ಜಲ ಶಕ್ತಿ ಸಚಿವಾಲಯ

ಸುಸ್ಥಿರ ಅಂತರ್ಜಲ ನಿರ್ವಹಣೆ, ಸಾಮರ್ಥ್ಯವರ್ಧನೆ, ಸಂಶೋಧನೆ ಮತ್ತು ಅಭಿವೃದ್ಧಿ ಪೂರಕ ಸಹಯೋಗಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಂಪುಟದ ಅನುಮೋದನೆ

प्रविष्टि तिथि: 14 OCT 2020 4:54PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ, ಭಾರತದ ನದಿ ಅಭಿವೃದ್ಧಿ ಮತ್ತು ಗಂಗಾ ಪುನಶ್ಚೇತನದ ಜಲ ಸಂಪನ್ಮೂಲ ಇಲಾಖೆಯ ಕೇಂದ್ರೀಯ ಅಂತರ್ಜಲ ಮಂಡಳಿ (ಸಿಜಿಡಬ್ಲ್ಯುಬಿ) ಮತ್ತು ಆಸ್ಟ್ರೇಲಿಯಾದ ಗ್ರಾಮ ಮಟ್ಟದ ಮಧ್ಯಸ್ಥಿಕೆ ಪಾಲುದಾರರ ಮೂಲಕ ಅಕ್ವಿಫರ್ ರೀಚಾರ್ಜ್ ಮತ್ತು ಅಂತರ್ಜಲ ಬಳಕೆಯನ್ನು ನಿರ್ವಹಣೆ (ಎಂ..ಆರ್.ವಿ.) ನಡುವೆ 2019 ಅಕ್ಟೋಬರ್ ನಲ್ಲಿ ಅಂಕಿತ ಹಾಕಲಾಗಿರುವ ತಿಳಿವಳಿಕೆ ಒಪ್ಪಂದ (ಎಂ..ಯು.) ಬಗ್ಗೆ ವಿವರ ನೀಡಲಾಯಿತು.

ಕೃಷಿ, ನಗರ, ಕೈಗಾರಿಕೆ ಮತ್ತು ಪರಿಸರದ ಉದ್ದೇಶಕ್ಕಾಗಿ ಜಲ ಭದ್ರತೆ ಸಾಧಿಸುವ ಸಲುವಾಗಿ ಮೇಲ್ಮೈ ಮತ್ತು ಅಂತರ್ಜಲ ತರಬೇತಿ, ಶಿಕ್ಷಣ ಮತ್ತು ಸಂಶೋಧನೆಯನ್ನು ಉತ್ತೇಜಿಸಲು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲಾಗಿದೆ.

***


(रिलीज़ आईडी: 1664384) आगंतुक पटल : 150
इस विज्ञप्ति को इन भाषाओं में पढ़ें: Telugu , English , Urdu , हिन्दी , Marathi , Bengali , Manipuri , Punjabi , Gujarati , Malayalam