ಭೂವಿಜ್ಞಾನ ಸಚಿವಾಲಯ

"ಮಾನ್ಸೂನ್ ಮಿಷನ್ ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೌಲಭ್ಯಗಳಲ್ಲಿ ಹೂಡಿಕೆಯ ಆರ್ಥಿಕ ಲಾಭಗಳನ್ನು ಅಂದಾಜು ಮಾಡುವ" ಎನ್‌ಸಿಎಇಆರ್ ವರದಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸಚಿವ ಡಾ. ಹರ್ಷವರ್ಧನ್


ಮೊಬೈಲ್ ಆ್ಯಪ್, ಮೇಘದೂತ್ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಸಂವಹನ ಮಾರ್ಗಗಳ ಮೂಲಕ ಕೃಷಿ ಹವಾಮಾನ ಮುನ್ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಸುಮಾರು 4.3 ಕೋಟಿ ರೈತರಿಗೆ ತಲುಪಿಸಲಾಗಿದೆ: ಡಾ. ಹರ್ಷವರ್ಧನ್

ಈ ಸೌಲಭ್ಯಗಳಲ್ಲಿ ಭಾರತದ ಸುಮಾರು 1,000 ಕೋಟಿ ರೂ. ಹೂಡಿಕೆಯು ಬಡತನ ರೇಖೆಗಿಂತ ಕೆಳಗಿರುವ ಸುಮಾರು ಒಂದು ಕೋಟಿ ಏಳು ಲಕ್ಷ ಕೃಷಿಕ ಕುಟುಂಬಗಳು ಮತ್ತು 53 ಲಕ್ಷ ಬಿಪಿಎಲ್ ಮೀನುಗಾರ ಕುಟುಂಬಗಳಿಗೆ 50 ಸಾವಿರ ಕೋಟಿ ಮೌಲ್ಯದ ಪ್ರಯೋಜನಗಳನ್ನು ನೀಡುತ್ತದೆ: ಎನ್‌ಸಿಎಇಆರ್ ವರದಿ

Posted On: 03 NOV 2020 6:12PM by PIB Bengaluru

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಭೂ ವಿಜ್ಞಾನಗಳ ಸಚಿವ ಡಾ.ಹರ್ಷವರ್ಧನ್ ಅವರು "ಮಾನ್ಸೂನ್ ಮಿಷನ್ ಮತ್ತು ಉನ್ನತ-ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಸೌಲಭ್ಯಗಳಲ್ಲಿ (ಎಚ್ಪಿಸಿ)” ಹೂಡಿಕೆಯ ಆರ್ಥಿಕ ಲಾಭಗಳನ್ನು ಅಂದಾಜು ಮಾಡುವ ರಾಷ್ಟ್ರೀಯ ಅನ್ವಯಿಕ ಆರ್ಥಿಕ ಸಂಶೋಧನಾ ಮಂಡಳಿಯ (ಎನ್ಸಿಎಇಆರ್) ವರದಿಯನ್ನು ನವದೆಹಲಿಯ ಪೃಥ್ವಿ ಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

https://static.pib.gov.in/WriteReadData/userfiles/image/image001MXG7.jpg

ಸಂದರ್ಭದಲ್ಲಿ ಮಾತನಾಡಿದ ಸಚಿವರು, “ಭೂ ವಿಜ್ಞಾನ ಸಚಿವಾಲಯದ ರಾಷ್ಟ್ರೀಯ ಮಾನ್ಸೂನ್ ಮಿಷನ್ ಮತ್ತು ಉನ್ನತ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಕಾರ್ಯಕ್ರಮಗಳಿಗಾಗಿ ಸರ್ಕಾರವು ಖರ್ಚು ಮಾಡುವ ಪ್ರತಿ ರೂಪಾಯಿಯನ್ನು ವರದಿಯಲ್ಲಿ ಹೇಳಲಾಗಿದೆ. ಇದರಿಂದಾಗಿ ದೇಶವು ಆರ್ಥಿಕ ಐವತ್ತು ಸಾವಿರ ಕೋಟಿ ರೂಪಾಯಿ ಮೌಲ್ಯದ ಲಾಭಗಳನ್ನು ಪಡೆಯುತ್ತದೆ, ಇದು ಮುಂದಿನ ಐದು ವರ್ಷಗಳ ಅವಧಿಯಲ್ಲಿ ಹೂಡಿಕೆಯ ಮೇಲೆ 50 ಪಟ್ಟು ಹೆಚ್ಚು ಲಾಭವಾಗಿದೆಎಂದರು.

ನವದೆಹಲಿಯಲ್ಲಿರುವ ಎನ್ಸಿಎಇಆರ್ ಆರ್ಥಿಕ ನೀತಿ ಸಂಶೋಧನೆಯ ಲಾಭರಹಿತ ಸ್ವತಂತ್ರ ಸಂಸ್ಥೆಯಾಗಿದೆ. ವರದಿಯು ಕೇಂದ್ರ ಭೂ ವಿಜ್ಞಾನ ಸಚಿವಾಲಯದ ಅಧ್ಯಯನವನ್ನು ಆಧರಿಸಿದೆ.

https://static.pib.gov.in/WriteReadData/userfiles/image/image002JQM8.jpg

 “ರೈತರಿಗೆ ದಿನನಿತ್ಯದ ಕಾರ್ಯಾಚರಣೆಗಳಿಗಾಗಿ ಕೃಷಿ-ಹವಾಮಾನ ಸೇವೆಗಳನ್ನು ಒದಗಿಸುವುದು ಭಾರತೀಯ ಹವಾಮಾನ ಇಲಾಖೆಯ ಪ್ರಮುಖ ಸೇವೆಗಳಲ್ಲೊಂದಾಗಿದೆ. ಭಾರತೀಯ ಹವಾಮಾನ ಇಲಾಖೆಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಸಹಯೋಗದೊಂದಿಗೆ ವಾರಕ್ಕೆ ಎರಡು ಬಾರಿ ಕೃಷಿ-ಹವಾಮಾನ ಸಲಹೆಗಳನ್ನು ಎಲ್ಲಾ ಜಿಲ್ಲೆಗಳ ರೈತರಿಗಾಗಿ ಸುಮಾರು 400 ಜಿಲ್ಲಾ ಕೃಷಿ-ಹವಾಮಾನ ಘಟಕಗಳ ಮೂಲಕ ಒದಗಿಸುತ್ತದೆಎಂದು ಡಾ. ಹರ್ಷವರ್ಧನ್ ತಿಳಿಸಿದರು. "ಇತ್ತೀಚೆಗೆ, ಭಾರತೀಯ ಹವಾಮಾನ ಇಲಾಖೆಯು ಬ್ಲಾಕ್ ಮಟ್ಟದ ಹವಾಮಾನ ಮುನ್ಸೂಚನೆ ಮತ್ತು ರೈತರಿಗೆ ಎಚ್ಚರಿಕೆಗಳನ್ನು ನೀಡುಲು ಪ್ರಾರಂಭಿಸಿದೆ. ಪ್ರಸ್ತುತ 2000 ಬ್ಲಾಕ್ಗಳಲ್ಲಿ ರೈತರು ಸಲಹೆ ಪಡೆಯುತ್ತಿದ್ದಾರೆ. ಇದುವರೆಗೆ, ಮುನ್ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಮೊಬೈಲ್ ಅಪ್ಲಿಕೇಶನ್, ಮೇಘದೂತ್ ಮತ್ತು ಸಾಮಾಜಿಕ ಮಾಧ್ಯಮ ಸೇರಿದಂತೆ ವಿವಿಧ ಸಂವಹನ ಮಾರ್ಗಗಳ ಮೂಲಕ ಸುಮಾರು 4.3 ಕೋಟಿ ರೈತರಿಗೆ ಪ್ರಸಾರ ಮಾಡಲಾಗಿದೆಎಂದು ಅವರು ಹೇಳಿದರು.

"ಭಾರತೀಯ ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರ (ಐಎನ್ಸಿಒಐಎಸ್) ಪ್ರತಿದಿನ ಮೀನುಗಾರಿಕೆಗಾಗಿ ಸಮುದ್ರಕ್ಕೆ ಹೋಗುವ ಮೀನುಗಾರರಿಗೆ ಮುನ್ಸೂಚನೆ ಮತ್ತು ಎಚ್ಚರಿಕೆಗಳನ್ನು ನೀಡುತ್ತದೆ" ಎಂದು ಸಚಿವರು ಹೇಳಿದರುರು, " ಮುನ್ಸೂಚನೆಗಳು ಮತ್ತು ಎಚ್ಚರಿಕೆಗಳನ್ನು ಮೀನುಗಾರರಿಗೆ ಎಲ್ಲಾ ಸಂವಹನ ಮಾಧ್ಯಮಗಳ ಮೂಲಕ ಪ್ರಸಾರ ಮಾಡಲಾಗುತ್ತದೆ. ಪ್ರಸ್ತುತ ಸುಮಾರು 7 ಲಕ್ಷ ಮೀನುಗಾರರು ಮುನ್ಸೂಚನೆ ಮತ್ತು ಎಚ್ಚರಿಕೆಗಳನ್ನು ಪಡೆಯುತ್ತಿದ್ದಾರೆಎಂದು ಅವರು ಹೇಳಿದರು.

ದೇಶಾದ್ಯಂತ ಹವಾಮಾನ ಮತ್ತು ಹವಾಮಾನ ಮುನ್ಸೂಚನೆಗಳನ್ನು ಸಾರ್ವಕಾಲಿಕ ಮಾಪನಗಳಲ್ಲಿ ಸುಧಾರಿಸುವ ಉದ್ದೇಶದಿಂದ ಭಾರತ ಸರ್ಕಾರವು 2012 ರಲ್ಲಿ ಮಾನ್ಸೂನ್ ಮಿಷನ್ ಅನ್ನು ಪ್ರಾರಂಭಿಸಿದೆ ಎಂದು ಸಚಿವರು ಹೇಳಿದರು. ಭೂ ವಿಜ್ಞಾನ ಸಚಿವಾಲಯವು ಮಾನ್ಸೂನ್ ಮಿಷನ್ ಮೂಲಕ ಅತ್ಯಾಧುನಿಕ ಹವಾಮಾನ ಮತ್ತು ಹವಾಮಾನ ಮುನ್ಸೂಚನೆಗಳ ಕ್ರಿಯಾತ್ಮಕ ಮಾದರಿಗಳನ್ನು ಸ್ಥಾಪಿಸಬಹುದು ಎಂಬುದನ್ನು ತೋರಿಸಿದೆ ಎಂದರು. "ಕಂಪ್ಯೂಟಿಂಗ್ ಸಂಪನ್ಮೂಲಗಳನ್ನು ವೃದ್ಧಿಸಲು, ಪುಣೆಯ ಭಾರತೀಯ ಉಷ್ಣವಲಯ ಹವಾಮಾನ ಸಂಸ್ಥೆ (ಐಐಟಿಎಂ) ಮತ್ತು ಮಧ್ಯಮ ಶ್ರೇಣಿ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಸಂಸ್ಥೆ (ಎನ್ಸಿಎಂಆರ್ಡಬ್ಲ್ಯುಎಫ್) ಯಲ್ಲಿ ಎಚ್ಇಪಿಸಿ ಸೌಲಭ್ಯವನ್ನು ಹೆಚ್ಚಿಸಲಾಗಿದೆ. ಸುಮಾರು 1.2 ಪೆಟಾಫ್ಲಾಪ್ಗಳ ಹಿಂದಿನ ಸಾಮರ್ಥ್ಯವನ್ನು ಸುಮಾರು 10.0 ಪೆಟಾಫ್ಲಾಪ್ ಎಚ್ಪಿಸಿ ಸೌಲಭ್ಯಕ್ಕೆ ಹೆಚ್ಚಿಸಲಾಗಿದೆ. ಪ್ರಸ್ತುತ ಸೌಲಭ್ಯವು ದೇಶದ ಅತ್ಯುತ್ತಮ ಎಚ್ಪಿಸಿ ಸೌಲಭ್ಯವಾಗಿದೆ ಮತ್ತು ಅಮೆರಿಕಾ, ಇಂಗ್ಲೆಂಡ್ ಮತ್ತು ಜಪಾನ್ ನಂತರ ವಿಶ್ವದ ಹವಾಮಾನ ಮುನ್ಸೂಚನೆ ಕೇಂದ್ರಗಳಲ್ಲಿ ನಾಲ್ಕನೇ ಅತ್ಯುತ್ತಮ ಸೌಲಭ್ಯವಾಗಿದೆಎಂದು ಸಚಿವರು ತಿಳಿಸಿದರು.

ಭೂ ವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಡಾ. ಎಂ. ರಾಜೀವನ್ ಮಾತನಾಡಿ, ಭೂ ವಿಜ್ಞಾನ ಸಚಿವಾಲಯವು ದೆಹಲಿಯಲ್ಲಿ ವಾಯುಮಾಲಿನ್ಯವನ್ನು ಅಳೆಯುವ ಮತ್ತು ಮುನ್ಸೂಚನೆ ನೀಡುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಕೃಷಿ ಮತ್ತು ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ವಿವಿಧ ಅನ್ವಯಿಕ ಸಾಧನಗಳನ್ನು ಅಭಿವೃದ್ಧಿಪಡಿಸಿದೆ. ನೈಸರ್ಗಿಕ ವಿಪತ್ತುಗಳಾದ ಚಂಡಮಾರುತಗಳು, ಪ್ರವಾಹ ಇತ್ಯಾದಿಗಳ ಬಗ್ಗೆ ಭೂ ವಿಜ್ಞಾನ ಸಚಿವಾಲಯ/ ಹವಾಮಾನ ಇಲಾಖೆಯ ನಿಖರ ಮತ್ತು ಸಮಯೋಚಿತ ಮುನ್ಸೂಚನೆಗಳು ವಿಪತ್ತು ನಿರ್ವಹಣೆಗೆ ನೆರವಾಗಿವೆ ಮತ್ತು ಮೂಲಕ ಜೀವ ಮತ್ತು ಆಸ್ತಿಯನ್ನು ಉಳಿಸುತ್ತಿವೆ ಎಂದು ಹೇಳಿದರು. ಇಂಧನ ಮತ್ತು ವಿದ್ಯುತ್, ಜಲ ಸಂಪನ್ಮೂಲ ಮತ್ತು ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಮೌಲ್ಯಮಾಪನ ಮತ್ತು ಮುನ್ಸೂಚನೆಯ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಕೆಲಸವನ್ನು ಸಚಿವಾಲಯ ಮಾಡುತ್ತಿದೆ ಎಂದು ಅವರು ಹೇಳಿದರು. ದೇಶದ ಬಹುತೇಕ ನಗರಗಳು / ರಾಜ್ಯಗಳಿಗೆ ಅನುಕೂಲವಾಗುವಂತೆ ಸಚಿವಾಲಯವು ತನ್ನ ಪ್ರವಾಹ ಎಚ್ಚರಿಕೆ ವ್ಯವಸ್ಥೆಯನ್ನು ವಿಸ್ತರಿಸುತ್ತಿದೆ ಎಂದು ಅವರು ತಿಳಿಸಿದರು.

ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೆಶಕ ಡಾ.ಎಂ.ಮೊಹಾಪಾತ್ರ, ಸಂದರ್ಭದಲ್ಲಿ ಯೋಜನಾ ನಿರ್ದೇಶಕ ಮತ್ತು ವಿಜ್ಞಾನಿಜಿಡಾ.ಪರವಿಂದರ್ ಮೈನಿ ಮತ್ತು ಭೂ ವಿಜ್ಞಾನ ಸಚಿವಾಲಯ ಮತ್ತು ಭಾರತೀಯ ಹವಾಮಾನ ಇಲಾಖೆಯ ಹಲವಾರು ಹಿರಿಯ ಅಧಿಕಾರಿಗಳು ವರ್ಚುವಲ್ ಮೂಲಕ ಉಪಸ್ಥಿತರಿದ್ದರು.

ವರದಿಯ ಪ್ರಮುಖ ಅಂಶಗಳು

  • ಭಾರತ ಸರ್ಕಾರವು ರಾಷ್ಟ್ರೀಯ ಮಾನ್ಸೂನ್ ಮಿಷನ್ (ಎನ್ಎಂಎಂ) ಮತ್ತು ಹೈ ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ (ಎಚ್ಪಿಸಿ) ಸೌಲಭ್ಯಗಳನ್ನು ಸ್ಥಾಪಿಸಲು ಒಟ್ಟು 1000 ರೂ. ಕೋಟಿ ಹೂಡಿಕೆ ಮಾಡಿದೆ
  • ವರದಿಯ ಉದ್ದೇಶಗಳು: ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಎನ್ಎಂಎಂ ಮತ್ತು ಎಚ್ಪಿಸಿ ಯಲ್ಲಿ ಮಾಡಿದ ಹೂಡಿಕೆಯ ಆರ್ಥಿಕ ಲಾಭಗಳನ್ನು ಅಂದಾಜು ಮಾಡಲು, ಜಾನುವಾರು ಮಾಲೀಕರು ಮತ್ತು ಮೀನುಗಾರರಿಗೆ ಕ್ರಮವಾಗಿ ಹವಾಮಾನ ಮತ್ತು ಸಾಗರ ಮುನ್ಸೂಚನೆಯನ್ನು ಅಳವಡಿಸಿಕೊಳ್ಳುವ ಮೂಲಕ ಆದಾಯವನ್ನು ಲಾಭದ ಮೂಲಕ ಅಂದಾಜು ಮಾಡುವುದು. ವರದಿಯು ಆರ್ಥಿಕ ಪ್ರಯೋಜನಗಳನ್ನು ಲಿಂಗ ದೃಷ್ಟಿಕೋನದಿಂದಲೂ ಪರಿಶೀಲಿಸಿದೆ.
  • ಭಾರತದ 16 ರಾಜ್ಯಗಳಲ 173 ಜಿಲ್ಲೆಗಳನ್ನು ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ (ಮಳೆಯಾಶ್ರಿತ)
  • ಆರ್ಥಿಕ ಪರಿಣಾಮವನ್ನು ಅಳೆಯಲು 6,098 ಪ್ರತಿಸ್ಪಂದಕರ (3,965 ರೈತರು, 757 ಸಮುದ್ರ ಮೀನುಗಾರರು ಮತ್ತು 1,376 ಜಾನುವಾರು ಮಾಲೀಕರು ಸೇರಿದಂತೆ) ಮುಖಾಮುಖಿ ಸಮೀಕ್ಷೆಯನ್ನು ನಡೆಸಲಾಯಿತು ಮತ್ತು ಸುಮಾರು 2 ಲಕ್ಷ ಪ್ರತಿಸ್ಪಂದಕರ ಸಂವಾದಾತ್ಮಕ ಧ್ವನಿ ಪ್ರತಿಕ್ರಿಯೆ ಸಮೀಕ್ಷೆಯನ್ನು ನಡೆಸಲಾಯಿತು.
  • ಬದಲಾದ ವೈವಿಧ್ಯತೆ / ತಳಿಯಂತಹ ಹವಾಮಾನ ಸಲಹೆಗಳ ಆಧಾರದ ಮೇಲೆ ಶೇ.98ರಷ್ಟು ರೈತರು ಒಂಬತ್ತು ನಿರ್ಣಾಯಕ ಅಭ್ಯಾಸಗಳಲ್ಲಿ ಒಂದನ್ನಾದರೂ ಮಾರ್ಪಾಡು ಮಾಡಿಕೊಂಡಿದ್ದಾರೆ; ಸುಗ್ಗಿಯ ಶೇಖರಣೆಗಾಗಿ ವ್ಯವಸ್ಥೆ ಮಾಡಲಾಗಿದೆ; ಆರಂಭಿಕ / ವಿಳಂಬ ಕೊಯ್ಲು; ಬದಲಾದ ಬೆಳೆ; ಆರಂಭಿಕ / ವಿಳಂಬ ಬಿತ್ತನೆ; ಉಳುಮೆ / ಭೂಮಿ ಸಿದ್ಧತೆಯ ಬದಲಾದ ವೇಳಾಪಟ್ಟಿ; ಬದಲಾದ ಕೀಟನಾಶಕ ಸಿಂಪಡಣೆ ವೇಳಾಪಟ್ಟಿ; ಬದಲಾದ ರಸಗೊಬ್ಬರ ವೇಳಾಪಟ್ಟಿ; ಮತ್ತು ನಿಗದಿತ ನೀರಾವರಿ ಬದಲಾಯಿಸಲಾಗಿದೆ. ಇವುಗಳಲ್ಲಿ ಶೇ.94ರಷ್ಟು ನಷ್ಟವನ್ನು ತಪ್ಪಿಸುತ್ತವೆ ಅಥವಾ ಆದಾಯದಲ್ಲಿ ಹೆಚ್ಚಳ ಮಾಡುತ್ತವೆ.
  • ಶೇ.76ರಷ್ಟು ಜಾನುವಾರು ಮಾಲೀಕರು ಕೊಟ್ಟಿಗೆ/ ಆಶ್ರಯದ ಮಾರ್ಪಾಡು, ಋತುವಿನಲ್ಲಿ ಬರುವ ಕಾಯಿಲೆಗಳ ವಿರುದ್ಧ ಲಸಿಕೆ ಮತ್ತು ಮೇವಿನ ನಿರ್ವಹಣೆ. ಕುರಿತು ನಿರ್ಧಾರ ತೆಗೆದುಕೊಳ್ಳಲು ಹವಾಮಾನ ಮಾಹಿತಿಯನ್ನು ಬಳಸುತ್ತಿದ್ದಾರೆ.
  • ಶೇ.82ರಷ್ಟು ಮೀನುಗಾರರು ಸಮುದ್ರಕ್ಕೆ ಹೋಗುವ ಮೊದಲು ಪ್ರತಿ ಬಾರಿಯೂ ಸಾಗರ ಮುನ್ಸೂಚನೆ ಸಲಹೆಗಳನ್ನು ಬಳಸುತ್ತಿದ್ದಾರೆಂದು ವರದಿ ತಿಳಿಸಿದೆ.
  • ಅವರಲ್ಲಿ ಶೇ.95ರಷ್ಟು ಮಂದಿ ಸಾಗರ ಮುನ್ಸೂಚನೆ ಸಲಹೆಗಳನ್ನು ಅನುಸರಿಸುವ ಮೂಲಕ ಖಾಲಿ ಪ್ರಯಾಣವನ್ನು ತಪ್ಪಿಸಿದ್ದಾರೆಂದು ವರದಿ ಹೇಳಿದೆ, ಇದು ಸಮುದ್ರಕ್ಕೆ ಹೋಗುವುದನ್ನು ತಪ್ಪಿಸುವ ಮೂಲಕ 18.25 ಕೋಟಿ ರೂ.ಕಾರ್ಯಾಚರಣೆ ವೆಚ್ಚವನ್ನು ಉಳಿಸಿದೆ.
  • ಸಂಭಾವ್ಯ ಮೀನುಗಾರಿಕೆ ವಲಯ ಸಲಹೆಗಳು ಯಶಸ್ವಿ ಪ್ರಯಾಣಗಳಲ್ಲಿ ಹೆಚ್ಚುವರಿ ಮೀನು ಹಿಡಿಯುವಿಕೆಗೆ ಕಾರಣವಾಗಿವೆ. ಸಂಭಾವ್ಯ ಮೀನುಗಾರಿಕೆ ವಲಯ ಸಲಹಾಗಳನ್ನು ಬಳಸಿಕೊಂಡು ಮಾಡಿದ 1,079 ಯಶಸ್ವಿ ಮೀನುಗಾರಿಕೆ ಪ್ರಯಾಣಗಳಿಂದ 1.92 ಕೋಟಿ ರೂ.ಹೆಚ್ಚುವರಿ ಆದಾಯವನ್ನು ಗಳಿಸಲಾಗಿದೆ.
  • ಬಡತನ ರೇಖೆಗಿಂತ ಕೆಳಗಿರುವ 1.07 ಕೋಟಿ ಕೃಷಿಕ ಕುಟುಂಬಗಳಿಗೆ (ರೈತರು ಮತ್ತು ಜಾನುವಾರು ಮಾಲೀಕರು) ಒಟ್ಟು 13,331 ಕೋಟಿ ರೂ.ವಾರ್ಷಿಕ ಆರ್ಥಿಕ ಲಾಭಗಳಾಗಿದೆ. ಮುಂದಿನ ಐದು ವರ್ಷಗಳಲ್ಲಿ ಕೃಷಿ ಸಮುದಾಯಕ್ಕೆ ಸುಮಾರು 48,056 ಕೋಟಿ ರೂ. ಲಾಭ ದೊರೆಯುವ ಅಮದಾಜು ಮಾಡಲಾಗಿದೆ.
  • 53 ಲಕ್ಷ ಬಿಪಿಎಲ್ ಮೀನುಗಾರರ ಕುಟುಂಬಗಳು ಗಳಿಸಿದ ವಾರ್ಷಿಕ ಆದಾಯ 663 ಕೋಟಿ ರೂ. ಮತ್ತು ಮುಂದಿನ 5 ವರ್ಷಗಳ ಅವಧಿಯಲ್ಲಿ ಮೀನುಗಾರಿಗೆ 2,391 ಕೋಟಿ ರೂ.ಲಾಭವಾಗುವ ಅಂದಾಜು ಮಾಡಲಾಗಿದೆ.
  • ಆದ್ದರಿಂದ, ಸದ್ಯದ ಮೌಲ್ಯದ ಪ್ರಕಾರ ಮುಂದಿನ 5 ವರ್ಷಗಳಲ್ಲಿ ಕೃಷಿಕ ಕುಟುಂಬಗಳು ಮತ್ತು ಮೀನುಗಾರರಿಗೆ ಒಟ್ಟು 50,447 ಕೋಟಿ ರೂ. ಆರ್ಥಿಕ ಲಾಭದ ಅಂದಾಜು ಮಾಡಲಾಗಿದೆ.
  • 1,000 ಕೋಟಿ ರೂ.ಗಳ ಆರಂಭಿಕ ಹೂಡಿಕೆಯೊಂದಿಗೆ ಎನ್ಎಂಎಂ ಮತ್ತು ಎಚ್ಪಿಸಿ ಸೌಲಭ್ಯಗಳು ಹೂಡಿಕೆಯ 50 ಪಟ್ಟು ಆರ್ಥಿಕ ಲಾಭಕ್ಕೆ ಕಾರಣವಾಗುತ್ತವೆ. ಇದು ಒಟ್ಟು ಲಾಭದ ಶೇಕಡಾ 26.6 ಆಗಿದೆ.

https://static.pib.gov.in/WriteReadData/userfiles/image/image003JVBU.jpg

Click here for the full report.

Click here for the PPT presentation.

[ಸಂಪೂರ್ಣ ವರದಿಯು ಭೂ ವಿಜ್ಞಾನ ಸಚಿವಾಲಯದ ವೆಬ್ಸೈಟ್ನಲ್ಲಿಯೂ ಲಭ್ಯವಿದೆ (http://www.moes.gov.in)]

***



(Release ID: 1669882) Visitor Counter : 190