ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

2020-21ನೇ ಮುಂಗಾರು ಮಾರುಕಟ್ಟೆ ಹಂಗಾಮಿಗೆ ಕನಿಷ್ಠ ಬೆಂಬಲ ಬೆಲೆ ಕಾರ್ಯಾಚರಣೆ

Posted On: 27 OCT 2020 4:31PM by PIB Bengaluru

2020-21ನೇ ಮುಂಗಾರು ಮಾರುಕಟ್ಟೆ ಹಂಗಾಮಿ (ಕೆಎಂಎಸ್)ನಲ್ಲಿ ಕೇಂದ್ರ ಸರ್ಕಾರ ಹಿಂದಿನ ಹಂಗಾಮಿನಲ್ಲಿ ಜಾರಿಯಲ್ಲಿದ್ದ ಕನಿಷ್ಠ ಬೆಂಬಲ ಬೆಲೆ (ಎಂಎಸ್ ಪಿ) ಯೋಜನೆಯಡಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರೈತರಿಂದ ಕನಿಷ್ಠ ಬೆಂಬಲ ಬೆಲೆ ನೀಡಿ ಉತ್ಪನ್ನಗಳ ಖರೀದಿಯನ್ನು ಮುಂದುವರಿಸಿದೆ

2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಭತ್ತದ ಖರೀದಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಚಂಡಿಗಢ, ಜಮ್ಮು ಮತ್ತು ಕಾಶ್ಮೀರ, ಕೇರಳ ಹಾಗೂ ಗುಜರಾತ್ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 26.10.2020 ವರೆಗೆ 159.55 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿಸಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 134.52 ಲಕ್ಷ ಮೆಟ್ರಿಕ್ ಟನ್ ಖರೀದಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಶೇ.18.61ರಷ್ಟು ಹೆಚ್ಚಳವಾಗಿದೆ. ಒಟ್ಟು ಖರೀದಿಸಲಾಗಿರುವ 159.55 ಲಕ್ಷ ಮೆಟ್ರಿಕ್ ಟನ್ ಭತ್ತದ ಪೈಕಿ ಪಂಜಾಬ್ ಒಂದರಲ್ಲೇ 107.81 ಲಕ್ಷ ಮೆಟ್ರಿಕ್ ಟನ್ ಅಂದರೆ ಶೇ.67.57ರಷ್ಟು ಖರೀದಿಸಲಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಕೆಎಂಎಸ್ ಖರೀದಿ ಕಾರ್ಯಾಚರಣೆಯಿಂದಾಗಿ ಒಟ್ಟು 30123.73 ಕೋಟಿ ರೂ. ಮೌಲ್ಯದ ಎಂ ಎಸ್ ಪಿಯಲ್ಲಿ ಸುಮಾರು 13.64 ಲಕ್ಷ ರೈತರು ಪ್ರಯೋಜನ ಪಡೆದಿದ್ದಾರೆ.

ಅಲ್ಲದೆ ರಾಜ್ಯಗಳ ಪ್ರಸ್ತಾವನೆಗಳನ್ನಾಧರಿಸಿ 2020ನೆಯ ಸಾಲಿನ ಮುಂಗಾರು ಮಾರುಕಟ್ಟೆ ಹಂಗಾಮಿನಲ್ಲಿ ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ಹರಿಯಾಣ, ಉತ್ತರ ಪ್ರದೇಶ, ಒಡಿಶಾ, ರಾಜಸ್ಥಾನ ಮತ್ತು ಆಂಧ್ರಪ್ರದೇಶ ಇವುಗಳಿಂದ ಬೆಲೆ ಬೆಂಬಲ ಯೋಜನೆ(ಪಿಎಸ್ಎಸ್) ಅಡಿಯಲ್ಲಿ 45.10 ಲಕ್ಷ ಮೆಟ್ರಿಕ್ ಟನ್ ಬೇಳೆ ಮತ್ತು ಎಣ್ಣೆ ಬೀಜಗಳ ಖರೀದಿಗೆ ಅನುಮತಿ ನೀಡಲಾಗಿದೆ. ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಂದ 1.23 ಲಕ್ಷ ಮೆಟ್ರಿಕ್ ಟನ್ ಕೊಬ್ಬರಿ ಖರೀದಿ ಪ್ರಸ್ತಾವಕ್ಕೆ ಅನುಮೋದಿಸಲಾಗಿದೆ.

ಇತರೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬೇಳೆಕಾಳು, ಎಣ್ಣೆಬೀಜ ಮತ್ತು ಕೊಬ್ಬರಿಯನ್ನು ಪಿಎಸ್ಎಸ್ ಅಡಿಯಲ್ಲಿ ಖರೀದಿಗೆ ಪ್ರಸ್ತಾವಗಳನ್ನು ಸ್ವೀಕರಿಸಲಾಗಿದೆ. 2020-21ನೇ ಸಾಲಿನಲ್ಲಿ ಅಧಿಸೂಚಿತ ಎಂಎಸ್ ಪಿ ಅಡಿಯಲ್ಲಿ ನೇರವಾಗಿ ನೋಂದಾಯಿತ ರೈತರಿಂದ ಖರೀದಿ ಮಾಡಲಾಗುವುದು. ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಧಿಸೂಚಿತ ಕೊಯ್ಲು ಅವಧಿಯಲ್ಲಿ  ಮಾರುಕಟ್ಟೆ ದರ ಎಂಎಸ್ ಪಿಗಿಂತ ಕಡಿಮೆಯಾದರೆ ಅಂತಹ ಸಂದರ್ಭದಲ್ಲಿ ನೇರವಾಗಿ ರೈತರಿಂದ ಖರೀದಿಸಲಾಗುವುದು ಮತ್ತು ರಾಜ್ಯ ಸರ್ಕಾರ ಗುರುತಿಸಲ್ಪಟ್ಟಿರುವ ಸರ್ಕಾರಿ ಏಜೆನ್ಸಿಗಳ ಮೂಲಕವೂ ಖರೀದಿಸಲಾಗುವುದು

2020 ಅಕ್ಟೋಬರ್ 26 ವರೆಗೆ ಸರ್ಕಾರ ತನ್ನ ನೋಡಲ್ ಏಜೆನ್ಸಿಗಳ ಮೂಲಕ 1543.11 ಮೆಟ್ರಿಕ್ ಟನ್ ಹೆಸರು, ಉದ್ದು ಮತ್ತು ಶೇಂಗಾವನ್ನು 10.08 ಕೋಟಿ ಮೌಲ್ಯದ ಎಂಎಸ್ ಪಿಯಲ್ಲಿ ಖರೀದಿಸಲಾಗಿದ್ದು, ಇದರಿಂದ ತಮಿಳುನಾಡು, ಮಹಾರಾಷ್ಟ್ರ ಮತ್ತು ಹರಿಯಾಣದ 1247 ರೈತರಿಗೆ ಲಾಭವಾಗಿದೆ. ಅದೇ ರೀತಿ 5089 ಮೆಟ್ರಿಕ್ ಟನ್ ಕೊಬ್ಬರಿಯನ್ನು 52.40 ಕೋಟಿ ರೂ. ಮೌಲ್ಯದಲ್ಲಿ ಖರೀದಿಸಲಾಗಿದ್ದು, ಇದರಿಂದ ಕರ್ನಾಟಕ ಮತ್ತು ತಮಿಳುನಾಡಿನ 3961 ರೈತರಿಗೆ ಅನುಕೂಲವಾಗಿದೆ. ಕೊಬ್ಬರಿ, ಉದ್ದಿಗೆ ಸಂಬಂಧಿಸಿದಂತೆ ದರಗಳು ಬಹುತೇಕ ರಾಜ್ಯಗಳಲ್ಲಿ ಎಂಎಸ್ ಪಿಗಿಂತ ಹೆಚ್ಚಿತ್ತು. ಮುಂಗಾರು ಹಂಗಾಮಿನಲ್ಲಿ ಬೇಳೆಗಳು ಮತ್ತು ಎಣ್ಣೆ ಬೀಜಗಳು ಮಾರುಕಟ್ಟೆಗೆ ಆಗಮಿಸುವ ಅವಧಿ ಆಧರಿಸಿ ಆಯಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಖರೀದಿ ಕಾರ್ಯಾಚರಣೆಯನ್ನು ಕೈಗೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಂಡಿವೆ.

ಹತ್ತಿ ಖರೀದಿ ಕಾರ್ಯಾಚರಣೆ ಎಂ ಎಸ್ ಪಿ ಅಡಿಯಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಸುಗಮವಾಗಿ ಸಾಗಿದೆ. 2020 ಅಕ್ಟೋಬರ್ 10 ವರೆಗೆ 117675 ಲಕ್ಷ ರೂ. ಮೌಲ್ಯದ 398683 ಕಾಟನ್ ಬೇಲ್ಸ್ ಅನ್ನು  ಖರೀದಿಸಲಾಗಿದ್ದು, ಇದರಿಂದ 76512 ರೈತರಿಗೆ ಅನುಕೂಲವಾಗಿದೆ

***


(Release ID: 1668058)