ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ - ಅಕ್ಟೋಬರ್, 2020

Posted On: 28 NOV 2020 4:50PM by PIB Bengaluru

ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ)ವು 2020 ರ ಅಕ್ಟೋಬರ್‌ನಲ್ಲಿ 1.4 ಅಂಕಗಳಷ್ಟು ಏರಿಕೆ ಕಂಡು 119.5 ಕ್ಕೆ ತಲುಪಿದೆ. ಒಂದು ತಿಂಗಳ ಶೇಕಡಾವಾರು ಬದಲಾವಣೆಯಲ್ಲಿ, ಸೂಚ್ಯಂಕವು 2020 ರ ಸೆಪ್ಟೆಂಬರ್ ಮತ್ತು ಅಕ್ಟೋಬರ್ ನಡುವೆ (+) 1.19 ರಷ್ಟು ಹೆಚ್ಚಾಗಿದೆ. ಇದು ಹಿಂದಿನ ವರ್ಷದ ಈ ತಿಂಗಳುಗಳಲ್ಲಿ 0.93 ರಷ್ಟು ಹೆಚ್ಚಳವಾಗಿತ್ತು.

ಪ್ರಸ್ತುತ ಸೂಚ್ಯಂಕದಲ್ಲಿ ಗರಿಷ್ಠ ಏರಿಕೆಯು ಆಹಾರ ಮತ್ತು ಪಾನೀಯಗಳ ಗುಂಪಿನಲ್ಲಿ ಆಗಿದೆ. ಒಟ್ಟು ಬದಲಾವಣೆಯಲ್ಲಿ ಶೇಕಡಾ 1.29 ಅಂಕಗಳು ಈ ಗುಂಪಿನಿಂದ ಬಂದಿವೆ. ವಸ್ತುಗಳಲ್ಲಿ, ಅರ್ಹರ್ ಬೇಳೆ, ಕೋಳಿ ಮಾಂಸ, ಕೋಳಿ ಮೊಟ್ಟೆ, ಮೇಕೆ ಮಾಂಸ, ಸಾಸಿವೆ ಎಣ್ಣೆ, ಸೂರ್ಯಕಾಂತಿ ಎಣ್ಣೆ, ಬದನೆಕಾಯಿ, ಎಲೆಕೋಸು, ಕ್ಯಾರೆಟ್, ಹೂಕೋಸು, ಹಸಿರು ಮೆಣಸಿನಕಾಯಿ, ಸೋರೆಕಾಯಿ, ಬೆಂಡೆಕಾಯಿ, ಈರುಳ್ಳಿ, ಬಟಾಣಿ, ಆಲೂಗಡ್ಡೆ, ದೇಶೀಯ ವಿದ್ಯುತ್, ವೈದ್ಯರ ಶುಲ್ಕ, ಬಸ್ ಶುಲ್ಕ ಇತ್ಯಾದಿಗಳು ಸೂಚ್ಯಂಕದ ಹೆಚ್ಚಳಕ್ಕೆ ಕಾರಣವಾಗಿವೆ. ಆದರೆ ಗೋಧಿ, ಮೀನು, ಟೊಮೆಟೊ, ಸೇಬು ಇತ್ಯಾದಿಗಳು ಸೂಚ್ಯಂಕವು ಕೆಳಗಿಳಿಯಲು ಒತ್ತಡ ಹೇರಿವೆ. 

ಕೇಂದ್ರಗಳ ಮಟ್ಟದಲ್ಲಿ, ಡೂಮ್-ಡೂಮಾ ತಿನ್ಸುಕಿಯಾ, ಪಾಟ್ನಾ ಮತ್ತು ರಾಮ್‌ಗಢ್ ತಲಾ 4 ಪಾಯಿಂಟ್‌ಗಳ ಗರಿಷ್ಠ ಹೆಚ್ಚಳವನ್ನು ದಾಖಲಿಸಿವೆ. 9 ಕೇಂದ್ರಗಳಲ್ಲಿ 3 ಪಾಯಿಂಟ್, 24 ಕೇಂದ್ರಗಳಲ್ಲಿ 2 ಪಾಯಿಂಟ್ ಮತ್ತು 33 ಕೇಂದ್ರಗಳಲ್ಲಿ 1 ಪಾಯಿಂಟ್ ಹೆಚ್ಚಳ ಕಂಡುಬಂದಿದೆ. ಉಳಿದ 19 ಕೇಂದ್ರಗಳ ಸೂಚ್ಯಂಕಗಳು ಸ್ಥಿರವಾಗಿವೆ.

ಎಲ್ಲಾ ವಸ್ತುಗಳ ಆಧಾರದ ಮೇಲೆ ಹಣದುಬ್ಬರವು 2020 ರ ಅಕ್ಟೋಬರ್‌ನಲ್ಲಿ ಶೇ 5.91 ರಷ್ಟಿದ್ದು, ಹಿಂದಿನ ತಿಂಗಳು ಶೇಕಡಾ 5.62 ಇತ್ತು. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ 7.62 ರಷ್ಟಿತ್ತು. ಹಾಗೆಯೇ, ಆಹಾರ ಹಣದುಬ್ಬರವು ಹಿಂದಿನ ತಿಂಗಳು ಶೇ 7.51 ರಷ್ಟಿದ್ದರೆ, ಅಕ್ಟೋಬರ್‌ನಲ್ಲಿ ಶೇ .8.21 ರಷ್ಟಿದೆ ಮತ್ತು ಕಳೆದ ವರ್ಷದ ಇದೇ ತಿಂಗಳಲ್ಲಿ ಶೇ 8.60 ರಷ್ಟಿತ್ತು.

ಮುಖ್ಯ ಅಂಶಗಳು:

1. ಕೈಗಾರಿಕಾ ಕಾರ್ಮಿಕರ ಅಖಿಲ ಭಾರತ ಸಿಪಿಐ (2016 = 100) 2020 ರ ಅಕ್ಟೋಬರ್ ನಲ್ಲಿ 119.5 ಪಾಯಿಂಟ್‌ಗಳಿಗೆ ಏರಿದೆ. ಇದು ಸೆಪ್ಟೆಂಬರ್‌ನಲ್ಲಿದ್ದ 118.1 ಪಾಯಿಂಟ್‌ಗಳಿತ್ತು.

2. ಶೇಕಡಾವಾರು ಪರಿಭಾಷೆಯಲ್ಲಿ, ಇದು 1.19% ಹೆಚ್ಚಾಗಿದೆ. ಹಿಂದಿನ ತಿಂಗಳು ಮುಖ್ಯವಾಗಿ ಆಹಾರ ಗುಂಪಿನ ವಸ್ತುಗಳು ಒಟ್ಟು ಏರಿಕೆಯಲ್ಲಿ ಶೇ.39.17 ರಷ್ಟು ಪಾಲನ್ನು ಹೊಂದಿವೆ. ಈ ಎರಡು ತಿಂಗಳ ನಡುವೆ ಶೇ.76ರಷ್ಟು ಏರಿಕೆ ದಾಖಲಿಸಿದೆ. ಈ ಅವಧಿಯಲ್ಲಿ, ಆಹಾರ ಪದಾರ್ಥಗಳ ಬೆಲೆಯಲ್ಲಿ ಹೆಚ್ಚಳ. ಅರ್ಹರ್ ಬೇಳೆ, ಕೋಳಿ ಮಾಂಸ, ಮೇಕೆ ಮಾಂಸ, ಮೊಟ್ಟೆ, ಸಾಸಿವೆ ಎಣ್ಣೆ, ಈರುಳ್ಳಿ, ಆಲೂಗಡ್ಡೆ, ಬದನೆಕಾಯಿ, ಬಟಾಣಿ, ವೈದ್ಯರ ಶುಲ್ಕ, ಬಸ್ ಶುಲ್ಕ ಇತ್ಯಾದಿಗಳು ಹೆಚ್ಚಿನ ಪರಿಣಾಮ ಬೀರಿವೆ.

3. ಎಲ್ಲಾ ವಸ್ತುಗಳ ಆಧಾರದ ಮೇಲೆ ಹಣದುಬ್ಬರವು 2020 ರ ಅಕ್ಟೋಬರ್‌ನಲ್ಲಿ ಶೇ 5.91 ರಷ್ಟಿದ್ದು, ಹಿಂದಿನ ತಿಂಗಳು ಶೇಕಡಾ 5.62 ಇತ್ತು. ಹಿಂದಿನ ವರ್ಷದ ಇದೇ ತಿಂಗಳಲ್ಲಿ ಶೇ 7.62 ರಷ್ಟಿತ್ತು. ಹಾಗೆಯೇ, ಆಹಾರ ಹಣದುಬ್ಬರವು ಹಿಂದಿನ ತಿಂಗಳು ಶೇ 7.51 ರಷ್ಟಿದ್ದರೆ, ಅಕ್ಟೋಬರ್‌ನಲ್ಲಿ ಶೇ .8.21 ರಷ್ಟಿದೆ ಮತ್ತು ಕಳೆದ ವರ್ಷದ ಇದೇ ತಿಂಗಳಲ್ಲಿ ಶೇ 8.60 ರಷ್ಟಿತ್ತು.

 

ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಆಧಾರದ ಮೇಲೆ ಹಣದುಬ್ಬರ (ಆಹಾರ ಮತ್ತು ಸಾಮಾನ್ಯ)

ಸಿಪಿಐ-ಐಡಬ್ಲ್ಯೂ: ಗುಂಪುಗಳ ಸೂಚ್ಯಂಕಗಳು

2020 ರ ನವೆಂಬರ್ ತಿಂಗಳ ಸಿಪಿಐ-ಐಡಬ್ಲ್ಯೂ 2020 ರ ಡಿಸೆಂಬರ್ 31 ರ ಗುರುವಾರ ಬಿಡುಗಡೆಯಾಗಲಿದೆ. ಇದು www.labourbureaunew.gov.in ವೆಬ್‌ಸೈಟ್ ನಲ್ಲಿಯೂ ಲಭ್ಯವಿರುತ್ತದೆ.
ಕಾರ್ಮಿಕ ಮತ್ತು ಉದ್ಯೋಗದ ಸಚಿವಾಲಯದ ಕಾರ್ಮಿಕ ಬ್ಯೂರೋ, ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕವನ್ನು ಪ್ರತಿ ತಿಂಗಳು ಕ್ರೋಢೀಕರಿಸುತ್ತದೆ, ದೇಶದ ಪ್ರಮುಖ 88 ಕೈಗಾರಿಕಾ ಕೇಂದ್ರಗಳ 317 ಮಾರುಕಟ್ಟೆಗಳಿಂದ ಸಂಗ್ರಹಿಸಲಾದ ಚಿಲ್ಲರೆ ಬೆಲೆಗಳ ಆಧಾರದ ಮೇಲೆ ಇದನ್ನು ಕ್ರೋಢೀಕರಿಸಲಾಗುತ್ತದೆ. ಸೂಚ್ಯಂಕವನ್ನು 88 ಕೇಂದ್ರಗಳು ಮತ್ತು ಅಖಿಲ ಭಾರತ ಮಟ್ಟಕ್ಕಾಗಿ ಕ್ರೋಢೀಕರಿಸಿ, ತಿಂಗಳ ಕೊನೆಯ ಕೆಲಸದ ದಿನದಂದು ಬಿಡುಗಡೆ ಮಾಡಲಾಗುತ್ತದೆ. ಈ ಮಾಧ್ಯಮ ಪ್ರಕಟಣೆಯಲ್ಲಿ 2020 ರ ಅಕ್ಟೋಬರ್ ತಿಂಗಳ ಸೂಚ್ಯಂಕವನ್ನು ಬಿಡುಗಡೆ ಮಾಡಲಾಗಿದೆ
.



(Release ID: 1676823) Visitor Counter : 291