ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

ಬಿಎಸ್- VI ಇಂಧನ ಪೂರೈಕೆಗೆ ಬೆಲೆ ನಿಗದಿ

Posted On: 16 SEP 2020 1:27PM by PIB Bengaluru

ಕೇಂದ್ರ ಸರ್ಕಾರ 26.06.2010 ಮತ್ತು 19.10.2014ರಿಂದ ಜಾರಿಗೆ ಬರುವಂತೆ ಕ್ರಮವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮಾರುಕಟ್ಟೆ ಆಧರಿಸಿ ನಿಗದಿಪಡಿಸಲು ಅವಕಾಶ ನೀಡಿದೆ. ಆಂದಿನಿಂದ ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿಎಸ್ ), ಅಂತಾರಾಷ್ಟ್ರೀಯ ಬೆಲೆ, ವಿನಿಮಯ ದರ, ತೆರಿಗೆ ವ್ಯವಸ್ಥೆ, ಒಳನಾಡು ಸಾರಿಗೆ ಮತ್ತು ಇತರೆ ವೆಚ್ಚಗಳನ್ನು ಆಧರಿಸಿ. ಅದಕ್ಕೆ ಅನುಗುಣವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಗೆ ಸೂಕ್ತ ದರವನ್ನು ನಿಗದಿಪಡಿಸುತ್ತವೆ.

ಅಲ್ಲದೆಬಿಎಸ್- VI  ಇಂಧನ ಅತ್ಯುತ್ತಮ ಗುಣಮಟ್ಟದ ಇಂಧನವಾಗಿದ್ದು, ಅದು ಕಡಿಮೆ ಸಲ್ಫರ್ ಅಂಶ (ಗರಿಷ್ಠ 10ಪಿಪಿಎಂ) ಜೊತೆಗೆ ಇತರೆ ಸುಧಾರಿತ ಗುಣಮಟ್ಟದ ಮಾನದಂಡಗಳನ್ನು ಒಳಗೊಂಡಿದೆ ಎಂದು   ಐಒಸಿಎಲ್  ತಿಳಿಸಿದೆ. ಬಿಎಸ್- VI  ಇಂಧನ ಉತ್ಪಾದನೆಗೆ ಭಾರತೀಯ ಸಂಸ್ಕರಣಾ ಘಟಕಗಳು ಭಾರಿ ಬಂಡವಾಳವನ್ನು ಹೂಡಬೇಕಾಗಿದೆ. ಹಾಗಾಗಿ ಬಂಡವಾಳ ಹೂಡಿಕೆ ವೆಚ್ಚವನ್ನು ಭಾಗಶಃ ಭರಿಸಲು ಅನುಕೂಲವಾಗುವಂತೆ 01.04.2020ರಿಂದ ಜಾರಿಗೆ ಬರುವಂತೆ ಬೆಲೆಯನ್ನು ಪರಿಷ್ಕರಿಸಲಾಗಿದೆ.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಶ್ರೀ ಧಮೇಂದ್ರ ಪ್ರಧಾನ್ ಅವರು ರಾಜ್ಯಸಭೆಯಲ್ಲಿಂದು ನೀಡಿರುವ ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆ.

***



(Release ID: 1655090) Visitor Counter : 137