ಗೃಹ ವ್ಯವಹಾರಗಳ ಸಚಿವಾಲಯ

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ಗೌರವಾರ್ಥ ದೆಹಲಿ ಮತ್ತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಯ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಾಟ

Posted On: 08 OCT 2020 11:44PM by PIB Bengaluru

ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ಪೂರೈಕೆ ಖಾತೆ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರು 2020 ಅಕ್ಟೋಬರ್ 8ರಂದು ನವದೆಹಲಿಯಲ್ಲಿ ನಿಧನಹೊಂದಿದರು ಎಂದು ಭಾರತ ಸರ್ಕಾರ ಅತೀವ ದುಃಖದೊಂದಿಗೆ ಪ್ರಕಟಿಸಿದೆ.

ಅಗಲಿದ ಗಣ್ಯರ ಗೌರವಾರ್ಥ 2020 ಅಕ್ಟೋಬರ್ 9ರಂದು ದೆಹಲಿ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳ ಕಟ್ಟಡಗಳಲ್ಲಿ ಮತ್ತು ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಡೆಯುವ ದಿನ, ಅಂತ್ಯಕ್ರಿಯೆ ನೆರವೇರುವ ಸ್ಥಳದಲ್ಲಿ, ಸಾಮಾನ್ಯವಾಗಿ ಹಾರಿಸಲಾಗುವ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಿಸಲು ನಿರ್ಧರಿಸಲಾಗಿದೆ. ಅಗಲಿದ ಗಣ್ಯರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲೂ ನಿರ್ಧರಿಸಲಾಗಿದೆ.

ಅಂತ್ಯಕ್ರಿಯೆ ನಡೆಯುವ ಸ್ಥಳ ಮತ್ತು ಸಮಯವನ್ನು ನಂತರ ಪ್ರಕಟಿಸಲಾಗುವುದು.

***(Release ID: 1663031) Visitor Counter : 31