ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ಇಂಡಿಯಾ ಮೊಬೈಲ್ ಕಾಂಗ್ರೆಸ್ 2020: ಪ್ರಧಾನಿ ನರೇಂದ್ರ ಮೋದಿ ಭಾಷಣ ‌


ಭವಿಷ್ಯದಲ್ಲಿ ದಾಪುಗಾಲಿಡಲು 5 ಜಿಯ ಸಕಾಲ ಅನುಷ್ಠಾನವನ್ನು ಖಾತ್ರಿಪಡಿಸಬೇಕು: ಪ್ರಧಾನಿ

ಉತ್ತಮ ಎಲೆಕ್ಟ್ರಾನಿಕ್ ತ್ಯಾಜ್ಯ ನಿರ್ವಹಣೆ ಮತ್ತು ಮಾಲಿನ್ಯ ತಗ್ಗಿಸುವ ಆರ್ಥಿಕತೆಯ ಸೃಷ್ಟಿ ಮಾಡುವ ಕಾರ್ಯಪಡೆಗಾಗಿ ಪ್ರಧಾನಿ ಕರೆ

ಕೋವಿಡ್-19 ಸಂಕಷ್ಟದಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ವರ್ಚುವಲ್ ಸಂವಹನಗಳ ಅಸಾಧಾರಣ ಮೌಲ್ಯ ಸಾಬೀತು: ಕೇಂದ್ರ ಸಚಿವ ರವಿಶಂಕರ್ ಪ್ರಸಾದ್

Posted On: 08 DEC 2020 1:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವರ್ಚುವಲ್ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2020 ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಿದರು. ಐಎಂಸಿ 2020 ಧ್ಯೆಯವಾಕ್ಯ "ಸಮಗ್ರ ನಾವಿನ್ಯತೆ - ಸ್ಮಾರ್ಟ್,ಸುಭದ್ರ, ಸುಸ್ಥಿರ" ಎಂಬುದಾಗಿದೆ. ಇದು ಪ್ರಧಾನಮಂತ್ರಿಯವರ ಆಶಯವಾದಆತ್ಮನಿರ್ಭರ ಭಾರತ’, ‘ಡಿಜಿಟಲ್ ಒಳಗೊಳ್ಳುವಿಕೆ’, ಮತ್ತುಸುಸ್ಥಿರ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಒಗ್ಗೂಡಿಸುವ ಗುರಿ ಹೊಂದಿದೆ.  ಇದು ವಿದೇಶಿ ಮತ್ತು ಸ್ಥಳೀಯ ಹೂಡಿಕೆಗಳನ್ನು ಹೆಚ್ಚಿಸಲು, ಟೆಲಿಕಾಂ ಮತ್ತು ಉದಯೋನ್ಮುಖ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಭಾರತವನ್ನು ಟೆಲಿಕಾಂ ಸಲಕರಣೆ, ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನಾ ಜಾಗತಿಕ ತಾಣವಾಗಿ ಮಾಡಲು ಒಗ್ಗೂಡಿ ಶ್ರಮಿಸುವಂತೆ ಕರೆ ನೀಡಿದರು. ತಾಂತ್ರಿಕ ಉನ್ನತೀಕರಣದ ಕಾರಣಕ್ಕೆ ಹ್ಯಾಂಡ್‌ ಸೆಟ್‌ ಗಳು ಮತ್ತು ಗ್ಯಾಜೆಟ್‌ ಗಳನ್ನು ಆಗಾಗ್ಗೆ ಬದಲಾಯಿಸುವ ಸಂಸ್ಕೃತಿಯ ವಿರುದ್ಧ ಅವರು ಎಚ್ಚರಿಕೆ ನೀಡಿದರು. ಎಲೆಕ್ಟ್ರಾನಿಕ್ ತ್ಯಾಜ್ಯವನ್ನು ನಿಭಾಯಿಸುವ ಮತ್ತು ತ್ಯಾಜ್ಯ ಮತ್ತು ಮಾಲಿನ್ಯ ತಗ್ಗಿಸಿ, ಅದರಿಂದ ಮರು ಉತ್ಪಾದನೆ ಮಾಡುವ (ಸರ್ಕ್ಯುಲರ್) ಆರ್ಥಿಕತೆಯನ್ನು ಸೃಷ್ಟಿಸುವ ಉತ್ತಮ ಮಾರ್ಗದ ಬಗ್ಗೆ ಚಿಂತಿಸಲು ಉದ್ಯಮವು ಕಾರ್ಯಪಡೆ ರೂಪಿಸಬಹುದೇ ಎಂದು ಆಲೋಚಿಸಲು ಅವರು ಪ್ರತಿನಿಧಿಗಳನ್ನು ಕೇಳಿದರು. ಭವಿಷ್ಯಕ್ಕೆ ದಾಪುಗಾಲಿಡಲು ಮತ್ತು ಲಕ್ಷಾಂತರ ಭಾರತೀಯರನ್ನು ಸಬಲೀಕರಿಸಲು 5 ಜಿ ಯನ್ನು ಸಕಾಲದಲ್ಲಿ ಅನುಷ್ಠಾನ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಒಗ್ಗೂಡಿ ಶ್ರಮಿಸಲು ಅವರು ಆಗ್ರಹಿಸಿದರು.

ಮುಂಬರುವ ತಂತ್ರಜ್ಞಾನ ಕ್ರಾಂತಿಯೊಂದಿಗೆ ಜೀವನವನ್ನು ಹೇಗೆ ಸುಧಾರಿಸಬಹುದು ಎಂದು ಚಿಂತಿಸುವುದು ಮತ್ತು ಯೋಜನೆ ರೂಪಿಸುವುದು ಮುಖ್ಯ ಎಂದು ಪ್ರಧಾನಮಂತ್ರಿ ಹೇಳಿದರು. ಉತ್ತಮ ಆರೋಗ್ಯ ಆರೈಕೆ, ಉತ್ತಮ ಶಿಕ್ಷಣ, ನಮ್ಮ ರೈತರಿಗೆ ಉತ್ತಮ ಮಾಹಿತಿ ಮತ್ತು ಅವಕಾಶಗಳು, ಸಣ್ಣ ಉದ್ಯಮಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶ ಇದು ನಾವು ಸಾಧಿಸಬೇಕಾದ ಕೆಲವು ಗುರಿಗಳಾಗಿವೆ ಎಂದು ಅವರು ಹೇಳಿದರು.

ಪ್ರಧಾನಮಂತ್ರಿಯವರು, ಟೆಲಿಕಾಂ ಕ್ಷೇತ್ರದ ಆವಿಷ್ಕಾರ ಮತ್ತು ಪ್ರಯತ್ನಗಳಿಂದಾಗಿ ಸಾಂಕ್ರಾಮಿಕ ರೋಗದ ನಡುವೆಯೂ ಜಗತ್ತು ಕ್ರಿಯಾತ್ಮಕವಾಗಿತ್ತು ಎಂದು ಟೆಲಿಕಾಂ ವಲಯದ ಪ್ರತಿನಿಧಿಗಳಿಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ದೂರದ ನಗರದಲ್ಲಿರುವ ಮಗ ತನ್ನ ತಾಯಿಯೊಂದಿಗೆ ಸಂಪರ್ಕ ಹೊಂದಿದ್ದಾನೆ, ಒಬ್ಬ ವಿದ್ಯಾರ್ಥಿಯು ತರಗತಿಯ ಕೋಣೆಗೆ ಹೋಗದೆ ತನ್ನ ಶಿಕ್ಷಕರಿಂದ ಕಲಿಯುತ್ತಿದ್ದಾನೆ, ಒಬ್ಬ ರೋಗಿಯು ತನ್ನ ಮನೆಯಿಂದಲೇ ವೈದ್ಯರನ್ನು ಸಂಪರ್ಕಿಸುತ್ತಿದ್ದಾನೆ ಮತ್ತು ಒಬ್ಬ ವ್ಯಾಪಾರಿಯು ಗ್ರಾಹಕನೊಂದಿಗೆ ಹಾಗೂ ವಿಭಿನ್ನ ಭೌಗೋಳಿಕ ಪ್ರದೇಶದೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದರು.

ಬಹಳಷ್ಟು ಯುವ ಟೆಕ್ಕಿಗಳಿಗೆ ಇದು ಸಂಹಿತೆಯಾಗಿದ್ದು, ಉತ್ಪನ್ನವನ್ನು ವಿಶೇಷವಾಗಿಸುತ್ತಿದೆ, ಕೆಲವು ಉದ್ಯಮಿಗಳಿಗೆ ಇದು ಹೆಚ್ಚು ಮುಖ್ಯವಾದ ಪರಿಕಲ್ಪನೆಯಾಗಿದೆ, ಉತ್ಪನ್ನವನ್ನು ಹೆಚ್ಚಿಸಲು ಬಂಡವಾಳವು ಮುಖ್ಯವಾಗಿದೆ ಎಂದು ಹೂಡಿಕೆದಾರರು ಸಲಹೆ ನೀಡುತ್ತಾರೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಹೆಚ್ಚು ಮುಖ್ಯವಾದ ಅಂಶವೆಂದರೆ ಯುವಜನರು ತಮ್ಮ ಉತ್ಪನ್ನದ ಮೇಲೆ ಹೊಂದಿರುವ ದೃಢ ನಂಬಿಕೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಕೆಲವೊಮ್ಮೆ ನಂಬಿಕೆ ಎನ್ನುವುದು ಕೇವಲ ಲಾಭದಾಯಕ ನಿರ್ಗಮನ ಮತ್ತು ನವೋದ್ಯಮದ ಆರಂಭದ ನಡುವೆ ಇರುತ್ತದೆ ಎಂದರು.

ಮೊಬೈಲ್ ತಂತ್ರಜ್ಞಾನದಿಂದಾಗಿ ನಾವು ಲಕ್ಷಾಂತರ ಭಾರತೀಯರಿಗೆ ಶತಕೋಟಿ ಡಾಲರ್ ಮೌಲ್ಯದ ಸವಲತ್ತುಗಳನ್ನು ನೀಡಲು ಸಮರ್ಥರಾಗಿದ್ದೇವೆ, ಸಾಂಕ್ರಾಮಿಕದ ಸಮಯದಲ್ಲಿ ನಾವು ಬಡವರಿಗೆ ಮತ್ತು ದುರ್ಬಲರಿಗೆ ತ್ವರಿತವಾಗಿ ಸಹಾಯ ಮಾಡಲು ಇದರಿಂದ ಸಾಧ್ಯವಾಯಿತು ಮತ್ತು ಶತಕೋಟಿ ನಗದು ರಹಿತ ಪಾರದರ್ಶಕ ವಹಿವಾಟುಗಳನ್ನು ನಾವು ಕಾಣುತ್ತಿದ್ದೇವೆ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು, ಟೋಲ್ ಬೂತ್‌ ಗಳಲ್ಲಿ ನಾವು ಭೌತಿಕ ಸಂಪರ್ಕದ ಅಗತ್ಯವಿಲ್ಲದ ಪ್ರಕ್ರಿಯೆಯಿಂದ ಸುಗಮ ಸಂಚಾರವನ್ನು ಸಹ ಸಕ್ರಿಯಗೊಳಿಸಿದ್ದೇವೆ ಎಂದು ಪ್ರಧಾನಮಂತ್ರಿ ತಿಳಿಸಿದರು.

ಭಾರತದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಯಶಸ್ಸು ಸಾಧಿಸಿದ ಬಗ್ಗೆ ಪ್ರಧಾನಮಂತ್ರಿ ಸಂತಸ ವ್ಯಕ್ತಪಡಿಸಿದರು. ಮೊಬೈಲ್ ಉತ್ಪಾದನೆಗೆ ಭಾರತ ಹೆಚ್ಚು ಮೆಚ್ಚಿನ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಅವರು ಹೇಳಿದರು. ಭಾರತದಲ್ಲಿ ಟೆಲಿಕಾಂ ಉಪಕರಣಗಳ ತಯಾರಿಕೆಯನ್ನು ಉತ್ತೇಜಿಸಲು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಅವರು ಹೇಳಿದರು. ಮುಂದಿನ ಮೂರು ವರ್ಷಗಳಲ್ಲಿ ಪ್ರತಿ ಹಳ್ಳಿಯಲ್ಲಿ ಫೈಬರ್-ಆಪ್ಟಿಕ್ ಕೇಬಲ್ ಸಂಪರ್ಕದೊಂದಿಗೆ ಹೈಸ್ಪೀಡ್ ಇಂಟರ್ ನೆಟ್ ತರಲು ಸರ್ಕಾರ ಉದ್ದೇಶಿಸಿದೆ ಎಂದು ಅವರು ಹೇಳಿದರು. ನಿಟ್ಟಿನಲ್ಲಿ, ಅಂತಹ ಸಂಪರ್ಕದಿಂದ ಉತ್ತಮವಾಗಬಲ್ಲ - ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಎಡಪಂಥೀಯ ಉಗ್ರವಾದದಿಂದ ಬಾಧಿತ ಜಿಲ್ಲೆಗಳು, ಈಶಾನ್ಯ ರಾಜ್ಯಗಳು, ಲಕ್ಷದ್ವೀಪದ ದ್ವೀಪಗಳು ಇತ್ಯಾದಿ ಸ್ಥಳಗಳ ಮೇಲೆ ಗಮನ ಹರಿಸಲಾಗಿದೆ ಎಂದರು. ಸ್ಥಿರ ಬ್ರಾಡ್‌ ಬ್ಯಾಂಡ್ ಸಂಪರ್ಕದ ಹೆಚ್ಚಿನ ಹರಡುವಿಕೆ ಮತ್ತು ಸಾರ್ವಜನಿಕ ವೈ-ಫೈ ಹಾಟ್‌ ಸ್ಪಾಟ್‌ ಗಳನ್ನು ಖಚಿತಪಡಿಸಲಾಗುತ್ತದೆ ಎಂದೂ ಅವರು ತಿಳಿಸಿದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಲ್ಲದೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಮತ್ತು ನ್ಯಾಯ ಸಚಿವರಾದ ಶ್ರೀ ರವಿಶಂಕರ್ ಪ್ರಸಾದ್, ಸಂವಹನ, ಶಿಕ್ಷಣ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಸಂಜಯ್ ಧೋತ್ರೆ, ದೂರಸಂಪರ್ಕ ವಿಭಾಗದ ಅಧ್ಯಕ್ಷ ಡಿಸಿಸಿ ಮತ್ತು ಕಾರ್ಯದರ್ಶಿ (ಟಿ) ಶ್ರೀ ಅನ್ಶು ಪ್ರಕಾಶ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರಾದ ಶ್ರೀ ಮುಖೇಶ್ ಅಂಬಾನಿ ಮತ್ತು ಭಾರ್ತಿ ಎಂಟರ್‌ಪ್ರೈಸಸ್ ಅಧ್ಯಕ್ಷರಾದ ಶ್ರೀ ಸುನೀಲ್ ಭಾರತಿ ಮಿತ್ತಲ್ ಅವರು ಭಾಗವಹಿಸಿದ್ದರು.

ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ಡಿಜಿಟಲ್ ತಂತ್ರಜ್ಞಾನ ಮತ್ತು ವರ್ಚುವಲ್ ಸಂವಹನ ಸಾಧನಗಳು ತಮ್ಮ ಅಸಾಧಾರಣ ಮೌಲ್ಯವನ್ನು ಸಾಬೀತುಪಡಿಸಿವೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಚಿವ ಶ್ರೀ ರವಿಶಂಕರ್ ಪ್ರಸಾದ್ ಹೇಳಿದರು.  ಡಿಜಿಟಲ್ ತಂತ್ರಜ್ಞಾನವು ನಮ್ಮ ಕೆಲಸವನ್ನು ಮನೆಯಿಂದ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ, ಉದಾಹರಣೆಗೆ 85% ಐಟಿ ಕಾರ್ಯಗಳು ಮನೆಯಿಂದಲೇ ನಿರ್ವಹಿಸಲ್ಪಡುತ್ತಿವೆ. ಇಂಡಿಯಾ ಮೊಬೈಲ್ ಕಾಂಗ್ರೆಸ್ ಅಸಾಧಾರಣ ಉತ್ಕೃಷ್ಟತೆಯನ್ನು ಅನುಭವಿಸಲಿದೆ, ಇದು ಭವಿಷ್ಯಕ್ಕಾಗಿ ಅಸಾಧಾರಣವಾದ ಅವಕಾಶವನ್ನು ತೆರೆಯುವಿಕೆಯಲ್ಲಿನ ಹೊಸ ಮೈಲಿಗಲ್ಲಾಗಿದೆ, ಇದು ಕೇಂದ್ರದಲ್ಲಿ ಮೊಬೈಲ್‌ನೊಂದಿಗೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು. ಡಿಜಿಟಲ್ ಸೇರ್ಪಡೆ ಗುರಿಯನ್ನು ಹೊಂದಿರುವ ವಿವಿಧ ರೂಪಾಂತರ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುವಾಗ ಅವರು ಭಾರತ್ ನೆಟ್‌ 2020 ಬಗ್ಗೆ ಪ್ರಸ್ತಾಪಿಸಿದರು  ಇದರಲ್ಲಿ  ದೇಶದ ಎಲ್ಲಾ 2.5 ಲಕ್ಷ ಗ್ರಾಮ ಪಂಚಾಯಿತಿಗಳನ್ನು ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್‌ನೊಂದಿಗೆ ಜೋಡಿಸಲಾಗುವುದು. ಮುಂದಿನ 1000 ದಿನಗಳಲ್ಲಿ ಎಲ್ಲಾ ಗ್ರಾಮಗಳನ್ನು ಆಪ್ಟಿಕಲ್ ಫೈಬರ್‌ನೊಂದಿಗೆ ಸಂಪರ್ಕಿಸುವ ಗುರಿಯ ಬಗ್ಗೆಯೂ ಅವರು ಮಾತನಾಡಿದರು. 2022 ವೇಳೆಗೆ ಎಲ್ಲಾ ಗ್ರಾಮಗಳಿಗೆ ಬ್ರಾಡ್‌ಬ್ಯಾಂಡ್ ತಲುಪಬೇಕಾದ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ಬಗ್ಗೆಯೂ ಅವರು ಪ್ರಸ್ತಾಪಿಸಿದರು. ಅವರು ವಿದೇಶಿ ಬಂಡವಾಳ ಮತ್ತು ವಿದೇಶಿ ಆವಿಷ್ಕಾರಗಳನ್ನು ಸ್ವಾಗತಿಸಿದರು ಆದರೆ ಸುರಕ್ಷತೆ ಮತ್ತು ಭದ್ರತೆಗೆ ಸಮಾನ ಪ್ರಾಮುಖ್ಯತೆ ನೀಡಬೇಕಾಗಿದೆ ಎಂದು ಹೇಳಿದರು

ಭಾರತದಲ್ಲಿ ಲಭ್ಯವಿರುವ ವಾತಾವರಣವನ್ನು ಅನ್ವೇಷಿಸಲು ಸಂವಹನ ಸಚಿವರು  ಉತ್ಮಾದಕರನ್ನು ಕೇಳಿದರು. ಮೊಬೈಲ್ ಉತ್ಪಾದನೆಯಲ್ಲಿ ಪ್ರೊಡಕ್ಷನ್ ಲಿಂಕ್ಡ್ ಪ್ರೋತ್ಸಾಹಕ (ಪಿಎಲ್ಐ) ಯೋಜನೆಯ ಬಗ್ಗೆ ಅವರು ಪ್ರಸ್ತಾಪಿಸಿದರು, ಇದು ಕೇವಲ ಜಾಗತಿಕ ಹೂಡಿಕೆಯನ್ನು ಮಾತ್ರ  ಆಕರ್ಷಿಸಿಲ್ಲ ಜೊತೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಲು ಕಾರಣವಾಗಿದೆ ಎಂದು ಹೇಳಿದರು.  ಉತ್ಪಾದನೆ ಮತ್ತು ರಫ್ತು ಮಾಡಲು ತಯಾರಕರು ಭಾರತಕ್ಕೆ ಬರಬೇಕೆಂದು ಅವರು ಕೇಳಿದರು. ಕೃತಕ ಬುದ್ಧಿಮತ್ತೆ, ಮೆಷಿನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್, ಡಾಟಾ ಅನಾಲಿಟಿಕ್ಸ್ ಸೇರಿದಂತೆ ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳು ಭಾರತದಲ್ಲಿ ಒಂದು ದೊಡ್ಡ ಅವಕಾಶವನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.  ಕೃತಕ ಬುದ್ಧಿಮತ್ತೆಯನ್ನು ಏಕಸ್ವಾಮ್ಯಗೊಳಿಸಬಾರದು ಮತ್ತು ಶಸ್ತ್ರಾಸ್ತ್ರೀಕರಣದ ಸಾಧನವಾಗಿಸಬಾರದು ಆದರೆ ಅದು ಸಾಮಾನ್ಯ ಜನರ ಸಬಲೀಕರಣಕ್ಕೆ ಕಾರಣವಾಗಬೇಕು ಎಂದು ಹೇಳಿದರು.  ಇದು ಶಿಕ್ಷಣ, ಆರೋಗ್ಯ ಇತ್ಯಾದಿಗಳ ಸುಧಾರಣೆಗೆ ಕಾರಣವಾಗಬೇಕು ಎಂದು ಅವರು ಹೇಳಿದರು.  ನಮ್ಮ ಸಾರ್ವಜನಿಕ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಅಂತರ್ಗತ ಪಾತ್ರವನ್ನು ಈಗಾಗಲೇ ಸಾಭೀತುಪಡಿಸಲಾಗಿದೆ.   ಜನ್ ಧನ್‌ ಯೋಜನೆ, ಜೆಎಎಂ (ಜನ ಧನ್ ಅಕೌಂಟ್ಸ್, ಆಧಾರ್, ಮೊಬೈಲ್) ಟ್ರಿನಿಟಿ, ಆಧಾರ್, ಜಿಎಸ್‌ಟಿಎನ್, ನೇರ ಲಾಭ ವರ್ಗಾವಣೆ, ಡಿಜಿಟಲ್ ವಹಿವಾಟಿಗೆ ಕಾರಣವಾದ ಯುಪಿಐ ಇತ್ಯಾದಿ ವಿವಿಧ ಉದಾಹರಣೆಗಳ ಬಗ್ಗೆ ಅವರು ಪ್ರಸ್ತಾಪಿಸುತ್ತಾ   ಅಲ್ಲಿ ಡಿಜಿಟಲ್ ತಂತ್ರಜ್ಞಾನದ ಗರಿಷ್ಠ ಬಳಕೆಯು ಡಿಜಿಟಲ್ ಸೇರ್ಪಡೆಗೆ ಕಾರಣವಾಗಿದೆ ಮತ್ತು ಎಲ್ಲದರ ಕೇಂದ್ರವು 'ಮೊಬೈಲ್' ಆಗಿದೆ, ಇದು ಸೇರ್ಪಡೆಯ ಅತ್ಯಂತ  ಪ್ರಮುಖವಾದ  ಸಾಧನವಾಗಿದೆ ಎಂದು ಹೇಳಿದರು

ಇಂಡಿಯಾ ಮೊಬೈಲ್ ಕಾಂಗ್ರೆಸ್ 2020  ಕೈಗಾರಿಕೆ, ಸರ್ಕಾರ, ಅಕಾಡೆಮಿ ಮತ್ತು ಇತರ ಪಾಲುದಾರರನ್ನು ಒಟ್ಟುಗೂಡಿಸಲು ಮತ್ತು ಮುಂಬರುವ ಭವಿಷ್ಯಕ್ಕಾಗಿ ನವೀನ ಪರಿಹಾರಗಳನ್ನು ಚರ್ಚಿಸಲು ಪ್ರಮುಖ ವೇದಿಕೆಯಾಗಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಹೇಳಿದರು.  ಡೇಟಾ ಅನಾಲಿಟಿಕ್ಸ್ ಮತ್ತು ಡೇಟಾ ಗೌಪ್ಯತೆ, ಕೃತಕ ಬುದ್ಧಿಮತ್ತೆಯ ಸೈಬರ್‌ ಸೆಕ್ಯುರಿಟಿ ಇಂಟರ್‌ನೆಟ್ ಸೇರಿದಂತೆ ಇತ್ತೀಚಿನ ತಂತ್ರಜ್ಞಾನದ ಪ್ರವೃತ್ತಿಗಳನ್ನು ಪ್ರದರ್ಶಿಸಲು ಇದು ವೇದಿಕೆಯಾಗಿದೆ.

ದೂರಸಂಪರ್ಕ ವಿಭಾಗದ ಡಿಸಿಸಿ ಮತ್ತು ಕಾರ್ಯದರ್ಶಿ (ಟಿ) ಐಎಎಸ್ ಶ್ರೀ ಅನ್ಶು ಪ್ರಕಾಶ್, “ಐಎಂಸಿ 2020ರನ್ನು ನಮ್ಮ ಗೌರವಾನ್ವಿತ ಪ್ರಧಾನ ಮಂತ್ರಿಗಳಾದ  ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿರುವುದು ನಮ್ಮ ಅದೃಷ್ಟ.  ಅವರ ನಿರಂತರ ಬೆಂಬಲ ಮತ್ತು ಪ್ರೋತ್ಸಾಹದಿಂದ ನಾವು ನಿಜವಾದ ಡಿಜಿಟಲ್ ಭಾರತದತ್ತ  ನಮ್ಮ ಪ್ರಯಾಣದಲ್ಲಿ ಹೊಸ ಎತ್ತರವನ್ನು  ತಲುಪಿದ್ದೇವೆ. ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆ, ನಮ್ಮ ಟೆಲಿಕಾಂ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸಿತು ಮತ್ತು ಎಲ್ಲಾ ಸೇವೆಗಳನ್ನು ತಡೆರಹಿತ ರೀತಿಯಲ್ಲಿ ಒದಗಿಸಲಾಯಿತು.  ಜಾಗತಿಕ ಸರಾಸರಿಗಿಂತ ಹೆಚ್ಚಿನದಾದ ದತ್ತಾಂಶ ಹೆಚ್ಚಳವು ನಮ್ಮ ಟೆಲಿಕಾಂ ವಲಯದಿಂದ ಉತ್ತಮವಾಗಿದೆ.  ರೊಬೊಟಿಕ್ಸ್, ಎಐ, ವಿಆರ್, ಎಆರ್- ಪ್ರತಿ ಹೊಸ ತಂತ್ರಜ್ಞಾನವು ಟೆಲಿಕಾಂನಲ್ಲಿ ನಡೆಯುತ್ತದೆ.  ಡಿಜಿಟಲ್ ಅಸಮತೋಲನವನ್ನು ಕೂಡಿಸುವುದು, ಸುರಕ್ಷಿತ ಮತ್ತು ಪರಿಸರ ಸಮರ್ಥನೀಯವಾದ ಹೆಚ್ಚು ಬುದ್ಧಿವಂತ ಉತ್ಪನ್ನಗಳನ್ನು ತರಲು ಹೊಸತನವನ್ನು ನೀಡುವ ಕಾರ್ಯವು ಈಗ ನಮಗೆ ಮುಖ್ಯವಾಗಿದೆಎಂದು ಹೇಳಿದರು.

ಡಿಜಿ ಸಿಒಎಐ ಲೆಫ್ಟಿನೆಂಟ್ ಜನರಲ್ ಡಾ. ಎಸ್.ಪಿ ಕೊಚಾರ್, “ಮೊದಲನೆಯದಾಗಿ, ಸಾಟಿಯಿಲ್ಲದ ರೀತಿಯಲ್ಲಿ ಜಗತ್ತನ್ನು ಹಿಡಿದಿಟ್ಟುಕೊಂಡಿರುವ   ಸಾಂಕ್ರಾಮಿಕದ ಮಧ್ಯೆ,   ಮಾಡಿದ ಅಪಾರ ಪ್ರಯತ್ನಕ್ಕೆ ನಾವು ಭಾರತ ಸರ್ಕಾರಕ್ಕೆ ಕೃತಜ್ಞರಾಗಿರುತ್ತೇವೆ. ಇದು ಇಡೀ ತಂತ್ರಜ್ಞಾನ ಮತ್ತು ಟೆಲಿಕಾಂ ಉದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ಒದಗಿಸಿದೆ.  ಭಾರತದಲ್ಲಿ ಟೆಲಿಕಾಂ ಕ್ಷೇತ್ರವು ನಿರ್ಬಂಧಗಳ ನಡುವೆಯೂ ಅದ್ಭುತ ಎತ್ತರಕ್ಕೆ ತಲುಪಿದೆ.  ಉದ್ಯಮದ ನಾಯಕರು ಒದಗಿಸುವ ದೂರದೃಷ್ಟಿಯ ಚಿಂತನೆಯ ನಾಯಕತ್ವ ಮತ್ತು ದೋಷರಹಿತ  ಕಾರ್ಯಾಚರಣೆಯ ಸಾಮರ್ಥ್ಯದಿಂದಾಗಿ ಇದು ಸಾಧ್ಯವಾಗಿದೆ. ” ಎಂದು ಹೇಳಿದರು

ಐಎಂಸಿ 2020  ಡಿಸೆಂಬರ್ 8 ರಿಂದ 10 ರವರೆಗೆ ನಿಗದಿಯಾಗಿದೆ,  ಮತ್ತು ಈಗಿರುವ ಸಾಂಕ್ರಾಮಿಕ ಬಿಕ್ಕಟ್ಟನ್ನು ಗಮನದಲ್ಲಿಟ್ಟುಕೊಂಡು ವರ್ಷ ವರ್ಚುವೆಲ್ಲಾಗಿ ನಡೆಯುತ್ತಿದೆ. ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಶನ್ ಆಫ್ ಇಂಡಿಯಾ (ಸಿಒಎಟಿ) ಜಂಟಿಯಾಗಿ ಆಯೋಜಿಸಿರುವ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ 30ಕ್ಕಿಂದ ಅಧಿಕ ದೇಶಗಳು ಭಾಗವಹಿಸುತ್ತವೆ, 210 ಭಾಷಣಕಾರರು, 50ಕ್ಕೂ ಹೆಚ್ಚು  ಚಿಂತನೆಯ ನಾಯಕತ್ವದ ಅವಧಿಗಳು, 150ಕ್ಕೂ ಹೆಚ್ಚು  ಪ್ರದರ್ಶಕರು, 3000ಕ್ಕೂ ಹೆಚ್ಚು  ಸಿಎಕ್ಸ್‌ಒ ಮಟ್ಟದ ಪ್ರತಿನಿಧಿಗಳು ವರ್ಷ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.    ವರ್ಷದ ಪ್ರಧಾನ ಪಾಲುದಾರರಲ್ಲಿ ಡೆಲ್ ಟೆಕ್ನಾಲಜೀಸ್, ರಿಬ್ಬನ್ ಕಮ್ಯುನಿಕೇಷನ್ಸ್ ಮತ್ತು ರೆಡ್ ಹ್ಯಾಟ್ ಸೇರಿವೆ.   ವರ್ಷದ ಭಾರತದ ಅತಿದೊಡ್ಡ ತಂತ್ರಜ್ಞಾನ ಕಾರ್ಯಕ್ರಮವು ಜಗತ್ತಿನಾದ್ಯಂತದ ಕೆಲವು ಉನ್ನತ ಉದ್ಯಮಿಗಳು ಮತ್ತು ನೀತಿ ನಿರೂಪಕರು ಒಟ್ಟಿಗೆ ಸೇರುವುದಕ್ಕೆ ಸಾಕ್ಷಿಯಾಗಲಿದೆ.  ಇದು ವಿವಿಧ ಸಚಿವಾಲಯಗಳ ಭಾಗವಹಿಸುವಿಕೆಯನ್ನು ಸಹ ಒಳಗೊಂಡಿದೆ, ಟೆಲ್ಕೊ ಸಿಇಒ, ಗ್ಲೋಬಲ್ ಸಿಇಒ ಮತ್ತು ಎಸ್‌ಜಿ ಬ್ರಾಡ್‌ಕಾಸ್ಟಿಂಗ್‌ನಲ್ಲಿನ ತಜ್ಞರು, ಎಸ್‌ಜಿ ಎಂಟರ್‌ಪ್ರೈಸ್ ಗಳು, ಒಟಿಟಿ, ಮತ್ತು ಸಸ್ಟೈನಬಲ್ ಫ್ಯೂಚರಿಸ್ಟ್‌ಗಳು ಇವರುಗಳಿಂದ  ಉದ್ಯಮದ ಸಮಸ್ಯೆಗಳು, ಸವಾಲುಗಳು, ಭವಿಷ್ಯದ ಪ್ರವೃತ್ತಿಗಳು ಮತ್ತು ಅವಕಾಶಗಳ ಕುರಿತು ಚರ್ಚಿಸಲಾಗುತ್ತದೆ.

ಏಷ್ಯಾದ ಅತಿದೊಡ್ಡ ಡಿಜಿಟಲ್ ಟೆಕ್ನಾಲಜಿ ಫೋರಂ ಎಂದು ಪರಿಗಣಿಸಲ್ಪಟ್ಟ ಐಎಂಸಿ ಸಂಸ್ಥೆಯು ಇಂಟೆಲಿಜೆನ್ಸ್ (ಅಲ್), ಇಂಟರ್ನೆಟ್ ಆಫ್ ಥಿಂಗ್ಸ್ (ಎಲ್‌ಒಟಿ), ಡಾಟಾ ಅನಾಲಿಟಿಕ್ಸ್, ಕ್ಲೌಡ್ ಮತ್ತು ಎಡ್ಜ್ ಕಂಪ್ಯೂಟಿಂಗ್, ಓಪನ್ ಸೋರ್ಸ್ ಟೆಕ್, ಡೇಟಾ ಗೌಪ್ಯತೆ ಮತ್ತು ಸೈಬರ್ ಭದ್ರತೆ, ಸ್ಮಾರ್ಟ್ ಸಿಟೀಸ್ ಮತ್ತು ಆಟೊಮೇಷನ್. ಎಸ್‌ಜಿ, ಕೃತಕ ಬುದ್ದಿಮತ್ತೆಯಂತಹ ಪ್ರಮುಖ ವಿಷಯಗಳ ಸುತ್ತ ಇತ್ತೀಚಿನ ಉದ್ಯಮ ತಂತ್ರಜ್ಞಾನದ ಪ್ರವೃತ್ತಿಗಳನ್ನು ಚರ್ಚಿಸಲು, ಮತ್ತು ಪ್ರದರ್ಶಿಸಲು. ಉದ್ಯಮ, ಸರ್ಕಾರ, ಅಕಾಡೆಮಿ ಮತ್ತು ಇತರ ಪರಿಸರ ವ್ಯವಸ್ಥೆಯವರನ್ನು ಒಟ್ಟುಗೂಡಿಸುವ ಪ್ರಮುಖ ವೇದಿಕೆಯಾಗಿದೆ.  

***



(Release ID: 1679242) Visitor Counter : 180