ಗೃಹ ವ್ಯವಹಾರಗಳ ಸಚಿವಾಲಯ
ಕೇಂದ್ರ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ನಿಧನಕ್ಕೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಸಂತಾಪ
ಶ್ರೀ ಪಾಸ್ವಾನ್ ಅವರು ಬಡವರು ಹಾಗು ವಂಚಿತರ ಹಕ್ಕು ಭಾದ್ಯತೆಗಳಿಗೆ ಹೋರಾಡುತ್ತಿದ್ದರು
1975ರ ತುರ್ತುಪರಿಸ್ಥಿತಿಯ ಸಮಯ ಅಥವಾ ಮೋದಿ ಸರ್ಕಾರದಲ್ಲಿ ಕೊರೊನಾ ಮಹಾಮಾರಿಯ ಕಾಲದಲ್ಲಿ ಬಡವರ ಕಲ್ಯಾಣದ ಮಂತ್ರವನ್ನು ಅರ್ಥಪೂರ್ಣಗೊಳಿಸುವುದರಲ್ಲಿ, ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ಪಾತ್ರ ಅನನ್ಯ
ಭಾರತೀಯ ರಾಜಕಾರಣ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಅವರ ಅನುಪಸ್ಥಿತಿ ಸದಾ ಅನುಭವಕ್ಕೆ ಬರುತ್ತದೆ, ಬಡವರ ಕಲ್ಯಾಣ ಮತ್ತು ಬಿಹಾರದ ಅಭಿವೃದ್ಧಿಯ ಅವರ ಕನಸನ್ನು ನನಸಾಗಿಸಲು ಮೋದಿ ಸರ್ಕಾರ ಬದ್ಧ
Posted On:
08 OCT 2020 10:17PM by PIB Bengaluru
ಕೇಂದ್ರ ಸಚಿವ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಸಂತಾಪ ಸೂಚಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು “ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರ ನಿಧನದ ಸುದ್ದಿ ಕೇಳಿ ನಾನು ವಿಚಲಿತನಾಗಿದ್ದೇನೆ. ಶ್ರೀ ಪಾಸ್ವಾನ್ ಅವರು ಸದಾ ಬಡವರು ಮತ್ತು ವಂಚಿತರ ಹಕ್ಕುಗಳು ಮತ್ತು ಕಲ್ಯಾಣಕ್ಕಾಗಿ ಹೋರಾಟ ನಡೆಸಿದವರು. ಅವರು ತಮ್ಮ ರಾಜಕೀಯ ಜೀವನದಲ್ಲಿ ರಾಷ್ಟ್ರ ಹಿತ ಮತ್ತು ಸಾರ್ವಜನಿಕ ಕಲ್ಯಾಣ ಸದಾ ಪರಮೋಚ್ಛ ಸ್ಥಾನ ನೀಡಿದ್ದರು. ಅವರ ಅಗಲಿಕೆ ಭಾರತೀಯ ರಾಜಕೀಯದಲ್ಲಿ ಕಂದಕ ನಿರ್ಮಿಸಿದೆ.”
“ಅದು 1975ರ ತುರ್ತುಪರಿಸ್ಥಿತಿ ವಿರುದ್ಧದ ಹೋರಾಟವೇ ಆಗಿರಲಿ ಅಥವಾ ಕೊರೊನಾ ಮಹಾಮಾರಿಯ ಸಂದರ್ಭದಲ್ಲಿ ಮೋದಿ ಸರ್ಕಾರದ ಬಡವರ ಕಲ್ಯಾಣದ ಮಂತ್ರವೇ ಆಗಿರಲಿ ಅದನ್ನು ಅರ್ಥಪೂರ್ಣಗೊಳಿಸುವಲ್ಲಿ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಈ ಎಲ್ಲದರಲ್ಲೂ ಅನನ್ಯ ಪಾತ್ರ ನಿರ್ವಹಿಸಿದ್ದರು. ಶ್ರೀ ಪಾಸ್ವಾನ್ ಅವರು ಹಲವು ಮಹತ್ವದ ಸ್ಥಾನವನ್ನು ಹೊಂದಿದ್ದಾಗ್ಯೂ ಅವರ ಸರಳ ಮತ್ತು ಸಜ್ಜನಿಕೆಯ ವ್ಯಕ್ತಿತ್ವದಿಂದ ಎಲ್ಲರಿಗೂ ಪ್ರೀತಿಪಾತ್ರರಾಗಿದ್ದರು.”
“ಭಾರತೀಯ ರಾಜಕೀಯ ಮತ್ತು ಕೇಂದ್ರ ಸಚಿವ ಸಂಪುಟದಲ್ಲಿ ಅವರ ಅನುಪಸ್ಥಿತಿ ಸದಾ ಅನುಭವಕ್ಕೆ ಬರುತ್ತದೆ ಮತ್ತು ಮೋದಿ ಸರ್ಕಾರ ಬಿಹಾರದ ಅಭಿವೃದ್ಧಿ ಮತ್ತು ಬಡವರ ಕಲ್ಯಾಣದ ಅವರ ಕನಸು ನನಸು ಮಾಡಲು ಬದ್ಧವಾಗಿದೆ.” ಎಂದು ತಿಳಿಸಿದ್ದಾರೆ.
“ಅವರ ಕುಟುಂಬದವರಿಗೆ ಮತ್ತು ಬೆಂಬಲಿಗರಿಗೆ ನನ್ನ ಸಂತಾಪ ಸೂಚಿಸುತ್ತೇನೆ. ಅಗಲಿದ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ. ಓಂ. ಶಾಂತಿ.”
***
(Release ID: 1663029)
Visitor Counter : 175