪ್ರೊ. ಕಮಲ್ ವಟ್ಟಾ ಸುಸ್ಥಿರ ಕೃಷಿಯತ್ತ ನೋಡುವ ಅಗತ್ಯವಿದೆ ಎಂದು ಹೇಳಿ, ಇದನ್ನು ಪರಿಸರಾತ್ಮಕ ನೀರಾವರಿ, ಆರ್ಥಿಕತೆ, ಪರಿಸರ ಮತ್ತು ಸಾಮಾಜಿಕ ಅಂಶಗಳ ಏಕೀಕರಣದ ಮೂಲಕ ಸಾಧಿಸಬಹುದು. ಸಹಕ್ರಿಯೆಗಳನ್ನು ಕಡಿಮೆ ಪ್ರಮಾಣದಲ್ಲಿ ಸಾಧಿಸಬಹುದು ಆದರೆ ಪ್ರಮಾಣ ಹೆಚ್ಚಾದಾಗ ವ್ಯವಸ್ಥೆಯಲ್ಲಿ ಸಮಷ್ಟಿ ನಿರ್ವಹಿಸುವುದು ಕಷ್ಟವಾಗುತ್ತದೆ, ಆದ್ದರಿಂದ ಪ್ರಮಾಣ ಬಹಳ ಮುಖ್ಯ ಎಂದರು. ಸಂಶೋಧನಾ ಬೆಂಬಲ ಮತ್ತು ಉತ್ಪಾದಕತೆಯ ನಷ್ಟದ ಪುರಾವೆಗಳ ಹೊರತಾಗಿಯೂ, ಆರ್ಥಿಕ ಪ್ರೋತ್ಸಾಹದ ಕೊರತೆಯಿಂದಾಗಿ ರೈತರು ಸುಸ್ಥಿರ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುತ್ತಾರೆ ಎಂದು ಅವರು ವ್ಯಕ್ತಪಡಿಸಿದರು. ಸುಸ್ಥಿರ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಆರ್ಥಿಕ ಪ್ರೋತ್ಸಾಹ ನೀಡಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಡಾ.ಸುರೇಶ್ ಪಾಲ್ ಕಳೆದ ಕೆಲವು ವರ್ಷಗಳಲ್ಲಿ ಕೃಷಿ ಕ್ಷೇತ್ರದ ಕಾರ್ಯಕ್ಷಮತೆ ಗಮನಾರ್ಹವಾಗಿ ಸುಧಾರಿಸಿದೆ ಎಂಬ ಮಾಹಿತಿ ನೀಡಿದರು. ಕಳೆದ ಕೆಲವು ವರ್ಷಗಳಿಂದ ನಾವು ಶೇ.3.5-4ರಷ್ಟು ಬೆಳವಣಿಗೆಯನ್ನು ಹೊಂದಿರುವುದರಿಂದ 2025 ವೇಳೆಗೆ ನಮ್ಮ ಕೃಷಿ ಉತ್ಪನ್ನಗಳ ರಫ್ತು ದ್ವಿಗುಣಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ಎಣ್ಣೆಕಾಳು ಬೆಳೆಗಳು ಮತ್ತು ನಾವು ಆಮದು ಮಾಡಿಕೊಳ್ಳುವ ಇತರ ಬೆಳೆಗಳ ಉತ್ಪಾದನೆಯ ಬಗ್ಗೆಯೂ ಅವರು ಗಮನ ಸೆಳೆದರು. ಇದು ನಮ್ಮ ಆಮದು ಮೊತ್ತ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.

ಮಧ್ಯಪ್ರದೇಶದ ರೈತ ಕಾರ್ಯಕರ್ತ ಶ್ರೀ ರಾಜ್ಪಾಲ್ ರಾಥೋಡ್ ರೈತನ ಆದಾಯವನ್ನು ದುಪ್ಪಟ್ಟುಗೊಳಿಸುವುದರೊಂದಿಗೆ ಸುಸ್ಥಿರತೆಯ ನೇರ ಸಂಬಂಧವಿದೆ ಎಂದು ಪ್ರತಿಪಾದಿಸಿದರು. ಪೌಷ್ಟಿಕಾಂಶದ ಸುರಕ್ಷತೆಯ ಜೊತೆಗೆ, ರಾಸಾಯನಿಕ ಮುಕ್ತ ಆಹಾರದ ಉತ್ಪಾದನೆಯು ಒಂದು ಆರೋಗ್ಯ ಒಂದು ವಿಶ್ವಕ್ಕೆ ಪ್ರಮುಖ ಅಂಶವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಡಾ. ಅನುಪಮ್ ಮಿಶ್ರಾ ಅವರು ದೇಶದ ವಿವಿಧ ಪ್ರದೇಶಗಳಲ್ಲಿ ಸುಸ್ಥಿರ ಕೃಷಿಯತ್ತ ಗಮನ ಸೆಳೆದರು ಮತ್ತು ಬೆಟ್ಟ ಪ್ರದೇಶ, ಕರಾವಳಿ ಪ್ರದೇಶ, ಶುಷ್ಕ ಮತ್ತು ಅರೆ ಒಣ ಭೂಮಿಗಳಲ್ಲಿ ಸುಸ್ಥಿರ ಕೃಷಿಯ ಅರ್ಥ ವಿಭಿನ್ನವಾಗಿದೆ ಎಂದು ಹೇಳಿದರು. ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ವಿಶೇಷವಾಗಿ ದೂರದ ಪ್ರದೇಶಗಳಿಗೆ ಭಾರತ ಸರ್ಕಾರದ ವಿವಿಧ ಯೋಜನೆಗಳನ್ನು ಅವರು ಒತ್ತಿ ಹೇಳಿದರು.

ಎರಡನೇ ಗೋಷ್ಠಿಸವಾಲುಗಳು ಮತ್ತು ನೀತಿ ಚೌಕಟ್ಟುಮೇಲೆ ಕೇಂದ್ರೀಕರಿಸಿತ್ತು. ಡಾ. .ಕೆ. ಸಿಂಗ್ ಮಾಜಿ ಕುಲ ಸಚಿವ, ಕೃಷಿ ವಿಶ್ವವಿದ್ಯಾಲಯ, ಗ್ವಾಲಿಯರ್ ಮತ್ತು ಮಾಜಿ ಡಿಡಿಜಿ ಮತ್ತು ಕಾರ್ಯದರ್ಶಿ ಕೃಷಿ ವಿಜ್ಞಾನ ಮೇಳದಡಿ ಎನ್...ಎಸ್. ರಾಷ್ಟ್ರೀಯ ಸಂಪನ್ಮೂಲ ನಿರ್ವಹಣೆ (ಎನ್.ಆರ್.ಎಂ.)ಬಗ್ಗೆ ಒತ್ತಿ ಹೇಳುತ್ತಿರುವುದಕ್ಕೆ ಮತ್ತು ಸುಸ್ಥಿರ ಕೃಷಿಗೆ ಸಂಬಂಧಿಸಿದ ಅಂದರೆ ಅಂತರ್ಜಲ ಹೊರತೆಗೆಯುವುದು, ನೀರಿನ ಗುಣಮಟ್ಟ, ಮಣ್ಣಿನ ಆರೋಗ್ಯದ ನಿರ್ವಹಣೆ ಮತ್ತು ಹವಾಮಾನ ಬದಲಾವಣೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಲು ಭೂಮಿಕೆ ಒದಗಿಸಿದ ಆಯೋಜಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಣ್ಣಿನ ಆರೋಗ್ಯ ನಿರ್ವಹಣೆಯ ಬಗ್ಗೆ ಕಾಳಜಿ ವ್ಯಕ್ತಪಡಿಸಿದ ಅವರು, ರೈತರಿಗೆ ರಸಗೊಬ್ಬರವನ್ನು ಸಮತೋಲಿತ ಪ್ರಮಾಣದಲ್ಲಿ ಬಳಸುವಂತೆ ಉತ್ತೇಜಿಸಲು ವಿಜ್ಞಾನಿಗಳ ಸಮುದಾಯಕ್ಕೆ ಸಲಹೆ ಮಾಡಿದರು.

ಲೂಧಿಯಾನ ಪಿಎಯು,ಮಣ್ಣು ವಿಜ್ಞಾನ ವಿಭಾಗದ ಮುಖ್ಯಸ್ಥ, ಡಾ. .ಪಿ. ಚೌಧರಿ, ಪಂಜಾಬ್ ನಲ್ಲಿ ಪ್ರಸ್ತುತ ರೈತರು ಅಳವಡಿಸಿಕೊಂಡಿರುವ ಪದ್ಧತಿಗಳ ಬಗ್ಗೆ ಮಾತನಾಡಿ, ಹೆಚ್ಚಿನ ಇಳುವರಿ ಮತ್ತು ಕೃಷಿ ಸಂಪನ್ಮೂಲ ನಿರ್ವಹಣೆಗಾಗಿ ನಾವಿನ್ಯತೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು.

..ಆರ್.. ಪಿಡಿ, ಡಬ್ಲ್ಯು.ಟಿ.ಸಿ. ಡಾ. ಮಾನ್ ಸಿಂಗ್ ನೀರಿನ ಬಗ್ಗೆ ಕೇಂದ್ರೀಕರಿಸಿ, ಸುಸ್ಥಿರ ಕೃಷಿಯ ದೀರ್ಘ ಕಾಲೀನ ದೃಷ್ಟಿಕೋನದ ಬಗ್ಗೆ ಒತ್ತಿ ಹೇಳಿದರು. ಅವರು ಕೃಷಿ ಪರಿಸರದಲ್ಲಿ ನೀರು, ಮಣ್ಣು ಮತ್ತು ಇಂಧನದ ಪಾತ್ರವನ್ನು ವಿವರಿಸಿದರು. ಬದಲಾಗುತ್ತಿರುವ ವಾಯುಗಣದಲ್ಲಿ ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣದ ಮೂಲಕ ಹತ್ತಿರದ ಭವಿಷ್ಯದಲ್ಲಿ ಜಲ ಸಂರಕ್ಷಣೆಯ ಕುರಿತಂತೆ ಡಾ. ಸಿಂಗ್ ಪ್ರತಿಪಾದಿಸಿದರು. ಇಂಥ ಗಮನಾರ್ಹ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಉಪಯುಕ್ತ ಜ್ಞಾನಕ್ಕೆ ಪ್ರಾಥಮಿಕ ದತ್ತಾಂಶದ ಅಗತ್ಯವಿದೆ ಎಂದರು. ಹವಾಮಾನ ಬದಲಾವಣೆಯ ಸನ್ನಿವೇಶಗಳಲ್ಲಿ ಯೋಜನೆ ಮತ್ತು ನಿರ್ಧಾರ ತೆಗೆದುಕೊಳ್ಳಲು ಮಾಹಿತಿಯು ಸಮುದಾಯಕ್ಕೆ ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ಪಂಜಾಬ್‌ ಪ್ರಗತಿಪರ ರೈತರಲ್ಲಿ ಒಬ್ಬರಾದ ಬಟಿಂಡಾದ ಶ್ರೀ ಜಗ್ತಾರ್ ಸಿಂಗ್ ಬ್ರಾರ್, ತೀವ್ರ ಕೃಷಿಯಿಂದಾಗಿ ಮಣ್ಣಿನ ಸತ್ವ ಹೀನತೆ ಮತ್ತು ಮಣ್ಣಿನ ಶೋಷಣೆಯಂಥ ವಿಷಯಗಳ ಆಧಾರದಲ್ಲಿ ಮಣ್ಣಿನ ಆರೋಗ್ಯ ನಿರ್ವಹಣೆ, ಇಂಗಾಲದ ಜಾಗೃತಿ ಮತ್ತು ರಾಸಾಯನಿಕ ಗೊಬ್ಬರದ ಬದಲಿಗೆ ಸಾವಯವ ಇಂಗಾಲದ ಬಳಕೆ ಬಗ್ಗೆ ತಮ್ಮ ಅನುಭವ ಮತ್ತು ಅಭಿಪ್ರಾಯ ಹಂಚಿಕೊಂಡರು.

ಐಎಆರ್. ಕೃಷಿ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ವಿ.ಕೆ.ಸಿಂಗ್ ಅವರು ಭಾರತೀಯ ಕೃಷಿಯ ಪುನರಾವರ್ತಿತ ಬೆಳೆ ವಿಧಾನದ ಬಗ್ಗೆ ಒತ್ತಿ ಹೇಳಿದರು. " ರೀತಿಯ ಬೆಳೆ ಪದ್ಧತಿಯು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತದೆ ಮತ್ತು ದಿನದಿಂದ ದಿನಕ್ಕೆ ಮಣ್ಣಿನ ಆರೋಗ್ಯದ ಸ್ಥಿತಿಗೆ ಧಕ್ಕೆ ತರುತ್ತದೆ" ಎಂದು ಅವರು ಗಮನಸೆಳೆದರು. ಆದ್ದರಿಂದ, ಬೆಳೆ ವೈವಿಧ್ಯತೆಯತ್ತ ಸಾಗಲು ಅವರು ಸಲಹೆ ನೀಡಿದರು. ಅಲ್ಪಾವಧಿಯ ಬೆಳೆ ಸೇರ್ಪಡೆ ಮಾಡುವುದರಿಂದ ಸಂಪನ್ಮೂಲಗಳನ್ನು ಉಳಿಸಬಹುದು ಮತ್ತು ಮಣ್ಣು ಹಾಳಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದರು.

ಇಂಧನ ಸಮಾವೇಶ

ಪರಿಸರ ಸ್ನೇಹಿ ಮತ್ತು ವೆಚ್ಚ-ದಕ್ಷತೆಯ ಇಂಧನ ತಂತ್ರಜ್ಞಾನಗಳ ಪೂರೈಕೆಗೆ ತಾಂತ್ರಿಕ ನಾವೀನ್ಯತೆಯನ್ನು ವೇಗಗೊಳಿಸುವ ಅವಶ್ಯಕತೆಯಿದೆ: ಕೇಂದ್ರ ವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ ರಾಜ್ ಕುಮಾರ್ ಸಿಂಗ್

ಇಂಧನ ಸಮಾವೇಶಸ್ವಾವಲಂಬನೆ ಮತ್ತು ಜಾಗತಿಕ ಕಲ್ಯಾಣಕ್ಕಾಗಿ ಶುದ್ಧ ಇಂಧನದ ಮೇಲೆ ಕೇಂದ್ರೀಕರಿಸಿದ್ದು ಇದನ್ನು ಕೇಂದ್ರ ವಿದ್ಯುತ್ ಸಚಿವಾಲಯ(ಸ್ವತಂತ್ರ ನಿರ್ವಹಣೆ) ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವ ಶ್ರೀ ರಾಜ್ ಕುಮಾರ್ ಸಿಂಗ್ ಅವರು ಉದ್ಘಾಟಿಸಿದರು. "ಇಂಧನ ಲಭ್ಯತೆ", "ಇಂಧನ ಸಮೃದ್ಧತೆ" ಮತ್ತು "ಇಂಧನ ಪ್ರಸರಣ" ವನ್ನು ಕೇಂದ್ರೀಕರಿಸಿ ಮುಂದಿನ ಸುಸ್ಥಿರ ಭವಿಷ್ಯಕ್ಕಾಗಿ, ನವೀಕರಿಸಬಹುದಾದ ಇಂಧನವನ್ನು ಅಗ್ಗವಾಗಿಸಿ ಎಲ್ಲರಿಗೂ ಕೈಗೆಟುಕುವಂತೆ ಮಾಡಲು ."ಇಂಧನ ಆರ್ಥಿಕತೆ"ಯಾಗಿ ಭಾರತವನ್ನು ಇಂಧನ ಕ್ಷೇತ್ರದಲ್ಲಿ ಆದರ್ಶಪ್ರಾಯವನ್ನಾಗಿಸುವ ಪ್ರಯತ್ನಗಳನ್ನು ಸಚಿವರು ಶ್ಲಾಘಿಸಿದರು. 2030 ಹೊತ್ತಿಗೆ ಶೇ.40 ಸ್ಥಾಪಿತ ಸಾಮರ್ಥ್ಯ ಪಳೆಯುಳಿಕೆಯಲ್ಲದ ಇಂಧನದಿಂದ ಬರಲಿದೆ ಎಂದರು. ಹೆಚ್ಚು ವ್ಯಾಪಕ ಪ್ರಮಾಣದಲ್ಲಿ ವೆಚ್ಚ ದಕ್ಷತೆಯ ಇಂಧನ ತಂತ್ರಜ್ಞಾನ, ಸಾಮಾಜಿಕವಾಗಿ ಭದ್ರವಾದ ಮತ್ತು ಪರಿಸರಾತ್ಮಕಾಗಿ ವಿತರಿಸಲು ತಂತ್ರಜ್ಞಾನದ ನಾವಿನ್ಯತೆಯನ್ನು ಹೆಚ್ಚಿಸುವ ಅಗತ್ಯವನ್ನು ಸಚಿವರು ಪ್ರತಿಪಾದಿಸಿದರು.

WhatsApp Image 2020-12-23 at 1.29.00 PM.jpeg

ಶ್ರೀ ರಾಜ್ ಕುಮಾರ್ ಸಿಂಗ್, ಕೇಂದ್ರ ಇಂಧನ, ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ರಾಜ್ಯ ಸಚಿವರು. ಐಐಎಸ್ಎಫ್ 2020 ಸಮಾವೇಶ ಉದ್ದೇಶಿಸಿ ಭಾಷಣ ಮಾಡಿದರು.

ಸರ್ಕಾರದ ಜೈವಿಕ ತಂತ್ರಜ್ಞಾನ ವಿಭಾಗದ ಕಾರ್ಯದರ್ಶಿ ಡಾ. ರೇಣು ಸ್ವರೂಪ್. ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಸಹಯೋಗದ ಮೂಲಕ ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ಜಾಗತಿಕ ಸವಾಲುಗಳನ್ನು ಎದುರಿಸಲು ಮತ್ತು ವಿಜ್ಞಾನ, ತಂತ್ರಜ್ಞಾನ ಮತ್ತು ನಾವಿನ್ಯತೆಯ ಸಹಕಾರದೊಂದಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಭಾರತದ ಪರಸ್ಪರ ಬದ್ಧತೆಗೆ ಆಧಾರವಾಗಿದೆ ಎಂದು ಪ್ರತಿಪಾದಿಸಿದರು. ಡಿಬಿಟಿಯ ವಿಜ್ಞಾನಿ ಡಾ. ಸಂಗೀತ ಕಸ್ತೂರೆ ಸಹಯೋಗಿ ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಶುದ್ಧ ಇಂಧನ ಭೂರಮೆ, ಶುದ್ಧ ಇಂಧನ ಅಂತಾರಾಷ್ಟ್ರೀಯ ಇಂಕ್ಯುಬೇಷನ್ ಕೇಂದ್ರದ ಮೂಲಕ ನವೋದ್ಯಮ ಬೆಂಬಲ, ಶುದ್ಧ ತಂತ್ರಜ್ಞಾನದ ಪ್ರಗತಿ, ನಾವಿನ್ಯ ಪೂರ್ಣ ತ್ಯಾಜ್ಯದಿಂದ ಇಂಧನ, ಇಂಧನ ದಕ್ಷತೆ ಮತ್ತು ಇಂಧನ ಪ್ರವೇಶ ಪ್ರದೇಶ ಮತ್ತು ಶುದ್ಧ ನಾವಿನ್ಯತೆ ಅಭಿಯಾನದ ವೇದಿಕೆಯಡಿಯಲ್ಲಿ ಇಂಧನ ನಾವಿನ್ಯತೆಯನ್ನು ವರ್ಧಿಸುವುದು ಕುರಿತಂತೆ ಚರ್ಚಿಸಿದರು.

WhatsApp Image 2020-12-23 at 1.29.01 PM.jpeg

ವೆಬಿನಾರ್ ಮೂಲಕ ವರ್ಚುವಲ್ ಅಧಿವೇಶನವು ಸರ್ಕಾರಿ ವಲಯ, ಸಂಶೋಧನೆ, ಶಿಕ್ಷಣ, ಕೈಗಾರಿಕೆ ನವೋದ್ಯಮ ಮತ್ತು ಇಂಕ್ಯುಬೇಟರ್ (ಸಿಇ.ಐಐಸಿ) ಬಾಧ್ಯಸ್ಥರನ್ನು ತೊಡಗಿಸಿಕೊಳ್ಳುವ ಮೂಲಕ ಶುದ್ಧ ಇಂಧನ ತಂತ್ರಜ್ಞಾನಗಳನ್ನು ಪ್ರದರ್ಶಿಸುವುದರ ಮೇಲೆ ಕೇಂದ್ರೀಕರಿಸಿದೆ. ಅಧಿವೇಶನದಲ್ಲಿ ಒಳಗೊಂಡಿರುವ ಪ್ರಮುಖ ಶುದ್ಧ ಇಂಧನ ಪ್ರದೇಶಗಳು / ವಿಷಯಗಳು ನವೀಕರಿಸಬಹುದಾದ ಇಂಧನ ಉತ್ಪಾದನೆ, ಪರಿಸರ ಸಂರಕ್ಷಣೆ ಮತ್ತು ಪರಿಸರ ನಿರ್ಮಾಣದಲ್ಲಿ ಇಂಧನ ಕಡಿತ, ಮತ್ತು ವಲಯಾಂತರದ ತಂತ್ರಜ್ಞಾನ ಮತ್ತು ನಾವಿನ್ಯತೆಗಳನ್ನು ಒಳಗೊಂಡಿವೆ.

***



(Release ID: 1685933) Visitor Counter : 320