ಪಶು ಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವಾಲಯ
ವರ್ಷಾಂತ್ಯದ ಅವಲೋಕನ-2020: ಮೀನುಗಾರಿಕೆ ಇಲಾಖೆ
ದೇಶದ ಮೀನುಗಾರರಿಗೆ ವರದಾನವಾದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್’ವೈ)
ಮೀನುಗಾರರು ಮತ್ತು ಮೀನು ಕೃಷಿಕರಿಗೆ 44,935 ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ
ಮೀನುಗಾರಿಕೆ ಮತ್ತು ಜಲಚರ ಸಾಕಣೆ(ಅಕ್ವಾಕಲ್ಚರ್) ಮೂಲಸೌಕರ್ಯ ಅಭಿವೃದ್ಧಿ ನಿಧಿ (ಎಫ್’ಐಡಿಎಫ್) ಮೂಲಕ ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಸುಮಾರು 9.40 ಲಕ್ಷ ಉದ್ಯೋಗಾವಕಾಶ ಸೃಷ್ಟಿ ನಿರೀಕ್ಷೆ
Posted On:
23 DEC 2020 3:31PM by PIB Bengaluru
ಮೀನುಗಾರಿಕೆಯು ಆದಾಯ ಮತ್ತು ಉದ್ಯೋಗ ಸೃಷ್ಟಿಯ ಪ್ರಬಲ ವಲಯ ಎಂದು ಗುರುತಿಸಲಾಗಿದೆ. ಈ ವಲಯವು ಹಲವಾರು ಅಧೀನ ಉದ್ದಿಮೆಗಳ ಪ್ರಗತಿ ಉತ್ತೇಜಿಸುವ ಶಕ್ತಿ ಹೊಂದಿದ್ದು, ಅಗ್ಗದ ಮತ್ತು ಪೌಷ್ಟಿಕಾಂಶವುಳ್ಳ ಆಹಾರ ಒದಗಿಸುವ ಆಧಾರಸ್ತಂಭವಾಗಿದೆ. ಜತೆಗೆ, ಆರ್ಥಿಕವಾಗಿ ಹಿಂದುಳಿದಿರುವ ಬಹುಸಂಖ್ಯಾತ ವರ್ಗಗಳಿಗೆ ಇದು ಜೀವನಾಧಾರ ಮೂಲವಾಗಿದೆ. ದೇಶದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ಮೀನುಗಾರಿಕೆ ವಲಯ ಮಹತ್ವದ ಸ್ಥಾನವನ್ನು ಆಕ್ರಮಿಸಿಕೊಂಡಿದೆ.. ಭಾರತದಲ್ಲಿ ತ್ವರಿತವಾಗಿ ಬೆಳವಣಿಗೆ ಕಾಣುತ್ತಿರುವ ಮೀನುಗಾರಿಕೆ ವಲಯವು ದೇಶದ ಹೆಚ್ಚಿನ ಪ್ರಮಾಣದ ಜನರಿಗೆ ಪೌಷ್ಟಿಕಾಂಶ ಮತ್ತು ಆಹಾರ ಭದ್ರತೆ ಒದಗಿಸುತ್ತಿದೆ. ಜತೆಗೆ, ಅಪಾರ ಜನರಿಗೆ ಅಂದರೆ, 28 ದಶಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಉದ್ಯೋಗ ಸೃಷ್ಟಿಸಿ, ಕೈ ತುಂಬಾ ಆದಾಯ ತಂದುಕೊಡುತ್ತಿದೆ.
ಭಾರತ ವಿಶ್ವದಲ್ಲೇ 2ನೇ ಅತಿದೊಡ್ಡ ಮೀನು ಉತ್ಪಾದನಾ ರಾಷ್ಟ್ರವಾಗಿದ್ದು, ಜಾಗತಿಕ ಉತ್ಪಾದನೆಯ ಶೇಕಡ 7.56ರಷ್ಟು ಮೀನು ಉತ್ಪಾದನೆ ಭಾರತದಲ್ಲೇ ಆಗುತ್ತಿದೆ. ದೇಶದ ಒಟ್ಟು ಮೌಲ್ಯ ಸೇರ್ಪಡೆ(ಜಿವಿಎ)ಗೆ 1.24% ಕೊಡುಗೆ ನೀಡುತ್ತಾ ಬಂದಿರುವ ಮೀನುಗಾರಿಕೆ ವಲಯವು, ಕೃಷಿ ವಲಯದ ಜಿವಿಎಗೆ 7.28%ಗಿಂತ ಹೆಚ್ಚಿನ ಕೊಡುಗೆ ನೀಡುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ವಲಯವು ಲಕ್ಷಾಂತರ ಜನರಿಗೆ ಆಹಾರ, ಪೌಷ್ಟಿಕಾಂಶ, ವರಮಾನ ಮತ್ತು ಜೀವನಾಧಾರ ಸ್ತಂಭವಾಗಿದೆ. 2019-20ನೇ ಸಾಲಿನಲ್ಲಿ ಮೀನುಗಾರಿಕೆ ರಫ್ತು ವಹಿವಾಟಿನಿಂದ ಭಾರತ ಗಳಿಸಿರುವ ಆದಾಯ 46,662.85 ಕೋಟಿ ರೂ. ಆಗಿದೆ. ಈ ವಲಯವು ಪ್ರಾಥಮಿಕ ಹಂತದಲ್ಲಿ 280 ಲಕ್ಷ ಜನರಿಗೆ ನೇರವಾಗಿ (ಪ್ರತ್ಯಕ್ಷ) ಜೀವನಾಧಾರ ಬೆಂಬಲ ನೀಡುವ ಜತೆಗೆ, 550 ಲಕ್ಷಕ್ಕಿಂತ ಹೆಚ್ಚಿನ ಜನರಿಗೆ ಮೌಲ್ಯ ಸರಪಳಿಯಲ್ಲಿ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. ಮೀನುಗಾರಿಕೆ ವಲಯ ಕಳೆದ ಕೆಲವು ವರ್ಷಗಳಿಂದ 7%ಗಿಂತ ಹೆಚ್ಚಿನ ಬೆಳವಣಿಗೆ ಕಾಣುತ್ತಿದೆ. ಎಲ್ಲ ವರ್ಗದ ಜನರು ಭರಿಸಬಹುದಾದ ಕೈಗೆಟಕುವ ಬೆಲೆಗೆ ಸಿಗುವ ಮೀನು ಪ್ರೋಟಿನ್’ಯುಕ್ತ ಶ್ರೀಮಂತ ಆಹಾರ ಮೂಲ. ಇದು ಹಸಿವು ಮತ್ತು ಪೌಷ್ಟಿಕಾಂಶ ಕೊರತೆ ನೀಗಿಸುವ ಆರೋಗ್ಯಕರ ಆಹಾರ ಆಯ್ಕೆಯಾಗಿದೆ. 2022ರ ವೇಳೆಗೆ ಮೀನು ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಅಪಾರ ಸಾಮರ್ಥ್ಯವನ್ನು ಈ ವಲಯ ಹೊಂದಿದೆ. ಕೇಂದ್ರ ಸರ್ಕಾರದ ಉದ್ದೇಶವೂ ಇದೇ ಆಗಿದೆ. ಹಾಗಾಗಿ, ಕೇಂದ್ರ ಸರ್ಕಾರದ ಸುಧಾರಣಾ ನೀತಿಗಳು ಮತ್ತು ಹಣಕಾಸಿನ ಬೆಂಬಲಗಳು ಮೀನುಗಾರಿಕೆ ವಲಯದ ಅಭಿವೃದ್ಧಿಗೆ ವೇಗ ನೀಡಲು ಸುಸ್ಥಿರ, ಜವಾಬ್ದಾರಿಯುತ, ಎಲ್ಲರ ಸಮಾನ ಅಭಿವೃದ್ಧಿಗೆ ಕೇಂದ್ರೀಕೃತ ಗಮನ ನೀಡಿದೆ. 2020-21ರಲ್ಲಿ ಮಾಡಲಾಗಿರುವ ಸಾಧನೆಗಳ ವಿವರವನ್ನು ಕೆಳಗೆ ನೀಡಲಾಗಿದೆ.
1. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್’ವೈ) 07.12.2020ರ ವರೆಗೆ
ಒಳನಾಡು ಮೀನುಗಾರಿಕೆ
a. ಒಳನಾಡು ಜಲಚರ ಸಾಕಣೆ ಯೋಜನೆ ಅಡಿ 4,171 ಹೆಕ್ಟೇರ್ ಕೊಳ(ಕಟ್ಟೆ) ಪ್ರದೇಶ ಅಭಿವೃದ್ಧಿಗೆ ಅನುಮೋದನೆ
b. 757 ಜೈವಿಕ ಕಣ ಘಟಕಗಳು(ಬಯೋಫ್ಲಾಕ್ ಯೂನಿಟ್ಸ್) ಮತ್ತು 1242 ಮರುಪರಿಚಲನೆಯ ಜಲಚರ ಸಾಕಣೆ ವ್ಯವಸ್ಥೆಗೆ ಮಂಜೂರಾತಿ
c. 3,763 ಪಂಜರಗಳು ಮತ್ತು 72.7 ಹೆಕ್ಟೇರ್ ಪ್ರದೇಶದ ಕೆರೆ, ಜಲಾಶಯ ಮತ್ತಿತರ ನೀರಿನ ಮೂಲಗಳಲ್ಲಿ ಕೊಟ್ಟಿಗೆ(ದೊಡ್ಡಿ) ನಿರ್ಮಾಣಕ್ಕೆ ಅನುಮೋದನೆ
d. 109 ಮೀನು/ಸೀಗಡಿ ಮೊಟ್ಟೆ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ
e. ಲವಣ ಮತ್ತು ಕ್ಷಾರೀಯ ಗುಣಗಳುಳ್ಳ 373 ಹೆಕ್ಟೇರ್ ಕೊಳ(ಕೆರೆ) ಪ್ರದೇಶದಲ್ಲಿ ಮೀನುಗಾರಿಕೆಗೆ ಅನುಮೋದನೆ
f. 6 ಮೀನು ಮರಿಗಳ ಕಾವು-ಬ್ಯಾಂಕ್ ಸೌಲಭ್ಯ ಸ್ಥಾಪನೆಗೆ ಅನುಮೋದನೆ.
ಸಾಗರ ಮೀನುಗಾರಿಕೆ
a. 122 ಸಾಗರ ಆಳದಲ್ಲಿ ಮೀನುಗಾರಿಕೆ ಹಡಗುಗಳು
b. ಹಾಲಿ ಇರುವ 217 ಮೀನುಗಾರಿಕೆ ದೋಣಿಗಳ ಮೇಲ್ದರ್ಜೆ
c. ಯಾಂತ್ರೀಕೃತ ಮೀನುಗಾರಿಕೆ ಹಡಗುಗಳಲ್ಲಿ 2,755 ಜೈವಿಕ ಶೌಚಾಲಯಗಳ ನಿರ್ಮಾಣ
d. ಮೀನು ಸಾಕಣೆಗೆ 656 ಸಾಗರ ಪಂಜರಗಳ ಸ್ಥಾಪನೆ
e. ಸಾಗರ ಮೀನುಗಳ ಸಾಕಣೆಗೆ 2 ಸಣ್ಣ ಮೊಟ್ಟೆ ಕೇಂದ್ರಗಳು
f. ಉಪ್ಪು ನೀರಿನಲ್ಲಿ ಮೀನು ಸಾಕಣೆಗೆ 471 ಹೆಕ್ಟೇರ್ ಜಲ ಪ್ರದೇಶಕ್ಕೆ ಅನುಮೋದನೆ. ಉಪ್ಪು ನೀರಿನ ಪ್ರದೆಶದಲ್ಲಿ 6 ಮೀನು ಮೊಟ್ಟೆ ಕೇಂದ್ರಗಳ ಸ್ಥಾಪನೆಗೆ ಅನುಮೋದನೆ.
ಮೀನುಗಾರರ ಕಲ್ಯಾಣ
a. 1,820 ಸಂಖ್ಯೆಯ ಬದಲಿಸುವ ದೋಣಿಗಳು ಮತ್ತು ಮೀನುಗಾರರಿಗೆ ಬಲೆಗಳು. (ಟೇಬಲ್ A-3a)
b. ಮೀನುಗಾರಿಕೆ ನಿಷೇಧ ಅವಧಿಯಲ್ಲಿ ಮೀನುಗಾರಿಕೆ ಸಂಪನ್ಮೂಲ ಸಂರಕ್ಷಣೆಗಾಗಿ 1,22,551 ಮೀನುಗಾರರ ಕುಟುಂಬಗಳಿಗೆ ಜೀವನಾಧಾರ ಮತ್ತು ಪೌಷ್ಟಿಕಾಂಶ ಬೆಂಬಲ ನೀಡಲಾಗಿದೆ.
c. 20 ಸಂಖ್ಯೆಯ ವಿಸ್ತರಣೆ ಮತ್ತು ಬೆಂಬಲ ಸೇವೆಗಳು.
ಮೀನುಗಾರಿಕೆ ಮೂಲಸೌಕರ್ಯ
a. 70 ಐಸ್ ಘಟಕಗಳು/ ಶೀಥಲೀಕರಣ ಘಟಕಗಳಿಗೆ ಮಂಜೂರಾತಿ
b. 127 ಮೀನು ಆಹಾರ ಮಿಲ್’ಗಳು/ ಘಟಕಗಳು.
c. 6,288 ಮೀನು ಸಾಗಾಣಿಕೆ ಸೌಲಭ್ಯ ಘಟಕಗಳು. ಅವೆಂದರೆ, 58 ಶೈಥ್ಯೀಕರಿಸಿದ ವಾಹನಗಳು, 187 ನಿರೋಧನ ವಾಹನಗಳು, 986 ಆಟೋರಿಕ್ಷಾಗಳು, 3036 ಮೋಟಾರ್ ಸೈಕಲ್’ಗಳು, 1831 ಐಸ್ ಬಾಕ್ಸ್ ಇರುವ ಸೈಕಲ್’ಗಳಿಗೆ ಮಂಜೂರಾತಿ.
d. 43 ಮೀನು ಮಾರಾಟ ಮಾರುಕಟ್ಟೆಗಳ 606 ಬಿಡಿ ಮಾರಾಟ ಘಟಕಗಳು.
e. ಅಲಂಕಾರಿಕ ಕಿಯೋಸ್ಕ್’ಗಳು ಸೇರಿದಂತೆ 563 ಮೀನು ಕಿಯೋಸ್ಕ್’ಗಳು.
f. 41 ಮೌಲ್ಯವರ್ಧಿತ ಉದ್ಯಮ ಘಟಕಗಳಿಗೆ ಈ ತನಕ ಮಂಜೂರಾತಿ ನೀಡಲಾಗಿದೆ.
ಜಲಚರಗಳ ಆರೋಗ್ಯ ನಿರ್ವಹಣೆ
a. 8 ರೋಗ ಪತ್ತೆ ಕೇಂದ್ರಗಳು ಮತ್ತು ಗುಣಮಟ್ಟ ಪರೀಕ್ಷಾ ಪ್ರಯೋಗಾಲಯಗಳಿಗೆ ಅನುಮೋದನೆ
b. 17 ಮೊಬೈಲ್ ಕೇಂದ್ರಗಳು ಮತ್ತು ಪರೀಕ್ಷಾ ಪ್ರಯೋಗಾಲಯಗಳಿಗೆ ಅನುಮೋದನೆ
c. 2 ಜಲಚರ ರೆಫರಲ್ ಪ್ರಯೋಗಾಲಯಗಳಿಗೆ ಅನುಮೋದನೆ
ಅಲಂಕಾರಿಕ ಮೀನುಗಾರಿಕೆ
a. 203 ಅಲಂಕಾರಿಕ ಮೀನು ಪಾಲನೆ ಘಟಕಗಳ ಮಂಜೂರಾತಿ
b. ಸಂಯೋಜಿತ ಅಲಂಕಾರಿಕ ಮೀನು ಘಟಕಗಳಿಗೆ(ಸಂತಾನೋತ್ಪತ್ತಿ ಮತ್ತು ಪಾಲನೆ) ಮಂಜೂರಾತಿ.
ಕಡಲ ಕಳೆ ಕೃಷಿ
a. ಕಡಲ ಕಳೆ ಕೃಷಿಗಾಗಿ 15,000 ತೆಪ್ಪಗಳಿಗೆ ಅನುಮೋದನೆ
b. ಕಡಲ ಕಳೆ ಕೃಷಿಗಾಗಿ 1,331 ಮಾನೊಲಿನ್ ಟ್ಯೂಬ್ ಬಲೆಗಳಿಗೆ ಅನುಮೋದನೆ
ತಣ್ಣೀರು ಮೀನುಗಾರಿಕೆ
a. 50.5 ಹೆಕ್ಟೇರ್ ಪ್ರದೇಶದಲ್ಲಿ ಹೊಸ ಕೊಳಗಳ ನಿರ್ಮಾಣಕ್ಕೆ ಮಂಜೂರಾತಿ
b. 4 ಸಿಹಿ ನೀರು ಮೀನಿನ ಮೊಟ್ಟೆ ಕೇಂದ್ರಗಳು ಮತ್ತು 958 ಹೊಸ ನೀರಿನ ಕಾಲುವೆಗಳ ನಿರ್ಮಾಣಕ್ಕೆ ಮಂಜೂರಾತಿ
c. ತಣ್ಣೀರು ಮೀನುಗಾರಿಕೆಗಾಗಿ ಮರುಪರಿಚಲನೆಯ ಜಲಚರ ಸಾಕಣೆ ವ್ಯವಸ್ಥೆಯ 16 ಘಟಕಗಳಿಗೆ ಮಂಜೂರಾತಿ.
ಈಶಾನ್ಯ ಭಾಗಗಳ ಅಭಿವೃದ್ಧಿ
a. ಕೇಂದ್ರ ಸರ್ಕಾರದ 101.03 ಕೋಟಿ ರೂ. ಪಾಲಿನೊಂದಿಗೆ ಒಟ್ಟು ಮೀನುಗಾರಿಕೆ ಯೋಜನಾ ವೆಚ್ಚ 203.38 ಕೋಟಿ ರೂ.ಗೆ ಅನುಮೋದನೆ.
b. 25 ಮೀನು ಮೊಟ್ಟೆ ಕೇಂದ್ರಗಳಿಗೆ ಅನುಮೋದನೆ
c. ಮೀನು ಮರಿಗಳ ಪಾಲನೆ ಘಟಕಗಳು: 182.2 ಹೆಕ್ಟೇರ್
d. ಸಂಯೋಜಿತ ಮೀನು ಕೃಷಿ: 563.4 ಹೆಕ್ಟೇರ್
e. ಜಲಾಶಯಗಳಲ್ಲಿ ಪಂಜರಗಳ ಸ್ಥಾಪನೆ: 250
f. ಮರುಪರಿಚಲನೆಯ ಜಲಚರ ಸಾಕಣೆ ವ್ಯವಸ್ಥೆ: 22 ಘಟಕಗಳು
g. ಅಲಂಕಾರಿಕ ಮೀನುಗಾರಿಕೆ ಘಟಕಗಳು: 47
h. ಜೈವಿಕ ಕಣ ಘಟಕಗಳು: 62
i. ಹೊಸ ಕೊಳಗಳ ನಿರ್ಮಾಣ: 673 ಹೆಕ್ಟೇರ್
j. ಮೀನು ಆಹಾರ ಮಿಲ್’ಗಳು: 19
ಪ್ರಮುಖ ಚಟುವಟಿಕೆಗಳು
1. 6 ಮೀನು ಮರಿಗಳ ಕಾವು ಬ್ಯಾಂಕ್ (ಕಡಲ ಕಳೆ ಬ್ಯಾಂಕ್’ಗಳು ಸೇರಿ)ಗಳ ಸ್ಥಾಹವೆಗೆ ಅನುಮೋದನೆ.
2. 1997 ಸಾಗರ ಮಿತ್ರಗಳಿಗೆ ಅನುಮೋದನೆ
3. ಜಲಾಶಯಗಳ ಸಂಯೋಜಿತ ಅಭಿವೃದ್ಧಿ: 12 ಜಲಾಶಯಗಳಿಗೆ ಅನುಮೋದನೆ
4. ಮೀನು ಕೃಷಿಕರು ಉತ್ಪಾದಕರ ಸಂಘಟನೆ(ಎಫ್’ಎಫ್’ಪಿಒ): ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಲಾ 720 ಸಂಘಟನೆಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ
5. ಮತ್ಸ್ಯ ಸೇವಾ ಕೇಂದ್ರದ 20 ಘಟಕಗಳಿಗೆ ಅನುಮೋದನೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಗುರಿ ನಿಗದಿಗೆ ಸಿದ್ಧತೆ ಪೂರ್ಣ. ಮತ್ಸ್ಯ ಸೇವಾ ಕೇಂದ್ರಗಳ ಸ್ಥಾಪನೆ ಮತ್ತು ಕಾರ್ಯಾಚರಣೆ ಸಿದ್ಧಾಂತ ಅಂತಿಮಗೊಳಿಸಲಾಗುತ್ತಿದೆ.
6. ಸಂಯೋಜಿತ ಕರಾವಳಿ ಗ್ರಾಮಗಳು: ಕ್ರಿಯಾಯೋಜನೆ ಸಿದ್ಧವಾಗಿದ್ದು, ಅಂತಿಮಗೊಳಿಸಲಾಗುತ್ತಿದೆ.
7. ಸಂಯೋಜಿತ ಜಲಚರ ಪಾರ್ಕ್’ಗಳು: ಕ್ರಿಯಾಯೋಜನೆ ಸಿದ್ಧ, ಕ್ರಿಯಾಯೋಜನೆಯ ಪ್ರಮುಖಾಂಶಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳಿಸಲಾಗಿದೆ. ಅದರಂತೆ ಪ್ರಸ್ತಾವನೆ ಕಳಿಸಲು ಮನವಿ ಮಾಡಲಾಗಿದೆ.
ಪಶುಸಂಗೋಪನೆ ಮತ್ತು ಮೀನುಗಾರಿಕೆ ಕೃಷಿಕರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್
ಮೀನುಗಾರರು ಮತ್ತು ಮೀನು ಕೃಷಿಕರಿಗೆ ಈ ತನಕ ಒಟ್ಟು 44,935 ಕಿಸಾನ್ ಕ್ರೆಡಿಟ್ ಕಾರ್ಡ್’ಗಳನ್ನು ವಿತರಿಸಲಾಗಿದೆ. ಇದರ ಜತೆಗೆ, ಮೀನುಗಾರರು ಮತ್ತು ಮೀನು ಕೃಷಿಕರ ಸುಮಾರು 3.80 ಲಕ್ಷ ಅರ್ಜಿಗಳು ಬ್ಯಾಂಕ್’ಗಳಲ್ಲಿದ್ದು, ಪರಿಶೀಲನೆಯ ವಿವಿಧ ಹಂತಗಳಲ್ಲಿವೆ. ಅವುಗಳ ಪರಿಶೀಲನೆ ನಂತರ ಕಿಸಾನ್ ಕ್ರೆಡಿಟ್ ಕಾರ್ಡ್’ಗಳನ್ನು ವಿತರಿಸಲಾಗುತ್ತದೆ.
ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ
ಕೇಂದ್ರ ಸರ್ಕಾರ 2018ರ ಬಜೆಟ್’ನಲ್ಲಿ ‘ಸಮರ್ಪಿತ ಮೀನುಗಾರಿಕೆ ಮತ್ತು ಜಲಚರ ಮೂಲಸೌಕರ್ಯ ಅಭಿವೃದ್ಧಿ ನಿಧಿ’ ಸ್ಥಾಪಿಸಲು 7,550 ಕೋಟಿ ರೂ. ಅನುದಾನವನ್ನು ಮೀಸಲಿಟ್ಟಿದೆ. ಈ ಅನುದಾನವು 4 ಲಕ್ಷಕ್ಕಿಂತ ಅಧಿಕ ಸಾಗರ ಮತ್ತು ಒಳನಾಡು ಮೀನುಗಾರರು ಅದರಲ್ಲೂ ವಿಶೇಷವಾಗಿ ಮಹಿಳೆಯರು, ಸ್ವಸಹಾಯ ಗುಂಪುಗಳು, ದುರ್ಬಲ ವರ್ಗಗಳಿಗೆ ಪ್ರಯೋಜನ ಒದಗಿಸುವ ಸಾಮರ್ಥ್ಯ ಹೊಂದಿದೆ. ಆಧುನಿಕ ಮೂಲಸೌಕರ್ಯ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ಲಭ್ಯತೆಯ ಪರಿಣಾಮವಾಗಿ, ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿ(ಎಫ್ಐಡಿಎಫ್)ಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಿಯಾಯಿತಿ ದರದಲ್ಲಿ ಹಣಕಾಸು ಸೌಲಭ್ಯ ಒದಗಿಸಲಿದೆ.
ಎಫ್ಐಡಿಎಫ್ ನಿಧಿ ಅಡಿ ಮೂಲಸೌಕರ್ಯ ಅಭಿವೃದ್ಧಿಗೆ ನೀಡಲಾಗುವ ಹಣಕಾಸು ನೆರವು ವಿಸ್ತೃತವಾಗಿ ಮೀನುಗಾರಿಕೆ ಬಂದರು ನಿರ್ಮಾಣ, ಮೀನುಗಳ ಸಂಗ್ರಹ ಕೇಂದ್ರಗಳು, ಮೀನು ಮರಿ ಫಾರ್ಮ್’ಗಳು, ಮೀನು ಆಹಾರ ಮಿಲ್’ಗಳು, ಘಟಕಗಳು, ಜಲಾಶಯಗಳಲ್ಲಿ ಪಂಜರಗಳಿಂದ ಮೀನು ಸಾಕಣೆ, ಸಾಗರ ಸಾಕಣೆ ಚಟುವಟಿಕೆ, ಹಡಗುಗಳ ಮೂಲಕ ಸಾಗರ ಆಳದಲ್ಲಿ ಮೀನುಗಾರಿಕೆ, ರೋಗ ಪತ್ತೆ ಕೇಂದ್ರಗಳ ಸ್ಥಾಪನೆ, ಶೀಥಲ ಘಟಕಗಳ ಸ್ಥಾಪನೆ, ಸಾಗಣೆ ವ್ಯವಸ್ಥೆ, ಮೀನು ಸಂಸ್ಕರಣಾ ಘಟಕಗಳು, ಮೀನು ಮಾರುಕಟ್ಟೆ ಸ್ಥಾಪನೆ ಸೇರಿದಂತೆ ನಾನಾ ಚಟುವಟಿಕೆಗಳಿಗೆ ದೊರೆಯಲಿದೆ.
ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯು 1. ಮೀನುಗಾರಿಕೆ ವಲಯದಲ್ಲಿರುವ ಬೃಹತ್ ಮೂಲಸೌಕರ್ಯ ಕಂದಕವನ್ನು ಮುಚ್ಚಿಹಾಕಲಿದೆ. 2. ಗ್ರಾಮೀಣ ಜನರಿಗೆ ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಅಪಾರ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲಿದೆ. 3. ಮೀನು ಉತ್ಪಾದನೆ ಮತ್ತು ಉತ್ಪಾದಕತೆ ಹೆಚ್ಚಳಕ್ಕೆ ಕೊಡುಗೆ ನೀಡಲಿದೆ. 5. ಹಲವು ಪಟ್ಟು ಪ್ರಯೋಜನಗಳನ್ನು ಒದಗಿಸಲಿದೆ. 6. ಮೀನುಗಾರಿಕೆ ವಲಯದ ಪೂರ್ಣ ಸಾಮರ್ಥ್ಯವನ್ನು ಹೊರತೆಗೆಯುವ ಅಗತ್ಯವನ್ನು ಪೂರೈಸುತ್ತದೆ ಮತ್ತು 2022ರ ವೇಳೆಗೆ ದೇಶದ ರೈತರ ಆದಾಯ ದುಪ್ಪಟ್ಟು ಮಾಡಬೇಕೆಂಬ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಸಾಕಾರಗೊಳಿಸಲಿದೆ.
ನಬಾರ್ಡ್, ಎನ್’ಸಿಡಿಸಿ ಮತ್ತು ನಿರ್ದಿಷ್ಟ ವಾಣಿಜ್ಯ ಬ್ಯಾಂಕ್’ಗಳ ಸಹಭಾಗಿತ್ವದಲ್ಲಿ ಈ ನಿಧಿ ಸ್ಥಾಪನೆ ಆಗಲಿದೆ. ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯು ಈ ನಿಧಿಗೆ ನೋಡಲ್ ಏಜೆನ್ಸಿಯಾಗಿ ಕಾರ್ಯ ನಿರ್ವಹಿಸಲಿದೆ. ಮೀನುಗಾರಿಕೆ ಮತ್ತು ಜಲಚರ ಸಾಕಣೆ ಮೂಲಸೌಕರ್ಯ ಅಭಿವೃದ್ಧಿ ನಿಧಿಯು ಮೀನುಗಾರಿಕೆ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ ಸುಮಾರು 9.40 ಲಕ್ಷ ಜನರಿಗೆ ಪ್ರತ್ಯಕ್ಷ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಹೊಂದಲಾಗಿದೆ.
***
(Release ID: 1683629)
Visitor Counter : 614