ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ಫಾಸ್ಟ್ ಟ್ಯಾಗ್ ಮೂಲಕ ಡಿಜಿಟಲ್ ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಶುಲ್ಕ ಪಾವತಿಗೆ ಉತ್ತೇಜನ

Posted On: 03 SEP 2020 5:25PM by PIB Bengaluru

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2020 ಸೆಪ್ಟಂಬರ್ 1ರಂದು ಜಿಎಸ್ ಆರ್ 541() ಕರಡು ಅಧಿಸೂಚನೆ ಮೂಲಕ, 2017 ಡಿಸೆಂಬರ್ 1ಕ್ಕೂ ಮುನ್ನ ಮಾರಾಟ ಮಾಡಿರುವ ಹಳೆಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸುವ ಬಗ್ಗೆ ಸಂಬಂಧಿಸಿದವರಿಂದ ಸಲಹೆ ಮತ್ತು ಸೂಚನೆಗಳನ್ನು ಆಹ್ವಾನಿಸಿದೆ. ತಿದ್ದುಪಡಿ ಮಾಡಲ್ಪಟ್ಟಿರುವ ಸಿಎಂವಿಆರ್ 1989 ಕಾಯಿದೆಯ ಅಂಶಗಳು 2021 ಜನವರಿ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಅಲ್ಲದೆ, ತಿದ್ದುಪಡಿ ಮಾಡಲ್ಪಟ್ಟಿರುವ ನಮೂನೆ ಸಂಖ್ಯೆ 51 (ವಿಮಾ ಪ್ರಮಾಣಪತ್ರ)ದಲ್ಲಿ ಮೂರನೇ ವ್ಯಕ್ತಿಗೆ ವಿಮೆ ಮಾಡಿಸಲು ಫಾಸ್ಟ್ ಟ್ಯಾಗ್ ಹೊಂದುವುದು ಕಡ್ಡಾಯಗೊಳಿಸಲು ಉದ್ದೇಶಿಸಲಾಗಿದೆ, ವೇಳೆ ಫಾಸ್ಟ್ ಟ್ಯಾಗ್ ಐಡಿಯನ್ನು ಗುರುತಿಸಲಾಗುವುದು. ಇದನ್ನು 2021 ಏಪ್ರಿಲ್ 1ರಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದೆ.

ಕೇಂದ್ರೀಯ ಮೋಟಾರು ವಾಹನ ನಿಯಮ 1989 ಪ್ರಕಾರ, 2017ರಿಂದೀಚೆಗೆ ಯಾವುದೇ ಹೊಸ ನಾಲ್ಕು ಚಕ್ರದ ವಾಹನಗಳ ನೋಂದಣಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ ಮತ್ತು ಅದನ್ನು ವಾಹನ ಉತ್ಪಾದಕರು ಅಥವಾ ಡೀಲರ್ ಗಳು ಪೂರೈಸಬೇಕು. ಅಲ್ಲದೆ, ಸಾರಿಗೆ ವಾಹನಗಳ ಕ್ಷಮತಾ ಪತ್ರ (ಫಿಟ್ನೆಸ್ ಸರ್ಟಿಫಿಕೆಟ್)ಗಳ ನವೀಕರಣಕ್ಕೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಜೊತೆಗೆ 2019 ಅಕ್ಟೋಬರ್ 1ರಿಂದೀಚೆಗೆ ರಾಷ್ಟ್ರೀಯ ಪರ್ಮಿಟ್ ಹೊಂದಿರುವ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ.

***


(Release ID: 1651151) Visitor Counter : 205