ಹಣಕಾಸು ಆಯೋಗ
ಪ್ರಧಾನಿಯವರಿಗೆ ಹಣಕಾಸು ಆಯೋಗ ವರದಿ ಸಲ್ಲಿಕೆ
Posted On:
16 NOV 2020 5:37PM by PIB Bengaluru
15 ನೇ ಹಣಕಾಸು ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು 2021-22 ರಿಂದ 2025-26ರ ಅವಧಿಯ ವರದಿಯ ಪ್ರತಿಯನ್ನು ಇಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದರು. ಆಯೋಗವು ತನ್ನ ವರದಿಯನ್ನು 4 ನವೆಂಬರ್ 2020 ರಂದು ರಾಷ್ಟ್ರಪತಿಯವರಿಗೆ ಸಲ್ಲಿಸಿತ್ತು.
ಆಯೋಗದ ಅಧ್ಯಕ್ಷ ಶ್ರೀ ಎನ್ ಕೆ ಸಿಂಗ್ ಮತ್ತು ಸದಸ್ಯರಾದ ಶ್ರೀ ಅಜಯ್ ನಾರಾಯಣ್ ಝಾ, ಪ್ರೊ.ಅನೂಪ್ ಸಿಂಗ್, ಡಾ.ಅಶೋಕ್ ಲಹಿರಿ ಮತ್ತು ಡಾ.ರಮೇಶ್ ಚಂದ್ ಮತ್ತು ಆಯೋಗದ ಕಾರ್ಯದರ್ಶಿ ಶ್ರೀ ಅರವಿಂದ್ ಮೆಹ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಆಯೋಗವು ತನ್ನ ವರದಿಯನ್ನು ನಾಳೆ ಕೇಂದ್ರ ಹಣಕಾಸು ಸಚಿವರಿಗೆ ಸಲ್ಲಿಸಲಿದೆ.
ಸಂವಿಧಾನದಡಿ ನಿಗದಿಪಡಿಸಿದಂತೆ ಈ ವರದಿಯನ್ನು ಕ್ರಮ ಕೈಗೊಂಡ ವರದಿ (ಎಟಿಆರ್) ಯ ರೂಪದ ವಿವರಣಾತ್ಮಕ ಜ್ಞಾಪಕ ಪತ್ರದೊಂದಿಗೆ ಸದನದಲ್ಲಿ ಮಂಡಿಸಲಾಗುವುದು.
***
(Release ID: 1673226)
Visitor Counter : 319