ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

ಕಾರ್ಮಿಕ ಸಂಹಿತೆಗಳಲ್ಲಿ ನೌಕರರು ಮತ್ತು ಉದ್ಯೋಗದಾತರ ಹಕ್ಕುಗಳು ಮತ್ತು ಹೊಣೆಗಾರಿಕೆಗಳನ್ನು ಸಮತೋಲನವಾಗಿಡಲು ಸರ್ಕಾರ ಪ್ರಯತ್ನಶೀಲವಾಗಿದೆ: ಶ್ರೀ ಗಂಗವಾರ್


ಮೂರು ಕಾರ್ಮಿಕ ಸಂಹಿತೆಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚೆಗೆ ಚಾಲನೆ ನೀಡಿದ ಶ್ರೀ ಸಂತೋಷ್ ಗಂಗ್ವಾರ್, ಅವು ಮೈಲಿಗಲ್ಲಿನ ಮತ್ತು ಪರಿವರ್ತನೆಯ ಸಾಧನ ಎಂದು ಬಣ್ಣನೆ

Posted On: 22 SEP 2020 6:53PM by PIB Bengaluru

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ (ಸ್ವತಂತ್ರ ನಿರ್ವಹಣೆ) ರಾಜ್ಯ ಸಚಿವ ಲೋಕಸಭೆಯಲ್ಲಿಂದು ಮೂರು ಕಾರ್ಮಿಕ ಸಂಹಿತೆಗಳ ಚರ್ಚೆಗೆ ಚಾಲನೆ ನೀಡಿದರು. ಕಾರ್ಮಿಕ ಸಂಹಿತೆಗಳನ್ನು ದೇಶದ ಕಾರ್ಮಿಕರು ಮತ್ತು ಉದ್ಯೋಗದಾತರ ಹಿತ, ಹಕ್ಕು ಮತ್ತು ಹೊಣೆಗಾರಿಕೆಗಳನ್ನು ಸಮತೋಲನವಾಗಿಡುವ ಉದ್ದೇಶದಿಂದ ತರಲಾಗಿದೆ ಎಂದು ತಿಳಿಸಿದರು. ಕಾರ್ಮಿಕ ಸಂಹಿತೆಗಳು ಪರಿವರ್ತನೆಯ ಸಾಧನಗಳಾಗಲಿವೆ ಮತ್ತು ಮೈಲಿಗಳೆಂದು ಸಾಬೀತಾಗಲಿವೆ ಎಂದು ಪ್ರತಿಪಾದಿಸಿದರು. ಮೂರು (1) ಎಎಸ್.ಎಚ್. ಸಂಹಿತೆ, (2) .ಆರ್. ಸಂಹಿತೆ ಮತ್ತು (3) ಸಾಮಾಜಿಕ ಭದ್ರತೆ ಸಂಹಿತೆಗಳಾಗಿವೆ.

73 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಾಡಲಾಗಿರುವ ಅವಕಾಶಗಳ ಪ್ರಸ್ತಾಪ ಮಾಡಿದ ಅವರು, ಇವುಗಳಲ್ಲಿ ವಿಧ್ಯುಕ್ತ ನೇಮಕಾತಿಯನ್ನು ಪ್ರೋತ್ಸಾಹಿಸುವ ನೇಮಕಾತಿ ಪತ್ರದ ಹಕ್ಕೂ ಸೇರಿದೆ. ಗುತ್ತಿಗೆದಾರರ ಮೂಲಕವಷ್ಟೇ ಅಲ್ಲದೆ ಕೆಲಸಕ್ಕಾಗಿ ಇತರ ರಾಜ್ಯಗಳಿಗೆ ತೆರಳುವವರನ್ನು ಸಹ ಇದರಲ್ಲಿ ಸೇರಿಸಲು ವಲಸೆ ಕಾರ್ಮಿಕರ ವ್ಯಾಖ್ಯಾನವನ್ನು ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು. ಇದು ದೇಶದ ಕಲ್ಯಾಣ ಯೋಜನೆಗಳ ಅರ್ಹತೆ ಮತ್ತು ಉತ್ತಮ ಗುರಿ ಪಡೆಯಲು ಅವರಿಗೆ ನೆರವಾಗುತ್ತದೆ.

ಅದೇ ರೀತಿ,  ಕೆಲಸದಿಂದ ತೆಗೆದುಹಾಕಲಾದ ಕಾರ್ಮಿಕರ ಮರು-ಕೌಶಲ್ಯಕ್ಕಾಗಿ ವ್ಯವಸ್ಥೆಯೊಂದನ್ನು ಪ್ರಸ್ತಾಪಿಸಲಾಗಿದೆ ಎಂದು ಶ್ರೀ ಗಂಗ್ವಾರ್ ಮಾಹಿತಿ ನೀಡಿದರು. ಅಸಂಘಟಿತ ವಲಯದ ಕಾರ್ಮಿಕರು, ಗಿಗ್ ಮತ್ತು ಪ್ಲಾಟ್ಫಾರ್ಮ್ ಕಾರ್ಮಿಕರನ್ನು ಸಾಮಾಜಿಕ ಭದ್ರತಾ ಜಾಲದೊಳಗೆ ತರುವ ಒಂದು ಪ್ರಮುಖ ಅವಕಾಶವೂ ಇದರಲ್ಲಿದೆ ಎಂದು ಅವರು ಪ್ರತಿಪಾದಿಸಿದರು. ಕಾರ್ಮಿಕ ಸಂಘಗಳ ಪ್ರಾಮುಖ್ಯತೆಯನ್ನು ಗುರುತಿಸಲಾಗಿದ್ದು, ಕಾರ್ಮಿಕರ ಸಮಸ್ಯೆಗಳ ತ್ವರಿತ ಪರಿಹಾರಕ್ಕಾಗಿ ಉದ್ಯಮ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರೀಯ ಮಟ್ಟದ ರಾಜಿ ಸಂಧಾನದ ಮೂರು ಹಂತದ ಪ್ರಕ್ರಿಯೆಯನ್ನು ಪ್ರಸ್ತಾಪಿಸಲಾಗಿದೆ ಎಂದು ಶ್ರೀ ಗಂಗ್ವಾರ್ ತಿಳಿಸಿದರು.

ತಂತ್ರಜ್ಞಾನ, ಕಾರ್ಯ ವಿಧಾನಗಳು, ಕಾರ್ಯ-ಕ್ಷೇತ್ರದ ಸೌಲಭ್ಯಗಳು ಮತ್ತು ಕೆಲಸದ ಸ್ವರೂಪಗಳ ವಿಷಯದಲ್ಲಿ ಸ್ವಾತಂತ್ರ್ಯಾನಂತರದ 73 ವರ್ಷಗಳಲ್ಲಿ ಭಾರತವು ಕಂಡ ಅಭೂತಪೂರ್ವ ರೂಪಾಂತರವನ್ನು ಗಮನದಲ್ಲಿಟ್ಟುಕೊಂಡು ಕಾರ್ಮಿಕ ಸಂಹಿತೆಯಲ್ಲಿನ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಸಚಿವರು ಒತ್ತಿ ಹೇಳಿದರು. 70 ವರ್ಷಗಳ ಹಿಂದೆ ಯಾರೊಬ್ಬರೂ ಮನೆಯಿಂದಲೇ ಕೆಲಸ ಮಾಡಬಹುದು ಎಂಬುದನ್ನು ಊಹಿಸಿಕೊಂಡಿರಲೂ ಸಾಧ್ಯವಿಲ್ಲ. ಹೀಗಾಗಿ, ಜಾಗತಿಕ ಸನ್ನಿವೇಶದಲ್ಲಿ ಬದಲಾವಣೆಗಳನ್ನು ಸರಿಯಾಗಿ ಗುರುತಿಸುವ ಮೂಲಕ ಮತ್ತು ಭವಿಷ್ಯದ ಕೆಲಸದ ಅವಶ್ಯಕತೆಗಳನ್ನು ಪೂರೈಸುವ ಮೂಲಕ ಕಾರ್ಮಿಕ ಕಾನೂನುಗಳಲ್ಲಿನ ಬದಲಾವಣೆಗಳನ್ನು ಊಹಿಸಲಾಗಿದೆ. ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಐತಿಹಾಸಿಕ 4 ಕಾರ್ಮಿಕ ಸಂಹಿತೆಗಳಲ್ಲಿ ಅಂತಹ ಕಾರ್ಯವನ್ನು ಪ್ರಾರಂಭಿಸಲಾಗಿದೆ ಎಂದರು.

ನಾಲ್ಕು ಉಪಸಮಿತಿಗಳು, 10 ಅಂತರ-ಸಚಿವಾಲಯ ಸಮಾಲೋಚನೆಗಳು, ಕಾರ್ಮಿಕ ಸಂಘಗಳು, ಉದ್ಯೋಗದಾತರ ಸಂಘಟನೆಗಳು, ರಾಜ್ಯ ಸರ್ಕಾರಗಳು, ತಜ್ಞರು, ಅಂತಾರಾಷ್ಟ್ರೀಯ ಸಂಸ್ಥೆಗಳು ಸೇರಿದಂತೆ ವಿವಿಧ ವಿಷಯಗಳಲ್ಲಿ ಕಾರ್ಮಿಕ ಸಂಹಿತೆಗಳ ಕುರಿತು ವ್ಯಾಪಕವಾಗಿ ಚರ್ಚಿಸಲಾಗುತ್ತಿದೆ ಮತ್ತು ಸಾರ್ವಜನಿಕ ಸಲಹೆಗಳನ್ನು / ಪ್ರತಿಕ್ರಿಯೆಯನ್ನು ಆಹ್ವಾನಿಸಿ ಅವುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ 2-3 ತಿಂಗಳುಗಳಿಂದ ಹಾಕಲಾಗಿದೆ ಎಂದು ಶ್ರೀ ಗಂಗ್ವಾರ್ ವಿವರಿಸಿದರು

ಸಂಹಿತೆಗಳ ಬಗ್ಗೆ ಚರ್ಚಿಸಿ, ಅವಿರೋಧವಾಗಿ ಅನುಮೋದಿಸುವಂತೆ ಲೋಕಸಭೆಯ ಸದಸ್ಯರಿಗೆ ಅವರು ಮನವಿ ಮಾಡಿದರು.

***


(Release ID: 1657928) Visitor Counter : 192