ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ

ಆನ್ ಲೈನ್ ಮಾರಾಟದಲ್ಲಿ ಪ್ಯಾಕೇಜಿಂಗ್ ಗೆ ಕೆವಿಐಸಿಯಿಂದ ಕಾಗದ ಪೊಟ್ಟಣಗಳ ಬಳಕೆ, ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ


ಪರಿಸರ ಸಂರಕ್ಷಣೆಗೆ ಕೆವಿಐಸಿ ಕಾಳಜಿ, ವಸ್ತುಗಳ ವಿತರಣೆಗೆ ಕಾಗದ ಪೊಟ್ಟಣಗಳ ಬಳಕೆ

Posted On: 13 SEP 2020 3:22PM by PIB Bengaluru

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(ಕೆವಿಐಸಿ)ವು ವಿದ್ಯುನ್ಮಾನ-ವಾಣಿಜ್ಯ ಉದ್ಯಮಕ್ಕೆ ಕೈಹಾಕಿ ಕೇವಲ ತಿಂಗಳಷ್ಟೇ ಆಗಿದೆ. ಅದು ಮೊದಲ ದಿನದ ವ್ಯವಹಾರದಿಂದಲೇ ಕೈಯಿಂದ ತಯಾರಿಸಿದ ಕಾಗದ ಪ್ಯಾಕಿಂಗ್ ವಸ್ತುಗಳನ್ನು ಬಳಸುವ ಮೂಲಕ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ಮುಂದಾಗಿದೆ. ಹಸಿರು ಪರಿಸರ ಉಳಿಸಬೇಕೆಂಬ ಖಾದಿ ತತ್ವಗಳಿಗೆ ಅನುಗುಣವಾಗಿ ಆಯೋಗವು ಕಾರ್ಯಪ್ರವೃತ್ತವಾಗಿದೆ.

ಕೆವಿಐಸಿ ನಿರ್ದಿಷ್ಟವಾಗಿ ಕೈಯಿಂದ ತಯಾರಿಸಿದ ಕಾಗದದ ಲಕೋಟೆಗಳು, ಪೊಟ್ಟಣಗಳು ಮತ್ತು ಕೈಯಿಂದ ತಯಾರಿಸಿದ ರಟ್ಟಿನ ಡಬ್ಬಗಳನ್ನು ನಾನಾ ವಸ್ತುಗಳ ಪ್ಯಾಕೇಜಿಂಗ್ ಗೆ ಬಳಸುತ್ತಿದೆ. ಆದರೆ, ಅದು ದ್ರವ ರೂಪದ ವಸ್ತುಗಳನ್ನು ಪ್ಯಾಕ್ ಮಾಡಲು ನಾಮಮಾತ್ರವಾಗಿ ಪ್ಲಾಸ್ಟಿಕ್ ಹೊದಿಕೆಗಳನ್ನು ಬಳಸುತ್ತಿದೆ. ಸಾಗಣೆ ವೇಳೆ ದ್ರವ ರೂಪದ ವಸ್ತು ಸೋರಿಕೆ ಆಗದಂತೆ ತಡೆಯುವ ಉದ್ದೇಶದಿಂದ ಕೆವಿಐಸಿ,ಪ್ಲಾಸ್ಟಿಕ್ ಹೊದಿಕೆಗಳನ್ನು ಬಳಸುತ್ತಿದೆ. ಅಲ್ಲದೆ, ಅದು ಮುಖಗವಸುಗಳ ಉತ್ತಮ ಸ್ಥಿತಿ ಕಾಪಾಡಲು ಪ್ಯಾಕಿಂಗ್ ಗೆ ತೆಳು ಪದರದ ಪ್ಲಾಸ್ಟಿಕ್ ಬಳಸುತ್ತಿದೆ. ಜತೆಗೆ ಅದಉ, ಬಾಳೆಎಲೆ ನಾರನ್ನು ಬಳಸಿ ಕೈಯಿಂದ ತಯಾರಿಸಿ ವಿಶೇಷವಾಗಿ ವಿನ್ಯಾಸಗೊಳಿಸಿದ ಕಾಗದ ಲಕೋಟೆಗಳ ಬಳಕೆಯನ್ನು ಅತಿ ಶೀಘ್ರವೇ ಆರಂಭಿಸಲಿದೆ.

ಪರಿಸರಕ್ಕೆ ಅಪಾಯ ಉಂಟು ಮಾಡುತ್ತಿರುವ ಪ್ಲಾಸ್ಟಿಕ್ ಅನ್ನು ವಸ್ತುಗಳು, ಸಾಮಾನುಗಳು ಮತ್ತು ಸರಕುಗಳನ್ನು ತುಂಬಲು ವಿಪರೀತವಾಗಿ ಬಳಸುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್ಜಿಟಿ)ವು ಹಲವಾರು -ವಾಣಿಜ್ಯ ಕಂಪನಿಗಳಿಗೆ ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ನಡೆ ಮಹತ್ವಪೂರ್ಣದ್ದಾಗಿದೆ. ಅಲ್ಲದೆ, -ವಾಣಿಜ್ಯ ಕಂಪನಿಗಳಿಂದ ಉಂಟಾಗುತ್ತಿರುವ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಧಿಕರಣವು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ(ಸಿಪಿಸಿಬಿ)ಗೂ ನಿರ್ದೇಶನ ನೀಡಿದೆ.

ಕೈಯಿಂದ ತಯಾರಿಸಿದ ಕಾಗದ ಪೊಟ್ಟಣಗಳು ಮತ್ತು ರಟ್ಟಿನ ಡಬ್ಬಗಳನ್ನು ಬಳಸಿ ಕೆವಿಐಸಿ, ಪರಿಸರ ಸಂರಕ್ಷಣೆ ಮತ್ತು ಉದ್ಯೋಗ ಸೃಷ್ಟಿಯ ಎರಡೂ ಉದ್ದೇಶಗಳನ್ನುನೆರವೇರಿಸುತ್ತಿದೆ. ಜೈಪುರದಲ್ಲಿರುವ ತನ್ನ ಕುಮಾರಪ್ಪ ನ್ಯಾಷನಲ್ ಹ್ಯಾಂಡ್ ಮೇಡ್ ಪೇಪರ್ ಇನ್ ಸ್ಟಿಟ್ಯೂಟ್ ನಲ್ಲಿ ತಯಾರಾಗುವ ಕಾಗದ ಪೊಟ್ಟಣಗಳನ್ನು ಅದು ಬಳಸುತ್ತಿದೆ. ಮೂಲಕ ಅದು ಕೈಯಿಂದ ತಯಾರಿಸುವ ಕಾಗದ ಪ್ಯಾಕೇಜಿಂಗ್ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚುವರಿ ಉದ್ಯೋಗ ಸೃಷ್ಟಿಸಿದೆ.

ಕೆವಿಐಸಿ ಅಧ್ಯಕ್ಷ ಶ್ರೀ ವಿನಯ್ ಸಕ್ಸೇನಾ ಮಾತನಾಡಿ, ಖಾದಿ ವಸ್ತ್ರಗಳು ಇಡೀ ವಿಶ್ವದಲ್ಲೇ ಅತ್ಯಂತ ಪರಿಸರ-ಸ್ನೇಹಿ ಧಿರಿಸುಗಳಾಗಿವೆ. ಖಾದಿ ಗ್ರಾಮೊದ್ಯೋಗ ಆಯೋಗವು ಯಾವುದೇ ಉದ್ಯಮ ಚಟುವಟಿಕೆ ಕೈಗೊಂಡರೂ ಪರಿಸರ ಸಂರಕ್ಷಣೆಯೇ ಅದರ ಪ್ರಮುಖ ಕಾಳಜಿಯಾಗಿರುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಇತ್ತೀಚಿನ ನಿರ್ದೇಶನ ಕುರಿತು ಹಲವು ಮಾಧ್ಯಮಗಳು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿದ ಸಕ್ಸೇನಾ, ಖಾದಿ ಉತ್ಪನ್ನಗಳು ಸ್ವಾಭಾವಿಕ ಧಿರಿಸುಗಳಾಗಿವೆ ಮತ್ತು ಕೈಯಿಂದ ತಯಾರಿಸಿದ ಕಾಗದ ಪೊಟ್ಟಣಗಳು ಪರಿಸರ-ಸ್ನೇಹಿಯಾಗಿವೆ. ಹಾಗಾಗಿ, ಕಾಗದ ಪೊಟ್ಟಣಗಳನ್ನು ಖಾದಿ ಉತ್ಪನ್ನಗಳ ಪ್ಯಾಕೇಜಿಂಗ್ ಗೆ ಬಳಲಾಗುತ್ತಿದೆ ಎಂದರು. ಕೈಯಿಂದ ತಯಾರಿಸಿದ ಕಾಗದ ಪೊಟ್ಟಣಗಳು ಮತ್ತು ಬಾಕ್ಸ್ ಗಳು ಸಾಮಾನ್ಯ ಪ್ಲಾಸ್ಟಿಕ್ ಪ್ಯಾಕೇಜ್ ಗಿಂತ ಸ್ವಲ್ಪ ತೂಕವಾಗಿರುತ್ತವೆ. ಇದರಿಂದ ಕೆವಿಐಸಿಗೆ ಹೆಚ್ಚುವರಿ ಕೊರಿಯರ್ ವೆಚ್ಚ ಮತ್ತು ಕಾಗದ ಪೊಟ್ಟಣ ವೆಚ್ಚ ತಗುಲುತ್ತಿದೆ. ಆದರೂ ಕೆವಿಐಸಿ ಇದನ್ನು ಭರಿಸುತ್ತಿದ್ದು, ಪರಿಸರಕ್ಕೆ ಹಾನಿ ಆಗದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂದಿದ್ದಾರೆ.

ಕೆವಿಐಸಿ ಕಾಗದ ಪೊಟ್ಟಣಗಳಿಂದಸರಕುಗಳ ವಿತರಣೆಗೆ ಕ್ರಮ ಕೈಗೊಂಡಿರುವುದಕ್ಕೆ ತನ್ನ ಆನ್ ಲೈನ್ ಗ್ರಾಹಕರಿಂದ ವ್ಯಾಪಕ ಮೆಚ್ಚುಗೆ ಗಳಿಸಿದೆ. ರಟ್ಟಿನ ಡಬ್ಬಗಳಲ್ಲಿ ಕೆವಿಐಸಿಯಿಂದ ಬರುವ ಪಾರ್ಸೆಲ್ ಗಳನ್ನು ಸ್ವೀಕರಿಸುವುದೇ ಆನಂದ. ಎರಡು ತಿಂಗಳಲ್ಲಿ ಹಲವು ಬಾರಿ ಆನ್ ಲೈನ್ ನಲ್ಲಿ ವಸ್ತುಗಳನ್ನು ತರಿಸಿದ್ದೀನಿ. ಪ್ರತಿ ಬಾರಿ ನಾನು ಪ್ಲಾಸ್ಟಿಕ್ ಕವರ್ ಗಳನ್ನು ಕಂಡಿದ್ದೇ ಇಲ್ಲ ಎನ್ನುತ್ತಾರೆ ಜೋಧ್ ಪುರ್ ಮೂಲದ ಗ್ರಾಹಕ ಸುಮಿತ್ ಮಾಥುರ್.

ಕಾಗದದಿಂದ ತಯಾರಿಸಿದ ಪೊಟ್ಟಣಗಳ ಬಳಕೆಯು ಖಾದಿ ಇಂಡಿಯಾದ ಪರಿಸರ ಕಾಳಜಿಯುಳ್ಳ ಪ್ರಯತ್ನ. ಇದನ್ನು ನಿಜಕ್ಕೂ ಶ್ಲಾಘಿಸಲೇಬೇಕು. ಖಾದಿಯು ಪ್ಲಾಸ್ಟಿಕ್ ಅನ್ನು ಕನಿಷ್ಠ ಬಳಸುವಂತೆ ಮಾಡಿದೆ. ನಿಜಕ್ಕೂ ಇದೊಂದು ಮಹತ್ವದ ಉಪಕ್ರಮ ಎನ್ನುತ್ತಾರೆ ಕರ್ನಾಟಕದ ಖಾದಿ ಗ್ರಾಹಕ ಅಲ್ಕಾ ಭಾರ್ಗವ್.

***


(Release ID: 1654068) Visitor Counter : 231